translationCore-Create-BCS_.../checking/other-methods/01.md

7.3 KiB

ಪರೀಕ್ಷಿಸಲು ಬೇರೆ ವಿಧಾನಗಳು

ಪ್ರಶ್ನಿಸುವುದರ ಜೊತೆಯಲ್ಲಿ, ಅನುವಾದ ಸ್ಪಷ್ಟವಾಗಿದಿಯೋ, ಓದುವುದಕ್ಕೆ ಸುಲಭವಾಗಿದಿಯೋ ಮತ್ತು ಕೇಳುವವರಿಗೆ ಸಹಜವಾಗಿ ಧ್ವನಿಸುತ್ತಿದೆಯೋ ಎಂದು ಪರೀಕ್ಷಿಸಲು ಬೇರೆ ವಿಧಾನಗಳಿವೆ. ಕೆಳಕಂಡ ವಿಧಾನಗಳನ್ನು ನೀವು ಪ್ರಯತ್ನಿಸಬಹುದು:

  • ಪುನಃ ಹೇಳುವ ವಿಧಾನ: ನೀವು, ಅನುವಾದಕರು ಅಥವಾ ಪರೀಕ್ಷಿಸುವವರು, ಒಂದು ಭಾಗವನ್ನು ಅಥವಾ ಕಥೆಯನ್ನು ಓದಬಹುದು ಮತ್ತು ಹೇಳಲ್ಪಟ್ಟ ವಾಕ್ಯಭಾಗವನ್ನು ಬೇರೆಯೊಬ್ಬರು ಪುನಃ ಹೇಳಲು ಹೇಳಿ. ಆ ವ್ಯಕ್ತಿ ಆ ವಾಕ್ಯಭಾಗವನ್ನು ಸುಲಭವಾಗಿ ಪುನಃ ಹೇಳಿದರೆ, ಆ ಭಾಗವು ಸ್ಪಷ್ಟವಾಗಿದೆ ಎಂದರ್ಥ. ಆ ವ್ಯಕ್ತಿ ಹೇಳದೆ ಬಿಟ್ಟಿರುವ ಭಾಗವನ್ನು ಅಥವಾ ತಪ್ಪಾಗಿ ಹೇಳಿರುವ ಭಾಗವನ್ನು, ಅದರ ಅಧ್ಯಾಯ ಮತ್ತು ವಚನದ ಜೊತೆಗೆ ಗುರುತು ಮಾಡಿಕೊಳ್ಳಿರಿ. ಅನುವಾದಕರ ತಂಡದವರು ಅನುವಾದದ ಆ ಭಾಗವನ್ನು ಇನ್ನು ಸ್ಪಷ್ಟವಾಗಿ ಮಾಡಲು ಪುನರಾವರ್ತಿಸಬೇಕಾಗುತ್ತದೆ. ಅನುವಾದದಲ್ಲಿರುವ ರೀತಿಯಲ್ಲಿಯೇ ಬೇರೆ ರೀತಿಯಲ್ಲಿ ಆ ವ್ಯಕ್ತಿ ಹೇಳಿದ್ದರೆ ಅದನ್ನು ಸಹ ಗುರುತು ಮಾಡಿಕೊಳ್ಳಿರಿ. ಅನುವಾದದಲ್ಲಿ ಉಪಯೋಗಿಸಿರುವ ರೀತಿಗಿಂತ ಈ ಇನ್ನು ಸಹಜವಾಗಿರಬಹುದು. ಅನುವಾದದ ತಂಡದವರು ಈ ಪದ್ಧತಿಗಳನ್ನು ಉಪಯೋಗಿಸಿ ಅನುವಾದವನ್ನು ಇನ್ನು ಸಹಜವಾಗಿ ಮಾಡಬಹುದು.

  • ಓದುವ ವಿಧಾನ: ನಿಮ್ಮನ್ನು ಬಿಟ್ಟು ಬೇರೆ ಯಾರಾದರು, ಅನುವಾದಕರು ಅಥವಾ ಪರೀಕ್ಷಿಸುವವರು, ಅನುವಾದದ ಭಾಗವನ್ನು ನಿಮಗಾಗಿ ಓದಬಹುದು ಮತ್ತು ನೀವು ಅದನ್ನು ಕೇಳುತ್ತ ಆ ವ್ಯಕ್ತಿ ಎಲ್ಲಿ ನಿಲ್ಲಿಸಿದನೆಂದು ಅಥವಾ ಎಲ್ಲಿ ತಪ್ಪು ಮಾಡಿದ್ದಾನೆಂದು ಗುರುತು ಮಾಡಿಕೊಳ್ಳಬೇಕು. ಅನುವಾದವನ್ನು ಓದುವುದು ಮತ್ತು ಅರ್ಥ ಮಾಡಿಕೊಳ್ಳುವುದು ಎಷ್ಟು ಸುಲಭ ಅಥವಾ ಎಷ್ಟು ಕಷ್ಟವೆಂದು ಇದು ತೋರಿಸುತ್ತದೆ. ಅನುವಾದದಲ್ಲಿ ಓದುವವನು ಎಲ್ಲಿ ನಿಲ್ಲಿಸಿದನು ಅಥವಾ ಎಲ್ಲಿ ತಪ್ಪು ಮಾಡಿದ್ದನೆಂದು ನೋಡಿರಿ ಮತ್ತು ಅನುವಾದದ ಆ ಭಾಗವು ಯಾಕೆ ಕಷ್ಟಕರವಾಯಿತೆಂದು ಗಮನಿಸಿರಿ. ಅನುವಾದದ ಆ ಭಾಗವನ್ನು ಸುಲಭವಾಗಿ ಓದುವುದಕ್ಕೆ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಅನುವಾದದ ತಂಡದವರು ಅನುವಾದವನ್ನು ಪುನರಾವರ್ತಿಸಬೇಕಾಗಬಹುದು.

  • ಪರ್ಯಾಯ ಅನುವಾದ ನೀಡುವುದು: ಅನುವಾದದ ಕೆಲವು ಭಾಗಗಳಲ್ಲಿ ಮೂಲ ಪದ ಅಥವಾ ಮಾತನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗ ಅನುವಾದದ ತಂಡದವರಿಗೆ ಸಿಗದಿರಬಹುದು. ಅಂತಹ ಸಂಧರ್ಭದಲ್ಲಿ, ಅದನ್ನು ಬೇರೆಯವರು ಹೇಗೆ ಅನುವಾದ ಮಾಡುತ್ತಾರೋ ಎಂದು ಕೇಳಿ ತಿಳಿದುಕೊಳ್ಳಿರಿ. ಮೂಲ ಭಾಷೆ ಅರ್ಥ ಆಗದವರಿಗೆ, ನೀವು ಹೇಳಲು ಪ್ರಯತ್ನಿಸುತ್ತಿರುವ ಸಂಗತಿಗಳನ್ನು ವಿವರಿಸಿರಿ ಮತ್ತು ಅವರು ಹೇಗೆ ಅದನ್ನು ಹೇಳುತ್ತಾರೆಂದು ನೋಡಿರಿ. ಬೇರೆ ಬೇರೆ ಅನುವಾದಗಳು ಒಂದೇ ರೀತಿಯಲ್ಲಿದ್ದರೆ, ಒಂದೇ ಆಲೋಚನೆಯನ್ನು ಹೇಳು ಎರಡು ಅನುವಾದಗಳಲ್ಲಿ ಯಾವ ಪರ್ಯಾಯ ಅನುವಾದ ತುಂಬಾ ಸ್ಪಷ್ಟವಾಗಿದಿಯೋ ಎಂದು ಜನರು ಎನ್ನಿಸಿಕೊಳ್ಳಲು ಅವಕಾಶವನ್ನು ಕೊಡಿರಿ.

  • ಸಮೀಕ್ಷಕನ ಕೊಡುಗೆ: ನೀವು ಗೌರವಿಸುವ ಇತರ ಜನರು ನಿಮ್ಮ ಅನುವಾದವನ್ನು ಓದಲಿ. ಎಲ್ಲಿ ಬದಲಾವಣೆಗಳು ಮಾಡಬಹುದೆಂದು ಗುರುತು ಮಾಡಲು ಅವರಿಗೆ ಹೇಳಿರಿ. ಅತ್ಯುತ್ತಮವಾದ ಪದಗಳಿಗಾಗಿ, ತುಂಬಾ ಸಹಜವಾದ ಮಾತುಗಳಿಗಾಗಿ ಮತ್ತು ಕಾಗುಣಿತಗಳ ಸವರಣೆಗಳನ್ನು ನೋಡಿರಿ.

  • ಚರ್ಚೆ ಗುಂಪುಗಳು: ಅನುವಾದವನ್ನು ಜನರ ಗುಂಪಿನಲ್ಲಿ ಗಟ್ಟಿಯಾಗಿ ಓದಲು ಜನರಿಗೆ ಹೇಳಿರಿ ಮತ್ತು ಸ್ಪಷ್ಟತೆಗಾಗಿ ಪ್ರಶ್ನೆಗಳನ್ನು ಕೇಳುವಂತೆ ಜನರಿಗೆ ಅವಕಾಶ ನೀಡಿರಿ. ಅವರು ಉಪಯೋಗಿಸುವ ಪದಗಳನ್ನು ಗಮನಿಸಿರಿ, ಯಾಕಂದರೆ ಕಠಿಣವಾದ ಸಂಗತಿಗಳನ್ನು ವಿವರಿಸುತ್ತಿರುವಾಗ ಪರ್ಯಾಯ ಪದಗಳು ಮತ್ತು ಪರ್ಯಾಯ ಮಾತುಗಳನ್ನು ಅವರು ಉಪಯೋಗಿಸುವ ಸಾಧ್ಯತೆಗಳಿವೆ ಮತ್ತು ಈ ಪರ್ಯಾಯ ಪದಗಳು ಮತ್ತು ಪರ್ಯಾಯ ಮಾತುಗಳು ಅನುವಾದದಲ್ಲಿ ಉಪಯೋಗಿಸಿದವುಗಳಿಗಿಂತ ಉತ್ತಮವಾಗಿರುತ್ತವೆ. ಅವುಗಳನ್ನು ಅಧ್ಯಾಯ ಮತ್ತು ವಚನದ ಜೊತೆಗೆ ಬರೆದುಕೊಳ್ಳಿರಿ. ಅನುವಾದವನ್ನು ಉತ್ತಮಗೊಳಿಸಲು ಅನುವಾದ ತಂಡದವರು ಇವುಗಳನ್ನು ಉಪಯೋಗಿಸಬಹುದು. ಅನುವಾದದಲ್ಲಿ ಜನರಿಗೆ ಅರ್ಥ ಆಗದ ಭಾಗಗಳನ್ನು ಗುರುತು ಮಾಡಿಕೊಳ್ಳಿರಿ ಯಾಕಂದರೆ ಅನುವಾದಕರ ತಂಡದವರು ಆ ಭಾಗಗಳನ್ನು ಸ್ಪಷ್ಟಮಾಡಬಹುದು.