translationCore-Create-BCS_.../translate/translate-help/01.md

3.6 KiB

ಭಾಷಾಂತರ / ಅನುವಾದದ ಸಹಾಯಕ ವಿಚಾರಗಳನ್ನು ಬಳಸಿಕೊಳ್ಳವುದು.

ಅನುವಾದ ಮಾಡುವವರು ಅದನ್ನು ಅತ್ಯುತ್ತಮವಾಗಿ ಮಾಡುವಂತೆ ಅನುವಾದದ ಟಿಪ್ಪಣಿಗಳು, ಅನುವಾದದ ಪದಗಳು, ಮತ್ತು ಅನುವಾದದ ಪ್ರಶ್ನೆಗಳು ಇವುಗಳನ್ನು ಸಹಾಯಕಾಗಿ ನೀಡಲಾಗಿದೆ.

ಅನುವಾದದ ಟಿಪ್ಪಣಿಗಳು. ಅನುವಾದ ಮಾಡುವವರು ಸತ್ಯವೇದದ ಹಿನ್ನೆಲೆಯಲ್ಲಿ ಅದನ್ನು ಸ್ಪಷ್ಟವಾಗಿ ಮಾಡುವಂತೆ ಅದರ ಹಿನ್ನೆಲೆ, ಸಂಸ್ಕೃತಿ ಮತ್ತು ಭಾಷೆ ಇವುಗಳ ವಿವರಣೆ ನೀಡಲಾಗಿದೆ. ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ ಹೇಗೆ ತಿಳಿಸಬಹುದು ಎಂದು ಈ ಟಿಪ್ಪಣಿಗಳು ಮಾರ್ಗದರ್ಶನ ನೀಡುತ್ತವೆ. ವಿವರಣೆಗಳಿಗಾಗಿ ನೋಡಿ http://ufw.io/tn/.

ಅನುವಾದದ ಪದಗಳು: ಇವು ಸತ್ಯವೇದ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಕಾಣುವ ಪ್ರಮುಖ ಪದಗಳಾಗಿವೆ. ಈ ಪದಗಳ ಕುರಿತು ಒಂದು ಸಣ್ಣ ಲೇಖನ ಮತ್ತು ಆ ಪದಗಳು ಸತ್ಯವೇದದಲ್ಲಿ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಎಲ್ಲಿ ಬರುತ್ತವೆ ಎಂದು ಉಲ್ಲೇಖಿಸುತ್ತದೆ. ಅನುವಾದ ಮಾಡುವವರು ಸರಿಯಾದ ಪದವನ್ನು ಸರಿಯಾದ್ದ ಸ್ಥಳದಲ್ಲಿ ಉಪಯೋಗಿಸಲು ಇದು ಸಹಾಯ ಮಾಡುತ್ತದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

ಅನುವಾದದ ಪ್ರಶ್ನೆಗಳು. ನಿಮ್ಮ ಅನುವಾದವನ್ನು ಸ್ವಯಂ ಪರಿಶೀಲನೆ ಮಾಡಲ ನೀವು ಬಳಿಸಬಹುದಾದ ಗ್ರಹಿಕೆಯ ಪ್ರಶ್ನೆಗಳು. ನೀವು ಅನುವಾದ ಮಾಡಲಿರುವ ಭಾಷೆಯಲ್ಲಿ ಈ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ, ಆಗ ಅದು ಅದು ಅತ್ಯುತ್ತಮ ಅನುವಾದ ಎಂದು ಅಂದುಕೊಳ್ಳಬಹುದು. ಈ ಪ್ರಶ್ನೆಗಳು ಉದ್ದೇಶಿತ ಭಾಷಾ ಸಮುದಾಯದೊಂದಿಗೆ ಪರಿಶೀಲಿಸಲು ಉತ್ತಮ ಸಾಧನವಾಗಿದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

ನೀವು ಅನುವಾದದ ಟಿಪ್ಪಣಿಗಳನ್ನು,ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸಮಾಲೋಚನೆ ಮಾಡಿದರೆ ಆಗ ನೀವು ಉತ್ತಮವಾದ ಅನುವಾದ ಮಾಡಲು ಸಿದ್ಧರೆಂದು ತಿಳಿದುಕೊಳ್ಳಬಹುದು.

ದಯವಿಟ್ಟು ಅನುವಾದದ ಟಿಪ್ಪಣಿಗಳನ್ನು, ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸರಿಯಾಗಿ ತಿಳಿದುಕೊಳ್ಳಿರಿ.