translationCore-Create-BCS_.../translate/figs-exmetaphor/01.md

20 KiB
Raw Permalink Blame History

ವಿವರಣೆ.

ವಿಸ್ತರಿಸಿದ ರೂಪಕ ಅಲಂಕಾರ ಎಂದರೆ ಒಂದು ಸನ್ನಿವೇಶ ಅಥವಾ ಒಂದು ವಿಷಯದ ಬಗ್ಗೆ ಒಬ್ಬರು ಮಾತನಾಡುವಾಗ ಇನ್ನೊಂದು ಸನ್ನಿವೇಶವನ್ನು ಉದ್ದೇಶಿಸಿ ಮಾತನಾಡುವುದು.

ಇಂತಹ ರೂಪಕ ಅಲಂಕಾರದಲ್ಲಿ ಪರಿಣಾಮಕಾರಿಯಾದ ಸನ್ನಿವೇಶವನ್ನು ವಿವರಿಸಲು ಮೊದಲನೆಯ ಸನ್ನಿವೇಶ ಎರಡನೆಯ ಸನ್ನಿವೇಶದಷ್ಟೇ ಸಮವಾಗಿದೆ ಎಂದು ತೋರಿಸುತ್ತದೆ ಎರಡನೇ ವಿಧದಲ್ಲಿ ಮನುಷ್ಯನನ್ನು, ವಸ್ತುಗಳನ್ನು ಮತ್ತು ಕ್ರಿಯೆಗಳನ್ನು ಕುರಿತು ಬಳಸುವ ** ಚಿತ್ರಣ** ಮೊದಲ ಸನ್ನಿವೇಶದಲ್ಲಿ ಪ್ರತಿನಿಧಿಸುತ್ತವೆ.

ಇದಕ್ಕೆ ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಚಿತ್ರಣಗಳು ಬೇರೆ ವಿಚಾರಗಳನ್ನು ಪ್ರತಿನಿಧಿಸುತ್ತವೆ ಎಂದು ಜನರಿಗೆ ತಿಳಿಯದೇ ಇರಬಹುದು.
  • ಜನರಿಗೆ ಇಂತಹ * ಚಿತ್ರಣ* ಬಳಕೆ ಬಗ್ಗೆ ತಿಳಿಯದೆ /ಪರಿಚಯವಿಲ್ಲದೆ ಇರಬಹುದು.
  • ವಿಸ್ತರಿಸಿದ ರೂಪಕ ಅಲಂಕಾರ ಕೆಲವೊಮ್ಮೆ ಎಷ್ಟು ಪ್ರಬುದ್ಧವಾಗಿರುತ್ತದೆ ಎಂದರೆ ಭಾಷಾಂತರಗಾರನಿಗೆ ಇದನ್ನು ಸರಳವಾಗಿ ರೂಪಕ ಅಲಂಕಾರದ ಮೂಲಕ ವ್ಯಕ್ತಪಡಿಸಲು ಕಠಿಣವೆನಿಸಬಹುದು.

ಭಾಷಾಂತರದ ತತ್ವಗಳು.

  • ಮೂಲ ಓದುಗರಿಗೆ ಹೇಗೆ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸುತ್ತೀರೋ ಹಾಗೆ ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರಿಗೆ ಅಷ್ಟೇ ಸ್ಪಷ್ಟವಾಗಿ ತಿಳಿಯುವಂತೆ, ಅರ್ಥವಾಗುವಂತೆ ತಿಳಿಸಬೇಕು.
  • ಮೂಲ ಓದುಗರಿಗೆ ತಿಳಿಸಿದಂತೆ ಭಾಷಾಂತರ ಮಾಡುತ್ತಿರುವ ಭಾಷೆಯ ಶ್ರೋತೃಗಳಿಗೆ ಅದರ ಅರ್ಥವನ್ನುವಿವರವಾಗಿ ಹೇಳಬೇಡಿರಿ.
  • ಯಾರಾದರೂ ವಿಸ್ತೃತ ರೂಪಕ ಅಲಂಕಾರವನ್ನು ಬಳಸಿದರೆ ಅವರು ಹೇಳುತ್ತಿರುವ ವಿಷಯದ ಚಿತ್ರಣಗಳು ಮುಖ್ಯವಾಗಿ ಇರುತ್ತವೆ.
  • ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ನೀವು ಭಾಷಾಂತರಿಸಿದ ಚಿತ್ರಣನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿಸ್ತರಿಸಿದ ರೂಪಕ ಅಲಂಕಾರವನ್ನು ವಿವರಿಸಿ ಹೇಳಬೇಕು.

###ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ದಾವೀದನ.ಕೀರ್ತನೆಗಳು.23:1-4,ಲೇಖಕನಾದ ದಾವೀದನು ದೇವರು ತನ್ನ ಜನರ ಬಗ್ಗೆ ಕಾಳಜಿಯಿಂದ ಸಂರಕ್ಷಣೆ ಮಾಡುತ್ತಾನೆ. ಕುರುಬನು ಹೇಗೆ ತನ್ನ ಕುರಿಗಳನ್ನು ಕಾಯುತ್ತಾನೋ, ಆರೈಕೆಮಾಡುತ್ತಾನೋ ಹಾಗೆ ದೇವರೂ ಸಹ ನಮ್ಮ ಬಗ್ಗೆ ಪ್ರೀತಿ, ಕಾಳಜಿ ತೋರಿಸುತ್ತಾನೆ.

ಕುರುಬರು ತಮ್ಮ ಕುರಿಗಳನ್ನು ಹಸಿರಿರುವ ಜಾಗ ಹುಡುಕಿ ಮೇಯಿಸಲು ಕರೆದುಕೊಂಡು ಹೋಗುತ್ತಾನೆ. ಅವುಗಳಿಗೆ ಏನು ಬೇಕು ಎಂಬುದನ್ನು ತಿಳಿದು ಒದಗಿಸುತ್ತಾನೆ, ಕಾಡುಮೃಗಗಳಿಂದ ರಕ್ಷಿಸಿ ಸರಿಯಾದ ದಾರಿಯಲ್ಲಿ ಕರೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾನೆ. ನಮ್ಮ ದೇವರು ಸಹ ನಮ್ಮನ್ನು ಇದೇ ರೀತಿ ಸಂರಕ್ಕಷಿಸಿ ಮಾರ್ಗದರ್ಶಿಸುತ್ತಾನೆ.

1ಯೆಹೋವನು ನನ್ನ ಕುರುಬನು : ನಾನು ಕೊರತೆ ಪಡೆನು. 2ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುತ್ತಾನೆ.

ವಿಶ್ರಾಂತಿಕರವಾದ ನೀರುಗಳ ಬಳಿಗೆ ನನ್ನನ್ನು ಬರಮಾಡುತ್ತಾನೆ

3ನನ್ನ ಪ್ರಾಣವನ್ನು ಉಜ್ಜೀವಿಸುವಂತೆ ಮಾಡುತ್ತಾನೆ.

ಆತನು ತನ್ನ ಹೆಸರಿಗೆ ತಕ್ಕಂತೆ ನೀತಿ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ.

4ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ

ನೀನು ಹತ್ತಿರವಿರುವುದರಿಂದ ನಾನು ಯಾವ ಕೇಡಿಗೂ ಹೆದರೆನು. ನಿನ್ನ ದೊಣ್ಣೆಯು, ನಿನ್ನ ಕೋಲು ನನಗೆ ಧೈರ್ಯಕೊಡುತ್ತವೆ. (ULB)

ಯೆಶಾಯ 5:1-7, ದೇವರು ತನ್ನ ಜನರ ಬಗ್ಗೆ ನಿರಾಶೆಹೊಂದಿರುವ ಬಗ್ಗೆ ಹೇಳುತ್ತಾ ದ್ರಾಕ್ಷಿತೋಟದಲ್ಲಿ ಉತ್ತಮ ತಳಿ, ರುಚಿಹಣ್ಣು ಬೆಳೆಯಲು ಪ್ರಯತ್ನಿಸಿದರೆ ಕೆಟ್ಟ ರುಚಿ ಹಾಗೂ ಕೊಳೆತ ದ್ರಾಕ್ಷಿ ದೊರೆತರೆ ತೋಟಗಾರನಿಗೆ ಹೇಗೆ ನಿರಾಶೆಯಾಗುತ್ತದೋ ಹಾಗೆ ದೇವರೂ ಸಹ ನಿರಾಶನಾದನು ಎಂದು ಯೆಶಾಯನು ತೋರಿಸುತ್ತಾನೆ.

ರೈತರು, ತೋಟಗಾರರು ತಮ್ಮ ಹೊಲದಲ್ಲಿ, ತೋಟದಲ್ಲಿ ಉತ್ತಮ ತಳಿ ಫಲತೆಗೆಯಲು ಚೆನ್ನಾಗಿ ಕೃಷಿಕೆಲಸ ಮಾಡುತ್ತಾರೆ. ನಿರೀಕ್ಷಿಸಿದ ಉತ್ತಮ ಫಲ ಬರದಿದ್ದರೆ ಕೆಟ್ಟ ರುಚಿ ಹಣ್ಣು ಬಂದರೆ ಬೆಳೆಯ ಬಗ್ಗೆ ಅವರು ಸಹಜವಾಗಿ ಕಾಳಜಿವಹಿಸುವುದಿಲ್ಲ.

ಈ ಭಾಗದಲ್ಲಿ 1 6 ವಚನಗಳು ಸರಳವಾಗಿ ರೈತರ, ತೋಟಗಾರರ ಬಗ್ಗೆ ಮತ್ತು ಫಲವತ್ತಾದ ಭೂಮಿ ಮತ್ತು ದ್ರಾಕ್ಷಿತೋಟದ ಬಗ್ಗೆ ಇದೆ. ಏಳನೇ ವಚನ ದೇವರು ಮತ್ತು ಆತನ ಜನರ ಬಗ್ಗೆ ಇದೆ.

1.. ನನ್ನ ಪ್ರಿಯನಿಗೆ ಸಾರವತ್ತಾದ ಗುಡ್ಡದ ಮೇಲೆ ದ್ರಾಕ್ಷಿಯ ತೋಟವಿತ್ತು. 2</sup.. ಅವನು ಅದನ್ನು ಅಗೆದು ಕಲ್ಲು ಮುಳ್ಳುಗಳನ್ನು ತೆಗೆದುಹಾಕಿ ಒಳ್ಳೇತಳಿಯ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.

ತೋಟದ ಮಧ್ಯದಲ್ಲಿ ಬುರುಜನ್ನು ದ್ರಾಕ್ಷಾರಸ ತೆಗೆಯುವ ಗಾಣಗಳನ್ನು, ತೊಟ್ಟಿಯನ್ನು ಕಟ್ಟಿಸಿದನು. ತೋಟದಲ್ಲಿ ದ್ರಾಕ್ಷಿ ಬಳ್ಳಿಯಲ್ಲಿ ಒಳ್ಳೆಯಹಣ್ಣನ್ನು ಕೊಡುವುದೆಂದು ನಿರೀಕ್ಷಿಸುತ್ತಿರಲು ಕೆಟ್ಟಹಣ್ಣು ನೀಡಿತು.

3ಯೆರೊಸೆಲೇಮಿನ ಜನರೇ, ಯೆಹೋದದ ಜನರೇ.

ನನಗೂ ನನ್ನ ದ್ರಾಕ್ಷೀ ತೋಟಕ್ಕೂ ನಡುವೆ ಬಂದು ನ್ಯಾಯ ತೀರಿಸಿರಿ.

4ನನ್ನ ತೋಟದಲ್ಲಿ ನಾನು ಇದುವರೆಗೂ ಮಾಡಿದ್ದಕ್ಕಿಂತ ಇನ್ನೂ ಹೆಚ್ಚಿನದು ನಾನೇನು ಮಾಡಲಿ ?

ನಾನು ಒಳ್ಳೆ ದ್ರಾಕ್ಷಿಹಣ್ಣು ನಿರೀಕ್ಷಿಸುತ್ತಿರುವಾಗ ಅದು ಏಕೆ ಹೊಲಸು ಹಣ್ಣು ನೀಡಿತು ?

5ನನ್ನ ತೋಟವನ್ನು ನಾನು ಏನು ಮಾಡುವೆನೆಂದು ನಿಮಗೆ ಈಗ ತಿಳಿಸುತ್ತೇನೆ ಕೇಳಿರಿ, ಅದರ ಬೇಲಿಯನ್ನು ಕಿತ್ತುಹಾಕುವೆನು.

ಅದನ್ನು ದನಗಳು ಮೇಯುವುದಕ್ಕೆ ಬಿಡುವೆನು, ಅದು ಏಕೆ ಕೆಟ್ಟಹಣ್ಣು ಕೊಟ್ಟಿತು ? ನಾನು ಬೇಲಿಯಗೋಡೆಗಳನ್ನು ಕೆಡವಿ ತುಳಿದಾಟಕ್ಕೆ ದಾರಿಮಾಡಿಕೊಟ್ಟು ಹಾಳುಮಾಡುವೆನು.

6ಯಾರೂ ಇದನ್ನು ಕತ್ತರಿಸಿ ಅಗೆತ ಮಾಡುವುದಿಲ್ಲ.

ಅದರಲ್ಲಿ ಮುಳ್ಳು, ಕಳೆ ಬೆಳೆಯುವವು ಯಾರು ಶುದ್ಧಮಾಡುವುದಿಲ್ಲ.

ಅದರ ಮೇಲೆ ಮಳೆ ಸುರಿಸಬಾರದೆಂದು ಮೇಘಗಳಿಗೆ ಅಪ್ಪಣೆ ಕೊಡುವೆನು.

7ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆತನ.

ಯೆಹೋವನನ ಜನರು ಆತನ ಪ್ರಿಯವಾದ ಗಿಡಗಳು. ಆತನು ನ್ಯಾಯವನ್ನು ನಿರೀಕ್ಷಿಸುತ್ತಿರುವಾಗ ಆಹಾ ಆತನಿಗೆ ಸಿಕ್ಕಿದ್ದು ನರಹತ್ಯೆ. ನೀತಿಗಾಗಿ, ಧರ್ಮಕ್ಕಾಗಿ ನಿರೀಕ್ಷಿಸುತ್ತಿರುವಾಗ ಅದರಬದಲು ದೊರಕಿದ್ದು ಅಧರ್ಮ, ಸಹಾಯಕ್ಕಾಗಿ ಬೇಡಿಕೆ. (ULB)

###ಭಾಷಾಂತರ ಕೌಶಲ್ಯಗಳು.

ನಿಮ್ಮ ಓದುಗರು ಇಂತಹ ವಿಸ್ತಿರಿಸಿದ ರೂಪಕಗಳನ್ನು ಮೂಲಭಾಷೆಯ ಓದುಗರು ಅರ್ಥಮಾಡಿಕೊಂಡಂತೆ ಅರ್ಥಮಾಡಿಕೊಂಡರೆ ಇದನ್ನು ಉಳಿಸಿಕೊಳ್ಳಿ. ಅದಾಗದಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ತಂತ್ರಗಳನ್ನು ನೋಡಿ.

  1. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ವಾಕ್ಯಭಾಗದಲ್ಲಿರುವ ಚಿತ್ರಣನ್ನು ವಾಚ್ಯವಾಗಿ ತಿಳಿದುಕೊಳ್ಳುವುದಾದರೆ ಉಪಮಾ ಅಲಂಕಾರದಲ್ಲಿ "ಅಂತೆ "/ "ಹಾಗೆ" ಎಂಬ ಉಪಮಾವಾಚಕ ಬಳಸಿ ತಿಳಿಸಿ. ಇಂತಹ ಪ್ರಯತ್ನ ಮೊದಲ 2 - 3 ವಾಕ್ಯಗಳಲ್ಲಿ ಮಾಡಿದರೆ ಸಾಕು, ಉಳಿದವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
  2. ಭಾಷಾಂತರಿಸುತ್ತಿರುವ ಭಾಷೆಯ ಜನರು ಚಿತ್ರಣನ್ನು ಅರ್ಥಮಾಡಿಕೊಳ್ಳದಿದ್ದರೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸಿ.
  3. ಇಷ್ಟಾದರೂ ಅವರು ಅರ್ಥಮಾಡಿಕೊಳ್ಳದಿದ್ದರೆ ಸರಳವಾಕ್ಯ ಬಳಸಿ ಹೇಳಿ.

ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ವಾಕ್ಯಭಾಗದಲ್ಲಿರುವ ಚಿತ್ರಣನ್ನು ವಾಚ್ಯವಾಗಿ ತಿಳಿದುಕೊಳ್ಳುವುದಾದರೆ ಉಪಮಾ ಅಲಂಕಾರದಲ್ಲಿ "ಅಂತೆ "/ "ಹಾಗೆ" ಎಂಬ ಉಪಮಾವಾಚಕ ಬಳಸಿ ತಿಳಿಸಿ. ಇಂತಹ ಪ್ರಯತ್ನ ಮೊದಲ 2 - 3 ವಾಕ್ಯಗಳಲ್ಲಿ ಮಾಡಿದರೆ ಸಾಕು, ಉಳಿದವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ದಾ.ಕೀ. 23:1-2 ಉದಾಹರಣೆ ನೋಡಿ.

ಯೆಹೋವನು ನನ್ನ ಕುರುಬನು ; ನನಗೆ ಯಾವ ಕೊರತೆ ಇಲ್ಲ. ಆತನು ನನ್ನನ್ನು ಹಸಿರು ಗಾವಲುಗಳಲ್ಲಿ ತಂಗಿಸುತ್ತಾನೆ ; ಆತನು ನನ್ನನ್ನು ವಿಶ್ರಾಂತಿಕರವಾದ ನೀರುಗಳ ಬಳಿಗೆ ನಡೆಸುತ್ತಾನೆ . (ULB)

ಇವುಗಳನ್ನು ಹೀಗೆ ಭಾಷಾಂತರಿಸಬಹುದು.

"ಯೆಹೋವನು ನನಗೆ ಕುರುಬನಂತಿದ್ದಾನೆ,ನನಗೇನೂ ಕೊರತೆ ಬರುವುದಿಲ್ಲ.a ಒಳ್ಳೇ ಕುರುಬನಂತೆ ತನ್ನ ಕುರಿಗಳನ್ನು ಹಸಿರು ಹುಲ್ಲು ಗಾವಲುಗಳಲ್ಲಿ ಉಳಿದುಕೊಳ್ಳಲು ಮತ್ತು ಜೀವಕರವಾದ ನೀರಿನ ಬಳಿಯಲ್ಲಿ ನೆಮ್ಮದಿಯಿಂದ ಇರುವಂತೆ ಮಾಡುತ್ತಾನೆ. ಯೆಹೋವನು ನನ್ನನ್ನು ನೆಮ್ಮದಿಯಿಂದ ಇರಲು ಸಹಾಯಮಾಡುತ್ತಾನೆ.

  1. ಭಾಷಾಂತರವಾಗುತ್ತಿರುವ ಭಾಷೆಯ ಓದುಗರು ಇಂತಹ ಚಿತ್ರಣನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ಚಿತ್ರಣ ಎಂದರೆ ಏನು ಎಂದು ತಿಳಿಸಿ, ಅರ್ಥವಾಗುವಂತೆ ತಿಳಿಸಬೇಕು.

ನನ್ನ ಪ್ರಿಯನಿಗೆ ಫಲವತ್ತಾದ ಬೆಟ್ಟದಮೇಲೆ ದ್ರಾಕ್ಷಿತೋಟಇತ್ತು. ಅವನು ಅದನ್ನು ಚೆನ್ನಾಗಿ ಅಗೆದು ಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಉತ್ತಮ ತಳಿಯ < u>ದ್ರಾಕ್ಷಿ ಸಸಿಗಳನ್ನು ಆಯ್ಕೆಮಾಡಿತಂದು ನೆಟ್ಟನು. ಅವನು ತೋಟದ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿದನು ಅದನ್ನು ಮತ್ತು ಒಂದು ದ್ರಾಕ್ಷಾರಸ ತೆಗೆಯುವ ಗಾಣ ಮತ್ತು ತೊಟ್ಟಿಯನ್ನು ಕಟ್ಟಿಸಿದನು s. ಆ ದ್ರಾಕ್ಷಿ ತೋಟದಿಂದ ಉತ್ತಮ ರುಚಿಯಾದ ಹಣ್ಣುಗಳನ್ನು ಪಡೆಯಲು ನಿರೀಕ್ಷಿಸುತ್ತಿದ್ದನುಆದರೆ. ಅದು ಕೆಟ್ಟಹಣ್ಣುಗಳನ್ನು ನೀಡಿತು.(ಯೆಶಾಯ 5:1-2 ULB)

ಅವುಗಳನ್ನು ಹೀಗೂ ಭಾಷಾಂತರಿಸಬಹುದು.

ನನಗೆ ಪ್ರಿಯನಾದವನಿಗೆ ದ್ರಾಕ್ಷಿತೋಟವೊಂದು ಫಲವತ್ತಾದ ಗುಡ್ಡದ ಮೇಲೆ ಇತ್ತು ಅವನು ಆ ತೋಟವನು ಚೆನ್ನಾಗಿ ಅಗೆದುಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಹಸನು ಮಾಡಿ ಅತ್ಯುತ್ತಮವಾದ ದ್ರಾಕ್ಷಿ ಸಸಿಗಳನ್ನು ಅದರಲ್ಲಿ ನೆಟ್ಟನು. ಅವನು ಆ ತೋಟದ ಮಧ್ಯದಲ್ಲಿ ಒಂದು ಗಂಟೆಗೋಪುರ ಬುರುಜನ್ನು ಕಟ್ಟಿಸಿದನು ಅದರೊಂದಿಗೆ ಒಂದು ದ್ರಾಕ್ಷಾರಸ ತೆಗೆಯುವ ತೊಟ್ಟಿಯನ್ನು ಕಟ್ಟಿಸಿದನು. ದ್ರಾಕ್ಷಿ ಬಳ್ಳಿಗಳು ಒಳ್ಳೆ ಹಣ್ಣು ಕೊಡುತ್ತವೆ ಎಂದು ಕಾಯುತ್ತಿರಲು ಆ ಬಳ್ಳಿಗಳು ದ್ರಾಕ್ಷಾರಸ. ತೆಗೆಯುವುದಕ್ಕೆ ಯೋಗ್ಯವಲ್ಲದ ಹಣ್ಣುಗಳನ್ನು ಕೊಟ್ಟವು."

  1. ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ಇನ್ನೂ ಅರ್ಥ ಮಾಡಿಕೊಳ್ಳಲು ಅಸಮರ್ಥರಾದರೆ ಸರಳವಾಗಿ ಅರ್ಥವಾಗುವಂತೆ ಹೇಳಿ. ಯೆಹೋವನು ನನ್ನ ಕುರುಬನು ; ನಾನು ಕೊರತೆ ಪಡೆನು.** (ದಾ.ಕೀ. 23:1 ULB)
  • "ಕುರುಬನು ತನ್ನ ಕುರಿಗಳನ್ನು ಹೇಗೆ ಸಂರಕ್ಷಿಸುತ್ತಾನೋ ಹಾಗೆ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ.ನನಗೆ ಯಾವ ಕೊರತೆಯೂ ಉಂಟಾಗುವುದಿಲ್ಲ.

ಸೇನಾಧೀಶ್ವರನಾದಯೆಹೋವನ ದ್ರಾಕ್ಷಿ ತೋಟವುಇಸ್ರಾಯೇಲರ ಮನೆತನ. ಯೆಹೂದದ ಜನವೋ ಆತನಿಗೆ ಇಷ್ಟವಾದ ಗಿಡ. ಆತನು ಉತ್ತಮ ದ್ರಾಕ್ಷಾರಸವನ್ನು ನಿರೀಕ್ಷಿಸಿದ್ದನು, ಆದರೆ ಅವನಿಗೆ ಸಿಕ್ಕಿದ್ದು ನರಹತ್ಯೆ, ನೀತಿ, ಧರ್ಮವನ್ನು ನಿರೀಕ್ಷಿಸಿದಾಗ ದೊರೆತದ್ದು ಸಹಾಯಕ್ಕಾಗಿ ಅರಚಾಟ. (ಯೆಶಾಯ 5:7 ULB)

ಇದನ್ನು ಹೀಗೂ ಭಾಷಾಂತರಿಸಬಹುದು

ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿ ತೋಟವು ಇಸ್ರಾಯೇಲರ ಮನೆತನವನ್ನು ಪ್ರತಿನಿಧಿ ಸುತ್ತದೆ ಯೆಹೂದದ ಜನರು ಆತನಿಗೆ ಇಷ್ಟವಾದ ಗಿಡಗಳಂತೆ ಇದ್ದಾರೆ. ಆತ ತೋಟದಿಂದ ಉತ್ತಮ ದ್ರಾಕ್ಷಾರಸವನ್ನು ನಿರೀಕ್ಷಿಸುತ್ತಿದ್ದನು ಆದರೆ ಆತನಿಗೆ ದೊರೆತದ್ದು ನರಹತ್ಯೆ ಎಂಬ ಕೆಟ್ಟಹಣ್ಣು. ನೀತಿ, ಧರ್ಮ ನಿರೀಕ್ಷಿಸಿದವರಿಗೆ ನೋವಿನ ವ್ಯರ್ಥ ಅರಚಾಟ.

ಅಥವಾ

  • ಕೆಟ್ಟಹಣ್ಣನ್ನು ನೀಡಿದ ತೋಟದ ಬಗ್ಗೆ ತೋಟಗಾರನು ಹೇಗೆ ಯಾವ ಕಾಳಜಿಯೂ ವಹಿಸದೆ ಇರುತ್ತಾನೋ ಹಾಗೆ,
  • ಯೆಹೋವನು ಇಸ್ರಾಯೇಲ ಮತ್ತು ಯೆಹೂದದ ಜನರನ್ನು ಸಂರಕ್ಷಿಸುವುದನ್ನು ನಿಲ್ಲಿಸಿಬಿಡುವನು
  • ಏಕೆಂದರೆ ಅವರು ನ್ಯಾಯಯುತವಾಗಿ ಮಾಡಬೇಕಾದುದನ್ನು ಮಾಡಲಿಲ್ಲ. .
  • ಆತನು ಉತ್ತಮ ರುಚಿಯಾದ ದ್ರಾಕ್ಷಾರಸ ನಿರೀಕ್ಷಿಸುತ್ತಿದ್ದ ದರೆ ಆತನಿಗೆ ದೊರೆತದ್ದು ನರಹತ್ಯೆ.
  • ನೀತಿ, ಧರ್ಮದ ಬದಲು ದೊರೆತದ್ದು ಸಹಾಯಕ್ಕಾಗಿ ಕೂಗು.