translationCore-Create-BCS_.../translate/translate-bdistance/01.md

15 KiB
Raw Permalink Blame History

ವಿವರಣೆಗಳು

ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬಂದಿರುವ ಉದ್ದ ಮತ್ತು ಅಂತರಗಳ ಬಗ್ಗೆ ಬಳಸಿರುವ ಬಹುಪಾಲು ಸಾಮಾನ್ಯ ಪದಗಳಾಗಿವೆ. ಹಾಗೂ ಮೂಲ ಸತ್ಯವೇದದ ಪದಗಳಾಗಿವೆ. ಇವು ಬಹುಪಾಲು ಕೈ ಮತ್ತು ಮುಂಗೈಗಳ ಅಳತೆಯನ್ನು ಆಧರಿಸಿದೆ.

  • ಕೈಯಳತೆ ಒಬ್ಬ ಪುರುಷನ ಅಂಗೈ ಅಗಲದ ಅಳತೆಯಾಗಿದೆ.
  • ಗೇಣು ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.
  • ಮೊಳ (ಅರ್ಧ ಗಜ 18 ಇಂಚು) ಒಬ್ಬ ಪುರುಷನ ಮುಂಗೈಯಿಂದ ಮಧ್ಯದ ಬೆರಳಿನ ತುದಿಯಿಂದ ಕೈ ಮಂಡಿಯವರೆಗೆ ಅಳತೆ ಮಾಡುವಂತದ್ದು (ಒಂದು ಮೊಳ)

ಉದ್ದನೆಯ ಮೊಳ ಈ ಅಳತೆ ಯೆಹೆಜ್ಕೇಲ 40-48.ರಲ್ಲಿ ಮಾತ್ರ ಬಳಕೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಕ್ಯುಬಿಟ್ ಮತ್ತು ಒಂದು ಗೇಣು ಇದರ ಅಳತೆ.

stadium ಸ್ತಾದಿಯ (ಬಹುವಚನ stadia ಸ್ತಾದಿಯ ಒಂದು ಮೈಲು)ಎಂಬುದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವೊಂದು, ಹಳೆಯ ಇಂಗ್ಲೀಷ್ ಭಾಷಾಂತರಗಳಲ್ಲಿ ಈ ಪದವನ್ನು "furlong", ಎಂಬುದು ಅಗೆದು ಸಿದ್ಧಪಡಿಸಿರುವ ಓಡುವ ಟ್ರಾಕ್ ಬಗ್ಗೆ ಹೇಳಿರುವ ಮಾತು. ಕೆಳಗೆ ಕೊಟ್ಟಿರುವ ಮೆಟ್ರಿಕ್ ಮೌಲ್ಯಗಳ ಪಟ್ಟಿ ಸಮೀಪದ ಮೌಲ್ಯವನ್ನು ಬೆಳೆಸಿದೆಯೇ ಹೊರತು ಸತ್ಯವೇದದಲ್ಲಿರುವ ಅಳತೆಗೆ ನಿಖರವಾದ ಮೌಲ್ಯ ಹೇಳುತ್ತಿಲ್ಲ. ಸತ್ಯವೇದದಲ್ಲಿರುವ ಅಳತೆಗಳು ಬಹುಶಃ ನಿಖರವಾದ ಉದ್ದ ಅಳತೆಗಳನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಇವು ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಕೆಳಗೆ ಕೊಟ್ಟಿರುವ ಸಮಾನ ಅಳತೆಗಳು ಸರಾಸರಿ ಅಳತೆಗಳನ್ನು ನೀಡಲು ಪ್ರಯತ್ನಿಸಿದೆ.

ಮೂಲ ಅಳತೆಗಳು ಮೆಟ್ರಿಕ್ ಅಳತೆಗಳು
ಅಂಗೈ ಅಗಲ (handbreadth) 8 ಸೆಂಟಿಮೀಟರ್ ಗಳು
ಗೇಣು span 23 ಸೆಂಟಿಮೀಟರ್ ಗಳು
cubit (ಮೊಳ) 46 ಸೆಂಟಿಮೀಟರ್ ಗಳು
"long" ಉದ್ದcubit (ಮೊಳ) 54 ಸೆಂಟಿಮೀಟರ್ ಗಳು
stadia ಸ್ತಾದಿಯ ಒಂದು ಮೈಲು 185 meters

ಭಾಷಾಂತರ ತತ್ವಗಳು

  1. ಸತ್ಯವೇದದಲ್ಲಿ ಬರುವ ಜನರು ಆಧುನಿಕ ಅಳತೆ ಪ್ರಮಾಣಗಳಾದ ಮೀಟರ್, ಲೀಟರ್ ಮತ್ತು ಕಿಲೊಗ್ರಾಂಗಳನ್ನು ಬಳಸಿಲ್ಲ. ಸತ್ಯವೇದದಲ್ಲಿ ಬಳಸಿರುವ ಮೂಲ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದವನ್ನು ಬಹು ಹಿಂದೆ ಬರೆಯಲಾಗಿದೆ ಆಗಿನ ಕಾಲದಲ್ಲಿ ಜನರು ಯಾವ ಅಳತೆ ಪ್ರಮಾಣಗಳನ್ನು ಬಳಸುತ್ತಿದ್ದರು ಎಂಬುದು ತಿಳಿಯುತ್ತದೆ.
  2. ಆಧುನಿಕ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿ -ಕೊಳ್ಳಲು ಸಹಕಾರಿಯಾಗಿರುತ್ತದೆ.
  3. ಯಾವ ಅಳತೆಗಳನ್ನು ಬಳಸಿದರೂ ಒಳ್ಳೆಯದೆ, ಆದರೆ ಹಳೆಯ ಅಳತೆಗಳ ಬಗ್ಗೆ ಬರೆಯುವಾಗ ಅಡಿ ಟಿಪ್ಪಣಿಯಲ್ಲಿ ಅದರ ಬಗ್ಗೆ ವಿವರಕೊಡುವುದು ಅಗತ್ಯ.
  4. ನೀವು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ಅಳತೆಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ಭಾಷಾಂತರಿಸಿ ಹೇಳುತ್ತಿರುವ ಅಳತೆಗಳು ನಿಖರವಾದುದು ಎಂದು ಹೇಳಬಾರದು. ಉದಾಹರಣೆಗೆ ನೀವು ಒಂದು " ಒಂದು ಕ್ಯುಬಿಟ್ ಗೆ " ".46 ಮೀಟರ್" ಅಥವಾ "46 ಸೆಂಟಿಮೀಟರ್ ಗಳು ಎಂದು ಹೇಳಿದರೂ ಅವರು ಇದೆ ಸರಿಯಾದುದು ಎಂದು ತಿಳಿಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ "ಅರ್ಧ ಮೀಟರ್," "45 ಸೆಂಟಿಮೀಟರ್ ಗಳು," ಅಥವಾ "50 ಸೆಂಟಿಮೀಟರ್ ಗಳು." ಎಂದು ಬರೆಯುವುದು ಉತ್ತಮ.
  5. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ "ಸುಮಾರು " ಎಂಬ ಪದಬಳಸಿ ಹೇಳುತ್ತಿರುವ ಅಳತೆ ನಿರ್ದಿಷ್ಟ ಹಾಗೂ ನಿಖರವಾದುದಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ ಲೂಕ 24:13 ರಲ್ಲಿ " ಎಮ್ಮಾಹು " ಎಂಬ ಸ್ಥಳ ಯೆರುಸಲೇಮಿನಿಂದ ಅರವತ್ತು ಸ್ತಾದಿಯ (ಆರುವರೆ ಮೈಲು) ದೂರದಲ್ಲಿತ್ತು. ಇದನ್ನು ಯೆರುಸಲೇಮಿನಿಂದ " ಸುಮಾರು ಹತ್ತು ಕಿಲೋಮೀಟರ್ " ದೂರದಲ್ಲಿತ್ತು ಎಂದು ಭಾಷಾಂತರಿಸ ಬಹುದು.
  6. ದೇವರು ಜನರನ್ನು ಕುರಿತು ದೂರ, ಅಂತರದಬಗ್ಗೆ ಹೇಳಿದಾಗ ಮತ್ತು ಜನರು ಅದರಂತೆ ಕೆಲಸಮಾಡಿ ಪೂರೈಸಿದ ಅಂತರವನ್ನು ಭಾಷಾಂತರಿಸುವಾಗ "ಸುಮಾರು " ಎಂಬ ಪದಬಳಸ ಬಾರದು. ಏಕೆಂದರೆ ದೇವರು ದೂರ, ಅಂತರದ ಬಗ್ಗೆ ಹೇಳುವಾಗ ನಿರ್ದಿಷ್ಟ ಹಾಗೂ ನಿಖರತೆ ಹೊಂದಿರಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.

###ಭಾಷಾಂತರ ತಂತ್ರಗಳು.

  1. ULB ಯಲ್ಲಿರುವ ಅಳತೆಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪ್ರಮಾಣಗಳು ಮೂಲಲೇಖಕರು ಬಳಸಿದ ಅಳತೆ ಪ್ರಮಾಣಗಳಂತೆಯೇ ಬಳಸಿದ್ದಾರೆ. ಅಂತಹ ಪದಗಳ ಧ್ವನಿ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULB ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ Copy or Borrow Words)
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರ ಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.
  3. ಇಲ್ಲವೆ ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸಿ. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು.
  4. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ಯ ವಾಕ್ಯಭಾಗ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಇಲ್ಲಿ ಸೇರಿಸಿಕೊಳ್ಳಬಹುದು.

###ಭಾಷಾಂತರ ಕೌಶಲ್ಯಗಳ ಅಳವಡಿಸಿದ ಬಗ್ಗೆ.

ಎಲ್ಲಾ ಕೌಶಲ್ಯಗಳು ವಿಮೋಚನಾ ಕಾಂಡ 25:10 ರ ವಾಕ್ಯಕ್ಕೆಅಳವಡಿಸಲಾಗಿದೆ.

  • ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕಿತ್ತು. ಅದು ಎರಡೂವರೆ ಮೊಳ ಉದ್ದವೂ, ಒಂದೂವರೆ ಮೊಳ ಅಗಲವೂ, ಒಂದೂವರೆ ಮೊಳ ಎತ್ತರವೂ ಆಗಿರಬೇಕು. (ವಿಮೋಚನಾಕಾಂಡ 25:10 ULB)
  1. ULB ಯಲ್ಲಿ ಕೊಟ್ಟಿರುವ ಅಳತೆಗಳನ್ನು ಬಳಸಿಕೊಳ್ಳಿ. ಇವು ಮೂಲ ಲೇಖಕರು ಬಳಸಿರುವ ಅಳತೆಗಳನ್ನೇ ಹೊಂದಿರುತ್ತವೆ. ಅಂತಹ ಪದಗಳ ಧ್ವನಿ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULB ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ Copy or Borrow Words)

    • “ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಎರಡೂವರೆ ಮೊಳ ; ಉದ್ದ, ಅದರ ಅಗಲ ಒಂದೂವರೆ ಮೊಳ ಅಗಲ; ಅದರ ಎತ್ತರ ಒಂದೂವರೆ ಮೊಳ;
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.

    • " ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಅದರ ಉದ್ದ ಒಂದು ಮೀಟರ್ ;ಅದರ ಅಗಲ ಒಂದು ಮೀಟರ್ ನ ಮೂರನೆ ಎರಡು ಭಾಗ 2/3, ಮತ್ತು ಅದರ ಎತ್ತರ ಮೂರನೆ ಎರಡು ಭಾಗ 2/3, ;
  3. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸುತ್ತಿರುವ ಅಳತೆಯನ್ನೇ ಬಳಸಿಕೊಳ್ಳಬಹುದು. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ; ನೀವು ಒಂದು ಅಡಿಯ ಮೂಲದ ಉದ್ದವನ್ನು ತಿಳಿಸುವ ಕೆಳಗಿನಂತೆ ಭಾಷಾಂತರಿಸಬಹುದು.

    • ”ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಉದ್ದ 3 3/4 ಅಡಿ ; ಅದರ ಅಗಲ 2 1/4 ಅಡಿ; ಅದರ ಎತ್ತರ 2 1/4 feet."
  4. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ವಾಕ್ಯಭಾಗದಲ್ಲಿರುವ ಅಳತೆಯನ್ನು ತಿಳಿಸುತ್ತದೆ,

    • ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಇರಬೇಕಾದ ಉದ್ದ ಎರಡುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್); ಅದರ ಅಗಲ ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೂರನೇ ಎರಡು ಮೀಟರ್)" ಮತ್ತು ಅದರ ಎತ್ತರ ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೀಟರ್))." ಆಗಿರಬೇಕು.
  5. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಈ ಕೆಳಗಿನ ಅಳತೆಗಳು ULB ಟಿಪ್ಪಣಿಯಲ್ಲಿನ ಅಳತೆಗಳು.

    • “ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು ಅದರ ಉದ್ದವು ಒಂದು ಮೀಟರ್ 1; ಅದರ ಅಗಲ ಮೂರನೇ ಎರಡು ಭಾಗ 2/3 ಮೀಟರ್ 2; ಮತ್ತು ಅದರ ಎತ್ತರ ಒಂದು ಮೀಟರ್ ನ ಮೂರನೇ ಎರಡು ಭಾಗ 2/3 ಮೀಟರ್ ." ಅಡಿ ಟಿಪ್ಪಣಿಗಳು ಈ ಕೆಳಗಿನಂತೆ ಕಂಡು ಬರುತ್ತವೆ.
      • [1]ಎರಡೂವರೆ ಕ್ಯುಬಿಟ್ (ಎರಡು ವರೆ ಮೊಳ)
      • [2]ಒಂದೂವರೆ ಕ್ಯುಬಿಟ್ ಒಂದೂವರೆ ಮೊಳ.