120 KiB
120 KiB
1 | Reference | ID | Tags | Quote | Occurrence | Question | Response |
---|---|---|---|---|---|---|---|
2 | 1:2-3 | a4zc | ಕರ್ತನು ಬರುವ ಮೊದಲು ಏನು ಆಗುವುದೆಂದು ಪ್ರವಾದಿಯಾದ ಯೆಶಾಯನು ಮುನ್ನುಡಿದಿದ್ದನು? | ದೇವರು ಒಬ್ಬ ದೇವದೂತನನ್ನು ಕಳುಹಿಸುವನು, ಕರ್ತನಿಗೆ ದಾರಿಯನ್ನು ಸಿದ್ದಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ ಎಂದು ಮುನ್ನುಡಿದದ್ದನು. | |||
3 | 1:4 | g2v6 | ಯೋಹಾನನು ಏನನ್ನು ಸಾರುತ್ತಾ ಬಂದನು? | ಯೋಹಾನನು ಪಾಪಗಳ ಕ್ಷಮಾಪಣೆಗಾಗಿ ಪಶ್ಛಾತ್ತಾಪದ ದೀಕ್ಷಾಸ್ನಾನದ ಬಗ್ಗೆ ಸಾರುತ್ತಾ ಬಂದನು. | |||
4 | 1:5 | kdd7 | ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ಏನು ಮಾಡುತ್ತಿದ್ದರು? | ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆ ಮಾಡಿದರು | |||
5 | 1:6 | zlqi | ಯೋಹಾನನು ಏನನ್ನು ತಿನ್ನುತ್ತಿದ್ದನು? | ಯೋಹಾನನು ಮಿಡತೆಗಳನ್ನು ಮತ್ತು ಕಾಡು ಜೇನನ್ನು ತಿನ್ನುತ್ತಿದ್ದನು. | |||
6 | 1:8 | yakl | ಅವನ ನಂತರ ಬರುವವನು ಯಾವುದರಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು? | ಅವನ ನಂತರ ಬರುವವನು ಪವಿತ್ರ ಆತ್ಮದಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು. | |||
7 | 1:10 | y6fa | ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ನೀರಿನಿಂದ ಮೇಲೆ ಬಂದಾಗ ಯೇಸು ಏನನ್ನು ನೋಡಿದನು? | ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ, ಆಕಾಶವು ತೆರೆದು ಆತ್ಮವು ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರುವುದನ್ನು ಯೇಸು ನೋಡಿದನು. | |||
8 | 1:11 | f2a4 | ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ಪರಲೋಕದಿಂದ ಬಂದಂತ ಸ್ವರವು ಏನು ಹೇಳಿತು? | ಪರಲೋಕದಿಂದ ಬಂದಂತ ಸ್ವರವು, “ನೀನು ನನ್ನ ಪ್ರಿಯನಾಗಿರುವ ಮಗನು; ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂದು ಹೇಳಿತು. | |||
9 | 1:12 | ahm3 | ಯೇಸುವನ್ನು ಯಾರು ಅರಣ್ಯಕ್ಕೆ ಕರೆದುಕೊಂಡು ಹೋದರು? | ಆತ್ಮನು ಯೇಸುವನ್ನು ಅರಣ್ಯಕ್ಕೆ ಕರೆದುಕೊಂಡು ಹೋದನು. | |||
10 | 1:13 | ex5p | ಯೇಸು ಎಷ್ಟು ಕಾಲ ಅರಣ್ಯದಲ್ಲಿದ್ದನು, ಮತ್ತು ಅಲ್ಲಿ ಆತನಿಗೆ ಏನು ಆಯಿತು? | ಯೇಸು ಅರಣ್ಯದಲ್ಲಿ 40 ದಿನಗಳು ಇದ್ದನು, ಮತ್ತು ಅಲ್ಲಿ ಸೈತಾನನಿಂದ ಶೋಧಿಸಲ್ಪಟ್ಟನು. | |||
11 | 1:15 | kyxp | ಯೇಸು ಏನನ್ನು ಸಾರಿದನು? | ದೇವರ ರಾಜ್ಯವು ಹತ್ತಿರವಾಗಿದೆ, ಜನರು ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ ಎಂದು ಯೇಸು ಸಾರಿದನು. | |||
12 | 1:16 | yzo9 | ಸೀಮೋನ ಮತ್ತು ಅಂದ್ರೆಯನ ಕೆಲಸ ಏನಾಗಿತ್ತು? | ಸೀಮೋನನು ಮತ್ತು ಅಂದ್ರೆಯನು ಬೆಸ್ತರಾಗಿದ್ದರು. | |||
13 | 1:17 | r3ba | ಸೀಮೋನನನ್ನು ಮತ್ತು ಆಂದ್ರೆಯನನ್ನು ಏನಾಗಿ ಮಾಡುವೆನೆಂದು ಯೇಸು ಹೇಳಿದನು? | ಸೀಮೋನನನ್ನು ಮತ್ತು ಆಂದ್ರೆಯನನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನೆಂದು ಯೇಸು ಹೇಳಿದನು. | |||
14 | 1:19 | foqj | ಯಾಕೋಬ ಮತ್ತು ಯೋಹಾನನ ಕೆಲಸ ಏನಾಗಿತ್ತು? | ಯಾಕೋಬ ಮತ್ತು ಯೋಹಾನನು ಬೆಸ್ತರಾಗಿದ್ದರು. | |||
15 | 1:22 | lq6y | ಯೇಸುವಿನ ಬೋಧನೆಯು ಸಭಾಮಂದಿರದಲ್ಲಿ ಯಾಕೆ ಜನರನ್ನು ಬೆರಗುಗೊಳಿಸಿತು? | ಯೇಸುವಿನ ಬೋಧನೆಯು ಜನರನ್ನು ಬೆರಗುಗೊಳಿಸಿತು ಯಾಕೆಂದರೆ ಯೇಸು ಅಧಿಕಾರದಿಂದ ಬೋಧಿಸಿದನು. | |||
16 | 1:24 | rtx4 | ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? | ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ದೇವರಿಂದ ಬಂದ ಪರಿಶುದ್ಧನು ಎಂಬ ಬಿರುದನ್ನು ಕೊಟ್ಟಿತು. | |||
17 | 1:28 | dn9o | ಯೇಸುವಿನ ಕುರಿತಾದ ಸುದ್ದಿಯು ಏನಾಯಿತು? | ಯೇಸುವಿನ ಕುರಿತಾದ ಸುದ್ದಿಯು ಎಲ್ಲೆಡೆಯೂ ಹಬ್ಬಿಹರಡಿತು. | |||
18 | 1:30 | ii0v | ಅವರು ಸೀಮೋನನ ಮನೆಗೆ ಹೋದಾಗ, ಯೇಸು ಯಾರನ್ನು ಸ್ವಸ್ಥ ಮಾಡಿದನು? | ಅವರು ಸೀಮೋನನ ಮನೆಗೆ ಹೋದಾಗ, ಯೇಸು ಸೀಮೋನನ ಅತ್ತೆಯನ್ನು ಸ್ವಸ್ಥಮಾಡಿದನು. | |||
19 | 1:32-34 | ywmc | ಸಂಜೆಯಾದಾಗ ಏನಾಯಿತು? | ಸಂಜೆಯಾದಾಗ, ಅಸ್ವಸ್ಥರಾದ ಎಲ್ಲರನ್ನೂ ಅಥವಾ ದೆವ್ವಗಳಿಂದ ಪೀಡಿತರಾದವರನ್ನು ಜನರು ಕರೆದುಕೊಂಡು ಬಂದರು, ಯೇಸು ಅವರನ್ನು ಸ್ವಸ್ಥ ಮಾಡಿದನು. | |||
20 | 1:35 | i2xa | ಸೂರ್ಯ ಹುಟ್ಟುವುದಕ್ಕೆ ಮೊದಲು ಯೇಸು ಏನು ಮಾಡಿದನು? | ಸೂರ್ಯ ಹುಟ್ಟುವ ಮೊದಲು, ಯೇಸುವು ಏಕಾಂತವಾದ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸಿದನು. | |||
21 | 1:38-39 | y32l | ಏನು ಮಾಡಲು ಬಂದಿದ್ದೇನೆಂದು ಯೇಸು ಸೀಮೋನನಿಗೆ ಹೇಳಿದನು? | ಸುತ್ತ ಮುತ್ತಲಿರುವ ಊರುಗಳಲ್ಲಿ ಸಾರಲು ಬಂದಿದ್ದೇನೆಂದು ಯೇಸು ಹೇಳಿದನು. | |||
22 | 1:40-41 | xyj3 | ಸ್ವಸ್ಥನಾಗಬೇಕೆಂದು ಯೇಸುವನ್ನು ಬೇಡಿಕೊಂಡ ಕುಷ್ಟರೋಗಿಯ ಬಗ್ಗೆ ಯೇಸು ಯಾವ ಮನೋಭಾವವನ್ನು ಹೊಂದಿದ್ದನು? | ಕುಷ್ಟರೋಗಿಯ ಮೇಲೆ ಯೇಸು ಕನಿಕರಪಟ್ಟು ಅವನನ್ನು ಸ್ವಸ್ಥ ಮಾಡಿದನು. | |||
23 | 1:44 | dzi8 | ಯೇಸು ಕುಷ್ಟರೋಗಿಗೆ ಏನು ಮಾಡಲು ಹೇಳಿದನು, ಮತ್ತು ಯಾಕೆ ಹೇಳಿದನು? | ಮೋಶೆಯು ಆಜ್ಞಾಪಿಸಿದ ಪ್ರಕಾರ ಹೋಗಿ ಯಜ್ಞಗಳನ್ನು ಅರ್ಪಿಸುವಂತೆ ಕುಷ್ಟರೋಗಿಗೆ ಯೇಸು ಹೇಳಿದನು. ಅವನು ಸ್ವಸ್ಥಗೊಂಡಿದ್ದು ಸಮುದಾಯದಲ್ಲಿ ಸಾಕ್ಷಿಯಾಗಿ ಕಾರ್ಯ ಮಾಡುತ್ತದೆ. | |||
24 | 2:4 | zvpg | ಪಾರ್ಶ್ವವಾಯು ರೋಗಿಯನ್ನು ಹೊತ್ತುಕೊಂಡು ಬಂದಿದ್ದ ನಾಲ್ಕು ಜನರು ಏನು ಮಾಡಿದರು? | ಪುರುಷರು ಮನೆಯ ಮೇಲ್ಚಾವಣಿಯನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ಇಳಿಸಿದರು | |||
25 | 2:5 | efne | ಪಾರ್ಶ್ವವಾಯು ರೋಗಿಗೆ ಯೇಸು ಏನು ಹೇಳಿದನು? | ಯೇಸು, “ಮಗುವೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. | |||
26 | 2:6-7 | k9lq | ಯೇಸು ಹೇಳಿದ್ದಕ್ಕೆ ಕೆಲವು ಶಾಸ್ತ್ರಿಗಳು ಯಾಕೆ ವಿರೋಧಿಸಿದರು? | ದೇವರು ಮಾತ್ರ ಪಾಪಗಳನ್ನು ಕ್ಷಮಿಸಲು ಸಾಧ್ಯ ಆದ್ದರಿಂದ ಯೇಸು ದೇವದೂಷಣೆ ಮಾಡಿದ್ದಾನೆ ಎಂದು ಕೆಲವು ಶಾಸ್ತ್ರಿಗಳು ಯೋಚಿಸಿದರು. | |||
27 | 2:10-12 | v3ys | ಈ ಭೂಮಿಯ ಪಾಪಗಳನ್ನು ಮೇಲೆ ಕ್ಷಮಿಸಲು ಆತನಿಗೆ ಅಧಿಕಾರವಿದೆಯೆಂದು ಯೇಸು ಹೇಗೆ ತೋರ್ಪಡಿಸಿದನು? | ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು ಎಂದು ಯೇಸು ಹೇಳಿದನು, ಮತ್ತು ಆ ಮನುಷ್ಯನು ಹಾಗೆಯೇ ಮಾಡಿದನು. | |||
28 | 2:13-14 | llaq | ಯೇಸು ಲೇವಿಗೆ ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ಲೇವಿಯು ಏನು ಮಾಡುತ್ತಿದ್ದನು? | ಯೇಸು ಅವನನ್ನು ಕರೆದಾಗ ಲೇವಿಯು ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತುಕೊಂಡಿದ್ದನು. | |||
29 | 2:15-16 | c07h | ಲೇವಿಯ ಮನೆಯಲ್ಲಿ, ಫರಿಸಾಯರಿಗೆ ಬೇಸರಿಕೆ ಬರುವಂತೆ ಯೇಸು ಏನು ಮಾಡಿದನು? | ಯೇಸು ಪಾಪಿಗಳ ಮತ್ತು ಸುಂಕ ವಸೂಲಿ ಮಾಡುತ್ತಿದ್ದ ಜನರೊಂದಿಗೆ ಊಟ ಮಾಡುತ್ತಿದ್ದನು. | |||
30 | 2:17 | zqw0 | ಯಾರನ್ನು ಕರೆಯಲು ಬಂದಿದ್ದೇನೆಂದು ಯೇಸು ಹೇಳಿದನು? | ಪಾಪಿಯಾದ ಜನರನ್ನು ಕರೆಯಲು ಬಂದೆನೆಂದು ಯೇಸು ಹೇಳಿದನು. | |||
31 | 2:18 | p9ln | ಕೆಲವು ಜನರು ಉಪವಾಸದ ಬಗ್ಗೆ ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? | ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ ಆದರೆ ಯೇಸುವಿನ ಶಿಷ್ಯರು ಯಾಕೆ ಉಪವಾಸ ಮಾಡಲಿಲ್ಲವೆಂದು ಅವರು ಯೇಸುವನ್ನು ಕೇಳಿದರು. | |||
32 | 2:19 | w6go | ಆತನ ಶಿಷ್ಯರು ಯಾಕೆ ಉಪವಾಸ ಮಾಡಿತ್ತಿಲ್ಲವೆಂದು ಯೇಸು ಹೇಗೆ ವಿವರಿಸಿದನು? | ಮದುಮಗನ ಜೊತೆಯಲ್ಲಿ ಇನ್ನೂ ಮದುವೆಯ ಜನರು ಇರುವಾಗ, ಅವರು ಉಪವಾಸ ಮಾಡಲು ಆಗುವುದಿಲ್ಲವೆಂದು ಯೇಸು ಹೇಳಿದನು. | |||
33 | 2:23-24 | ej7h | ಫರಿಸಾಯರಿಗೆ ಬೇಸರಿಕೆ ಬರುವಂತೆ ಸಬ್ಬತ್ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿ ಏನು ಮಾಡಿದರು? | ಸಬ್ಬತ್ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿದ್ದ ತೆನೆಗಳನ್ನು ಮುರಿದುಕೊಂಡು ಅವುಗಳನ್ನು ತಿಂದರು. | |||
34 | 2:25-26 | iwe2 | ಸಾಮಾನ್ಯವಾಗಿ ನಿಷೇಧಿಸಲ್ಪಟ್ಟ ರೊಟ್ಟಿಯು ಬೇಕಾದವರ ಮತ್ತು ತಿನ್ನುವವರ ಬಗ್ಗೆ ಯೇಸು ಯಾವ ಉದಾಹರಣೆಯನ್ನು ಕೊಟ್ಟನು? | ದಾವೀದನು ಕೊರತೆಯುಳ್ಳವನಾಗಿ, ಯಾಜಕರ ಹೊರತು ಮತ್ತಾರು ತಿನ್ನಬಾರದ ರೊಟ್ಟಿಯನ್ನು ತಿಂದಂಥ ಉದಾಹರಣೆಯನ್ನು ಯೇಸು ಉದಾಹರಣೆಯಾಗಿ ಕೊಟ್ಟನು. | |||
35 | 2:27 | m19r | ಸಬ್ಬತ್ ದಿನವು ಯಾರಿಗಾಗಿ ಮಾಡಲ್ಪಟ್ಟಿದೆ ಎಂದು ಯೇಸು ಹೇಳಿದನು? | ಸಬ್ಬತ್ ದಿನವು ಜನರಿಗಾಗಿ ಮಾಡಲಾಯಿತು ಎಂದು ಯೇಸು ಹೇಳಿದನು. | |||
36 | 2:28 | ak51 | ಯೇಸು ತನಗೆ ಯಾವ ಅಧಿಕಾರವಿದೆ ಎಂದು ಹೇಳಿಕೊಂಡನು? | ನಾನು ಸಬ್ಬತ್ ದಿನಕ್ಕೂ ಸಹ ಕರ್ತನಾಗಿದ್ದೇನೆಂದು ಯೇಸು ಹೇಳಿದನು. | |||
37 | 3:1-2 | o82f | ಸಬ್ಬತ್ ದಿನದಲ್ಲಿ ಸಭಾಮಂದಿರದಲ್ಲಿ ಅವರು ಯೇಸುವನ್ನು ಯಾಕೆ ಗಮನಿಸುತ್ತಿದ್ದರು? | ಸಬ್ಬತ್ ದಿನದಲ್ಲಿ ಆತನು ಸ್ವಸ್ಥಮಾಡುತ್ತಾನೋ, ಸ್ವಸ್ಥಮಾಡುವುದಾದರೆ ಆತನನ್ನು ದೂಷಿಸಬಹುದೆಂದು ಅವರುಗಳು ಯೇಸುವನ್ನು ಗಮನಿಸುತ್ತಿದ್ದರು. | |||
38 | 3:4 | dk1g | ಸಬ್ಬತ್ ದಿನದ ಬಗ್ಗೆ ಜನರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? | ಸಬ್ಬತ್ ದಿನದಲ್ಲಿ ಕೆಟ್ಟದ್ದನ್ನು ಮಾಡುವುದು, ಅಥವಾ ಒಳ್ಳೆಯದನ್ನು ಮಾಡುವುದು ಯಾವುದು ಶಾಸ್ತ್ರಸಮ್ಮತವಾದುದು ಎಂದು ಯೇಸು ಜನರನ್ನು ಕೇಳಿದನು. | |||
39 | 3:4 | p1z9 | ಯೇಸುವಿನ ಪ್ರಶ್ನೆಗೆ ಜನರು ಹೇಗೆ ಪ್ರತಿಕ್ರಿಯಿಸಿದರು? | ಜನರು ಮೌನವಾಗಿದ್ದರು. | |||
40 | 3:5 | mrbj | ಅವರ ಮೇಲೆ ಯೇಸು ಎಂಥ ಮನೋಭಾವವುಳ್ಳವನಾಗಿದ್ದನು? | ಯೇಸು ಅವರ ಮೇಲೆ ಕೋಪಗೊಂಡನು. | |||
41 | 3:6 | acwq | ಯೇಸು ಮನುಷ್ಯನನ್ನು ಸ್ವಸ್ಥಮಾಡಿದಾಗ ಫರಿಸಾಯರು ಏನು ಮಾಡಿದರು? | ಫರಿಸಾಯರು ಹೊರಟು ಹೋಗಿ ಯೇಸುವನ್ನು ಕೊಲ್ಲಲ್ಲು ಒಳಸಂಚು ಮಾಡಿದರು. | |||
42 | 3:7-8 | b2bk | ಯೇಸು ಸಮುದ್ರದ ಬಳಿಗೆ ಹೋಗುತ್ತಿರುವಾಗ ಎಷ್ಟು ಜನರು ಆತನನ್ನು ಹಿಂಬಾಲಿಸಿದರು? | ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು. | |||
43 | 3:11 | tke0 | ಯೇಸುವನ್ನು ನೋಡಿದಾಗ ದೆವ್ವಗಳು ಏನೆಂದು ಕೂಗಿದವು? | ಯೇಸು ದೇವರ ಮಗನೆಂದು ದೆವ್ವಗಳು ಕೂಗಿದವು. | |||
44 | 3:14-15 | e2s0 | ಯೇಸು ಎಷ್ಟು ಮಂದಿ ಅಪೊಸ್ತಲರನ್ನು ನೇಮಿಸಿದನು ಮತ್ತು ಅವರುಗಳು ಏನು ಮಾಡಬೇಕಾಗಿತ್ತು? | ಯೇಸು ತನ್ನ ಜೊತೆಯಲ್ಲಿರಲು, ಸುವಾರ್ತೆ ಸಾರಲು, ಮತ್ತು ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಹೊಂದಿದವರಾಗಿರಲು 12 ಮಂದಿ ಅಪೊಸ್ತಲರನ್ನು ನೇಮಿಸಿದನು. | |||
45 | 3:19 | raj7 | ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಯಾರು? | ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಇಸ್ಕರಿಯೋತ ಯೂದನು. | |||
46 | 3:21 | rh8o | ಯೇಸುವಿನ ಸುತ್ತವಿದ್ದ ಜನರ ಗುಂಪುಗಳ ಮತ್ತು ಘಟನೆಗಳ ಬಗ್ಗೆ ಯೇಸುವಿನ ಕುಟುಂಬದವರು ಏನೆಂದು ಯೋಚಿಸಿದರು? | ಯೇಸುವಿನ ಕುಟುಂಬದವರು ಆತನಿಗೆ ಆತನಿಗೆ ಹುಚ್ಚುಹಿಡಿದಿದೆ ಎಂದು ಯೋಚಿಸಿದರು. | |||
47 | 3:22 | xmhs | ಯೇಸುವಿನ ವಿರುದ್ದ ಶಾಸ್ತ್ರಿಗಳು ಯಾವ ಆರೋಪವನ್ನು ಮಾಡಿದರು? | ದೆವ್ವಗಳ ಒಡೆಯನಿಂದ ದೆವ್ವಗಳನ್ನು ಬಿಡಿಸುತ್ತಿದ್ದಾನೆಂದು ಶಾಸ್ತ್ರಿಗಳು ಯೇಸುವಿನ ಮೇಲೆ ಆರೋಪ ಮಾಡಿದರು. | |||
48 | 3:23-24 | ob9v | ಶಾಸ್ತ್ರಿಗಳ ಆರೋಪಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? | ಯಾವುದೇ ರಾಜ್ಯವು ತನಗೆ ವಿರುದ್ದವಾಗಿ ವಿಭಜನೆಗೊಂಡಿದ್ದರೆ ನಿಲ್ಲುವುದಿಲ್ಲವೆಂದು ಯೇಸು ಪ್ರತಿಕ್ರಿಯಿಸಿದನು. | |||
49 | 3:28-29 | txqb | ಯಾವ ಪಾಪವು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು? | ಪವಿತ್ರ ಆತ್ಮನಿಗೆ ವಿರುದ್ದ ಮಾಡುವ ದೂಷಣೆಯು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು. | |||
50 | 3:33-35 | xtjn | ಆತನ ತಾಯಿ ಮತ್ತು ಸಹೋದರರು ಯಾರು ಎಂದು ಯೇಸು ಹೇಳಿದನು? | ದೇವರ ಚಿತ್ತವನ್ನು ಮಾಡುವವರು ಆತನ ತಾಯಿ ಮತ್ತು ಸಹೋದರರು ಎಂದು ಯೇಸು ಹೇಳಿದನು. | |||
51 | 4:1 | bki3 | ಯೇಸು ಬೋಧಿಸಲು ದೋಣಿಯ ಒಳಗೆ ಯಾಕೆ ಹೋದನು? | ಯೇಸು ಕುಳಿತುಕೊಂಡು ಬೋಧಿಸಲು ದೋಣಿಯ ಒಳಗೆ ಹೋದನು ಯಾಕೆಂದರೆ ಆತನ ಸುತ್ತಲೂ ದೊಡ್ಡ ಗುಂಪು ಸೇರಿತ್ತು. | |||
52 | 4:4 | wzuu | ದಾರಿಯ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? | ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. | |||
53 | 4:6 | wyhf | ಸೂರ್ಯನು ಹುಟ್ಟಿದಾಗ ಬಂಡೆ ನೆಲದ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? | ಅವುಗಳಿಗೆ ಬೇರಿಲ್ಲದ ಕಾರಣ ಅವು ಒಣಗಿಹೋದವು. | |||
54 | 4:7 | b6ma | ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜಗಳಿಗೆ ಏನಾಯಿತು? | ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. | |||
55 | 4:8 | ivy4 | ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ ಬೀಜಗಳಿಗೆ ಏನಾಯಿತು? | ಬಿತ್ತಿದ್ದ ಬೀಜಗಳು ಕಾಳುಗಳನ್ನು ಉತ್ಪತ್ತಿಮಾಡಿ, 30, 60 ರಷ್ಟು ಮತ್ತು ಕೆಲವು 100 ರಷ್ಟು ಫಲವನ್ನು ಕೊಟ್ಟವು. | |||
56 | 4:11 | o0ss | ಯೇಸು ಹನ್ನೆರಡು ಮಂದಿಗೆ ಏನನ್ನು ಕೊಡಲಾಗಿದೆ ಆದರೆ ಹೊರಗಿನವರಿಗೆ ಯಾಕೆ ಕೊಡಲಾಗಿಲ್ಲ ಎಂದು ಹೇಳಿದನು? | ಹನ್ನೆರಡು ಮಂದಿಗೆ ದೇವರ ರಾಜ್ಯದ ಗುಟ್ಟು ಕೊಡಲಾಗಿದೆ ಆದರೆ ಹೊರಗಿನವರಿಗೆ ಕೊಡಲಾಗಿಲ್ಲ ಎಂದು ಯೇಸು ಹೇಳಿದನು. | |||
57 | 4:14 | pskj | ಯೇಸುವಿನ ಸಾಮ್ಯದಲ್ಲಿ ಬೀಜ ಎಂದರೇನು? | ಬೀಜ ಎಂದರೆ ದೇವರ ವಾಕ್ಯ. | |||
58 | 4:15 | t1r5 | ದಾರಿಯ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? | ದೇವರ ವಾಕ್ಯವನ್ನು ಕೇಳಿದರೂ, ತಕ್ಷಣವೇ ಸೈತಾನನು ಅದನ್ನು ಅವರಿಂದ ತೆಗೆದುಕೊಂಡು ಹೋಗುತ್ತಾನೆ ಅಂಥವರನ್ನು ಅದು ಪ್ರತಿನಿಧಿಸುತ್ತದೆ. | |||
59 | 4:16-17 | zy18 | ಬಂಡೆಯ ನೆಲದ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? | ವಾಕ್ಯವನ್ನು ಸಂತೋಷದಿಂದ ಕೇಳಿಕೊಂಡರೂ, ಸಂಕಟವು ಬಂದಾಗ, ಅವರು ಎಡವಿಬೀಳುವಂಥವರನ್ನು ಅದು ಪ್ರತಿನಿಧಿಸುತ್ತದೆ. | |||
60 | 4:18-19 | alo5 | ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? | ದೇವರ ವಾಕ್ಯವನ್ನು ಕೇಳಿಸಿಕೊಂಡರೂ, ಲೋಕದ ಚಿಂತೆಗಳು ಅವುಗಳನ್ನು ಅಡಗಿಸಿಬಿಡುವಂಥವರನ್ನು ಅದು ಪ್ರತಿನಿಧಿಸುತ್ತದೆ. | |||
61 | 4:20 | lhwr | ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? | ದೇವರ ವಾಕ್ಯವನ್ನು ಕೇಳಿಸಿಕೊಂಡು, ಅದನ್ನು ಸ್ವೀಕರಿಸಿ, ಫಲವನ್ನು ಕೊಡುವಂಥವರನ್ನು ಅದು ಪ್ರತಿನಿಧಿಸುತ್ತದೆ. | |||
62 | 4:22 | c1ey | ಗುಪ್ತವಾದ ಮತ್ತು ರಹಸ್ಯದ ವಿಷಯಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? | ಗುಪ್ತವಾದ ಮತ್ತು ರಹಸ್ಯದ ವಿಷಯಗಳು ಬೆಳಕಿಗೆ ಬರುತ್ತವೆ ಎಂದು ಯೇಸು ಹೇಳಿದನು. | |||
63 | 4:26-27 | fteq | ಬೀಜವನ್ನು ನೆಲದಲ್ಲಿ ಬಿತ್ತು ಒಬ್ಬ ಮನುಷ್ಯನಿಗೆ ದೇವರ ರಾಜ್ಯವು ಹೇಗೆ ಹೋಲಿಕೆಯಾಗಿದೆ? | ಮನುಷ್ಯನು ಬೀಜವನ್ನು ಬಿತ್ತುತ್ತಾನೆ, ಅದು ಬೆಳೆಯುತ್ತದೆ, ಆದರೆ ಅದು ಹೇಗೆ ಎಂದು ಅವನಿಗೆ ತಿಳಿಯದು, ಸುಗ್ಗಿಕಾಲ ಬಂದು ಫಸಲು ಮಾಗಿದಾಗ ಅವನು ಅದನ್ನು ಕೊಯ್ಯಿದು ಸಂಗ್ರಹಿಸುತ್ತಾನೆ. | |||
64 | 4:30-32 | tzc2 | ಯಾವ ರೀತಿಯಲ್ಲಿ ದೇವರ ರಾಜ್ಯವು ಸಾಸಿವೆ ಬೀಜಕ್ಕೆ ಹೋಲಿಕೆಯಾಗಿದೆ? | ಸಾಸಿವೆಕಾಳು ಬಹಳ ಸಣ್ಣ ಬೀಜವಾಗಿ ಪ್ರಾರಂಭವಾಗುತ್ತದೆ, ಆದಾಗ್ಯೂ ಅನೇಕರು ಅವರುಗಳಿಗೆ ಗೂಡುಗಳನ್ನು ಮಾಡಿಕೊಳ್ಳುವಷ್ಟು ದೊಡ್ಡ ಗಿಡವಾಗಿ ಬೆಳೆಯುತ್ತದೆ. | |||
65 | 4:35-37 | tojt | ಯೇಸು ಮತ್ತು ಶಿಷ್ಯರು ಸರೋವರವನ್ನು ದಾಟಿದಾಗ ಏನಾಯಿತು? | ದೊಡ್ಡ ಬಿರುಗಾಳಿಯು ಪ್ರಾರಂಭವಾಗಿ, ದೋಣಿಯನ್ನು ನೀರಿನಿಂದ ತುಂಬಿಸುವಂತೆ ಭಯಪಡಿಸಿತು. | |||
66 | 4:38 | j9v3 | ಯೇಸು ದೋಣಿಯಲ್ಲಿ ಏನು ಮಾಡುತ್ತಿದ್ದನು? | ಯೇಸು ನಿದ್ರೆ ಮಾಡುತ್ತಿದ್ದನು. | |||
67 | 4:38 | vu2b | ಶಿಷ್ಯರು ಯೇಸುವನ್ನು ಏನೆಂದು ಪ್ರಶ್ನೆ ಕೇಳಿದರು? | ನಾವು ಸಾಯುತ್ತಿದ್ದೇವೆ ಎಂಬುದರ ಬಗ್ಗೆ ಆತನಿಗೆ ಚಿಂತೆ ಇದೆಯೋ ಎಂದು ಶಿಷ್ಯರು ಯೇಸುವನ್ನು ಕೇಳಿದರು. | |||
68 | 4:39 | vehj | ಆಗ ಯೇಸು ಏನು ಮಾಡಿದನು? | ಯೇಸು ಗಾಳಿಯನ್ನು ಗದರಿಸಿ, ಸಮುದ್ರವನ್ನು ಶಾಂತ ಮಾಡಿದನು. | |||
69 | 4:41 | fkpr | ಯೇಸು ಇದನ್ನು ಮಾಡಿದ ನಂತರ, ಶಿಷ್ಯರ ಪ್ರತಿಕ್ರಿಯೆ ಏನಾಗಿತ್ತು? | ಶಿಷ್ಯರು ಮಹಾ ಭಯದಿಂದ ಕೂಡಿದರು, ಗಾಳಿಯೂ ಸಮುದ್ರವೂ ಆತನಿಗೆ ವಿಧೇಯವಾಗುತ್ತಲ್ಲಾ, ಹಾಗಾದರೆ ಯೇಸು ಯಾರಾಗಿರಬಹುದೆಂದು ಆಶ್ಚರ್ಯಪಟ್ಟರು. | |||
70 | 5:1-2 | f3h1 | ಗೆರೆಸೇನೆಯ ಪ್ರದೇಶಕ್ಕೆ ಅವರು ಬಂದಾಗ ಯೇಸುವನ್ನು ಯಾರು ಎದುರುಗೊಂಡರು? | ದೆವ್ವ ಹಿಡಿದಿದ್ದ ಮನುಷ್ಯನು ಯೇಸುವನ್ನು ಎದುರುಗೊಂಡರು. | |||
71 | 5:4 | pvch | ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ ಏನಾಯಿತು? | ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ, ಅವನು ಸರಪಳಿಯನ್ನು ಮುರಿದು ಹಾಕಿದನು. | |||
72 | 5:7 | s4bf | ದೆವ್ವುವ ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? | ದೆವ್ವವು ಯೇಸುವನ್ನು ಮಹೋನ್ನತನಾದ ದೇವರ ಮಗನು ಎಂದು ಹೇಳಿತು. | |||
73 | 5:8 | s0ay | ಮನುಷ್ಯನ ಒಳಗಿದ್ದ ದೆವ್ವಕ್ಕೆ ಯೇಸು ಏನು ಹೇಳಿದನು? | ಯೇಸು, “ದೆವ್ವವೇ, ಆ ಮನುಷ್ಯನ ಒಳಗಿನಿಂದ ಹೊರಗೆ ಬಾ” ಎಂದು ಹೇಳಿದನು. | |||
74 | 5:9 | yw86 | ದೆವ್ವದ ಹೆಸರು ಏನು? | ದೆವ್ವದ ಹೆಸರು ದಂಡು ಎಂದು, ಯಾಕೆಂದರೆ ಅವುಗಳು ಬಹಳವಾಗಿ ಇದ್ದವು. | |||
75 | 5:13 | jvth | ಯೇಸು ಮನುಷ್ಯನಿಂದ ದೆವ್ವವನ್ನು ಬಿಡಿಸಿದಾಗ ಏನಾಯಿತು? | ದೆವ್ವಗಳು ಹೊರ ಬಂದು ಹಂದಿಗಳ ಗುಂಪಿನೊಳಗೆ ಹೊಕ್ಕವು, ಅವು ಕಡಿದಾದ ಬೆಟ್ಟದತ್ತ ಓಡಿಹೋಗಿ ನದಿಯಲ್ಲಿ ಮುಳುಗಿದವು | |||
76 | 5:15 | ist0 | ದೆವ್ವವನ್ನು ಬಿಡಿಸಿದ ನಂತರ, ಆ ಮನುಷ್ಯನ ಸ್ಥಿತಿಯು ಹೇಗಿತ್ತು? | ಮನುಷ್ಯನು ಬಟ್ಟೆ ಹಾಕಿಕೊಂಡು ಸ್ವಸ್ಥ ಮನಸ್ಸಿನಿಂದ ಯೇಸುವಿನೊಂದಿಗೆ ಕುಳಿತಿದ್ದನು. | |||
77 | 5:17 | mpj9 | ಆ ಪ್ರದೇಶದ ಜನರು ಯೇಸುವನ್ನು ಏನು ಮಾಡುವಂತೆ ಕೇಳಿಕೊಂಡರು? | ಜನರು ಯೇಸುವನ್ನು ಅವರ ಪ್ರದೇಶವನ್ನು ಬಿಟ್ಟು ಹೋಗುವಂತೆ ಕೇಳಿಕೊಂಡರು. | |||
78 | 5:19 | w96x | ಗುಹೆಗಳಲ್ಲಿ ವಾಸಿಸುತ್ತಿದ್ದ ಆ ಮನುಷ್ಯನಿಗೆ ಈಗ ಏನು ಮಾಡುವಂತೆ ಯೇಸು ಹೇಳಿದನು? | ಕರ್ತನು ಅವನಿಗೆ ಏನು ಮಾಡಿದ್ದಾನೆಂದು ಜನರಿಗೆ ಹೇಳುವಂತೆ ಯೇಸು ಆ ಮನುಷ್ಯನಿಗೆ ಹೇಳಿದನು. | |||
79 | 5:22-23 | pj22 | ಸಭಾಮಂದಿರದ ನಾಯಕನಾದ ಯಾಯೀರನು ಯೇಸುವಿಗೆ ಏನೆಂದು ಭಿನ್ನವಿಸಿದನು? | ಯಾಯೀರನು ಯೇಸುವಿಗೆ ಮರಣದ ಅಂಚಿನಲ್ಲಿರುವ ತನ್ನ ಮಗಳ ಮೇಲೆ ಕೈ ಇಡಲು ತನ್ನ ಜೊತೆಗೆ ಬರುವಂತೆ ಕೇಳಿಕೊಂಡನು. | |||
80 | 5:25 | atxm | ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದ ಹೆಂಗಸಿನ ಸಮಸ್ಯೆ ಏನಾಗಿತ್ತು? | ಆ ಹೆಂಗಸು 12 ವರ್ಷಗಳಿಂದ ರಕ್ತಕುಸುಮ ರೋಗದಿಂದ ಬಳಲುತ್ತಿದ್ದಳು. | |||
81 | 5:28 | afd1 | ಆ ಹೆಂಗಸು ಯೇಸುವಿನ ಬಟ್ಟೆಯ ಗೊಂಡೆಯನ್ನು ಯಾಕೆ ಮುಟ್ಟಿದಳು? | ಯೇಸುವಿನ ಬಟ್ಟೆಗಳನ್ನು ಮುಟ್ಟಿದರೆ ಆಕೆ ಸ್ವಸ್ಥಳಾಗುತ್ತೇನೆ ಎಂದು ಯೋಚಿಸಿ ಮುಟ್ಟಿದಳು. | |||
82 | 5:30 | mrlf | ಆ ಹೆಂಗಸು ಆತನ ಬಟ್ಟೆಯ ಗೊಂಡೆಯನ್ನು ಮುಟ್ಟಿದಾಗ ಯೇಸು ಏನು ಮಾಡಿದನು? | ತನ್ನ ಮೂಲಕ ಶಕ್ತಿಯು ಹರಿದು ಹೋಯಿತು ಎಂದು ತಿಳಿದು ಯೇಸು ತನ್ನ ಬಟ್ಟೆಯನ್ನು ಯಾರು ಮುಟ್ಟಿದರು ಎಂದು ಕೇಳಿದನು. | |||
83 | 5:32 | lyq8 | ಆ ಹೆಂಗಸು ಯೇಸುವಿನ ಬಟ್ಟೆಯನ್ನು ಮುಟ್ಟಿದ ನಂತರ ಯೇಸು ಏನು ಮಾಡಿದನು? | ಯೇಸು ಸುತ್ತಲೂ ತಿರುಗಿ ಯಾರು ತನ್ನನ್ನು ಮುಟ್ಟಿದವರು ಯಾರು ಎಂದು ನೋಡಿದನು. | |||
84 | 5:34 | jfch | ಆ ಹೆಂಗಸು ಎಲ್ಲಾ ಸತ್ಯವನ್ನು ಯೇಸುವಿಗೆ ಹೇಳಿದಾಗ, ಯೇಸು ಆಕೆಗೆ ಏನು ಹೇಳಿದನು? | ಆಕೆಯ ನಂಬಿಕೆಯೇ ಆಕೆಯನ್ನು ಸ್ವಸ್ಥಮಾಡಿತು, ಸಮಾಧಾನದಿಂದ ಹೋಗು ಎಂದು ಯೇಸು ಆಕೆಗೆ ಹೇಳಿದನು. | |||
85 | 5:35 | spbi | ಯೇಸು ಮನೆಗೆ ಬಂದಾಗ ಯಾಯೀರನ ಮಗಳ ಸ್ಥಿತಿಯು ಏನಾಗಿತ್ತು? | ಯಾಯೀರನ ಮಗಳು ಸತ್ತುಹೋಗಿದ್ದಳು. | |||
86 | 5:36 | fai5 | ಆ ಸಮಯದಲ್ಲಿ ಯೇಸು ಯಾಯೀರನಿಗೆ ಏನು ಹೇಳಿದನು? | ಯೇಸು ಯಾಯೀರನಿಗೆ ಭಯಪಡಬೇಡ, ನಂಬು ಎಂದು ಹೇಳಿದನು. | |||
87 | 5:37 | ffse | ಮಗುವು ಇದ್ದ ಕೋಣೆಗೆ ಯೇಸುವಿನೊಂದಿಗೆ ಹೋದ ಶಿಷ್ಯರು ಯಾರು? | ಪೇತ್ರ, ಯಾಕೋಬ, ಮತ್ತು ಯೋಹಾನ ಯೇಸುವಿನೊಂದಿಗೆ ಕೋಣೆಯ ಒಳಗೆ ಹೋದರು. | |||
88 | 5:40 | sunl | ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಮನೆಯಲ್ಲಿದ್ದ ಜನರು ಏನು ಮಾಡಿದರು? | ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಜನರು ಯೇಸುವನ್ನು ಅಪಹಾಸ್ಯ ಮಾಡಿದರು. | |||
89 | 5:42 | km08 | ಮಗುವು ಎದ್ದು ನಡೆದಾಗ, ಜನರು ಹೇಗೆ ಪ್ರತಿಕ್ರಿಯಿಸಿದರು? | ಜನರು ಬಹಳ ಆಶ್ಚರ್ಯಗೊಂಡು ಬೆರಗಾದರು. | |||
90 | 6:2 | o2l2 | ಯೇಸುವಿನ ಸ್ವಂತ ಊರಿನ ಜನರು ಆತನ ಬಗ್ಗೆ ಯಾಕೆ ಆಶ್ಚರ್ಯಪಟ್ಟರು? | ಆತನ ಉಪದೇಶಗಳು, ಆತನ ಜ್ಞಾನ, ಮತ್ತು ಆತನ ಅದ್ಭುತಗಳು ಎಲ್ಲಿಂದ ಬಂದವೆಂದು ಜನರಿಗೆ ತಿಳಿದಿರಲಿಲ್ಲ. | |||
91 | 6:4 | d9fa | ಎಲ್ಲಿ ಪ್ರವಾದಿಗೆ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು? | ಪ್ರವಾದಿಗೆ ಅವನ ಸ್ವಂತ ಊರಿನಲ್ಲಿಯೂ, ಅವನ ಸಂಬಂಧಿಕರ ಮಧ್ಯದಲ್ಲಿಯೂ, ಅವನ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು. | |||
92 | 6:6 | arwk | ಆತನ ಸ್ವಂತ ಊರಿನ ಜನರ ಬಗ್ಗೆ ಯೇಸುವನ್ನು ಏನು ಬೆರಗುಗೊಳಿಸಿತು? | ಆತನ ಸ್ವಂತ ಊರಿನ ಜನರ ಅಪನಂಬಿಕೆಯು ಯೇಸುವನ್ನು ಬೆರಗುಗೊಳಿಸಿತು. | |||
93 | 6:7 | djdl | ಹನ್ನೆರಡು ಮಂದಿಯನ್ನು ಕಳುಹಿಸಿ ಕೊಡುವಾಗ ಯೇಸು ಅವರಿಗೆ ಯಾವ ಅಧಿಕಾರವನ್ನು ಕೊಟ್ಟನು? | ದೆವ್ವಗಳ ಮೇಲೆ ಯೇಸು ಹನ್ನೆರಡು ಮಂದಿಗೆ ಅಧಿಕಾರವನ್ನು ಕೊಟ್ಟನು. | |||
94 | 6:8-9 | e4e2 | ಹನ್ನೆರಡು ಮಂದಿಯು ಅವರ ಪ್ರಯಾಣದಲ್ಲಿ ಏನನ್ನು ತೆಗೆದುಕೊಂಡು ಹೋದರು? | ಆ ಹನ್ನೆರಡು ಮಂದಿ ಕೋಲು, ಕೆರಗಳು, ಮತ್ತು ಒಂದು ಬಟ್ಟೆಯನ್ನು ತೆಗೆದುಕೊಂಡು ಹೋದರು. | |||
95 | 6:11 | yfhp | ಆ ಸ್ಥಳದವರು ಅವರನ್ನು ಸ್ವೀಕರಿಸದಿದ್ದರೆ ಆ ಸ್ಥಳಕ್ಕೆ ಏನು ಮಾಡುವಂತೆ ಯೇಸು ಆ ಹನ್ನೆರಡು ಮಂದಿಗೆ ಹೇಳಿದನು? | ಯೇಸು ಆ ಹನ್ನೆರಡು ಮಂದಿಗೆ ಅವರ ಕಾಲ ಕೆಳಗೆ ಇರುವ ಧೂಳನ್ನು ಅವರ ವಿರುದ್ದ ಸಾಕ್ಷಿಯಾಗಿ ಜಾಡಿಸಿ ಬಿಡಿರಿ ಎಂದು ಹೇಳಿದನು. | |||
96 | 6:14-15 | iota | ಯೇಸು ಯಾರೆಂದು ಜನರು ಊಹಿಸಿದರು? | ಜನರು ಯೇಸು ಸ್ನಾನಿಕನಾದ ಯೋಹಾನನು ಅಥವಾ ಎಲೀಯನು ಅಥವಾ ಪ್ರವಾದಿ ಎಂದು ಊಹಿಸಿದರು. | |||
97 | 6:18 | wv8i | ಸ್ನಾನಿಕನಾದ ಯೋಹಾನನು ಹೆರೋದನಿಗೆ ಯಾವ ಅಧರ್ಮವನ್ನು ಮಾಡುತ್ತಿದ್ದಿಯಾ ಎಂದು ಹೇಳಿದನು? | ಯೋಹಾನನು ಹೆರೋದನಿಗೆ ನಿನ್ನ ಸಹೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದು ಅಧರ್ಮವೆಂದು ಹೇಳಿದನು. | |||
98 | 6:20 | l858 | ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡಾಗ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? | ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡ ಹೆರೋದನು ಗಲಿಬಿಲಿ ಗೊಂಡನು, ಆದರೂ ಅವನ ಮಾತನ್ನು ಸಂತೋಷದಿಂದ ಕೇಳಿಸಿಕೊಳ್ಳುತ್ತಿದ್ದನು. | |||
99 | 6:23 | fzf0 | ಹೆರೋದನು ಅಣೆಯಿಟ್ಟು ಹೆರೋದ್ಯಳಿಗೆ ಏನೆಂದು ಮಾತು ಕೊಟ್ಟನು? | ಆಕೆ ಏನೇ ಕೇಳಿಕೊಂಡರೂ, ಅರ್ಧ ರಾಜ್ಯವನ್ನೇ ಕೇಳಿಕೊಂಡರೂ ಆಕೆಗೆ ಕೊಡುತ್ತೆನೆಂದು ಹೆರೋದನು ಆಣೆಯಿಟ್ಟು ಹೇಳಿದನು. | |||
100 | 6:25 | tn2q | ಹೆರೋದ್ಯಳು ಏನನ್ನು ಕೇಳಿಕೊಂಡಳು? | ಸ್ನಾನಿಕನಾದ ಯೋಹಾನ ತಲೆಯನ್ನು ಪಾರಾತಿನಲ್ಲಿ ಕೊಡಬೇಕೆಂದು ಹೆರೋದ್ಯಳು ಕೇಳಿಕೊಂಡಳು. | |||
101 | 6:26 | cu47 | ಹೆರೋದ್ಯಳ ಕೋರಿಕೆಗೆ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? | ಹೆರೋದನಿಗೆ ಬಹಳ ದು:ಖವಾಯಿತು, ಆದರೂ ಅವನು ಅತಿಥಿಗಳ ಮುಂದೆ ಮಾಡಿದ್ದ ಆಣೆಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ. | |||
102 | 6:33 | c20j | ಯೇಸು ಮತ್ತು ಅಪೋಸ್ತಲರು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ ಏನಾಯಿತು? | ಅನೇಕ ಜನರು ಅವರನ್ನು ಗುರುತಿಸಿ ಓಡುತ್ತಾ ಯೇಸು ಮತ್ತು ಅಪೊಸ್ತಲರ ಬರುವುದಕ್ಕೆ ಮೊದಲೇ ಅವರು ಅಲ್ಲಿಗೆ ಬಂದರು. | |||
103 | 6:34 | mdl0 | ಅವರಿಗಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಯೇಸುವಿನ ಮನೋಭಾವ ಏನಾಗಿತ್ತು? | ಅವರು ಕುರುಬನಿಲ್ಲದ ಕುರಿಗಳಂತೆ ಇದ್ದದ್ದರಿಂದ ಯೇಸುವಿಗೆ ಅವರ ಮೇಲೆ ಕನಿಕರಪಟ್ಟನು | |||
104 | 6:37 | if60 | ಯೇಸು ಜನರಿಗೆ ಊಟಕ್ಕೆ ಏನು ಕೊಡಬೇಕೆಂದು ಇದ್ದೀರಿ ಎಂದು ಕೇಳಿದಾಗ ಶಿಷ್ಯರು ಅದರ ಬಗ್ಗೆ ಏನು ಯೋಚಿಸಿದರು? | ಅವರು ಹೋಗಿ 200 ದಿನಾರಿನ ಬೆಲೆಯ ರೊಟ್ಟಿಯನ್ನು ಖರೀದಿಸಬೇಕೆಂದು ಶಿಷ್ಯರು ಆಲೋಚಿಸಿದರು. | |||
105 | 6:38 | o56u | ಈಗಾಗಲೇ ಶಿಷ್ಯರ ಬಳಿ ಯಾವ ಆಹಾರವಿತ್ತು? | ಈಗಾಗಲೇ ಶಿಷ್ಯರ ಬಳಿ ಐದು ರೊಟ್ಟಿಗಳು ಮತ್ತು ಎರಡು ಮೀನುಗಳು ಇದ್ದವು. | |||
106 | 6:41 | bqyw | ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು ಯೇಸು ಏನು ಮಾಡಿದನು? | ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು, ಯೇಸು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ಆತನ ಶಿಷ್ಯರಿಗೆ ಕೊಟ್ಟನು. | |||
107 | 6:43 | zbvh | ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? | ಎಲ್ಲರೂ ಊಟ ಮಾಡಿದ ನಂತರ 12 ಪುಟ್ಟಿಗಳಷ್ಟು ರೊಟ್ಟಿ, ಮತ್ತು ಮೀನಿನ ತುಂಡುಗಳು ಉಳಿದಿತ್ತು. | |||
108 | 6:44 | yrio | ಎಷ್ಟು ಮಂದಿ ಪುರುಷರಿಗೆ ಊಟ ಬಡಿಸಲಾಯಿತು? | 5,000 ಮಂದಿ ಪುರುಷರಿಗೆ ಊಟ ಬಡಿಸಲಾಯಿತು. | |||
109 | 6:48 | uxae | ಸರೋವರದ ಮೇಲೆ ಯೇಸು ಶಿಷ್ಯರ ಬಳಿಗೆ ಹೇಗೆ ಬಂದನು? | ಯೇಸು ಸರೋವರದ ಮೇಲೆ ನಡೆದುಕೊಂಡು ಶಿಷ್ಯರ ಬಳಿಗೆ ಬಂದನು. | |||
110 | 6:50 | j2xz | ಅವರು ಆತನನ್ನು ನೋಡಿದಾಗ ಯೇಸು ಶಿಷ್ಯರಿಗೆ ಏನೆಂದು ಹೇಳಿದನು? | ಯೇಸು ಶಿಷ್ಯರಿಗೆ ಧೈರ್ಯವಾಗಿರಿ ಭಯಪಡಬೇಡಿರಿ ಎಂದು ಹೇಳಿದನು. | |||
111 | 6:52 | icdc | ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಯಾಕೆ ಅರ್ಥಮಾಡಿಕೊಳ್ಳಲಿಲ್ಲ? | ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ಯಾಕೆಂದರೆ ಅರ್ಥಮಾಡಿಕೊಳ್ಳಲು ಅವರ ಮನಸ್ಸುಗಳು ತುಂಬಾ ಮಂದವಾಗಿದ್ದವು. | |||
112 | 6:55 | qidu | ಆ ಪ್ರದೇಶದ ಜನರು ಯೇಸುವನ್ನು ಗುರುತಿಸಿದ ಮೇಲೆ ಏನು ಮಾಡಿದರು? | ಯೇಸು ಎಲ್ಲೆಲ್ಲಿಗೆ ಬರುತ್ತಿದ್ದಾನೆ ಎಂದು ಕೇಳಿಸಿಕೊಂಡ ಜನರು ರೋಗಿಗಳನ್ನು ಡೋಲಿಗಳಲ್ಲಿ ಕರೆದುಕೊಂಡು ಬರುತ್ತಿದ್ದರು. | |||
113 | 6:56 | nkto | ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರಿಗೆ ಏನಾಯಿತು? | ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರು ಸ್ವಸ್ಥರಾದರು. | |||
114 | 7:2 | t05x | ಯೇಸುವಿನ ಕೆಲವು ಶಿಷ್ಯರು ಫರಿಸಾಯರು ಮತ್ತು ಶಾಸ್ತ್ರಿಗಳು ಬೇಸರಗೊಳ್ಳುವಂತೆ ಏನು ಮಾಡಿದರು? | ಕೆಲವು ಶಿಷ್ಯರು ಕೈಗಳನ್ನು ತೊಳೆಯದೆ ಊಟ ಮಾಡುತ್ತಿದ್ದರು. | |||
115 | 7:3-4 | ym0v | ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಯಾರ ಸಂಪ್ರದಾಯವಾಗಿತ್ತು? | ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಹಿರಿಯರ ಸಂಪ್ರದಾಯವಾಗಿತ್ತು | |||
116 | 7:8-9 | qrmr | ತೊಳೆಯುವ ವಿಷಯದ ಬಗ್ಗೆ ಫರಿಸಾಯರು ಮತ್ತು ಶಾಸ್ತ್ರಿಗಳ ಉಪದೇಶದ ಬಗ್ಗೆ ಯೇಸು ಏನು ಹೇಳಿದನು? | ಯೇಸು ಫರಿಸಾಯರು ಮತ್ತು ಶಾಸ್ತ್ರಿಗಳು ಪುರುಷರಿಗೆ ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ನಿಯಮವನ್ನು ಹಿಡಿದಿದ್ದೀರಿ ಎಂದು ಹೇಳಿದನು. | |||
117 | 7:11-13 | d1yr | ನಿಮ್ಮ ತಂದೆ ಮತ್ತು ತಾಯಿಯನ್ನು ಸನ್ಮಾನಿಸಿರಿ ಎಂದು ದೇವರು ಕೊಟ್ಟ ಆಜ್ಞೆಯನ್ನು ಫರಿಸಾಯರು ಮತ್ತು ಶಾಸ್ತ್ರಿಗಳು ಹೇಗೆ ಅಲ್ಲಗಳೆದರು? | ಅವರು ತಮ್ಮ ತಂದೆ ತಾಯಿಗೆ ಸಹಾಯಕವಾಗುವಂತೆ ಕೊಡುವ ಹಣವನ್ನು ಕೊರ್ಬಾನಿನಂತೆ ಕೊಡಬೇಕೆಂದು ಜನರಿಗೆ ಹೇಳುತ್ತಾ ದೇವರ ಆಜ್ಞೆಯನ್ನು ಅಲ್ಲಗಳೆದರು. | |||
118 | 7:15 | nqfn | ಒಬ್ಬ ವ್ಯಕ್ತಿಯನ್ನು ಯಾವುದು ಮಲಿನ ಮಾಡುವುದಿಲ್ಲ ಎಂದು ಯೇಸು ಹೇಳಿದನು? | ಒಬ್ಬ ವ್ಯಕ್ತಿಯ ಹೊರಗಿನಿಂದ ಬರುವುದು ಅವನೊಳಗೆ ಹೋಗಿ ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು. | |||
119 | 7:15 | l384 | ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? | ಒಬ್ಬ ವ್ಯಕ್ತಿಯಿಂದ ಹೊರಗೆ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು. | |||
120 | 7:18-19 | gvrq | ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು? | ಒಬ್ಬ ವ್ಯಕ್ತಿಯ ಹೊರಗಿರುವಂಥದ್ದು ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು. | |||
121 | 7:19 | yf7h | ಯಾವ ರೀತಿಯ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು? | ಎಲ್ಲಾ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು. | |||
122 | 7:20-23 | w1ic | ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? | ಒಬ್ಬ ವ್ಯಕ್ತಿಯಿಂದ ಹೊರರ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು. | |||
123 | 7:21-22 | t1rz | ಒಬ್ಬ ಮನುಷ್ಯನನ್ನು ಮಲಿನ ಮಾಡಲು ಅವನೊಳಗಿನಿಂದ ಬರುವಂಥ ವಿಷಯಗಳು ಯಾವುವು ಎಂದು ಯೇಸು ಹೇಳಿದನು? | ದುರಾಲೋಚನೆಗಳು, ಲೈಂಗಿಕ ಅನೈತಿಕತೆ, ಕಳ್ಳತನ, ಕೊಲೆ, ಹಾದರ, ದ್ರವ್ಯಾಶೆ, ಕೆಡಕುತನ, ಮೋಸ, ಬಂಡುತನ, ಹೊಟ್ಟೆಕಿಚ್ಚು, ಬೈಗುಳ, ಸೊಕ್ಕು, ಮತ್ತು ಬುದ್ದಿಗೇಡುತನಗಳು ಒಬ್ಬ ವ್ಯಕ್ತಿಯೊಳಗಿಂದ ಬಂದು ಅವನನ್ನು ಮಲಿನಗೊಳಿಸುತ್ತದೆಂದು ಯೇಸು ಹೇಳಿದನು. | |||
124 | 7:25-26 | y2wf | ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಯೆಹೂದ್ಯಳೋ ಅಥವಾ ಗ್ರೀಕಳೋ? | ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಗ್ರೀಕಿನವಳಾಗಿದಳು? | |||
125 | 7:28 | q2o4 | ಮಕ್ಕಳ ರೊಟ್ಟಿಗಳನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲವೆಂದು ಯೇಸು ಆಕೆಗೆ ಹೇಳಿದಾಗ ಆ ಹೆಂಗಸು ಹೇಗೆ ಪ್ರತಿಕ್ರಿಯಿಸಿದಳು? | ಆ ಹೆಂಗಸು ಮೇಜಿನ ಕೆಳಗಿರುವ ನಾಯಿಗಳೂ ಕೂಡ ಮಕ್ಕಳು ತಿಂದು ಬಿಟ್ಟ ರೊಟ್ಟಿಯ ಚೂರುಗಳನ್ನು ತಿನ್ನುತ್ತವೆಂದು ಹೇಳಿದಳು. | |||
126 | 7:29-30 | nb1x | ಯೇಸು ಆ ಹೆಂಗಸಿಗಾಗಿ ಏನು ಮಾಡಿದನು? | ಯೇಸು ಆ ಹೆಂಗಸಿನ ಮಗಳಲ್ಲಿದ್ದ ದೆವ್ವವನ್ನು ಬಿಡಿಸಿದನು. | |||
127 | 7:33-34 | ca4d | ಕಿವುಡು ಮತ್ತು ಮಾತನಾಡುವ ತೊಂದರೆ ಇದ್ದ ಮನುಷ್ಯನನ್ನು ಯೇಸುವಿನ ಬಳಿ ಕರೆದು ತಂದಾಗ, ಅವನನ್ನು ಸ್ವಸ್ಥಮಾಡಲು ಆತನು ಏನು ಮಾಡಿದನು? | ಯೇಸು ತನ್ನ ಬೆರಳುಗಳನ್ನು ಮನುಷ್ಯನ ಕಿವಿಯೊಳಗೆ ಇಟ್ಟು, ಉಗುಳಿ, ಅವನ ನಾಲಿಗೆಯನ್ನು ಮುಟ್ಟಿ, ನಂತರ ಪರಲೋಕದ ಕಡೆಗೆ ನೋಡಿ, “ತೆರೆಯಲ್ಪಡಲಿ!” ಎಂದು ಹೇಳಿದನು. | |||
128 | 7:36 | hc18 | ಆತನು ಮಾಡಿದಂತ ಸ್ವಸ್ಥತೆಗಳ ಬಗ್ಗೆ ಹೇಳಬಾರದೆಂದು ಯೇಸು ಅವರಿಗೆ ಹೇಳಿದಾಗ ಜನರು ಏನು ಮಾಡಿದರು? | ಯೇಸು ಅವರಿಗೆ ಸುಮ್ಮನೆ ಇರಬೇಕೆಂದು ಹೆಚ್ಚಾಗಿ ಆಜ್ಞಾಪಿಸಿದರೂ, ಅವರುಗಳು ಅದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. | |||
129 | 8:1-2 | slgu | ಯೇಸು ತನ್ನನ್ನು ಹಿಂಬಾಲಿಸುತ್ತಿದ್ದ ದೊಡ್ಡ ಜನರ ಗುಂಪಿನ ಬಗ್ಗೆ ಕಾಳಜಿಯಿಂದ ಏನು ಹೇಳಿದನು? | ಯೇಸು ತನ್ನ ಹಿಂಬಾಲಿಸುತ್ತಿದ್ದ ದೊಡ್ಡ ಜನರಗುಂಪಿಗೆ ಊಟಕ್ಕೆ ಏನೂ ಇಲ್ಲವೆಂದು ಕಾಳಜಿಯಿಂದ ಹೇಳಿದನು. | |||
130 | 8:5 | s9oj | ಶಿಷ್ಯರ ಬಳಿ ಎಷ್ಟು ರೊಟ್ಟಿಗಳಿದ್ದವು? | ಶಿಷ್ಯರ ಬಳಿಯಲ್ಲಿ ಏಳು ರೊಟ್ಟಿಗಳಿದ್ದವು. | |||
131 | 8:6 | y5p3 | ಶಿಷ್ಯರ ಬಳಿಯಿದ್ದ ರೊಟ್ಟಿಗಳನ್ನು ಯೇಸು ಏನು ಮಾಡಿದನು? | ಯೇಸು ಕೃತಜ್ಞತಾ ಸ್ತುತಿ ಸಲ್ಲಿಸಿ, ರೊಟ್ಟಿಗಳನ್ನು ಮುರಿದು, ಅದನ್ನು ಹಂಚುವಂತೆ ಶಿಷ್ಯರಿಗೆ ಕೊಟ್ಟನು. | |||
132 | 8:8 | ckyo | ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? | ಎಲ್ಲರೂ ಊಟ ಮಾಡಿದ ನಂತರ ಏಳು ಪುಟ್ಟಿಗಳಷ್ಟು ರೊಟ್ಟಿಗಳು ಉಳಿದಿದ್ದವು. | |||
133 | 8:9 | h9sm | ಎಷ್ಟು ಜನರು ಊಟ ಮಾಡಿ ತೃಪ್ತರಾದರು? | ಸುಮಾರು 4,000 ಮಂದಿ ಗಂಡಸರು ಊಟಮಾಡಿ ತೃಪ್ತರಾದರು. | |||
134 | 8:11 | bo9w | ಆತನನ್ನು ಪರೀಕ್ಷಿಸಲು, ಯೇಸು ಏನು ಮಾಡಬೇಕೆಂದು ಫರಿಸಾಯರು ಬಯಸಿದರು? | ಯೇಸು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡುವಂತೆ ಫರಿಸಾಯರು ಬಯಸಿದ್ದರು. | |||
135 | 8:15 | jt3x | ಫರಿಸಾಯರ ವಿಚಾರವಾಗಿ ಯೇಸು ಶಿಷ್ಯರಿಗೆ ಯಾವುದರ ಬಗ್ಗೆ ಎಚ್ಚರಿಸಿದನು? | ಫರಿಸಾಯರ ಹುಳಿಹಿಟ್ಟಿನ ವಿಷಯವಾಗಿ ಎಚ್ಚರಿಕೆಯಾಗಿರಬೇಕೆಂದು ಯೇಸು ಶಿಷ್ಯರಿಗೆ ಹೇಳಿದನು. | |||
136 | 8:16 | fjm2 | ಯೇಸು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು? | ಅವರು ರೊಟ್ಟಿಯನ್ನು ತರಲು ಮರೆತಿರುವುದರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು. | |||
137 | 8:19 | nrwx | ಯೇಸು ಐದು ರೊಟ್ಟಿಯ ತುಂಡುಗಳನ್ನು ಮುರಿದಾಗ ಏನು ನಡೆಯಿತೆಂದು ಯೇಸು ಶಿಷ್ಯರನ್ನು ನೆನಪಿಸಿದನು? | ಆತನು ಐದು ರೊಟ್ಟಿಗಳನ್ನು ಮುರಿದಾಗ, 5,000 ಜನರಿಗೆ ಊಟ ಬಡಿಸಿದನು ಮತ್ತು ಮುರಿದ ತುಂಡುಗಳನ್ನು 12 ಪುಟ್ಟಿಗಳಷ್ಟು ಒಟ್ಟುಗೂಡಿಸಲಾಯಿತೆಂದು ಯೇಸು ಅವರಿಗೆ ನೆನಪಿಸಿದನು. | |||
138 | 8:23 | lkdf | ಕುರುಡನಿಗೆ ಕಣ್ಣು ಕಾಣಿಸುವ ಹಾಗೆ ಮಾಡಲು ಯೇಸು ಮೊದಲು ಯಾವ ಎರಡು ಕಾರ್ಯವನ್ನು ಮಾಡಿದನು? | ಮೊದಲು ಯೇಸು ಅವನ ಕಣ್ಣುಗಳ ಮೇಲೆ ಉಗುಳಿ, ಅವನ ಮೇಲೆ ತನ್ನ ಕೈಗಳನ್ನಿಟ್ಟನು. | |||
139 | 8:25 | w8lo | ಆ ಕುರುಡನಿಗೆ ಪೂರ್ಣವಾಗಿ ಕಣ್ಣು ಕಾಣುವ ಹಾಗೆ ಯೇಸು ಯಾವ ಮೂರನೆಯ ಕಾರ್ಯವನ್ನು ಮಾಡಿದನು? | ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟನು. | |||
140 | 8:28 | scql | ಜನರು ಯೇಸುವನ್ನು ಯಾರೆಂದು ಹೇಳುತ್ತಿದ್ದರು? | ಜನರು ಯೇಸುವನ್ನು ಸ್ನಾನಿಕನಾದ ಯೋಹಾನನು, ಎಲೀಯನು, ಅಥವಾ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಿದ್ದರು. | |||
141 | 8:29 | pf6h | ಪೇತ್ರನು ಯೇಸುವನ್ನು ಯಾರೆಂದು ಹೇಳಿದನು? | ಯೇಸು ಕ್ರಿಸ್ತನೆಂದು ಪೇತ್ರನು ಹೇಳಿದನು. | |||
142 | 8:31 | ssr3 | ಮುಂದೆ ಆಗುವಂತ ಯಾವ ಘಟನೆಗಳ ಬಗ್ಗೆ ಯೇಸು ಸ್ಪಷ್ಟವಾಗಿ ಆತನ ಶಿಷ್ಯರಿಗೆ ಬೋಧಿಸಲು ಪ್ರಾರಂಭಿಸಿದನು? | ಯೇಸು ಆತನ ಶಿಷ್ಯರಿಗೆ ಮನುಷ್ಯ ಕುಮಾರನು ಸಂಕಟನ್ನು ಅನುಭವಿಸಿ, ತಿರಸ್ಕರಿಸಲ್ಪಡಬೇಕು, ಕೊಲ್ಲಲ್ಪಡಬೇಕು, ಮತ್ತು ಮೂರು ದಿನಗಳ ನಂತರ ಎದ್ದೇಳಬೇಕೆಂದು ಬೋಧಿಸಿದನು. | |||
143 | 8:34 | vqyx | ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ಏನು ಮಾಡಬೇಕೆಂದು ಯೇಸು ಹೇಳಿದನು? | ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ತಮ್ಮನ್ನು ತಾವೇ ಅಲ್ಲಗಳೆಯಬೇಕು, ತನ್ನ ಶಿಲುಬೆಯನ್ನು ಹೊತ್ತುಕೊಂಡು, ತನ್ನನ್ನು ಹಿಂಬಾಲಿಸಬೇಕು ಎಂದು ಯೇಸು ಹೇಳಿದನು. | |||
144 | 8:36 | eosc | ಒಬ್ಬ ವ್ಯಕ್ತಿಯು ಲೋಕದ ವಸ್ತುಗಳನ್ನು ಪಡೆದುಕೊಳ್ಳುವ ಬಯಕೆಯ ಬಗ್ಗೆ ಯೇಸು ಏನು ಹೇಳಿದನು? | ಯೇಸು, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣ ನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಎಂದು ಹೇಳಿದನು. | |||
145 | 8:38 | fczm | ಯೇಸುವಿನ ಬಗ್ಗೆ ಮತ್ತು ಆತನ ಮಾತುಗಳ ಬಗ್ಗೆ ನಾಚಿಕೆ ಪಡುವವರ ಬಗ್ಗೆ ಯೇಸು ಏನು ಹೇಳಿದನು? | ಯೇಸು ತನ್ನ ಬರೋಣದಲ್ಲಿ ತನ್ನನ್ನೂ ತನ್ನ ಮಾತುಗಳನ್ನೂ ನೋಡಿ ನಾಚಿಕೆಪಡುವವರನ್ನು ನಾಚಿಕೆಗೆ ಒಳಪಡಿಸುವನೆಂದು ಹೇಳಿದನು. | |||
146 | 9:1 | ryud | ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ಯಾರು ನೋಡುವರು ಎಂದು ಯೇಸು ಹೇಳಿದನು? | ಯೇಸುವಿನೊಂದಿಗೆ ಅಲ್ಲಿ ನಿಂತಿದ್ದ ಕೆಲವರು ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ನೋಡುವವರೆಗೂ ಅವರು ಸಾಯುವುದಿಲ್ಲ ಎಂದನು. | |||
147 | 9:2-3 | j5nw | ಯೇಸುವಿನೊಂದಿಗೆ ಪೇತ್ರ, ಯಾಕೋಬ, ಯೋಹಾನರು ಎತ್ತರವಾದ ಬೆಟ್ಟಕ್ಕೆ ಹೋದಾಗ ಯೇಸುವಿಗೆ ಏನಾಯಿತು? | ಯೇಸುವಿನ ರೂಪವು ಬದಲಾಯಿತು ಮತ್ತು ಆತನ ಉಡುಪುಗಳು ಬೆಳ್ಳಗೆ ಮಿನುಗುತ್ತಿದ್ದವು. | |||
148 | 9:4 | hssp | ಬೆಟ್ಟದ ಮೇಲೆ ಯೇಸುವಿನೊಂದಿಗೆ ಯಾರು ಮಾತನಾಡುತ್ತಿದ್ದರು? | ಎಲೀಯನೂ ಮೋಶೆಯೂ ಯೇಸುವಿನೊಂದಿಗೆ ಮಾತನಾಡುತ್ತಿದ್ದರು. | |||
149 | 9:7 | gnw6 | ಬೆಟ್ಟದ ಮೇಲೆ, ಮೋಡದೊಳಗಿನಿಂದ ಬಂದ ಸ್ವರವು ಏನೆಂದು ಹೇಳಿತು? | ಆ ಸ್ವರವು, “ಈತನು ನನ್ನ ಪ್ರಿಯ ಮಗನು. ಆತನ ಮಾತನ್ನು ಕೇಳಿರಿ” ಎಂದು ಹೇಳಿತು. | |||
150 | 9:9 | wh06 | ಬೆಟ್ಟದ ಮೇಲೆ ಅವರು ನೋಡಿದ್ದರ ಬಗ್ಗೆ ಯೇಸು ಶಿಷ್ಯರಿಗೆ ಏನೆಂದು ಆಜ್ಞಾಪಿಸಿದನು? | ಮನುಷ್ಯ ಕುಮಾರನು ಮರಣದಿಂದ ಎದ್ದು ಬರುವವರೆಗೂ ಅವರು ನೋಡಿದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು. | |||
151 | 9:11-13 | ct8y | ಎಲೀಯನ ಬರುವಿಕೆಯ ಬಗ್ಗೆ ಯೇಸು ಏನೆಂದು ಹೇಳಿದನು? | ಎಲೀಯನು ಮೊದಲು ಬಂದು ಎಲ್ಲವನ್ನು ಪುನ:ಸ್ಥಾಪಿಸುತ್ತಾನೆ, ಮತ್ತು ಎಲೀಯನು ಈಗಾಗಲೇ ಬಂದಿದ್ದಾನೆ ಎಂದು ಯೇಸು ಹೇಳಿದನು. | |||
152 | 9:17-18 | tzbr | ತಂದೆ ಮತ್ತು ಅವನ ಮಗನಿಗೆ ಶಿಷ್ಯರು ಏನನ್ನು ಮಾಡಲು ಆಗಲಿಲ್ಲ? | ಆ ತಂದೆಯ ಮಗನಿಂದ ದುರಾತ್ಮವನ್ನು ಬಿಡಿಸಲು ಶಿಷ್ಯರಿಗೆ ಆಗಲಿಲ್ಲ. | |||
153 | 9:22 | ifim | ದುರಾತ್ಮವು ಆ ಹುಡುಗನನ್ನು ಬಿಳಿಸಿ ಅವನನ್ನು ನಾಶಮಾಡುವುದಕ್ಕಾಗಿ ಏನು ಮಾಡಿತು? | ದುರಾತ್ಮವು ಆ ಹುಡುಗನನ್ನು ಬೆಂಕಿಯ ಒಳಗೆ ಅಥವಾ ನೀರಿನ ಒಳಗೆ ಬಿಳಿಸಿ ಅವನನ್ನು ನಾಶಮಾಡಲು ಪ್ರಯತ್ನಿಸಿತು. | |||
154 | 9:23-24 | ay7z | ಯಾರು ನಂಬುತ್ತಾರೋ ಅವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದಾಗ ತಂದೆಯು ಹೇಗೆ ಪ್ರತಿಕ್ರಿಯಿಸಿದನು? | “ನಾನು ನಂಬುತ್ತೇನೆ! ನನ್ನ ಅಪನಂಬಿಕೆಗೆ ಸಹಾಯ ಮಾಡಿ!” ಎಂದು ತಂದೆಯು ಪ್ರತಿಕ್ರಿಯಿಸಿದನು. | |||
155 | 9:28-29 | uh6o | ಹುಡುಗನ ಒಳಗೆ ಇದ್ದ ಮೂಕ ಮತ್ತು ಕಿವುಡು ಆತ್ಮವನ್ನು ಶಿಷ್ಯರಿಂದ ಬಿಡಿಸಲು ಯಾಕೆ ಆಗಲಿಲ್ಲ? | ಶಿಷ್ಯರಿಂದ ಆತ್ಮವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಯಾಕೆಂದರೆ ಪ್ರಾರ್ಥನೆಯಿಂದ ಹೊರತು ಮತ್ತಾವುದರಿಂದಲೂ ಅದನ್ನು ಬಿಡಿಸಲು ಆಗುವುದಿಲ್ಲ. | |||
156 | 9:31 | uvpd | ಆತನಿಗೆ ಏನಾಗುತ್ತದೆ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? | ತನ್ನನ್ನು ಮರಣಕ್ಕೆ ಕೊಲ್ಲಲ್ಲುವರು, ಆಮೇಲೆ ಮೂರು ದಿನಗಳ ನಂತರ ತಾನು ತಿರುಗಿ ಎದ್ದು ಬರುವೆನು ಎಂದು ಯೇಸು ಅವರಿಗೆ ಹೇಳಿದನು. | |||
157 | 9:33-34 | q8mj | ದಾರಿಯುದ್ದಕ್ಕೂ ಶಿಷ್ಯರು ಯಾವುದರ ಬಗ್ಗೆ ವಾದ ಮಾಡುತ್ತಿದ್ದರು? | ಅವರುಗಳೊಳಗೆ ಯಾರು ದೊಡ್ಡವರು ಎಂಬುದರ ಬಗ್ಗೆ ಶಿಷ್ಯರು ವಾದ ಮಾಡುತ್ತಿದ್ದರು. | |||
158 | 9:35 | xnwc | ಯಾರು ಮೊದಲಿನವರು ಎಂದು ಯೇಸು ಹೇಳಿದನು? | ಎಲ್ಲರಿಗೂ ಸೇವಕನಾದವನೇ ಮೊದಲಿನವನು ಎಂದು ಯೇಸು ಹೇಳಿದನು. | |||
159 | 9:36-37 | d095 | ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರು ಯಾರನ್ನು ಸ್ವೀಕರಿಸಿದಂತೆ ಆಗುತ್ತದೆ? | ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರೂ ಯೇಸುವನ್ನು ಮತ್ತು ಯೇಸುವನ್ನು ಕಳುಹಿಸಿಕೊಟ್ಟವನನ್ನು ಸ್ವೀಕರಿಸಿದಂತೆ ಆಗುವುದು. | |||
160 | 9:42 | xm92 | ಯೇಸುವನ್ನು ನಂಬುವ ಚಿಕ್ಕವನನ್ನು ಎಡವಿಬೀಳುವಂತೆ ಮಾಡುವವನಿಗೆ ಉತ್ತಮವಾದದು ಯಾವುದು? | ಅವನ ಕುತ್ತಿಗೆಯ ಸುತ್ತಲೂ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರಕ್ಕೆ ಎಸೆಯುವುದೇ ಉತ್ತಮವಾದದು. | |||
161 | 9:47 | qvrv | ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ಏನು ಮಾಡಬೇಕೆಂದು ಯೇಸು ಹೇಳಿದನು? | ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ನಿಮ್ಮ ಕಣ್ಣನ್ನು ಕಿತ್ತು ಬಿಸಾಡಿರಿ ಎಂದು ಯೇಸು ಹೇಳಿದನು. | |||
162 | 9:48 | l2p2 | ನರಕದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? | ನರಕದಲ್ಲಿ ಹುಳಗಳು ಸಾಯುವುದಿಲ್ಲ, ಮತ್ತು ಬೆಂಕಿಯು ಆರಿ ಹೋಗುವುದಿಲ್ಲ ಎಂದು ಯೇಸು ಹೇಳಿದನು. | |||
163 | 10:2 | tk8r | ಯೇಸುವನ್ನು ಪರೀಕ್ಷಿಸಲು ಫರಿಸಾಯರು ಆತನನ್ನು ಯಾವ ಪ್ರಶ್ನೆಯನ್ನು ಕೇಳಿದರು? | ಗಂಡನು ತನ್ನ ಹೆಂಡತಿಗೆ ವಿಚ್ಚೇದನ ಕೊಡುವುದು ಶಾಸ್ತ್ರಸಮ್ಮತವೋ ಎಂದು ಫರಿಸಾಯರು ಯೇಸುವನ್ನು ಕೇಳಿದರು. | |||
164 | 10:4 | p0nl | ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಕೊಟ್ಟ ಆಜ್ಞೆ ಏನು? | ಒಬ್ಬ ಮನುಷ್ಯನು ವಿಚ್ಚೇದನದ ಪತ್ರವನ್ನು ಬರೆದು ಕೊಟ್ಟು ಆಮೇಲೆ ಅವನ ಹೆಂಡತಿಯನ್ನು ಕಳುಹಿಸಬಿಡುವುದಕ್ಕೆ ಮೋಶೆಯು ಅವಕಾಶ ಕೊಟ್ಟನು. | |||
165 | 10:5 | cuwg | ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಏಕೆ ಈ ಆಜ್ಞೆಯನ್ನು ಕೊಟ್ಟನು? | ಅವರ ಹೃದಯಗಳು ಕಠಿಣವಾಗಿದ್ದರಿಂದ ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಈ ಆಜ್ಞೆಯನ್ನು ಕೊಟ್ಟನು | |||
166 | 10:6 | b18w | ವಿವಾಹದ ಮೂಲ ಸಂಕಲ್ಪದ ಬಗ್ಗೆ ಯೇಸು ಫರಿಸಾಯರಿಗೆ ಹೇಳುವಾಗ ಯಾವ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಿದನು? | ಯೇಸು ವಿವಾಹದ ಕುರಿತಾದ ದೇವರ ಮೂಲ ಸಂಕಲ್ಪದ ಬಗ್ಗೆ ಹೇಳುವಾಗ ಆದಿಯಲ್ಲಿ ಗಂಡು ಮತ್ತು ಹೆಣ್ಣಿನ ಸೃಷ್ಟಿಯ ಬಗ್ಗೆ ಉಲ್ಲೇಖಿಸಿದನು. | |||
167 | 10:7-8 | lkz2 | ಗಂಡು ಮತ್ತು ಹೆಣ್ಣು ಇಬ್ಬರೂ ವಿವಾಹವಾದಾಗ ಏನು ಆಗುತ್ತಾರೆಂದು ಯೇಸು ಹೇಳಿದನು? | ಇಬ್ಬರೂ ಒಂದೇ ದೇಹವಾಗುವರು ಎಂದು ಯೇಸು ಹೇಳಿದನು. | |||
168 | 10:9 | bxgt | ವಿವಾಹ ಕಾರ್ಯದಲ್ಲಿ ದೇವರು ಏನನ್ನು ಒಟ್ಟುಗೂಡಿಸಿದ್ದಾನೆಂದು ಯೇಸು ಹೇಳಿದನು? | ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದೆಂದು ಯೇಸು ಹೇಳಿದನು. | |||
169 | 10:13-14 | ftqq | ಚಿಕ್ಕ ಮಕ್ಕಳನ್ನು ಆತನ ಬಳಿಗೆ ಕರೆದುಕೊಂಡು ಬರುತ್ತಿರುವವರನ್ನು ಶಿಷ್ಯರು ಗದರಿಸಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? | ಯೇಸು ಶಿಷ್ಯರ ಮೇಲೆ ಕೋಪಗೊಂಡು ಮತ್ತು ಅವರಿಗೆ ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಲು ಬಿಡಿರಿ ಎಂದು ಅವರಿಗೆ ಹೇಳಿದನು. | |||
170 | 10:15 | s8f7 | ದೇವರ ರಾಜ್ಯದೊಳಗೆ ಪ್ರವೇಶಿಸಲು ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಯೇಸು ಹೇಳಿದನು? | ದೇವರ ರಾಜ್ಯವನ್ನು ಪ್ರವೇಶಿಸಲು ಚಿಕ್ಕ ಮಕ್ಕಳನ್ನು ಸ್ವೀಕರಿಸುವಂತೆ ಅದನ್ನು ಸ್ವೀಕರಿಸಬೇಕು ಎಂದು ಯೇಸು ಹೇಳಿದನು. | |||
171 | 10:19 | slbl | ಒಬ್ಬ ಮನುಷ್ಯನು ನಿತ್ಯಜೀವವನ್ನು ಪಡೆಯಲು ಮೊದಲು ಏನು ಮಾಡಬೇಕೆಂದು ಯೇಸು ಹೇಳಿದನು? | ನರಹತ್ಯ ಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಮೋಸಮಾಡಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂದು ಯೇಸು ಹೇಳಿದನು. | |||
172 | 10:21 | h1nt | ಯೇಸು ಮನುಷ್ಯನಿಗೆ ಯಾವ ಹೆಚ್ಚಿನ ಆಜ್ಞೆಯನ್ನು ಕೊಟ್ಟನು? | ಮನುಷ್ಯನನ್ನು ಅವನಲ್ಲಿರುವುದನ್ನೆಲ್ಲಾ ಮಾರಿ ತನ್ನನ್ನು ಹಿಂಬಾಲಿಸುವಂತೆ ಯೇಸು ಆಜ್ಞಾಪಿಸಿದನು. | |||
173 | 10:22 | r5hj | ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆ ಮನುಷ್ಯನು ಹೇಗೆ ಮತ್ತು ಯಾಕೆ ಪ್ರತಿಕ್ರಿಯಿಸಿದನು? | ಆ ಮನುಷ್ಯನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ದುಃಖಿತನಾಗಿ ಹೊರಟುಹೋದನು. | |||
174 | 10:23-25 | fn0b | ಯಾರಿಗೆ ದೇವರ ರಾಜ್ಯವನ್ನು ಪ್ರವೇಶಿಸಲು ಬಹಳ ಕಷ್ಟವೆಂದು ಯೇಸು ಹೇಳಿದನು? | ದೇವರ ರಾಜ್ಯವನ್ನು ಪ್ರವೇಶಿಸಲು ಶ್ರೀಮಂತನಿಗೆ ಬಹಳ ಕಷ್ಟವೆಂದು ಯೇಸು ಹೇಳಿದನು. | |||
175 | 10:26-27 | a2pr | ಶ್ರೀಮಂತನೂ ಕೂಡ ಹೇಗೆ ರಕ್ಷಿಸಲ್ಪಡಬಹುದು ಎಂದು ಯೇಸು ಹೇಳಿದನು? | ಮನುಷ್ಯರಿಗೆ ಅದು ಅಸಾಧ್ಯ, ಆದರೆ ದೇವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದನು. | |||
176 | 10:29-30 | ut0n | ಯೇಸುವಿನ ನಿಮಿತ್ತ ಮನೆಯನ್ನಾಗಲಿ ಕುಟುಂಬವನ್ನಾಗಲಿ ಮತ್ತು ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವನು ಏನನ್ನು ಸ್ವೀಕರಿಸುತ್ತಾನೆಂದು ಯೇಸು ಹೇಳಿದನು? | ಅವರು ಈ ಲೋಕದಲ್ಲಿ ನೂರು ಪಟ್ಟು ಹೆಚ್ಚಿನದನ್ನು, ಹಿಂಸೆಗಳೊಂದಿಗೆ ಹೊಂದಿಕೊಳ್ಳುವರು ಮತ್ತು ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುತ್ತಾರೆ ಎಂದು ಯೇಸು ಹೇಳಿದನು. | |||
177 | 10:32 | t4vq | ಯೇಸು ಮತ್ತು ಆತನ ಶಿಷ್ಯರು ಯಾವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು? | ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು. | |||
178 | 10:33-34 | ie59 | ಯೆರೂಸಲೇಮಿನಲ್ಲಿ ತನಗೆ ಏನು ಆಗುತ್ತದೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? | ತನಗೆ ಮರಣದಂಡನೆಯನ್ನು ವಿಧಿಸುವರು ಮತ್ತು ಅನ್ಯರ ಕೈಗೆ ಒಪ್ಪಿಸುವರು ಎಂದು ಯೇಸು ಶಿಷ್ಯರಿಗೆ ಹೇಳಿದನು. | |||
179 | 10:35-37 | mu7d | ಯಾಕೋಬ ಮತ್ತು ಯೋಹಾನ ಯೇಸುವಿಗೆ ಏನೆಂದು ಮನವಿ ಮಾಡಿದರು? | ಯಾಕೋಬ ಮತ್ತು ಯೋಹಾನನು ಒಬ್ಬನು ಯೇಸುವಿನ ಮಹಿಮೆಯಲ್ಲಿ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಮಾಡಬೇಕೆಂದು ಮನವಿ ಮಾಡಿಕೊಂಡರು. | |||
180 | 10:39 | xafk | ಯಾಕೋಬ ಮತ್ತು ಯೋಹಾನನು ಏನನ್ನು ಅನುಭವಿಸುತ್ತಾರೆಂದು ಯೇಸು ಹೇಳಿದನು? | ಯಾಕೋಬ ಮತ್ತು ಯೋಹಾನರು ಯೇಸು ಕುಡಿಯುವ ಪಾತ್ರೆಯಲ್ಲಿ ಕುಡಿಯುವರು; ಯೇಸುವಿಗೆ ಆಗುವ ದೀಕ್ಷಾಸ್ನಾನವು ಅವರಿಗೆ ಆಗುವದು ಎಂದು ಯೇಸು ಹೇಳಿದನು. | |||
181 | 10:40 | vd45 | ಯಾಕೋಬ ಮತ್ತು ಯೋಹಾನರ ಮನವಿಯನ್ನು ಯೇಸು ಅನುಗ್ರಹಿಸಿದನೇ? | ಇಲ್ಲ. ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲವೆಂದು ಯೇಸು ಹೇಳಿದನು. | |||
182 | 10:42 | m3q4 | ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿ ಇರುವವರೊಂದಿಗೆ ಹೇಗೆ ವರ್ತಿಸುತ್ತಾರೆಂದು ಯೇಸು ಹೇಳಿದನು? | ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿರುವವರ ಮೇಲೆ ದೊರೆತನ ಮಾಡುವರೆಂದು ಯೇಸು ಹೇಳಿದನು. | |||
183 | 10:43-44 | yky8 | ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಹೇಗೆ ಜೀವಿಸಬೇಕೆಂದು ಯೇಸು ಹೇಳಿದನು? | ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಎಲ್ಲರಿಗೂ ಸೇವಕರಾಗಿರಬೇಕೆಂದು ಯೇಸು ಹೇಳಿದನು. | |||
184 | 10:48 | ece0 | ಕುರುಡನಾಗಿದ್ದ ಬಾರ್ತಿಮಾಯನನ್ನು ಅನೇಕರು ಸುಮ್ಮನೆ ಇರುವಂತೆ ಹೇಳಿ ಗದರಿಸುತ್ತಿರುವಾಗ ಅವನು ಏನು ಮಾಡಿದನು? | “ದಾವೀದ ಕುಮಾರನೇ, ನನ್ನನ್ನು ಕರುಣಿಸು!” ಎಂದು ಬಾರ್ತಿಮಾಯನು ಗಟ್ಟಿಯಾಗಿ ಕೂಗಿದನು. | |||
185 | 10:52 | rato | ಕುರುಡನಾಗಿದ್ದ ಬಾರ್ತಿಮಾಯನಿಗೆ ಸ್ವಸ್ಥತೆಯನ್ನುಂಟು ಮಾಡಿದ್ದು ಯಾವುದೆಂದು ಯೇಸು ಹೇಳಿದನು? | ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು ಎಂದು ಯೇಸು ಬಾರ್ತಿಮಾಯನಿಗೆ ಹೇಳಿದನು. | |||
186 | 11:2 | agr2 | ಯೇಸು ತನ್ನ ಇಬ್ಬರು ಶಿಷ್ಯರಿಗೆ ಅವರಿಗೆ ಎದುರಿಗಿದ್ದ ಹಳ್ಳಿಗೆ ಏನು ಮಾಡಲು ಕಳುಹಿಸಿದನು? | ಯೇಸು ಅವರನ್ನು ಯಾರೂ ಕುಳಿತಿರದ ಕತ್ತೆಮರಿಯನ್ನು ಕರೆತರಲು ಕಳುಹಿಸಿದನು. | |||
187 | 11:5-6 | u8he | ಶಿಷ್ಯರು ಕತ್ತೆಮರಿಯನ್ನು ಬಿಚ್ಚಿದಾಗ ಏನಾಯಿತು? | ಕೆಲವು ಜನರು, ನೀವು ಏನು ಮಾಡುತ್ತಾ ಇದ್ದೀರಿ ಎಂದು ಶಿಷ್ಯರನ್ನು ಕೇಳಿದರು, ಹಾಗಾಗಿ ಯೇಸು ಹೇಳಿದಂತೆಯೇ ಅವರು ಹೇಳಿದರು, ಮತ್ತು ಆಗ ಜನರು ಅವರನ್ನು ತೆಗೆದುಕೊಂಡು ಹೋಗಲು ಬಿಟ್ಟರು. | |||
188 | 11:8 | cgd8 | ಯೇಸು ಕತ್ತೆ ಮರಿಯನ್ನು ಹತ್ತಿ ದಾರಿಯಲ್ಲಿ ಹೋಗುತ್ತಿರುವಾಗ ಜನರು ದಾರಿಯ ಮೇಲೆ ಏನನ್ನು ಹಾಸಿದರು? | ಜನರು ದಾರಿಯ ಮೇಲೆ ತಮ್ಮ ಬಟ್ಟೆಗಳನ್ನು ಮತ್ತು ಹೊಲದಿಂದ ಕತ್ತರಿಸಿಕೊಂಡು ಬಂದ ಕೊಂಬೆಗಳನ್ನು ಹಾಸಿದರು. | |||
189 | 11:10 | vfq1 | ಯೇಸು ಯೆರೂಸಲೇಮಿನ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಜನರು ಯಾವ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು? | ಜನರು ತಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು. | |||
190 | 11:11 | pj8s | ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಏನು ಮಾಡಿದನು? | ಯೇಸು ಸುತ್ತಲೂ ನೋಡಿದನು ಮತ್ತು ಬೇಥಾನ್ಯಕ್ಕೆ ಹೋದನು. | |||
191 | 11:14 | qg7e | ಹಣ್ಣು ಇಲ್ಲದಿರುವ ಅಂಜೂರದ ಮರವನ್ನು ನೋಡಿದಾಗ ಯೇಸು ಏನು ಮಾಡಿದನು? | ಯೇಸು ಅಂಜೂರದ ಮರಕ್ಕೆ, “ನಿನ್ನಿಂದ ಯಾರೂ ಎಂದಿಗೂ ಹಣ್ಣನ್ನು ತಿನ್ನುವುದಿಲ್ಲ” ಎಂದು ಹೇಳಿದನು. | |||
192 | 11:15-16 | pbr1 | ಈ ಸಮಯದಲ್ಲಿ ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಯೇಸು ಏನು ಮಾಡಿದನು? | ಯೇಸು ಮಾರುತ್ತಿದ್ದವರನ್ನೂ ಮತ್ತು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಿದನು ಮತ್ತು ದೇವಾಲಯದ ಮೂಲಕ ಸರಕುಗಳನ್ನು ತೆದುಕೊಂಡು ಹೋಗಲು ಬಿಡಲಿಲ್ಲ. | |||
193 | 11:17 | dgql | ಪವಿತ್ರಗ್ರಂಥದ ಪ್ರಕಾರ ದೇವಾಲಯವು ಏನಾಗಿರಬೇಕೆಂದು ಯೇಸು ಹೇಳಿದನು? | ಎಲ್ಲಾ ದೇಶಗಳಿಗೂ ದೇವಾಲಯವು ಪ್ರಾರ್ಥನಾ ಮಂದಿರವಾಗಿರಬೇಕೆಂದು ಯೇಸು ಹೇಳಿದನು. | |||
194 | 11:17 | hpgp | ಮುಖ್ಯ ಯಾಜಕರೂ ಶಾಸ್ತ್ರಿಗಳೂ ದೇವಾಲಯವನ್ನು ಏನು ಮಾಡಿದ್ದಾರೆಂದು ಯೇಸು ಹೇಳಿದನು? | ಅವರು ದೇವಾಲಯವನು ಕಳ್ಳರ ಗವಿಯನ್ನಾಗಿ ಮಾಡಿದ್ದಾರೆಂದು ಯೇಸು ಹೇಳಿದನು. | |||
195 | 11:18 | x7nj | ಮುಖ್ಯ ಯಾಜಕರೂ ಶಾಸ್ತ್ರಿಗಳೂ ಯೇಸುವಿಗೆ ಏನು ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು? | ಮುಖ್ಯ ಯಾಜಕರೂ ಮತ್ತು ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು. | |||
196 | 11:20 | geb7 | ಯೇಸು ನುಡಿದಂತ ಅಂಜೂರದ ಮರಕ್ಕೆ ಏನಾಯಿತು? | ಯೇಸು ನುಡಿದಂತ ಅಂಜೂರದ ಮರವು ಬೇರು ಸಮೇತ ಒಣಗಿ ಹೋಗಿತ್ತು. | |||
197 | 11:24 | okwn | ಪ್ರಾರ್ಥನೆಯಲ್ಲಿ ನಾವು ಕೇಳುವ ಪ್ರತಿಯೊಂದಕ್ಕೂ ಏನಾಗುತ್ತದೆಂದು ಯೇಸು ಹೇಳಿದನು? | ಪ್ರಾರ್ಥನೆಯಲ್ಲಿ ನಾವು ಬೇಡಿಕೊಳ್ಳುವ ಎಲ್ಲವು ಸಿಕ್ಕಿದೆ, ಮತ್ತು ಅದು ನಮ್ಮದಾಗಿರುತ್ತದೆ ಎಂದು ಯೇಸು ಹೇಳಿದನು. | |||
198 | 11:25 | udpr | ಪರಲೋಕದಲ್ಲಿರುವ ನಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವಂತೆ ನಾವು ಏನು ಮಾಡಬೇಕೆಂದು ಯೇಸು ಹೇಳಿದನು? | ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ ಆಗ ಪರಲೋಕದಲ್ಲಿರುವ ತಂದೆಯು ಸಹ ನಮ್ಮ ತಪ್ಪುಗಳನ್ನು ಕ್ಷಮಿಸುವನು ಎಂದು ಯೇಸು ಹೇಳಿದನು. | |||
199 | 11:27-28 | y3u8 | ದೇವಾಲಯದಲ್ಲಿ, ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರು ಯೇಸುವಿನಿಂದ ಏನನ್ನು ತಿಳಿದುಕೊಳ್ಳಲು ಬಯಸಿದ್ದರು? | ಆತನು ಮಾಡುತ್ತಿದ್ದ ಕೆಲಸಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದಾನೆಂದು ತಿಳಿದುಕೊಳ್ಳಲು ಬಯಸಿದ್ದರು. | |||
200 | 11:29-30 | cdce | ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? | ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ ಬಂದಿತೋ ಎಂದು ಯೇಸು ಅವರನ್ನು ಕೇಳಿದನು. | |||
201 | 11:31 | qfb1 | ಯೋಹಾನನ ದೀಕ್ಷಾಸ್ನಾನವು ಪರಲೋಕದಿಂದ ಬಂದದ್ದು ಎಂದು ಉತ್ತರಿಸಲು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಏಕೆ ಇಷ್ಟವಿರಲಿಲ್ಲ? | ಯಾಕೆಂದರೆ ಯೋಹಾನನನ್ನು ಅವರು ಏಕೆ ನಂಬಲಿಲ್ಲವೆಂದು ಯೇಸು ಕೇಳುತ್ತಾನೆಂದು ಈ ಉತ್ತರವನ್ನು ಕೊಡಲು ಅವರಿಗೆ ಇಷ್ಟವಿರಲಿಲ್ಲ. | |||
202 | 11:32 | zg5i | ಯೋಹಾನನ ದೀಕ್ಷಾಸ್ನಾನವು ಮನುಷ್ಯರಿಂದ ಬಂದದ್ದು ಎಂದು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಉತ್ತರಿಸಲು ಏಕೆ ಇಷ್ಟವಿರಲಿಲ್ಲ? | ಅವರಿಗೆ ಈ ಉತ್ತರವನ್ನು ಕೊಡಲು ಇಷ್ಟವಿರಲಿಲ್ಲ ಯಾಕೆಂದರೆ ಅವರು ಜನರಿಗೆ ಹೆದರಿದರು, ಜನರೆಲ್ಲರು ಯೋಹಾನನನ್ನು ಪ್ರವಾದಿಯೆಂದು ನಂಬಿದ್ದರು. | |||
203 | 12:1 | k9g4 | ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆ ಕೊಟ್ಟ ನಂತರ, ಯಜಮಾನನು ಏನು ಮಾಡಿದನು? | ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆಕೊಟ್ಟ ನಂತರ, ಯಜಮಾನನು ಬೇರೆ ದೇಶಕ್ಕೆ ಹೋದನು. | |||
204 | 12:5 | qm75 | ದ್ರಾಕ್ಷೇ ತೋಟದ ಫಲವನ್ನು ತೆಗೆದುಕೊಳ್ಳಲು ಯಜಮಾನನು ಕಳುಹಿಸಿದ ಅನೇಕ ಸೇವಕರಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? | ದ್ರಾಕ್ಷೇ ತೋಟಗಾರರು ಕೆಲವರಿಗೆ ಹೊಡೆದರು ಮತ್ತು ಅನೇಕ ಸೇವಕರುಗಳನ್ನು ಕೊಂದರು. | |||
205 | 12:6 | p7p2 | ಯಜಮಾನನು ಕೊನೆಯದಾಗಿ ದ್ರಾಕ್ಷೇ ತೋಟಗಾರರ ಹತ್ತಿರ ಯಾರನ್ನು ಕಳುಹಿಸಿದನು? | ಯಜಮಾನನು ಕೊನೆಯದಾಗಿ ತನ್ನ ಪ್ರಿಯ ಮಗನನ್ನು ಕಳುಹಿಸಿದನು. | |||
206 | 12:8 | abgx | ಯಜಮಾನನು ಕೊನೆಯದಾಗಿ ಕಳುಹಿಸಿದವನಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? | ದ್ರಾಕ್ಷೇ ತೋಟಗಾರರು ಆತನನ್ನು ಬಂಧಿಸಿ, ಕೊಂದು, ದ್ರಾಕ್ಷೇ ತೋಟದಿಂದ ಹೊರಗೆ ಹಾಕಿದರು. | |||
207 | 12:9 | bpsj | ದ್ರಾಕ್ಷೇ ತೋಟಗಾರರಿಗೆ ದ್ರಾಕ್ಷೇತೋಟದ ಯಜಮಾನನು ಏನು ಮಾಡುತ್ತಾನೆ? | ದ್ರಾಕ್ಷೇ ತೋಟದ ಯಜಮಾನನು ಬಂದು ದ್ರಾಕ್ಷೇ ತೋಟಗಾರರನ್ನು ನಾಶಮಾಡುವನು ಮತ್ತು ದ್ರಾಕ್ಷೇ ತೋಟವನ್ನು ಬೇರೆಯವರಿಗೆ ಕೊಡುವನು. | |||
208 | 12:10 | c54c | ಪವಿತ್ರಗ್ರಂಥದಲ್ಲಿ, ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲಿಗೆ ಏನಾಗುತ್ತದೆ? | ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲು ಮೂಲೆಗಲ್ಲಾಯಿತು. | |||
209 | 12:14 | n5ve | ಫರಿಸಾಯರು ಮತ್ತು ಕೆಲವು ಹೆರೋದ್ಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು? | ಕೈಸರನಿಗೆ ತೆರಿಗೆಯನ್ನು ಕಟ್ಟುವುದು ನ್ಯಾಯವೋ ಅಥವಾ ಇಲ್ಲವೋ ಎಂದು ಅವರು ಆತನನ್ನು ಕೇಳಿದರು. | |||
210 | 12:17 | z3xo | ಅವರ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು? | ಯೇಸು ಅವರಿಗೆ ಕೈಸರನದನ್ನು ಕೈಸರನಿಗೆ ಕೊಡಿರಿ ಮತ್ತು ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. | |||
211 | 12:18 | jy15 | ಸದ್ದುಕಾಯರು ಯಾವುದರಲ್ಲಿ ನಂಬಿಕೆ ಇಡಲಿಲ್ಲ? | ಸದ್ದುಕಾಯರು ಪುನರುತ್ಥಾನದಲ್ಲಿ ನಂಬಿಕೆ ಇಡಲಿಲ್ಲ. | |||
212 | 12:22 | nmuk | ಸದ್ದುಕಾಯರು ಹೇಳಿದ ಕಥೆಯಲ್ಲಿ, ಒಬ್ಬ ಹೆಂಗಸಿಗೆ ಎಷ್ಟು ಜನ ಗಂಡಂದಿರು ಇದ್ದರು? | ಅ ಹೆಂಗಸಿಗೆ ಏಳು ಜನ ಗಂಡಂದಿರು ಇದ್ದರು. | |||
213 | 12:23 | fehv | ಆ ಹೆಂಗಸಿನ ಬಗ್ಗೆ ಸದ್ದುಕಾಯರು ಯೇಸುವನ್ನು ಯಾವ ಪ್ರಶ್ನೆ ಕೇಳಿದರು? | ಪುನರುತ್ಥಾನದಲ್ಲಿ ಯಾವ ಪುರುಷನು ಆ ಹೆಂಗಸಿನ ಗಂಡನಾಗಿರುವನು ಎಂದು ಅವರು ಕೇಳಿದರು? | |||
214 | 12:24 | bs3e | ಸದ್ದುಕಾಯರ ತಪ್ಪಿಗಾಗಿ ಯೇಸು ಯಾವ ಕಾರಣವನ್ನು ಕೊಟ್ಟನು? | ಸದ್ದುಕಾಯರಿಗೆ ಪವಿತ್ರಗ್ರಂಥವಾಗಲಿ ಅಥವಾ ದೇವರ ಶಕ್ತಿಯಾಗಲಿ ತಿಳಿದಿಲ್ಲವೆಂದು ಯೇಸು ಹೇಳಿದನು. | |||
215 | 12:25 | ks2q | ಆ ಹೆಂಗಸಿನ ಬಗ್ಗೆ ಯೇಸು ಸದ್ದುಕಾಯರಿಗೆ ಯಾವ ಉತ್ತರವನ್ನು ಕೊಟ್ಟನು? | ಪುನರುತ್ಥಾನದಲ್ಲಿ, ಪುರುಷನು ಮತ್ತು ಸ್ತ್ರೀಯು ಮದುವೆ ಆಗುವುದಿಲ್ಲ, ಆದರೆ ದೇವದೂತರ ಹಾಗೆ ಇರುವರೆಂದು ಯೇಸು ಹೇಳಿದನು. | |||
216 | 12:26-27 | ete1 | ಪುನರುತ್ಥಾನವಿದೆ ಎಂದು ಪವಿತ್ರಗಂಥದ ಮೂಲಕ ಯೇಸು ಹೇಗೆ ತೋರಿಸಿದನು? | ಯೇಸು ಮೋಶೆಯ ಪುಸ್ತಕದಿಂದ ಉಲ್ಲೇಖಿಸಿದನು, ಅದರಲ್ಲಿ ದೇವರು ಹೀಗೆ ಹೇಳುತ್ತಾನೆ ಆತನು ಅಬ್ರಹಾಮನ, ಇಸಾಕನ, ಮತ್ತು ಯಾಕೋಬನ ದೇವರೆಂದೂ ಹೇಳಿದನು-ಹಾಗಾದರೆ ಅವರೆಲ್ಲರೂ ಜೀವಂತವಾಗಿರಬೇಕು. | |||
217 | 12:29-30 | tzeh | ಯಾವ ಆಜ್ಞೆಯು ಅತಿ ಮುಖ್ಯವಾದದೆಂದು ಯೇಸು ಹೇಳಿದನು? | ಯೇಸು ಕರ್ತನಾದ ನಿಮ್ಮ ದೇವರನ್ನು ಪೂರ್ಣ ಹೃದಯದಿಂದಲೂ, ಪ್ರಾಣದಿಂದಲೂ, ಮನಸ್ಸಿನಿಂದಲೂ, ಬಲದಿಂದಲೂ ಪ್ರೀತಿಸಬೇಕು ಎಂಬುದು ಅತಿ ಮುಖ್ಯವಾದ ಆಜ್ಞೆ ಎಂದು ಹೇಳಿದನು. | |||
218 | 12:31 | mh0y | ಎರಡನೆಯ ಆಜ್ಞೆ ಯಾವುದೆಂದು ಯೇಸು ಹೇಳಿದನು? | ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬುದು ಎರಡನೆಯ ಆಜ್ಞೆ ಎಂದು ಯೇಸು ಹೇಳಿದನು. | |||
219 | 12:35-37 | qo6t | ದಾವೀದನ ಬಗ್ಗೆ ಶಾಸ್ತ್ರಿಗಳ ಹತ್ತಿರ ಯೇಸು ಯಾವ ಪ್ರಶ್ನೆಯನ್ನು ಕೇಳಿದನು? | ಕ್ರಿಸ್ತನು ದಾವೀದನ ಮಗನಾಗಿರುವುದರಿಂದ ದಾವೀದನು ಕ್ರಿಸ್ತನನ್ನು ಕರ್ತನು ಎಂದು ಹೇಗೆ ಕರೆಯಬಹುದೆಂದು ಯೇಸು ಕೇಳಿದನು. | |||
220 | 12:38-40 | ndcc | ಶಾಸ್ತ್ರಿಗಳ ಬಗ್ಗೆ ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಯೇಸು ಜನರಿಗೆ ಹೇಳಿದನು? | ಶಾಸ್ತ್ರಿಗಳು ಜನರಿಂದ ಗೌರವವನ್ನು ಪಡೆಯಲು ಬಯಸುತ್ತಾರೆ, ಆದರೆ ವಿಧವೆಯರ ಮನೆಗಳನ್ನು ನುಂಗಿಹಾಕುತ್ತಾರೆ ಮತ್ತು ಜನರು ನೋಡಲೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ ಎಂದು ಯೇಸು ಹೇಳಿದನು. | |||
221 | 12:44 | vxj4 | ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚು ಕಾಣಿಕೆ ಹಾಕಿದ್ದಾಳೆಂದು ಯೇಸು ಯಾಕೆ ಹೇಳಿದನು? | ಯೇಸು ಆಕೆ ಹೆಚ್ಚು ಹಾಕಿದ್ದಾಳೆಂದು ಹೇಳಿದನು ಯಾಕೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಕೊಟ್ಟಳು ಎಂದನು. | |||
222 | 13:2 | a889 | ದೇವಾಲಯದ ಸುಂದರವಾದ ಕಲ್ಲುಗಳಿಗೆ ಮತ್ತು ಕಟ್ಟಡಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? | ಯೇಸು ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲವೆಂದು ಹೇಳಿದನು. | |||
223 | 13:4 | et3p | ಆಗ ಶಿಷ್ಯರು ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? | ಶಿಷ್ಯರು ಯೇಸುವಿಗೆ ಈ ಸಂಗತಿಗಳು ಯಾವಾಗ ನಡೆಯುತ್ತವೆ, ಮತ್ತು ಅದರ ಸೂಚನೆಗಳು ಯಾವುವು ಎಂದು ಕೇಳಿದರು. | |||
224 | 13:5-6 | znvi | ಯಾವುದರ ಬಗ್ಗೆ ಶಿಷ್ಯರು ಎಚ್ಚರಿಕೆಯಿಂದ ಇರಬೇಕೆಂದು ಯೇಸು ಹೇಳಿದನು? | ಯೇಸು ಶಿಷ್ಯರಿಗೆ ಯಾರೊಬ್ಬರಾಗಲಿ ಅವರನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದನು. | |||
225 | 13:7-8 | umt6 | ಪ್ರಸವ ವೇದನೆಯ ಪ್ರಾರಂಭವು ಹೇಗಿರುತ್ತದೆ ಎಂದು ಯೇಸು ಹೇಳಿದನು? | ಯೇಸು ಪ್ರಸವ ವೇದನೆಯ ಪ್ರಾರಂಭವು ಯುದ್ದಗಳು, ಯುದ್ದಗಳಾಗುವವೆಂಬ ಸುದ್ದಿಯು, ಭೂಕಂಪಗಳು, ಮತ್ತು ಬರಗಾಲಗಳು ಆಗಿರುತ್ತವೆಂದು ಹೇಳಿದನು. | |||
226 | 13:9 | arqh | ಶಿಷ್ಯರಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? | ಯೇಸು ಶಿಷ್ಯರಿಗೆ ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ಸಭಾಮಂದಿರಗಳಲ್ಲಿ ಹೊಡೆಯುವರು; ಮತ್ತು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು ಎಂದು ಹೇಳಿದನು. | |||
227 | 13:10 | p9a0 | ಮೊದಲು ಏನಾಗುತ್ತದೆಂದು ಯೇಸು ಹೇಳಿದನು? | ಮೊದಲು ಸಕಲ ದೇಶಗಳಿಗೆ ಸುವಾರ್ತೆಯು ಸಾರಲ್ಪಡಬೇಕು ಎಂದು ಯೇಸು ಹೇಳಿದನು. | |||
228 | 13:12 | zlct | ಕುಟುಂಬದ ಸದಸ್ಯರುಗಳ ಮಧ್ಯದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? | ಯೇಸು ಕುಟುಂಬದ ಸದಸ್ಯನು ಕುಟುಂಬದ ಮತ್ತೊಬ್ಬ ಸದಸ್ಯನನ್ನು ಮರಣಕ್ಕೆ ಒಪ್ಪಿಸಿಕೊಡುವರು ಎಂದು ಯೇಸು ಹೇಳಿದನು. | |||
229 | 13:13 | trz5 | ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? | ಕೊನೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು ಎಂದು ಯೇಸು ಹೇಳಿದನು. | |||
230 | 13:14 | a194 | ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಏನು ಮಾಡಬೇಕು ಎಂದು ಯೇಸು ಹೇಳಿದನು? | ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಬೆಟ್ಟಗಳಿಗೆ ಓಡಿಹೋಗಬೇಕು ಎಂದು ಯೇಸು ಹೇಳಿದನು. | |||
231 | 13:20 | pgpi | ಆರಿಸಲ್ಪಟ್ಟವರ ರಕ್ಷಣೆ ಹೊಂದುವುದಕ್ಕಾಗಿ ಕರ್ತನು ಏನು ಮಾಡುತ್ತಾನೆ ಯೇಸು ಹೇಳಿದನು? | ಆರಿಸಲ್ಪಟ್ಟವರಿಗೋಸ್ಕರ ಕರ್ತನು ಸಂಕಟದ ದಿನಗಳನ್ನು ಕಡಿಮೆ ಮಾಡುವನು ಎಂದು ಯೇಸು ಹೇಳಿದನು. | |||
232 | 13:22 | zmok | ಜನರನ್ನು ಮೋಸಗೊಳಿಸಲು ಯಾರು ಎದ್ದು ಬರುವರೆಂದು ಯೇಸು ಹೇಳಿದನು? | ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಜನರನ್ನು ಮೋಸಗೊಳಿಸಲು ಎದ್ದೇಳುವರು ಎಂದು ಯೇಸು ಹೇಳಿದನು. | |||
233 | 13:24-25 | mxj5 | ಆ ದಿನಗಳಲ್ಲಿ ಆಗುವ ಸಂಕಟಗಳ ನಂತರ ಬೆಳಕುಗಳಿಗೂ ಮತ್ತು ಪರಲೋಕದಲ್ಲಿರುವ ಶಕ್ತಿಗೂ ಏನಾಗುತ್ತದೆ? | ಸೂರ್ಯ ಚಂದ್ರರು ಕತ್ತಲಾಗುವರು, ನಕ್ಷತ್ರಗಳು ಆಕಾಶದಿಂದ ಕೆಳಗೆ ಬೀಳುವವು. ಪರಲೋಕದಲ್ಲಿರುವ ಶಕ್ತಿಗಳು ನಡುಗುವವು. | |||
234 | 13:26 | ctur | ಮೋಡಗಳಲ್ಲಿ ಜನರು ಏನನ್ನು ನೋಡುವರು? | ಮನುಷ್ಯ ಕುಮಾರನು ಮಹಾ ಶಕ್ತಿ ಮತ್ತು ಮಹಿಮೆಯಿಂದ ಮೋಡಗಳಲ್ಲಿ ಬರುವುದನ್ನು ಅವರು ನೋಡುವರು. | |||
235 | 13:27 | kyem | ಮನುಷ್ಯ ಕುಮಾರನು ಬರುವಾಗ ಏನು ಮಾಡುವನು? | ಆಗ ಮನುಷ್ಯಕುಮಾರನು ಭೂಮಿಯ ಮತ್ತು ಆಕಾಶದ ಕಟ್ಟಕಡೆಯಿಂದ ತಾನು ಆರಿಸಿಕೊಂಡವರನ್ನು ಒಟ್ಟುಗೂಡಿಸುವನು. | |||
236 | 13:30 | zo90 | ಈ ಎಲ್ಲಾ ಸಂಗತಿಗಳು ಆಗುವವರೆಗೂ ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? | ಈ ಎಲ್ಲಾ ಸಂಗತಿಗಳು ಆಗುವವರೆಗೂ ಈ ಸಂತತಿಯು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು. | |||
237 | 13:31 | oxg8 | ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? | ತನ್ನ ವಾಕ್ಯಗಳು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು. | |||
238 | 13:32 | pmdn | ಇವೆಲ್ಲವೂ ಯಾವಾಗ ಆಗುತ್ತದೆಂದು ಯೇಸು ಹೇಳಿದನು? | ಯೇಸು ತಂದೆಯ ಹೊರತು ಮತ್ತಾರಿಗೂ ಆ ದಿನದ ಅಥವಾ ಗಳಿಗೆಯ ಬಗ್ಗೆ ತಿಳಿಯದು ಅಂದನು. | |||
239 | 13:33 | mck3 | ಆ ಕಾಲವು ಯಾವಾಗ ಬರುವುದು ಎಂಬುದರ ಬಗ್ಗೆ ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? | ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಾಗಿರಿ, ಜಾಗರೂಕರಾಗಿರಿ, ಮತ್ತು ಪ್ರಾರ್ಥಿಸಿರಿ ಎಂದು ಹೇಳಿದನು. | |||
240 | 13:35 | zfgp | ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? | ಯೇಸು ತನ್ನ ಬರೋಣವನ್ನು ಎದುರುನೋಡುತ್ತಿರುವಾಗ ಎಚ್ಚರಿಕೆಯಿಂದ ಇರಬೇಕೆಂದು ತನ್ನ ಶಿಷ್ಯರಿಗೆ ಹೇಳಿದನು. | |||
241 | 13:37 | c6rm | ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? | ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಿಂದಿರಿ ಮತ್ತು ಜಾಗರೂಕರಾಗಿರಿ ಎಂದು ಹೇಳಿದನು. | |||
242 | 14:1 | l7mb | ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯಾವ ಸಂಗತಿಯನ್ನು ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದರು? | ಅವರು ಯೇಸುವನ್ನು ಉಪಾಯವಾಗಿ ಸೆರೆ ಹಿಡಿದು ಆತನನ್ನು ಕೊಲ್ಲುವುದರ ಬಗ್ಗೆ ಯೋಚಿಸುತ್ತಿದ್ದರು. | |||
243 | 14:2 | ezqi | ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು ಅದನ್ನು ಮಾಡಲು ಯಾಕೆ ಇಚ್ಚಿಸಲಿಲ್ಲ? | ಜನರ ಮಧ್ಯದಲ್ಲಿ ಗದ್ದಲ ಆಗಬಹುದೆಂದು ಅವರು ಚಿಂತಿಸುತ್ತಿದ್ದರು. | |||
244 | 14:3 | lyx4 | ಕುಷ್ಟರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಹೆಂಗಸು ಯೇಸುವಿಗೆ ಏನು ಮಾಡಿದಳು? | ಒಬ್ಬ ಹೆಂಗಸು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಸುರಿದಳು. | |||
245 | 14:5 | tn7q | ಕೆಲವರು ಆ ಹೆಂಗಸನ್ನು ಯಾಕೆ ಗದರಿಸುತ್ತಿದ್ದರು? | ಆ ಹೆಂಗಸು ಸುಗಂಧತೈಲವನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲವೇ ಎಂದು ಕೆಲವರು ಆ ಹೆಂಗಸನ್ನು ಗದರಿಸುತ್ತಿದ್ದರು. | |||
246 | 14:8 | rqmp | ಆ ಹೆಂಗಸು ತನಗೆ ಏನು ಮಾಡಿದಳೆಂದು ಯೇಸು ಹೇಳಿದನು? | ಯೇಸು ಈ ಹೆಂಗಸು ಉತ್ತರಕ್ರಿಯೆಗೋಸ್ಕರ ತನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ ಎಂದನು. | |||
247 | 14:9 | s2sy | ಆ ಹೆಂಗಸು ಏನು ಮಾಡಿದಳೋ ಅದಕ್ಕೆ ಯೇಸು ಯಾವ ವಾಗ್ದಾನವನ್ನು ಮಾಡಿದನು? | ಲೋಕದಲ್ಲಿ ಎಲ್ಲೆಲ್ಲಿ ಸುವಾರ್ತೆಯು ಸಾರಲ್ಪಡುವುದೋ ಅಲ್ಲೆಲ್ಲಾ ಈ ಹೆಂಗಸು ಏನು ಮಾಡಿದಳೋ ಅದನ್ನು ಅವಳ ನೆನಪಿಗಾಗಿ ಹೇಳಲ್ಪಡುವುದೆಂದು ಯೇಸು ವಾಗ್ದಾನ ಮಾಡಿದನು. | |||
248 | 14:10 | rueu | ಮುಖ್ಯ ಯಾಜಕರ ಬಳಿಗೆ ಇಸ್ಕರಿಯೋತ ಯೂದನು ಯಾಕೆ ಹೋದನು? | ಇಸ್ಕರಿಯೋತ ಯೂದನು ಯೇಸುವನ್ನು ಅವರಿಗೆ ಹಿಡಿದುಕೊಡಲು ಮುಖ್ಯ ಯಾಜಕರ ಬಳಿಗೆ ಹೋದನು. | |||
249 | 14:12-15 | glcb | ಅವರೆಲ್ಲರೂ ಪಸ್ಕ ಹಬ್ಬದ ಊಟವನ್ನು ಮಾಡಲು ಶಿಷ್ಯರು ಹೇಗೆ ಸ್ಥಳವನ್ನು ಕಂಡುಹಿಡಿದರು? | ಯೇಸು ಅವರಿಗೆ ಪಟ್ಟಣದ ಒಳಗೆ ಹೋಗಿ ಅಲ್ಲಿ ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ಹೋಗುತ್ತಿರುವನು ಅವನನ್ನು ಹಿಂಬಾಲಿಸಿರಿ, ಮತ್ತು ಅವನನ್ನು ಪಸ್ಕದ ಊಟವನ್ನು ಮಾಡಲು ಉಪಯೋಗ ಆಗುವ ಅಥಿತಿಯ ಕೋಣೆಯು ಎಲ್ಲಿದೆ ಎಂದು ಅವನನ್ನು ಕೇಳಿರಿ ಅಂದನು. | |||
250 | 14:18 | kkmc | ಅವರು ಮೇಜಿನ ಮೇಲೆ ಒರಗಿಕೊಂಡು ಊಟ ಮಾಡುತ್ತಿರುವಾಗ ಯೇಸು ಏನು ಹೇಳಿದನು? | ಯೇಸು ನನ್ನ ಜೊತೆ ಊಟ ಮಾಡುತ್ತಿರುವ ಶಿಷ್ಯರಲ್ಲಿ ಒಬ್ಬನು ತನ್ನನ್ನು ಹಿಡಿದುಕೊಡುವನು ಎಂದು ಹೇಳಿದನು. | |||
251 | 14:20 | grhr | ಯೇಸು ಯಾವ ಶಿಷ್ಯನು ತನ್ನನ್ನು ಹಿಡಿದುಕೊಡುತ್ತಾನೆ ಎಂದು ಹೇಳಿದನು? | ಯೇಸು ತನ್ನೊಂದಿಗೆ ಊಟದ ಬಟ್ಟಲಿನ ಒಳಗೆ ಕೈ ಅದ್ದುವ ಶಿಷ್ಯನೇ ತನ್ನನ್ನು ಹಿಡಿದುಕೊಡುವನೆಂದು ಹೇಳಿದನು. | |||
252 | 14:21 | lk7c | ಯೇಸುವಿಗೆ ದ್ರೋಹ ಮಾಡಿದ ಶಿಷ್ಯನ ಗತಿಯ ಬಗ್ಗೆ ಯೇಸು ಏನು ಹೇಳಿದನು? | ಯೇಸು ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಎಂದು ಹೇಳಿದನು. | |||
253 | 14:22 | jok6 | ಯೇಸು ಶಿಷ್ಯರಿಗೆ ಮುರಿದ ರೊಟ್ಟಿಯನ್ನು ಕೊಟ್ಟಾಗ ಏನು ಹೇಳಿದನು? | ಯೇಸು, “ಇದನ್ನು ತೆಗೆದುಕೊಳ್ಳಿರಿ. ಇದು ನನ್ನ ದೇಹ.” ಎಂದು ಹೇಳಿದನು. | |||
254 | 14:24 | apk9 | ಯೇಸು ಶಿಷ್ಯರಿಗೆ ಪಾತ್ರೆಯನ್ನು ಕೊಟ್ಟಾಗ ಏನು ಹೇಳಿದನು? | ಯೇಸು, “ಇದು ನನ್ನ ಒಡಂಬಡಿಕೆಯ ರಕ್ತ, ಅನೇಕರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದು ಹೇಳಿದನು. | |||
255 | 14:25 | r9so | ಯೇಸು ತಿರುಗಿ ಯಾವಾಗ ದ್ರಾಕ್ಷಾರಸವನ್ನು ಕುಡಿಯುತ್ತೇನೆಂದು ಹೇಳಿದನು? | ಯೇಸು ತಾನು ದೇವರ ರಾಜ್ಯದಲ್ಲಿ ಹೊಸದಾಗಿ ತಿರುಗಿ ದ್ರಾಕ್ಷಾರಸವನ್ನು ಕುಡಿಯುವೆನು ಎಂದು ಹೇಳಿದನು. | |||
256 | 14:27 | yns3 | ಆಲಿವ್ ಮರದ ಗುಡ್ಡದಲ್ಲಿ, ಯೇಸು ತನ್ನ ಶಿಷ್ಯರ ಬಗ್ಗೆ ಏನೆಂದು ಮುಂತಿಳಿಸಿದನು? | ಶಿಷ್ಯರೆಲ್ಲರೂ ತನ್ನ ನಿಮಿತ್ತವಾಗಿ ತನ್ನನ್ನು ಬಿಟ್ಟುಹೋಗುತ್ತಾರೆಂದು ಯೇಸು ಮುಂತಿಳಿಸಿದನು. | |||
257 | 14:30 | gvoq | ಪೇತ್ರನು ತಾನು ಎಂದಿಗೂ ಬಿಟ್ಟುಹೋಗುವುದಿಲ್ಲ ಎಂದು ಹೇಳಿದಾಗ ಯೇಸು ಪೇತ್ರನಿಗೆ ಏನೆಂದು ಹೇಳಿದನು? | ಯೇಸು ಪೇತ್ರನಿಗೆ ಕೋಳಿಯು ಎರಡು ಸಾರಿ ಕೂಗುವ ಮುಂಚೆ, ಪೇತ್ರನು ಯೇಸುವನ್ನು ಮೂರು ಸಾರಿ ಅಲ್ಲಗಳೆಯುತ್ತಾನೆಂದು ಹೇಳಿದನು. | |||
258 | 14:32-34 | v9za | ಯೇಸು ತಾನು ಪ್ರಾರ್ಥಿಸುತ್ತಿರುವಾಗ ತನ್ನ ಮೂವರು ಶಿಷ್ಯರಿಗೆ ಏನೆಂದು ಹೇಳಿದನು? | ಯೇಸು ಅವರಿಗೆ ಅಲ್ಲೇ ಇದ್ದುಕೊಂಡು ಎಚ್ಚರವಾಗಿರಿ ಎಂದು ಹೇಳಿದನು. | |||
259 | 14:35 | uvgs | ಯೇಸು ಯಾವುದಕ್ಕಾಗಿ ಪ್ರಾರ್ಥಿಸಿದನು? | ಆ ಗಳಿಗೆಯು ತನ್ನಿಂದ ಬಿಟ್ಟುಹೋಗುವಂತೆ ಯೇಸು ಪ್ರಾರ್ಥಿಸಿದನು. | |||
260 | 14:36 | u792 | ತಂದೆಗೆ ತಾನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಏನನ್ನು ಸ್ವೀಕರಿಸಲು ಯೇಸು ಬಯಸಿದನು? | ಯೇಸು ತನ್ನ ಕುರಿತು ತಂದೆಯ ಚಿತ್ತವು ಏನಾಗಿದೆಯೋ ಅದನ್ನು ಸ್ವೀಕರಿಸಲು ಬಯಸಿದನು. | |||
261 | 14:37 | vaa4 | ಯೇಸು ಮೂವರು ಜನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಏನನ್ನು ಕಂಡನು? | ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು. | |||
262 | 14:40 | tadu | ಎರಡನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? | ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು. | |||
263 | 14:41 | yc6c | ಮೂರನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? | ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು. | |||
264 | 14:44-45 | xku4 | ಯೇಸು ಯಾವ ವ್ಯಕ್ತಿ ಎಂದು ಕಾವಲುಗಾರರಿಗೆ ತೋರಿಸಲು ಯೂದನು ಯಾವ ಸೂಚನೆಯನ್ನು ಕೊಟ್ಟನು? | ಯೇಸು ಯಾವ ವ್ಯಕ್ತಿ ಎಂದು ತೋರಿಸಲು ಯೂದನು ಯೇಸುವಿಗೆ ಮುದ್ದಿಟ್ಟನು. | |||
265 | 14:48-49 | afwa | ಪವಿತ್ರಗ್ರಂಥದ ಮಾತು ನೆರವೇರುವಂತೆ ಯೇಸುವನ್ನು ಬಂಧಿಸಿದಾಗ ಏನು ಮಾಡಲಾಯಿತು ಎಂದು ಯೇಸು ಹೇಳಿದನು? | ಯೇಸುವನ್ನು ಕಳ್ಳನಂತೆ ಕತ್ತಿ ಮತ್ತು ಕೋಲುಗಳಿಂದ ಹಿಡಿಯಲು ಬಂದಿದ್ದರಿಂದ ಪವಿತ್ರಗ್ರಂಥದ ವಾಕ್ಯವು ನೆರವೇರಿತು ಎಂದು ಯೇಸು ಹೇಳಿದನು. | |||
266 | 14:50 | v5q7 | ಯೇಸುವು ಬಂಧಿತನಾದಾಗ ಆತನ ಜೊತೆಯಲ್ಲಿ ಇದ್ದವರು ಏನು ಮಾಡಿದರು? | ಯೇಸುವಿನೊಂದಿಗೆ ಇದ್ದವರು ಆತನನ್ನು ಬಿಟ್ಟು ಓಡಿಹೋದರು. | |||
267 | 14:51-52 | xj5b | ಯೇಸು ಬಂಧಿತನಾದಾಗ ಯೇಸುವನ್ನು ಹಿಂಬಾಲಿಸುತ್ತಿದ್ದ ಯೌವನಸ್ಥನು ಏನು ಮಾಡಿದನು? | ಆ ಯೌವನಸ್ಥನು ತನ್ನ ನಾರುಮಡಿಯನ್ನು ಅಲ್ಲೇ ಬಿಟ್ಟು ಬರೀ ಮೈಲಿ ಓಡಿಹೋದನು. | |||
268 | 14:53-54 | mcjr | ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದಾಗ ಪೇತ್ರನು ಎಲ್ಲಿ ಇದ್ದನು? | ಬೆಂಕಿ ಕಾಯಿಸಿಕೊಳ್ಳಲು ಪೇತ್ರನು ಬೆಂಕಿಯ ಬಳಿ ಕಾವಲುಗಾರರ ಮಧ್ಯದಲ್ಲಿ ಕುಳಿತುಕೊಂಡಿದ್ದನು. | |||
269 | 14:55-56 | k3gb | ಯೇಸು ನ್ಯಾಯಸ್ಥಾನಕ್ಕೆ ಒಪ್ಪಿಸಿದಾಗ ಆತನ ವಿರುದ್ದ ಹೇಳಿದ್ದ ಸಾಕ್ಷಿಯಲ್ಲಿ ಏನು ತಪ್ಪಾಗಿತ್ತು? | ಯೇಸುವಿನ ವಿರುದ್ದ ಹೇಳಿದ್ದ ಸಾಕ್ಷಿಯು ತಪ್ಪಾಗಿತ್ತು ಮತ್ತು ಅವು ಒಂದಕ್ಕೊಂದು ಸರಿಬೀಳಲಿಲ್ಲ. | |||
270 | 14:61 | g1ev | ಯೇಸು ಯಾರೆಂದು ಕೇಳಲು ಮಹಾಯಾಜಕನು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದನು? | ಮಹಾಯಾಜಕನು ಯೇಸುವಿಗೆ ನೀನು ಸ್ತುತ್ಯ ದೇವರ ಮಗನಾದ ಕ್ರಿಸ್ತನೋ ಎಂದು ಕೇಳಿದನು. | |||
271 | 14:62 | rabu | ಮಹಾಯಾಜಕನ ಪ್ರಶ್ನೆಗೆ ಯೇಸು ಏನೆಂದು ಉತ್ತರಿಸಿದನು? | ಯೇಸು, “ನಾನೇ” ಎಂದು ಹೇಳಿ ಉತ್ತರಿಸಿದನು. | |||
272 | 14:64 | xher | ಯೇಸುವಿನ ಉತ್ತರವನ್ನು ಕೇಳಿಸಿಕೊಂಡು ಮಹಾಯಾಜಕನು ಯೇಸು ಯಾವ ವಿಷಯದಲ್ಲಿ ತಪ್ಪಿತಸ್ಥನೆಂದು ಹೇಳಿದನು? | ದೇವದೂಷಣೆಯ ಬಗ್ಗೆ ಯೇಸು ತಪ್ಪಿತಸ್ಥನೆಂದು ಮಹಾಯಾಜಕನು ಹೇಳಿದನು. | |||
273 | 14:65 | if4h | ಯೇಸುವಿಗೆ ಮರಣದಂಡನೆಯನ್ನು ವಿಧಿಸಿದ ಮೇಲೆ ಅವರು ಯೇಸುವಿಗೆ ಏನು ಮಾಡಿದರು? | ಅವರು ಆತನ ಮೇಲೆ ಉಗುಳಿದರು, ಆತನಿಗೆ ಗುದಿದ್ದರು, ಮತ್ತು ಆತನನ್ನು ಹೊಡೆದರು. | |||
274 | 14:66-68 | tjt2 | ಪೇತ್ರನು ಯೇಸುವಿನೊಂದಿಗೆ ಇದ್ದನು ಎಂದು ಹೇಳಿದ ದಾಸಿಗೆ ಪೇತ್ರನು ಕೊಟ್ಟ ಉತ್ತರವೇನಾಗಿತ್ತು? | ಆ ದಾಸಿಯು ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅರ್ಥವಾಗಿಲ್ಲ ಅಥವಾ ಅವನಿಗೆ ತಿಳಿದಿಲ್ಲವೆಂದು ಪೇತ್ರನು ಹೇಳಿದನು. | |||
275 | 14:71 | orue | ಯೇಸುವಿನ ಶಿಷ್ಯರಲ್ಲಿ ಇವನೂ ಒಬ್ಬನಾಗಿದ್ದನು ಎಂದು ಮೂರನೆಯ ಬಾರಿ ಅವನನ್ನು ಕೇಳಿದಾಗ ಪೇತ್ರನ ಪ್ರತಿಕ್ರಿಯೆಯು ಏನಾಗಿತ್ತು? | ಯೇಸುವನ್ನು ತಾನು ಅರಿಯನೆಂದು ಆಣೆ ಮಾಡುತ್ತಾ ಪೇತ್ರನು ತನ್ನನ್ನು ತಾನು ಶಪಿಸಿಕೊಳ್ಳುವುದಕ್ಕೂ ಪ್ರಾರಂಭಿಸಿದನು. | |||
276 | 14:72 | dgcn | ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ ಏನಾಯಿತು? | ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ, ಕೋಳಿಯು ಎರಡನೆಯ ಸಾರಿ ಕೂಗಿತು. | |||
277 | 14:72 | wesn | ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ ಪೇತ್ರನು ಏನು ಮಾಡಿದನು? | ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ, ಪೇತ್ರನು ವ್ಯಥೆಪಟ್ಟು ಅತ್ತನು. | |||
278 | 15:1 | myuo | ಬೆಳಗಾದ ಕೂಡಲೇ ಮುಖ್ಯ ಯಾಜಕರು ಯೇಸುವಿಗೆ ಏನು ಮಾಡಿದರು? | ಬೆಳಗಾದ ಕೂಡಲೇ, ಅವರು ಯೇಸುವನ್ನು ಕಟ್ಟಿ ಆತನನ್ನು ಪಿಲಾತನಿಗೆ ಒಪ್ಪಿಸಿದರು. | |||
279 | 15:5 | w0fh | ಮುಖ್ಯ ಯಾಜಕರು ಯೇಸುವಿನ ವಿರುದ್ದ ಅನೇಕ ಆರೋಪಗಳನ್ನು ಮಾಡುತ್ತಿದ್ದಾಗ, ಯೇಸುವಿನ ಬಗ್ಗೆ ಪಿಲಾತನಿಗೆ ಏನು ಆಶ್ಚರ್ಯವೆನಿಸಿತು? | ಯೇಸು ಏನೂ ಉತ್ತರ ಕೊಡದೇ ಇದ್ದುದ್ದಕ್ಕೆ ಪಿಲಾತನಿಗೆ ಆಶ್ಚರ್ಯವಾಯಿತು. | |||
280 | 15:6 | juii | ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರಿಗೆ ಏನು ಮಾಡುತ್ತಿದ್ದನು? | ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರು ಯಾವ ಖೈದಿಯನ್ನು ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದರೋ ಅವನನ್ನು ಬಿಟ್ಟುಕೊಡುತ್ತಿದ್ದನು. | |||
281 | 15:10 | c38r | ಯೇಸುವನ್ನು ಜನರಿಗೆ ಬಿಟ್ಟುಕೊಡಲು ಯಾಕೆ ಬಯಸಿದನು? | ಪಿಲಾತನಿಗೆ ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿಕೊಟ್ಟಿದ್ದಾರೆಂದು ತಿಳಿದಿತ್ತು. | |||
282 | 15:11 | cjv6 | ಜನರ ಗುಂಪು ಯಾರನ್ನು ಬಿಟ್ಟುಕೊಡಬೇಕೆಂದು ಕೂಗಿತು? | ಜನರ ಗುಂಪು ಬರ್ಬನನ್ನು ಬಿಟ್ಟುಕೊಡಬೇಕೆಂದು ಕೂಗಿತು. | |||
283 | 15:12-13 | v1o8 | ಯೆಹೂದ್ಯರ ಅರಸನಿಗೆ ಏನು ಮಾಡಬೇಕೆಂದು ಜನರ ಗುಂಪು ಹೇಳಿತು? | ಯೆಹೂದ್ಯರ ಅರಸನನ್ನು ಶಿಲುಬೆಗೆ ಹಾಕಿಸಬೇಕೆಂದು ಜನರ ಗುಂಪು ಹೇಳಿತು. | |||
284 | 15:17 | hku5 | ಸೈನಿಕರ ಗುಂಪು ಯೇಸುವನ್ನು ಹೇಗೆ ಉಡಿಸಿದರು? | ಸೈನಿಕರು ಯೇಸುವಿನ ಮೇಲೆ ಕೆಂಪು ಒಲ್ಲಿಯನ್ನು ಹೊದಿಸಿದರು ಮತ್ತು ಮುಳ್ಳಿನ ಕಿರೀಟವನ್ನು ಹೆಣೆದು ಆತನಿಗಿಟ್ಟರು. | |||
285 | 15:21 | vt0v | ಯೇಸುವಿನ ಶಿಲುಬೆಯನ್ನು ಯಾರು ಹೊತ್ತರು? | ದಾರಿಹೋಕನಾದ, ಕುರೇನೆ ಪಟ್ಟಣದ ಸೀಮೋನನ್ನು ಯೇಸುವಿನ ಶಿಲುಬೆಯನ್ನು ಹೊರುವಂತೆ ಬಲವಂತ ಮಾಡಿದರು. | |||
286 | 15:22 | ekh7 | ಯೇಸುವನ್ನು ಶಿಲುಬೆಗೆ ಹಾಕಲು ಸೈನಿಕರು ಆತನನ್ನು ಕರೆದುಕೊಂಡು ಬಂದ ಸ್ಥಳದ ಹೆಸರೇನು? | ಸ್ಥಳದ ಹೆಸರು ಗೊಲ್ಗತ್ತಾ ಎಂದು, ಅಂದರೆ ಕಪಾಲಸ್ಥಳ. | |||
287 | 15:24 | osm6 | ಯೇಸುವಿನ ಉಡುಪುಗಳನ್ನು ಸೈನಿಕರು ಏನು ಮಾಡಿದರು? | ಸೈನಿಕರು ಯೇಸುವಿನ ಉಡುಪುಗಳಿಗಾಗಿ ಚೀಟು ಹಾಕಿದರು. | |||
288 | 15:26 | pb4n | ಸೈನಿಕರು ಯೇಸುವಿನ ವಿರುದ್ದ ಸೂಚಕಫಲಕದಲ್ಲಿ ಏನೆಂದು ಬರೆದರು? | ಸೈನಿಕರು, “ಯೆಹೂದ್ಯರ ಅರಸನು”ಎಂಬ ಸೂಚಕಫಲಕದಲ್ಲಿ ಬರೆದರು. | |||
289 | 15:29-30 | dh4r | ಹಾದು ಹೋಗುತ್ತಿರುವವರು ಯೇಸುವಿಗೆ ಏನು ಮಾಡುವಂತೆ ಸವಾಲು ಹಾಕಿದರು? | ಹಾದು ಹೋಗುತ್ತಿರುವವರು ಯೇಸುವಿಗೆ ನಿನ್ನನ್ನು ನೀನು ರಕ್ಷಿಸಿಕೋ ಮತ್ತು ಶಿಲುಬೆಯಿಂದ ಕೆಳಗೆ ಇಳಿದು ಬಾ ಎಂದು ಸವಾಲು ಹಾಕಿದರು. | |||
290 | 15:31-32 | o4cc | ಅವರುಗಳು ನಂಬುವಂತೆ ಯೇಸು ಏನು ಮಾಡಬೇಕು ಎಂದು ಮುಖ್ಯ ಯಾಜಕರು ಹೇಳಿದರು? | ಅವರುಗಳು ನಂಬುವಂತೆ ಯೇಸು ಶಿಲುಬೆಯಿಂದ ಕೆಳಗೆ ಇಳಿದು ಬರಬೇಕೆಂದು ಮುಖ್ಯ ಯಾಜಕರು ಹೇಳಿದರು. | |||
291 | 15:32 | wdk2 | ಯೇಸುವನ್ನು ಅಣಕಿಸುತ್ತಾ ಮುಖ್ಯ ಯಾಜಕರು ಯೇಸುವಿಗೆ ಯಾವ ಬಿರುದುಗಳನ್ನು ಉಪಯೋಗಿಸಿದರು? | ಮುಖ್ಯ ಯಾಜಕರು ಯೇಸುವನ್ನು ಕ್ರಿಸ್ತನೆಂದು ಮತ್ತು ಇಸ್ರಾಯೇಲಿನ ಅರಸನು ಎಂದು ಕರೆದರು. | |||
292 | 15:33 | ppto | ಆರು ಗಂಟೆಗೆ ಏನಾಯಿತು? | ಆರು ಗಂಟೆಗೆ, ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. | |||
293 | 15:34 | t3wi | ಒಂಬತ್ತು ಘಂಟೆಯ ಸಮಯದಲ್ಲಿ ಯೇಸು ಏನೆಂದು ಕೂಗಿದನು? | ಯೇಸು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಕೂಗಿದನು. | |||
294 | 15:37 | x92v | ಯೇಸು ಸಾಯುವ ಮೊದಲು ಏನು ಮಾಡಿದನು? | ಯೇಸು ಸಾಯುವ ಮೊದಲು ಮಹಾಶಬ್ದದಿಂದ ಕೂಗಿದನು. | |||
295 | 15:38 | jdq8 | ಯೇಸು ಮರಣ ಹೊಂದಿದಾಗ ದೇವಾಲಯದಲ್ಲಿ ಏನಾಯಿತು? | ಯೇಸು ಮರಣ ಹೊಂದಿದಾಗ ದೇವಾಲಯದ ಪರದೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗವಾಗಿ ಹರಿದು ಹೋಯಿತು. | |||
296 | 15:39 | tf5m | ಯೇಸು ಹೇಗೆ ಸತ್ತನು ಎಂದು ನೋಡಿದಾಗ ಶತಾಧಿಪತಿಯು ಏನು ಮಾಡಿದನು? | ಶತಾಧಿಪತಿಯು ನಿಜವಾಗಲೂ ಈ ಮನುಷ್ಯನು ದೇವರ ಮಗನು ಎಂದು ಸಾಕ್ಷಿ ಹೇಳಿದನು. | |||
297 | 15:42 | mthb | ಯೇಸುವು ಯಾವ ದಿನದಲ್ಲಿ ಸತ್ತನು? | ಯೇಸು ಸಬ್ಬತ್ ದಿನದ ಹಿಂದಿನ ದಿನ ಸತ್ತನು. | |||
298 | 15:43-46 | yusf | ಯೇಸು ಸತ್ತ ನಂತರ ಅರಿಮಥಾಯದ ಯೋಸೇಫನು ಏನು ಮಾಡಿದನು? | ಅರಿಮಥಾಯದ ಯೋಸೇಫನು ಶಿಲುಬೆಯಿಂದ ಯೇಸುವನ್ನು ಕೆಳಗೆ ಇಳಿಸಿದನು, ಆತನನ್ನು ನಾರುಮಡಿಯಲ್ಲಿ ಸುತ್ತಿದನು, ಮತ್ತು ಸಮಾಧಿಯಲ್ಲಿಟ್ಟನು, ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. | |||
299 | 16:1-2 | l3lc | ಯೇಸುವಿನ ದೇಹಕ್ಕೆ ಸುಗಂಧ ತೈಲವನ್ನು ಹಚ್ಚಲು ಸ್ತ್ರೀಯರು ಯಾವಾಗ ಹೋದರು? | ಸೂರ್ಯನು ಹುಟ್ಟುವ ಮೊದಲೇ, ವಾರದ ಮೊದಲನೆಯ ದಿನದಲ್ಲಿ ಆ ಹೆಂಗಸು ಸಮಾಧಿಯ ಬಳಿಗೆ ಹೋದಳು. | |||
300 | 16:4 | b2oz | ಸಮಾಧಿಯ ಬಾಗಿಲನ್ನು ತುಂಬಾ ದೊಡ್ಡ ಕಲ್ಲಿನಿಂದ ಮುಚ್ಚಿಡಲಾಗಿತ್ತು. ಆದರೆ ಆ ಸ್ತ್ರೀಯರು ಸಮಾಧಿಯೊಳಗೆ ಹೇಗೆ ಪ್ರವೇಶಿಸಿದರು? | ಸಮಾಧಿಯ ಪ್ರವೇಶ ದ್ವಾರದಿಂದ ಯಾರೋ ತುಂಬಾ ದೊಡ್ಡ ಕಲ್ಲನ್ನು ಉರುಳಿಸಿದ್ದರು. | |||
301 | 16:5 | habp | ಆ ಸ್ತ್ರೀಯರು ಸಮಾಧಿಯ ಒಳಗೆ ಪ್ರವೇಶಿಸಿದಾಗ ಏನನ್ನು ನೋಡಿದರು? | ಒಬ್ಬ ಯೌವನಸ್ಥನು ಬಿಳಿಯ ಬಟ್ಟೆಯನ್ನು ಹಾಕಿಕೊಂಡು ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನು ಆ ಸ್ತ್ರೀಯರು ನೋಡಿದರು. | |||
302 | 16:6 | nvic | ಆ ಯೌವನಸ್ಥನು ಯೇಸುವಿನ ಬಗ್ಗೆ ಏನು ಹೇಳಿದನು? | ಆ ಯೌವನಸ್ಥನು ಯೇಸು ಎದ್ದಿದ್ದಾನೆ, ಮತ್ತು ಆತನು ಇಲ್ಲಿ ಇಲ್ಲ ಎಂದು ಹೇಳಿದನು. | |||
303 | 16:7 | iqwx | ಶಿಷ್ಯರು ಯೇಸುವನ್ನು ಎಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು? | ಶಿಷ್ಯರು ಯೇಸುವನ್ನು ಗಲಿಲಾಯದಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು. | |||
304 | 16:9 | mgj4 | ಯೇಸು ತನ್ನ ಪುನರುತ್ಥಾನದ ನಂತರ ಮೊದಲಿಗೆ ಯಾರಿಗೆ ಕಾಣಿಸಿಕೊಂಡನು? | ಮೊದಲಿಗೆ ಯೇಸು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. | |||
305 | 16:11 | ge9j | ಯೇಸುವು ಬದುಕಿರುವುದನ್ನು ಆಕೆ ನೋಡಿದ್ದಾಗಿ ಮರಿಯಳು ಹೇಳಿದಾಗ ಯೇಸುವಿನ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು? | ಶಿಷ್ಯರು ನಂಬಲಿಲ್ಲ. | |||
306 | 16:13 | bhrb | ಇನ್ನೂ ಇಬ್ಬರು ಜನರು ಯೇಸು ಬದುಕಿರುವುದನ್ನು ನೋಡಿದ್ದೇವೆಂದು ಹೇಳಿದಾಗ ಯೇಸುವಿನ ಶಿಷ್ಯರ ಪ್ರತಿಕ್ರಿಯೆ ಹೇಗಿತ್ತು? | ಶಿಷ್ಯರು ನಂಬಲಿಲ್ಲ. | |||
307 | 16:14 | f1b4 | ಯೇಸು ಶಿಷ್ಯರಿಗೆ ಕಾಣಿಸಿಕೊಂಡಾಗ, ಅವರ ಅಪನಂಬಿಕೆಯ ಬಗ್ಗೆ ಆತನು ಏನು ಹೇಳಿದನು? | ಅವರ ಅಪನಂಬಿಕೆಯ ನಿಮಿತ್ತ ಯೇಸು ಶಿಷ್ಯರನ್ನು ಗದರಿಸಿದನು. | |||
308 | 16:15 | zvc5 | ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? | ಯೇಸು ಶಿಷ್ಯರಿಗೆ ಲೋಕದಲ್ಲೆಡೆ ಹೋಗಿ ಸುವಾರ್ತೆಯನ್ನು ಸಾರಿರಿ ಎಂದು ಯೇಸು ಆಜ್ಞಾಪಿಸಿದನು. | |||
309 | 16:16 | p7ix | ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? | ಯಾರು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೋ ಅವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು. | |||
310 | 16:16 | u11w | ಯಾರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು? | ಯಾರು ನಂಬುವುದಿಲ್ಲವೋ ಅವರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು. | |||
311 | 16:17-18 | l58h | ನಂಬುವವರಿಗೆ ಯಾವ ಸೂಚಕಕಾರ್ಯಗಳು ಜೊತೆಯಾಗಿ ಬರುತ್ತವೆ ಎಂದು ಯೇಸು ಹೇಳಿದನು? | ಯಾರು ನಂಬುತ್ತರೋ ಅವರು ದೆವ್ವಗಳನ್ನು ಬಿಡಿಸುತ್ತಾರೆ, ಹೊಸ ಭಾಷೆಗಳಲ್ಲಿ ಮಾತನಾಡುವರು, ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ, ಮತ್ತು ಇತರರನ್ನು ಸ್ವಸ್ಥ ಮಾಡುವರು ಎಂದು ಯೇಸು ಹೇಳಿದನು. | |||
312 | 16:19 | bac6 | ಶಿಷ್ಯರೊಂದಿಗೆ ಮಾತನಾಡಿದ ನಂತರ ಯೇಸುವಿಗೆ ಏನಾಯಿತು? | ಶಿಷ್ಯರೊಂದಿಗೆ ಮಾತನಾಡಿದ ನಂತರ, ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು ಮತ್ತು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. | |||
313 | 16:20 | wd92 | ಅನಂತರ ಶಿಷ್ಯರು ಏನು ಮಾಡಿದರು? | ಅನಂತರ ಶಿಷ್ಯರು ಅಲ್ಲಿಂದ ಎಲ್ಲಾ ಕಡೆಗೂ ಹೋಗಿ ಸುವಾರ್ತೆ ಸಾರಿದರು. | |||
314 | 16:20 | f45x | ಆಗ ಕರ್ತನು ಏನು ಮಾಡಿದನು? | ಆಗ ಕರ್ತನು ಶಿಷ್ಯರೊಂದಿಗೆ ಕೆಲಸ ಮಾಡಿದನು ಮತ್ತು ವಾಕ್ಯವನ್ನು ಅನೇಕ ಅದ್ಬುತ ಸೂಚಕಕಾರ್ಯಗಳಿಂದ ದೃಢಪಡಿಸಿದನು. |