translationCore-Create-BCS_.../translate/figs-activepassive/01.md

77 lines
14 KiB
Markdown
Raw Permalink Blame History

This file contains invisible Unicode characters

This file contains invisible Unicode characters that are indistinguishable to humans but may be processed differently by a computer. If you think that this is intentional, you can safely ignore this warning. Use the Escape button to reveal them.

ಕೆಲವು ಭಾಷೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳು ಇವೆ. ಕರ್ತರಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಮಾಡುತ್ತಾನೆ. ಕರ್ಮಣಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವನಾಗಿರುತ್ತಾನೆ. ಇಲ್ಲಿ ಕರ್ತೃಪದಕ್ಕೆ ಗುರುತಿಸಿರುವ ಕೆಲವು ಉದಾಹರಣೆಗಳಿವೆ.
* ಕರ್ತರಿ ಪ್ರಯೋಗ: **ನನ್ನ ತಂದೆ** ಮನೆಯನ್ನು 2010 ರಲ್ಲಿ ಕಟ್ಟಿಸಿದರು.
* ಕರ್ಮಣಿ ಪ್ರಯೋಗ: 2010 ರಲ್ಲಿ ನಮ್ಮ ತಂದೆಯಿಂದ **ಮನೆ ಕಟ್ಟಲ್ಪಟ್ಟಿತು**.
ಭಾಷಾಂತರ ಮಾಡುವವರ ಭಾಷೆಯಲ್ಲಿ ಕರ್ಮಣಿ ಪ್ರಯೋಗದ ವಾಕ್ಯಗಳು ಇಲ್ಲದಿದ್ದರೆ ಸತ್ಯವೇದದಲ್ಲಿ ಕಂಡುಬರುವ ಕರ್ಮಣಿ ಪ್ರಯೋಗ ವಾಕ್ಯಗಳನ್ನು ಹೇಗೆ ಭಾಷಾಂತರ ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಇತರ ಭಾಷಾಂತರಗಾರರು ಕರ್ತರಿ ವಾಕ್ಯಗಳು ಮತ್ತು ಕರ್ಮಣಿ ವಾಕ್ಯಗಳನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಎಂದು ತಿಳಿದಿರಬೇಕು.
### ವಿವರಣೆ
ಕೆಲವು ಭಾಷೆಯಲ್ಲಿ ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳ ವಾಕ್ಯಗಳು ಇವೆ.
* **ಕರ್ತರಿ** ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಮಾಡುತ್ತಾನೆ ಮತ್ತು ಅದನ್ನು ಯಾವಾಗಲೂ ನಮೂದಿಸುವುದಿಲ್ಲ.
* **ಕರ್ಮಣಿ** ಪ್ರಯೋಗದಲ್ಲಿ ಕರ್ತೃವಿಗೆ ಕ್ರಿಯೆಯನ್ನು ಮಾಡಲಾಗುತ್ತದೆ. ಇಲ್ಲಿ ಕ್ರಿಯೆ ಮಾಡುವ ವ್ಯಕ್ತಿಯ ಬಗ್ಗೆ *ಯಾವಾಗಲೂ* ನಮೂದಿಸುವುದಿಲ್ಲ.
ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳಲ್ಲಿ ಕರ್ತೃವನ್ನು ಗುರುತಿಸಲಾಗಿದೆ.
* **ಕರ್ತರಿ**: **ನನ್ನ ತಂದೆ** ಈ ಮನೆಯನ್ನು 2010 ರಲ್ಲಿ ಕಟ್ಟಿಸಿದರು.
* **ಕರ್ಮಣಿ**: **ಈ ಮನೆಯು** 2010 ರಲ್ಲಿ ನನ್ನ ತಂದೆಯಿಂದ ಕಟ್ಟಿಸಲ್ಪಟ್ಟಿತು.
* **ಕರ್ಮಣಿ**: **ಈ ಮನೆ** 2010 ರಲ್ಲಿ ಕಟ್ಟಲ್ಪಟ್ಟಿತು. (ಇದರಲ್ಲಿ ಕಟ್ಟುವ ಕ್ರಿಯೆ ಯಾರಿಂದ ಆಯಿತು ಎಂದು ತಿಳಿಸಿಲ್ಲ)
#### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
ಎಲ್ಲಾ ಭಾಷೆಗಳು ಕರ್ತರಿ ಪ್ರಯೋಗವನ್ನು ಉಪಯೋಗಿಸುತ್ತವೆ. ಆದರೆ ಕರ್ಮಣಿ ಪ್ರಯೋಗದ ವಾಕ್ಯಗಳು ಕೆಲವು ಭಾಷೆಗಳಲ್ಲಿ ಮಾತ್ರ ಇವೆ, ಇನ್ನು ಕೆಲವು ಭಾಷೆಗಳಲ್ಲಿ ಪ್ರಯೋಗದಲ್ಲಿ ಇರುವುದಿಲ್ಲ. ಕೆಲವು ಭಾಷೆಗಳಲ್ಲಿ ಕರ್ಮಣಿ ಪ್ರಯೋಗವನ್ನು ಕೆಲವೊಂದು ನಿರ್ದಿಷ್ಟ ಉದ್ದೇಶಗಳಿಗಾಗಿ ಉಪಯೋಗಿಸುತ್ತಾರೆ, ಮತ್ತು ಇತರ ಎಲ್ಲಾ ಭಾಷೆಗಳಲ್ಲಿ ಅದೇ ಉದ್ದೇಶಕ್ಕಾಗಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸುವುದಿಲ್ಲ.
#### ಕರ್ಮಣಿ ಪ್ರಯೋಗದ ಉದ್ದೇಶಗಳು
* ಮಾತನಾಡುವವನು ಯಾರಿಗಾಗಿ ಕ್ರಿಯೆಯನ್ನು ಮಾಡಲಾಯಿತ್ತೋ ಆ ವ್ಯಕ್ತಿಯ ಅಥವಾ ವಸ್ತುವಿನ ಬಗ್ಗೆ ಹೇಳುತ್ತಿರುವನೇ ಹೊರತು, ಕ್ರಿಯೆಯನ್ನು ಮಾಡಿದ ವ್ಯಕ್ತಿಯ ಬಗ್ಗೆ ಹೇಳುತ್ತಿಲ್ಲ.
* ಮಾತನಾಡುವವವನು ಯಾರು ಕ್ರಿಯೆ ಮಾಡಿದನೆಂದು ಹೇಳುತ್ತಿಲ್ಲ.
* ಕ್ರಿಯೆ ಮಾಡಿದ ವ್ಯಕ್ತಿ ಯಾರು ಎಂದು ಮಾತನಾಡುವವನಿಗೆ ತಿಳಿದಿರುವುದಿಲ್ಲ.
#### ಕರ್ಮಣಿ ಪ್ರಯೋಗದ ಕುರಿತಾದ ಭಾಷಾಂತರದ ತತ್ವಗಳು
* ಭಾಷಾಂತರಗಾರರ ಭಾಷೆಯಲ್ಲಿ ಕರ್ಮಣಿ ಪ್ರಯೋಗಗಳು ಇಲ್ಲದಿದ್ದರೆ ಆ ವಿಷಯವನ್ನು ವ್ಯಕ್ತಪಡಿಸಲು ಬೇರೊಂದು ರೀತಿಯನ್ನು ಕಂಡುಕೊಳ್ಳಬೇಕು.
* ಭಾಷಾಂತರಗಾರರು ಸತ್ಯವೇದದಲ್ಲಿ ಕರ್ಮಣಿ ಪ್ರಯೋಗಗಳನ್ನು ನಿರ್ದಿಷ್ಟ ವಾಕ್ಯಗಳಲ್ಲಿ ಏಕೆ ಉಪಯೋಗಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ಕೆಲವೊಮ್ಮೆ ಈ ಕರ್ಮಣಿ ಪ್ರಯೋಗಗಳನ್ನು ಇಂತಹ ವಾಕ್ಯಗಳಲ್ಲಿ ಈ ಉದ್ದೇಶಕ್ಕಾಗಿ ಬಳಸಬಹುದೇ ಬೇಡವೇ ಎಂಬುದರ ಬಗ್ಗೆ ಚಿಂತಿಸಬೇಕಿದೆ.
### ಸತ್ಯವೇದದಲ್ಲಿನ ಉದಾಹರಣೆಗಳು
> ಮತ್ತು ಅವರ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೈನಿಕರ ಮೇಲೆ ಬಾಣಗಳನ್ನು ಬಿಟ್ಟರು, ಅರಸನ ಸೇವಕರಲ್ಲಿ ಕೆಲವರು **ಕೊಲ್ಲಲ್ಪಟ್ಟರು**, ಮತ್ತು ಹಿತ್ತೀಯನಾದ ನಿನ್ನ ಸೇವಕ ಊರೀಯನು ಸಹ **ಕೊಲ್ಲಲ್ಪಟ್ಟನು**. (2 ನೇ ಸಮುವೇಲ 11:24 ULT)
ಇದರ ಅರ್ಥ ಶತ್ರುಗಳ ಕಡೆಯ ಬಿಲ್ಲುಗಾರರು ಬಾಣಬಿಟ್ಟು ಅರಸನ ಸೇವಕರನ್ನು ಮತ್ತು ಊರೀಯನನ್ನು ಕೊಂದರು. ಊರೀಯನಿಗೆ ಮತ್ತು ಅರಸನ ಸೇವಕರಿಗೆ ಏನಾಯಿತು ಎಂಬುದು ಗಮನಿಸಬೇಕಾದ ವಿಷಯವಾಗಿದೆಯೇ ಹೊರತು ಯಾರು ಅವರನ್ನು ಕೊಂದರು ಎಂಬುದು ವಿಷಯವಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಅರಸನ ಸೇವಕರ ಮತ್ತು ಊರೀಯನ ಕಡೆಗೆ ಗಮನಹರಿಸುವುದಾಗಿದೆ.
> ಊರಿನ ಜನರು ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಯು **ಕೆಡವಲ್ಪಟ್ಟಿತ್ತು**… (ನ್ಯಾಯಸ್ಥಾಪಕರು 6:28 ULT)
ಆ ಊರಿನ ಜನರು ಬಾಳನ ಯಜ್ಞವೇದಿಗೆ ಏನಾಗಿತ್ತು ಎಂಬುದನ್ನು ಕಂಡರು. ಆದರೆ ಅದನ್ನು ಯಾರು ಕೆಡವಿದರು ಎಂದು ಅವರಿಗೆ ಗೊತ್ತಿರಲಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಆ ಊರಿನ ಜನರ ಅಭಿಪ್ರಾಯದಂತೆ ಘಟನೆಯನ್ನು ತಿಳಿಸುವುದಾಗಿದೆ.
> ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು **ಕಟ್ಟಿಸಿಕೊಂಡು** ಸಮುದ್ರದಲ್ಲಿ **ಹಾಕಿಸಿಕೊಳ್ಳುವುದು** ಅವನಿಗೆ ಒಳ್ಳೆಯದು (ಲೂಕ 17:2 ULT)
ಇದು ಕುತ್ತಿಗೆಗೆ ಬೀಸುವ ಕಲ್ಲು ಕಟ್ಟಿಸಿಕೊಂಡು ಸಮುದ್ರದಲ್ಲಿ ಸಾಯುವ ವ್ಯಕ್ತಿಯ ಸನ್ನಿವೇಶದ ಕುರಿತು ವಿವರಿಸುತ್ತದೆ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಈ ವ್ಯಕ್ತಿಗೆ ಏನಾಯಿತು ಎಂಬುದರ ಕಡೆಗೆ ಗಮನಹರಿಸುವುದಾಗಿದೆ. ಆ ವ್ಯಕ್ತಿಗೆ ಇದನ್ನು ಮಾಡಿದವನು ಯಾರೆಂಬುದು ಮುಖ್ಯವಲ್ಲ.
### ಭಾಷಾಂತರದ ಕಾರ್ಯತಂತ್ರಗಳು
ನೀವು ಭಾಷಾಂತರಿಸುವ ವಾಕ್ಯಭಾಗದಲ್ಲಿರುವ ಪ್ರಕಾರವೇ ನಿಮ್ಮ ಭಾಷೆಯಲ್ಲೂ ಕರ್ಮಣಿ ಪ್ರಯೋಗವನ್ನು ಬಳಸುವುದಾದರೆ, ಕರ್ಮಣಿ ಪ್ರಯೋಗವನ್ನು ಬಳಸಿರಿ. ಕರ್ಮಣಿ ಪ್ರಯೋಗವಿಲ್ಲದೆ ಭಾಷಾಂತರ ಮಾಡಲು ನೀವು ನಿರ್ಧರಿಸಿದೆರೆ ಇಲ್ಲಿ ಕೆಲವು ಭಾಷಾಂತರದ ಕಾರ್ಯತಂತ್ರಗಳು ನಿಮಗಾಗಿ ಕೊಡಲ್ಪಟ್ಟಿವೆ.
1. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಅದೇ ಕ್ರಿಯಾಪದವನ್ನು ಬಳಸಿರಿ ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಅಥವಾ ಯಾವುದು ಎಂದು ಹೇಳಬೇಕು. ಈ ರೀತಿಯ ವಾಕ್ಯ ಮಾಡಿದಾಗ ಯಾವ ವ್ಯಕ್ತಿ ಈ ಕ್ರಿಯೆಯನ್ನು ಪಡೆಯುತ್ತಾನೋ ಅವನ ಕಡೆ ವಿಶೇಷ ಗಮನ ನೀಡಬೆಕು.
2. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಅದೇ ಕ್ರಿಯಾಪದವನ್ನು ಬಳಸಿರಿ ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಅಥವಾ ಯಾವುದು ಎಂಬುದನ್ನು ಹೇಳಬಾರದು. ಅದರ ಬದಲು ಸಾಮಾನ್ಯ ಪದ ಬಳಕೆಯಾದ "ಅವರು" ಅಥವಾ "ಜನರು" ಅಥವಾ "ಯಾರೊಬ್ಬರು" ಎಂದು ಬಳಸಿರಿ.
3. ಬೇರೆ ಕ್ರಿಯಾಪದವನ್ನು ಬಳಸಿರಿ.
### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
(1) ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೋಗಿಸಿರಿ ಮತ್ತು ಯಾರು ಆ ಕ್ರಿಯೆಯನ್ನು ಮಾಡಿದರು ಎಂಬುದನ್ನು ಹೇಳಿರಿ. ನೀವು ಹೀಗೆ ಮಾಡುವುದಾದರೆ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯ ಮೇಲೆ ನಿಮ್ಮ ಗಮನವಿರಬೇಕು.
> ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ತಂದು ಅವನಿಗೆ **ಕೊಡಲಾಗುತ್ತಿತ್ತು.** (ಯೆರೆಮೀಯ 37:21 ULT)
>
> > ಪ್ರತಿದಿನವು ಯೆರೆಮೀಯನಿಗೆ ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಪೇಟೆಯಿಂದ **ಅರಸನ ಸೇವಕರು ತಂದು ಕೊಡುತ್ತಿದ್ದರು**.
(2) ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೋಗಿಸಿರಿ, ಮತ್ತು ಆ ಕ್ರಿಯೆಯನ್ನು ಯಾರು ಮಾಡಿದರು ಎಂದು ಹೇಳಬೇಡಿರಿ. ಇದರ ಬದಲು ಸಾಮಾನ್ಯ ಪದಗಳಾದ "ಅವರು" ಅಥವಾ "ಜನರು" ಅಥವಾ "ಯಾರೊಬ್ಬನು" ಎಂಬುದನ್ನು ಬಳಸಬಹುದು.
> ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು **ಕಟ್ಟಿಸಿಕೊಂಡು** ಸಮುದ್ರದಲ್ಲಿ **ಹಾಕಿಸಿಕೊಳ್ಳುವುದು** ಅವನಿಗೆ ಒಳ್ಳೆಯದು (ಲೂಕ 17:2 ULT)
>
> > ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು **ಅವರು ಕಟ್ಟಿ** ಅವನನ್ನು ಸಮುದ್ರದಲ್ಲಿ **ಬಿಸಾಡಿದರೆ** ಒಳ್ಳೆಯದು.
> > ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು **ಯಾರೊಬ್ಬರು ಕಟ್ಟಿ** ಸಮುದ್ರದಲ್ಲಿ ಬಿಸಾಡಿದರೆ ಒಳ್ಳೆಯದು.
(3) ಕರ್ತರಿ ಪ್ರಯೋಗದ ವಾಕ್ಯದಲ್ಲಿ ಬೇರೆ ಬೇರೆ ಕ್ರಿಯಾಪದಗಳನ್ನು ಬಳಸಿರಿ.
> ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ತಂದು ಅವನಿಗೆ **ಕೊಡಲಾಗುತ್ತಿತ್ತು.** (ಯೆರೆಮೀಯ 37:21 ULT)
>
> > ಪ್ರತಿದಿನ ಅವನು ಒಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಬೀದಿಯಿಂದ ಪಡೆಯುತ್ತಿದ್ದನು.