translationCore-Create-BCS_.../translate/figs-merism/01.md

7.7 KiB

ವಿವರಣೆಗಳು

ಮೆರಿಸಮ್ ಎಂದರೆ ಇದು ಇಂಗ್ಲೀಷ್ ನಲ್ಲಿ ಬರುವ ಒಂದು ಅಲಂಕಾರ. ಒಬ್ಬ ವ್ಯಕ್ತಿ ಎರಡು ವಿಭಿನ್ನ ಅಥವಾ ಎರಡೂ ವಿರುದ್ಧವಾದ ಪದಗಳನ್ನು ಬಳಸಿ ಹೇಳುವಂತಹ ವಿಷಯ. ಹೀಗೆ ಎರಡು ವಿಭಿನ್ನ ಪದಭಾಗಗಳನ್ನು ಒಂದುಮಾಡಿ ಹೇಳುವಾಗ ಎರಡೂ ವಾಕ್ಯಗಳನ್ನು ಸೇರಿಸಿ ಹೇಳುತ್ತಾನೆ.

" ನಾನೇ ಆಲ್ಫಾ ಮತ್ತು ಒಮೇಗ ಎಂದು ಹೇಳಿದನು ನಾನೇ ವರ್ತಮಾನದಲ್ಲಿರುವವನು, ಭೂತಕಾಲದಲ್ಲಿ ಇದ್ದವನು ಮತ್ತು ಭವಿಷ್ಯತ್ ಕಾಲದಲ್ಲಿ ಬರುವವನು, ಸರ್ವಶಕ್ತನೂ ಆಗಿದ್ದೇನೆಂದು ದೇವರು ಹೇಳಿದನು. " (ಪ್ರಕಟಣೆ1:8, ULB) ದೇವರು ನಾನೇ ಆಲ್ಫಾ ಮತ್ತು ಒಮೇಗ (ಆದಿಯೂ,ಅಂತ್ಯವೂ), ಮೊದಲನೆಯವನು ಮತ್ತು ಕೊನೆಯವನು , ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. (ಪ್ರಕಟಣೆ 22:13, ULB)

ಆಲ್ಫಾ ಮತ್ತು ಒಮೇಗ ಎಂಬುದು, ಗ್ರೀಕ್ ಅಕ್ಷರ ಮಾಲೆಯ ಪ್ರಾರಂಭ ಮತ್ತು ಕೊನೆಯ ಅಕ್ಷರಗಳು. ಈ ರೀತಿ ಪ್ರಾರಂಭದಿಂದ ಕೊನೆಯವರೆಗೆ ಸೇರಿಸಿ ಒಟ್ಟಾಗಿ ಹೇಳುವ ಪದವನ್ನು ಮೆರಿಸಮ್ ಎಂದು ಕರೆಯುತ್ತಾರೆ. ಇದರ ಅರ್ಥ ಅನಂತವಾದುದು ಎಂದು.

“ ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇನಾನು ನಿನ್ನನ್ನು ಸ್ತುತಿಸುತ್ತೇನೆ.., (ಮತ್ತಾಯ 11:25 ULB)

ಭೂ ಪರಲೋಕಗಳು ಎಂದು ಹೇಳುವುದನ್ನು ಪರಲೋಕ ಮತ್ತು ಭೂಲೋಕ ಎರಡೂ.., ಅಸ್ಥಿತ್ವದಲ್ಲಿರುವುದನ್ನು ಹೇಳುವಂತದ್ದೇ ಮೆರಿಸಮ್.

####ಕಾರಣ ಇದೊಂದು ಭಾಷಾಂತರ ತೊಡಕುಗಳು ಪ್ರಕರಣ.

ಕೆಲವು ಭಾಷೆಗಳಲ್ಲಿ ಮೆರಿಸಮ್ ಅನ್ನು ಉಪಯೋಗಿಸುವುದಿಲ್ಲ. ಅಂತಹ ಭಾಷೆಯ ಓದುಗರು ಇಂತಹ ಪದಬಂಧಗಳು ಆಯಾಪದಗಳಿಗೆ ಮಾತ್ರ ಸೀಮಿತವಾದುದು ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಆ ಎರಡು ಪದಗಳು ಅರ್ಥದಲ್ಲಿ ಬೇರೆಯಾದರೂ ಅದರ ಮಧ್ಯದಲ್ಲಿರುವುದನ್ನು ಬೆಸೆಯುತ್ತದೆ, ತನ್ನೊಳಗೆ ಸೇರಿಸಿಕೊಂಡು ಒಂದು ಪದಬಂಧವಾಗಿದೆ ಎಂದು ಕೆಲವೊಮ್ಮೆ ತಿಳಿಯುವುದಿಲ್ಲ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಯೆಹೋವನ ನಾಮವು ಮೂಡಣದಿಂದ ಪಡುವಣದವರೆಗೆ,ಸ್ತುತಿಹೊಂದಲಿ. (ದಾ.ಕೀ. 113:3 ULB)

ಇದೊಂದು ಮೆರಿಸಮ್ ಏಕೆಂದರೆ ಮೂಡಣ (ಪೂರ್ವ) ದಿಕ್ಕಿನಿಂದ ಪಡುವಣ(ಪಶ್ಚಿಮ) ದಿಕ್ಕಿನವರೆಗೆ ಎಂದು ಹೇಳಿದರೆ ಅದರ ಮಧ್ಯದಲ್ಲಿ ಇರುವುದೆಲ್ಲವೂ ಸೇರಿದೆ ಎಂದು ಅರ್ಥ. ಇದರ ಅರ್ಥ " ಎಲ್ಲಾ ಕಡೆಯೂ " ಎಂದು.

ಯಾರು ಅವನನ್ನು ಮಹಿಮೆ ಪಡಿಸುತ್ತಾರೋ ಅವರನ್ನು"ಸಣ್ಣವರು ಮೊದಲುಗೊಂಡು ದೊಡ್ಡವರವರೆಗೂ. ಎಲ್ಲರನ್ನು ಆಶೀರ್ವದಿಸುವವನು" (ದಾ.ಕೀ. 115:12)

ಇಲ್ಲಿ ಇದೊಂದು ಮೆರಿಸಮ್ ಗೆ ಉದಾಹರಣೆ, ಏಕೆಂದರೆ ಸಣ್ಣವರನ್ನು ಮೊದಲುಗೊಂಡು ದೊಡ್ಡವರವರೆಗೆ ಎಂದರೆ ಮಧ್ಯದಲ್ಲಿ ಇರುವ ಇತರ ಎಲ್ಲರೂ ಎಂದರ್ಥ. ಇದರ ಅರ್ಥ ಎಲ್ಲರೂ ಎಲ್ಲವೂ ಎಂದು.

###ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ಈ ಮೆರಿಸಮ್ ಬಳಕೆ ಸಹಜವಾಗಿ ಇದ್ದರೆ ಅದನ್ನು ಬಳಸಿಕೊಳ್ಳಿ. ಅದಿಲ್ಲದಿದ್ದರೆ ಇಲ್ಲಿ ಕೆಲವು ಅವಕಾಶ ಇವೆ.

  1. "ಮೆರಿಸಮ್" ಸೂಚಿಸಿರುವ ವಾಕ್ಯಭಾಗಗಳಲ್ಲಿ ಅದರ ಉದ್ದೇಶ ಎಲ್ಲಿ ಬರುತ್ತದೆ ಎಂಬುದನ್ನು ಗುರುತಿಸಬೇಕು
  2. "ಮೆರಿಸಮ್" ಯಾವುದು ಎಂಬುದನ್ನು ಗುರುತಿಸಿ ಯಾವುದರ ಬಗ್ಗೆ ಹೇಳುತ್ತಿದೆ. ಯಾವುದನ್ನು ಒಳಗೊಂಡಿದೆ ಎಂಬುದನ್ನು ನೋಡಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. "ಮೆರಿಸಮ್" ಸೂಚಿಸಿರುವ ವಾಕ್ಯಭಾಗಗಳಲ್ಲಿ ಅದರ ಉದ್ದೇಶ ಎಲ್ಲಿ ಬರುತ್ತದೆ ಎಂಬುದನ್ನು ಗುರುತಿಸಬೇಕು
  • ತಂದೆಯೇ ಪರಲೋಕ ಭೂಲೋಕಗಳ , ಒಡೆಯನೇ ನಿನ್ನನ್ನು ಸ್ತುತಿಸುತ್ತೇನೆ.. (ಮತ್ತಾಯ 11:25 ULB)

    • ತಂದೆಯೇ, ಸರ್ವಕ್ಕೂ ಒಡೆಯನೇ , ನಿನ್ನನ್ನು ಸ್ತುತಿಸುತ್ತೇನೆ..**
  • ಯೆಹೋವನ ನಾಮವು ಮೂಡಣದಿಂದ ಪಡುವಣದವರೆಗೂ ಸ್ತುತಿಹೊಂದಲಿ. (ದಾ.ಕೀ. 113:3 ULB)

    • ಎಲ್ಲಾ ಸ್ಥಳಗಳಲ್ಲಿಯೂ , ಜನರು ಯೆಹೋವನ ನಾಮವನ್ನು ಸ್ತುತಿಸಿ ಮಹಿಮೆಪಡಿಸಲಿ.
  1. ಮೆರಿಸಮ್ ಯಾವುದು ಎಂಬುದನ್ನು ಗುರುತಿಸಿ ಯಾವುದರ ಬಗ್ಗೆ ಹೇಳುತ್ತಿವೆ. ಯಾವುದನ್ನು ಒಳಗೊಂಡಿದೆ ಎಂಬುದನ್ನು ನೋಡಿ.
  • ಪರಲೋಕ ಭೂಲೋಕಗಳ ಒಡೆಯನಾದ ತಂದೆಯೇ ನಾನು ನಿನ್ನನ್ನು ಸ್ತುತಿಸುತ್ತೇನೆ . (ಮತ್ತಾಯ 11:25 ULB)

    • ತಂದೆಯಾದ ದೇವರೇ, ಪರಲೋಕದಲ್ಲಿರುವ ಎಲ್ಲವನ್ನೂ, ಭೂಲೋಕದಲ್ಲಿರುವ ಎಲ್ಲವನ್ನೂ ಸೃಷ್ಠಿಸಿದ ಒಡೆಯನೇ ನಿನ್ನನ್ನು ಸ್ತುತಿಸುತ್ತೇನೆ.
  • ಸಣ್ಣವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರನ್ನೂ ಆತನನ್ನೂ ಗೌರವಿಸಿ ಮಹಿಮೆ ಪಡಿಸುವವರನ್ನು ಆಶೀರ್ವದಿಸುವನು . (ದಾ.ಕೀ.115:13 ULB)

    • ಆತನು ತನ್ನನ್ನು ಗೌರವಿಸಿ ಮಹಿಮೆ ಪಡಿಸುವ ಎಲ್ಲರನ್ನೂ ಸಣ್ಣವರೂ ದೊಡ್ಡವರೂ ಎಂಬ ಯಾವ ಭೇದವನ್ನು ಮಾಡದೆ ಆಶೀರ್ವದಿಸುವನು. .