translationCore-Create-BCS_.../checking/level3-questions/01.md

14 KiB

ಕ್ರಮಬದ್ಧವಾದ ಪರಿಶೀಲನೆಗಾಗಿ ಪ್ರಶ್ನೆಗಳು

ಕ್ರಮಬದ್ಧವಾದ ಪರಿಶೀಲನೆ ಮಾಡುವವರು ಹೊಸ ಅನುವಾದವನ್ನು ಓದುತ್ತಿರುವಾಗ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .

ಅನುವಾದದ ಭಾಗಗಳನ್ನು ನೀವು ಓದಿದನಂತರ ಅಥವಾ ವಾಕ್ಯಭಾಗಗಳ ಮುಖಾಂತರ ಸಮಸ್ಯೆಗಳನ್ನು ಅರಿತನಂತರ ನೀವು ಈ ಪ್ರಶ್ನಗಳಿಗೆ ಉತ್ತರಗಳನ್ನು ಕೊಡಬಹುದು. ಮೊದಲ ಗುಂಪಿನಲ್ಲಿ ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರ “ಇಲ್ಲ” ಎಂದು ಇರುವುದಾದರೆ, ದಯವಿಟ್ಟು ಇನ್ನೂ ಹೆಚ್ಚಾಗಿ ವಿವರಿಸಿರಿ, ಅದರಲ್ಲಿ ನಿಮಗೆ ಸರಿಯಾಗಿಲ್ಲವೆಂದೆಣಿಸಿದ ಪ್ರತ್ಯೇಕಭಾಗಗಳನ್ನು ಸೇರಿಸಿರಿ, ಮತ್ತು ಅನುವಾದ ತಂಡವು ಇದನ್ನು ಹೇಗೆ ಸರಿಪಡಿಸಬೇಕೆಂದು ನಿಮ್ಮ ಸಲಹೆಗಳನ್ನು ನೀಡಿರಿ.

ಅನುವಾದ ತಂಡದ ಮುಖ್ಯ ಗುರಿ ಮೂಲ ವಾಕ್ಯದಲ್ಲಿರುವ ಅರ್ಥವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಕೆಲವೊಂದು ಉಪವಾಕ್ಯಗಳನ್ನು ಬದಲಾಯಿಸುವ ಅವಶ್ಯಕತೆ ಇರಬಹುದು ಮತ್ತು ಮೂಲ ಭಾಷೆಯಲ್ಲಿರುವ ಕೆಲವು ಏಕ ಪದಗಳನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹೆಚ್ಚಿನ ಮಾತುಗಳಿಂದ ವ್ಯಕ್ತಪಡಿಸುವ ಅವಶ್ಯಕತೆಯು ಇರಬಹುದು. ಈ ಎಲ್ಲಾ ವಿಷಯಗಳು ಇತರ ಭಾಷೆಯ ಅನುವಾದಗಳಲ್ಲಿ ಸಮಸ್ಯೆಗಳಾಗಿ ಇರದೇ ಇರಬಹುದು. ಅನುವಾದಕರು ಒಂದೇ ಒಂದು ಸಮಯದಲ್ಲಿ ಈ ಎಲ್ಲಾ ತಿದ್ದುಪಡಿಗಳನ್ನು ತಪ್ಪಿಸಬಹುದು ಅದು ಯುಎಲ್.ಟಿ ಮತ್ತು ಯುಎಸ್.ಟಿ ಗೇಟ್ ವೆ ಅನುವಾದಗಳಿಗಾಗಿ ಮಾತ್ರವೇ. ಯುಎಲ್.ಟಿಯ ಉದ್ದೇಶವು ಏನಂದರೆ ಇತರ ಭಾಷೆಯ ಅನುವಾದಕರು ಮೂಲ ಬೈಬಲ್ ಭಾಷೆಗಳಲ್ಲಿ ಅರ್ಥವನ್ನು ಹೇಗೆ ವ್ಯಕ್ತಪಡಿಸಿದ್ದಾರೆಂದು ತಿಳಿಸುವುದಾಗಿರುತ್ತದೆ, ಮತ್ತು ಯುಎಸ್.ಟಿ ಉದ್ದೇಶವು ಏನಂದರೆ ಇತರ ಭಾಷೆಯಲ್ಲಿ ನಾಣ್ಣುಡಿಯನ್ನು ಉಪಯೋಗಿಸುವುದಕ್ಕೆ ತುಂಬಾ ಸ್ವಾಭಾವಿಕವಾಗಿದ್ದರೂ ಅದೇ ಅರ್ಥವನ್ನು ಸುಲಭವಾದ ರೂಪದಲ್ಲಿ, ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಗೇಟ್ ವೆ ಭಾಷೆಯ ಅನುವಾದಕರು ಆ ಎಲ್ಲಾ ವಿಧಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆಯುಂಟು. ಆದರೆ ಇತರ ಭಾಷೆಯ ಅನುವಾದಕಾರಿಗೆ ಯಾವಾಗಲು ಸ್ವಾಭಾವಿಕವಾಗಿ, ಸ್ಪಷ್ಟವಾಗಿ ಮತ್ತು ನಿಖರತೆಯಾಗಿ ಇರಬೇಕು.

ಅನುವಾದಕರು ವಾಸ್ತವಿಕವಾದ ಸಂದೇಶದಿಂದ ವಾಸ್ತವಿಕವಾದ ಪ್ರೇಕ್ಷಕರು ಅರ್ಥಮಾಡಿಕೊಳ್ಳುವ ಮಾಹಿತಿಯನ್ನು ಸೇರಿಸರಬಹುದೆಂದು, ಆದರೆ ಮೂಲ ಲೇಖಕರು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸದೇ ಇರಬಹುದೆಂದು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳಿರಿ. ವಾಕ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಪ್ರೇಕ್ಷಕರಿಗೆ ಇದೆಯೆಂದೆನ್ನುವಾಗ, ವಿವರವಾಗಿ ಬರೆಯುವುದಕ್ಕೆ ಮಾಹಿತಿಯನ್ನು ಸೇರಿಸುವುದು ಒಳ್ಳೇಯದು. ಇದರ ಕುರಿತಾಗಿ ಹೆಚ್ಚಿನ ವಿವರಣೆಗಳಿಗಾಗಿ, [ಸೂಚ್ಯ ಮತ್ತು ಸ್ಪಷ್ಟವಾದ ಮಾಹಿತಿ] (../../translate/figs-explicit/01.md) ನೋಡಿರಿ.

ಕ್ರಮಬದ್ಧವಾದ ಪರಿಶೀಲನೆಗೆ ಪ್ರಶ್ನೆಗಳು

  1. ನಂಬಿಕೆಯ ಹೇಳಿಕೆ ಮತ್ತು ಅನುವಾದದ ಮಾರ್ಗದರ್ಶನದ ಸೂತ್ರಗಳ ಆಧಾರದ ಮೇಲೆ ಅನುವಾದವನ್ನು ಮಾಡಿದ್ದಾರೋ?

  2. ಅನುವಾದ ತಂಡವು ಮೂಲ ಭಾಷೆಯ ಕುರಿತಾಗಿ ಮತ್ತು ಭಾಷಾಂತರ ಮಾಡುವ ಭಾಷೆಯ ಕುರಿತಾಗಿ ಮತ್ತು ಅದರ ಸಂಸ್ಕೃತಿಯ ಕುರಿತಾಗಿ ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ವಿವರಿಸಿ ತೋರಿಸಿ ಹೇಳಿದ್ದಾರೋ?

  3. ಭಾಷೆಯ ಸಮುದಾಯದವರು ಮಾಡಿದ ಅನುವಾದ ತಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದೆ ಮತ್ತು ಸ್ವಾಭಾವಿಕವಾಗಿದೆಯೆಂದು ಅನುಮೋದನೆ ಮಾಡಿದ್ದಾರೋ?

  4. ಅನುವಾದವು [ಸಂಪೂರ್ಣವಾಗಿ] (../complete/01.md) ಮಾಡಲ್ಪಟ್ಟಿದೆಯೋ? (ಮೂಲ ವಾಕ್ಯದಲ್ಲಿರುವಂತೆಯೇ ಎಲ್ಲಾ ವಾಕ್ಯಗಳು, ಸಂದರ್ಭಗಳು ಮತ್ತು ಮಾಹಿತಿಯು ಹೊಂದಿದೆಯೋ)?

  5. ಅನುವಾದಕರು ಈ ಕೆಳಕಂಡ ಯಾವ ಅನುವಾದದ ಪದ್ಧತಿಗಳನ್ನು ಅನುಸರಿಸಿದ್ದಾರೆ?

  6. ಶಬ್ದದಿಂದ ಶಬ್ದ ಅನುವಾದ, ಮೂಲ ಅನುವಾದದ ರೂಪಕ್ಕೆ ತುಂಬಾ ಹತ್ತಿರವಾಗಿದ್ದು ಅನುವಾದ ಮಾಡಿದ್ದಾರೆ.

  7. ಮಾತಿನಿಂದ ಮಾತಿಗೆ ಅನುವಾದ, ಸ್ವಾಭಾವಿಕವಾದ ಭಾಷೆಯ ಮಾತುಗಳ ಉಪಯೋಗಿಸಿ ಮಾಡಿದ್ದಾರೆ.

  8. ಅರ್ಥ ಕೇಂದ್ರೀಕೃತವಾದ ಅನುವಾದ, ಸ್ಥಳೀಯ ಭಾಷೆಯನ್ನು ಗುರಿಯನ್ನಾಗಿ ಇಟ್ಟುಕೊಂಡು ಮಾಡಿದ ಅನುವಾದ.

  9. ಅನುವಾದಕರು ಸಮುದಾಯಕ್ಕನುಗುನಾವಾದ ಶೈಲಿಯನ್ನು ಅನುಸರಿಸಿದ್ದಾರೆಂದು [ಪ್ರಶ್ನೆ 4ರಲ್ಲಿ ಹೇಳಲ್ಪಟ್ಟಿರುವಹಾಗೆ] ಸಮುದಾಯದ ನಾಯಕರು ಭಾವಿಸುತ್ತಿದ್ದಾರೋ?

  10. ಅನುವಾದಕರು ಉಪಯೋಗಿಸಿದ ಪ್ರಾಂತೀಯ ಭಾಷೆಯು ಆ ಪ್ರಾಂತ್ಯದಲ್ಲಿರುವ ಸಮುದಾಯದ ಜನರ ಜೊತೆಯಲ್ಲಿ ಸಂಭಾಷಿಸುವುದಕ್ಕೆ ಉತ್ತಮವಾದ ಭಾಷೆಯೆಂದು ಸಮುದಾಯದ ನಾಯಕರು ಭಾವಿಸುತ್ತಿದ್ದಾರೋ? ಉದಾಹರಣೆಗೆ, ಅನುವಾದಕರು ಆ ಪ್ರಾಂತ್ಯದ ಭಾವನೆಗಳನ್ನು, ಮಾತುಗಳನ್ನು ಮತ್ತು ಆ ಭಾಷೆಯ ಸಮುದಾಯದಲ್ಲಿರುವ ಹೆಚ್ಚಿನ ಜನರಿಂದ ಗುರುತಿಸುವಂತಹ ಒತ್ತಕ್ಷರಗಳನ್ನು ಚೆನ್ನಾಗಿ ಉಪಯೋಗಿಸಿದ್ದಾರೋ? ಈ ಪ್ರಶ್ನೆಯನ್ನು ಇನ್ನೂ ಹೆಚ್ಚಾಗಿ ತಿಳಿಸುವ ಅನೇಕ ವಿಧಾನಗಳಿಗಾಗಿ, [ಸ್ವಿಕೃತವಾದ ಶೈಲಿ]ಯನ್ನು ನೋಡಿರಿ (../acceptable/01.md).

  11. ನೀವು ಅನುವಾದವನ್ನು ಓದುತ್ತಿರುವಾಗ, ಅನುವಾದಕ್ಕೆ ಅಡ್ಡಿಪಡಿಸುವ ಸ್ಥಳೀಯ ಸಮುದಾಯದಲ್ಲಿ ಸಂಸ್ಕೃತಿಯ ಸಮಸ್ಯೆಗಳ ಕುರಿತು ಆಲೋಚನೆ ಮಾಡಿರಿ. ಮೂಲ ವಾಕ್ಯವು ಹೇಳುವ ಸ್ಪಷ್ಟವಾದ ಭಾವನೆಯನ್ನು ವ್ಯಕ್ತಪಡಿಸುವಂತೆಯೇ ಅನುವಾದದ ತಂಡವು ಈ ವಾಕ್ಯಭಾಗಗಳನ್ನು ಅನುವಾದ ಮಾಡಿದ್ದಾರೋ, ಮತ್ತು ಸಂಸ್ಕೃತಿಯ ಪರವಾದ ಸಮಸ್ಯೆಗಳ ಕಾರಣದಿಂದ ಜನರು ಅಪಾರ್ಥ ಮಾಡಿಕೊಳ್ಳುವ ವಿಷಯಗಳನ್ನು ತಪ್ಪಿಸಿ ಅನುವಾದ ಮಾಡಿದ್ದಾರೋ?

  12. ಈ ಕ್ಲಿಷ್ಟಕರವಾದ ವಾಕ್ಯಭಾಗಗಳಲ್ಲಿ, ಮೂಲ ವಾಕ್ಯಗಳಲ್ಲಿರುವ ಸಂದೇಶವನ್ನೇ ವ್ಯಕ್ತಗೊಳಿಸುವ ಹಾಗೆಯೇ ಭಾಷೆಯನ್ನೂ ಅನುವಾದಕರು ಉಪಯೋಗಿಸಿದ್ದಾರೆಂದು ಸಮುದಾಯದ ನಾಯಕರು ಭಾವಿಸಿದ್ದಾರೋ?

  13. ನಿಮ್ಮ ನಿರ್ಣಯದಲ್ಲಿ ಅಥವಾ ತೀರ್ಪಿನಲ್ಲಿ, ಮೂಲ ವಾಕ್ಯದಲ್ಲಿರುವ ಸಂದೇಶದಂತೆಯೇ ಅನುವಾದದಲ್ಲಿ ಸಂದೇಶವನ್ನು ವ್ಯಕ್ತಗೊಳಿಸಿದ್ದಾರೋ? ಅನುವಾದದಲ್ಲಿ ಯಾವುದೇ ವಾಕ್ಯಭಾಗದಲ್ಲಿ ಮೂಲ ಸಂದೇಶವನ್ನು “ವ್ಯಕ್ತಗೊಳಿಸಲಿಲ್ಲ” ಎಂದು ನಿಮಗೆ ತಿಳಿದರೆ, ದಯವಿಟ್ಟು ಕೆಳಗಿರುವ ಎರಡನೇ ಪ್ರಶ್ನೆಗಳ ಗುಂಪಿಗೆ ಉತ್ತರವನ್ನು ಕೊಡಿರಿ.

ಈ ಎರಡನೇ ಗುಂಪಿನಲ್ಲಿ ಯಾವುದೇ ಪ್ರಶ್ನೆಗಳಿಗೆ “ಹೌದು” ಎಂದು ನೀವು ಉತ್ತರ ಕೊಡುವುದಾದರೆ, ಅದರ ಕುರಿತಾಗಿ ಹೆಚ್ಚಿನ ರೀತಿಯಲ್ಲಿ ವಿವರಿಸಿರಿ, ಇದರಿಂದ ಅನುವಾದ ತಂಡಕ್ಕೆ ವು ಸಮಸ್ಯೆ ಯಾವುದೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ , ಅನುವಾದದಲ್ಲಿ ಯಾವ ವಾಕ್ಯಭಾಗಕ್ಕೆ ತಿದ್ದುಪಡಿ ಬೇಕಾಗಿರುತ್ತದೆಯೆಂದು ಅವುಗಳನ್ನು ಯಾವರೀತಿ ತಿದ್ದುಪಡಿ ಮಾಡಬೇಕೆಂದು ತಿಳಿದುಕೊಳ್ಳುತ್ತಾರೆ.

  1. ಅನುವಾದದಲ್ಲಿ ಸಿದ್ಧಾಂತದ ಕುರಿತಾಗಿ ಯಾವುದರು ತಪ್ಪುಗಳು ಇವೆಯೋ ಎಂದು ತಿಳಿದುಕೊಳ್ಳಿರಿ?
  2. ನಿಮ್ಮ ಕ್ರೈಸ್ತ ಸಮುದಾಯದಲ್ಲಿ ಹೊಂದಿರುವ ನಂಬಿಕೆಗೆ ಸಂಬಂಧಿತವಾದ ವಿಷಯಗಳಿಗೆ ಅಥವಾ ರಾಷ್ಟ್ರೀಯ ಭಾಷೆಯ ಅನುವಾದಕ್ಕೆ ಸಂಬಂಧಪಟ್ಟ ವಿಷಯಗಳಿಗೆ ವಿರುದ್ಧವಾಗಿ ಯಾವುದೇ ವಿಷಯಗಳು ಅನುವಾದದಲ್ಲಿ ಕಂಡುಬಂದಿವಿಯೋ?
  3. ಮೂಲ ವಾಕ್ಯಭಾಗದಲ್ಲಿರದ ವಿಷಯಗಳನ್ನು ಅಥವಾ ಮಾಹಿತಿಯನ್ನು ಅನುವಾದ ತಂಡವು ಹೆಚ್ಚಾಗಿ ಏನಾದರು ಸೇರ್ಪಡೆ ಮಾಡಿದ್ದಾರೋ? (ನೆನಪಿನಲ್ಲಿಟ್ಟುಕೊಳ್ಳಿರಿ, ವಾಸ್ತವಿಕವಾದ ಸಂದೇಶವು ಕೂಡ [ಸೂಚ್ಯ ಮಾಹಿತಿ]ಯನ್ನು ಹೊಂದಿರುತ್ತದೆ (../../translate/figs-explicit/01.md).)
  4. ಅನುವಾದ ತಂಡವು ಮೂಲ ವಾಕ್ಯಭಾಗದಲ್ಲಿರುವ ವಿಷಯಗಳಲ್ಲಿ ಅಥವಾ ಸಂದೇಶದಲ್ಲಿರುವ ಆಲೋಚನೆಗಳನ್ನು ಅಥವಾ ಮಾಹಿತಿಯನ್ನು ಏನಾದರು ಬಿಟ್ಟಿದೆಯೋ?

ಅನುವಾದದೊಂದಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಷ್ಕಾರ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವನ್ನು ಭೇಟಿ ಮಾಡುವುದಕ್ಕೆ ಪ್ರಣಾಳಿಕೆಗಳನ್ನು ಮಾಡಿರಿ. ನೀವು ಅವರನ್ನು ಭೇಟಿ ಮಾಡಿದಾದನಂತರ, ಅನುವಾದವು ಚೆನ್ನಾಗಿದೆಯೆಂದು ನಿಶ್ಚಯ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವು ಸಮುದಾಯದ ನಾಯಕರುಗಳೊಂದಿಗೆ ಪರಿಶೀಲನೆ ಮಾಡಿದ ತಮ್ಮ ಅನುವಾದವನ್ನು ಪರಿಶೀಲನೆ ಮಾಡಬೇಕಾದ ಅವಶ್ಯಕತೆಯಿದೆ. ಇದಾದನಂತರ ಮತ್ತೊಂದುಬಾರಿ ನಿಮ್ಮೊಂದಿಗೆ ಭೇಟಿಯಾಗಬಹುದು.

ನೀವು ಅನುವಾದವನ್ನು ಅನುಮೋದನೆ ಮಾಡುವುದಕ್ಕೆ ಸಿದ್ಧವಾಗಿರುವಾಗ, ಇಲ್ಲಿಗೆ ಹೋಗಿರಿ: [ಕ್ರಮಬದ್ಧವಾದ ಅನುಮೋದನೆ] (../vol2-things-to-check/01.md).