translationCore-Create-BCS_.../translate/translate-fraction/01.md

11 KiB

ವಿವರಣೆ

ಭಿನ್ನರಾಶಿ ಎಂದರೆ ಒಂದು ಸಂಖ್ಯಯಲ್ಲಿನ ಸಮಾನ ಭಾಗಗಳನ್ನು ಸೂಚಿಸುವಂತದ್ದು, ಕೆಲವೊಮ್ಮೆ ದೊಡ್ಡ ಗುಂಪಿನಲ್ಲಿರುವ ಸಮಾನ ಗುಂಪುಗಳ ಕುರಿತಾಗಿ ಅಥವಾ ಕೆಲವು ವಸ್ತುಗಳ ಬಗ್ಗೆ ಹೇಳಲೂ ಬಳಸಲಾಗುತ್ತದೆ. ಒಂದು ವಿಷಯ ಅಥವಾ ಒಂದು ಗುಂಪನ್ನು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟು ಅಥವಾ ಹೆಚ್ಚು ಭಾಗಗಳಾಗಿ, ಗುಂಪಾಗಿ ವಿಂಗಡಿಸಿ ಮತ್ತು ಭಿನ್ನರಾಶಿ ಒಂದಕ್ಕಿಂತ ಹೆಚ್ಚಿನ ಭಾಗ ಅಥವಾ ಗುಂಪನ್ನು ಸೂಚಿಸಲು ಹೇಳುವುದು.

ಪಾನದ್ರವ್ಯವಾಗಿ ಅರ್ಪಿಸಲು ನೀನು ಒಂದು ಹಿನ್ (ಎರಡು ಸೇರು) ಮೂರನೇ ಒಂದು ಭಾಗ ಕೊಡಬೇಕು. (ಅರಣ್ಯಕಾಂಡ 15:7 ULB)

ಹಿನ್ ಎಂದರೆ ದ್ರಾಕ್ಷಾರಸ ಅಥವಾ ದ್ರವರೂಪದವುಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಒಂದು ಅಳತೆ ಪಾತ್ರೆ. ಒಂದು ಹಿನ್ ಅಳತೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಮಾತ್ರ ಇನ್ನೊಂದು ಪಾತ್ರೆಯಲ್ಲಿ ತುಂಬಿಸುವುದು.

ಮೂರನೇ ಒಂದು ಭಾಗದ ಹಡಗುಗಳನ್ನು ನಾಶಪಡಿಸಿದರು. (ಪ್ರಕಟಣೆ 8:9 ULB)

ಅಲ್ಲಿ ಅನೇಕ ಹಡುಗುಗಳು ಇದ್ದವು. ಒಂದು ವೇಳೆ ಎಲ್ಲಾ ಹಡಗುಗಳನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿದ್ದರೆ ಅದರಲ್ಲಿ ಒಂದು ಗುಂಪಿನ ಹಡಗುಗಳು ನಾಶವಾಗುತ್ತಿದ್ದವು. ಇಂಗ್ಲೀಷ್ ಭಾಷೆಯಲ್ಲಿ ಬಹುಪಾಲು ಭಿನ್ನರಾಶಿ ಪದಗಳು "-th" ಅಕ್ಷರಗಳಿಂದ ಕೊನೆಗೊಳ್ಳುತ್ತವೆ.

ಇಡೀ ಸಂಖ್ಯೆಯನ್ನು ಗುಂಪನ್ನು ಸಮಾನಭಾಗಗಳಾಗಿ ವಿಂಗಡಿಸುವುದನ್ನು [ಭಿನ್ನರಾಶಿ] ಎಂದು ಕರೆಯಲಾಗುವುದು
ನಾಲ್ಕು ನಾಲ್ಕನೆಯ
ಹತ್ತು ಹತ್ತನೆಯ
ಒಂದು ನೂರು ಒಂದು ನೂರನೆಯ
ಒಂದು ಸಾವಿರ ಒಂದು ಸಾವಿರದ

ಇಂಗ್ಲೀಷ್ ಭಾಷೆಯಲ್ಲಿ ಕೆಲವು ಭಿನ್ನರಾಶಿಗಳು ಈ ಮಾದರಿಯನ್ನು ಅನುಸರಿಸುವುದಿಲ್ಲ.

ಇಡೀ ಭಾಗವನ್ನು ಅನೇಕ ಭಾಗಗಳಾಗಿ ವಿಂಗಡಿಸಿರುವುದು ಭಿನ್ನರಾಶಿ
ಎರಡು ಅರ್ಧ
ಮೂರು ಮೂರನೇ
ಐದು ಐದನೇ

ಕಾರಣ ಇದೊಂದು ಭಾಷಾಂತರ ವಿಷಯ ಕೆಲವು ಭಾಷೆಯಲ್ಲಿ ಭಿನ್ನರಾಶಿಯ ಬಳಕೆ ಇಲ್ಲ. ಅವರು ಸರಳವಾಗಿ ಗುಂಪುಗಳ ಬಗ್ಗೆ ಅಥವಾ ವಿಭಾಗಗಳ ಬಗ್ಗೆ ಮಾತನಾಡಬಹುದು ಆದರೆ ಆ ವಿಭಾಗಗಳು ಎಷ್ಟು ದೊಡ್ಡದು ಅಥವಾ ಎಷ್ಟು ವಿಭಾಗಗಳು ಆ ಗುಂಪಿನಲ್ಲಿವೆ ಎಂದು ಹೇಳಲು ಭಿನ್ನರಾಶಿ ಬಳಸುವುದಿಲ್ಲ.

ಸತ್ಯವೇದದ ಕೆಲವು ಉದಾಹರಣೆಗಳು

ಮನಸ್ಸೆ ಕುಲದ ಅರ್ಧ ಜನರಿಗೆಮೋಶೆಯು ಬಾಷಾನಿನಲ್ಲಿ ಸ್ವಾಸ್ಥ್ಯವನ್ನು ಕೊಟ್ಟಿದ್ದನು ಉಳಿದ ಅರ್ಧ ಜನರಿಗೆಯೆಹೋಶುವನು ಯೋರ್ದಾನಿನ ಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲು ಕೊಟ್ಟನು. (ಯೆಹೋಶುವ 22:7 ULB)

ಮನಸ್ಸೆಯ ಕುಲವನ್ನು ಎರಡು ಗುಂಪಾಗಿ ವಿಂಗಡಿಸಲಾಯಿತು. ಮನಸ್ಸೆ ಕುಲದ " ಅರ್ಧ ಭಾಗ ಎಂಬ ಪದ ಆ ಗುಂಪಿನ ಭಾಗ ಎಂದು ಸೂಚಿಸುತ್ತದೆ. “ಇನ್ನೊಂದು ಅರ್ಧ” ಎಂಬ ಪದ ಇನ್ನೊಂದು ಗುಂಪನ್ನು ಸೂಚಿಸುತ್ತದೆ.

ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಅದೇ ವರುಷ ಅದೇ ತಿಂಗಳು ದಿನ ತಾಸಿಗೆ ಸಿದ್ಧವಾಗಿದ್ದ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಟ್ಟನು (ಪ್ರಕಟಣೆ 9:15 ULB)

ಆ ಎಲ್ಲಾ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪಿನ ಜನರನ್ನು ಸಂಹಾರ ಮಾಡಿದರು.

ಪಾನದ್ರವ್ಯವಾಗಿ ಸಮರ್ಪಿಸಲು ಒಂದು ಹಿನ್ ದ್ರಾಕ್ಷಾರಸದ ನಾಲ್ಕನೇ ಭಾಗವನ್ನು (ಒಂದು ವರೆ ಸೇರು ದ್ರಾಕ್ಷಾರಸ) ತರಬೇಕು. (ಅರಣ್ಯಕಾಂಡ 15:5 ULB)

ಅವರು ಒಂದು ಹಿನ್ ದ್ರಾಕ್ಷಾರಸವನ್ನು ನಾಲ್ಕು ಸಮಾನ ಭಾಗಗಳಾಗಿ ವಿಂಗಡಿಸಿ ಅದರಲ್ಲಿ ಒಂದು ಭಾಗವನ್ನು ಸಿದ್ಧಪಡಿಸಿದರು.

ಭಾಷಾಂತರ ತಂತ್ರಗಳು.

ನಿಮ್ಮ ಭಾಷೆಯಲ್ಲಿ ಭಿನ್ನರಾಶಿಗೆ ಸರಿಯಾದ ಅರ್ಥಕೊಡುವ ಪದವಿದ್ದರೆ ಅದನ್ನು ಬಳಸಿಕೊಳ್ಳಿ. ಇಲ್ಲದಿದ್ದರೆ ಕೆಳಗೆಕೊಟ್ಟಿರುವ ವಿಧಾನಗಳನ್ನು ಬಳಸಬಹುದು.

  1. ವಿಭಾಗಿಸಬೇಕಾದ ಗುಂಪುಗಳ ಸಂಖ್ಯೆಯನ್ನು ಹೇಳಿ ಮತ್ತು ವಿಭಾಗಿಸಿದ ಭಾಗಗಳು ಅಥವಾ ಗುಂಪುಗಳ ಬಗ್ಗೆ ತಿಳಿಸಿ.
  2. ಅಳತೆ (ಉದ್ದ) ತೂಕ ಇವುಗಳ ಬಗ್ಗೆ ಮಾತನಾಡುವಾಗ ನಿಮ್ಮ ಜನರಿಗೆ ತಿಳಿಯುವಂತೆ ಹೇಳಿ ಅಥವಾ UDBಯಲ್ಲಿರುವ ಭಾಗದಂತೆ ಬಳಸಬಹುದು.
  3. ಅಳತೆಗಳ ಬಗ್ಗೆ ಹೇಳುವಾಗ ನಿಮ್ಮ ಭಾಷೆಯ ಜನರು ಉಪಯೋಗಿಸುವ ಪದಗಳನ್ನು ಬಳಸಿ.

ನಿಮ್ಮ ಭಾಷೆಯಲ್ಲಿರುವ ಅಳತೆಗಳು ಮೆಟ್ರಿಕ್ ಪದ್ಧತಿಯಂತೆ ಬಳಸಿಕೊಳ್ಳಲು ಪ್ರತಿಯೊಂದು ಅಳತೆಯನ್ನು ಗುರುತಿಸಿ ಹೇಳಲು ತಿಳಿದುಕೊಳ್ಳುವುದು ಅವಶ್ಯ.

ಈ ಉದಾಹರಣೆಗಳನ್ನು ಭಾಷಾಂತರ ವಿಧಾನಗಳನ್ನು ಅಳವಡಿಸಿರುವ ಬಗ್ಗೆ.

  1. ವಿಭಾಗಿಸಬೇಕಾದ ಗುಂಪುಗಳ ಸಂಖ್ಯೆಯನ್ನು ಹೇಳಿ ಮತ್ತು ವಿಭಾಗಿಸಿದ ಭಾಗಗಳು ಅಥವಾ ಗುಂಪುಗಳ ಬಗ್ಗೆ ತಿಳಿಸಿ.
  • ಆಗ ಮೂರರಲ್ಲಿ ಒಂದು ಭಾಗಸಮುದ್ರ ರಕ್ತಮಯವಾಯಿತು (ಪ್ರಕಟಣೆ 8:8 ULB)

    • ಇದು ಅವರು ಮೂರು ಭಾಗವಾಗಿಸಮುದ್ರವನ್ನುವಿಂಗಡಿಸಿದರು , ಅದರಲ್ಲಿ ಒಂದುಭಾಗ ರಕ್ತಮಯವಾಯಿತು
  • ನೀವು ತರುವಂತದ್ದು ಹೋರಿಯಾದ ಪಕ್ಷದಲ್ಲಿ ಅದರೊಂದಿಗೆ ಧಾನ್ಯ ನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರೆಸಿದ ಒಂಬತ್ತು ಸೇರು ಗೋಧಿಹಿಟ್ಟನ್ನು ಪಾನದ್ರವ್ಯಕ್ಕಾಗಿ ಮೂರುಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು . (ಅರಣ್ಯಕಾಂಢ 15:9 ULB)

    • .. ಆಮೇಲೆ ನೀವು ಒಂದು ಎಫಾ ಒಳ್ಳೆ ಹಿಟ್ಟನ್ನು ಹತ್ತು ಭಾಗಗಳಾಗಿ ವಿಂಗಡಿಸಿ ಮತ್ತು ಒಂದು ಹಿನ್ ಎಣ್ಣೆಯನ್ನು ಎರಡು ಭಾಗಗಳಾಗಿ.ವಿಂಗಡಿಸಬೇಕು ಆಮೇಲೆ ಆ ಹಿಟ್ಟಿನಲ್ಲಿ ಮೂರು ಭಾಗಗಳು ಎಣ್ಣೆಯಲ್ಲಿ ಒಂದು ಭಾಗ ಸೇರಿಸಬೇಕು ಇವುಗಳನ್ನು ನೀವು ಆ ಹೋರಿಯೊಂದಿಗೆ ಸಮರ್ಪಿಸಬೇಕು.
  1. ಅಳತೆಗಳನ್ನು ಹೇಳುವಾಗ UDB ಯಲ್ಲಿ ಕೊಟ್ಟಿರುವ ಅಳತೆಗಳನ್ನು ಬಳಸಬೇಕು. ಈಗಾಗಲೇ UDB ಭಾಷಾಂತರಗಾರರು ಮೆಟ್ರಿಕ್ ಪದ್ಧತಿಯಂತೆ ಹೇಳುವ ಅಳತೆ, ಪ್ರಮಾಣಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅಳವಡಿಸಿದ್ದಾರೆ.
  • ಶೆಕೆಲ್ ನ ಮೂರನೇ ಎರಡು ಭಾಗ (1 ಸಮುವೇಲ 13:21 ULB)

    • ಬೆಳ್ಳಿ ಎಂಟು ಗ್ರಾಂಗಳು (1 ಸಮುವೇಲ 13:21 UDB)
  • ಒಂದು ಎಫಾದ ಹತ್ತನೇ ಮೂರು ಭಾಗ ದಷ್ಟು ಹಿಟ್ಟು ಅರ್ಧ ಹಿನ್ ಎಣ್ಣೆಯೊಂದಿಗೆ ಬೆರೆಸಬೇಕು. (ಅರಣ್ಯಕಾಂಡ 15:9 ULB)

    • ಆರು ಮತ್ತು ಒಂದುವರೆ ಲೀಟರ್ ಚೆನ್ನಾಗಿ ಬೀಸಿದ ಹಿಟ್ಟಿನೊಂದಿಗೆ ಎರಡು ಲೀಟರ್ ಆಲಿವ್ ಎಣ್ಣೆ. (ಅರಣ್ಯಕಾಂಡ 15:9 UDB)
  1. ಅಳತೆಗಳ ಬಗ್ಗೆ ನಿಮ್ಮ ಭಾಷೆಯಲ್ಲಿ ಬಳಸುವ ಪದಗಳನ್ನೇ ಬಳಸಿ. ನಿಮ್ಮ ಭಾಷೆಯಲ್ಲಿರುವ ಅಳತೆಗಳು ಮೆಟ್ರಿಕ್ ಪದ್ಧತಿಯಂತೆ ಬಳಸಿಕೊಳ್ಳಲು ಪ್ರತಿಯೊಂದು ಅಳತೆಯನ್ನು ಗುರುತಿಸಿ ಹೇಳಲು ತಿಳಿದುಕೊಳ್ಳುವುದು ಅವಶ್ಯ.
  • ಒಂದು ಎಫಾದ ಹತ್ತನೇ ಮೂರು ಭಾಗ ಒಳ್ಳೆ ಹಿಟ್ಟನ್ನು ಅರ್ಧ ಹಿನ್ ಎಣ್ಣೆಯೊಂದಿಗೆ ಬೆರೆಸಬೇಕು. (ಅರಣ್ಯಕಾಂಡ 15:9, ULB)
    • ಆರು ಕ್ವಾರ್ಟ್ಸ್ ತೂಕದ ಒಳ್ಳೆಯ ಹಿಟ್ಟನ್ನು ಎರಡು ಕ್ವಾರ್ಟ್ಸ್ ಎಣ್ಣೆಯೊಂದಿಗೆ ಬೆರೆಸಬೇಕು.