translationCore-Create-BCS_.../translate/figs-partsofspeech/01.md

10 KiB
Raw Permalink Blame History

ವಿವರಣೆಗಳು

ಪಾರ್ಟ್ಸ್ ಆಫ್ ಸ್ಪೀಚ್ ಎಂದರೆ ನಾಮಪದ, ಕ್ರಿಯಾಪದಗಳ ವಿವಿಧ ರೂಪಗಳು. ಈ ಪದಗಳು ವಿವಿಧ ರೀತಿಯ ವಾಕ್ಯಗಳಲ್ಲಿ ವಿವಿಧ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಎಲ್ಲಾ ಭಾಷೆಗಳಲ್ಲೂ ಪಾರ್ಟ್ಸ್ ಆಫ್ ಸ್ಪೀಚ್ ಇದೆ, ಒಂದು ಭಾಷೆಯಲ್ಲಿ ಬರುವ ಎಲ್ಲಾ ಪದಗಳು ಪಾರ್ಟ್ಸ್ ಆಫ್ ಸ್ಪೀಚ್ ಗೆ ಸೇರಿದವು. ಭಾಷೆಯಲ್ಲಿಬರುವ ಎಲ್ಲಾ ಪದಗಳು ವಿವಿಧ ರೂಪದಲ್ಲಿದ್ದು ಒಂದಲ್ಲ ಒಂದು ಪಾರ್ಟ್ಸ್ ಆಫ್ ಸ್ಪೀಚ್ ನಲ್ಲಿ ಸೇರಿಯೇ ಇರುತ್ತದೆ. ಬಹುಪಾಲು ಭಾಷೆಗಳಲ್ಲಿ ಮೂಲಭೂತವಾದ ಪಾರ್ಟ್ಸ್ ಆಫ್ ಸ್ಪೀಚ್ ಗಳು ಸ್ವಲ್ಪ ವ್ಯತ್ಯಾಸದೊಂದಿಗೆ ಇರುತ್ತವೆ. ಕೆಲವು ಭಾಷೆಗಳಲ್ಲಿ ಇದಕ್ಕಿಂತ ಹೆಚ್ಚಿನದು ಇರಬಹುದು. ಇಲ್ಲಿ ಕೊಡುವಂತಹ ಪಾರ್ಟ್ಸ್ ಆಫ್ ಸ್ಪೀಚ್ ನ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ, ಆದರೆ ಇದು ಮೂಲಭೂತ ವಾಗಿ ಬೇಕಾಗಿರುವ ಎಲ್ಲಾ ವಿಧಗಳನ್ನು ಹೊಂದಿದೆ.

ಕ್ರಿಯಾಪದಗಳು ನಡೆಯುತ್ತಿರುವ ಕ್ರಿಯೆಯನ್ನು ಸೂಚಿಸುವ ಪದಗಳು (ಬಾ, ಹೋಗು,ತಿನ್ನು) ಅಥವಾ ಇರುವ ಸ್ಥಿತಿಯನ್ನು (is, are, was). ತಿಳಿಸುವಂತದ್ದು. ಹೆಚ್ಚಿನ ವಿವರವಾದ ಮಾಹಿತಿ ಕ್ರಿಯಾಪದ ವಿಭಾಗದಲ್ಲಿ ಕಾಣಬಹುದು.

ನಾಮಪದ ವ್ಯಕ್ತಿ, ಸ್ಥಳ, ವಸ್ತು, ವಿಷಯ,ಊರು ಮುಂತಾದವುಗಳನ್ನು ಪ್ರತಿನಿಧಿಸಿ ಹೇಳುವ ಹೆಸರು ಅಥವಾ ಪದವನ್ನು ನಾಮಪದ ಎಂದು ಕರೆಯುತ್ತಾರೆ. Common nouns ರೂಢನಾಮ ಪದ ರೂಢಿಯಿಂದ ಬಂದ ಸಾಮಾನ್ಯವಾಚಕಗಳು.ಯಾವುದೇ ನಿರ್ದಿಷ್ಟ ವಸ್ತುವನ್ನು, ಮನುಷ್ಯನನ್ನು, ಸ್ಥಳವನ್ನು, ದೇಶವನ್ನು, ಕುರಿತು ಅಲ್ಲ. proper nouns (ಅಂಕಿತ ನಾಮಪದ)ಇದು ಒಬ್ಬ ನಿರ್ದಿಷ್ಟ ವ್ಯಕ್ತಿ, ಸ್ಥಳ, ವಸ್ತುವಿನ ಬಗ್ಗೆ ಹೇಳುವ ನಾಮಪದ ಉದಾ : - ಪೀಟರ್, ಯೆರುಸಲೇಮ್, ಈಜಿಪ್ಟ್, ಹೆಚ್ಚಿನ ಮಾಹಿತಿಗಾಗಿ ಹೆಸರುಗಳನ್ನು ಹೇಗೆ ಭಾಷಾಂತರಿಸ ಬಹುದು ಎಂಬುದನ್ನು ನೋಡಿ

PRONOUNS - ಸರ್ವನಾಮಗಳು ನಾಮಪದಕ್ಕೆ ಬದಲಾಗಿ ಬಳಸುವ ಪದಗಳನ್ನು ಸರ್ವನಾಮ ಎಂದು ಹೆಸರು. ಅವು ಯಾವುವೆಂದರೆ ಅವನು, ಅವಳು, ಅದು, ಇದು, ನೀನು, ಅವರು, ನಾವು ಇತ್ಯಾದಿ. ಹೆಚ್ಚಿನ ಮಾಹಿತಿಗಾಗಿ pronouns ಅಧ್ಯಾಯವನ್ನು ನೋಡಿ.

CONJUNCTIONS - ಸಂಬಂಧ ಅವ್ಯಯ ಎರಡು ಪದಗುಚ್ಛ ಅಥವಾ ಎರಡು ವಾಕ್ಯಗಳನ್ನು ಬೆಸೆಯುವ ಪದಗಳನ್ನು conjunctions ಎಂದು ಕರೆಯುತ್ತೇವೆ. ಉದಾಹರಣೆಗಳು - ಮತ್ತು, ಅಥವಾ, ಆದರೆ, ಆದರೂ, ಇಲ್ಲವೆ, ಇಂಗ್ಲೀಷಿನಲ್ಲಿ ಕೆಲವು conjunctions ಗಳು ಜೋಡಿ ಪದಗಳಾಗಿ ಬರುತ್ತವೆ. both/and; either/or; neither/nor; not only/but also. ಹೆಚ್ಚಿನ ಮಾಹಿತಿಗಾಗಿ Connecting Words ನೋಡಿ.

PREPOSITIONS - (ವಿಭಕ್ತಿ ಪ್ರತ್ಯಯಗಳು) ಇವು ಪದಗಳು ಪ್ರಾರಂಭವಾಗಿ ನಾಮಪದ ಅಥವಾ ಕ್ರಿಯಾಪದಗಳನ್ನು ಬೆಸೆಯುವುದರೊಂದಿಗೆ ನಾಮಪದ ಮತ್ತು ಕ್ರಿಯಾಪದ ಸಂಬಂಧವಾಚಕ, ಕಾರ್ಯದ ಬಗ್ಗೆ ಹೇಳುತ್ತದೆ. ಉದಾಹರಣೆಗೆ ಆ ಹುಡುಗಿಯು ತನ್ನ ತಂದೆಯ ಬಳಿಗೆ ಓಡಿದಳು ." ಇಲ್ಲಿ ವಾಕ್ಯದಲ್ಲಿ ಬರುವ ಪ್ರತ್ಯಯ " ಗೆ ", (ಬಳಿಗೆ) ಹುಡುಗಿ ಓಡಿಹೋದ ದಿಕ್ಕನ್ನು ಸೂಚಿಸುತ್ತದೆ (ಕ್ರಿಯೆ) ತನ್ನ ತಂದೆಯ ಬಳಿಗೆ ಇನ್ನೊಂದು ಉದಾಹರಣೆ ಯೇಸುವಿನ ಸುತ್ತ ಇದ್ದ ಜನರ ಗುಂಪು ಹೆಚ್ಚುತ್ತಾ ಬಂದಿತು. ಇಲ್ಲಿನ ವಾಕ್ಯದೊಂದಿಗೆ ಇರುವ ಪ್ರತ್ಯಯಸುತ್ತ ಇದ್ದ ನಮಗೆ ಯೇಸುವಿನ ಬಳಿ ಇದ್ದ ಗುಂಪು ಮತ್ತುಸ್ಥಳವನ್ನು ತಿಳಿಸುತ್ತದೆ. ಮತ್ತು ಸ್ಥಾನವನ್ನು ತಿಳಿಸುತ್ತದೆ. ಪ್ರಿಪೋಜಿಷನ್ ಗೆ (ಪ್ರತ್ಯಯಗಳ) ಕೆಲವು ಉದಾಹರಣೆಗಳು : "ಗೆ", ಇಂದ, ಒಳಗೆ, ಹೊರಗೆ, ದೂರ, ಜೊತೆಗೆ, ಜೊತೆಯಿಲ್ಲದೆ, ಮೇಲೆ, ಕೆಳಗೆ, ಮುಂದೆ, ಹಿಂದೆ, ಆಮೇಲೆ, ಎಲ್ಲರೊಂದಿಗೆ, ಮೂಲಕ, ಎಲ್ಲೆ ಮೀರಿದ.

ARTICLES ಇದೂ ಒಂದು ಪದವಾಗಿ ಒಂದು ನಾಮಪದವನ್ನು ನಿರ್ದಿಷ್ಟ, ಅನಿರ್ದಿಷ್ಟ ಎಂದು ಗುರುತಿಸಲು ಇಂಗ್ಲೀಷಿನಲ್ಲಿ ಬಳಸುವಂತಾದ್ದು ಇಂಗ್ಲೀಷಿನಲ್ಲಿ ಈ ಪದಗಳು ಯಾವುವೆಂದರೆ : "a", an, the. aಮತ್ತು anಎರಡೂ ಕಡೆ ಒಂದೇ ಅರ್ಥ ಕೊಡುತ್ತದೆ. ಈ "a dog,(ಒಂದು ನಾಯಿ)ಎಂದು ಹೇಳಿದರೆ,ಕೇಳಿಸಿಕೊಳ್ಳುವವರಿಗೆ ಯಾವ ನಾಯಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಯುವುದಿಲ್ಲ ಏಕೆಂದರೆ ಅವನು ಮೊದಲ ಸಲ ನಾಯಿಯ ಬಗ್ಗೆ ಹೇಳುತ್ತಿರಬಹುದು. thedog, ಇದೇ ನಾಯಿ ಎಂದು ಹೇಳಿದರೆ ಒಂದು ನಿರ್ದಿಷ್ಟ ನಾಯಿಯ ಬಗ್ಗೆ ಹೇಳುತ್ತಿದ್ದಾನೆ ಎಂದು ಕೇಳಿಸಿಕೊಳ್ಳುತ್ತಿರುವವನು ಎಂದು ತಿಳಿದುಕೊಳ್ಳುತ್ತಾನೆ. ಕೆಲವೊಮ್ಮೆ ಇಂಗ್ಲೀಷ್ ಮಾತನಾಡುವವರು theಪದವನ್ನು ಸಾಮಾನ್ಯ ನಾಮಪದಗಳಿಗೂ ಬಳಸುತ್ತಾರೆ. ಉದಾಹರಣೆಗೆ "Theelephant is a large animal" (ಆನೆಯು ಬಹು ದೊಡ್ಡ ಪ್ರಾಣಿ) ಎನ್ನುವಲ್ಲಿ " The " ಎಲ್ಲಾ ಆನೆಗಳಿಗೂ ಅನ್ವಯಿಸುತ್ತದೆಯೇ ಹೊರತು ನಿರ್ದಿಷ್ಟ ಆನೆ ಬಗ್ಗೆ ಅಲ್ಲ. ಇದಕ್ಕೆ ಬೇಕಾದ ಹೆಚ್ಚಿನ ಮಾಹಿತಿ Generic Noun Phrases ಯಲ್ಲಿ ನೋಡಬಹುದು.

ADJECTIVES - ಗುಣವಾಚಕಗಳು - ನಾಮಪದದ ಗುಣವನ್ನು, ರೀತಿ, ಸ್ವಭಾವ, ತಿಳಿಸುತ್ತದೆ, ಗುಣವಾಚಕ ಪದಗಳಿಗೆ ಉದಾಹರಣೆ, ಅಳತೆ, ಆಕಾರ, ಬಣ್ಣ, ವಯಸ್ಸು, ಇತ್ಯಾದಿ. ಕೆಲವು ಉದಾಹರಣೆಗಳು - ತುಂಬಾ, ದೊಡ್ಡ, ನೀಲಿ, ವಯಸ್ಸಾದ, ಸುಂದರ. ಕೆಲವೊಮ್ಮೆ ಗುಣವಾಚಕಗಳನ್ನು ಒಂದು ವಿಷಯಕ್ಕೂ ಇನ್ನೊಂದು ವಿಷಯಕ್ಕೂ ನಡುವೆ ವ್ಯತ್ಯಾಸ ತಿಳಿಸಲು ಬಳಸಬಹುದು. ಉದಾಹರಣೆ ನನ್ನ ಹಿರಿಯ ವಯಸ್ಸಿನ ತಂದೆ ಗುಣವಾಚಕ ಹಿರಿ ವಯಸ್ಸು ಸರಳವಾಗಿ ನನ್ನ ತಂದೆಯ ವಯಸ್ಸನ್ನು ಸೂಚಿಸುತ್ತದೆ. ಆದರೆ ನನ್ನ ದೊಡ್ಡ ಅಕ್ಕ ಈ ಪದ ದೊಡ್ಡ ಇತರ ಎಲ್ಲಾ ಸಹೋದರಿಯರಿಗಿಂತ ದೊಡ್ಡವಳು ಎಂದೂ ನನಗೆ ಇನ್ನು ಅನೇಕ ಸಹೋದರಿಯರು ಇದ್ದಾರೆ ಎಂದು ಸೂಚಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ವ್ಯತ್ಯಾಸ ತಿಳಿದು ವಿಂಗಡಿಸುವುದು / ಮಾಹಿತಿ ನೀಡುವುದು / ನೆನಪಿಸುವುದು.

ADVERBS (ಕ್ರಿಯಾ ವಾಚಕ) ಕ್ರಿಯಾ ವಾಚಕಪದಗಳು ಕ್ರಿಯೆ ಹೇಗೆ ನಡೆಯಿತು ಎಂದು ಹೇಳುವುದರೊಂದಿಗೆ, ನಾಮವಾಚಕ ಪದಗಳಾದ ಹೇಗೆ, ಯಾವಾಗ, ಎಲ್ಲಿ, ಏಕೆ ಮತ್ತು ಎಲ್ಲಿಯವರೆಗೆ ಇತ್ಯಾದಿಗಳ ಬಗ್ಗೆಯೂ ಹೇಳುತ್ತದೆ. ಅನೇಕ ಕ್ರಿಯಾ ವಾಚಕಗಳು (adverbs) ಇಂಗ್ಲೀಷಿನಲ್ಲಿ ly.ಇಂದ ಕೊನೆಗೊಳ್ಳುತ್ತದೆ. ಕ್ರಿಯಾ ವಾಚಕಗಳಿಗೆ ಉದಾ : ನಿಧಾನವಾಗಿ, ಉದ್ದೇಶಪೂರ್ವಕವಾಗಿ, ತುಂಬಾ, ಆಮೇಲೆ ಇತ್ಯಾದಿ.