translationCore-Create-BCS_.../translate/figs-youformal/01.md

10 KiB

(ನೀವು ವೀಡಿಯೋವನ್ನು ಈ ಲಿಂಕ್ ನಲ್ಲಿ ನೋಡಬಹುದು at http://ufw.io/figs_youform.)

ವಿವರಣೆಗಳು.

ಕೆಲವು ಭಾಷೆಗಳಲ್ಲಿ ಔಪಚಾರಿಕ "ನೀನು” ಮತ್ತು ಅನೌಪಚಾರಿಕ "ನೀನು” ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ. ಈ ಪುಟದಲ್ಲಿ ಇರುವ ವಿಷಯ ಯಾವ ಭಾಷೆಯಲ್ಲಿ ಇಂತಹ ವ್ಯತ್ಯಾಸವನ್ನು ಬಳಸುತ್ತಾರೋ ಅವರಿಗೆ ಉಪಯೋಗವಾಗುತ್ತದೆ

ಕೆಲವು ಸಂಸ್ಕೃತಿಯಲ್ಲಿ ಜನರು ಔಪಚಾರಿಕ "ನೀನು/ ನೀವು” ಪದವನ್ನು ಹಿರಿಯರನ್ನು ಮತ್ತು ಅಧಿಕಾರದಲ್ಲಿ ಹಿರಿಯರಾದ ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುತ್ತಾರೆ. ಹಾಗೆಯೇ ಅನೌಪಚಾರಿಕ "ನೀನು” ಎಂಬ ಪದವನ್ನು ಅವರು ಸಮಾನ ವಯಸ್ಕರನ್ನು ಅಥವಾ ಅವರಿಗಿಂತ ಚಿಕ್ಕವರನ್ನು, ತನ್ನ ಕೈ ಕೆಳಗೆ ಕಾರ್ಯನಿರ್ವಹಿಸುವವರೊಂದಿಗೆ ಮಾತನಾಡಲು ಬಳಸುತ್ತಾರೆ

ಇನ್ನೂ ಕೆಲವು ಸಂಸ್ಕೃತಿಯಲ್ಲಿ ಜನರು ಔಪಚಾರಿಕ " ನೀವು” ಪದವನ್ನು ಅಪರಿಚಿತರ ಬಳಿ ಮಾತನಾಡುವಾಗ ಮತ್ತು ಹೆಚ್ಚು ಬಳಕೆ ಇಲ್ಲದ ಇತರರೊಂದಿಗೆ ಮಾತನಾಡುವಾಗಲೂ ಬಳಸುತ್ತಾರೆ. ಹಾಗೆಯೇ ಅನೌಪಚಾರಿಕ "ನೀನು” ಪದವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಲು ಉಪಯೋಗಿಸುತ್ತಾರೆ.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಸತ್ಯವೇದವನ್ನು ಹಿಬ್ರೂ,ಅರಾಮಿಕ್ ಮತ್ತು ಗ್ರೀಕ್ ಭಾಷೆಯಲ್ಲಿ ಬರೆಯಲಾಗಿದೆ. ಈ ಭಾಷೆಗಳಲ್ಲಿ ಔಪಚಾರಿಕ / ಅನೌಪಚಾರಿಕ "ನೀನು” ಬಳಕೆಯಲ್ಲಿ ಇಲ್ಲ.
  • ಇಂಗ್ಲೀಷ್ ಮತ್ತು ಇನ್ನೂ ಅನೇಕ ಮೂಲಭಾಷೆಗಳಲ್ಲಿ ಇಂತಹ ಔಪಚಾರಿಕ ಅನೌಪಚಾರಿಕ "ನೀನು” ಬಳಕೆಯಲ್ಲಿ ಇಲ್ಲ.
  • ಭಾಷಾಂತರಗಾರರು ಮೂಲಭಾಷೆಯಲ್ಲಿ ಭಾಷಾಂತರ ಮಾಡುವಾಗ ಔಪಚಾರಿಕ ಮತ್ತು ಅನೌಪಚಾರಿಕ "ನೀನು” ಬಳಕೆ ಇಲ್ಲದಿದ್ದರೆ ಅವರ ಭಾಷೆಯಲ್ಲಿ ಅದನ್ನು ಹೇಗೆ ಉಪಯೋಗಿಸಬೇಕೆಂದು ತಿಳಿದಿರಬೇಕು.

ಮೂಲ ಭಾಷೆಯಲ್ಲಿರುವ ಎಲ್ಲಾ ನಿಯಮಗಳಂತೆ ಭಾಷಾಂತರ ಮಾಡುವ ಭಾಷೆಯಲ್ಲಿ ಇಲ್ಲದೆ ಇರಬಹುದು. ಅವರವರ ಭಾಷೆಯಲ್ಲಿ ಇಬ್ಬರು ಮಾತನಾಡುತ್ತಿರುವಾಗ ಅವರ ನಡುವಿನ ಸಂಬಂಧವನ್ನು ಗುರುತಿಸಿ ಯಾವರೀತಿಯ "ನೀನು” / "ನೀವು” ಪದಗಳನ್ನು ಬಳಸಬೇಕೆಂಬುದನ್ನು ಭಾಷಾಂತರಗಾರರು ತಿಳಿದಿರಬೇಕು

ಭಾಷಾಂತರ ತತ್ವಗಳು.

  • ಒಬ್ಬ ವ್ಯಕ್ತಿ ಯಾರೊಂದಿಗೆ ಮಾತನಾಡುತ್ತಿದ್ದಾನೆ, ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಯಾವ ಸಂಬಂಧಹೊಂದಿದ್ದಾನೆ ?, ಸ್ಥಾನಮಾನವೇನು ಎಂದು ತಿಳಿದುಕೊಳ್ಳಬೇಕು.
  • ಮಾತನಾಡುವ ವ್ಯಕ್ತಿ ಯಾರೊಂದಿಗೆ ಮಾತನಾಡುತ್ತಿದ್ದಾನೆ ಮತ್ತು ಅವನ ಬಗ್ಗೆ ಮಾತನಾಡುವವನ ಮನೋದೋರಣೆ ಏನು ಎಂದು ತಿಳಿದುಕೊಳ್ಳಬೇಕು.
  • ನಿಮ್ಮ ಭಾಷೆಯಲ್ಲಿ ಇದಕ್ಕೆ ಸೂಕ್ತವಾದ ಪದವನ್ನು ಆ ವ್ಯಕ್ತಿಯ ಸಂಬಂಧ ಮತ್ತು ಮನೋದೋರಣೆಗಳನ್ನು ಅನುಸರಿಸಿ ಆಯ್ಕೆ ಮಾಡಿಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

ಯೆಹೋವ ದೇವರು ಮನುಷ್ಯನನ್ನು ಕುರಿತು "ನೀನು ಎಲ್ಲಿದ್ದೀ " ಎಂದು ಕೂಗಿ ಕೇಳಿದನು ? (ಆದಿಕಾಂಡ 3:9 ULB)

ದೇವರು ಸರ್ವಶಕ್ತನೂ, ಪರಮಾಧಿಕಾರವನ್ನು ಹೊಂದಿರುವವನು ಔಪಚಾರಿಕ ಮತ್ತು ಅನೌಪಚಾರಿಕ ರೀತಿಯ "ನೀನು” ಬಳಕೆ ಇರುವ ಭಾಷೆಗಳ್ಲಿ ಇಂತಹ ಸನ್ನಿವೇಶದಲ್ಲಿ ಅನೌಪಚಾರಿಕ "ನೀನು” ಬಳಕೆ ಮಾಡಬೇಕಾಗುತ್ತದೆ.

ಥಿಯೋಫಿಲನೇ ನಾನು ಎಲ್ಲವನ್ನೂ ಪ್ರಾರಂಭದಿಂದಲೂ ವಿಚಾರಿಸಿ ದೃಢಪಡಿಸಿಕೊಂಡಿರುವುದರಿಂದ ಅವುಗಳನ್ನು ನಿನಗೆ ಕ್ರಮವಾಗಿ ಬರೆದು ತೋರಿಸುವುದು ಒಳ್ಳೆಯದೆಂದು ನನಗೆ ತೋರುತ್ತಿದೆ. ನಿನಗೆಉಪದೇಶಿಸುವ ವಿಷಯಗಳು ನಿಖರವಾದವು ಯತಾರ್ಥವಾದವು ನೀನು ತಿದ್ದಿಕೊಂಡು ಗೊತ್ತುಮಾಡಿಕೊಳ್ಳಬೇಕು.ಎಂಬುದು ತನ್ನ ಇಚ್ಛೆ. (ಲೂಕ 1:3-4 ULB)

ಲೂಕನು ಥಿಯೋಫಿಲನನ್ನು "ಸನ್ಮಾನ್ಯನೆಂದು." ಸಂಬೋಧಿಸಿದ್ದಾನೆ. ಬಹುಶಃ ಥಿಯೋಫಿಲನು ಉನ್ನತ ಸ್ಥಾನದಲ್ಲಿದ್ದ ಅಧಿಕಾರಿಯಾಗಿದ್ದಿರಬಹುದು.ಆದುದರಿಂದ ಈ ಪದವನ್ನು ಅತ್ಯಂತ ಗೌರವದಿಂದ ಲೂಕನು ಬಳಸಿದ್ದಾನೆ. ಔಪಚಾರಿಕವಾಗಿ ಉಪಯೋಗಿಸುವ "ನೀನು” "ನೀವು” ಬಳಕೆಯನ್ನು ಈ ಭಾಷೆ ಮಾತನಾಡುವವರು ಮಾಡಬಹುದು.

ಪರಲೋಕದಲ್ಲಿರುವ ನಮ್ಮ ತಂದೆಯೇನಿನ್ನ ನಾಮವು < /u>ಪರಿಶುದ್ಧವೆಣಿಸಲ್ಪಡಲಿ. (ಮತ್ತಾಯ 6:9 ULB)

ಯೇಸು ತನ್ನ ಶಿಷ್ಯರಿಗೆ ಹೇಗೆ ಪ್ರಾರ್ಥನೆ ಮಾಡಬೇಕೆಂದು ಹೇಳಿಕೊಟ್ಟ ವಾಕ್ಯಭಾಗ. ಕೆಲವು ಸಂಸ್ಕೃತಿಯಲ್ಲಿ ಔಪಚಾರಿಕವಾಗಿ "ನೀವು” ಎಂಬ ಪದವನ್ನು ಇಲ್ಲಿ ಬಳಸಬಹುದು ಏಕೆಂದರೆ ದೇವರು ಸರ್ವಶಕ್ತನೂ ಮಹಾಮಹಿಮನು ಎಂದು. ಇನ್ನು ಕೆಲವು ಸಂಸ್ಕೃತಿಯಲ್ಲಿ ಅನೌಪಚಾರಿಕ "ನೀನು” ಎಂದು ಬಳಸುತ್ತಾರೆ. ಏಕೆಂದರೆ ದೇವರು ನಮ್ಮ ತಂದೆಯೆಂದು ಭಾವಿಸುತ್ತಾರೆ.

ಭಾಷಾಂತರ ತಂತ್ರಗಳು.

ಭಾಷಾಂತರಗಾರರ ಭಾಷೆಯಲ್ಲಿ ಔಪಚಾರಿಕ "ನೀವು” ಮತ್ತು ಅನೌಪಚಾರಿಕ "ನೀನು” ಪದಗಳು ಬಳಕೆಯಲ್ಲಿದ್ದರೆ ಇಬ್ಬರ ನಡುವೆ ನಡೆಯುವ ಸಂಭಾಷಣೆ, ಅವರ ನಡುವೆ ಇರುವ ಸಂಬಂಧವನ್ನು ಗುರುತಿಸಿ ಸೂಕ್ತವಾದ ಔಪಚಾರಿಕ "ನೀವು" ಅನೌಪಚಾರಿಕ "ನೀನು" ಪದಗಳನ್ನು ಉಪಯೋಗಿಸಬೇಕೇ ಬೇಡವೇ ಎಂದು ನಿರ್ಧರಿಸಬೇಕು.

ಔಪಚಾರಿಕ "ನೀವು”, ಅನೌಪಚಾರಿಕ "ನೀನು” ಪದಗಳನ್ನು ಉಪಯೋಗಿಸದ ಬೇಕೇ ಬೇಡವೇ ಎಂದು ನಿರ್ಧರಿಸುವುದು.

  1. ಮಾತನಾಡುತ್ತಿರುವ ಇಬ್ಬರ ನಡುವೆ ಇರುವ ಸಂಬಂಧದ ಕಡೆ ಗಮನ ನೀಡಬೇಕು.
  • ಮಾತನಾಡುವವ ಇನ್ನೊಬ್ಬನ ಮೇಲೆ ಅಧಿಕಾರ ಹೊಂದಿರುವನೇ ?
  • ಮಾತನಾಡುತ್ತಿರುವ ಇನ್ನೊಬ್ಬನಿಗಿಂತ ವಯಸ್ಸಿನಲ್ಲಿ ಹಿರಿಯವನೇ
  • ಮಾತನಾಡುತ್ತಿರುವವರು ಕುಟುಂಬದ ಸದಸ್ಯರೇ, ಸಂಬಂಧಿಕರೇ, ಸ್ನೇಹಿತರೇ, ಅಪರಿಚಿತರೇ, ಶತ್ರುಗಳೇ ?
  1. ನಿಮ್ಮ ಬಳಿ ಔಪಚಾರಿಕ "ನೀವು" ಅನೌಪಚಾರಿಕ "ನೀನು" ಪದಗಳನ್ನು ಬಳಸಿರುವ ಭಾಷೆಯ ಸತ್ಯವೇದವಿದ್ದರೆ ಯಾವರೀತಿಯ"ನೀವು" "ನೀನು" ಎಂಬ ಪದಗಳನ್ನು ಬಳಸಿದ್ದಾರೆ ಎಂದು ಓದಿನೋಡಿ. ನಿಮ್ಮ ಭಾಷೆಯ ನಿಯಮಗಳಿಗಿಂತ ಇತರ ಭಾಷೆಯ ನಿಯಮಗಳು ಭಿನ್ನವಾಗಿದೆ ಎಂಬುದನ್ನು ಮರೆಯಬೇಡಿ.

ಭಾಷಾಂತರ ತತ್ವಗಳನ್ನು ಅಳವಡಿಸಿರುವ ಬಗ್ಗೆ.

ಇಂಗ್ಲೀಷ್ ಭಾಷೆಯಲ್ಲಿ ಔಪಚಾರಿಕ "ನೀವು" ಅನೌಪಚಾರಿಕ "ನೀನು" ಬಳಕೆ ಇಲ್ಲ. ಆದುದರಿಂದ ಇಂಗ್ಲೀಷ್ ನಲ್ಲಿ "ನೀವು" ಅನೌಪಚಾರಿಕ "ನೀನು" ಉಪಯೋಗಿಸಲು ಬರುವುದಿಲ್ಲ. ದಯವಿಟ್ಟು ಮೇಲಿನ ಉದಾಹರಣೆಗಳನ್ನು ಮತ್ತು ಚರ್ಚೆಯನ್ನು ಗಮನಿಸಿ.