translationCore-Create-BCS_.../translate/translate-literal/01.md

7.5 KiB

###ವಿವರಣೆಗಳು

ಅಕ್ಷರಷಃ ಭಾಷಾಂತರಗಳು ಸಾಧ್ಯವಾದಷ್ಟು ಮೂಲಭಾಷೆಯ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಮರು ಸೃಷ್ಟಿಯಾಗುತ್ತದೆ.

ಇತರ ಹೆಸರುಗಳು.

ಅಕ್ಷರಷಃ ಭಾಷಾಂತರಗಳನ್ನು ಹೀಗೂ ಕರೆಯಬಹುದು.

  • ಒಂದೇ ರೂಪದ ಆಧಾರವಾಗಿರುತ್ತದೆ.
  • ಪದಕ್ಕಾಗಿ ಪದ

ಅಕ್ಷರಷಃ ರೂಪಾಂತರ.

ಮಾದರಿ / ನಮೂನೆ ಅರ್ಥಗಳು.

ಅರ್ಥಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅಕ್ಷರಷಃ ಭಾಷಾಂತರದಲ್ಲಿ ಮೂಲಭಾಷೆಯ ವಾಕ್ಯಭಾಗಗಳ ರೂಪವನ್ನುನ್ನು ಆಡುವ ಭಾಷೆಯಲ್ಲಿ ಮರುಸೃಷ್ಟಿಸುವ ಕಡೆ ಕೇಂದ್ರಿಕರಿಸಲಾಗುತ್ತದೆ. ಅಕ್ಷರಷಃ ಭಾಷಾಂತರ ಉತ್ಕೃಷ್ಟತೆ ಎಂದರೆ ಅದು ಭಾಷಾಂತರವೇ ಅಲ್ಲ ಅದು ಅದೇ ಲಕ್ಷಣವನ್ನು ಹೊಂದಿರುತ್ತದೆ ಮತ್ತು ಮೂಲಭಾಷೆಯಲ್ಲಿನ ಪದಗಳನ್ನೇ ಬಳಸಲಾಗುತ್ತದೆ. ಇನ್ನೊಂದು ಹತ್ತಿರದ ಮಾರ್ಗವೆಂದರೆ ಮೂಲಭಾಷೆಯಲ್ಲಿನ ಪದಗಳನ್ನು ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ಸಮಾನ ಪದಗಳಿಂದ ಬದಲಾಯಿಸಬಹುದು. ಭಾಷೆಗಳಲ್ಲಿನ ವ್ಯಾಕರಣದ ನಡುವೆ ಇರುವ ವ್ಯತ್ಯಾಸದ ಕಾರಣದಿಂದ ಬಹುಷಃ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಅರ್ಥವಾಗದೆ ಇರಬಹುದು. ಕೆಲವೊಮ್ಮೆ ಸತ್ಯವೇದವನ್ನು ಭಾಷಾಂತರಿಸುವ ಕೆಲವು ಭಾಷಾಂತರಗಾರರು ಮೂಲ ವಾಕ್ಯಭಾಗಗಳಲ್ಲಿನ ಪದದ ಕ್ರಮವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹಾಗೆಯೇ ಅಳವಡಿಸಿ ಭಾಷಾಂತರ ಮಾಡುವ ಭಾಷೆಯಲ್ಲಿ ಪದಗಳನ್ನು ಬದಲಾಯಿಸಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಅನೇಕ ಅನುವಾದಕರು ಇದ್ದಾರೆ. ಮೂಲಭಾಷೆಯ ವಾಕ್ಯಭಾಗವನ್ನು ದೇವರ ವಾಕ್ಯವೆಂದು ಗೌರವ ಸೂಚಿಸಬೇಕು ಎಂದು ತಪ್ಪಾಗಿ ತಿಳಿದು ಭಾಷಾಂತರ ಮಾಡುವರು. ಇಂತಹ ಭಾಷಾಂತರ ದೇವರ ವಾಕ್ಯವೆಂದು ಜನರು ಅರ್ಥಮಾಡಿಕೊಳ್ಳಲು ಅವಕಾಶ ಮಾಡುತ್ತದೆ. ಜನರು ಆತನ ವಾಕ್ಯವನ್ನುಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಇದರಿಂದ ಸತ್ಯವೇದ ಮತ್ತು ದೇವರ ವಾಕ್ಯಗಳಿಗೆ ಗೌರವ ಕೊಡಬೇಕಲ್ಲದೆ, ಸತ್ಯವೇದವನ್ನು ಜನರಿಗೆ ಅರ್ಥವಾಗುವಂತೆ ಭಾಷಾಂತರ ಮಾಡಬೇಕು ಎಂಬ ಉದ್ದೇಶವಾಗಿರಬೇಕು.

####ಅಕ್ಷರಷಃ ಭಾಷಾಂತರದ ನ್ಯೂನ್ಯತೆಗಳು.

  • ಅಕ್ಷರಷಃ ಭಾಷಾಂತರಗಳು ಸಾಮಾನ್ಯವಾಗಿ ಈ ಕೆಳಗೆ ನಮೂದಿಸಿರುವ ಸಮಸ್ಯೆಗಳನ್ನು ಹೊಂದಿರುತ್ತದೆ,
  • ವಿದೇಶಿ ಭಾಷೆಯ ಪದಗಳನ್ನು ಭಾಷಾಂತರ ಆಗುತ್ತಿರುವ ಭಾಷೆಯ ಓದುಗರು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯ ಪದಕ್ರಮ /ವಾಕ್ಯಕ್ರಮ ಭಿನ್ನವಾಗಿ ತೋರಬಹುದು.
  • ನುಡಿಗಟ್ಟುಗಳನ್ನು ಉಪಯೋಗಿಸಿದರೆ ಭಾಷಾಂತರ ಆಗುತ್ತಿರುವ ಭಾಷೆಯ ಪರಿಚಯವಿಲ್ಲದ ಜನರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಸಂಸ್ಕೃತಿಯಲ್ಲಿ ವಸ್ತುಗಳ ಹೆಸರು ಇಲ್ಲದೇ ಇರಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯ ಸಂಸ್ಕೃತಿಯಲ್ಲಿ ಬರುವ ಸಂಪ್ರದಾಯ, ಪದ್ಧತಿಗಳ ವಿವರಗಳು ಅರ್ಥವಾಗದೇ ಇರಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ಪ್ಯಾರಾಗಳು / ವಾಕ್ಯಭಾಗಗಳು ಯಾವುದೇ ತರ್ಕಬದ್ಧವಾದ ಸಂಬಂಧವಿರುವುದಿಲ್ಲ.
  • ಕತೆಗಳು ಮತ್ತು ವಿವರಗಳು ಯಾವುದೇ ಪರಿಣಾಮವನ್ನು ಭಾಷಾಂತರ ಆಗುತ್ತಿರುವ ಭಾಷೆಯ ಮೇಲೆ ಬೀರುವುದಿಲ್ಲ.
  • ತಿಳಿದುಕೊಂಡ ಮಾಹಿತಿಗಳು ಕೆಲವೊಮ್ಮೆ ಉದ್ದೇಶಿತ ಅರ್ಥವನ್ನುಅರ್ಥಮಾಡಿಕೊಳ್ಳಲು ಅವಶ್ಯವಾಗಿರುವಾಗ ಅದು ಬಿಟ್ಟುಹೋಗುವ ಸಾಧ್ಯತೆ ಇರುತ್ತದೆ.

ಅಕ್ಷರಷಃ ಭಾಷಾಂತರ ಯಾವಾಗ ಮಾಡಬೇಕು ?

ಗೇಟ್ ವೇ ವಿಷಯವನ್ನು ಭಾಷಾಂತರ ಮಾಡುವಾಗ ಮಾತ್ರ ಅಕ್ಷರಷಃ ಭಾಷಾಂತರ ಮಾಡಬೇಕು.ಮತ್ತು ULBಯ ಭಾಷಾಂತರ ಮಾಡುವಾಗಲೂ ಇತರ ಭಾಷೆಯ ಭಾಷಾಂತರಗಾರರು ಇದನ್ನು ಪರಿಗಣಿಸಬೇಕು. ULBಯ ಉದ್ದೇಶವೆಂದರೆ ಮೂಲ ವಾಕ್ಯಭಾಗದಲ್ಲಿ ಇರುವ ವಿಚಾರಗಳನ್ನು ಭಾಷಾಂತರಗಾರಿಗೆ ತೋರಿಸಬೇಕಾಗಿರುವುದು. ಆದರೂ ULB ಅಷ್ಟೇನು ಖಂಡಿತವಾಗಿ ಯಥಾವತ್ತು ಭಾಷಾಂತರ ಮಾಡಲೇ ಬೇಕೆಂದು ಕಡ್ಡಾಯ ಮಾಡುವುದಿಲ್ಲ. ಇದೊಂದು ರೂಪಾಂತರಗೊಂಡ ಭಾಷಾಂತರ, ಭಾಷಾಂತರ ಆಗುತ್ತಿರುವ ಭಾಷೆಯ ವ್ಯಾಕರಣದಲ್ಲಿ ಉಪಯೋಗಿಸುವಂತದ್ದು, ಇದರಿಂದ ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು Modified Literal Translation). ಅಕ್ಷರಷಃ ರೂಪಾಂತರಗೊಂಡ ಭಾಷಾಂತರ. ULBರೂಪದಲ್ಲಿರುವ ಸತ್ಯವೇದದ ಮೂಲ ಅಭಿವ್ಯಕ್ತಿಯಲ್ಲಿ ಇರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಕಷ್ಟ.ಆದುದರಿಂದಲೇ ನಾವು ಭಾಷಾಂತರ ಟಿಪ್ಪಣಿಗಳಲ್ಲಿ ವಿವರಣೆಯನ್ನು ಒದಗಿಸಿದ್ದೇವೆ.