translationCore-Create-BCS_.../translate/guidelines-clear/01.md

13 KiB

ಸ್ಪಷ್ಟ ಭಾಷಾಂತರ.

ಸ್ಪಷ್ಟವಾದ ಭಾಷಾಂತರ ಯಾವ ಭಾಷೆಯಲ್ಲೇ ಆಗಲಿ ಬೇಕಾದ ಎಲ್ಲಾ ರೀತಿಯ ರಚನಾತ್ಮಕ ಅಂಶಗಳನ್ನು ಬಳಸಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವಂತದ್ದು. ಇದು ವಾಕ್ಯಭಾಗವನ್ನು ವಿವಿಧ ಮಾದರಿಯಲ್ಲಿ ಅಥವಾ ವ್ಯವಸ್ಥೆಯಲ್ಲಿ, ಅನೇಕ ಅಥವಾ ಕೆಲವೇ ಅವಶ್ಯವಿರುವ ಪದಗಳನ್ನು ಬಳಸಿ ಮೂಲ ಅರ್ಥ ಕೆಡದಂತೆ ತಿಳಿಸಲು ಪ್ರಯತ್ನ ಮಾಡುತ್ತದೆ

ಈ ಎಲ್ಲಾ ಭಾಷಾಂತರ ಮಾರ್ಗದರ್ಶನಗಳು ಇತರ ಭಾಷೆಗಳಿಗೆ ಅನ್ವಯಿಸುತ್ತದೆಯೇ ಹೊರತು ಗೇಟ್ ವೇ ಭಾಷಾಂತರಕ್ಕೆ ಅನ್ವಯಿಸುವುದಿಲ್ಲ. ಆದರೆ ULB ವಾಕ್ಯಭಾಗಗಳನ್ನು ಗೇಟ್ ವೇ ಭಾಷೆಯಲ್ಲಿ ಭಾಷಾಂತರಿಸುವಾಗ ಬದಲಾವಣೆಗಳು ಬೇಕಿಲ್ಲ. ಹಾಗೆಯೇ ಈ ಎಲ್ಲಾ ಬದಲಾವಣೆಗಳನ್ನು UDB ಯಿಂದ ಗೇಟ್ ವೇ ಭಾಷೆಗೆ ಭಾಷಾಂತರಿಸುವಾಗ ಮಾಡಬೇಕಿಲ್ಲ, ಏಕೆಂದರೆ ಈಗಾಗಲೇ ಅವೆಲ್ಲವನ್ನೂ ಮಾಡಲಾಗಿದೆ

ಮೂಲ ವಾಕ್ಯಭಾಗದಿಂದ ಭಾಷಾಂತರಿಸುವಾಗ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಿವೆ.

ಸರ್ವನಾಮಗಳನ್ನು ಪರಿಶೀಲಿಸಿ.

ಮೂಲ ವಾಕ್ಯಗಳಲ್ಲಿ ಇರುವ ಸರ್ವನಾಮಗಳನ್ನು ಪರಿಶೀಲಿಸಿ. ಮತ್ತು ಅದನ್ನು ಯಾರ ಬಗ್ಗೆ ಇದೆ ಎಂದು ತಿಳಿದುಕೊಳ್ಳಿ ಅಥವಾ ಪ್ರತಿ ಸರ್ವನಾಮ ಯಾರನ್ನು ಉದ್ದೇಶಿಸಿ ಹೇಳಿದೆ ಎಂದು ತಿಳಿದುಕೊಳ್ಳಿ. ಸರ್ವನಾಮಗಳು ನಾಮಪದದ ಬದಲಾಗಿ ಬರುತ್ತವೆ ಅಥವಾ ನಾಮಪದದ ನುಡಿಗಟ್ಟುಗಳಾಗಿ ಪ್ರತಿನಿಧಿಸುತ್ತವೆ. ಅವು ಈಗಾಗಲೇ ಹೇಳಿರುವಂತಹ ಪದಗಳನ್ನು ಉದ್ದೇಶಿಸಿರುತ್ತವೆ.

ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಲಾಗುತ್ತಿದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ ಅಥವಾ ಪ್ರತಿ ಸರ್ವನಾಮ ಯಾರನ್ನು ಉದ್ದೇಶಿಸಿದೆ ಎಂದು ನೋಡಿ. ಅದು ಸ್ಪಷ್ಟವಾಗಿ ಇಲ್ಲದಿದ್ದರೆ ವ್ಯಕ್ತಿಯ ಹೆಸರನ್ನು ಬಳಸಬಹುದು ಅಥವಾ ವಸ್ತುವನ್ನು ಸಹ ಸರ್ವನಾಮದ ಬದಲಾಗಿ ಬಳಸಬಹುದು.

ಸರ್ವನಾಮವಾಗಿ ಬಳಸುವ ವ್ಯಕ್ತಿಗಳು ಗುರುತಿಸುವುದು.

ನಂತರ ನೀವು ಇಲ್ಲಿ ಯಾರು ಕ್ರಿಯೆ ನಡೆಸುವವರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸ್ಪಷ್ಟವಾದ ಭಾಷಾಂತರ ಸರ್ವನಾಮದ ಭಾಗಿಗಳನ್ನು ಗುರುತಿಸುತ್ತದೆ

ಭಾಗೀದಾರರು.ಎಂದರೆ ಘಟನೆಯಲ್ಲಿ ಬರುವ ಜನರು ಅಥವಾ ವಸ್ತುಗಳು.

ಕರ್ತೃಪದ ಮಾಡುತ್ತಿರುವ ಕ್ರಿಯೆ ಮತ್ತು ಕರ್ಮಪದದೊಂದಿಗೆ ಇರುವ ಕ್ರಿಯೆಯ ಸಂಬಂಧ ಇಲ್ಲಿ ಬರುವ ಮುಖ್ಯ ಭಾಗೀದಾರರು.

ಕೆಲವೊಮ್ಮೆ ಘಟನೆ ಯನ್ನು ಕ್ರಿಯಾಪದದಂತೆ ಪುನರ್ ಅಭಿವ್ಯಕ್ತಿಸಿದರೆ ಆಗಿಂದಾಗ್ಗೆ ಯಾರು ಇದರ ಭಾಗೀದಾರರು ಎಂಬುದನ್ನು ಹೇಳುವ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಇದು ವಾಕ್ಯಭಾಗದಿಂದ ಸ್ಪಷ್ಟವಾಗುತ್ತದೆ.

####ಘಟನೆಯ ಉದ್ಧೇಶಗಳನ್ನು, ವಿಷಯಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಿ.

ಗೇಟ್ ವೇ ಭಾಷೆಯಲ್ಲಿ ಅನೇಕ ಘಟನೆ ಗಳು ವಿಷಯಗಳು ನಾಮಪದಗಳಾಗಿ ಬರುತ್ತವೆ. ಸ್ಪಷ್ಟವಾದ ಭಾಷಾಂತರದಲ್ಲಿ ಘಟನೆ ಗಳನ್ನು ಕ್ರಿಯಾಪದದಂತೆ ವ್ಯಕ್ತಪಡಿಸಬೇಕು. ಭಾಷಾಂತರ ಮಾಡಲು ಸಿದ್ಧತೆಮಾಡಿಕೊಳ್ಳುವಾಗ ವಾಕ್ಯಭಾಗದಲ್ಲಿರುವ ಘಟನೆ ಗಳು ವಿಷಯಗಳನ್ನು ಗಮನಿಸಬೇಕು, ವಿಶೇಷವಾಗಿ ಕ್ರಿಯಾರೂಪದ ಪದಗಳಿಗಿಂತ ಭಿನ್ನವಾದ ಬಳಕೆ ಏನಾದರೂ ಇದ್ದರೆ ಅದನ್ನು ಗಮನದಲ್ಲಿಡಬೇಕು.

ಕ್ರಿಯಾಪದವನ್ನು ಬಳಸುವುದರ ಮೂಲಕ ವಾಕ್ಯದಲ್ಲಿರುವ ಅರ್ಥವನ್ನು ಪುನರ್ ವ್ಯಕ್ತಪಡಿಸಿ ಘಟನೆ ಯನ್ನು, ವಿಷಯವನ್ನು ಅಭಿವ್ಯಕ್ತಿಸಬಹುದು. ನಿಮ್ಮ ಭಾಷೆಯಲ್ಲಿ ನಾಮಪದವನ್ನು ಬಳಸಿ ** ಘಟನೆ** ವಿಷಯಗಳನ್ನು ಹೇಳುವುದಾದರೆ, ಘಟನೆ ಮತ್ತು ಕ್ರಿಯೆ ಸಹಜವಾದ ರೀತಿಯಲ್ಲಿ ಬಳಕೆಯಾಗುವುದಾದರೆ ಆಗ ನಾಮಪದವನ್ನೇ ಬಳಸಿ.

ಭಾವಸೂಚಕ ನಾಮಪದಗಳನ್ನು ನೋಡಿ

ಪ್ರತಿಯೊಂದು ಘಟನೆ ಯು ವಿಷಯವನ್ನು ಕರ್ತೃಪ್ರಯೋಗಗಳಲ್ಲಿ (Active clause) ಬದಲಾಯಿಸುವ ಅಗತ್ಯವಿರುತ್ತದೆ. ಮತ್ತು ಇದನ್ನು ಅರ್ಥಕೆಡದಂತೆ ಮಾಡಬೇಕು.

####ಕರ್ಮಣಿ ಕ್ರಿಯಾಪದಗಳು.

ಸ್ಪಷ್ಟವಾದ ಭಾಷಾಂತರಗಳಲ್ಲಿ ಕರ್ಮಣಿ ರೂಪದಲ್ಲಿರುವ ಕ್ರಿಯಾ ಪದಗಳನ್ನು ಕರ್ತರಿ ರೂಪಕ್ಕೆ ಬದಲಾಯಿಸಬೇಕಾಗಬಹುದು. ಕರ್ತರಿ ಅಥವಾ ಕರ್ಮಣಿ ನೋಡಿ

ಕರ್ತರಿ (Active) ರೂಪದ ವಾಕ್ಯದಲ್ಲಿರುವ ಕತೃಪದ (subject) ಒಬ್ಬ ವ್ಯಕ್ತಿಯಾಗಿದ್ದು ಕ್ರಿಯೆಯನ್ನು ಮಾಡುತ್ತದೆ. ಕರ್ಮಣಿ (Passive) ರೂಪದ ವಾಕ್ಯದಲ್ಲಿರುವವ್ಯಕ್ತಿ ಅಥವಾ ವಸ್ತುವಿನೊಂದಿಗೆ ಕ್ರಿಯೆಯನ್ನು ಮಾಡುತ್ತದೆ. ಉದಾಹರಣೆಗೆ “" ಜಾನ್ ಬಿಲ್ ನನ್ನು ಹೊಡೆದನು ". ಇದು ಕರ್ತರಿ (Active) ವಾಕ್ಯ. “"ಬಿಲ್ ಜಾನ್ ನಿಂದ ಹೊಡೆಯಲ್ಪಟ್ಟನು “"(Passive)- ಕರ್ಮಣಿ ವಾಕ್ಯ. ಅನೇಕ ಭಾಷೆಯಲ್ಲಿ ಕರ್ಮಣಿ (Passive) ವಾಕ್ಯಪ್ರಯೋಗವಿಲ್ಲ.

ಕರ್ತರಿ (Active)ರೂಪದ ವಾಕ್ಯ ಮಾತ್ರ ಇರುತ್ತದೆ. ಇಂತಹ ಸಂದರ್ಭದಲ್ಲಿ ಕರ್ಮಣಿ (Passive) ರೂಪದ ವಾಕ್ಯವನ್ನು ಕರ್ತರಿ(Active) ರೂಪದ ವಾಕ್ಯವನ್ನಾಗಿ ಬದಲಾಯಿಸಬೇಕು. ಕೆಲವು ಭಾಷೆಗಳಲ್ಲಿ ಕರ್ಮಣಿ ಪ್ರಯೋಗವನ್ನು ಬಯಸುತ್ತಾರೆ. ಭಾಷಾಂತರಗಾರರು ತಾವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವ ರೂಪವನ್ನು ಬಳಸಿಕೊಳ್ಳಬೇಕು.

'Of ' ಪದವನ್ನು ಗಮನಿಸಿ ಇದು ನಾಮವಾಚಕವನ್ನು, ಗುಣವಾಚಕ, ಕ್ರಿಯಾಪದಗಳೊಡನೆ ಸೇರಿಸಿ ಮುಂದೆ ಬರುವ ಸಂಬಂಧಗಳನ್ನು ಸೂಚಿಸುವುದುಉದಾಹರಣೆಗೆ 'ರ ' ‘ಯಿಂದ ', ಕಡೆಗೆ, ' ಅದಕ್ಕಾಗಿ ', ಕುರಿತು ಮುಂತಾದವು.

ಸ್ಪಷ್ಟವಾದ ಭಾಷಾಂತರ ಮಾಡುವಾಗ ಪ್ರತಿಯೊಂದು 'Of ' ಪದಪ್ರಯೋಗವನ್ನು ಗುರುತಿಸಿ ನಾಮಪದಗಳು 'Of 'ಎಂಬ ಪದದ ಮೂಲಕ ಹೊಂದಿರುವ ಸಂಬಂಧವನ್ನು ಅರ್ಥವನ್ನು ಗುರುತಿಸಬೇಕು. ಮೂಲಭಾಷೆಯಲ್ಲಿರುವ ಸತ್ಯವೇದದಲ್ಲಿ ಇರುವ 'Of ' ಪದದ ಪ್ರಯೋಗದ ತರ ಭಾಷೆಗಳಲ್ಲಿ ಇರುವುದಿಲ್ಲ. 'Of ' ಪದವನ್ನು ವಾಕ್ಯಭಾಗದಲ್ಲಿರುವ ನಾಮಪದಗಳು ಮತ್ತು ಇತರ ಪದಗಳೊಂದಿಗೆ ಇರುವ ಸಂಬಂಧವನ್ನು, ಪ್ರತಿಯೊಂದು 'Of ' ಪದದ ಪ್ರಯೋಗವನ್ನು ಅಧ್ಯಯನ ಮಾಡಿ.

ನೀವು ಭಾಷಾಂತರ ಮಾಡಿದ ಮೇಲೆ ಪ್ರತಿಯೊಂದನ್ನು ನಿಖರವಾಗಿ ಪರಿಶೀಲಿಸಿ ಎಲ್ಲವೂ ಸ್ಪಷ್ಟವಾಗಿ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ಮೇಲೆ ಭಾಷಾಂತರ ಆಗಿರುವ ಭಾಷೆಯನ್ನು ತಿಳಿದವರಿಗೆ, ಮಾತನಾಡುವವರಿಗೆ ಓದಿ ಹೇಳಿ.ಅದರಲ್ಲಿರುವ ಎಲ್ಲಾ ತಪ್ಪು ಒಪ್ಪುಗಳನ್ನು ಸರಿಪಡಿಸಿ. ಅವರಿಗೆ ಯಾವುದಾದರೂ ಪದ, ವಾಕ್ಯ ಭಾಗ ಅರ್ಥವಾಗದಿದ್ದರೆ ಆಗ ನೀವು ಭಾಷಾಂತರ ಮಾಡಿರುವುದು ಅಸ್ಪಷ್ಟವಾಗಿದೆ ಎಂದು ತಿಳಿದುಕೊಳ್ಳಬೇಕು. ಕೊನೆಯಲ್ಲಿ ಇಬ್ಬರು ಸೇರಿ ಸ್ಪಷ್ಟವಾದ, ಸರಿಯಾದ ಭಾಷಾಂತರ ಮಾಡಲು ಪ್ರಯತ್ನಿಸಿ. ನೀವು ಮಾಡಿರುವ ಭಾಷಾಂತರ ಸರಿಯಾಗಿದೆಯೆಂದು ಖಚಿತವಾಗುವವರೆಗೂ ಅನೇಕರೊಂದಿಗೆ ಚರ್ಚಿಸಿ ಖಚಿತಪಡಿಸಿ.

ನೆನಪಿನಲ್ಲಿ ಇರಬೇಕಾದ ಅಂಶಗಳು: ಭಾಷಾಂತರವೆನ್ನುವುದು ಪುನರುಚ್ಛರಿಸುವುದು /ಪುನಃ ಹೇಳುವುದು /ಮರುಸೃಷ್ಟಿ ಮೂಲದಲ್ಲಿ ಇರುವಂತೆಯೇ ಸೃಷ್ಟಿಸುವುದು., ಮೂಲ ಸಂದೇಶದ ಅರ್ಥವನ್ನು ಸ್ಪಷ್ಟವಾಗಿ, ಪಾರದರ್ಶಕವಾಗಿ, ಭಾಷಾಂತರ ಮಾಡುವ ಭಾಷೆಯಲ್ಲಿ ಭಾಷಾಂತರ ಮಾಡಬೇಕು.

ಸ್ಪಷ್ಟವಾಗಿ ಬರೆಯುವುದು.

ನೀವು ಕೆಳಗಿನ ಪ್ರಶ್ನೆಗಳನ್ನು ಆಗಾಗ ನಿಮಗೆ ನೀವು ಹಾಕಿಕೊಂಡರೆ ಉತ್ತಮವಾದ, ಸ್ಪಷ್ಟವಾದ ಭಾಷಾಂತರ ಮಾಡಲು, ಮೂಲವಿಷಯವನ್ನು ನಿಖರವಾಗಿ ತಿಳಿಸಲು ಸಾಧ್ಯ.

  • ನೀವು ಭಾಷಾಂತರ ಮಾಡುವಾಗ ಎಲ್ಲಾ ಲೇಖನ ಚಿಹ್ನೆಗಳನ್ನು ಬಳಸಿದ್ದೀರಾ ? ಮತ್ತು ಓದುಗರಿಗೆ ಎಲ್ಲಿ ಯಾವಾಗ ವಿರಾಮ ಕೊಡಬೇಕು, ಯಾವ ಉದ್ಘಾರಗಳನ್ನು ಉಪಯೋಗಿಸಬೇಕು ಎಂಬುದನ್ನು ತಿಳಿಸಿದ್ದೀರಾ?
  • ಯಾವ ಜಾಗದಲ್ಲಿ ಉದ್ಧರಣಾ ವಾಕ್ಯಗಳು (direct speech) ಬರುತ್ತದೆ ಎಂದು ಗುರುತಿಸಿದ್ದೀರಾ ?
  • ಪ್ರತಿಯೊಂದು " ಪ್ಯಾರಾ " ವನ್ನು ವಿಂಗಡಿಸಿ ಬರೆದಿದ್ದೀರಾ ?
  • ನಿಮ್ಮ ಬರವಣಿಗೆಯಲ್ಲಿ ಆಯಾ ವಿಷಯದ ತಲೆಬರಹವನ್ನು ಬರೆದಿದ್ದೀರಾ ?