translationCore-Create-BCS_.../translate/figs-rpronouns/01.md

14 KiB
Raw Permalink Blame History

ವಿವರಣೆ

ಎಲ್ಲಾ ಭಾಷೆಗಳಲ್ಲಿ ಒಬ್ಬ ವ್ಯಕ್ತಿ ಒಂದೇ ವಾಕ್ಯದಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ವಹಿಸುವುದನ್ನು ತೋರಿಸುತ್ತದೆ. ಇಂಗೀಷ್ ಭಾಷೆಯಲ್ಲಿ ಇದನ್ನು ಕರ್ತೃವಾಚ್ಯ ಸರ್ವನಾಮ ಎಂದು ಕರೆಯುತ್ತಾರೆ. ವ್ಯಕ್ತಿ ಅಥವಾ ವಸ್ತುವಿನ ಸ್ವಂತಕ್ಕೆ ಅನ್ವಯಿಸಬಹುದಾದ ಪ್ರಥಮ ಪುರುಷ ಸರ್ವನಾಮವೇ ಕರ್ತೃವಾಚ್ಯ ಸರ್ವನಾಮ.

ಇಂಗೀಷ್ ಭಾಷೆಯಲ್ಲಿ ಈ ಕರ್ತೃವಾಚ್ಯ ಸರ್ವನಾಮಗಳು : (ನನ್ನ, ನಿನ್ನ, ಅವನ, ಅವಳ, ಅದರ, ನಮ್ಮನಮ್ಮೊಳಗೆ, ನಿಮ್ಮಗಳ ಮತ್ತು ಅವರುಗಳ) ಎಂಬ ಪದಗಳಾಗಿವೆ. ಇತರ ಭಾಷೆಗಳಲ್ಲೂ ಇತರ ರೀತಿಯ ಪದಗಳಿರಬಹುದು.

ಕಾರಣ ಇದೊಂದು ಭಾಷಾಂತರ ವಿಷಯ.

  • ಇತರ ಭಾಷೆಗಳಲ್ಲಿ ಒಬ್ಬ ವ್ಯಕ್ತಿ, ಒಂದು ವಾಕ್ಯದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಬಹುದು ಅಂತಹ ಭಾಷೆಗಳಲ್ಲಿ ಭಾಷಾಂತರಗಾರರು ಇಂಗೀಷ್ ನ reflexive pronouns. ಗಳನ್ನು ಹೇಗೆ ಭಾಷಾಂತರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
  • ಇಂಗೀಷ್ ಭಾಷೆಯ ಕರ್ತೃವಾಚ್ಯ ಸರ್ವನಾಮಗಳಿಗೆ ಇತರ ಕಾರ್ಯಗಳು ಇರುತ್ತವೆ.

/ ಕರ್ತೃವಾಚ್ಯ ಸರ್ವನಾಮಗಳ ಉಪಯೋಗಗಳು.

  • ಒಂದೇ ವಾಕ್ಯದಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ಅಥವಾ ಒಂದು ವಸ್ತು ನಿರ್ವಹಿಸುತ್ತದೆ ಎಂಬುದನ್ನು ತೋರಿಸಲು ಬಳಸುವುದು.
  • ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿಗೆ ವಾಕ್ಯದಲ್ಲಿ ಪ್ರಾಧಾನ್ಯತೆ ನೀಡುವುದು.
  • ಒಬ್ಬರು ಒಂದು ಕೆಲಸವನ್ನು ಮಾತ್ರ ಮಾಡಿದರು ಎಂದು ತೋರಿಸಲು.
  • ಒಂದು ವಸ್ತು ಅಥವಾ ಒಬ್ಬ ವ್ಯಕ್ತಿ ಮಾತ್ರ ಎಂದು ತಿಳಿಸಲು.

ಸತ್ಯವೇದದಿಂದ ಉದಾಹರಣೆಗಳು.

ಕರ್ತೃವಾಚ್ಯ ಸರ್ವನಾಮಗಳು ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಎರಡು ವಿಭಿನ್ನ ಪಾತ್ರಗಳನ್ನು ಒಂದು ವಾಕ್ಯದಲ್ಲಿ ನಿರ್ವಹಿಸುತ್ತವೆ.

ನಾನು , ನನ್ನ ವಿಷಯವಾಗಿ ನಾನೇ ಸಾಕ್ಷಿಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು (ಯೋಹಾನ 5:31 ULB)

ಆಗ ಯೋಹಾನ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿ ಕೊಳ್ಳುವುದಕ್ಕಾಗಿ .ಹಬ್ಬಕ್ಕಿಂತ ಮೊದಲು ಹಳ್ಳಿಗಳಿಂದ ಯೆರೋಸೆಲೇಮಿಗೆ ಬಂದರು (ಯೋಹಾನ 11:55 ULB)

ಕರ್ತೃವಾಚ್ಯ ಸರ್ವನಾಮಗಳನ್ನು ವಾಕ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿನ ಬಗ್ಗೆ ಪ್ರಾಧಾನ್ಯತೆ ನೀಡಲು ಬಳಸಲಾಗುತ್ತದೆ.

ಆದರೂ ದೀಕ್ಷಾಸ್ನಾನ ಮಾಡಿಸುತ್ತಿದ್ದವನು ಯೇಸುವಲ್ಲ ಆದರೆ ಆತನ ಶಿಷ್ಯರು ದೀಕ್ಷಾಸ್ನಾನ ಮಾಡಿಸುತ್ತಿದ್ದರು.(ಯೊಹಾನ 4:2 ULB)

ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳು ಆತನ ಸಂಗಡ ಇದ್ದವು. ತರುವಾಯ ದೊಡ್ಡ ಬಿರುಗಾಳಿ ಎದ್ದು ತೆರೆಗಳು ಆ ದೋಣಿಗೆ ಬಡಿದು ಒಳಗೆ ನೀರು ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ತೊಡಗಿತು. ಆದರೆ ಯೇಸು ತಾನು ದೋಣಿ ಹಿಂಬಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದನು. (ಮಾರ್ಕ 4:36-38 ULB)

ಕರ್ತೃವಾಚ್ಯ ಸರ್ವನಾಮಗಳನ್ನು ಒಬ್ಬರು ಒಂದು ಸಂಗತಿಯನ್ನು ಮಾತ್ರ ಮಾಡಿದರು ಎಂದು ಹೇಳಲು ಬಳಸುತ್ತಾರೆ.

ಆಗ ಯೇಸು - ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರುಗಿ ತಾನೊಬ್ಬನೆ .ಒಂಟಿಯಾಗಿ ಬೆಟ್ಟಕ್ಕೆ ಹೋಗಿಬಿಟ್ಟನು (ಯೋಹಾನ 6:15 ULB)

ಕರ್ತೃವಾಚ್ಯ ಸರ್ವನಾಮಗಳನ್ನು ಒಬ್ಬವ್ಯಕ್ತಿ ಅಥವಾ ಒಂದು ವಸ್ತು ಒಂಟಿಯಾಗಿದ್ದಾನೆ / ದೆ ಎಂದು ತಿಳಿಸಲು ಬಳಸಿದೆ.

ಸೀಮೋನ ಪೇತ್ರನು ತಲೆಯ ಮೇಲಿದ್ದ ಕೈ ಪಾವುಡವು ಆ ನಾರು ಬಟ್ಟೆಗಳ ಜೊತೆಯಲ್ಲಿ ಇರದೆ .ಸುತ್ತಿ ಒಂದು ಕಡೆ .ಇಟ್ಟಿರುವುದನ್ನು ನೋಡಿದನು (ಯೋಹಾನ 20:6-7 ULB)

ಭಾಷಾಂತರ ಕೌಶಲ್ಯಗಳು

ನಿಮ್ಮ ಭಾಷೆಯಲ್ಲಿ ಕರ್ತೃವಾಚ್ಯ ಸರ್ವನಾಮಗಳು ಇದೇ ಕಾರ್ಯ ಮಾಡುವುದಾದರೆ ಅದನ್ನೇ ಪರಿಗಣಿಸಿ. ಇಲ್ಲದಿದ್ದರೆ, ಕೆಳಗೆ ನೀಡಿರುವ ತಂತ್ರಗಳನ್ನು ಪರಿಗಣಿಸಿ.

  1. ವಿಷಯ ಮತ್ತು ಕ್ರೀಯಾಪದದಲ್ಲಿ ಕಾಣುವ ವಸ್ತು ಇವುಗಳ ನಡುವೆ ಯಾವ ವ್ಯತ್ಯಾಸವಿಲ್ಲ ಎಂದು ತೋರಿಸಲು ಕೆಲವು ಭಾಷೆಯಲ್ಲಿ ಜನರು ಕ್ರಿಯಾಪದದೊಂದಿಗೆ ಬೇರೊಂದು ಪದವನ್ನು ಬಳಸುತ್ತಾರೆ.
  2. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ವಾಕ್ಯದಲ್ಲಿ ವಿಶಿಷ್ಟಸ್ಥಾನ ಒದಗಿಸಿ ಬಳಸುವುದು ಇದೆ.
  3. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ಯಾವ ಪದವನ್ನಾದರೂ ಸೇರಿಸಿ ಬಳಸುವುದೂ ಇದೆ.
  4. ಕೆಲವು ಭಾಷೆಯಲ್ಲಿ " ಒಬ್ಬನೇ" ಎಂಬ ಪದವನ್ನು ಬಳಸಿ ಕೇವಲ ಒಬ್ಬರು "ಮಾತ್ರ " ಇದನ್ನು ಮಾಡಿದರು ಎಂದು ತೋರಿಸುತ್ತಾರೆ.
  5. ಇನ್ನೂ ಕೆಲವು ಭಾಷೆಯಲ್ಲಿ ಜನರು " ಯಾವುದೋ ಒಂದು ಮಾತ್ರ " ಎಂಬ ಪದಗುಚ್ಛವನ್ನು ಬಳಸಿ ಅದು ಎಲ್ಲಿದೆ ಎಂಬುದನ್ನುತಿಳಿಸುತ್ತಾರೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು

  1. ಕೆಲವು ಭಾಷೆಯಲ್ಲಿ ಜನರು ಕ್ರಿಯಾಪದದೊಂದಿಗೆ ಕರ್ಮಪದವನ್ನು ಕರ್ತೃಪದದೊಂದಿಗೆ ಕ್ರಿಯಾಪದವನ್ನು ಕೆಲವೊಮ್ಮೆ ಒಂದೇ ರೀತಿಯಲ್ಲಿ ಬಳಸುತ್ತಾರೆ.
  • ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು. (ಯೋಹಾನ 5:31)

    • " ನನ್ನ ವಿಷಯವಾಗಿ ನಾನು ಸ್ವತಃ ಸಾಕ್ಷಿ ಹೇಳಿದರೆ ಮಾತ್ರ ನನ್ನ ಸಾಕ್ಷಿ ನಿಜವೆಂದು ತಿಳಿಯುತ್ತದೆ."
  • ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಿರಲಾಗಿ ಬಹುಜನರು ತಮ್ಮನ್ನು ಶುದ್ಧೀಕರಿಸಿ ಕೊಳ್ಳಲು .ಹಬ್ಬಕ್ಕಿಂತ ಮೊದಲು ತಮ್ಮ ಊರುಗಳಿಂದ ಯೆರೂಸಲೇಮಿಗೆ ಬಂದರು (ಯೋಹಾನ 11:55)

    • " ಆಗ ಯೆಹೋದ್ಯರ ಪಸ್ಕಹಬ್ಬ ಹತ್ತಿರವಾಗುತ್ತಿದ್ದಂತೆ ಜನರೆಲ್ಲರೂ ತಮ್ಮ ಊರುಗಳಿಂದ ಹಬ್ಬದ ಮೊದಲೇ ಹೊರಟು ಯೆರೂಸಲೇಮಿಗೆ ತಮ್ಮನ್ನು ಶುದ್ಧೀಕರಿಸಿಕೊಳ್ಳಲು ."ಬಂದರು
  1. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ವಾಕ್ಯದಲ್ಲಿ ವಿಶಿಷ್ಟಸ್ಥಾನ ಒದಗಿಸಿ ಬಳಸುವುದು ಇದೆ.
  • ಆತನು ತಾನೇ ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು. (ಮತ್ತಾಯ 8:17 ULB)

    • " ನಮ್ಮ ಬೇನೆಗಳನ್ನು ಮತ್ತು ನಮ್ಮ ರೋಗಗಳನ್ನು ಆತನೇ ಹೊತ್ತುಕೊಂಡನು ."
  • ಯೇಸು ತಾನೇ ದೀಕ್ಷಾಸ್ನಾನ ಕೊಡುತ್ತಿರಲಿಲ್ಲ ಆದರೆ ಆತನ ಶಿಷ್ಯರು ಕೊಡುತ್ತಿದ್ದರು . (ಯೊಹಾನ 4:2)

    • "ಅಲ್ಲಿ ಯೇಸು ದೀಕ್ಷಾಸ್ನಾನ ಕೊಡುತ್ತಿರಲಿಲ್ಲ ಆದರೆ ಆತನ ಶಿಷ್ಯರು ಕೊಡುತ್ತಿದ್ದರು."
  1. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ಯಾವ ಪದವನ್ನಾದರೂ ಸೇರಿಸಿ ಬಳಸುವುದೂ ಇದೆ. ಇಂಗ್ಲೀಷ್ ಭಾಷೆಯಲ್ಲಿ reflexive pronoun ಕರ್ತೃವಾಚ್ಯ ಸರ್ವನಾಮಗಳನ್ನು ಸೇರಿಸಿ ಬಳಸುತ್ತದೆ.
  • ತಾನು ಮಾಡಬೇಕಾದುದು ತನಗೆ ತಿಳಿದಿದ್ದರೂ ಫಿಲಿಪ್ಪನನ್ನು ಪರೀಕ್ಷಿಸುವುದಕ್ಕೆ ಈ ಮಾತನ್ನು ಹೇಳಿದನು. (ಯೋಹಾನ 6:6)
  1. ಕೆಲವು ಭಾಷೆಯಲ್ಲಿ ಜನರು ಒಬ್ಬರೇ " ಒಬ್ಬನೇ." ಎಂಬ ಪದವನ್ನು ಬಳಸಿ ಒಬ್ಬರು "ಇದನ್ನು ಮಾತ್ರ " ಮಾಡಿದರು ಎಂದು ಬಳಸಬಹುದು.
  • ಆಗ ಯೇಸು ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಆಲೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರುಗಿ ತಾನೊಬ್ಬನೇ ಒಂಟಿಯಾಗಿ .ಬೆಟ್ಟಕ್ಕೆ ಹೋಗಿಬಿಟ್ಟನು (ಯೋಹಾನ 6:15)
    • "ಅವರೆಲ್ಲರೂ ಬಂದು ಆತನನ್ನು ಹಿಡಿದು ಬಲವಂತವಾಗಿ ಅರಸನನ್ನಾಗಿ ಮಾಡಲು ಆಲೋಚಿಸುತ್ತಿ ದ್ದಾರೆಂದು ತಿಳಿದು ಅವರಿಂದ ದೂರ ಒಬ್ಬೊಂಟಿಗನಾಗಿಬೆಟ್ಟಕ್ಕೆ ಹೋದನು."
  1. ಇನ್ನೂ ಕೆಲವು ಭಾಷೆಯಲ್ಲಿ ಜನರು ಯಾವುದೋ ಒಂದು ಸಂಗತಿ ಏಕಾಂತವಾಗಿದೇ ಎಂದು ತೋರಿಸಲು ಒಂದು ಪದಗುಚ್ಛವನ್ನು ಬಳಸಿ ಅದು ಎಲ್ಲಿದೆ ಎಂಬುದನ್ನುತಿಳಿಸುತ್ತಾರೆ.
  • ಅಲ್ಲಿ ಅವನು ಆತನು ಧರಿಸಿದ್ದ ನಾರುಬಟ್ಟೆಯನ್ನು ತಲೆಗೆ ಸುತ್ತಿದ್ದ ಕೈಪಾವುಡಗಳು ನೆಲದ ಮೇಲೆ ಇದ್ದುದನ್ನು ನೋಡಿದನು. ಅದು ನಾರುಬಟ್ಟೆಯೊಂದಿಗೆ ನೆಲದ ಮೇಲೆ ಬಿದ್ದಿರಲಿಲ್ಲ, ಬದಲಾಗಿ ಅದನ್ನು ಸುತ್ತಿ ಒಂದೆಡೆ .ಇಡಲಾಗಿತ್ತು (ಯೋಹಾನ 20:6-7 ULB)
    • " ಅವನು ನಾರುಬಟ್ಟೆಗಳು ಅಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಮತ್ತು ತಲೆಗೆ ಸುತ್ತಿದ್ದ ಕೈಪಾವುಡವನ್ನು ನೋಡಿದನು. ಅದು ನಾರುಬಟ್ಟೆಗಳೊಂದಿಗೆ ಅಲ್ಲಿ ಬಿದ್ದಿರಲಿಲ್ಲ ಬದಲಾಗಿ ಆ ಕೈಪಾವುಡವನ್ನು ಸುತ್ತಿ ಒಂದೆಡೆ ಅದರ ಜಾಗದಲ್ಲಿಇಡಲಾಗಿತ್ತು ."