translationCore-Create-BCS_.../translate/figs-ellipsis/01.md

12 KiB

ವಿವರಣೆ

ಮಾತನಾಡುವವನು ಅಥವಾ ಬರಹಗಾರನು ವಾಕ್ಯದಲ್ಲಿ ಒಂದು ಅಥವಾ ಹೆಚ್ಚು ಪದಗಳನ್ನು ಬಿಟ್ಟು ಹೋಗುತ್ತಾನೆ, ಅದು ಸಾಮಾನ್ಯವಾಗಿ ಪೂರ್ಣ ವಾಕ್ಯವಾಗಿರುತ್ತದೆ ಹಾಗೆ ಘಟಿಸುವುದೇ ಪದಲೋಪವಾಗಿದೆ. ಕೇಳುಗರು ಅಥವಾ ಓದುಗರು ಅದರಲ್ಲಿರುವ ಪದಗಳನ್ನು ಕೇಳುವಾಗ ಅಥವಾ ಓದುವಾಗ ಬಿಟ್ಟು ಹೋದ ಪದವನ್ನು ತಮ್ಮ ಮನಸ್ಸಿನಲ್ಲಿ ತುಂಬಿಸಿ ಅದನ್ನು ಅರ್ಥ ಮಾಡಿಕೊಳ್ಳುವರು ಎಂದು ಮಾತನಾಡುವವನು ಅಥವಾ ಬರಹಗಾರನು ತಿಳಿದುಕೊಂಡು ಅವನು ಹಾಗೆ ಮಾಡುತ್ತಾನೆ. ಉದಾಹರಣೆ:

.. ದುಷ್ಟರು ನ್ಯಾಯವಿಚಾರಣೆಯಲ್ಲೂ, ಪಾಪತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವುದಿಲ್ಲ." (ಕೀರ್ತನೆ 1:5)

ಈ ವಾಕ್ಯದಲ್ಲಿ ಪದಲೋಪವಾಗಿದೆ ಏಕೆಂದರೆ "ದುಷ್ಟರು ನ್ಯಾಯವಿಚಾರಣೆಯಲ್ಲೂ" ಎಂಬ ವಾಕ್ಯಭಾಗವು ಅಪೂರ್ಣವಾಗಿದೆ. ದುಷ್ಟರು ನ್ಯಾಯವಿಚಾರಣೆಯಲ್ಲಿ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ನಂತರದ ಉಪವಾಕ್ಯದ ಸನ್ನಿವೇಶದಿಂದ ಕ್ರಿಯೆಯನ್ನು ತೆಗೆದುಕೊಂಡು ಅದನ್ನು ಅದರಲ್ಲಿ ತುಂಬಿಸಿ ಶ್ರೋತೃ ಅದನ್ನು ಅರ್ಥಮಾಡಿಕೊಳ್ಳಬಲ್ಲ ಎಂದು ಮಾತನಾಡುವವನು ಭಾವಿಸುತ್ತಾನೆ. ಕ್ರಿಯೆಯನ್ನು ತುಂಬಿಸಿರುವ ಸಂಪೂರ್ಣ ವಾಕ್ಯವು ಹೀಗಿರುತ್ತದೆ:

…ದುಷ್ಟರು ನ್ಯಾಯವಿಚಾರಣೆಯಲ್ಲಿ ನಿಲ್ಲುವುದಿಲ್ಲ.

ಎರಡು ರೀತಿಯ ಪದಲೋಪಗಳಿವೆ.

  1. ಸನ್ನಿವೇಶದಿಂದ ಬಿಟ್ಟುಬಿಟ್ಟ ಪದ ಅಥವಾ ಪದಗಳನ್ನು ಓದುಗನು ಪೂರೈಸಬೇಕಾದಾಗ ಸಾಪೇಕ್ಷ ಪದಲೋಪ ಸಂಭವಿಸುತ್ತದೆ. ಸಾಮಾನ್ಯವಾಗಿ ಮೇಲಿನ ಉದಾಹರಣೆಯಲ್ಲಿರುವಂತೆ ಈ ಪದವು ಹಿಂದಿನ ವಾಕ್ಯದಲ್ಲಿರುತ್ತದೆ.
  2. ಬಿಟ್ಟುಬಿಟ್ಟ ಪದ ಅಥವಾ ಪದಗಳು ಸನ್ನಿವೇಶದಲ್ಲಿ ಇಲ್ಲದಿದ್ದಾಗ ಸಂಪೂರ್ಣ ಪದಲೋಪ ಸಂಭವಿಸುತ್ತದೆ, ಆದರೆ ಈ ಸಾಮಾನ್ಯ ಬಳಕೆಯಿಂದ ಅಥವಾ ಪರಿಸ್ಥಿತಿಯ ಸ್ವರೂಪದಿಂದ ಓದುಗರು ಕಾಣೆಯಾದದ್ದನ್ನು ಪೂರೈಸುವ ನಿರೀಕ್ಷೆಯಿರುವ ಭಾಷೆಯಲ್ಲಿ ನುಡಿಗಟ್ಟುಗಳು ಸಾಕಷ್ಟು ಸಾಮಾನ್ಯವಾಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಓದುಗರು ಅಪೂರ್ಣವಾಕ್ಯಗಳನ್ನು ಅಥವಾ ನುಡಿಗಟ್ಟುಗಳನ್ನು ನೋಡುವಾಗ ಬರಹಗಾರನು ಅವರು ಭರ್ತಿ ಮಾಡಬೇಕೆಂದು ಬಯಸುವ ಬಿಟ್ಟುಹೋದ ಮಾಹಿತಿಯನ್ನು ತಿಳಿದುಕೊಳ್ಳದಿರಬಹುದು. ಅಥವಾ ಓದುಗರು ಮಾಹಿತಿಯು ಕಾಣೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಮೂಲ ಓದುಗರು ತಿಳಿದುಕೊಂಡ ಹಾಗೆ ಸತ್ಯವೇದದ ಮೂಲ ಭಾಷೆ, ಸಂಸ್ಕೃತಿ ಅಥವಾ ಪರಿಸ್ಥಿತಿ ತಿಳಿದಿಲ್ಲದ ಕಾರಣ ಯಾವ ಮಾಹಿತಿ ಕಾಣೆಯಾಗಿದೆ ಎಂದು ಅವರಿಗೆ ತಿಳಿಯದಿರಬಹುದು. ಈ ಸಂದರ್ಭದಲ್ಲಿ, ಅವರು ತಪ್ಪು ಮಾಹಿತಿಯನ್ನು ಭರ್ತಿ ಮಾಡಬಹುದು. ಅಥವಾ ಓದುಗರು ತಮ್ಮ ಭಾಷೆಯಲ್ಲಿ ಪದಲೋಪವನ್ನು ಒಂದೇ ರೀತಿಯಲ್ಲಿ ಬಳಸದಿದ್ದರೆ ಪದಲೋಪವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಸಾಪೇಕ್ಷ ಪದಲೋಪ

ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆಯೂ ಮತ್ತು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆಯೂ ಮಾಡುತ್ತಾನೆ (ಕೀರ್ತನೆ 29:6 ULT)

ಬರಹಗಾರನು ಕಡಿಮೆ ಪದಗಳನ್ನು ಬಳಸಿ ಒಳ್ಳೆ ಪದ್ಯ ಬರೆಯಲು ಇಚ್ಛಿಸುತ್ತಾನೆ. ಮಾಹಿತಿಯನ್ನು ಭರ್ತಿಮಾಡಿರುವ ಪೂರ್ಣವಾದ ವಾಕ್ಯವು ಹೀಗಿರುತ್ತದೆ.

ಆತನು ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆ ಮಾಡುತ್ತಾನೆ ಮತ್ತು ಆತನು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆ ಕುಪ್ಪಳಿಸುವಂತೆ ಮಾಡುತ್ತಾನೆ.

ಆದರೆ ನಾವು ತೊಂದರೆಗೀಡಾಗಿದ್ದರೆ ಅದು, ನಿಮ್ಮ ಆದರಣೆ ಮತ್ತು ರಕ್ಷಣೆಗಾಗಿ; ನಾವು ಆದರಣೆ ಹೊಂದಿದ್ದರೆ ಅದು, ನಿಮ್ಮ ಆದರಣೆಗಾಗಿ,… (2 ಕೊರಿಂಥ 1:6)

ಈ ವಾಕ್ಯಗಳ ಎರಡನೇ ಭಾಗಗಳಲ್ಲಿ ಓದುಗರು ಅರ್ಥಮಾಡಿಕೊಳ್ಳಬೇಕಾದ ಮಾಹಿತಿಯನ್ನು ಮೊದಲ ಭಾಗಗಳಿಂದ ಭರ್ತಿ ಮಾಡಬಹುದು:

ಆದರೆ ನಾವು ತೊಂದರೆಗೀಡಾಗಿದ್ದರೆ, ನಿಮ್ಮ ಆದರಣೆ ಮತ್ತು ರಕ್ಷಣೆಗಾಗಿ ನಾವು ತೊಂದರೆಗೀಡಾಗಿದ್ದೇವೆ; ನಾವು ಆದರಣೆ ಹೊಂದಿದ್ದರೆ, ನಿಮ್ಮ ಆದರಣೆಗಾಗಿ ನಾವು ಆದರಣೆ ಹೊಂದಿದ್ದೇವೆ,…

ಸಂಪೂರ್ಣ ಪದಲೋಪ

...ಕುರುಡನಾದವನು ಹತ್ತಿರ ಬಂದಾಗ ಯೇಸು ಅವನನ್ನು, "ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ?" ಎಂದು ಕೇಳಿದನು. ಅದಕ್ಕೆ ಅವನು "ಕರ್ತನೇ, ನನಗೆ ಕಣ್ಣಿನ ದೃಷ್ಟಿ ಬರಬೇಕು" ಎಂದು ಹೇಳಿದನು. (ಲೂಕ 18:40-41 ULT)

ಆ ಕುರುಡನು ಅಪೂರ್ಣವಾಕ್ಯಗಳ ಮೂಲಕ ಉತ್ತರಿಸುತ್ತಾನೆ ಏಕೆಂದರೆ ಅವನು ಯೇಸುವಿನ ಮುಂದೆ ವಿನಯದಿಂದ ಇದ್ದು ಸ್ವಸ್ಥತೆಯನ್ನು ನೇರವಾಗಿ ಕೋರಲು ಬಯಸಲಿಲ್ಲ. ಯೇಸು ಅವನನ್ನು ಗುಣಪಡಿಸಿದರೆ ಮಾತ್ರವೇ ಅವನಿಗೆ ಕಣ್ಣಿನ ದೃಷ್ಟಿ ಸಿಗುವುದು ಎಂಬುದನ್ನು ಯೇಸು ಅರ್ಥಮಾಡಿಕೊಳ್ಳುವನು ಎಂಬುದು ಅವನಿಗೆ ತಿಳಿದಿತ್ತು. ಪೂರ್ಣವಾದ ವಾಕ್ಯವು ಹೀಗಿರುತ್ತದೆ:

“ಕರ್ತನೇ, ನನ್ನ ದೃಷ್ಟಿಯನ್ನು ಪಡೆದುಕೊಳ್ಳುವಂತೆ ನೀನು ನನ್ನನ್ನು ಗುಣಪಡಿಸಬೇಕೆಂದು ನಾನು ಬಯಸುತ್ತೇನೆ.”

ತೀತನಿ‌ಗೆ… ತಂದೆಯಾದ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಕಡೆಯಿಂದ ಕೃಪೆ ಮತ್ತು ಶಾಂತಿ. (ತೀತ 1:4 ULT)

ಆಶೀರ್ವಾದ ಅಥವಾ ಹಾರೈಕೆಯ ಬಯಸುವ ಈ ಸಾಮಾನ್ಯ ರೀತಿಯನ್ನು ಓದುಗನು ಅರಿತುಕೊಳ್ಳುತ್ತಾನೆ ಎಂದು ಬರಹಗಾರನು ಊಹಿಸಿಕೊಳ್ಳುತ್ತಾನೆ, ಆದ್ದರಿಂದ ಅವನು ಪೂರ್ಣ ವಾಕ್ಯವನ್ನು ಸೇರಿಸುವ ಅಗತ್ಯವಿಲ್ಲ, ಪೂರ್ಣವಾದ ವಾಕ್ಯ ಹೀಗಿರುತ್ತದೆ:

ತೀತನಿ‌ಗೆ… ತಂದೆಯಾದ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಕಡೆಯಿಂದ ಕೃಪೆ ಮತ್ತು ಶಾಂತಿ ದೊರಕಲಿ.

ಭಾಷಾಂತರದ ಕಾರ್ಯತಂತ್ರಗಳು

ಈ ಪದಲೋಪಗಳು ಸಹಜವಾಗಿ ಸರಿಯಾದ ಅರ್ಥಕೊಡುವ ಪದಗಳಾಗಿ ನಿಮ್ಮ ಭಾಷೆಯಲ್ಲಿ ಬಳಕೆಯಾಗುವಂತಿದ್ದರೆ ಅದನ್ನು ಬಳಸಿಕೊಳ್ಳಿ ಇಲ್ಲದಿದ್ದರೆ, ಇಲ್ಲೊಂದು ಆಯ್ಕೆಯಿದೆ:

  1. ಅಪೂರ್ಣವಾದ ನುಡಿಗಟ್ಟು ಅಥವಾ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಪದಗಳನ್ನು ಸೇರಿಸುವುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಅಪೂರ್ಣವಾದ ನುಡಿಗಟ್ಟು ಅಥವಾ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಪದಗಳನ್ನು ಸೇರಿಸುವುದು.

...ದುಷ್ಟರು ನ್ಯಾಯವಿಚಾರಣೆಯಲ್ಲೂ, ಪಾಪತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವುದಿಲ್ಲ. (ಕೀರ್ತನೆ1:5)

...ದುಷ್ಟರು ನ್ಯಾಯವಿಚಾರಣೆಯಲ್ಲಿ ನಿಲ್ಲುವುದಿಲ್ಲ ಮತ್ತು ಪಾಪಾತ್ಮರು ನೀತಿವಂತರ ಸಭೆಯಲ್ಲಿ ನಿಲ್ಲಲು ಸಾಧ್ಯವಿಲ್ಲ.

...ಕುರುಡನಾದವನು ಹತ್ತಿರ ಬಂದಾಗ ಯೇಸು ಅವನನ್ನು, "ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ?" ಎಂದು ಕೇಳಿದನು. ಅದಕ್ಕೆ ಅವನು "ಕರ್ತನೇ, ನನಗೆ ಕಣ್ಣಿನ ದೃಷ್ಟಿ ಬರಬೇಕು" ಎಂದು ಹೇಳಿದನು. (ಲೂಕ 18:40-41)

... ಕುರುಡನು ಯೇಸುವಿನ ಹತ್ತಿರ ಬಂದಾಗ ಯೇಸು ಅವನನ್ನು. "ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ? ಎಂದು ಕೇಳಿದನು. ಅದಕ್ಕೆ ಅವನು,"ಕರ್ತನೇ, ನೀನು ನನ್ನನ್ನು ಸ್ವಸ್ಥಮಾಡು ಇದರಿಂದ ನನಗೆ ಕಣ್ಣಿನ ದೃಷ್ಟಿ ಬರಬಹುದು ಎಂದು ಹೇಳಿದನು.

ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆಯೂ ಮತ್ತು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆಯೂ ಮಾಡುತ್ತಾನೆ (ಕೀರ್ತನೆ 29:6)

ಆತನು ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆ ಮಾಡುತ್ತಾನೆ ಮತ್ತು ಆತನು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆ ಕುಪ್ಪಳಿಸುವಂತೆ ಮಾಡುತ್ತಾನೆ.