translationCore-Create-BCS_.../checking/team-oral-chunk-check/01.md

16 lines
4.9 KiB
Markdown
Raw Normal View History

2022-01-17 06:02:33 +00:00
ತಂಡವಾಗಿ ಒಂದು ಭಾಗದ ಅನುವಾದವನ್ನು ಪರಿಶೀಲಿಸಲು, ತಂಡವು ಮೌಖಿಕ ಗಾತ್ರದ ಪರಿಶೀಲನೆಯನ್ನು ಮಾಡಬೇಕು. ಇದನ್ನು ಮಾಡಲು ಪ್ರತಿಯೊಬ್ಬ ಅನುವಾದಕನು ತನ್ನ ಅನುವಾದವನ್ನು ತಂಡದ ಉಳಿದವರಿಗೆ ಕೇಳುವ ಹಾಗೆ ಜೋರಾಗಿ ಓದುತ್ತಾನೆ. ಪ್ರತಿ ಭಾಗದ ಕೊನೆಯಲ್ಲಿ ಭಾಷಾಂತರಕಾರನು ಓದುವುದನ್ನು ನಿಲ್ಲಿಸುತ್ತಾನೆ, ಇದರಿಂದ ತಂಡವು ಆ ಭಾಗದ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತದೆ. ಅನುವಾದಕನು ಪಠ್ಯವನ್ನು ಮೌಖಿಕವಾಗಿ ಓದುತ್ತಿರುವಾಗ, ಪ್ರತಿಯೊಂದು ಲಿಖಿತ ಅನುವಾದವನ್ನು ಎಲ್ಲಾರು ನೋಡಬಹುದಾದ ರೀತಿಯಲ್ಲಿ ಯೋಜಿಸಲಾಗಿದೆ.
ತಂಡದ ಸದಸ್ಯರ ಕರ್ತವ್ಯಗಳನ್ನು ವಿಂಗಡಿಸಲಾಗಿದೆ ತಂಡದ ಪ್ರತಿ ಸದಸ್ಯರು ಒಂದು ಸಮಯದಲ್ಲಿ ಕೆಳಗಿನ ಪಾತ್ರಗಳಲ್ಲಿ ಒಂದನ್ನು ಮಾತ್ರ ನಿರ್ವಹಿಸುವುದು ಮುಖ್ಯ.
1.ತಂಡದ ಒಬ್ಬರು ಅಥವ ಹೆಚ್ಚಿನ ಸದಸ್ಯರು ಸ್ವಾಭಾವಿಕತೆಯನ್ನು ಕೇಳುತ್ತಾರೆ. ಅದರಲ್ಲಿ ಏನಾದರು ಅಸ್ವಾಭಾವಿಕವಾಗಿದ್ದರೆ, ಕೊನೆಯ ಭಾಗವನ್ನು ಓದುವಾಗ, ಅದನ್ನು ಹೇಳಲು ಸಹಜವಾದ ಮಾರ್ಗವನ್ನು ಶಿಫಾರಸು ಮಾಡುತ್ತಾರೆ.
1.ತಂಡದ ಒಬ್ಬರು ಅಥವ ಹೆಚ್ಚಿನ ಸದಸ್ಯರು ಮೂಲ್ಯ ಪಠ್ಯದಲ್ಲಿ ಸೇರಿಸಿದ, ಕಾಣೆಯಾದ ಅಥವ ಬದಲಾದದ್ದನ್ನು ಅನುಸರಿಸುತ್ತಾರೆ. ಭಾಗವನ್ನು ಓದುವ ಕೊನೆಯಲ್ಲಿ ಮೂಲ್ಯ ಪಠ್ಯದಲ್ಲಿ ಸೇರಿಸಿದ, ಕಾಣೆಯಾದ ಅಥವ ಬದಲಾವಣೆಯ ಬಗ್ಗೆ ತಂಡವನ್ನು ಎಚ್ಚರಿಸುತ್ತಾರೆ.
1.ತಂಡದ ಇನ್ನೊಬ್ಬ ಸದಸ್ಯನು ಅನುವಾದ ವರದಿಯ ಕ್ರಮವನ್ನು ಅನುಸರಿಸುತ್ತಾ ಮೂಲ್ಯ ಪಠ್ಯದದಲ್ಲಿನ ಹೈಲೈಟ್ ಮಾಡಿದ ಎಲ್ಲಾ ಪ್ರಮುಖ ಪದಗಳನ್ನು ಗಮನಿಸುತ್ತಾರೆ. ಓದುವಲ್ಲಿ ಹೊರಹೊಮ್ಮುವ ಸಮಸ್ಯಗಳೊಂದಿಗೆ ಅನುವಾದದಲ್ಲಿ ಸಾಮರಸ್ಯವಿಲ್ಲದ ಅಥವ ಸೂಕ್ತವಲ್ಲದ ಪ್ರಮುಖ ಪದಗಳ ಬಗ್ಗೆ ತಂಡವು ಚರ್ಚಿಸುತ್ತದೆ. ಈ ಕ್ರಮವು ಲಭ್ಯವಿಲ್ಲದಿದ್ದರೆ, ತಂಡದ ಸದಸ್ಯರು ಪ್ರಮುಖ ಪದಗಳನ್ನು ತಂಡದ ಅದರ ದಾಖಲಾತಿಯಲ್ಲಿ (ಸ್ಪ್ರೆಡ್ ಶೀಟ್) ನಲ್ಲಿ ನೋಡಬಹುದು.
ತಂಡವು ತಮ್ಮ ಅನುವಾದಗಳಲ್ಲಿ ತೃಪ್ತರಾಗುವವರೆಗೆ ಈ ಹಂತಗಳನ್ನು ಅಗತ್ಯವಿರುವಂತೆ ಪುನರಾವರ್ತಿಸಬಹುದು.
ಈ ಸಮಯದಲ್ಲಿ, ಅನುವಾದವನ್ನು ಮೊದಲ ಕರಡು ಪ್ರತಿ ಎಂದು ಪರಿಗಣಿಸಲಾಗುತ್ತದೆ, ಮತ್ತು ತಂಡವು ಈ ಕೆಳಗಿನವುಗಳನ್ನು ಮಾಡಬೇಕಾಗುತ್ತದೆ.
1.ಅನುವಾದ ತಂಡದ ಯಾರಾದರೂ ಅನುವಾದ ಸ್ಟುಡಿಯೋಗೆ ಪಠ್ಯವನ್ನು ನಮೂದಿಸಬೇಕು. ಕರಡು ಪ್ರತಿಯನ್ನು ಮಾಡುವ ಪ್ರಾರಂಭದಿಂದಲೆ ತಂಡವು ಅನುವಾದ ಸ್ಟುಡಿಯೋವನ್ನು ಬಳಸುತ್ತಿದ್ದರೆ, ಈ ಹಂತದಲ್ಲಿ ತಂಡವು ಮಾಡಬೇಕಾದ ಬದಲಾವಣೆಗಳನ್ನು ಮಾತ್ರ ನಮೂದಿಸಬೇಕಾಗಿದೆ.
1.ತಂಡವು ಮಾಡಿದ ಎಲ್ಲಾ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಒಳಗೊಂಡಂತೆ ಅನುವಾದದ ಹೊಸ ಆಡಿಯೊ ರೆಕಾರ್ಡಿಂಗ್ ಮಾಡಬೇಕು.
ಅನುವಾದ ಸ್ಟುಡಿಯೋ ಫೈಲ್ ಹಾಗು ಆಡಿಯೋ ರೆಕಾರ್ಡಿಂಗ್ ಅನ್ನು ಬಾಗಿಲು43 ರಲ್ಲಿ ತಂಡದ ಬಂಡಾರಕ್ಕೆ ಅಪ್ಲೋಡ್ ಮಾಡಬೆಕು