translationCore-Create-BCS_.../translate/figs-quotesinquotes/01.md

16 KiB
Raw Permalink Blame History

###ವಿವರಣೆ

ಒಂದು ಉದ್ಧರಣಾವಾಕ್ಯದಲ್ಲಿ ಇನ್ನೊಂದು ಉದ್ಧರಣಾವಾಕ್ಯ ಇರಬಹುದು, ಉದ್ಧರಣಾವಾಕ್ಯ ಉದ್ಧರಣಾ ಸಾಲುಗಳ ಮೂಲಕ ನಾವು ಇವುಗಳನ್ನು ವಿವರಿಸಬಹುದು. ಉದ್ಧರಣಾವಾಕ್ಯದಲ್ಲಿ ಉದ್ದ ಸಾಲುಗಳು ಇದ್ದರೆ ಅವುಗಳನ್ನು ಅಂದರೆ ಪ್ರತಿಸಾಲುಗಳನ್ನು ವಿವರಿಸಿ ಹೇಳಬಹುದು. ಉದ್ಧರಣಾವಾಕ್ಯದಲ್ಲಿ ಅನೇಕ ಉದ್ಧರಣಾಸಾಲುಗಳಿದ್ದರೆ ಓದುಗರಿಗೆ ಯಾರು ಯಾರಿಗೆ ಯಾವ ವಾಕ್ಯವನ್ನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು. ಕೆಲವು ಭಾಷೆಯಲ್ಲಿ ನೇರ ಉದ್ಧರಣ ವಾಕ್ಯಗಳು ಮತ್ತು ಅಪರೋಕ್ಷ ಉದ್ಧರಣ ವಾಕ್ಯಗಳನ್ನು ಒಟ್ಟಿಗೆ ಬಳಸಿ ಹೇಳುವುದು ಸುಲಭವಾಗಿರುತ್ತದೆ.

ಇದಕ್ಕೆ ಕಾರಣ ಇದೊಂದು ಭಾಷಾಂತರ ತೊಡಕು

  1. ಉದ್ಧರಣವಾಕ್ಯದಲ್ಲಿ ಉದ್ಧರಣವಾಕ್ಯವಿದ್ದರೆ ಯಾರನ್ನು ಕುರಿತು ಮಾತನಾಡುತ್ತಿದ್ದಾರೆ ಎಂಬುದನ್ನು ಓದುಗರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಉದಾಹರಣೆಗೆ ಒಂದು ಉದ್ಧರಣವಾಕ್ಯದಲ್ಲಿ "ನಾನು," ಎಂಬ ಪದವಿದ್ದರೆ ಓದುಗರಿಗೆ "ನಾನು" ಎಂಬ ಪದ ಉದ್ಧರಣವಾಕ್ಯದಲ್ಲಿ ಒಳಗೆ ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆಯೋ, ಇಲ್ಲವೇ ಹೊರಗಿನ ಉದ್ಧರಣ ವಾಕ್ಯಕ್ಕೆ ಸಂಬಂಧಿಸಿದ್ದೋ ಎಂದು ಗುರುತಿಸಬೇಕು.
  2. ಇತರ ಕೆಲವು ಭಾಷೆಯಲ್ಲಿ ಉದ್ಧರಣ ವಾಕ್ಯದಲ್ಲಿ ಇಂತಹ ಉದ್ಧರಣವಾಕ್ಯಗಳು ಬಂದರೆ ವಿವಿಧ ರೀತಿಯ ವಾಕ್ಯಗಳನ್ನು ಬಳಸಿ ಸ್ಪಷ್ಟಪಡಿಸುತ್ತಾರೆ. ಅವರು ಕೆಲವು ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನು ಮತ್ತು ಅಪರೋಕ್ಷ ಉದ್ಧರಣವಾಕ್ಯಗಳನ್ನು ಬಳಸುತ್ತಾರೆ.
  3. ಕೆಲವು ಭಾಷೆಯಲ್ಲಿ ಅಪರೋಕ್ಷ ಉದ್ಧರಣವಾಕ್ಯಗಳನ್ನು ಬಳಸುವುದಿಲ್ಲ

ಸತ್ಯವೇದದಿಂದ ಉದಾಹರಣೆಗಳು.

ಒಂದೇ ಸಾಲುಳ್ಳ ಉದ್ಧರಣವಾಕ್ಯ.

ಅದಕ್ಕೆ ಪೌಲನು,." ನಾನಾದರೋ ರೋಮಾಪುರದ ಪ್ರಜೆಯಾಗಿ ಹುಟ್ಟಿದವನು." ಅಂದನು (ಆ.ಕೃ 22:28 ULB)

ಎರಡು ಸಾಲುಳ್ಳ ಉದ್ಧರಣವಾಕ್ಯಗಳು.

ಯೇಸು ಉತ್ತರವಾಗಿ ಅವನಿಗೆ ಹೇಳಿದ್ದೇನೆಂದರೆ, “ಎಚ್ಚರಿಕೆಯಿಂದ ಇರಿ, ಯಾರಾದರೂ ನಿಮ್ಮನ್ನು ಮೋಸಗೊಳಿಸಾರು, ಏಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿ ವಂಚಿಸಬಹುದು. ''ನಾನು ಕ್ರಿಸ್ತನು,ನಾನು ಕ್ರಿಸ್ತನು,' ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. ಮತ್ತಾಯ 24:4-5 ULB

ವಾಕ್ಯದಲ್ಲಿ ಉದ್ಧರಣ ಚಿಹ್ನೆಗಳ ಹೊರಗಿನ ಸಾಲುಗಳು ಯೇಸು ತನ್ನ ಶಿಷ್ಯರನ್ನು ಉದ್ದೇಶಿಸಿ ಹೇಳಿದ ಎಂಬುದನ್ನು ತಿಳಿಸುತ್ತದೆ. ಎರಡನೇ ಸಾಲುಗಳು ಇತರ ಜನರು ಹೇಳುವ ಮಾತುಗಳು.

ಯೇಸು ಅವನಿಗೆ, " ನನ್ನನ್ನು ಅರಸನೆಂದು ನೀನೇ ಹೇಳಿದ್ದಿ." (ಯೊಹಾನ18:37 ULB)

ಉದ್ಧರಣ ಚಿಹ್ನೆಗಳೊಂದಿಗೆ ಇರುವ ಮಾತು ಯೇಸು ಪಿಲಾತನಿಗೆ ಹೇಳಿದ ಮಾತು. ಎರಡನೇ ಸಾಲು ಪಿಲಾತನು ಯೇಸುವಿಗೆ ಹೇಳಿದನು.

####ಒಂದು ಉದ್ಧರಣ ವಾಕ್ಯದಲ್ಲಿ ಮೂರು ಸಾಲುಗಳಿವೆ.

ಅಬ್ರಹಾಮನು ಹೇಳಿದನು ".. ನಾನು ಅವಳಿಗೆ ಹೇಳಿದ್ದೇನೆಂದರೆ, "ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ಉಪಕಾರವಾಗಬೇಕಾಗಿರುವುದರಿಂದ ನನ್ನ ಮಾತಿಗೆ ನಿಷ್ಠೆಯುಳ್ಳ ಹೆಂಡತಿಯಾಗಿರಬೇಕೆಂದು." ನಾವು ಹೋಗುವ ಎಲ್ಲಾ ಸ್ಥಳಗಳಲ್ಲೂ, ನನ್ನ ಬಗ್ಗೆ ನೀನು ಹೇಳಬೇಕಾದುದು "ನನ್ನನ್ನು ನಿನ್ನ ಅಣ್ಣನೆಂದು ಹೇಳಬೇಕು "'ಎಂದು ಹೇಳಿದ್ದೆ " (ಆದಿಕಾಂಡ 20:10-13 ULB)

ಹೊರಭಾಗವು ಅಬ್ರಹಾಮನು ಅಭಿಯಲೇಕನ ಬಳಿ ಹೇಳಿದ ಮಾತುಗಳು. ಎರಡನೇ ಸಾಲು ಅಬ್ರಹಾಮನು ತನ್ನ ಹೆಂಡತಿಗೆ ಹೇಳಿದ ಮಾತು. ಮೂರನೇ ಸಾಲು ಅಬ್ರಹಾಮನು ತನ್ನ ಹೆಂಡತಿ ಏನು ಹೇಳಬೇಕೆಂದು ಹೇಳಿದ ಮಾತು. ಮೂರನೇ ವಾಕ್ಯವನ್ನು ವಿಶೇಷ ಚಿಹ್ನೆಯಿಂದ ಗುರುತಿಸಿದ್ದೇವೆ.

ನಾಲ್ಕು ಸಾಲುಳ್ಳ ಉದ್ಧರಣವಾಕ್ಯಗಳು

ಅದಕ್ಕೆ ಅವರು "ಒಬ್ಬ ಮನುಷ್ಯನು ನಮ್ಮ ಬಳಿಬಂದು ನಮಗೆ ಹೇಳಿದ್ದೇನೆಂದರೆ ‘ನೀವು ಅರಸನ ಬಳಿಗೆ ಹೋಗಿ ಯೆಹೋವನು ಹೀಗೆನುತ್ತಾನೆ - " ನೀನು ಎಕ್ರೋವನಿನ ದೇವರಾದ ಬಾಳ್ಜೆಬೂಬನನನ್ನು ವಿಚಾರಿಸುವುದಕ್ಕೆ ಕಳುಹಿಸಲು ಕಾರಣವೇನು ? ಇಸ್ರಾಯೇಲರ ದೇವರಿಲ್ಲವೇ ? " ಎಂದು ಕೇಳಿ ಎಂದನು ' ನೀನು ಹೀಗೆ ಮಾಡಿದ್ದರಿಂದ " ಹತ್ತಿದ ಮಂಚದಿಂದ ಇಳಿಯದೆ ಅಲ್ಲೇ ಸಾಯಬೇಕು ಎಂಬುದಾಗಿ ಹೇಳಿರಿ '" ' " (2 ನೇ ಅರಸು 1:6 ULB)

ಉದ್ಧರಣ ಚಿಹ್ನೆಯ ಹೊರಗಿನ ಮಾತುಗಳು ದೇವದೂತರು ರಾಜನಿಗೆ ಹೇಳಿದ ಮಾತುಗಳು. ಎರಡನೇ ಸಾಲು ದೇವದೂತರನ್ನು ಎದುರುಗೊಂಡ ಮನುಷ್ಯನು ಹೇಳಿದ ಮಾತುಗಳು. ಮೂರನೇ ಸಾಲು ದೇವದೂತರು ರಾಜನಿಗೆ ಏನು ಹೇಳಬೇಕೆಂದು ನಿರೀಕ್ಷಿಸಿದ ವ್ಯಕ್ತಿಯ ಮಾತುಗಳು. ನಾಲ್ಕನೇ ಸಾಲು ದೇವರಾದ ಯೆಹೋವನು ಹೇಳಿದ ಮಾತುಗಳು. (ಇಲ್ಲಿ ನಾಲ್ಕನೇ ವಾಕ್ಯವನ್ನು ಚಿಹ್ನೆಯಿಂದ ಗುರುತಿಸಲಾಗಿದೆ.)

ಭಾಷಾಂತರ ತಂತ್ರಗಳು.

ಕೆಲವು ಭಾಷೆಯಲ್ಲಿ ನೇರವಾದ ಉದ್ಧರಣ ವಾಕ್ಯಗಳನ್ನು ಬಳಸುತ್ತಾರೆ. ಇತರೆ ಭಾಷೆಗಳಲ್ಲಿ ನೇರವಾದ ಉದ್ಧರಣ ವಾಕ್ಯ ಮತ್ತು ಪರೋಕ್ಷವಾದ ಉದ್ಧರಣ ವಾಕ್ಯಗಳನ್ನು ಒಟ್ಟಾಗಿ ಬಳಸುತ್ತಾರೆ. ಆ ಭಾಷೆಗಳಲ್ಲಿ ಇದು ವಿಭಿನ್ನವಾಗಿ ಧ್ವನಿಸಬಹುದು ಮತ್ತು ಪರೋಕ್ಷ ಉದ್ಧರಣದೊಡನೆ ಅನೇಕ ಸಾಲುಗಳು ಬರುವುದರಿಂದ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ.

  1. ಎಲ್ಲಾ ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸ ಬೇಕು.
  2. ಒಂದು ಅಥವಾ ಕೆಲವು ಉದ್ಧರಣವಾಕ್ಯಗಳನ್ನು ಅಪರೋಕ್ಷ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸಿ. (ನೋಡಿ see Direct and Indirect Quotations)

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. ಎಲ್ಲಾ ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸ ಬೇಕು. ಕೆಳಗೆ ಕೊಟ್ಟಿರುವ ಉದಾಹರಣೆ ವಾಕ್ಯಗಳಲ್ಲಿ ಅಪರೋಕ್ಷ ಉದ್ಧರಣ ವಾಕ್ಯಗಳನ್ನು ULB ಸತ್ಯವೇದದಲ್ಲಿ ವಿಶೇಷ ಚಿಹ್ನೆಯಿಂದ ಗುರುತಿಸಲಾಗಿದೆ.ಇಂತಹ ಉದ್ಧರಣ ವಾಕ್ಯಗಳನ್ನು ನಾವು ನೇರ ಉದ್ಧರಣ ವಾಕ್ಯಗಳನ್ನಾಗಿ ಕೆಳಗೆ ನೀಡಿರುವ ವಾಕ್ಯಗಳಲ್ಲಿ ನೀಡಿದೆ.
  • ಅವರು ಅನೇಕ ದಿನಗಳು ಅಲ್ಲಿ ಉಳಿದುಕೊಂಡಿದ್ದರು ಫೇಸ್ತನು ಪೌಲನ ಸಂಗತಿಯನ್ನು ರಾಜನಿಗೆ ಆಗ ತಿಳಿಸಿ ಹೇಳಿದ್ದೇನೆಂದರೆ --- ಫಿಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ. ನಾನು ಯೆರೂಸಲೇಮಿನಲ್ಲಿದ್ದಾಗ ಯೆಹೂದ್ಯರ ಮಹಾ ಯಾಜಕನು ಸಭೆಯ ಹಿರಿಯರು ಅವನ ವಿಷಯವಾಗಿ ನನಗೆ ಫಿರ್ಯಾದು ಹೇಳಿ ಅವನ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು ಪೌಲನನ್ನು ಹೇಗೆ ವಿಚಾರ ಮಾಡಬೇಕೆಂದು ತಿಳಿಯದೆ ಅವನಿಗೆ “ ನೀನು ಯೆರೂಸಲೇಮಿಗೆ ಹೋಗಿ ಇವುಗಳ ವಿಷಯದಲ್ಲಿ ವಿಚಾರಣೆ ಹೊಂದುವುದಕ್ಕೆ ಮನಸ್ಸುಂಟೋ ಎಂದು ಕೇಳಿದೆನು . ಆದರೆ ಪುನಃ ಪೌಲನನ್ನು ಕರೆದು ಚಕ್ರವರ್ತಿಯಾದ ಸೀಸರನ ಮುಂದೆ ವಿಚಾರಣೆ ಆಗುವವರೆಗೆ ಅವನನ್ನು ಕಾವಲಿನಲ್ಲಿ ಇಡಲು ಹೇಳಿದ ." (ಆ.ಕೃ. 25:14-21 ULB)
    • ಆಗ ಫೇಸ್ತನು ಪೌಲನ ಸಂಗತಿಯನ್ನು ರಾಜನಿಗೆ ವಿವರಿಸಿ ಹೇಳಿದ್ದೇನೆಂದರೆ " ಫೆಲೆಕ್ಸನು ಬಿಟ್ಟುಹೋದ ಒಬ್ಬ ಸೆರೆಯ ಕೈದಿ ಇದ್ದಾನೆ ------ ಅವನು ಪೌಲನು, ಅವನನ್ನು ಹೇಗೆ ವಿಚಾರಣೆ ಮಾಡಬೇಕೆಂದು ತಿಳಿಯದೆ ಅವನನ್ನು ಕುರಿತು, " ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯದಲ್ಲಿ ವಿಚಾರಣೆ ಹೊಂದುವುದಕ್ಕೆ ಮನಸ್ಸುಂಟೋ ? " ಎಂದು ಕೇಳಿದನು 'ಅದಕ್ಕೆ ಪೌಲನು ತಾನು ಚಕ್ರವರ್ತಿಯ ಮುಂದೆ ವಿಚಾರಣೆ ಆಗುವವರೆಗೆ ತನ್ನನ್ನು ಕಾವಲಿನಲ್ಲಿ ಇಡಬೇಕೆಂದು ಕೇಳಿಕೊಂಡನು '" ಅದಕ್ಕೆ ನಾನು ಚಕ್ರವರ್ತಿಯಾದ ಸೀಸರನ ಮುಂದೆ ವಿಚಾರಣೆಗೆ ಹೋಗುವವರೆಗೆ ಕಾವಲಿನಲ್ಲಿ ಇಡಲು ಅಪ್ಪಣೆ ಕೊಟ್ಟೆನು '".
  1. ಒಂದು ಅಥವಾ ಕೆಲವು ಉದ್ಧರಣವಾಕ್ಯಗಳನ್ನು ಪರೋಕ್ಷ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸಿ ಇಂಗ್ಲೀಷಿನಲ್ಲಿ ಪರೋಕ್ಷ ಉದ್ಧರಣವಾಕ್ಯದ ಮೊದಲು "that" ಎಂಬ ಪದ ಬರುತ್ತದೆ. ಕೆಳಗಿನ ಉದಾಹರಣೆಯಲ್ಲಿ ವಿಶೇಷವಾಗಿ ಗುರುತಿಸಿದೆ. ಸರ್ವನಾಮಗಳನ್ನು ಇಲ್ಲಿ ಬದಲಾಯಿಸಲಾಗಿದೆ ಏಕೆಂದರೆ ಅಪರೋಕ್ಷ ಉದ್ಧರಣ ವಾಕ್ಯಗಳನ್ನು ಗುರುತಿಸಿದೆ.
  • ಯಹೋವನು ಮೋಶೆಯೊಡನೆ ಮಾತನಾಡಿದ್ದೇನೆಂದರೆ, " ಇಸ್ರಾಯೇಲರು ಗುಣಗುಟ್ಟುವಿಕೆ ನನಗೆ ಕೇಳಿಸಿತು. ". ನೀನು ಅವನಿಗೆ ಸಾಯಂಕಾಲದಲ್ಲಿ ಮಾಂಸವನ್ನು ಒತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದೆಂದು ಹೇಳಬೇಕು. "(ವಿಮೋಚನಾ ಕಾಂಡ 16:11-12 ULB)

    • ಯೆಹೋವನು ಮೋಶೆಯೊಡನೆ ಮಾತನಾಡಿ ಹೇಳಿದ್ದೇನೆಂದರೆ, " ಇಸ್ರಾಯೇಲರ ಗುಣಗುಟ್ಟಿದ್ದು ನನಗೆ ಕೇಳಿಸಿತು. ". ನೀನು ಅವರಿಗೆ ಅಂದರೆಸಾಯಂಕಾಲದಲ್ಲಿ ಅವರುಮಾಂಸವನ್ನು ಮತ್ತು ಒತ್ತಾರೆಯಲ್ಲಿ ಅವರು ರೊಟ್ಟಿಯನ್ನು ತಿನ್ನುವರು. ಆಗ ಅವರು ನಾನು ಅವರದೇವರಾದ ಯೆಹೋವನೆಂಬುದು ತಿಳಿಯುವರು."
  • ಅವರು ಅರಸನನ್ನು ಕುರಿತು, " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನನಗೆ ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ ":.. " ಇಸ್ರಾಯೇಲರಲ್ಲಿ ದೇವರಿಲ್ಲ ಎಂಬಂತೆ ಎಕ್ರೋನಿನದೇವರಾದ ಬಾಳ್ಜೆಬೂಬನನ ಬಳಿ ವಿಚಾರಿಸುವುದಕ್ಕೆ ಏಕೆ ಕಳುಹಿಸಿದೆ.? ಆದುದರಿಂದ ನೀನು ಹತ್ತಿದ ಮಂಚದಿಂದ ಕೆಳಗೆ ಇಳಿಯದೆ ಅಲ್ಲೇ ಸತ್ತು ಹೋಗುವಿ.' " ' " (2 ನೇ ಅರಸು 1:6 ULB)

    • ಅವರು ಅವನಿಗೆ ಏನೆಂದರೆಒಬ್ಬ ಮನುಷ್ಯನು ಅವರನ್ನು ಎದುರುಗೊಳ್ಳಲು ಬಂದು ಅವರನ್ನು ಕುರಿತು ನಿಮ್ಮನ್ನು, ಕಳುಹಿಸಿದ " ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಹೀಗೆಹೇಳಿರಿ, ' ಇಸ್ರಾಯೇಲರ ದೇವರನ್ನು ಗೌರವಿಸದೆ ಇಕ್ರೋನಿನ " ದೇವರಾದ ಬಾಳ್ಜೆಬೂಬನ ಬಳಿ ಏಕೆ ಕಳುಹಿಸಿದೆ ? ಇದರಿಂದ ನೀನು ಹತ್ತಿದ ಮಂಚದಿಂದ ಇಳಿಯದೆ ಅಲ್ಲೆ ಮರಣ ಹೊಂದುವುದು ಖಚಿತ.