translationCore-Create-BCS_.../translate/translate-hebrewmonths/01.md

16 KiB

ವಿವರಣೆ

ಸತ್ಯವೇದದಲ್ಲಿ ಉಪಯೋಗಿಸಿರುವ ಹಿಬ್ರೂ ಕ್ಯಾಲೆಂಡರ್ ನಲ್ಲಿ ಹನ್ನೆರಡು ತಿಂಗಳುಗಳು ಇವೆ. ಪಾಶ್ಚಿಮಾತ್ಯ ಕ್ಯಾಲೆಂಡರ್ ಹೊರತುಪಡಿಸಿ ಈ ಕ್ಯಾಲೆಂಡರ್ ಗಳಲ್ಲಿ ಉತ್ತರಾರ್ಧ ಗೋಳಾರ್ಧದಲ್ಲಿ ಮೊದಲ ತಿಂಗಳು ಪ್ರಾರಂಭವಾಗುವುದು ವಸಂತಕಾಲದಿಂದ. ಕೆಲವೊಮ್ಮೆ ಒಂದು ತಿಂಗಳು ಅದರ ಹೆಸರಿನಿಂದ (ಅಬೀಬ್, ಜಿವ್, ಸಿವಾನ್) (Abib, Ziv, Sivan), ಗುರುತಿಸಲ್ಪಟ್ಟರೆ, ಕೆಲವೊಮ್ಮೆ ವಾರ್ಷಿಕ ಹಿಬ್ರೂ ಕ್ಯಾಲೆಂಡರ್ ಕ್ರಮದಲ್ಲಿ ಕರೆಯಲ್ಪಡುತ್ತದೆ. (ಮೊದಲ ತಿಂಗಳು, ಎರಡನೇ ತಿಂಗಳು, ಮೂರನೇ ತಿಂಗಳು) ಎಂಬ ಕ್ರಮದಲ್ಲಿ ಬರುತ್ತದೆ.

ಕಾರಣ ಇದೊಂದು ಭಾಷಾಂತರ ಸಮಸ್ಯೆ.

  • ಓದುಗರಿಗೆ ಅವರು ಇದುವರೆಗೂ ಕೇಳಿರದ ತಿಂಗಳುಗಳ ಹೆಸರುಗಳನ್ನು ಓದಲು, ಕೇಳಲು ಆಶ್ಚರ್ಯ ಪಡಬಹುದು ಮತ್ತು ಅವರಲ್ಲಿ ಬಳಕೆಯಲ್ಲಿರುವ ತಿಂಗಳುಗಳನ್ನು ಈ ತಿಂಗಳುಗಳೊಂದಿಗೆ ಹೇಗೆ ಸಂಬಂಧಪಡಿಸಿ, ಜೋಡಿಸಿ ನೀಡುವುದು ಹೇಗೆ ಎಂದು ಬೆರಗಿನಿಂದ ನೋಡಬಹುದು.
  • " ಮೊದಲ ತಿಂಗಳು ಅಥವಾ ಎರಡನೇ ತಿಂಗಳು ಎಂಬ ಪದಗುಚ್ಛಗಳು ಳನ್ನು ಹಿಬ್ರೂ ಕ್ಯಾಲೆಂಡರ್ ನ ಮೊದಲ ಮತ್ತು ಎರಡನೇ ತಿಂಗಳುಗಳೊಂದಿಗೆ ಉದ್ದೇಶಿಸಿ ಹೇಳಲಾಗುತ್ತಿದೆ ಎಂದು ಓದುಗರು ತಿಳಿಯದಿರಬಹುದು
  • ಕೆಲವೊಮ್ಮೆ ಓದುಗರಿಗೆ ಹಿಬ್ರೂ ಕ್ಯಾಲೆಂಡರ್ ನ ಮೊದಲ ತಿಂಗಳು ಯಾವಾಗ ಪ್ರಾರಂಭವಾಗುತ್ತದೆ ಎಂದು ತಿಳಿಯದೆ ಇರಬಹುದು.
  • ಸತ್ಯವೇದದಲ್ಲಿ ಯಾವುದಾದರೂ ಒಂದು ಘಟನೆ ಒಂದು ನಿರ್ದಿಷ್ಟ ತಿಂಗಳಿನಲ್ಲಿ ನಡೆದಿರುವ ಬಗ್ಗೆ ಹೇಳಬಹುದು. ಆದರೆ ಇಂದಿನ ಓದುಗರಿಗೆ ಯಾವ ಋತು ಯಾವ ಕಾಲವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೆ ಈ ಘಟನೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವದಿಲ್ಲ

ಹಿಬ್ರೂ ತಿಂಗಳುಗಳ ಪಟ್ಟಿ.

ಈ ಪಟ್ಟಿಯಲ್ಲಿ ಹಿಬ್ರೂ ತಿಂಗಳುಗಳು ಮತ್ತು ಅವುಗಳ ಬಗ್ಗೆ ವಿವರ ನೀಡುವ ಮಾಹಿತಿ ಇದೆ. ಹಾಗೂ ಇದು ಭಾಷಾಂತರ ಮಾಡಲು ಅನುಕೂಲಕರವಾಗಿದೆ.

Abib -(ಅಬೀಬ್) ಬ್ಯಾಬಿಲೋನ್ ರವರ ಗಡಿಪಾರಾದ ಮೇಲೆ ಈ ತಿಂಗಳನ್ನು ನಿಸಾನ್ ತಿಂಗಳು ಎಂದು ಕರೆಯುತ್ತಾರೆ. ಇದು ಹಿಬ್ರೂ ಕ್ಯಾಲೆಂಡರ್ ನ ಮೊದಲ ತಿಂಗಳು. ಇದು ಇಸ್ರಾಯೇಲ್ ಜನರನ್ನು ಐಗುಪ್ತದೇಶದಿಂದ ಬಿಡುಗಡೆ ಮಾಡಿ ಕರೆತಂದ ತಿಂಗಳನ್ನು ಗುರುತಿಸಿ ಹೇಳುವಂತದ್ದು. ಇದು ವಸಂತಕಾಲದ ಪ್ರಾರಂಭ ಹಾಗೂ ಮಳೆಗಾಲ ಬರುವ ಮೊದಲು ತಾವು ಬೆಳೆದ ಬೆಳೆಯನ್ನು ಪಡೆಯುವ ಸುಗ್ಗಿ ಕಾಲವಾಗಿರುತ್ತದೆ. ಪಾಶ್ಚಾತ್ಯ ಕ್ಯಾಲೆಂಡರ್ ನ ಮಾರ್ಚ್ ತಿಂಗಳ ಉತ್ತರಾರ್ಧ ಮತ್ತು ಏಪ್ರಿಲ್ ತಿಂಗಳ ಪ್ರಾರಂಭವಾಗಿರುತ್ತದೆ. ಫಸ್ಕ ಹಬ್ಬದ ಆಚರಣೆ ಅಬೀಬ್ ಹತ್ತನೇ ದಿನದಂದು ಪ್ರಾರಂಭವಾಗುತ್ತದೆ. ಹುಳಿ ಇಲ್ಲದ ರೊಟ್ಟಿಯ ಹಬ್ಬ ಇದಾದ ಮೇಲೆ ಇರುತ್ತದೆ. ಸುಗ್ಗಿ ಹಬ್ಬ ಈ ಹಬ್ಬಗಳು ಆದ ಕೆಲ ವಾರಗಳ ನಂತರ ಪ್ರಾರಂಭವಾಗುತ್ತದೆ.

Ziv - ಜಿವ್ ಇದು ಹಿಬ್ರೂ ಕ್ಯಾಲೆಂಡರಿನ ಎರಡನೇ ತಿಂಗಳು. ಇದು ಸುಗ್ಗಿಕಾಲದಲ್ಲಿ ಬರುವ ದಿನಗಳು ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಏಪ್ರಿಲ್ ತಿಂಗಳ ಕೊನೆಯ ಭಾಗ ಮತ್ತು ಮೇ ತಿಂಗಳ ಮೊದಲ ಭಾಗದ ದಿನಗಳು.

Sivan - ಸೀವಾನ್ ಇದು ಹಿಬ್ರೂ ಕ್ಯಾಲೆಂಡರಿನ ಮೂರನೇ ತಿಂಗಳು. ಇದು ಸುಗ್ಗಿಕಾಲದ ಕೊನೆಯ ದಿನಗಳು ಮತ್ತು ಬೇಸಿಗೆ ಕಾಲದ ಪ್ರಾರಂಭ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಮೇ ತಿಂಗಳಕೊನೆಯ ದಿನಗಳು.ಮತ್ತು ಜೂನ್ ತಿಂಗಳ ಮೊದಲ ದಿನಗಳು. ವಾರಗಳ ಹಬ್ಬ ಸೀವಾನ್ - ತಿಂಗಳ 6ನೇ ದಿನದಂದು ಆಚರಿಸಲಾಗುವುದು.

Tammuz - ತಮೂಜ್ - ಇದು ಹಿಬ್ರೂ ಕ್ಯಾಲೆಂಡರಿನ ನಾಲ್ಕನೇ ತಿಂಗಳು. ಇದು ಬೇಸಿಗೆ ಕಾಲದಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜೂನ್ ತಿಂಗಳ ಕೊನೆಯ ಭಾಗ ಮತ್ತು ಜುಲೈ ತಿಂಗಳ ಮೊದಲ ಭಾಗದಲ್ಲಿ ಬರುತ್ತದೆ.

Ab - ಅಬ್ - ಇದು ಹಿಬ್ರೂ ಕ್ಯಾಲೆಂಡರಿನ ಐದನೇ ತಿಂಗಳು. ಇದು ಸಹ ಬೇಸಿಗೆ ಕಾಲದಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜುಲೈ ತಿಂಗಳ ಕೊನೆಯ ಭಾಗ ಮತ್ತು ಆಗಸ್ಟ್ ತಿಂಗಳ ಮೊದಲ ಭಾಗ.

Elul - ಎಲೂಲ್ - ಇದು ಹಿಬ್ರೂ ಕ್ಯಾಲೆಂಡರಿನ ಆರನೇ ತಿಂಗಳು ಇದು ಬೇಸಿಗೆ ಕಾಲದ ಕೊನೆಯ ಭಾಗ ಹಾಗೂ ಮಳೆಗಾಲದ ಪ್ರಾರಂಭದ ದಿನಗಳು. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಆಗಸ್ಟ್ ತಿಂಗಳ ಕೊನೆಯ ದಿನಗಳು ಮತ್ತು ಸೆಪ್ಟೆಂಬರ್ ತಿಂಗಳ ಪ್ರಾರಂಭದ ದಿನಗಳು.

Ethanim - ಎತಾನಿಮ್ - ಇದು ಹಿಬ್ರೂ ಕ್ಯಾಲೆಂಡರಿನ ಏಳನೇ ತಿಂಗಳು ಇದು ಮಳೆಗಾಲವಾಗಿದ್ದು ಭೂಮಿಯ ಮಣ್ಣನ್ನು ಮೃದುವಾಗಿಸಿ ಬೀಜಬಿತ್ತಲು ಭೂಮಿಯನ್ನು ಹದವಾಗಿಸುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಸೆಪ್ಟೆಂಬರ್ ತಿಂಗಳ ಕೊನೆಯ ಭಾಗ ಮತ್ತು ಅಕ್ಟೋಬರ್ ತಿಂಗಳ ಪ್ರಾರಂಭದ ದಿನಗಳು. ಈ ತಿಂಗಳನ್ನು “ತೀಸ್ರಿ” ಎಂದು ಕರೆಯುತ್ತಾರೆ. ಇದು ಒಟ್ಟುಗೂಡಿಸುವ ಮತ್ತು ಪಶ್ಚಾತ್ತಾಪದಿಂದ ದೇವರ ಬಳಿಗೆ ಬಂದು ಆಚರಿಸುವ ಹಬ್ಬದ ದಿನಗಳು.

Bul - ಬುಲ್ - ಇದು ಹಿಬ್ರೂ ಕ್ಯಾಲೆಂಡರಿನ ಎಂಟನೇ ತಿಂಗಳು ಇದು ಮಳೆಗಾಲದ ದಿನಗಳು ಮತ್ತು ಈ ದಿನಗಳಲ್ಲಿ ಜನರು ಭೂಮಿಯನ್ನು ಉತ್ತು, ಬೀಜ ಬಿತ್ತುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಅಕ್ಟೋಬರ್ ತಿಂಗಳ ಕೊನೆಯ ಭಾಗ ಮತ್ತು ನವೆಂಬರ್ ತಿಂಗಳ ಪ್ರಾರಂಭದ ದಿನಗಳಾಗಿರುತ್ತದೆ.

Kislev - ಕಿಸ್ಲೇವ್ - ಇದು ಹಿಬ್ರೂ ಕ್ಯಾಲೆಂಡರಿನ ಒಂಬತ್ತನೇ ತಿಂಗಳು ಇದು ಬಿತ್ತುವ ಕಾಲದ ಕೊನೆಯ ದಿನಗಳು ಮತ್ತು ಚಳಿಗಾಲದ ಪ್ರಾರಂಭದ ದಿನಗಳು. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ನವೆಂಬರ್ ತಿಂಗಳ ಕೊನೆಯ ದಿನಗಳು ಮತ್ತು ಡಿಸೆಂಬರ್ ತಿಂಗಳ ಮೊದಲ ದಿನಗಳು.

Tebeth -ಟಿಬೇತ್ - ಇದು ಹಿಬ್ರೂ ಕ್ಯಾಲೆಂಡರಿನ ಹತ್ತನೇ ತಿಂಗಳು ಇದು ಚಳಿಗಾಲದ ದಿನಗಳು. ಕೆಲವೊಮ್ಮೆ ತುಂತುರು ಮಳೆ ಮತ್ತು ಹಿಮ ಬೀಳುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಡಿಸೆಂಬರ್ ತಿಂಗಳ ಕೊನೆಯ ದಿನಗಳು. ಮತ್ತು ಜನವರಿ ತಿಂಗಳ ಪ್ರಾರಂಭದ ದಿನಗಳು.

Shebat - ಶೆಬಾಟ್ - ಇದು ಹಿಬ್ರೂ ಕ್ಯಾಲೆಂಡರಿನ ಹನ್ನೊಂದನೇ ತಿಂಗಳು ಈ ತಿಂಗಳು ಅತ್ಯಂತ ಹೆಚ್ಚು ಚಳಿ ಇರುವ ಕಾಲ, ಮತ್ತು ಹೆಚ್ಚು ಮಳೆಯಾಗುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜನವರಿ ತಿಂಗಳ ಕೊನೆಯ ದಿನಗಳು ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ದಿನಗಳು.

Adar - ಆಧಾರ್ - ಇದು ಹಿಬ್ರೂ ಕ್ಯಾಲೆಂಡರಿನ ಹನ್ನೆರಡನೇ ತಿಂಗಳು ಇದು ಚಳಿಗಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳ ಕೊನೆಯ ದಿನಗಳು ಮತ್ತು ಮಾರ್ಚ್ ತಿಂಗಳ ಪ್ರಾರಂಭದ ದಿನಗಳು. ಈ ತಿಂಗಳಿನಲ್ಲಿ “ ಫೋರೀಮ್ ” ಹಬ್ಬವನ್ನು ಆಚರಿಸುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು **ಅಬೀಬ್** (ಚೈತ್ರ ಮಾಸದ) ಈ ದಿನದಲ್ಲೇ ನೀವು ಐಗುಪ್ತ ದೇಶದಿಂದ ಹೊರಡುವವರಾಗಿದ್ದೀರಿ . (ವಿಮೋಚನಾಕಾಂಡ 13:4 ULB)

ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿವಸದ, ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೂ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು. , (ವಿಮೋಚನಾಕಾಂಡ 12:18 ULB)

###ಭಾಷಾಂತರ ಕೌಶಲ್ಯಗಳು

ತಿಂಗಳುಗಳ ಬಗ್ಗೆ ಮಾಹಿತಿಗಳನ್ನು ನೀವು ವಿವರವಾಗಿ ತಿಳಿಸುವ ಅಗತ್ಯವಿದೆ (ಗಳಿಸಿದ ಜ್ಞಾನ ಮತ್ತು ಗೌಣವಾದ ಮಾಹಿತಿಗಳು) ಇವುಗಳನ್ನು ಗಮನಿಸಿ.

  1. ಹಿಬ್ರೂ ತಿಂಗಳುಗಳ ಸಂಖ್ಯೆಯನ್ನು ಹೇಳಿ.
  2. ಜನರಿಗೆ ಗೊತ್ತಿರುವ ತಿಂಗಳುಗಳ ಹೆಸರನ್ನೇ ಬಳಸಿ.
  3. ಯಾವ ತಿಂಗಳಿನಲ್ಲಿ ಯಾವ ಕಾಲ / ಋತು ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿ
  4. ಕಾಲಕ್ಕೆ / ಋತುವಿಗೆ ಸಮಯ, ಕಾಲವನ್ನು ತಿಂಗಳುಗಳಿಗೆ ಅಳವಡಿಸಿ ತಿಳಿಸಬೇಕು.

(ಸಾಧ್ಯವಾದರೆ ಹಿಬ್ರೂ ತಿಂಗಳು ಮತ್ತು ದಿನದ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರ ನೀಡಿ).

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

ಕೆಳಗಿನ ಉದಾಹರಣೆಗಳಲ್ಲಿ ಎರಡು ವಾಕ್ಯಗಳನ್ನು ಬಳಸಲಾಗಿದೆ.

  • ಈ ಸಮಯದಲ್ಲಿ ನೀವು “ ಅಬೀಬ್ ” / ಚೈತ್ರಮಾಸದ , ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.. ಈ ಮಾಸದಲ್ಲೇ ನೀವು ಐಗುಪ್ತ ದೇಶದಿಂದ ಬಿಡುಗಡೆ ಹೊಂದಿ ಬಂದಿರಿ (ವಿಮೋಚನಾ ಕಾಂಡ 23:15 ULB)

  • ಇದು ನಿಮಗೆ ಶಾಶ್ವತವಾದ ನಿಯಮ, ಸ್ವದೇಶಸ್ಥರಾದ ನೀವು ನಿಮ್ಮಲ್ಲಿರುವ ಅನ್ಯ ದೇಶದವರು ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ,ಸಕಲವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮನ್ನು ತಗ್ಗಿಸಿಕೊಂಡು ನನ್ನ ಬಳಿ ಬರಬೇಕು. (ಯಾಜಕ ಕಾಂಡ 16:29 ULB)

  1. ಹಿಬ್ರೂ ತಿಂಗಳುಗಳ ಸಂಖ್ಯೆಯನ್ನು ಹೇಳಿ.

    • ಆ ಸಮಯದಲ್ಲಿ ನೀವು ನನ್ನ ಸನ್ನಿಧಿಯಲ್ಲಿ ವರ್ಷದ ಮೊದಲ ತಿಂಗಳು , ಈ ಉದ್ದೇಶಕ್ಕಾಗಿ ನಿರ್ಧರಿಸಬೇಕು. ನೀವು ಐಗುಪ್ತದೇಶದಿಂದ ಇದೇ ತಿಂಗಳಲ್ಲಿ ಬಿಡುಗಡೆ ಹೊಂದಿ ಬಂದಿರಿ
  2. ಜನರಿಗೆ ಗೊತ್ತಿರುವ ತಿಂಗಳುಗಳ ಹೆಸರನ್ನೇ ಬಳಸಿ.

    • ಆ ಸಮಯದಲ್ಲಿ ಈ ಉದ್ದೇಶಕ್ಕಾಗಿ ನಿಗಧಿಪಡಿಸಿದ ತಿಂಗಳಾದ ಮಾರ್ಚ್ ತಿಂಗಳಲ್ಲಿ , ನನ್ನ ಸನ್ನಿಧಿಗೆ ಬನ್ನಿ. ನೀವು ಐಗುಪ್ತದೇಶದಿಂದ ಇದೇ ತಿಂಗಳಲ್ಲಿ ಬಿಡುಗಡೆ ಹೊಂದಿ ಬಂದಿರಿ
    • ಇದು ನಿಮಗೆ ಶಾಶ್ವತವಾದ ನಿಯಮ ಸೆಪ್ಟೆಂಬರ್ ತಿಂಗಳ ದಿನವನ್ನು ನಾನು ಆಯ್ಕೆಮಾಡಿ , ಯಾವ ಕೆಲಸವನ್ನು ಮಾಡದೆ ನಿಮ್ಮನ್ನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ.
  3. ಯಾವ ತಿಂಗಳಿನಲ್ಲಿ ಯಾವ ಕಾಲ / ಋತು ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿ

    • ಇದು ನಿಮಗೆ ಶಾಶ್ವತವಾದ ನಿಯಮ ಶರತ್ಕಾಲದ, ಏಳನೇ ತಿಂಗಳ ಹತ್ತನೇ ದಿನದಂದು. , ನೀವು ಯಾವ ಕೆಲಸವನ್ನು ಮಾಡದೆ ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ
  4. ಕಾಲಕ್ಕೆ / ಋತುವಿಗೆ ಸಮಯ, ಕಾಲವನ್ನು ತಿಂಗಳುಗಳಿಗೆ ಅಳವಡಿಸಿ ತಿಳಿಸಬೇಕು.

    • ಇದು ನಿಮಗೆ ಶಾಶ್ವತವಾದ ನಿಯಮ ಪೂರ್ವಾರ್ಧ ಶರತ್ಕಾಲದ, ಒಂದು ದಿನವನ್ನು ನಾನು ಆಯ್ಕೆ ಮಾಡಿದ್ದೇನೆ ಆ ದಿನ , 1ಯಾವ ಕೆಲಸವನ್ನು ಮಾಡದೆ ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ. ಅಡಿ ಟಿಪ್ಪಣಿ ಈ ರೀತಿ ಇರುತ್ತದೆ:
      • [1]"ಏಳನೇ ತಿಂಗಳ ಹತ್ತನೆಯ ದಿನದಂದು” ಎಂದು ಇಬ್ರಿಯರು ಹೇಳುತ್ತಾರೆ.