translationCore-Create-BCS_.../translate/figs-parallelism/01.md

16 KiB
Raw Permalink Blame History

ವಿವರಣೆಗಳು

ಸಾದೃಶ್ಯತೆ ಎರಡು ಪದಗುಚ್ಛಗಳು ಅಥವಾ ವಾಕ್ಯಭಾಗಗಳು ರಚನೆಯಲ್ಲಿ ಒಂದೇ ಆಗಿರುತ್ತವೆ ಹಾಗೂ ಒಂದೇ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇಲ್ಲಿ ವಿವಿಧ ರೀತಿಯ ಸಾದೃಶ್ಯಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ನೀಡಿದೆ.

  1. ಎರಡನೇ ವಾಕ್ಯಭಾಗವು ಅಥವಾ ಪದಗುಚ್ಛಗಳು ಮೊದಲ ವಾಕ್ಯಭಾಗ ಅಥವಾ ಪದಗುಚ್ಛಗಳು ಇದೇ ಆಗಿರುತ್ತದೆ. ಇದನ್ನು ಪರ್ಯಾಯ ಪದದ ಸಾದೃಶ್ಯತೆ ಅಥವಾ ಏಕಾರ್ಥ ಸಾದೃಶ್ಯತೆ ಎಂದು ಕರೆಯುತ್ತಾರೆ.
  2. ಎರಡನೇ ವಾಕ್ಯಭಾಗ ಮೊದಲ ವಾಕ್ಯಭಾಗದ ಅರ್ಥವನ್ನು ವಿವರಿಸುತ್ತದೆ ಮತ್ತು ಬಲಪಡಿಸುತ್ತದೆ.
  3. ಎರಡನೇ ವಾಕ್ಯಭಾಗ ಮೊದಲ ಭಾಗದಲ್ಲಿ ಹೇಳಿದ್ದನ್ನು ಸಂಪೂರ್ಣಗೊಳಿಸುತ್ತದೆ.
  4. ಎರಡನೇ ವಾಕ್ಯ ಮೊದಲ ಪದಕ್ಕೆ ವಿಭಿನ್ನವಾದುದುದನ್ನು ಕೆಲವೊಮ್ಮೆ ಹೇಳಿದರೂ ಒಂದೇ ಉದ್ದೇಶವನ್ನು ಸೇರಿಸಿ ಹೇಳುತ್ತದೆ.

ಇಂತಹ ಸಾದೃಶ್ಯ ವಾಕ್ಯಗಳು ಸಾಮಾನ್ಯವಾಗಿ ಹಳೆಯ ಒಡಂಬಡಿಕೆಯ ಪದ್ಯಭಾಗಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ದಾವೀದನ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳಲ್ಲಿ. ಗ್ರೀಕ್ ಭಾಷೆಯ ಹೊಸ ಒಡಂಬಡಿಕೆಯ ಭಾಗದಲ್ಲೂ ಕಂಡುಬರುತ್ತದೆ. ಅಂದರೆ ನಾಲ್ಕು ಸುವಾರ್ತೆಗಳಲ್ಲಿ ಹಾಗೂ ಅಪೋಸ್ತಲರ ಪತ್ರಗಳಲ್ಲಿ ಕಂಡುಬರುತ್ತದೆ. ಪರ್ಯಾಯ ಪದದ ಸಾದೃಶ್ಯತೆ ಅಥವಾ ಏಕಾರ್ಥ ಪದದ ಸಾದೃಶ್ಯತೆ (ಎರಡು ಪದಗಳು ಒಂದೇ ಅರ್ಥಕೊಡುವಂತದ್ದು) ಪದಗಳು ಮೂಲಭಾಷೆಯ ಪದ್ಯಭಾಗದಲ್ಲಿ ಅನೇಕ ಪ್ರಭಾವವನ್ನು ಬೀರುತ್ತದೆ.

  • ಇದು ಕೆಲವು ವಿಷಯ ತುಂಬಾ ಮುಖ್ಯವಾದುದು ಎಂದು ತೋರಿಸಲು ಒಂದುಸಲಕ್ಕಿಂತ ಹೆಚ್ಚುಸಲ ಹೆಚ್ಚು ರೀತಿಯಲ್ಲಿ ಬಳಸಲಾಗುತ್ತದೆ.
  • ಇದರಿಂದ ಶ್ರೋತೃಗಳಿಗೆ, ಓದುಗರಿಗೆ ವಿವಿಧರೀತಿಯಲ್ಲಿ ಹೇಳುವ ವಿಚಾರಗಳು ಹೆಚ್ಚು ಪರಿಣಾಮಕಾರಿ ಎಂದು ಅರ್ಥವಾಗುತ್ತದೆ.
  • ಇಂತಹ ಬಳಕೆಯಿಂದ ಸಾಮಾನ್ಯವಾದ ಮಾತುಗಳಿಗಿಂತ ಪದಗಳಿಗಿಂತ ಭಾಷೆಯ ಸೌಂದರ್ಯವನ್ನು ಕಾವ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಕಾರಣ ಇದೊಂದು ಭಾಷಾಂತರ ವಿಷಯ.

ಕೆಲವು ಭಾಷೆಯಲ್ಲಿ ಪರ್ಯಾಯ ಪದದ ಸಾದೃಶ್ಯತೆ /ಏಕಾರ್ಥ ಸಾದೃಶ್ಯತೆ ಯನ್ನು ಬಳಸುವುದಿಲ್ಲ. ಏಕೆಂದರೆ ಎರಡೆರಡುಸಲ ಬಳಸಿದ ಪದಗಳು ವಾಕ್ಯಗಳು ಅವರಿಗೆ ಅಸಹಜವಾಗಿ ಕಂಡುಬರಬಹುದು. ಇಲ್ಲವೇ ಎರಡು ಪದಗಳು ಅಥವಾ ವಾಕ್ಯಗಳು ಅರ್ಥದಲ್ಲಿ ವಿಭಿನ್ನವಾಗಿರಬಹದು.ಎಂದು ಭಾವಿಸಬಹುದು. ಅವರಿಗೆ ಭಾಷೆಯ ಸೌಂದರ್ಯವನ್ನು ತಿಳಿದುಕೊಳ್ಳುವ ಬದಲು ಗೊಂದಲ ಉಂಟಾಗಬಹುದು.

ಗಮನಿಸಿ : ನಾವು ಈ ಪರ್ಯಾಯಸಾದೃಶ್ಯ ಪದಗಳನ್ನು /ಏಕಾರ್ಥ ಸಾದೃಶ್ಯ ಪದಗಳನ್ನು ದೀರ್ಘವಾದ ಪದಗುಚ್ಛ ಅಥವಾ ವಾಕ್ಯಭಾಗಗಳಲ್ಲಿ ಒಂದೇ ಅರ್ಥವಿರುವಂತೆ ಉಪಯೋಗಿಸುತ್ತೇವೆ. ನಾವು ಕೆಲವೊಮ್ಮೆ ದ್ವಿರುಕ್ತಿಗಳನ್ನು ಪದಗಳಿಗಾಗಿ ಮತ್ತು ಚಿಕ್ಕಪದಗಳನ್ನು ಮೂಲಭೂತವಾಗಿ ಒಂದೇ ಅರ್ಥಕೊಡುವಂತೆ ಒಟ್ಟಾಗಿ ಬಳಸುತ್ತೇವೆ.

ಸತ್ಯವೇದದಿಂದ ಉದಾಹರಣೆಗಳು.

ಎರಡನೇ ವಾಕ್ಯಭಾಗ ಅಥವಾ ಪದಗುಚ್ಛಗಳು ಮೊದಲ ವಾಕ್ಯಭಾಗದಂತೆ ಒಂದೇ ಅರ್ಥವನ್ನು ಕೊಡುತ್ತದೆ.

ನಿನ್ನ ವಾಕ್ಯ ನನ್ನ ಕಾಲಿಗೆ ದೀಪವು. ನನ್ನ ಮಾರ್ಗಕ್ಕೆ ಬೆಳಕು (Psalm 119:105 ULB)

ಎರಡೂ ವಾಕ್ಯಗಳಲ್ಲಿರುವ ರೂಪಕ ಪದವು ದೇವರ ವಾಕ್ಯವು ಜನರಿಗೆ ಹೇಗೆ ಜೀವನ ನಡೆಸಬೇಕೆಂದು ಬೋಧಿಸುತ್ತವೆ.

ನೀನು ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ ಅನುಗ್ರಹಿಸಿರಿ. ಎಲ್ಲವನ್ನೂ ಅವನಿಗೆ ಅಧೀನ ಮಾಡಿ ಅವನ ಪಾದದಡಿಗೆ ಸೇರಿಸಿರಿ (ದಾ.ಕೀ. 8:6 ULB)

ಎರಡೂ ವಾಕ್ಯಗಳು ದೇವರು ಮನುಷ್ಯನಿಗೆ ಎಲ್ಲದರ ಮೇಲಿನ ಒಡೆತನವನ್ನು ನೀಡಿದ್ದಾನೆ ಎಂದು ತಿಳಿಸುತ್ತವೆ.

ಎರಡನೇ ವಾಕ್ಯ ಮೊದಲನೇ ವಾಕ್ಯದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ಬಲಪಡಿಸುತ್ತದೆ.

ಯೆಹೋವನ ದೃಷ್ಟಿಯು ಎಲ್ಲಾ ಕಡೆಯೂ ವ್ಯಾಪಿಸುವುದು. ಆತನು ಕೆಟ್ಟವರನ್ನು, ಒಳ್ಳೆಯವರನ್ನು ನೋಡುತ್ತಲೇ ಇರುವನು. (ಜ್ಞಾನೋಕ್ತಿಗಳು 15:3 ULB)

ಎರಡನೇ ವಾಕ್ಯ ಯೆಹೋವನು ವಿಶೇಷವಾಗಿ ಏನನ್ನು ನೋಡುತ್ತಾನೆ / ಗುರುತಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ.

ಎರಡನೇ ವಾಕ್ಯ ಮೊದಲ ವಾಕ್ಯದಲ್ಲಿ ಹೇಳಿರುವುದನ್ನು ಸಂಪೂರ್ಣಗೊಳಿಸುತ್ತದೆ.

ನಾನು ಯೆಹೋವನಿಗೆ ಮೊರೆ ಇಡುವಾಗ. ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. (ದಾ.ಕೀ. 3:4 ULB)

ಮೊದಲ ವಾಕ್ಯದಲ್ಲಿ ಮನುಷ್ಯನು ಮಾಡಿದ ಕ್ರಿಯೆಗೆ ತಕ್ಕಂತೆ ಯೆಹೋವನು ಹೇಗೆ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನು ಎರಡನೇ ವಾಕ್ಯ ಸೂಚಿಸುತ್ತದೆ.

ಎರಡನೇ ವಾಕ್ಯ ಮೊದಲ ವಾಕ್ಯದೊಂದಿಗೆ ಭಿನ್ನವಾಗಿ ತೋರಿದರೂ ಒಂದೇ ಉದ್ದೇಶವಿರುವುದನ್ನು ತೋರಿಸುತ್ತದೆ.

ಯೆಹೋವನು ನೀತಿವಂತ ಮಾರ್ಗವನ್ನು ಲಕ್ಷಿಸುವನು. ದುಷ್ಟರ ಮಾರ್ಗವು ನಾಶವಾಗುವುದು. (ದಾ.ಕೀ 1:6 ULB)

ಎರಡು ಭಿನ್ನ ವಾಕ್ಯಗಳಿದ್ದರೂ ಒಂದೇ ಉದ್ದೇಶ ಹೊಂದಿದೆ.ಅಂದರೆ ನೀತಿವಂತರಿಗೆ ಆಗುವ ಮೇಲು, ದುಷ್ಟರಿಗೆ ಆಗುವ ದುಃಸ್ಥಿತಿ ಬಗ್ಗೆ ತಿಳಿಸುತ್ತದೆ.(ನೀತಿವಂತರಿಗೂ, ದುಷ್ಟರಿಗೂ ಆಗುವ ಪರಿಣಾಮದ ಬಗ್ಗೆ).

ಮೃದುವಾದ ಪ್ರತ್ಯುತ್ತರವು ಸಿಟ್ಟನ್ನು ತಣಿಸುತ್ತದೆ. ಬಿರುನುಡಿಗಳು ಸಿಟ್ಟನ್ನು ಕೆರಳಿಸುತ್ತದೆ. (ಜ್ಞಾನೋಕ್ತಿಗಳು 15:1 ULB)

ಈ ವಾಕ್ಯಗಳು ಮೃದುವಾಗಿ ಮಾತನಾಡುವುದರಿಂದ ಮತ್ತು ಬಿರುಸಾಗಿ ನುಡಿಯುವ ಮಾತುಗಳಿಂದ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ತಂತ್ರಗಳು.

ಎಲ್ಲಾ ರೀತಿಯ ಏಕಾರ್ಥ ಸಾದೃಶ್ಯತೆ ಇರುವ ವಾಕ್ಯಗಳನ್ನು ಮತ್ತು ಪದಗಳನ್ನು ಭಾಷಾಂತರ ಮಾಡುವುದು ಒಳ್ಳೆಯದು. ಪರ್ಯಾಯ ಪದದ ಸಾದೃಶ್ಯತೆ/ ಏಕಾರ್ಥ ಸಾದೃಶ್ಯತೆ ವಾಕ್ಯಭಾಗದಲ್ಲಿ ಅಥವಾ ಪದಗುಚ್ಛಗಳಲ್ಲಿ ಇರುವ ಪದಗಳನ್ನು ನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ನಿಮ್ಮ ಜನರು ಸರಿಯಾಗಿ ಅರ್ಥಮಾಡಿಕೊಂಡು ಇಂತಹ ಪದಗಳನ್ನು ಎರಡೆರಡುಸಲ ಬಳಸಿದಾಗ ಅದರ ಅರ್ಥವನ್ನು ಒಂದೇ ಉದ್ದೇಶವನ್ನು ಮನದಟ್ಟು ಮಾಡಲು ಇಲ್ಲವೇ ಬಲಪಡಿಸಲು ಹೇಳಲಾಗಿದೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಭಾಷೆಯಲ್ಲಿ ಇಂತಹ ಏಕಾರ್ಥ ಸಾದೃಶ್ಯ ಪದಗಳ ಬಳಕೆ ಇಲ್ಲದಿದ್ದರೆ ಕೆಳಗೆ ನೀಡಿರುವ ಭಾಷಾಂತರ ತಂತ್ರಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಳ್ಳಬಹುದು.

  1. ಎರಡೂ ವಾಕ್ಯಭಾಗಗಳಲ್ಲಿ ಇರುವ ಉದ್ದೇಶವನ್ನು ಒಟ್ಟುಗೂಡಿಸಿ ಒಂದೇವಾಕ್ಯಮಾಡಿ.
  2. ಇಲ್ಲಿರುವ ವಾಕ್ಯಭಾಗಗಳು ಜೊತೆಯಾಗಿ ಉಪಯೋಗಿಸಿಕೊಂಡಾಗ ಅದು ನಿಜವಾದುದು ಎಂದು ಕಂಡುಬಂದರೆ ಅದನ್ನು ಪ್ರತಿಪಾದಿಸುವಂತೆ "ನಿಜವಾಗಿ," "ಖಂಡಿತವಾಗಿ," ಎಂಬ ಪದಗಳನ್ನು ಬಳಸಬಹುದು.
  3. ಅದೇರೀತಿ ವಾಕ್ಯಭಾಗಗಳಲ್ಲಿ ಜೊತೆಯಾಗಿ ಬಳಸಿದ ಉದ್ದೇಶಗಳನ್ನು ಬಲಪಡಿಸಲು, ದೃಢಪಡಿಸಲು, "ತುಂಬಾ," "ಸಂಪೂರ್ಣವಾಗಿ," ಅಥವಾ "ಎಲ್ಲಾ," ಎಂಬ ಪದಗಳನ್ನು ಬಳಸಬಹುದು.

ಭಾಷಾಂತರ ತಂತ್ರಗಳನ್ನು ಬಳಸಿದ ಬಗ್ಗೆ ಉದಾಹರಣೆಗಳು

  1. ಎರಡೂ ವಾಕ್ಯಭಾಗಗಳಲ್ಲಿ ಇರುವ ಉದ್ದೇಶವನ್ನು ಒಂದುಗೂಡಿಸಬೇಕು
  • ಇದುವರೆಗೂ ನೀನು ನನ್ನನ್ನು ವಂಚಿಸಿದಿ ಮತ್ತು ನನಗೆ ಸುಳ್ಳು ಹೇಳಿದಿ. (ನ್ಯಾಯಸ್ಥಾಪಕರು 16:13, ULB) ದೆಲಿಲಾಳು ಒಂದೇ ಉದ್ದೇಶವನ್ನು ಎರಡು ಸಲ ಹೇಳುವ ಉದ್ದೇಶವೆಂದರೆ ತಾನು ಇದರಿಂದ ತುಂಬಾ ಬೇಸರಗೊಂಡಿದ್ದೇನೆ ಎಂಬುದನ್ನು ತಿಳಿಸಲು.

    • " ಇದುವರೆಗೂ ನೀನು ಸುಳ್ಳು ಹೇಳುವ ಮೂಲಕ ನನ್ನನ್ನು ವಂಚಿಸಿರುವೆ. "
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಎಲ್ಲಾ ಮಾರ್ಗಗಳನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB) ಇಲ್ಲಿ ಬಳಸಿರುವ ಪದ " ಅವನು ನಡೆಯುವ ಎಲ್ಲಾ ಮಾರ್ಗಗಳು " ಎಂಬುದು ಅವನು ಮಾಡುವ ಎಲ್ಲಾ ಕೆಲಸಗಳು ಎಂಬುದಕ್ಕೆ ರೂಪಕವಾಗಿ ಬರುತ್ತದೆ.

    • "ಮನುಷ್ಯನು ಮಾಡುವ ಕಾರ್ಯಗಳನ್ನು ಯೆಹೋವನು ಗಮನಿಸುತ್ತಾನೆ. "
  • ಯೆಹೋವನಿಗೆ ಆತನ ಪ್ರಜೆಗಳೊಂದಿಗೆ ವ್ಯಾಜ್ಯವಿದೆ ಮತ್ತು ಆತನು ಇಸ್ರಾಯೇಲಿನೊಂದಿಗೆ ವಾದಿಸುತ್ತಾನೆ. (ಮೀಕ 6:2 ULB) - ಈ ಸಾದೃಶ್ಯತೆ ಯೆಹೋವನಿಗೆ ಒಂದು ಗುಂಪಿನ ಜನರ ಬಗ್ಗೆ ಇರುವ ಅಸಮಧಾನವನ್ನು ಸೂಚಿಸುತ್ತದೆ. ಇದು ಅಸ್ಪಷ್ಟವಾದ ಪದಗುಚ್ಛಗಳನ್ನು ಸೇರಿಸಿ ಹೇಳಬಹುದು.

    • " ಯೆಹೋವನಿಗೆ ಆತನ ಜನರೊಂದಿಗೆ, ಇಸ್ರಾಯೇಲರೊಂದಿಗೆ ವ್ಯಾಜ್ಯವಿದೆ.
  1. ಇಲ್ಲಿರುವ ವಾಕ್ಯಭಾಗಗಳು ಜೊತೆಯಾಗಿ ಉಪಯೋಗಿಸಿಕೊಂಡಾಗ ಅದು ನಿಜವಾದುದು ಎಂದು ಕಂಡುಬಂದರೆ ಅದನ್ನು ಪ್ರತಿಪಾದಿಸುವಂತೆ "ನಿಜವಾಗಿ," "ಖಂಡಿತವಾಗಿ," ಎಂಬ ಪದಗಳನ್ನು ಬಳಸಬಹುದು.
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಮಾರ್ಗವನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB)

    • " ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ಖಂಡಿತವಾಗಿ ನೋಡುತ್ತಾನೆ. "
  1. ಅದೇರೀತಿ ವಾಕ್ಯಭಾಗಗಳಲ್ಲಿ ಜೊತೆಯಾಗಿ ಬಳಸಿದ ಉದ್ದೇಶಗಳನ್ನು ಬಲಪಡಿಸಲು, ದೃಢಪಡಿಸಲು, " ತುಂಬಾ," " ಸಂಪೂರ್ಣವಾಗಿ," ಅಥವಾ "ಎಲ್ಲಾ," ಎಂಬ ಪದಗಳನ್ನು ಬಳಸಬಹುದು.
  • ನೀನು ನನ್ನನ್ನು ವಂಚಿಸಿರುವೆ ಮತ್ತು ನನಗೆ ಸುಳ್ಳುಹೇಳಿರುವೆ. (ನ್ಯಾಯಸ್ಥಾಪಕರು 16:13 ULB)

    • " ನೀನು ಮಾಡಿದ್ದೇನೆಂದರೆ ನನಗೆ ಸುಳ್ಳುಹೇಳಿರುವುದು."
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಮಾರ್ಗವನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB)

    • " ಯೆಹೋವನು ಖಂಡಿತವಾಗಿ ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ. "