34 lines
7.2 KiB
Markdown
34 lines
7.2 KiB
Markdown
### ವಿವರಣೆ
|
|
|
|
ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಭಾಷಾಂತರ ಮಾಡಲು ಅಥವಾ ವಿಭಿನ್ನ ಮಾದರಿ ಬೇಕೆಂದರೆ ಪರ್ಯಾಯ ಭಾಷಾಂತರದಿಂದ ULB ಮಾದರಿಯನ್ನು ಭಾಷಾಂತರಿಸುವ ಮಾರ್ಗ ದೊರೆಯುತ್ತದೆ. ULB ಮಾದರಿಯಲ್ಲಿ ಭಾಷಾಂತರ ಮಾಡುವಾಗ ಅಥವಾ ಈ ವಿಷಯ ಭಾಷಾಂತರವಾಗುವಾಗ ತಪ್ಪಾಗಿ ಭಾಷಾಂತರವಾಗುತ್ತದೆ ಇಲ್ಲವೇ, ಅಸ್ಪಷ್ಟ ಮತ್ತು ಅಸಹಜವಾಗಿ ಭಾಷಾಂತರವಾಗುತ್ತದೆ ಎಂಬ ಸಂದರ್ಭ ಬಂದಾಗ ಪರ್ಯಾಯ ಭಾಷಾಂತರದ ಅವಶ್ಯಕತೆ ಇರುತ್ತದೆ.
|
|
|
|
ಪರ್ಯಾಯ ಭಾಷಾಂತರದ ಸಲಹೆಗಳಲ್ಲಿ, ಈ ಕೆಲವು ವಿಷಯದಲ್ಲಿ ಭಾಷಾಂತರ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಧ್ವನಿತ / ಅಡಕವಾಗಿರುವ ಮಾಹಿತಿಯನ್ನುಸ್ಪಷ್ಟವಾಗಿ ತಿಳಿಸುವಾಗ ಕರ್ತರೀ ಕರ್ಮಣಿ ವಾಕ್ಯಗಳ ಬದಲಾವಣೆ, ಅಲಂಕಾರಿಕ ಪದಗಳನ್ನು /ವಾಕ್ಯಗಳನ್ನು ಹೇಳುವಾಗ ಪ್ರಶ್ನೆಗಳನ್ನು ಸರಳವಾಕ್ಯವಾಗಿ ಬದಲಾಯಿಸುವಾಗ ಇಂತಹ ಬದಲಾವಣೆ ಆಗುತ್ತದೆ. ಟಿಪ್ಪಣಿಯಲ್ಲಿ ಪರ್ಯಾಯ ಭಾಷಾಂತರ ಮಾಡುವಾಗ ವಿವರಣೆಯನ್ನು ನೀಡುವ ಸಂದರ್ಭದಲ್ಲಿ ವಿಷಯಗಳನ್ನು ವಿವರಿಸುವ ಪುಟದಲ್ಲಿನ ಲಿಂಕ್ ನೋಡಬೇಕಿದೆ
|
|
|
|
### ಭಾಷಾಂತರದ ಟಿಪ್ಪಣಿ ಉದಾಹರಣೆಗಳು
|
|
|
|
"AT:" ಎನ್ನುವ ಪದ ಪರ್ಯಾಯ ಭಾಷಾಂತರ ಎಂದು ತೋರಿಸುತ್ತದೆ. ಕೆಲವು ಉದಾಹರಣೆಗಳು
|
|
|
|
**ಅನನ್ಯವಾಗಿರುವ ಮಾಹಿತಿಯನ್ನು ಸ್ಪಷ್ಟಪಡಿಸುವುದು**.
|
|
|
|
>ರಾಜನು <u>ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು </u>.ಎಂಬ ಧರ್ಮಸೂತ್ರವು ಮೇಧ್ಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ. (ದಾನಿಯೇಲ 6:15 ULB)
|
|
|
|
* **ಯಾವ ನಿಭಂದನೆಯಾಗಲೀ, ನಿಯಮವಾಗಲೀ ರದ್ದಾಗಬಾರದು.** - ಎಂಬ ವಾಕ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಸೇರಿಸಬಹುದು. ಪರ್ಯಾಯ ಭಾಷಾಂತರ: ಯಾವ ನಿಭಂದನೆಯನ್ನು ರದ್ದುಮಾಡಲಾಗುವುದಿಲ್ಲ. ದಾನಿಯೇಲನನ್ನು ಸಿಂಹಗಳಿರುವ ಗವಿಯಲ್ಲಿ ಹಾಕಬೇಕು (*ಸ್ಪಷ್ಟವಾದ* ಮಾಹಿತಿಯನ್ನು ನೋಡಿ)
|
|
|
|
ವಾಕ್ಯಗಳಿಗೆ ಸಹಕಾರಿಯಾಗಿ ಬರುವ ವಾಕ್ಯಗಳು ರಾಜನು ಅರ್ಥಮಾಡಿಕೊಳ್ಳುವಂತೆ ಹೇಳಲಾಗಿದೆ, ರಾಜನ ನಿಬಂಧನೆಗಳು ಮತ್ತು ನಿಯಮಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಮೂಲ ಲೇಖಕ ಅಥವಾ ಮಾತನಾಡುತ್ತಿರುವ ವ್ಯಕ್ತಿ ಸ್ಪಷ್ಟವಾಗಿ ತಿಳಿಸಲು ಅಸಮರ್ಥವಾದ ವಿಷಯವನ್ನು ಭಾಷಾಂತರಗಾರರು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಬೇಕು.
|
|
|
|
**ಕರ್ಮಣಿ ಪ್ರಯೋಗದಿಂದ ಕರ್ತರೀ** ಪ್ರಯೋಗಕ್ಕೆ ಬದಲಾವಣೆ.
|
|
|
|
>ಪವಿತ್ರಾತ್ಮನನ್ನು ದೂಷಿಸಿದವನಿಗೆ <u>ಕ್ಷಮಾಪಣೆಯಿಲ್ಲ <u> (ಲೂಕ 12:10 ULB)
|
|
|
|
* **ಇದನ್ನು ಕ್ಷಮಿಸಲಾಗುವುದಿಲ್ಲ** ಇದನ್ನು ಕರ್ತರಿ ಪ್ರಯೋಗದ ಮೂಲಕ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ ದೇವರು ಅವನನ್ನು ಕ್ಷಮಿಸುವುದಿಲ್ಲ ಇಲ್ಲಿರುವ ನಕಾರಾತ್ಮಕ ಕ್ರಿಯಾಪದವನ್ನು ಸಕಾರಾತ್ಮಕ ಕ್ರಿಯಾಪದ " ಕ್ಷಮೆ " ಇದರ ವಿರುದ್ಧಪದವನ್ನು ಬಳಸಿ ಅರ್ಥ ಕೆಡದಂತೆ ಬಳಸಬಹುದು. ಪರ್ಯಾಯ ಭಾಷಾಂತರ "ದೇವರು ಆತನನ್ನು ಯಾವಾಗಲೂ ತಪ್ಪಿತಸ್ಥನೆಂದು ನಿರ್ಧರಿಸುತ್ತಾನೆ" "(ನೋಡಿ: *ಕರ್ತರಿ ಕರ್ಮಣಿ ಪ್ರಯೋಗ*) ನೋಡಿ
|
|
|
|
ಈ ಟಿಪ್ಪಣಿ ನಮಗೆ ಭಾಷಾಂತರಗಾರರು ಈ ವಾಕ್ಯವನ್ನು ಈ ಕರ್ಮಣಿ ಪ್ರಯೋಗದಲ್ಲಿ ಬಳಸಲು ಒಂದು ಉದಾಹರಣೆಯಾಗಿ) ಸಹಾಯಮಾಡುತ್ತದೆ. ಅವರ ಭಾಷೆಯಲ್ಲಿ ಕರ್ಮಣಿ ಪ್ರಯೋಗ ಇಲ್ಲದಿದ್ದರೂ ಇದು ಸಹಾಯಮಾಡುತ್ತದೆ.
|
|
|
|
**ಅಲಂಕಾರಿಕ ಪ್ರಶ್ನೆಗಳು**
|
|
|
|
>ಸಾಲನೇ, ಸಾಲನೇ <u>ನನ್ನನ್ನು ಏಕೆ ಹಿಂಸೆ ಪಡಿಸುತ್ತಿದ್ದಿ?</u>(ಆ.ಕೃ 9:4 ULB)
|
|
|
|
* **ನನ್ನ ಏಕೆ ಹಿಂಸೆ ಪಡಿಸುತ್ತಿದ್ದಿ?** ಈ ಅಲಂಕಾರಿಕ ಪ್ರಶ್ನೆ ಸಾಲನ ತಿದ್ದುಪಡಿಗೆ ಬದಲಾವಣೆಯನ್ನು ತಿಳಿಸುತ್ತದೆ ಕೆಲವು ಭಾಷೆಯಲ್ಲಿ ಸರಳವಾಕ್ಯಗಳು ಹೆಚ್ಚು ಸಹಜವಾಗಿ ಮೂಡಿ ಬರುತ್ತವೆ): "ನೀನು ನನ್ನನ್ನು ಹಿಂಸಿಸುತ್ತಿದ್ದೀ !" ಅಥವಾ ಆದೇಶ ವಾಕ್ಯ ಬಳಸಬಹುದು.(ಪರ್ಯಾಯ ಭಾಷಾಂತರ): "ನನ್ನನ್ನು ಹಿಂಸಿಸುವುದನ್ನು ನಿಲ್ಲಿಸು!" (ನೊಡಿ: *ಅಲಂಕಾರಿಕ ಪ್ರಶ್ನೆಗಳು*)
|
|
|
|
ಭಾಷಾಂತರದ ಸಲಹೆಗಳು ಇಲ್ಲಿ ಪರ್ಯಾಯ ರೀತಿಯ ಭಾಷಾಂತರವನ್ನು ಒದಗಿಸುತ್ತದೆ (ಪರ್ಯಾಯ ಭಾಷಾಂತರ) ನಿಮ್ಮ ಭಾಷೆಯಲ್ಲಿ ತಿದ್ದುಪಡಿಗೆ / ಬದಲಾವಣೆ ತರಲು ಬಳಸುವು ಪರಿಣಾಮಕಾರಿಯಾದ ಪದಗಳು, ಪಶ್ನಾರ್ಥಕ ಪದಗಳು ಇಲ್ಲದಿದ್ದರೆ ಪರ್ಯಾಯಪದ ಬಳಸಬಹುದು.
|