translationCore-Create-BCS_.../translate/guidelines-authoritative/01.md

6.7 KiB

ಆಧಾರಪೂರ್ಣ ಅಧಿಕೃತ ಸತ್ಯವೇದದ ಭಾಷಾಂತರ ಸತ್ಯವೇದದ ಮೂಲವಿಷಯಗಳನ್ನು ಆಧರಿಸಿ ಇರುವುದಲ್ಲದೆ. ಮೂಲಭಾಷೆಯ ಸತ್ಯವೇದದ ವಿಷಯಗಳನ್ನು , ಅರ್ಥಗಳನ್ನು ಯಥಾವತ್ತಾಗಿ ತರುವಂತಹುದು.

ಸತ್ಯವೇದದ ಎರಡು ಅಥವಾ ಮೂರು ಭಾಷಾಂತರಗಳು ಯಾವುದಾದರೂ ಒಂದು ಭಾಗದ ಅರ್ಥವನ್ನು ಸರಿಯಾಗಿ ಆಗಿಲ್ಲ ಎಂದು ಹೇಳುವುದಾದರೆ ಮೂಲಭಾಷೆ ಯಲ್ಲಿರುವ ಸತ್ಯವೇದದ ಭಾಗಗಳೇ ಆಧಾರಪೂರ್ಣ , ಅಧಿಕೃತ ಅರ್ಥ ನೀಡುವಂತಾದ್ದು ಎಂದು ನಿರ್ಧರಿಸಬೇಕು. ಕೆಲವೊಮ್ಮೆ ಭಾಷಾಂತರಕಾರರು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ವಿಷಯಗಳಿಗೆ ತುಂಬಾ ನಿಷ್ಠೆಯಿಂದ ಇರುವವರು ಸಂಪೂರ್ಣವಾಗಿ ಓದುವ ಗುಣವುಳ್ಳವರು , ಸತ್ಯವೇದದ ಭಾಷಾಂತರವನ್ನು ನಿಷ್ಠೆಯಿಂದ ಮಾಡಿದವರೊಂದಿಗೆ ಚರ್ಚಿಸುವುದನ್ನು ಮಾಡುತ್ತಾರೆ.

ಅಂತಹ ಭಾಷಾಂತರಗಳು ಆಧಾರಪೂರ್ಣ ಅಧಿಕೃತವಾದ ವಿಚಾರಗಳನ್ನು ಹೊಂದಿರುತ್ತವೆ. ಏಕೆಂದರೆ ಅವು ಮೂಲಭಾಷೆಯಂತೆ ಆದ ಭಾಷಾಂತರಗಳು. ಮೂಲಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾಷಾಂತರಗಳು ಯಾವಾಗಲೂ ಎರಡನೇ ಸ್ಥಾನವನ್ನು ಪಡೆಯುತ್ತವೆ. ಆದುದರಿಂದಲೇ ನಾವು ಭಾಷಾಂತರ ಮಾಡುವಾಗ ಮೂಲ ಸತ್ಯವೇದದ ಭಾಷೆಯನ್ನು ಪರಿಗ್ರಹಿಸಿ ನಂತರ ಸತ್ಯವೇದದ ಭಾಷಾಂತರ ಮಾಡಬೇಕು . ಎಲ್ಲಾ ಭಾಷಾಂತರ ತಂಡಗಳಲ್ಲಿ ಮೂಲ ಭಾಷೆಯಲ್ಲಿರುವ ಸತ್ಯವೇದವನ್ನು ಓದುವ ಸಾಮರ್ಥ್ಯವಿರುವುದಿಲ್ಲ. ಆದುದರಿಂದ ಸತ್ಯವೇದವನ್ನು ಭಾಷಾಂತರಿಸುವಾಗ ಎಲ್ಲಾ ಸಮಯದಲ್ಲೂ ಮೂಲ ಸತ್ಯವೇದದ ಭಾಷೆಯನ್ನು ಎಲ್ಲಾ ಸಮಯದಲ್ಲಿ ಅನ್ವಯಿಸಿ, ಪರಾಮರ್ಶಿಸಿ ನೋಡಲು ಸಾಧ್ಯವಿಲ್ಲ ಅದರ ಬದಲು ಭಾಷಾಂರ ಮಾಡುವವರು ಭಾಷಾಂತರ ಆಗಿರುವ ವಿಷಯವನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ , ಮತ್ತು ಸತ್ಯವೇದದ ಭಾಷೆಯನ್ನು ಆಧರಿಸಿ ಭಾಷಾಂತರ ಆಗಿದೆಯೇ ಎಂದು ಗಮನಹರಿಸಬೇಕು.

ಗೇಟ್ ವೇ ಭಾಷೆಯಲ್ಲಿ ಆಗಿರುವ ಅನೇಕ ಭಾಷಾಂತರಗಳು ULB, ಸತ್ಯವೇದವನ್ನು ಒಳಗೊಂಡು ಸತ್ಯವೇದದ ಭಾಷೆಯಲ್ಲಿ ಆದ ಭಾಷಾಂತರಗಳು. ಆದರೆ ಕೆಲವು ಭಾಷಾಂತರಗಳು ಭಾಷಾಂತರಗಳಾಗಿವೆ . ಮೂಲ ಭಾಷೆಯಿಂದಾದ ಭಾಷಾಂತರದಲ್ಲಿ ಎರಡು ಅಥವಾ ಮೂರು ತಪ್ಪುಗಳು ಆಗುವುದನ್ನು ಕಂಡುಹಿಡಿಯುವುದು ಸುಲಭ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಭಾಷಾಂತರ ಸಮಿತಿ / ತಂಡದವರು ಮೂರು ಸಂಗತಿಗಳನ್ನು ಇಲ್ಲಿ ನೀಡಬಹುದು .

  1. ಭಾಷಾಂತರ ಮಾಡುವ ತಂಡವು ಭಾಷಾಂತರದ ಟಿಪ್ಪಣಿಗಳನ್ನು, ಭಾಷಾಂತರದ ಪದಗಳನ್ನು ಬಳಸಲೇಬೇಕು ಮತ್ತು ಉತ್ತಮ ರೀತಿಯಲ್ಲಿ ಭಾಷಾಂತರ ಮಾಡಲು ಅವರಿಗೆ ಸಹಾಯಕವಾಗುವಂಥ ಇತರ ಯಾವುದೇ ಸಹಾಯಕ ಸಂಪನ್ಮೂಲಗಳನ್ನು ಕೂಡ ಬಳಸಿಕೊಳ್ಳಬಹುದು. ಸತ್ಯವೇದದ ಮೂಲ ಭಾಷೆಗಳನ್ನು ಚೆನ್ನಾಗಿ ಬಲ್ಲಂಥ ಸತ್ಯವೇದ ಪಡಿಂತರು ಈ ಸಹಾಯಕ ಸಂಪನ್ಮೂಲಗಳನ್ನು ಬರೆದಿದ್ದಾರೆ.

  2. ಇದು ಇತರ ಭಾಷಾಂತರಗಳಲ್ಲಿರುವ ಅದೇ ಸಂದೇಶವನ್ನು ತಿಳಿಸುತ್ತಿದ್ದೆ ಎಂದು ಖಚಿತಪಡಿಸಿಕೊಳ್ಳಲು, ಅವರು ಆದಷ್ಟೋ ತಮ್ಮ ಭಾಷಾಂತರವನ್ನು ಇತರ ವಿಶ್ವಾಸಾರ್ಹವಾದ ಭಾಷಾಂತರಗಳೊಂದಿಗೆ ಹೋಲಿಕೆಮಾಡಿ ನೋಡಬೇಕು.

  3. ಭಾಷಾಂತರವು ನಿಖರವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸತ್ಯವೇದದ ಭಾಷೆಗಳನ್ನು ಅಧ್ಯಯನ ಮಾಡಿದಂಥ ಯಾರಾದರೂ ಅದನ್ನು ಪರಿಶೀಲಿಸಬೇಕು. ಈ ವ್ಯಕ್ತಿಯು ಸಭೆಯ ನಾಯಕ, ಸಭಾಪಾಲಕ, ಸೆಮಿನರಿ ಪ್ರಾಧ್ಯಾಪಕ ಅಥವಾ ಸತ್ಯವೇದ ಭಾಷಾಂತರದ ವೃತ್ತಿಪರನು ಆಗಿರಬೇಕು.

ಕೆಲವೊಮ್ಮೆ ಸತ್ಯವೇದದ ಭಾಷಾಂತರಗಳು ವಿಭಿನ್ನವಾಗಿರುತ್ತವೆ ಏಕೆಂದರೆ ಸತ್ಯವೇದದಲ್ಲಿನ ಕೆಲವು ಭಾಗಗಳು ಸತ್ಯವೇದದ ಮೂಲ ಭಾಷೆಗಳಲ್ಲಿ ಅಸ್ಪಷ್ಟವಾದವುಗಳು ಅಥವಾ ದ್ವಂದ್ವಾರ್ಥವುಳ್ಳವುಗಳು ಆಗಿವೆ. ಅಂತಹ ಸಂದರ್ಭದಲ್ಲಿ, ಭಾಷಾಂತರದ ಟಿಪ್ಪಣಿಗಳಲ್ಲಿ, ಭಾಷಾಂತರದ ಪದಗಳಲ್ಲಿ, ಯುಎಸ್‌ಟಿಯಲ್ಲಿ ಮತ್ತು ಭಾಷಾಂತರದ ಇತರ ಸಹಾಯಕ ಸಂಪನ್ಮೂಲಗಳಲ್ಲಿ ಸತ್ಯವೇದದ ಪಡಿಂತರು ಹೇಳುವಂಥ ವಿಷಯಗಳ ಆಧಾರದ ಮೇಲೆ ಭಾಷಾಂತರ ಮಾಡುವ ತಂಡದವರು ಅವುಗಳಲ್ಲಿ ಸರಿಯಾದುದ್ದನ್ನು ಆಯ್ಕೆ ಮಾಡಿಕೊಳ್ಳಬೇಕು.