translationCore-Create-BCS_.../checking/vol2-backtranslation-written/01.md

4.9 KiB

ಪೂರಕ ಅನುವಾದಗಳಲ್ಲಿ ಎರಡು ವಿಧಗಳಿವೆ

ಇಂಟರ್ ಲೀನಿಯರ್ (ವಿವಿಧ ಭಾಷೆಗಳಲ್ಲಿ ಪಠ್ಯದ ಪರ್ಯಾಯ ಸಾಲುಗಳನ್ನು ಹೊಂದಿರುವ ಪಠ್ಯ ಕ್ರಮ) ಪೂರಕ ಅನುವಾದ

ಇಂಟರ್ ಲೀನಿಯರ್ ಪೂರಕ ಅನುವಾದದಲ್ಲಿ ಪೂರಕ ಅನುವಾದಕನು ಆ ಪದದ ಕೆಳಗೆ ಉದ್ದೇಶಿತ ಭಾಷಾ ಅನುವಾದದ ಪ್ರತಿಯೊಂದು ಪದಕ್ಕೂ ಅನುವಾದವನ್ನು ಇಡುತ್ತಾನೆ. ಉದ್ದೇಶಿತ ಭಾಷೆಯ ಅನುವಾದದ ಪ್ರತಿಯೊಂದು ಸಾಲಿನ ನಂತರ ವ್ಯಾಪಕ ಸಂಪರ್ಕಿಸುವ ಭಾಷೆಯ ಒಂದು ಸಾಲಿನ ಪಾಠ್ಯಕ್ಕೆ ಕಾರಣವಾಗುತ್ತದೆ. ಈ ರೀತಿಯ ಪೂರಕ ಅನುವಾದದ ಪ್ರಯೋಜನವೆಂದರೆ, ಉದ್ದೇಶಿತ ಭಾಷೆಯ ಪ್ರತಿಯೊಂದು ಪದವನ್ನು ಅನುವಾದ ತಂಡವು ಹೇಗೆ ಅನುಭವಿಸುತ್ತಿದೆ ಎಂಬುವುದನ್ನು ಪರೀಕ್ಷಕನು ಸುಲಭವಾಗಿ ನೋಡಬಹುದು. ಈ ರೀತಿಯ ಪೂರಕ ಅನುವಾದದ ಅನಾನುಕೂಲವೆಂದರೆ, ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪಠ್ಯದ ಸಾಲು ಪ್ರತ್ಯೇಕ ಪದಗಳ ಅನುವಾದದಿಂದ ಕೂಡಿದೆ. ಇದರಿಂದ ಪಠ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಯಿತು, ಮತ್ತು ಪೂರಕ ಅನುವಾದದ ಇತರ ವಿಧಾನಕ್ಕಿಂತ ಅನುವಾದ ಪರೀಕ್ಷಕನ ಮನಸಿನಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಮತ್ತು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ನಾವು ಈ ಕಾರಣದಿಂದಲೇ ಸತ್ಯವೇದ ಅನುವಾದದಲ್ಲಿ ಪದದಿಂದ ಪದ ಅನುವಾದವನ್ನು ಶಿಫಾರಿಸು ಮಾಡುವುದಿಲ್ಲ.

ಉಚಿತ ಪೂರಕ ಅನುವಾದ

ಪೂರಕ ಅನುವಾದಕಾರನು ಉದ್ದೇಶಿತ ಭಾಷೆ ಅನುವಾದದಿಂದ ಪ್ರತ್ಯೇಕ ಜಾಗದಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಅನುವಾದ ಮಾಡುವುದು ಉಚಿತ ಪೂರಕ ಅನುವಾದವಾಗಿದೆ. ಈ ವಿಧಾನದ ಅನಾನುಕೂಲವೆಂದರೆ ಪೂರಕ ಅನುವಾದವು ಉದ್ದೇಶಿತ ಭಾಷಾ ಅನುವಾದಕ್ಕೆ ಸಂಭಂಧಿಸಿಲ್ಲ. ಪೂರಕ ಅನುವಾದಕನು ಸತ್ಯವೇದವನ್ನು ಅನುವಾದಿಸುವಾಗ ಈ ಅನಾನುಕೂಲತೆಯನ್ನು ನಿವಾರಿಸಲು ಸಹಾಯ ಮಾಡಬಹುದು, ಹೇಗೆಂದರೆ, ವಚನ ಸಂಖ್ಯೆ ಮತ್ತು ವಿರಾಮ ಚಿಹ್ನೆಯನ್ನು ಪೂರಕ ಅನುವದಕ್ಕೆ ಸೇರಿಸುವ ಮೂಲಕ ಮಾಡಬಹುದು. ಎರಡು ಅನುವಾದಗಳಲ್ಲಿ ವಚನ ಸಂಖ್ಯೆಗಳನ್ನು ಉಲ್ಲೇಖಿಸುವ ಮೂಲಕ ಮತ್ತು ಸರಿಯಾದ ಸ್ಥಳಗಳಲ್ಲಿ ವಿರಾಮ ಚಿಹ್ನೆಗಳನ್ನು ಎಚ್ಚರಿಕೆಯಿಂದ ಪುನರುತ್ಪಾದಿಸುವ ಮೂಲಕ, ಅನುವಾದ ಪರೀಕ್ಷಕನು ಪೂರಕ ಭಾಷಾಂತರದ ಯಾವ ಭಾಗವನ್ನು ಉದ್ದೇಶಿತ ಭಾಷಾ ಅನುವಾದದ ಯಾವ ಭಾಗವನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಟ್ರ್ಯಾಕ್ ಮಾಡಬಹುದು. ಈ ವಿಧಾನದ ಪ್ರಯೋಜನವೆಂದರೆ ಪೂರಕ ಅನುವಾದವು ವ್ಯಾಪಕ ಸಂಪರ್ಕಿಸು ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಬಳಸಬಹುದು, ಮತ್ತು ಆದ್ದರಿಂದ ಅನುವಾದ ಪರೀಕ್ಷಕನಿಗೆ ಓದಲು ಮತ್ತು ಅರ್ಥಮಾಡಕೊಳ್ಳಲು ಸುಲಭವಾಗಬೇಕು. ವ್ಯಾಪಕ ಸಂಪರ್ಕಿಸುವ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನ ಬಳಸುವಾಗಲೂ, ಪೂರಕ ಅನುವಾದಕಾರನು ಪದಗಳನ್ನು ಅಕ್ಷರಶಃ ಅನುವಾದಿಸಲು ನೆನಪಿಟ್ಟುಕೊಳ್ಳಬೇಕು. ಇದು ಪರೀಕ್ಷಕನಿಗೆ