translationCore-Create-BCS_.../translate/translate-form/01.md

10 KiB
Raw Permalink Blame History

ಆಕಾರವು ಏಕೆ ಮುಖ್ಯವಾದುದು?

ವಾಕ್ಯಭಾಗದ ಅರ್ಥ ತುಂಬಾ ನಿರ್ಣಾಯಕವಾದ ಮೂಲತತ್ವ. ಅದೇ ರೀತಿ ವಾಕ್ಯಭಾಗದ ಆಕಾರವು ಸಹ ಅಷ್ಟೇ ಪ್ರಮುಖವಾದುದು. ಇದು ಅರ್ಥ ಕೊಡುವ ಒಂದು ಸಾಧನ. ಕೆಲವೊಮ್ಮೆ ಇದರ ಅರ್ಥವನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ಸ್ವೀಕರಿಸಲು ಅಡ್ಡಿಮಾಡುವಂತಾಗಬಹುದು. ಆದುದರಿಂದ ಆಕಾರಗೆ ಅದರದೇ ಆದ ಅರ್ಥವಿರುತ್ತದೆ.

ಉದಾಹರಣೆ ದಾವೀದನ.ಕೀರ್ತನೆ.9:1-2: ಈ ವಾಕ್ಯಗಳನ್ನು ಭಾಷಾಂತರಮಾಡಿರುವ ನಮೂನೆಯಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ. ನ್ಯೂ ಲೈಫ್ ವರ್ಶನ್ ನಿಂದ :

ಯೆಹೋವನೇ ಹೃದಯಪೂರ್ವಕವಾಗಿ ನಿನಗೆ ಸ್ತೋತ್ರಸಲ್ಲಿಸುವೆನು. ನೀನು ಮಾಡಿದ ಅದ್ಭುತ ಕಾರ್ಯಗಳನ್ನು ವರ್ಣಿಸುವೆನು. ಪರಾತ್ಪರನೇ, ನಿನ್ನಲ್ಲಿ ನಾನು ಸಂತೋಷಿಸುವೆನು. ಉತ್ಸಾಹದಿಂದ ನಿನ್ನ ನಾಮವನ್ನು ಕೀರ್ತಿಸುವೆನು.

New Revised Standard ಅನುವಾದದಿಂದ

ಯೆಹೋವನೇ ನನ್ನ ಹೃದಯಪೂರ್ವಕವಾಗಿ, ನಿನಗೆ ಕೃತಜ್ಞತೆ ಸಲ್ಲಿಸುವೆನು. ನೀನು ಮಾಡಿದ ಮಹತ್ಕಾರ್ಯಗಳನ್ನು ವರ್ಣಿಸಿ ಕೊಂಡಾಡುವೆನು. ನಿನ್ನಲ್ಲಿ ಹರ್ಷಿಸಿ ಉತ್ಸಾಹಪಡುವೆನು. ಪರಾತ್ಪರನೇ, ಮಹೋನ್ನತನೇ, ನಿನ್ನ ನಾಮವನ್ನು ಮಹಿಮೆಪಡಿಸಿ ಕೊಂಡಾಡುವೆನು.

ಮೊದಲ ಪ್ರತಿಯು ಕಥನ ರೂಪದ ನಮೂನೆಯಲ್ಲಿ ಹೇಳುತ್ತದೆ. ಕೀರ್ತನೆಯ ಪ್ರತಿಯೊಂದು ಸಾಲನ್ನು ಪ್ರತ್ಯೇಕ ವಾಕ್ಯಗಳಂತೆ ಹೇಳಿದೆ. ಎರಡನೇ ಪ್ರತಿಯಲ್ಲಿ ವಾಕ್ಯದ ಸಾಲುಗಳನ್ನು ಪದ್ಯದರೂಪದಲ್ಲಿ ಬರೆಯಲಾಗಿದೆ. ಭಾಷಾಂತರವಾಗುವ ಭಾಷೆಯಲ್ಲೂ ಈ ರೀತಿ ಪದ್ಯದ ನಮೂನೆಯಲ್ಲಿ ಪ್ರತ್ಯೇಕ ವಾಕ್ಯಗಳಲ್ಲಿ ಬರೆಯಲಾಗಿದೆ. ಮೊದಲ ಎರಡು ಸಾಲುಗಳು ಒಂದು ಅಲ್ಪವಿರಾಮ ಚಿನ್ಹೆಯೊಂದಿಗೆ ಸಾಲುಗಳನ್ನು ಮುಂದುವರೆಸಿದೆ. ಇದು ಎರಡೂ ಸಾಲುಗಳು ಒಂದರೊಡನೊಂದು ಸಂಬಂಧಿಸಿದ್ದು ಎರಡೂ ಒಂದೇರೀತಿಯ ವಿಷಯಗಳನ್ನು ತಿಳಿಸುತ್ತವೆ. ಮೂರನೇ ಮತ್ತು ನಾಲ್ಕನೇ ಸಾಲುಗಳು ಸಹ ಇದೇ ರೀತಿಯ ವ್ಯವಸ್ಥೆಯಲ್ಲಿದೆ. ಎರಡನೇ ಪ್ರತಿಯನ್ನು ಓದಿದ ಓದುಗನಿಗೆ ಈ ಕೀರ್ತನೆ ಒಂದು ಪದ್ಯ ಅಥವಾ ಒಂದು ಹಾಡು ಎಂದು ತಿಳಿದುಕೊಳ್ಳುವನು, ಏಕೆಂದರೆ ಅದರ ಆಕೃತಿ ಆ ರೀತಿ ಇದೆ. ಮೊದಲನೆಯ ಓದುಗನೂ ಸಹ ಅದನ್ನು ಪದ್ಯ ನಮೂನೆಯಲ್ಲಿದೆ ಎಂದು ತಿಳಿದುಕೊಳ್ಳುವರು. ಏಕೆಂದರೆ ಇದನ್ನು ಗದ್ಯರೂಪದಲ್ಲಿ ಬರೆಯದೆ ಇರುವುದರಿಂದ. ಮೊದಲನೆ ಪ್ರತಿಯ ಓದುಗರು ಗೊಂದಲಕ್ಕೆ ಒಳಗಾಗಬಹುದು ಏಕೆಂದರೆ ದಾವೀದನ ಕೀರ್ತನೆಗಳು ಪದ್ಯದ ನಮೂನೆಯಲ್ಲಿದೆ. ಆದರೆ ಅದರಂತೆ ನಮೂದಿಸಿರುವುದಿಲ್ಲ. ಇಲ್ಲಿರುವ ಪದಗಳು ಸಂತೋಷಕರವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಭಾಷಾಂತರಗಾರರಾಗಿ ನಿಮ್ಮ ಭಾಷೆಯಲ್ಲಿ ಸಂತೋಷಕರ ಹಾಡಿನಂತೆ ಇದನ್ನು ವ್ಯಕ್ತಪಡಿಸಬೇಕು.

New International Version: ನ 2ನೇ ಸಮುವೇಲ 18:33b ವಾಕ್ಯದ ನಮೂನೆಯಲ್ಲಿ ಗಮನಿಸಿ.

" ನನ್ನ ಮಗನೇ, ಅಬ್ಷಾಲೋಮನೇ! ನನ್ನ ಮಗನೇ ನನ್ನ ಮಗನಾದ ಅಬ್ಷಾಲೋಮನೇ! ನಿನ್ನ ಬದಲು ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ, ಈ ವಾಕ್ಯದಲ್ಲಿರುವ ಅರ್ಥ ಏನೆಂದು ಕೆಲವರು ಈ ರೀತಿ ಹೇಳಬಹುದು. " ನನ್ನ ಮಗನಾದ ಅಬ್ಷಾಲೋಮನ ಬದಲು ನಾನು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದು ಬಯಸುತ್ತೇನೆ.ಎಂದು.

ಈ ಮಾತುಗಳಲ್ಲಿ ಇರುವ ಅರ್ಥವನ್ನು ಸಂಕ್ಷಿಪ್ತಗೊಳಿಸಿ ತಿಳಿಸುತ್ತದೆ. ಇದರ ರೂಪ ವಿಷಯಕ್ಕಿಂತ ಹೆಚ್ಚಿನದ್ದನ್ನುಪರಿಣಾಮಕಾರಿಯಾಗಿ ತಿಳಿಸುತ್ತದೆ. ಇಲ್ಲಿ ಬಳಸಿರುವ "ಮಗನೇ, ಮಗನೇ" ಎಂಬ ಪದಗಳು, ಅಬ್ಷಾಲೋಮ್, ಓಹ್ ಎಂಬ ಪದಗಳು ಪದೇ ಪದೇ ಉಚ್ಛಾರವಾಗಿರುವುದರಿಂದ ಇದು ಮಗನನ್ನು ಕಳೆದುಕೊಂಡ ಒಬ್ಬ ತಂದೆಯ ತೀವ್ರವಾದ ಭಾವನೆಗಳನ್ನು ತಿಳಿಸುತ್ತದೆ. ಭಾಷಾಂತರಗಾರರಾಗಿ ಇಲ್ಲಿ ಕೇವಲ ಪದಗಳನ್ನು ಮಾತ್ರ ಭಾಷಾಂತರಿಸದೆ ಪದಗಳಲ್ಲಿರುವ ಭಾವನೆಗಳನ್ನು ಈ ಮಾದರಿಯಲ್ಲಿ ಹಿಡಿದಿಡುವುದನ್ನು ಗಮನಿಸಬೇಕು.

2 ನೇ ಸಮುವೇಲ 18:33b, ವಾಕ್ಯವನ್ನುಮೂಲಭಾಷೆಯಲ್ಲಿರುವ ಭಾವನೆಗೆ ಚ್ಯುತಿ ಬರದಂತೆ ಅರ್ಥಪೂರ್ಣವಾಗಿ ಅದೇ ಮಾದರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆದುದರಿಂದ ನಾವು ಸತ್ಯವೇದದ ವಾಕ್ಯಭಾಗವನ್ನು ಸರಿಯಾಗಿ ಓದಿನೋಡಿ ಪರೀಕ್ಷಿಸಿ ನಮ್ಮನ್ನು ನಾವೇ ಇಲ್ಲಿರುವ ನಮೂಣೆಯ ಬಗ್ಗೆ ಪ್ರಶ್ನಿಸಿಕೊಂಡು ಮೂಲ ಅರ್ಥಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಇಲ್ಲಿ ಯಾವ ಮನೋಧೋರಣೆ ಅಥವಾ ಭಾವನೆಗಳನ್ನು ಇದು ತಿಳಿಸುತ್ತಿದೆ? ಇನ್ನೂ ಅನೇಕ ಪ್ರಶ್ನೆಗಳು ನಮಗೆ ನಮೂನೆ ಮತ್ತು ಅದರ ಅರ್ಥ ತಿಳಿಯಲು ಸಹಾಯ ಮಾಡಬಲ್ಲವು. ಅವುಗಳೆಂದರೆ :

  • ಇದನ್ನು ಬರೆದವರು ಯಾರು ?
  • ಇದನ್ನು ಸ್ವೀಕರಿಸಿದವರು ಯಾರು ?
  • ಯಾವ ಸನ್ನಿವೇಶದಲ್ಲಿ ಇದನ್ನು ಬರೆಯಲಾಯಿತು ?
  • ಯಾವ ರೀತಿ ಪದಗಳು ಮತ್ತು ಪದಗುಚ್ಛಗಳನ್ನು ಇಲ್ಲಿ ಆಯ್ಕೆಮಾಡಿದೆ ಮತ್ತು ಏಕೆ ?
  • ಇಲ್ಲಿ ಬಳಸಿರುವ ಪದಗಳು ತುಂಬಾ ಭಾವನಾತ್ಮಕ ಪದಗಳೇ ಅಥವಾ ಈ ಪದಗಳ ನಮೂನೆಯಲ್ಲಿ ವಿಶೇಷತೆ ಏನಾದರೂ ಇದೆಯೇ ?

ನಾವು ಪದ ಮತ್ತು ನಮೂನೆಯ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭಾಷಾಂತರ ಮಾಡುವ ಭಾಷೆ ಮತ್ತು ಸಂಸ್ಕೃತಿಗೆ ತಕ್ಕಂತೆ ಅರ್ಥ ಕೊಡುವ ಪದಗಳನ್ನು ಆಯ್ಕೆಮಾಡಬಹುದು.

ಸಂಸ್ಕೃತಿ ಕೆಲವೊಮ್ಮೆ ಅರ್ಥಕ್ಕೆ ಧಕ್ಕೆ ತರುತ್ತದೆ.

ನಮೂನೆಯ ಅರ್ಥವನ್ನುಸಂಸ್ಕೃತಿಯು ನಿರ್ಧರಿಸುತ್ತದೆ. ಒಂದು ನಮೂನೆಗೆ ವಿಭಿನ್ನ ಸಂಸ್ಕೃತಿಯಲ್ಲಿ ವಿಭಿನ್ನ ಅರ್ಥವಿರಬಹುದು. ಭಾಷಾಂತರದಲ್ಲಿ ಪದದ ಅರ್ಥ ಮತ್ತು ನಮೂನೆಯ ಅರ್ಥ ಬದಲಾಗದೆ ಸ್ಥಿರವಾಗಿರಬೇಕು. ಇದರ ಅರ್ಥ ವಾಕ್ಯಭಾಗದ ಮಾದರಿ ಸಂಸ್ಕೃತಿಗೆ ಅನುಗುಣವಾಗಿ ಬದಲಾಗಿ ಹೊಂದಿಕೊಳ್ಳುವಂತಿರಬೇಕು. ನಮೂನೆಯಲ್ಲಿ ವಾಕ್ಯಭಾಗದ ಭಾಷೆ, ಅದರ ವಿನ್ಯಾಸ, ಪುನರಾವರ್ತಿತ ವಿಚಾರಗಳು ಅಥವಾ ಭಾವಸೂಚಕ ಉದ್ಘಾರಗಳು " O." ಮತ್ತು ಅಭಿವ್ಯಕ್ತಿಗಳು ಒಳಗೊಂಡಿರುತ್ತದೆ. ನೀವು ಭಾಷಾಂತರ ಮಾಡುವಾಗ ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅವು ಯಾವ ಅರ್ಥಕೊಡುತ್ತದೆ, ಯಾವ ನಮೂನೆ ಅತ್ಯುತ್ತಮ ರೀತಿಯಲ್ಲಿ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅರ್ಥವನ್ನು ಅಭಿವ್ಯಕ್ತಿ ಪಡಿಸುತ್ತದೆ ಎಂಬುದನ್ನು ಗುರುತಿಸಿ ನಿರ್ಧರಿಸಬೇಕು.