translationCore-Create-BCS_.../translate/figs-youcrowd/01.md

10 KiB

ವಿವರಣೆ

ಸತ್ಯವೇದವನ್ನು ಹಿಬ್ರು ಅರಾಮಿಕ್ ಮತ್ತು ಗ್ರೀಕ್ ಭಾಷೆಯಲ್ಲಿ ಬರೆಯಲಾಗಿದೆ. ಈ ಭಾಷೆಗಳಲ್ಲಿ ** ಏಕವಚನ** ರೂಪದ "you" "ನೀನು" ಎಂಬಪದವು ಒಬ್ಬ ವ್ಯಕ್ತಿಯನ್ನು ಕುರಿತದ್ದು, ಒಂದು ಗುಂಪಿನ ಜನರನ್ನು ಕುರಿತು "ನೀವು" ಎಂಬ ಬಹುವಚನ ರೂಪದ ಪದವನ್ನು ಬಳಸಿರುತ್ತಾರೆ.

ಕೆಲವೊಮ್ಮೆ ಸತ್ಯವೇದದಲ್ಲಿ ಮಾತನಾಡುವ ವ್ಯಕ್ತಿಗಳು ನೀನು ಪದದ ಏಕವಚನ ರೂಪವನ್ನು ಒಂದು ಗುಂಪಿನ ಜನರನ್ನು ಕುರಿತು ಬಳಸುತ್ತಾರೆ. ಇಂತಹ ಬಳಕೆ ಇಂಗ್ಲೀಷ್ ಭಾಷೆಯ ಸತ್ಯವೇದದಲ್ಲಿ ಬಳಸಿದಾಗ ಅದುಅಷ್ಟು ಭಿನ್ನವಾಗಿ ಕಾಣುವುದಿಲ್ಲ ಏಕೆಂದರೆ "you" ಎಂಬ ಸರ್ವನಾಮಪದ ಏಕವಚನ ಮತ್ತು ಬಹುವಚನದಲ್ಲಿ ಒಂದೇ ಆಗಿರುತ್ತದೆ. ಆದರೆ "ನೀನು" ಮತ್ತು "ನೀವು" ಎಂಬ ಪದಗಳ ವ್ಯತ್ಯಾಸ ಇತರ ಭಾಷೆಯ ಸತ್ಯವೇದವನ್ನು ಓದಿದಾಗ ತಿಳಿದು ಬರುತ್ತದೆ. ಎಷ್ಟೋ ಸಲ ಹಳೇ ಒಡಂಬಡಿಕೆಯಲ್ಲಿ ಬರಹಗಾರರ ಒಂದು ಗುಂಪು ಜನಾಂಗವನ್ನು ಉದ್ದೇಶಿಸಿ ಹೇಳುವಾಗ ಏಕವಚನ ರೂಪದ " ಆತ/ ಅವನು," ಎಂಬ ಸರ್ವನಾಮವನ್ನು ಬಳಸುತ್ತಾರೆಯೇ ಹೊರತು ಬಹುವಚನ ರೂಪದ " ಅವರು." ಎಂದು ಉಪಯೋಗಿಸಲ್ಲಿಲ್ಲ.

ಕಾರಣ ಇದೊಂದು ಭಾಷಾಂತರದ ವಿಷಯ.

  • ಅನೇಕ ಭಾಷೆಯಲ್ಲಿ ಭಾಷಾಂತರಗಾರನು ಸತ್ಯವೇದವನ್ನು ಓದುವಾಗ "you" ಎಂಬ ಪದವು ಸಾಮಾನ್ಯ ರೂಪದಲ್ಲಿ ಅರ್ಥಮಾಡಿಕೊಂಡು ಲೇಖಕ ಅಥವಾ ಮಾತನಾಡುತ್ತಿರುವ ವ್ಯಕ್ತಿ ಒಬ್ಬ ವ್ಯಕ್ತಿ ಕುರಿತು ಹೇಳುತ್ತಿದ್ದಾನೋ ಇಲ್ಲವೆ ಒಬ್ಬರಿಗಿಂತ ಹೆಚ್ಚು ಜನರನ್ನು ಉದ್ದೇಶಿಸಿ ಹೇಳುತ್ತಿದ್ದಾನೋ ಎಂಬುದನ್ನು ತಿಳಿದುಕೊಳ್ಳಬೇಕು.
  • ಇನ್ನೂ ಕೆಲವು ಭಾಷೆಯಲ್ಲಿ ಏಕವಚನ ರೂಪದ ಸರ್ವನಾಮ ಬಳಸಿದರೂ ಅದು ಒಬ್ಬ ವ್ಯಕ್ತಿಯನ್ನು ಕುರಿತು ಹೇಳಿರುವುದೋ ಇಲ್ಲವೇ ಒಬ್ಬನಿಗಿಂತ ಹೆಚ್ಚು ಜನರನ್ನು ಕುರಿತು ಹೇಳಿರುವುದೋ ಎಂದು ಗೊಂದಲವಾಗುವುದಿದೆ.

ಸತ್ಯವೇದದಲ್ಲಿನ ಉದಾಹರಣೆಗಳು.

1ಜನರು ನೊಡಲಿ ಎಂದು ಧರ್ಮಕಾರ್ಯಗಳನ್ನು ಅವರ ಮುಂದೆ ನೀವು ಮಾಡಬಾರದು, ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮತಂದೆಯ ಹತ್ತಿರ ನಿಮಗೆಫಲ ದೊರೆಯದು. ಆದುದರಿಂದ ನೀನು 2ನೀವು ದಾನಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ, ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆಸತ್ಯವಾಗಿ ಹೇಳುತ್ತೇನೆ. (ಮತ್ತಾಯ 6:1,2 ULB)

ಯೇಸು ಈ ಮಾತುಗಳನ್ನು ಜನರ ಗುಂಪನ್ನು ಉದ್ದೇಶಿಸಿ ಹೇಳಿದನು. ಆತನು "ನೀನು" ಎಂಬ ಬಹುವಚನವನ್ನು 1,ನೇ ವಾಕ್ಯದಲ್ಲಿ ಏಕವಚನ "ನೀನು" ಪದವನ್ನು 2. ನೇ ವಾಕ್ಯದ ಮೊದಲ ಭಾಗದಲ್ಲಿ ಹೇಳಿದ್ದಾನೆ. ಆಮೇಲೆ ಆತನು ಕೊನೆಯ ವಾಕ್ಯಗಳಲ್ಲಿ "ನೀನು" ಸರ್ವನಾಮಪದವನ್ನು ಬಹುವಚನ ರೂಪದಲ್ಲಿ ಬಳಸಿದ್ದಾನೆ.

ಈ ಎಲ್ಲಾ ಮಾತುಗಳು ದೇವರು ಮಾತನಾಡಿದ ಮಾತುಗಳು. "ನೀನುದಾಸತ್ವದಲ್ಲಿದ್ದ ಐಗುಪ್ತದೇಶದಿಂದ ನಿನ್ನನ್ನುಬಿಡುಗಡೆ ಮಾಡಿದ ಯೆಹೋವನೆಂಬ ನಿನ್ನದೇವರು ನಾನೇ, ನಾನಲ್ಲದೆ ನಿನಗೆ ಬೇರೆ ಯಾವ ದೇವರುಗಳು ಇರಬಾರದು." (ವಿಮೋಚನಾ ಕಾಂಡ 20:1-3 ULB)

ದೇವರು ಇಸ್ರಾಯೇಲಿನ ಜನರೆಲ್ಲರನ್ನೂ ಕುರಿತು ಹೇಳಿದ ಮಾತುಗಳಿವು. ಇಲ್ಲಿ ಯೆಹೋವನು ಇಸ್ರಾಯೇಲರನ್ನು ಐಗುಪ್ತರ ದಾಸತ್ವದಿಂದ ಬಿಡಿಸಿದ್ದಾನೆ. ಅವರು ತನಗೆ ವಿಧೇಯರಾಗಿರಬೇಕೆಂದು ನಿರೀಕ್ಷಿಸಿದನು. ಇಲ್ಲಿ ಆತನು ಅವರೊಂದಿಗೆ ಮಾತನಾಡುವಾಗ ಏಕವಚನ ರೂಪದ "you"ಬಳಸಿದ್ದಾನೆ.

ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರೋ, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ. ಏಕೆಂದರೆ ಅವನುಕತ್ತಿಹಿಡಿದು ಅವನಸಹೊದರನನ್ನು ಹಿಂದಟ್ಟಿದ್ದಾನೆ. ಮತ್ತು ಕರುಣೆಯನ್ನು ತೊರೆದು. ಅವನುಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ, ಅವನಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾನೆ. ಯೆಹೋವನು ಈ ಮಾತುಗಳನ್ನು ಎದೋಮ್ ದೇಶದ ಜನರನ್ನು ಕುರಿತು ಹೇಳಿದ ಮಾತುಗಳು.ಒಬ್ಬ ವ್ಯಕ್ತಿಯನ್ನು ಕುರಿತು ಹೇಳಿದ ಮಾತುಗಳಲ್ಲ.

ಭಾಷಾಂತರ ಕೌಶಲ್ಯಗಳು.

ಒಂದು ಗುಂಪನ್ನು ಕುರಿತು ಮಾತನಾಡುವಾಗ ಏಕವಚನ ರೂಪದ "you" ಸರ್ವನಾಮಪದ ಸಹಜವಾಗಿ ಹೊಂದಿಕೊಳ್ಳುವುದಾದರೆ ಅದನ್ನು ಪರಿಗಣಿಸಬಹುದು.

  • ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಕುರಿತು ಮಾತನಾಡುತ್ತಿದ್ದಾನೆ ಯಾವ ವಿಷಯ ಕುರಿತು ಮಾತನಾಡುತ್ತಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ.
  • ಇದು ಬಹುಶಃ ಮಾತನಾಡುವ ವ್ಯಕ್ತಿ ಯಾವ ವಿಷಯ ಹೇಳುತ್ತಿದ್ದಾನೆ ಎಂಬುದನ್ನು ಆಧಾರಿಸಿದೆ.
  1. ಒಂದು ಗುಂಪಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಏಕವಚನ ರೂಪದ "you" ಅಸಹಜವಾಗಿ ಕಂಡರೆ ಮತ್ತು ಓದಗರು ಗೊಂದಲಕ್ಕೆ ಒಳಗಾಗಬಹುದು, ಅಂತಹ ಸಂದರ್ಭದಲ್ಲಿ ಬಹುವಚನ ರೂಪದ "you" ಬಳಸಬೇಕು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸುವ ಬಗ್ಗೆ

  1. ಒಂದು ಗುಂಪಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಏಕವಚನ ರೂಪದ "you" ಅಸಹಜವಾಗಿ ಕಂಡರೆ ಮತ್ತು ಓದಗರು ಗೊಂದಲಕ್ಕೆ ಒಳಗಾಗಬಹುದು, ಅಂತಹ ಸಂದರ್ಭದಲ್ಲಿ ಬಹುವಚನ ರೂಪದ "you" ಬಳಸಬೇಕು

ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರು, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ. ಏಕೆಂದರೆ ಅವನುಕತ್ತಿಹಿಡಿದು ಅವನಸಹೊದರನನ್ನು ಹಿಂದಟ್ಟಿದ್ದಾನೆ. ಮತ್ತು ಕರುಣೆಯನ್ನು ತೊರೆದು. ಅವನುಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ, ಅವನಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾನೆ. ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರಿಂದ, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ.

ಏಕೆಂದರೆ ಅವರು, ಅವರ ಸಹೊದರರನ್ನು ಹಿಂದಟ್ಟಿದ್ದಾರೆ. ಮತ್ತು ಕರುಣೆಯನ್ನು ತೊರೆದು ಅವರುಸಿಟ್ಟಿನಿಂದ ಸದಾ ಸಿಗಿದು ಬಿಡುತ್ತಾ, ಮತ್ತು ಅವರಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾರೆ."