translationCore-Create-BCS_.../tq_2CO.tsv

145 lines
69 KiB
Plaintext

Reference ID Tags Quote Occurrence Question Response
1:1 krio ಈ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಮತ್ತು ತಿಮೋಥೆಯನು ಈ ಪತ್ರಿಕೆಯನ್ನು ಬರೆದರು.
1:1 nkj4 ಈ ಪತ್ರಿಕೆಯು ಯಾರಿಗಾಗಿ ಬರೆಯಲ್ಪಟ್ಟಿತು? ಈ ಪತ್ರಿಕೆಯನ್ನು ಕೊರಿಂಥದಲ್ಲಿಂದ್ದಂತ ದೇವರ ಸಭೆಗಾಗಿ ಮತ್ತು ಅಖಾಯ ಸೀಮೆಯಲೆಲ್ಲಾ ಪರಿಶುದ್ಧರಿಗೆ ಬರೆಯಲ್ಪಟ್ಟಿತು.
1:3 zfqy ಪೌಲನು ದೇವರ ಕುರಿತು ಹೇಗೆ ವಿವರಿಸುತ್ತಾನೆ? ಪೌಲನು ದೇವರ ಕುರಿತು ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆ, ಕನಿಕರವುಳ್ಳ ತಂದೆ, ಮತ್ತು ಎಲ್ಲಾ ರೀತಿಯಲ್ಲಿ ಸಂತೈಸುವ ದೇವರಾಗಿದ್ದಾನೆ ಎಂದು ವಿವರಿಸಿದ್ದಾನೆ.
1:4 yoz4 ನಮ್ಮ ಸಂಕಟಗಳಲ್ಲಿ ದೇವರು ಯಾಕೆ ನಮ್ಮನ್ನು ಸಂತೈಸುತ್ತಾನೆ? ದೇವರಿಂದ ನಾವು ಹೇಗೆ ಸಂತೈಸಲ್ಪಟ್ಟೆವೋ ಅದೇ ರೀತಿಯ ಸಂತೈಸುವಿಕೆಯಿಂದ ಸಂಕಟದಲ್ಲಿ ಇರುವವರನ್ನು ನಾವು ಸಂತೈಸಲಾಗುವಂತೆ ಆತನು ನಮ್ಮನ್ನು ಸಂತೈಸುತ್ತಾನೆ.
1:8-9 khhr ಅಸ್ಯ ಸೀಮೆಯಲ್ಲಿ ಪೌಲನು ಮತ್ತು ಅವನ ಸಂಗಡಿಗರು ಯಾವ ತೊಂದರೆಗೆ ಒಳಗಾದರು? ಅವರು ತಾಳಿಕೊಳ್ಳಲಾರದಷ್ಟು ಭಾರವನ್ನು ಹೊತ್ತುಕೊಂಡಿದ್ದರು, ಆದುದರಿಂದ ಅವರು ಸಾಯಲು ನಿರೀಕ್ಷಿಸಿದರು.
1:9 cz6y ಪೌಲನಿಗೂ ಅವನ ಸಂಗಡಿಗರಿಗೂ ಯಾವ ಕಾರಣಕ್ಕಾಗಿ ಮರಣದಂಡನೆಯನ್ನು ವಿಧಿಸಲಾಯಿತು? ತಮ್ಮ ಮೇಲೆಯೇ ಅವರ ಭರವಸೆಯನ್ನು ಇಟ್ಟುಕೊಳ್ಳದೆ, ಆದಕ್ಕೆ ಬದಲಾಗಿ ದೇವರಲ್ಲಿ ಭರವಸೆಯನ್ನು ಇಡುವಂತೆ ಅವರಿಗೆ ಮರಣದಂಡನೆಯನ್ನು ವಿಧಿಸಲಾಯಿತು.
1:11 jd06 ಕೊರಿಂಥ ಸಭೆಯಯು ಅವರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಪೌಲನು ಹೇಳಿದನು? ಕೊರಿಂಥ ಸಭೆಯವರು ಅವರ ಪ್ರಾರ್ಥನೆಯಿಂದ ಅವರಿಗೆ ಸಹಾಯ ಮಾಡಬಹುದೆಂದು ಪೌಲನು ಹೇಳಿದನು.
1:12 yux4 ಯಾವುದರ ಬಗ್ಗೆ ಪೌಲನು ಮತ್ತು ಅವನ ಸಂಗಡಿಗರು ಹೆಮ್ಮೆಯುಳ್ಳವರಾಗಿದ್ದಾರೆಂದು ಹೇಳಿದನು? ಅವರು ಲೋಕದಲ್ಲಿ ಮತ್ತು ವಿಶೇಷವಾಗಿ ಕೊರಿಂಥ ಸಭೆಯವರೊಂದಿಗೆ ನಡೆದುಕೊಂಡ ಬಗ್ಗೆ ಅವರು ತಮ್ಮ ಮನಸಾಕ್ಷಿಯ ಸಾಕ್ಷ್ಯದ ಕುರಿತು ಹೆಮ್ಮೆಪಡುತ್ತಿದ್ದರು, ಅವರು ಲೋಕದ ಜ್ಞಾನದ ಪ್ರಕಾರವಲ್ಲ ಆದರೆ ದೇವರ ಕೃಪೆಯಿಂದ ದೇವರಿಂದ ಬರುವ ಪರಿಶುದ್ದತೆ ಮತ್ತು ಪ್ರಾಮಾಣಿಕತೆಯೊಂದಿಗೆ ನಡೆದುಕೊಂಡರು.
1:14 ikct ನಮ್ಮ ಕರ್ತನಾದ ಯೇಸುವಿನ ದಿನದಲ್ಲಿ ಏನಾಗುತ್ತದೆ ಎಂದು ಪೌಲನಿಗೆ ಭರವಸೆ ಇದ್ದಿತು? ಆ ದಿನದಲ್ಲಿ ಪೌಲನು ಮತ್ತು ಅವನ ಸಂಗಡಿಗರು ಕೊರಿಂಥದ ದೇವಜನರ ಹೆಮ್ಮೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಅವನಿಗೆ ಭರವಸೆ ಇತ್ತು.
1:15 hzbm ಕೊರಿಂಥದ ದೇವಜನರನ್ನು ಭೇಟಿಮಾಡಲು ಪೌಲನು ಎಷ್ಟು ಸಾರಿ ಆಲೋಚಿಸಿದ್ದನು? ಅವನು ಎರಡು ಬಾರಿ ಅವರನ್ನು ಭೇಟಿ ಮಾಡಲು ಆಲೋಚಿಸಿದ್ದನು.
1:22 t3mt ಕ್ರಿಸ್ತನು ನಮ್ಮ ಹೃದಯಗಳಿಗೆ ಆತ್ಮವನ್ನು ಕೊಟ್ಟಿದ್ದಕ್ಕೆ ಒಂದು ಕಾರಣ ಯಾವುದು? ಆತನು ಮುಂದೆ ನಮಗೆ ಕೊಡಲಿರುವಂಥದ್ದಕ್ಕೆ ಸಂಚಕಾರವಾಗಿ ಅಥವಾ ಖಾತರಿಯಾಗಿ ಆತ್ಮನನ್ನು ಕೊಟ್ಟನು.
1:23 ycfl ಪೌಲನು ಯಾಕೆ ಕೊರಿಂಥಕ್ಕೆ ಬರಲಿಲ್ಲ? ಅವನು ಅವರನ್ನು ಉಳಿಸುವ ಸಲುವಾಗಿ ಕೊರಿಂಥಕ್ಕೆ ಬರಲಿಲ್ಲ.
1:24 ove4 ಪೌಲನು ಮತ್ತು ತಿಮೋಥೆಯನನ್ನು ಕೊರಿಂಥದ ಸಭೆಯವರೊಂದಿಗೆ ಏನು ಮಾಡುತ್ತಿದ್ದರು ಮತ್ತು ಏನನ್ನು ಮಾಡುತ್ತಿರಲಿಲ್ಲವೆಂಬುದರ ಬಗ್ಗೆ ಪೌಲನು ಏನು ಹೇಳಿದನು? ಅವರು ತಮ್ಮ ನಂಬಿಕೆಯು ಏನು ಆಗಿರಬೇಕೆಂಬುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾ ಇರಲಿಲ್ಲ, ಆದರೆ ಅವರು ಕೊರಿಂಥ ಸಭೆಯೊಂದಿಗೆ ತಮ್ಮ ಸಂತೋಷಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ಪೌಲನು ಹೇಳಿದನು.
2:1 tl9b ಯಾವ ಸಂದರ್ಭಗಳಲ್ಲಿ ಕೊರಿಂಥದ ಸಭೆಗೆ ಬರುವುದನ್ನು ತಳ್ಳಿಹಾಕಲು ಪೌಲನು ಪ್ರಯತ್ನಿಸುತ್ತಿದ್ದನು? ಪೌಲನು ಕನಿಕರದಿಂದ ಕೊರಿಂಥದ ಸಭೆಗೆ ಬರಲು ತಳ್ಳಿಹಾಕುತ್ತಿದ್ದನು.
2:3 k6hk ತನ್ನ ಹಿಂದಿನ ಪತ್ರದಲ್ಲಿ ಬರೆದಂತೆ ಪೌಲನು ಕೊರಿಂಥ ಸಭೆಗೆ ಏಕೆ ಬರೆದನು? ಅವನು ಅವರ ಬಳಿಗೆ ಬಂದಾಗ ಅವನನ್ನು ಸಂತೋಷ ಪಡಿಸಬೇಕಾದವರಿಂದ ದು:ಖಪಡಬಾರದೆಂದು ಹೀಗೆ ಬರೆದನು.
2:4 c81q ಮೊದಲು ಪೌಲನು ಕೊರಿಂಥದವರಿಗೆ ಬರೆದಾಗ, ಅವನ ಮನಸ್ಥಿತಿ ಹೇಗಿತ್ತು? ಅವನು ಹೃದಯದಲ್ಲಿ ಮಹಾ ಸಂಕಟದಲ್ಲಿಯೂ ಮತ್ತು ವೇದನೆಯಲ್ಲಿ ಉಳ್ಳವನಾಗಿದ್ದನು.
2:4 gclm ಪೌಲನು ಕೊರಿಂಥದ ಸಭೆಗೆ ಯಾಕೆ ಈ ಪತ್ರವನ್ನು ಬರೆದನು? ಅವರ ಮೇಲಿರುವ ತನ್ನ ಪ್ರೀತಿಯ ಆಳವನ್ನು ಅವರು ತಿಳಿದುಕೊಳ್ಳವಂತೆ ಅವನು ಅವರಿಗೆ ಈ ಪತ್ರವನ್ನು ಬರೆದನು.
2:6-7 xw3l ಕೊರಿಂಥದ ದೇವಜನರು ಈಗ ತಾವು ಶಿಕ್ಷಿಸಿದವನಿಗೆ ಏನು ಮಾಡಬೇಕೆಂದು ಪೌಲನು ಹೇಳಿದನು? ಅವರು ಆ ವ್ಯಕ್ತಿಯನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕೆಂದು ಪೌಲನು ಹೇಳಿದನು.
2:7 jbk8 ಕೊರಿಂಥದ ದೇವಜನರು ತಾವು ಶಿಕ್ಷಿಸಿದವರನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕೆಂದು ಪೌಲನು ಯಾಕೆ ಹೇಳಿದನು? ಅವರು ಶಿಕ್ಷಿಸಿದ ವ್ಯಕ್ತಿಯು ಬಹು ದು:ಖದಿಂದ ಬಳಲಬಾರದೆಂಬ ಉದ್ದೇಶದಿಂದ ಹೇಳಿದನು.
2:9 acyb ಪೌಲನು ಕೊರಿಂಥ ಸಭೆಯವರಿಗೆ ಬರೆದದ್ದಕ್ಕೆ ಇನ್ನೊಂದು ಕಾರಣ ಏನು? ಪೌಲನು ಅವರನ್ನು ಪರೀಕ್ಷಿಸಿ ಅವರು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಬರೆದನು.
2:11 rono ತಾವು ಯಾರನ್ನು ಕ್ಷಮಿಸಿದರೋ ಅವರು ಪೌಲನಿಂದಲೂ ಕ್ರಿಸ್ತನ ಪ್ರಸನ್ನತೆಯಲ್ಲಿ ಕ್ಷಮಿಸಲ್ಪಟ್ಟಿದ್ದಾರೆಂದು ತಿಳಿಯುವುದು ಕೊರಿಂಥದ ಸಭೆಗೆ ಯಾಕೆ ಮುಖ್ಯವಾಗಿತ್ತು? ಸೈತಾನನು ಅವರನ್ನು ಮೋಸಗೊಳಿಸಬಾರದೆಂಬ ಕಾರಣ.
2:13 cosq ಪೌಲನು ತ್ರೋವ ಪಟ್ಟಣಕ್ಕೆ ಹೋದಾಗ ಶಾಂತ ಮನಸ್ಸು ಯಾಕೆ ಇರಲಿಲ್ಲ? ತ್ರೋವದಲ್ಲಿ ಅವನ ಸಹೋದರನಾದ ತೀತನನ್ನು ಕಾಣಲಿಲ್ಲವಾದ್ದರಿಂದ ಅವನಿಗೆ ಶಾಂತ ಮನಸ್ಸು ಇರಲಿಲ್ಲ.
2:14-15 h163 ದೇವರು ಪೌಲನ ಮತ್ತು ಅವನ ಸಂಗಡಿಗರ ಮೂಲಕ ಏನು ಮಾಡಿದನು? ಪೌಲನ ಮತ್ತು ಅವನ ಸಂಗಡಿಗರ ಮೂಲಕ ದೇವರು ಕ್ರಿಸ್ತನ ತಿಳಿವಳಿಕೆಯ ಪರಿಮಳವನ್ನು ಎಲ್ಲಾ ಕಡೆಯಲ್ಲಿಯೂ ಹರಡಿದನು.
2:17 x0a7 ಪೌಲನು ಮತ್ತು ಅವನ ಸಂಗಡಿಗರು ದೇವರ ವಾಕ್ಯವನ್ನು ಲಾಭಕ್ಕಾಗಿ ಮಾರಾಟ ಮಾಡಿದ ಅನೇಕ ಜನರಿಂದ ಭಿನ್ನರಾಗಿ ಇದ್ದರು ಎಂದು ಹೇಗೆ ಹೇಳಿದನು? ಪೌಲ ಮತ್ತು ಅವನ ಸಂಗಡಿಗರು ಭಿನ್ನರಾಗಿದ್ದರು, ಹೇಗೆಂದರೆ ಅವರು ದೇವರ ಸನ್ನಿಧಿಯಲ್ಲಿ ಕ್ರಿಸ್ತನ ಹೆಸರಿನಲ್ಲಿ ದೇವರಿಂದ ಕಳುಹಿಸಲ್ಪಟ್ಟವರಾಗಿ ಪ್ರಾಮಾಣಿಕಕತನದಿಂದ ಮಾತನಾಡಿದರು.
3:2 fzs6 ಪೌಲನು ಮತ್ತು ಅವನ ಸಂಗಡಿಗರ ಬಳಿ ಯಾವ ಶಿಫಾರಸ್ಸಿನ ಪತ್ರವಿತ್ತು? ಕೊರಿಂಥದ ದೇವಜನರೇ ಅವರ ಶಿಫಾರಸ್ಸಿನ ಪತ್ರವಾಗಿದ್ದರು, ಅದು ಎಲ್ಲಾ ಜನರಿಗೂ ತಿಳಿದಿತ್ತು ಮತ್ತು ಎಲ್ಲರು ಅದನ್ನು ಓದಿದ್ದರು
3:4-5 fwm9 ಪೌಲನು ಮತ್ತು ಅವನ ಸಂಗಡಿಗರು ಕ್ರಿಸ್ತನ ಮೂಲಕ ದೇವರಲ್ಲಿ ಯಾವ ಭರವಸೆಯನ್ನು ಹೊಂದಿದ್ದರು? ಅವರ ಭರವಸೆಯು ತಮ್ಮ ಸಾಮರ್ಥ್ಯದಲ್ಲಿ ಇರಲಿಲ್ಲ, ಆದರೆ ದೇವರು ಅವರಿಗೆ ಒದಗಿಸಿದ ಸಾಮರ್ಥ್ಯದ ಮೇಲೆ ಇತ್ತು.
3:6 q5yd ದೇವರು ಪೌಲನನ್ನು ಮತ್ತು ಅವನ ಸಂಗಡಿಗರನ್ನು ಸೇವಕರಾಗಿ ಅರ್ಹರನ್ನಾಗಿ ಮಾಡಿದ ಹೊಸ ಒಡಂಬಡಿಕೆಯ ಆಧಾರವೇನು? ಹೊಸ ಒಡಂಬಡಿಕೆಯು ಜೀವವನ್ನು ಕೊಡುವ ಆತ್ಮದ ಮೇಲೆ ಆಧಾರವಾಗಿದೆ. ಅದು ಮರಣಕ್ಕೆ ಕಾರಣವಾಗುವ ಪತ್ರದ ಮೇಲೆ ಆಧಾರವಾಗಿ ಇಲ್ಲ.
3:7 sbaz ಇಸ್ರಾಯೇಲರು ಮೋಶೆಯ ಮುಖವನ್ನು ನೇರವಾಗಿ ಯಾಕೆ ನೋಡಲು ಸಾಧ್ಯವಾಗಲಿಲ್ಲ? ಅವನ ಮುಖದಲ್ಲಿ ಮಹಿಮೆ ಅಂದರೆ ಕುಂದಿಹೋಗುವ ಮಹಿಮೆಯು ನಿಮಿತ್ತವಾಗಿ ಅವರು ನೇರವಾಗಿ ಅವನ ಮುಖವನ್ನು ನೋಡಲು ಸಾಧ್ಯವಾಗಲಿಲ್ಲ.
3:9 ov3q ದಂಡನಾ ತೀರ್ಪಿನ ಸೇವೆಯೋ ಅಥವಾ ನೀತಿಯ ಸೇವೆಯೋ ಇವುಗಳಲ್ಲಿ ಯಾವುದು ಹೆಚ್ಚು ಮಹಿಮೆಯನ್ನು ಹೊಂದಿರುತ್ತದೆ? ನೀತಿಯ ಸುವಾರ್ತಾ ಸೇವೆಯು ಹೆಚ್ಚಿನ ಮಹಿಮೆಯಿಂದ ತುಂಬಿರುತ್ತದೆ.
3:14 t89r ಇಸ್ರಾಯೇಲರ ಮನಸ್ಸನ್ನು ತೆರೆಯುವುದು ಮತ್ತು ಅವರ ಹೃದಯದಿಂದ ಮುಸುಕನ್ನು ತೆಗೆಯುವುದು ಹೇಗೆ? ಇಸ್ರಾಯೇಲರು ಕರ್ತನಾದ ಕ್ರಿಸ್ತನ ಕಡೆಗೆ ತಿರುಗಿಕೊಂಡಾಗ ಮಾತ್ರ ಅವರ ಮನಸ್ಸುಗಳು ತೆರೆಯಲ್ಪಡುತ್ತದೆ ಮತ್ತು ಮುಸುಕು ಎತ್ತಲ್ಪಡುತ್ತದೆ.
3:15 zb0n ಮೋಶೆಯ ಹಳೆಯ ಒಡಂಬಡಿಕೆಯು ಯಾವಾಗೆಲ್ಲಾ ಓದುತ್ತಾರೋ ಅವಾಗೆಲ್ಲಾ ಯಾವ ಸಮಸ್ಯೆಯು ಇಂದಿನವರೆಗೂ ಇಸ್ರಾಯೇಲರ ಜನರಿಗೆ ಹಾಗೆಯೇ ಉಳಿದಿರುತ್ತದೆ? ಅವರ ಸಮಸ್ಯೆ ಏನೆಂದರೆ ಅವರ ಮನಸ್ಸುಗಳು ಮುಚ್ಚಿಹೋಗಿದೆ ಮತ್ತು ಅವರ ಹೃದಯಗಳ ಮೇಲೆ ಮುಸುಕು ಇದೆ.
3:16 h66q ಇಸ್ರಾಯೇಲರ ಮನಸ್ಸನ್ನು ಮತ್ತು ಅವರ ಹೃದಯಗಳಿಂದ ಮುಸುಕನ್ನು ಹೇಗೆ ತೆಗೆಯಬಹುದು? ಇಸ್ರಾಯೇಲರು ಕರ್ತನಾದ ಕ್ರಿಸ್ತನ ಕಡೆಗೆ ತಿರುಗಿಕೊಂಡಾಗ ಮಾತ್ರ ಅವರ ಮನಸ್ಸುಗಳು ತೆರೆಯಲ್ಪಡುತ್ತದೆ ಮತ್ತು ಮುಸುಕು ಎತ್ತಲ್ಪಡುತ್ತದೆ.
3:17 islc ಕರ್ತನ ಆತ್ಮನಲ್ಲಿ ಏನಿದೆ? ಕರ್ತನ ಆತ್ಮನು ಎಲ್ಲಿ ಇರುತ್ತಾನೋ ಅಲ್ಲಿ ಬಿಡುಗಡೆಯಿದೆ.
3:18 el3x ಕರ್ತನ ಮಹಿಮೆಯನ್ನು ನೋಡುತ್ತಿರುವ ಎಲ್ಲರೂ ಯಾವುದರಲ್ಲಿ ರೂಪಾಂತರಗೊಳ್ಳುತ್ತಿದ್ದಾರೆ? ಅವರು ಮಹಿಮೆಯ ಮಟ್ಟದಿಂದ ಮಹಿಮೆಯ ಮತ್ತೊಂದು ಮಟ್ಟಕ್ಕೆ ಸಾಗುತ್ತಾ ಅದೇ ಮಹಿಮೆಯ ಹೋಲಿಕೆಯಲ್ಲಿ ರೂಪಾಂತರಗೊಳ್ಳುತ್ತಾ ಇದ್ದಾರೆ.
4:1 zdyl ಪೌಲನು ಮತ್ತು ಅವನ ಸಂಗಡಿಗರು ಯಾಕೆ ನಿರಾಶೆಗೊಳ್ಳಲಿಲ್ಲ? ಯಾಕೆಂದರೆ ಅವರು ಮಾಡುತ್ತಿದ್ದ ಸುವಾರ್ತಾ ಸೇವೆಯಿಂದಾಗಿ ಮತ್ತು ಅವರು ಕನಿಕರವನ್ನು ಸ್ವೀಕರಿಸಿದ್ದರಿಂದ ಅವರು ನಿರಾಸೆಗೊಳ್ಳಲಿಲ್ಲ.
4:2 agpr ಪೌಲನು ಮತ್ತು ಅವನ ಸಂಗಡಿಗರು ಯಾವ ಮಾರ್ಗಗಳನ್ನು ತ್ಯಜಿಸಿದರು? ನಾಚಿಕೆಯ ಮತ್ತು ಗುಪ್ತವಾದ ಮಾರ್ಗಗಳನ್ನು ಅವರು ತ್ಯಜಿಸಿದರು. ಅವರು ಕಪಟದಿಂದ ಬದುಕಲಿಲ್ಲ ಮತ್ತು ದೇವರ ವಾಕ್ಯವನ್ನು ತಪ್ಪಾಗಿ ನಿರ್ವಹಿಸಲಿಲ್ಲ.
4:2 ksfp ಪೌಲ ಮತ್ತು ಅವನಂತೆ ಇರುವವರು ದೇವರ ದೃಷ್ಟಿಯಲ್ಲಿ ಪ್ರತಿಯೊಬ್ಬರ ಮನಸಾಕ್ಷಿಗೆ ತಮ್ಮನ್ನು ತಾವು ಹೇಗೆ ಶಿಫಾರಸು ಮಾಡಿಕೊಂಡರು? ಸತ್ಯವನ್ನು ತಿಳಿಸುವ ಮೂಲಕ ಅವರು ಇದನ್ನು ಮಾಡಿದರು.
4:3 wn02 ಸುವಾರ್ತೆಯು ಯಾರಿಗೆ ಮರೆಯಾಗಿದೆ? ನಶಿಸಿಹೋಗುತ್ತಿರುವವರಿಗೆ ಮರೆಯಾಗಿದೆ.
4:4 eo9q ನಶಿಸಿಹೋಗುತ್ತಿರುವವರಿಗೆ ಸುವಾರ್ತೆಯು ಯಾಕೆ ಮರೆಯಾಗಿದೆ? ಈ ಲೋಕದ ದೇವರು ನಂಬಿಕೆ ಇಲ್ಲದ ಅವರ ಮನಸ್ಸುಗಳನ್ನು ಕುರುಡಾಗಿ ಮಾಡಿದನು ಹಾಗಾಗಿ ಅವರು ಸುವಾರ್ತೆಯ ಬೆಳಕನ್ನು ನೋಡಲು ಸಾಧ್ಯವಾಗದಿದ್ದರಿಂದ ಅದು ಮರೆಯಾಗಿದೆ.
4:5 up8p ಪೌಲನು ಮತ್ತು ಅವನ ಸಂಗಡಿಗರು ಯೇಸುವಿನ ಬಗ್ಗೆ ಮತ್ತು ಅವರುಗಳ ಬಗ್ಗೆ ಏನನ್ನು ಪ್ರಚುರಪಡಿಸಿದರು? ಅವರು ಕ್ರಿಸ್ತನಾದ ಯೇಸುವನ್ನು ಕರ್ತನೆಂದು ಮತ್ತು ಯೇಸುವಿನ ನಿಮಿತ್ತ ತಮ್ಮನ್ನು ತಾವು ಕೊರಿಂಥ ಸಭೆಯ ಸೇವಕರೆಂದು ಪ್ರಚುರಪಡಿಸಿದರು.
4:7 hiqn ಪೌಲನು ಮತ್ತು ಅವನ ಸಂಗಡಿಗರು ಯಾಕೆ ಈ ನಿಕ್ಷೇಪವನ್ನು ಮಣ್ಣಿನ ಪಾತ್ರೆಗಳಲ್ಲಿ ಹೊಂದಿದ್ದರು? ಮಹಾ ಶಕ್ತಿಯು ದೇವರಿಗೆ ಸೇರಿದ್ದು ಮತ್ತು ಅದು ಅವರಿಗೆ ಸೇರಿದ್ದಾಗಿರಲಿಲ್ಲ ಎಂಬುದು ಸ್ಪಷ್ಟವಾಗಲೆಂದೇ ಅವರು ಈ ನಿಕ್ಷೇಪವನ್ನು ಮಣ್ಣಿನ ಪಾತ್ರೆಗಳಲ್ಲಿ ಹೊಂದಿದ್ದರು.
4:10 x6tq ಪೌಲನು ಮತ್ತು ಅವನ ಸಂಗಡಿಗರು ಯೇಸುವಿನ ಮರಣವನ್ನು ತಮ್ಮ ದೇಹಗಳಲ್ಲಿ ಯಾಕೆ ಹೊರುತ್ತಿದರು? ಯಾಕೆಂದರೆ ಯೇಸುವಿನ ಜೀವವು ಅವರ ದೇಹಗಳಲ್ಲಿಯೂ ಕೂಡ ತೋರ್ಪಡಲಿ ಎಂದು ಅವರು ತಮ್ಮ ದೇಹಗಳಲ್ಲಿ ಯೇಸುವಿನ ಮರಣವನ್ನು ಹೊರುತ್ತಿದರು.
4:14 uaiv ಕರ್ತನಾದ ಯೇಸುವನ್ನು ಎಬ್ಬಿಸಿದಾತನ ಸನ್ನಿಧಿಗೆ ಯಾರನ್ನು ಎಬ್ಬಿಸಿ ಕರೆತರಲಾಗುತ್ತದೆ? ಕರ್ತನಾದ ಯೇಸುವನ್ನು ಎಬ್ಬಿಸಿದಾತನ ಸನ್ನಿಧಿಗೆ ಪೌಲನೂ, ಅವನ ಸಂಗಡಿಗರೂ ಮತ್ತು ಕೊರಿಂಥದ ದೇವಜನರು ಕರೆತರಲ್ಪಡುವರು
4:15 gi5u ಕೃಪೆಯು ಅನೇಕ ಜನರಿಗೆ ಹರಡುವುದರ ಪರಿಣಾಮವಾಗಿ ಏನು ಆಗುತ್ತದೆ? ಕೃಪೆಯು ಅನೇಕ ಜನರಿಗೆ ಹರಡುವುದರಿಂದ ದೇವರ ಮಹಿಮೆಗಾಗಿ ಕೃತಜ್ಞತಾ ಸ್ತುತಿಯು ಹೆಚ್ಚಾಗುತ್ತದೆ.
4:16 nnhv ಪೌಲನು ಮತ್ತು ಅವನ ಸಂಗಡಿಗರು ನಿರಾಶೆಗೊಳ್ಳಲು ಇದ್ದ ಕಾರಣ ಯಾವುದು? ಅವರು ನಿರಾಶೆಗೊಳ್ಳಲು ಕಾರಣವೇನೆಂದರೆ, ಹೊರಗಿನಿಂದ ಅವರು ನಾಶವಾಗುತ್ತಿದ್ದರು.
4:16-18 f2sj ಪೌಲ ಮತ್ತು ಅವನ ಸಂಗಡಿಗರು ಯಾಕೆ ನಿರಾಶೆಗೊಳ್ಳಲಿಲ್ಲ? ಯಾಕೆಂದರೆ ಅವರು ದಿನದಿಂದ ದಿನಕ್ಕೆ ಒಳಗಿನಿಂದ ಹೊಸದಾಗುತ್ತಿದ್ದರು, ಅಲ್ಲದೆ, ಕ್ಷಣಿಕವಾದ, ಹಗುರವಾದ ಸಂಕಟವು ಎಲ್ಲಾ ಅಳತೆಗಳನ್ನು ಮೀರಿದ ಮಹಿಮೆಯ ಶಾಶ್ವತತೆಗಾಗಿ ಅವರನ್ನು ಸಿದ್ದಪಡಿಸುತ್ತಿತ್ತು ಇದ್ದಿದ್ದರಿಂದ ಅವರು ನಿರಾಶೆಗೊಳ್ಳಲಿಲ್ಲ. ಕೊನೆಗೆ, ಅವರು ಕಾಣದೆ ಇದ್ದಂತ ಶಾಶ್ವತವಾದ ವಿಷಯಗಳನ್ನು ನೋಡುತ್ತಾರೆ.
5:1 i3tr ನಮ್ಮ ಭೂಮಿಯ ವಾಸಸ್ಥಳವು ನಾಶವಾದರೂ ನಮ್ಮ ಹತ್ತಿರ ಇನ್ನೂ ಏನು ಇದೆ ಎಂದು ಹೇಳಿದನು? ನಾವು ದೇವರಿಂದ ಕಟ್ಟಡವನ್ನು ಹೊಂದಿದ್ದೇವೆ, ಮನುಷ್ಯನ ಕೈಗಳಿಂದ ಮಾಡದೇ ಇರುವಂತಹ ಮನೆ, ಆದರೆ ಪರಲೋಕದಲ್ಲಿ ಶಾಶ್ವತವಾದ ಮನೆಯಿದೆ ಎಂದು ಪೌಲನು ಹೇಳಿದನು.
5:4 kz4m ನಾವು ಈ ಗುಡಾರದಲ್ಲಿ ಇದ್ದಾಗ ನಾವು ಯಾಕೆ ನರಳುತ್ತೇವೆ ಎಂದು ಪೌಲನು ಹೇಳಿದನು? ಈ ಗುಡಾರದಲ್ಲಿ ನಾವು ವಾಸವಾಗಿರುವಾಗಲೇ ನಾವು ಭಾರವನ್ನು ಹೊತ್ತುಕೊಂಡಿದ್ದೇವೆ ಮತ್ತು ಧರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ಜೀವವು ಮರ್ತ್ಯವಾದುದು ನುಂಗಿಹಾಕುವುದು ಎಂದು ಪೌಲನು ಇದನ್ನು ಹೇಳಿದನು.
5:5 tqpu ಮುಂದೆ ಬರಲಿಕ್ಕಿರುವಂಥದ್ದಕ್ಕೆ ಸಂಚಕಾರವಾಗಿ ದೇವರು ನಮಗೆ ಏನನ್ನು ಕೊಟ್ಟಿದ್ದಾನೆ? ಮುಂದೆ ಏನು ಬರುತ್ತದೆ ಎಂಬುವುದಕ್ಕೆ ದೇವರು ನಮಗೆ ಆತ್ಮವನ್ನು ಸಂಚಕಾರವಾಗಿ ಕೊಟ್ಟಿದ್ದಾನೆ.
5:8 lyor ಪೌಲನು ದೇಹದಲ್ಲಿ ಇರಲು ಬಯಸುತ್ತಾನೋ ಅಥವಾ ಕರ್ತನ ಬಳಿಯಲ್ಲಿ ಇರಲು ಬಯಸುತ್ತಾನೋ? ಪೌಲನು, “ನಾವು ಈ ದೇಹದಿಂದ ದೂರವಿದ್ದು ಮತ್ತು ಕರ್ತನೊಂದಿಗೆ ಮನೆಯಲ್ಲಿ ಇರುವೆನು” ಎಂದು ಹೇಳಿದನು.
5:9 dei6 ಪೌಲನ ಗುರಿ ಏನಾಗಿತ್ತು? ಕರ್ತನನ್ನು ಮೆಚ್ಚಿಸುವುದನ್ನು ಪೌಲನು ತನ್ನ ಗುರಿಯನ್ನಾಗಿ ಮಾಡಿಕೊಂಡಿದ್ದನು.
5:10 jo62 ಕರ್ತನನ್ನು ಮೆಚ್ಚಿಸುವುದನ್ನು ಏಕೆ ಪೌಲನು ತನ್ನ ಗುರಿಯನ್ನಾಗಿ ಮಾಡಿಕೊಂಡಿದ್ದನು? ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳುವೆವು. ನಮ್ಮ ದೇಹದಲ್ಲಿ ನಾವು ಮಾಡಿದ ಒಳ್ಳೆಯ ಅಥವಾ ಕೆಟ್ಟದ್ದಕ್ಕಾಗಿ ತಕ್ಕ ಪ್ರತಿಫಲವನ್ನು ಹೊಂದುವೆವು ಎಂದು ಪೌಲನು ಈ ಗುರಿಯನ್ನು ಮಾಡಿದನು.
5:11 xb3x ಪೌಲನು ಮತ್ತು ಅವನ ಸಂಗಡಿಗರು ಯಾಕೆ ಜನರ ಮನವೊಲಿಸಿದರು? ಅವರು ಕರ್ತನ ಭಯವನ್ನು ತಿಳಿದಿದ್ದರಿಂದ ಜನರ ಮನವೊಲಿಸಿದರು.
5:12 tyx7 ಕೊರಿಂಥದ ದೇವಜನರ ಮುಂದೆ ತಮ್ಮನ್ನು ತಾವು ಮತ್ತೊಮ್ಮೆ ಶಿಫಾರಸ್ಸು ಮಾಡಿಕೊಳ್ಳುತ್ತಿಲ್ಲವೆಂದು ಪೌಲನು ಹೇಳಿದನು. ಹಾಗಾದರೆ ಅವರು ಏನು ಮಾಡುತ್ತಿದ್ದರು? ಅವು ಕೊರಿಂಥದ ದೇವಜನರಿಗೆ ತಮ್ಮ ಬಗ್ಗೆ ಹೆಮ್ಮೆಪಡುವ ಕಾರಣವನ್ನು ನೀಡುತ್ತಿದ್ದರು. ಇದರಿಂದಾಗಿ ಕೊರಿಂಥದ ದೇವಜನರು ಹೃದಯದಲ್ಲಿ ಇಲ್ಲದ ಹೊರ ನೋಟದ ಬಗ್ಗೆ ಹೆಮ್ಮೆ ಪಡುವವರಿಗೆ ಉತ್ತರವನ್ನು ಕೊಡಬಹುದಾಗಿತ್ತು.
5:15 tm1r ಕ್ರಿಸ್ತನು ಎಲ್ಲರಿಗೋಸ್ಕರ ಮರಣವನ್ನು ಹೊಂದಿದರಿಂದ, ಜೀವಿಸುತ್ತಿರುವವರು ಏನು ಮಾಡಬೇಕು? ಅವರು ತಮಗಾಗಿ ಜೀವಿಸದೆ, ಸತ್ತು ಜೀವಂತವಾಗಿ ಎದ್ದು ಬಂದಾತನಿಗಾಗಿ ಜೀವಿಸಬೇಕು.
5:16 wb64 ಯಾವ ಮಾನದಂಡಗಳ ಮೂಲಕ ಇನ್ನು ಮುಂದೆ ದೇವಜನರು ಯಾರನ್ನು ತೀರ್ಪು ಮಾಡುವುದಿಲ್ಲ? ಇನ್ನು ಮುಂದೆ ದೇವಜನರು ಮಾನವ ಮಾನದಂಡಗಳಿಂದ ಯಾರಿಗೂ ತೀರ್ಪು ಮಾಡುವುದಿಲ್ಲ.
5:17 fjw3 ಯಾರಾದರೂ ಕ್ರಿಸ್ತನಲ್ಲಿ ಇದ್ದರೆ ಅವರಿಗೆ ಏನಾಗುತ್ತದೆ? ಆತನು ನೂತನ ಸೃಷ್ಟಿಯಾಗುವನು. ಹಳೆಯ ಸಂಗತಿಗಳೆಲ್ಲಾ ಹೋಗಿವೆ; ಹೊಸ ಸಂಗತಿಗಳು ಬರುತ್ತವೆ.
5:19 epiw ದೇವರು ಕ್ರಿಸ್ತನ ಮೂಲಕ ಜನರನ್ನು ತನ್ನೊಂದಿಗೆ ಸಂಧಾನಮಾಡಿಕೊಳ್ಳುವ ಮೂಲಕ, ಆತನು ಅವರಿಗೆ ಏನು ಮಾಡುತ್ತಾನೆ? ದೇವರು ಅವರ ಪಾಪಗಳನ್ನು ಅವರ ಮೇಲೆ ಎಣಿಸುವುದಿಲ್ಲ ಮತ್ತು ಅವರನ್ನು ಸಂಧಾನದ ಸಂದೇಶವನ್ನು ಅವರಿಗೆ ಒಪ್ಪಿಸುತ್ತಾನೆ.
5:20 plr8 ಕ್ರಿಸ್ತನು ನೇಮಿಸಿದ ಪ್ರತಿನಿಧಿಗಳಾಗಿ ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರಿಗೆ ಏನು ಮನವಿ ಮಾಡಿದರು? ಕ್ರಿಸ್ತನ ನಿಮಿತ್ತ ದೇವರೊಂದಿಗೆ ಸಂಧಾನವಾಗಬೇಕು ಎಂದು ಕೊರಿಂಥದವರಿಗೆ ಅವರ ಮನವಿಯಾಗಿತ್ತು.
5:21 n2e0 ಕ್ರಿಸ್ತನು ನೇಮಿಸಿದ ಪ್ರತಿನಿಧಿಗಳಾಗಿ ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರಿಗೆ ಏನು ಮನವಿ ಮಾಡಿದರು? ಕ್ರಿಸ್ತನ ನಿಮಿತ್ತ ದೇವರೊಂದಿಗೆ ಸಮನ್ವಯಗೊಳ್ಳಿರಿ ಎಂದು ಕೊರಿಂಥದವರಿಗೆ ಅವರ ಮನವಿಯಾಗಿತ್ತು.
6:1 j8xg ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರನ್ನು ಏನನ್ನು ಮಾಡದಂತೆ ಬೇಡಿಕೊಂಡರು? ದೇವರ ಕೃಪೆಯನ್ನು ವ್ಯರ್ಥವಾಗಿ ಸ್ವೀಕರಿಸದಂತೆ ಕೊರಿಂಥದವರಿಗೆ ಬೇಡಿಕೊಂಡರು.
6:2 dczo ಅನುಕೂಲಕರವಾದ ಸಮಯ ಯಾವಾಗ? ರಕ್ಷಣೆಯ ದಿನ ಯಾವಾಗ? ಈಗಲೇ ಅನುಕೂಲತೆಯ ಸಮಯ. ಈಗಲೇ ರಕ್ಷಣೆಯ ದಿನ.
6:3 kyu3 ಪೌಲ ಮತ್ತು ಅವನ ಸಂಗಡಿಗರು ಯಾರ ಮುಂದೆಯೂ ತಡೆಯನ್ನು ಯಾಕೆ ಉಂಟುಮಾಡಲಿಲ್ಲ? ಅವರು ಯಾರ ಮುಂದೆಯೂ ತಡೆಯನ್ನು ಉಂಟುಮಾಡಲಿಲ್ಲ, ಯಾಕೆಂದರೆ ಅವರ ಸುವಾರ್ತಾ ಸೇವೆಯನ್ನು ದೂಷಿಸಲು ಬಯಸಲಿಲ್ಲ.
6:4 e2c5 ಪೌಲ ಮತ್ತು ಅವನ ಸಂಗಡಿಗರ ಕಾರ್ಯಗಳು ಏನನ್ನು ಸಾಬೀತುಪಡಿಸಿದವು? ಅವರ ಕಾರ್ಯಗಳು ಅವರು ದೇವರ ಸೇವಕರೆಂದು ಸಾಬೀತುಪಡಿಸಿದವು.
6:4-5 q45m ಪೌಲ ಮತ್ತು ಅವನ ಸಂಗಡಿಗರು ಸಹಿಸಿಕೊಂಡ ಕೆಲವು ವಿಷಯಗಳು ಯಾವುವು? ಅವರು ಕಷ್ಟಗಳನ್ನು, ಸಂಕಟಗಳನ್ನು, ತೊಂದರೆಗಳನ್ನು, ಹೊಡೆತಗಳನ್ನು, ಸೆರೆಮನೆಗಳಲ್ಲಿ, ಗಲಭೆಗಳು, ಶ್ರಮೆ, ನಿದ್ರಾಹೀನತೆ, ಹಸಿವು ಇವುಗಳನ್ನು ಸಹಿಸಿಕೊಂಡರು.
6:8 ik7g ಪೌಲ ಮತ್ತು ಅವನ ಸಂಗಡಿಗರು ಸತ್ಯವಂತರಾಗಿದ್ದರೂ ಕೂಡ, ಯಾವ ಆರೋಪದಿಂದ ಅವರನ್ನು ದೂಷಿಸಲಾಯಿತು? ಅವರು ಮೋಸಗಾರರೆಂದು ದೂಷಿಸಲಾಯಿತು.
6:11 zq4x ಪೌಲನು ಕೊರಿಂಥದವರೊಂದಿಗೆ ಯಾವ ವಿನಿಮಯವನ್ನು ಮಾಡಿಕೊಳ್ಳಲು ಬಯಸುತ್ತಾನೆ? ಪೌಲನು ತನ್ನ ಹೃದಯವನ್ನು ಕೊರಿಂಥದವರಿಗೆ ವಿಶಾಲವಾಗಿ ತೆರೆದಿದ್ದಾನೆ ಅದಕ್ಕೆ ಸರಿಯಾದ ವಿನಿಮಯವಾಗಿ, ಕೊರಿಂಥದ ದೇವಜನರು ತಮ್ಮ ಹೃದಯವನ್ನು ಪೌಲನಿಗೂ ಅವನ ಸಹಚರರಿಗೂ ವಿಶಾಲವಾಗಿ ತೆರೆಯಬೇಕೆಂದು ಪೌಲನು ಬಯಸಿದನು ಎಂದು ಅವನೇ ಹೇಳಿದನು.
6:13 hzou ಪೌಲನು ಕೊರಿಂಥದವರೊಂದಿಗೆ ಯಾವ ವಿನಿಮಯವನ್ನು ಮಾಡಿಕೊಳ್ಳಲು ಬಯಸುತ್ತಾನೆ? ಪೌಲನು ತನ್ನ ಹೃದಯವನ್ನು ಕೊರಿಂಥದವರಿಗೆ ವಿಶಾಲವಾಗಿ ತೆರೆದಿದ್ದಾನೆ ಅದಕ್ಕೆ ಸರಿಯಾದ ವಿನಿಮಯವಾಗಿ, ಕೊರಿಂಥದ ದೇವಜನರು ತಮ್ಮ ಹೃದಯವನ್ನು ಪೌಲನಿಗೂ ಅವನ ಸಹಚರರಿಗೂ ವಿಶಾಲವಾಗಿ ತೆರೆಯಬೇಕೆಂದು ಪೌಲನು ಬಯಸಿದನು ಎಂದು ಅವನೇ ಹೇಳಿದನು.
6:14-16 x642 ಕೊರಿಂಥದ ದೇವಜನರು ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗಬಾರದೆಂಬುದಕ್ಕೆ ಪೌಲನು ಕೊಟ್ಟ ಕಾರಣಗಳೇನು? ನೀತಿಗೆ ಅಧರ್ಮದೊಂದಿಗೆ ಯಾವ ಸಂಬಂಧವಿದೆ? ಬೆಳಕು ಕತ್ತಲೆಯೊಂದಿಗೆ ಅನ್ಯೋನತೆಯನ್ನು ಹೊಂದಲಾಗುವುದೇ? ಕ್ರಿಸ್ತನು ಬೆಲಿಯಾರ್‌ ಸಂಗಡ ಒಮ್ಮತವನ್ನು ಹೊಂದಬಹುದೇ? ವಿಶ್ವಾಸಿಯು ಅವಿಶ್ವಾಸಿಯೊಂದಿಗೆ ಯಾವ ಸಂಬಂಧವನ್ನು ಹೊಂದಿದ್ದಾನೆ? ದೇವರ ಆಲಯಕ್ಕೂ ವಿಗ್ರಹಗಳಿಗೂ ಯಾವ ಒಪ್ಪಂದವಿದೆಯೇ? ಎಂದು ಕಾರಣಗಳನ್ನು ಪೌಲನು ಕೊಟ್ಟನು.
6:17-18 u5ti “ಅವರ ಮಧ್ಯದಿಂದ ಹೊರಬಂದು ಪ್ರತ್ಯೇಕವಾಗಿರುವ ಮತ್ತು ಅಶುದ್ದವಾದದ್ದನ್ನು ಮುಟ್ಟದಿರುವವರಿಗಾಗಿ ತಾನು ಏನು ಮಾಡುತ್ತೇನೆ…”? ಎಂದು ಕರ್ತನು ಹೇಳುತ್ತಾನೆ. ಅವರನ್ನು ಸ್ವಾಗತಿಸುತ್ತೇನೆ ಎಂದು ಕರ್ತನು ಹೇಳುತ್ತಾನೆ. ಆತನು ಅವರಿಗೆ ತಂದೆಯಾಗಿರುವನು ಮತ್ತು ಅವರು ಆತನ ಪುತ್ರರು ಮತ್ತು ಪುತ್ರಿಯರಾಗಿರುವರು.
7:1 yeyh ನಮ್ಮನ್ನು ನಾವು ಯಾವುದರಿಂದ ಶುದ್ದೀಕರಿಸಿಕೊಳ್ಳಬೇಕೆಂದು ಪೌಲನು ಹೇಳುತ್ತಾನೆ? ದೇಹದಲ್ಲಿ ಮತ್ತು ಆತ್ಮದಲ್ಲಿ ನಮ್ಮನ್ನು ಅಶುದ್ದಗೊಳಿಸುವ ಎಲ್ಲವುಗಳಿಂದ ನಮ್ಮನ್ನು ನಾವು ಶುದ್ದೀಕರಿಸಿಕೊಳ್ಳಬೇಕು.
7:2 ax17 ಕೊರಿಂಥದ ದೇವಜನರು ತನಗೆ ಮತ್ತು ತನ್ನ ಸಂಗಡಿಗರಿಗೆ ಏನು ಮಾಡಬೇಕೆಂದು ಪೌಲನು ಆಶಿಸಿದನು? ಅವರು “ನಮಗಾಗಿ ಸ್ಥಳ ಮಾಡಿಕೊಡಿರಿ!” ಎಂದು ಪೌಲನು ಬಯಸಿದ್ದನು.
7:3-4 kc7w ಕೊರಿಂಥದಲ್ಲಿರುವ ದೇವಜನರಿಗೆ ಪೌಲನ ಬಳಿ ಎಂತಹ ಪ್ರೋತ್ಸಾಹದ ಮಾತುಗಳಿದ್ದವು. ಪೌಲನು ಕೊರಿಂಥದ ದೇವಜನರಿಗೆ ನೀವು ತನ್ನ ಮತ್ತು ತನ್ನ ಸಂಗಡಿಗರ ಹೃದಯದಲ್ಲಿ ಇದ್ದೀರಿ ಎಂದೂ ಅವರೊಟ್ಟಿಗೆ ಸಾಯಲೂ ಬದುಕಲೂ ಸಿದ್ಧ ಎಂದು ಹೇಳಿದನು. ಅವರಲ್ಲಿ ತನಗೆ ತುಂಬಾ ಭರವಸೆಯಿದೆ ಮತ್ತು ಅವರ ಬಗ್ಗೆ ಹೆಮ್ಮೆ ಇದೆ ಎಂದು ಸಹ ಪೌಲನು ಹೇಳಿದನು.
7:6-7 uwbv ಪೌಲ ಮತ್ತು ಅವನ ಸಂಗಡಿಗರು ಮಕೆದೋನ್ಯಕ್ಕೆ ಬಂದಾಗ ಮತ್ತು ಅವರು ಎಲ್ಲಾ ರೀತಿಯಲ್ಲಿ ತೊಂದರೆಗೆ ಒಳಗಾದಾಗ-ಹೊರಗಿನ ಸಂಘರ್ಷಗಳು ಮತ್ತು ಒಳಗಿನ ಭಯಗಳಿಗೆ ಒಳಗಾದಾಗ ದೇವರು ಎಂತಹ ಸಾಂತ್ವನವನ್ನು ಅವರಿಗೆ ಕೊಟ್ಟನು? ತೀತನ ಆಗಮನದಿಂದಲೂ, ತೀತನಿಗೆ ಕೊರಿಂಥದ ದೇವಜನರು ಸಂತೈಸುವಿಕೆಯನ್ನು ತೋರಿದ ಸುದ್ದಿಯಿಂದಲೂ, ಕೊರಿಂಥದವರು ಪೌಲನ ಬಗ್ಗೆ ಎಷ್ಟು ಪ್ರೀತಿ, ವ್ಯಥೆ ಮತ್ತು ಕಾಳಜಿಯನ್ನು ಉಳ್ಳವರಾಗಿದ್ದರು ಎಂಬುದರಿಂದಲೂ ದೇವರು ಅವರನ್ನು ಸಂತೈಸಿದನು.
7:8-9 esxj ಪೌಲನ ಹಿಂದಿನ ಪತ್ರಿಕೆಯು ಕೊರಿಂಥದ ದೇವಜನರಲ್ಲಿ ಏನನ್ನು ಉಂಟುಮಾಡಿತು? ಪೌಲನ ಹಿಂದಿನ ಪತ್ರಿಕೆಗೆ ಸ್ಪಂದಿಸಿ ಕೊರಿಂಥದ ದೇವಜನರು ಪಶ್ಚಾತ್ತಾಪದಿಂದ ದು:ಖಿಸಿದರು.
7:9 ygq7 ಕೊರಿಂಥದ ದೇವಜನರಲ್ಲಿ ದೈವಿಕ ದು:ಖವು ಏನನ್ನು ಉಂಟುಮಾಡಿತು? ದು:ಖವು ಅವರಲ್ಲಿ ಪಶ್ಚಾತ್ಥಾಪವನ್ನು ತಂದಿತು.
7:12 m7z2 ಪೌಲನು ಕೊರಿಂಥದ ದೇವಜನರಿಗೆ ತನ್ನ ಹಿಂದಿನ ಪತ್ರಿಕೆಯನ್ನು ಯಾಕೆ ಬರೆದೆನು ಎಂದು ಹೇಳಿದನು? ಪೌಲನಿಗಾಗಿ ಮತ್ತು ಅವನ ಸಂಗಡಿಗರಿಗಾಗಿ ಕೊರಿಂಥದ ದೇವರಜನರಿಗೆ ಇದ್ದ ಆಸಕ್ತಿಯು ದೇವರ ದೃಷ್ಟಿಯಲ್ಲಿ ಕೊರಿಂಥದ ದೇವಜನರಿಗೆ ತಿಳಿದುಬರಬೇಕೆಂದು ಬರೆದೆನು ಎಂದು ಪೌಲನು ಹೇಳಿರುತ್ತಿರುವನು.
7:13 k2om ತೀತನು ಯಾಕೆ ಸಂತೋಷವಾಗಿದ್ದನು? ಕೊರಿಂಥದ ದೇವಜನರೆಲ್ಲರಿಂದ ಅವನ ಆತ್ಮವು ಉಲ್ಲಾಸಗೊಂಡಿದ್ದರಿಂದ ಅವನು ಸಂತೋಷವಾಗಿದ್ದನು.
7:15 mitf ಕೊರಿಂಥದ ದೇವಜನರ ಮೇಲೆ ತೀತನ ಮಮತೆಯು ಇನ್ನೂ ಹೆಚ್ಚಾಗಲು ಕಾರಣವೇನು? ಕೊರಿಂಥದ ದೇವಜನರು ಭಯದಿಂದ ನಡುಗುತ್ತಾ ಅವನನ್ನು ಸ್ವಾಗತಿಸುತ್ತಿರುವಾಗ ಅವರು ತೋರಿದ ವಿಧೇಯತೆಯನ್ನು ಅವನು ನೆನಪಿಸಿಕೊಂಡಾಗ, ಕೊರಿಂಥದ ದೇವಜನರ ಮೇಲೆ ಅವನ ಮಮತೆಯು ಇನ್ನೂ ಹೆಚ್ಚಾಯಿತು.
8:1 r2ai ಕೊರಿಂಥದ ಸಹೋದರರು ಮತ್ತು ಸಹೋದರಿಯರು ಏನನ್ನು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು? ಮಕೆದೋನ್ಯದ ಸಭೆಗಳಿಗೆ ಕೊಡಲ್ಪಟ್ಟಿರುವ ದೇವರ ಕೃಪೆಯು ಬಗ್ಗೆ ಅವರು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು
8:2 lrui ಮಕೆದೋನ್ಯದ ಸಭೆಗಳು ಮಹಾ ಸಂಕಟದ ಪರೀಕ್ಷೆಯ ಸಮಯದಲ್ಲಿಯೂ, ಅವರು ಅತ್ಯಂತ ಬಡವರಾಗಿದ್ದರೂ ಅವರು ಏನು ಮಾಡಿದರು? ಅವರು ಉದಾರತೆಯಿಂದ ದೊಡ್ಡ ಸಂಪತ್ತನ್ನು ಕೊಟ್ಟರು.
8:6 nvfq ಪೌಲನು ತೀತನನ್ನು ಏನು ಮಾಡುವಂತೆ ಕೇಳಿಕೊಂಡನು? ಕೊರಿಂಥದ ದೇವಜನರ ಕಡೆಯಿಂದ ಈ ಕೃಪೆಯ ಕಾರ್ಯವನ್ನು ಪೂರ್ಣಗೊಳಿಸುವಂತೆ ಪೌಲನು ತೀತನನ್ನು ಕೇಳಿಕೊಂಡನು.
8:7 nsw3 ಕೊರಿಂಥದ ದೇವಜನರು ಬೇರೆ ಯಾವ ವಿಷಯದಲ್ಲಿ ಸಮೃದ್ದರಾಗಿದ್ದರು? ಅವರು ನಂಬಿಕೆಯಲ್ಲಿ, ಮಾತಿನಲ್ಲಿ, ತಿಳಿವಳಿಕೆಯಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ, ಮತ್ತು ಪೌಲನ ಮೇಲಿನ ಪ್ರೀತಿಯಲ್ಲಿ ಸಮೃದ್ದರಾಗಿದ್ದರು.
8:12 ek7v ಯಾವುದು ಒಳ್ಳೆಯದು ಮತ್ತು ಸ್ವೀಕಾರಾರ್ಹವಾದ ವಿಷಯ ಎಂದು ಪೌಲನು ಹೇಳುತ್ತಾನೆ. ಪೌಲನು ಕೊರಿಂಥದ ದೇವಜನರಿಗೆ ಆ ಕೆಲಸವನ್ನು ಮಾಡಲು ಸನ್ನದ್ದರಾಗಿರುವುದು ಒಳ್ಳೆಯದು ಮತ್ತು ಸ್ವೀಕಾರಾರ್ಹವೆಂದು ಹೇಳುತ್ತಾನೆ.
8:13-14 ghbz ಇತರರು ಉಪಶಮನಗೊಳ್ಳಬಹುದು ಮತ್ತು ಕೊರಿಂಥದ ದೇವಜನರಿಗೆ ಹೊರೆಯಾಗಬಹುದೆಂದು ಪೌಲನು ಈ ಕಾರ್ಯವು ಆಗಬೇಕೆಂದು ಬಯಸಿದನೋ? ಇಲ್ಲ. ಪೌಲನು ಹೇಳಿದ್ದೇನೆಂದರೆ ಕೊರಿಂಥದ ದೇವಜನರು ಆ ಸಮಯದಲ್ಲಿ ಹೊಂದಿದ್ದ ಸಮೃದ್ದಿಯು ಅವರಿಗೆ (ಇತರ ದೇವಜನರಿಗೆ) ಬೇಕಾದದ್ದನ್ನು ಪೂರೈಸುತ್ತದೆ ಮತ್ತು ಅವರ ಸಮೃದ್ದಿಯು ಕೊರಿಂಥದ ದೇವಜನರಿಗೆ ಬೇಕಾದದ್ದನ್ನು ಪೂರೈಸುತ್ತದೆ ಮತ್ತು ನ್ಯಾಯಯುತವಾಗಿ ಇರುತ್ತದೆ.
8:16-17 oufl ಪೌಲನು ಕೊರಿಂಥದ ದೇವಜನರಿಗೋಸ್ಕರ ಹೊಂದಿದ್ದ ಅದೇ ರೀತಿಯ ಆಸಕ್ತಿಯುಳ್ಳ ಕಾಳಜಿಯನ್ನು ದೇವರು ಅವನ ಹೃದಯದಲ್ಲಿ ಇಟ್ಟ ನಂತರ ತೀತನು ಏನು ಮಾಡಿದನು? ತೀತನು ಪೌಲನ ಮನವಿಯನ್ನು ಸ್ವೀಕರಿಸಿದನು, ಮತ್ತು ಅದರ ಬಗ್ಗೆ ಬಹಳ ಆಸಕ್ತಿಯುಳ್ಳವನಾಗಿ, ಅವನು ತನ್ನ ಸ್ವಂತ ಇಚ್ಚೆಯಿಂದ ಕೊರಿಂಥದ ದೇವಜನರ ಬಳಿಗೆ ಬಂದನು.
8:20 pf1h ಈ ಉದಾರತೆಯ ಕೃತ್ಯದ ಕುರಿತಾದ ತನ್ನ ಕಾರ್ಯಗಳಲ್ಲಿ ಪೌಲನು ಏನನ್ನು ದೂರವಿಡಲು ಎಚ್ಚರವಹಿಸಿದ್ದನು? ಪೌಲನು ತನ್ನ ಕಾರ್ಯಗಳ ಬಗ್ಗೆ ಅಪಾದನೆಯನ್ನು ಹೊರಿಸಲು ಯಾರಿಗೂ ಕಾರಣವನ್ನು ಕೊಡದ ಹಾಗೆ ಎಚ್ಚರವಹಿಸಿದ್ದನು.
8:24 vglq ಇತರ ಸಭೆಗಳಿಂದ ಕಳುಹಿಸಲ್ಪಟ್ಟ ಸಹೋದರರ ಬಗ್ಗೆ ಏನು ಮಾಡಬೇಕೆಂದು ಕೊರಿಂಥದ ದೇವಜನರಿಗೆ ಪೌಲನು ಹೇಳಿದನು? ಪೌಲನು ಕೊರಿಂಥದ ಸಭೆಯವರು ತಮ್ಮ ಪ್ರೀತಿಯನ್ನು ಅವರಿಗೆ ತೋರಿಸಬೇಕೆಂದು ಮತ್ತು ಇತರ ಸಭೆಗಳ ನಡುವೆ ಪೌಲನು ಕೊರಿಂಥದ ಸಭೆಯ ಬಗ್ಗೆ ಹೆಮ್ಮೆಪಡುವ ಕಾರಣವನ್ನು ತೋರಿಸಬೇಕೆಂದು ಹೇಳಿದನು.
9:1 o3wa ಪೌಲನು ಕೊರಿಂಥದ ದೇವಜನರಿಗೆ ಯಾವ ವಿಷಯದ ಬಗ್ಗೆ ಬರೆಯುವುದು ಅವಶ್ಯವಲ್ಲವೆಂದು ಹೇಳುತ್ತಾನೆ? ದೇವಜನರಿಗಾಗಿರುವ ಸೇವೆಯ ಕುರಿತಾಗಿ ಅವರಿಗೆ ಬರೆಯುವುದು ಅವಶ್ಯವಿಲ್ಲವೆಂದು ಪೌಲನು ಹೇಳುತ್ತಾನೆ.
9:3 bjar ಪೌಲನು ಸಹೋದರರನ್ನು ಯಾಕೆ ಕೊರಿಂಥಕ್ಕೆ ಕಳುಹಿಸಿದನು? ಪೌಲನು ಕೊರಿಂಥದವರ ವಿಷಯದಲ್ಲಿ ಹೊಗಳಿಕೊಂಡಿದ್ದು ವ್ಯರ್ಥವಾಗಬಾರದೆಂದು ಮತ್ತು ತಾನು ಹೇಳಿದಂತೆ ಅವರು ಸಿದ್ದರಾಗಬೇಕೆಂದು ಅವನು ಸಹೋದರರನ್ನು ಕಳುಹಿಸಿದನು.
9:4-5 tumg ಪೌಲನು ಕೊರಿಂಥದ ದೇವಜನರ ಬಳಿಗೆ ಹೋಗಿ ಕೊರಿಂಥದವರು ವಾಗ್ದಾನ ಮಾಡಿದ ಉಡುಗೊರೆಗೆ ಮುಂಚಿತವಾಗಿ ಸಿದ್ದತೆಗಳನ್ನು ಮಾಡಬೇಕೆಂದು ಸಹೋದರರನ್ನು ಒತ್ತಾಯಿಸುವುದು ಅಗತ್ಯವೆಂದು ಯಾಕೆ ಭಾವಿಸಿದನು? ಪೌಲನ ಜೊತೆಯಲ್ಲಿ ಮಕೆದೋನ್ಯದಿಂದ ಯಾರಾದರೂ ಬಂದು ಮತ್ತು ಕೊರಿಂಥದವರು ಸಿದ್ದವಿಲ್ಲದಿರುವುದನ್ನು ಕಂಡರೆ ಪೌಲನು ಮತ್ತು ಅವನ ಸಂಗಡಿಗರು ನಾಚಿಕೆ ಪಡಬೇಕಾಗಿಲ್ಲವೆಂದು ಯೋಚಿಸಿದನು. ಕೊರಿಂಥದವರು ಉಡುಗೊರೆಯನ್ನು ಕೊಡಲು ಸಿದ್ದರಾಗಿರಬೇಕೆಂದು, ಕೊರಿಂಥದವರು ಅದನ್ನು ಕೊಡುವಂತೆ ಒತ್ತಾಯಿಸದೆ ಮನಃಪೂರ್ವಕವಾಗಿ ಕೊಡುವಂತೆ ಪೌಲನು ಬಯಸಿದನು.
9:6 rbsa ಪೌಲನು ಹೇಳುವ ಪ್ರಕಾರ ಅವರ ಕೊಡುಗೆಯ ಉದ್ದೇಶ ಏನು? ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವನ್ನು ಕೊಯ್ಯುವನು, ಮತ್ತು ಹೆಚ್ಚಾಗಿ ಬಿತ್ತುವವನೋ ಹೆಚ್ಚು ಕೊಯ್ಯುವನು ಎಂಬ ಉದ್ದೇಶ ಎಂದು ಪೌಲನು ಹೇಳಿದನು.
9:7 clv5 ಪ್ರತಿಯೊಬ್ಬರೂ ಹೇಗೆ ಕೊಡಬೇಕು? ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿದ ಪ್ರಕಾರ ಕೊಡಲಿ-ಬಲವಂತದ ಬದ್ಧತೆಯಿಂದಲ್ಲ ಅಥವಾ ಅವನು ಕೊಡುವಾಗ ದು:ಖಪಡುವಾಗೆ ಅಲ್ಲ.
9:10-11 n3di ಬಿತ್ತುವವನಿಗೆ ಬೀಜವನ್ನು ಮತ್ತು ಆಹಾರಕ್ಕಾಗಿ ರೊಟ್ಟಿಯನ್ನು ಒದಗಿಸಿಕೊಡುವವನು ಕೊರಿಂಥದ ದೇವಜನರಿಗೆ ಏನು ಮಾಡಲಿದ್ದಾನೆ? ಆತನು ಬಿತ್ತುವುದಕ್ಕೆ ಬೀಜವನ್ನು ಪೂರೈಸುವನು, ಹೆಚ್ಚಿಸುವನು ಮತ್ತು ಅವರ ನೀತಿಯ ಫಸಲನ್ನು ಹೆಚ್ಚಿಸುವನು. ಅವರು ಉದಾರ ಭಾವನೆಯುಳ್ಳವರಾಗಿರುವುದರಿಂದ ಎಲ್ಲಾ ರೀತಿಯಲ್ಲಿಯೂ ಅವರು ಶ್ರೀಮಂತರಾಗುತ್ತಾರೆ.
9:13 bh3f ಕೊರಿಂಥದ ದೇವಜನರು ದೇವರನ್ನು ಹೇಗೆ ಮಹಿಮೆ ಪಡಿಸಿದರು? ಅವರು ಕ್ರಿಸ್ತನ ಸುವಾರ್ತೆಯ ಅರಿಕೆಗೆ ವಿಧೇಯರಾಗುವ ಮೂಲಕ ಮತ್ತು ಅವರು ತಮ್ಮ ಕೊಡುಗೆಯನ್ನು ಉದಾರವಾಗಿ ಕೊಡುವ ಮೂಲಕ ಅವರು ದೇವರನ್ನು ಮಹಿಮೆಪಡಿಸಿದರು.
9:14 b12z ಕೊರಿಂಥದ ದೇವಜನರಿಗಾಗಿ ಇತರ ದೇವಜನರು ಪ್ರಾರ್ಥಿಸುವಾಗ ಅವರಿಗಾಗಿ ಯಾಕೆ ಹಾತೊರೆಯುತ್ತಿದ್ದರು? ದೇವರ ಅಪಾರವಾದ ಕೃಪೆಯು ಕೊರಿಂಥದವರ ಮೇಲೆ ಇದ್ದಿದ್ದರಿಂದ ಅವರು ಅವರಿಗಾಗಿ ಹಾತೊರೆಯುತ್ತಿದ್ದರು.
10:2 v5cq ಪೌಲನು ಕೊರಿಂಥದ ದೇವಜನರಲ್ಲಿ ಏನು ಬೇಡಿಕೊಂಡನು? ಪೌಲನು ಅವರೊಂದಿಗೆ ಇದ್ದಾಗ, ಆತ್ಮವಿಶ್ವಾಸದಿಂದ ದಿಟ್ಟನಾಗಿ ಇರಬೇಕಾಗಿಲ್ಲ ಎಂದು ಅವರನ್ನು ಬೇಡಿಕೊಂಡನು.
10:2 v6f7 ಯಾವ ಸಂದರ್ಭಕ್ಕಾಗಿ ಪೌಲನು ಆತ್ಮವಿಶ್ವಾಸದಿಂದ ದಿಟ್ಟನಾಗಿರಬೇಕೆಂದು ಭಾವಿಸಿದನು? ಪೌಲನೂ ಅವನ ಸಂಗಡಿಗರೂ ಶರೀಕ್ಕನುಸಾರವಾಗಿ ಜೀವಿಸುತ್ತಾರೆಂದು ಭಾವಿಸಿದವರು ವಿರೋಧಿಸುವಾಗ ಅವನು ಆತ್ಮವಿಶ್ವಾಸದಿಂದ ದಿಟ್ಟನಾಗಿರಬೇಕೆಂದು ಪೌಲನು ಭಾವಿಸಿದನು.
10:4 v4sc ಪೌಲ ಮತ್ತು ಅವನ ಸಂಗಡಿಗರು ಯುದ್ದ ಮಾಡಿದಾಗ, ಅವರು ಯಾವ ರೀತಿಯ ಆಯುಧಗಳನ್ನು ಬಳಸಲಿಲ್ಲ? ಪೌಲ ಮತ್ತು ಅವನ ಸಂಗಡಿಗರು ಯುದ್ದ ಮಾಡುವಾಗ ಲೋಕಸಂಬಂಧವಾದ ಆಯುಧಗಳನ್ನು ಬಳಸಲಿಲ್ಲ.
10:4 f5m5 ಪೌಲನು ಬಳಸಿದ ಆಯುಧಗಳಿಗೆ ಏನನ್ನು ಮಾಡುವಂತಹ ಶಕ್ತಿ ಇದ್ದಿತು? ಪೌಲನು ಬಳಸಿದ ಆಯುಧಗಳು ಬಲವಾದ ಕೋಟೆಗಳನ್ನು ಕೆಡವಲು ದೈವಿಕ ಶಕ್ತಿ ಉಳ್ಳವುಗಳಾಗಿದ್ದವು.
10:8 gvuy ಯಾವ ಕಾರಣಕ್ಕಾಗಿ ಕರ್ತನು ಪೌಲನಿಗೆ ಮತ್ತು ಅವನ ಸಂಗಡಿಗರಿಗೆ ಅಧಿಕಾರವನ್ನು ಕೊಟ್ಟನು? ಕೊರಿಂಥದ ದೇವಜನರನ್ನು ನಾಶಮಾಡದೆ ಮತ್ತು ಅವರನ್ನು ಕಟ್ಟುವುದಕ್ಕಾಗಿ ಕರ್ತನು ಪೌಲನಿಗೆ ಮತ್ತು ಅವನ ಸಂಗಡಿಗರಿಗೆ ಅಧಿಕಾರವನ್ನು ಕೊಟ್ಟನು.
10:10 x852 ಪೌಲ ಮತ್ತು ಅವನ ಪತ್ರಿಕೆಗಳ ಬಗ್ಗೆ ಕೆಲವರು ಏನು ಹೇಳುತ್ತಿದ್ದರು? ಪೌಲನ ಪತ್ರಿಕೆಗಳು ಗಂಭೀರವಾದವುಗಳೂ ಪ್ರಬಲವಾದವುಗಳೂ ಆಗಿವೆ ಆದರೆ ಪೌಲನು ಶರೀರಸಂಬಂಧದಲ್ಲಿ ಬಲಹೀನನಾಗಿದ್ದಾನೆ ಮತ್ತು ಅವನ ಬೋಧನೆಯು ಕೇಳಲು ಯೋಗ್ಯವಲ್ಲವೆಂದು ಎಂದು ಕೆಲವರು ಹೇಳುತ್ತಿದ್ದರು.
10:11 o9m6 ಅವನ ಪತ್ರಿಕೆಗಳಲ್ಲಿ ಕಾಣಬರುವುದಕ್ಕಿಂತಲೂ ಅವನು ಬೇರೆ ತರಹದ ವ್ಯಕ್ತಿ ಎಂದು ಭಾವಿಸಿದವರಿಗೆ ಪೌಲನು ಏನು ಹೇಳಿದನು? ಪೌಲನು ತಾನು ದೂರದಲ್ಲಿರುವಾಗ ಪತ್ರಿಕೆಯಲ್ಲಿ ಏನೂ ಹೇಳಿದ್ದನ್ನೋ ಅದನ್ನೇ ಕೊರಿಂಥದಲ್ಲಿರುವ ದೇವಜನರೊಂದಿಗೆ ಇರುವಾಗಲೂ ಮಾಡುತ್ತೇನೆಂದು ಹೇಳಿದನು.
10:12 qkvy ತಮ್ಮನ್ನು ತಾವು ಹೊಗಳಿಕೊಳ್ಳುವವರು ತಮಗೆ ವಿವೇಕವಿಲ್ಲವೆಂದು ತೋರಿಸಲು ಏನು ಮಾಡಿದರು? ಅವರು ಪರಸ್ಪರ ಒಬ್ಬರೊಂದಿಗೊಬ್ಬರ ಅಳೆಯುವ ಮತ್ತು ಹೋಲಿಸುವ ಮೂಲಕ ಅವರಿಗೆ ವಿವೇಕವಿಲ್ಲವೆಂದು ಅವರು ತೋರಿಸಿದರು.
10:13 gpyw ಪೌಲನ ಹೊಗಳಿಕೆಯ ಮಿತಿಗಳೇನು? ತನ್ನ ಹೊಗಳಿಕೆಯು ದೇವರು ತಮಗೆ ನೇಮಿಸಿದ ಪ್ರದೇಶದಲ್ಲಿ ಮಾತ್ರ ಇರುತ್ತದೆ, ಅದು ಕೊರಿಂಥದವರ ಮಟ್ಟಿಗೂ ಸಹ ತಲುಪುವುದು ಎಂದು ಪೌಲನು ಹೇಳಿದನು. ಅವರು ಬೇರೆಯವರ ಶ್ರಮದ ಬಗ್ಗೆ, ಬೇರೊಬ್ಬರ ಪ್ರದೇಶದಲ್ಲಿ ಮಾಡುವ ಕೆಲಸದ ಬಗ್ಗೆ ಹೊಗಳಿಕೊಳ್ಳುವುದಿಲ್ಲವೆಂದು ಪೌಲನು ಹೇಳಿದನು.
10:15-16 afkv ಪೌಲನ ಹೊಗಳಿಕೆಯ ನಿರ್ದಿಷ್ಟವಾದ ಮಿತಿಗಳು ಯಾವುವು? ತನ್ನ ಹೊಗಳಿಕೆಯು ದೇವರು ತಮಗೆ ನೇಮಿಸಿದ ಪ್ರದೇಶದಲ್ಲಿ ಮಾತ್ರ ಇರುತ್ತದೆ, ಅದು ಕೊರಿಂಥದವರ ಮಟ್ಟಿಗೂ ಸಹ ತಲುಪುವುದು ಎಂದು ಪೌಲನು ಹೇಳಿದನು. ಅವರು ಬೇರೆಯವರ ಶ್ರಮದ ಬಗ್ಗೆ, ಬೇರೊಬ್ಬರ ಪ್ರದೇಶದಲ್ಲಿ ಮಾಡುವ ಕೆಲಸದ ಬಗ್ಗೆ ಹೊಗಳಿಕೊಳ್ಳುವುದಿಲ್ಲವೆಂದು ಪೌಲನು ಹೇಳಿದನು.
10:18 vgxf ಯೋಗ್ಯನು ಯಾರು? ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
11:2 qdgp ಪೌಲನು ಕೊರಿಂಥದ ದೇವಜನರ ಮೇಲೆ ಯಾಕೆ ದೈವಿಕ ಅಸೂಯೆಯನ್ನು ಉಳ್ಳವನಾಗಿದ್ದನು? ಅವನು ಅವರ ಮೇಲೆ ಅಸೂಯೆಗೊಂಡಿದ್ದನು, ಯಾಕೆಂದರೆ, ಅವರನ್ನು ಕ್ರಿಸ್ತನಿಗೆ ಶುದ್ದವಾದ ಕನ್ಯೆಯಂತೆ ಒಪ್ಪಿಸಬೇಕೆಂದು, ಒಂದೇ ಗಂಡನಿಗೆ ವಿವಾಹವಾಗುವುದಕ್ಕೆ ವಾಗ್ದಾನಮಾಡಿದ್ದನು.
11:3 boci ಕೊರಿಂಥದ ದೇವಜನರ ಬಗ್ಗೆ ಪೌಲನು ಯಾಕೆ ಹೆದರುತ್ತಿದ್ದನು? ಕ್ರಿಸ್ತನಿಗಾಗಿ ಇರುವ ಅವರ ಶುದ್ದವಾದ ಮತ್ತು ಪ್ರಾಮಾಣಿಕ ಭಕ್ತಿಯಿಂದ ಅವರ ಆಲೋಚನೆಗಳು ಬೇರೆಡೆಗೆ ಹೋಗಬಹುದೆಂದು ಪೌಲನು ಭಯಪಟ್ಟನು.
11:4 dh9x ಕೊರಿಂಥದ ದೇವಜನರು ಏನನ್ನು ಸಹಿಸಿಕೊಂಡರು? ಪೌಲನು ಮತ್ತು ಅವನ ಸಂಗಡಿಗರು ಸಾರಿದ ಸುವಾರ್ತೆಗಿಂತಲೂ ಭಿನ್ನವಾದ ಸುವಾರ್ತೆಯನ್ನು ಯಾರಾದರೂ ಬಂದು ಇನ್ನೊಬ್ಬ ಯೇಸುವಿನ ಬಗ್ಗೆ ಸಾರಿದ್ದನ್ನು ಅವರು ಸಹಿಸಿಕೊಂಡರು.
11:7 xbyg ಕೊರಿಂಥದವರಿಗೆ ಸುವಾರ್ತೆಯನ್ನು ಪೌಲನು ಹೇಗೆ ಸಾರಿದನು? ಪೌಲನು ಕೊರಿಂಥದವರಿಗೆ ಉಚಿತವಾಗಿ ಸುವಾರ್ತೆಯನ್ನು ಸಾರಿದನು.
11:8 zb8y ಇತರ ಸಭೆಗಳನ್ನು ಪೌಲನು ಹೇಗೆ “ಸುಲುಕೊಂಡನು”? ಅವನು ಕೊರಿಂಥದವರಿಗೆ ಸೇವೆ ಮಾಡಲು ಅವರ ಸಹಾಯವನ್ನು ಅಂಗೀಕರಿಸುವ ಮೂಲಕ ಅವರನ್ನು “ಸುಲುಕೊಂಡನು.”
11:13 temx ಪೌಲನು ಮತ್ತು ಅವನ ಸಂಗಡಿಗರು ಹೊಗಳಿಕೊಳ್ಳುವ ವಿಷಯಗಳಲ್ಲಿ ತಾವು ಕೂಡ ಸಮಾನರಾಗಬೇಕೆಂದು ಬಯಸುವವರ ಕುರಿತು ಪೌಲನು ಹೇಗೆ ವಿವರಿಸುತ್ತಾನೆ? ಅಂತಹ ಜನರನ್ನು ಪೌಲನು ಸುಳ್ಳು ಅಪೋಸ್ತಲರೆಂದು, ಮೋಸದ ಕೆಲಸಗಾರರು, ಕ್ರಿಸ್ತನ ಅಪೊಸ್ತಲರಂತೆ ತಮಗೆ ತಾವೇ ವೇಷವನ್ನು ಹಾಕಿಕೊಳ್ಳುತ್ತಾರೆಂದು ವಿವರಿಸುತ್ತಾನೆ.
11:14 mzrh ಸೈತಾನನು ತನ್ನನ್ನು ತಾನು ಹೇಗೆ ವೇಷಮರೆಸಿಕೊಳ್ಳುತ್ತಾನೆ? ಅವನು ತನ್ನನ್ನು ತಾನು ಬೆಳಕಿನ ದೂತನಂತೆ ವೇಷಮರೆಸಿಕೊಳ್ಳುತ್ತಾನೆ.
11:16 s9lm ಪೌಲನು ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಕೊರಿಂಥದ ದೇವಜನರನ್ನು ಯಾಕೆ ಕೇಳಿಕೊಂಡನು? ತನ್ನನ್ನು ತಾನು ಸ್ವಲ್ಪ ಹೊಗಳಿಕೊಳ್ಳಲಾಗುವಂತೆ ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಪೌಲನು ಅವರನ್ನು ಕೇಳಿಕೊಂಡನು.
11:19-20 go6f ಕೊರಿಂಥದ ದೇವಜನರು ಸಂತೋಷದಿಂದ ಯಾರನ್ನು ಸಹಿಸಿಕೊಳ್ಳುತ್ತಾರೆಂದು ಪೌಲನು ಹೇಳಿದನು? ಅವರು ಬುದ್ಧಿಹೀನರನ್ನು, ತಮ್ಮನ್ನು ದಾಸರನ್ನಾಗಿ ಮಾಡಿಕೊಂಡವರನ್ನು, ಅವರ ಮಧ್ಯೆ ಒಡಕುಗಳನ್ನು ಉಂಟುಮಾಡುವವರನ್ನು, ಅವರಿಂದ ಲಾಭವನ್ನು ಪಡೆದುಕೊಳ್ಳುವವರನ್ನು, ತಮ್ಮನ್ನು ಹೆಚ್ಚಿಸಿಕೊಳ್ಳವವರನ್ನು, ಅಥವಾ ತಮ್ಮ ಕೆನೆಗೆ ಹೊಡೆಯುವವರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.
11:22-23 y0t3 ಪೌಲನಿಗೆ ಸಮನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವವರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರ ಹೊಗಳಿಕೊಳ್ಳುವ ಸಂಗತಿಗಳೊಂದಿಗೆ ಹೋಲಿಸಿಕೊಂಡು ಅವನು ಹೊಗಳಿಕೊಳ್ಳುವ ವಿಷಯಗಳೇನು? ಪೌಲನಿಗೆ ಸಮಾನರೆಂದು ಹೇಳಿಕೊಳುತ್ತಿದ್ದವರು ಹೊಗಳಿಕೊಳ್ಳುತ್ತಿದ್ದ ಹಾಗೆಯೇ ಪೌಲನು ಸಹ ತಾನು ಇಬ್ರಿಯನು, ಇಸ್ರಾಯೇಲನು ಮತ್ತು ಅಬ್ರಹಾಮನ ವಂಶದವನೆಂದು ಹೊಗಳಿಕೊಳ್ಳುತ್ತಿದ್ದನು. ತಾವು ಕ್ರಿಸ್ತನ ಸೇವಕರೆಂದು ಹೇಳಿಕೊಳ್ಳುತ್ತಿದ್ದವರಿಗಿಂತಲೂ ಹೆಚ್ಚಾಗಿ ಪ್ರಯಾಸಗಳಲ್ಲಿ, ಸೆರೆಮನೆಗಳಲ್ಲಿ, ಮಿತಿಮೀರಿದ ಹೊಡೆತಗಳನ್ನು ತಿಂದಿದ್ದರಲ್ಲಿ, ಮರಣದ ಅನೇಕ ಅಪಾಯಗಳನ್ನು ಎದುರಿಸುವಲ್ಲಿ ತಾನು ಅವರಿಗಿಂತಲೂ ಅಧಿಕವಾಗಿ ಕ್ರಿಸ್ತನ ಸೇವಕನಾಗಿದ್ದಾನೆಂದು ಪೌಲನ್ನು ಹೊಗಳಿಕೊಂಡನು.
11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? ಪೌಲನಿಗೆ ಯೆಹೂದ್ಯರಿಂದ “ಒಂದು ಕಡಿಮೆ 40 ಏಟುಗಳನ್ನು” ಐದು ಸಾರಿ ಹೊಡಿಸಿಕೊಂಡನು. ಮೂರು ಬಾರಿ ಛಡಿಗಳಿಂದ ಹೊಡೆಸಿಕೊಂಡನು. ಒಂದು ಸಾರಿ ಕಲ್ಲುಗಳಿಂದ ಹೊಡೆಸಿಕೊಂಡಿದ್ದನು. ಮೂರು ಸಾರಿ ಅವನಿದ್ದ ಹಡಗು ಒಡೆದುಹೋಯಿತು. ಅವನು ಒಂದು ರಾತ್ರಿ ಮತ್ತು ಒಂದು ಹಗಲನ್ನು ಸಮುದ್ರದಲ್ಲಿ ಕಳೆದನು. ಅವನು ನದಿಗಳಿಂದ, ಕಳ್ಳರಿಂದ, ತನ್ನ ಸ್ವಂತ ಜನರಿಂದ, ಅನ್ಯಜನರಿಂದ ಅಪಾಯವನ್ನು ಎದುರಿಸಿದನು.
11:29 sbcz ಪೌಲನ ಪ್ರಕಾರ, ಅವನು ಕೋಪದಿಂದ ಉರಿಯಲು ಕಾರಣವೇನು? ಒಬ್ಬನು ಮತ್ತೊಬ್ಬನನ್ನು ಪಾಪಕ್ಕೆ ಬೀಳುವಂತೆ ಮಾಡುತ್ತಿದ್ದರಿಂದ ಪೌಲನು ತನ್ನೊಳಗೆ ಕೋಪದಿಂದ ಉರಿಯುತ್ತಿದ್ದನು.
11:30 s4tr ಪೌಲನು ತಾನು ಹೊಗಳಿಕೊಳ್ಳಬೇಕೆಂದಿದ್ದರೆ ಯಾವುದರ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಹೇಳಿದನು? ಪೌಲನು ತನ್ನ ದೌರ್ಬಲ್ಯಗಳನ್ನು ತೋರ್ಪಡಿಸುವ ವಿಷಯಗಳ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಹೇಳಿದನು.
11:32 xdhi ದಮಸ್ಕದಲ್ಲಿ ಪೌಲನಿಗೆ ಯಾವ ಅಪಾಯವು ಎದುರಾಯಿತು? ಪೌಲನನ್ನು ಸೆರೆಹಿಡಿಯಲು ದಮಸ್ಕದ ರಾಜ್ಯಪಾಲನು ಪಟ್ಟಣವನ್ನು ಕಾವಲು ಕಾಯುತ್ತಿದ್ದನು.
12:1 c7ux ಈಗ ಯಾವುದರ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಪೌಲನು ಹೇಳಿದನು? ಪೌಲನು ತಾನು ಕರ್ತನಿಂದ ಪಡೆದುಕೊಂಡ ದರ್ಶನಗಳು ವಿಷಯವಾಗಿಯೂ ಪ್ರಕಟನೆಗಳ ವಿಷಯವಾಗಿಯೂ ಹೊಗಳಿಕೊಳ್ಳುತ್ತೇನೆಂದು ಹೇಳಿದನು.
12:2 pc03 14 ವರ್ಷಗಳ ಹಿಂದೆ ಕ್ರಿಸ್ತನಲ್ಲಿದ್ದ ಮನುಷ್ಯನಿಗೆ ಏನಾಯಿತು? ಆತನು ಮೂರನೆಯ ಪರಲೋಕಕ್ಕೆ ಒಯ್ಯಲ್ಪಟ್ಟನು.
12:6 j4ow ಪೌಲನು ತಾನು ಹೊಗಳಿಕೊಳ್ಳುವುದು ಮೂರ್ಖತನವಲ್ಲವೆಂದು ಯಾಕೆ ಹೇಳುತ್ತಾನೆ? ಪೌಲನು ತಾನು ಸತ್ಯವನ್ನು ಮಾತನಾಡುತ್ತಾ ಇದ್ದುದರಿಂದ ತಾನು ಹೊಗಳಿಕೊಳ್ಳುವುದು ಮೂರ್ಖತನವಲ್ಲವೆಂದು ಹೇಳಿದನು.
12:7 qkhc ಪೌಲನನ್ನು ಉಬ್ಬಿಕೊಳ್ಳದಂತೆ ತಡೆಯಲು ಅವನಿಗೆ ಏನು ಸಂಭವಿಸಿತು? ಪೌಲನಿಗೆ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಯಿತು, ಅದೇನಂದರೆ ಅವನನ್ನು ಹಿಂಸಿಸಲು ಸೈತಾನನಿಂದ ಒಬ್ಬ ದೂತನನ್ನು ಕಳುಹಿಸಲಾಯಿತು.
12:9 qb1l ಪೌಲನು ತನ್ನ ಶರೀರದಲ್ಲಿರುವ ಮುಳ್ಳನ್ನು ತೆಗೆದು ಹಾಕಬೇಕೆಂದು ಕರ್ತನನ್ನು ಕೇಳಿದಾಗ ಕರ್ತನು ಪೌಲನಿಗೆ ಏನೆಂದು ಹೇಳಿದನು? ಕರ್ತನು ಪೌಲನಿಗೆ, "ನನ್ನ ಕೃಪೆಯು ನಿನಗೆ ಸಾಕು; ಯಾಕೆಂದರೆ ಬಲಹೀನತೆಯಲ್ಲಿ ಶಕ್ತಿಯು ಪರಿಪೂರ್ಣವಾಗಿದೆʼ ಎಂದು ಹೇಳಿದನು.
12:9 aey9 ಪೌಲನು ತನ್ನ ಬಲಹೀನತೆಯ ವಿಷಯದಲ್ಲಿ ಹೊಗಳಿಕೊಳ್ಳುವುದು ಮೇಲೆಂದು ಏಕೆ ಹೇಳಿದನು? ಕ್ರಿಸ್ತನ ಶಕ್ತಿಯು ಅವನಲ್ಲಿ ನೆಲೆಸುವಂತೆ ಇದು ಮೇಲೆಂದು ಎಂದು ಪೌಲನು ಹೇಳಿದನು.
12:12 s3fj ಕೊರಿಂಥದವರಲ್ಲಿ ಪೂರ್ಣ ತಾಳ್ಮೆಯಿಂದ ಏನನ್ನು ಮಾಡಲಾಯಿತು? ಅವರ ಮಧ್ಯೆ ಪೂರ್ಣ ತಾಳ್ಮೆಯಿಂದ ಸೂಚಕಕಾರ್ಯಗಳನ್ನೂ, ಅದ್ಬುತಕಾರ್ಯಗಳನ್ನೂ, ಮಹತ್ಕಾರ್ಯಗಳನ್ನೂ, ಅಪೊಸ್ತಲನ ಲಕ್ಷಣಗಳನ್ನೂ ಮಾಡಲಾಯಿತು.
12:14 wcan ಪೌಲನು ಕೊರಿಂಥದವರಿಗೆ ತಾನು ಅವರಿಗೆ ಭಾರವಾಗುವುದಿಲ್ಲ ಎಂದು ಯಾಕೆ ಹೇಳಿದನು? ಅವನಿಗೆ ಅವರು ಬೇಕಾಗಿದ್ದರಿಂದ ಪೌಲನು ಅವರ ಆಸ್ತಿಗಳನ್ನು ಬಯಸುವುದಿಲ್ಲದೆಂದು ಅವರಿಗೆ ತಿಳಿಸಲು ಹೀಗೆ ಹೇಳಿದನು.
12:15 gfv8 ಕೊರಿಂಥದಲ್ಲಿರುವ ದೇವಜನರಿಗೋಸ್ಕರ ತಾನು ಬಹಳ ಸಂತೋಷದಿಂದ ಏನು ಮಾಡುತ್ತೇನೆಂದು ಪೌಲನು ಹೇಳಿದನು. ಪೌಲನು ಅವರ ಜೀವಾತ್ಮಗಳಿಗಾಗಿ ತನ್ನನ್ನೇ ವೆಚ್ಚಮಾಡಲು ಬಹಳ ಸಂತೋಷಪಡುತ್ತೇನೆ ಎಂದು ಹೇಳಿದನು.
12:19 xz62 ಪೌಲನು ಕೊರಿಂಥದ ದೇವಜನರಿಗೆ ಈ ಎಲ್ಲಾ ವಿಷಯಗಳನ್ನು ಹೇಳಿದ ಉದ್ದೇಶ ಏನು? ಪೌಲನು ಕೊರಿಂಥದ ದೇವಜನರನ್ನು ವೃದ್ಧಿಪಡಿಸುವುದಕ್ಕಾಗಿ ಈ ಸಂಗತಿಗಳನ್ನು ಹೇಳಿದನು.
12:20 ihut ಪೌಲನು ಕೊರಿಂಥದ ದೇವಜನರ ಬಳಿಗೆ ಹಿಂದಿರುಗಿದಾಗ ಏನನ್ನು ಕಂಡುಕೊಳ್ಳಬಹುದೆಂದು ಭಯಪಟ್ಟನು? ಪೌಲನು ಅವರಲ್ಲಿ ವಾಗ್ವಾದಗಳು, ಅಸೂಯೆ, ಕೋಪ, ಸ್ವಾರ್ಥದಾಶೆ, ಚಾಡಿ, ಅಹಂಕಾರ ಮತ್ತು ಗೊಂದಲವನ್ನು ಕಂಡುಕೊಳ್ಳಬಹುದೆಂದು ಭಯಪಟ್ಟನು.
12:21 rfkd ದೇವರು ಅವನಿಗೆ ಏನು ಮಾಡಬಹುದೆಂದು ಪೌಲನು ಭಯಪಟ್ಟನು? ಕೊರಿಂಥದ ದೇವಜನರ ಮುಂದೆ ದೇವರು ಪೌಲನನ್ನು ತಲೆತಗ್ಗಿಸುವಂತೆ ಮಾಡುವನೋ ಎಂದು ಪೌಲನು ಭಯಪಟ್ಟನು.
12:21 tdhb ಹಿಂದೆ ಪಾಪಮಾಡಿದ ಕೊರಿಂಥದ ದೇವಜನರಿಗೋಸ್ಕರ ದು:ಖಿಸಬಹುದೆಂದು ಪೌಲನು ಯಾವ ಕಾರಣಕ್ಕಾಗಿ ಯೋಚಿಸುತ್ತಾನೆ? ಅವರು ಹಿಂದೆ ಮಾಡುತ್ತಿದ್ದ ಅಶುದ್ದತೆ, ಲೈಂಗಿಕ ಅನೈತಿಕತೆ ಮತ್ತು ಕಾಮುಕ ನಡವಳಿಕೆಯಿಂದ ಪಶ್ಚಾತ್ತಾಪಪಡದೆ ಇರಬಹುದೆಂದು ಪೌಲನು ಭಯಪಟ್ಟನು.
13:1-2 cf6k 2ನೇ ಕೊರಿಂಥದ ಪತ್ರಿಕೆಯು ಬರೆಯಲ್ಪಡುವ ವೇಳೆಗೆ ಪೌಲನು ಈಗಾಗಲೇ ಕೊರಿಂಥದಲ್ಲಿರುವ ದೇವಜನರ ಬಳಿಗೆ ಎಷ್ಟು ಬಾರಿ ಬಂದಿದ್ದನು? 2ನೇ ಕೊರಿಂಥದವರಿಗೆ ಪತ್ರಿಕೆಯು ಬರೆಯಲ್ಪಡುವ ವೇಳೆಗೆ ಪೌಲನು ಈಗಾಗಲೇ ಎರಡು ಬಾರಿ ಅವರ ಬಳಿಗೆ ಬಂದಿದ್ದನು.
13:3 v2d0 ಕೊರಿಂಥದಲ್ಲಿ ಪಾಪಮಾಡಿದ ದೇವಜನರಿಗೆ ಮತ್ತು ಮಿಕ್ಕಾದವರೆಲ್ಲರಿಗೆ ಅವನು ಮತ್ತೆ ಬಂದರೆ, ಅವನು ಅವರನ್ನು ಬಿಡುವುದಿಲ್ಲವೆಂದು ಪೌಲನು ಏಕೆ ಹೇಳಿದನು? ಕೊರಿಂಥದ ದೇವಜನರು ಪೌಲನ ಮುಖಾಂತರ ಕ್ರಿಸ್ತನು ಮಾತನಾಡುತ್ತಿದ್ದಾನೆಂಬುವುದಕ್ಕೆ ಸಾಕ್ಷಿಯನ್ನು ಹುಡುಕುತ್ತಿದ್ದರು ಆದ್ದರಿಂದ ಪೌಲನು ಈ ಮಾತನ್ನು ಹೇಳಿದನು.
13:5 oyi5 ಪೌಲನು ಕೊರಿಂಥದ ದೇವಜನರಿಗೆ ಯಾವ ವಿಷಯದಲ್ಲಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಹೇಳಿದನು? ಅವರು ನಂಬಿಕೆಯಲ್ಲಿ ಇದ್ದಾರೋ ಇಲ್ಲವೋ ಎಂದು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಪೌಲನು ಅವರಿಗೆ ಹೇಳಿದನು.
13:6 tpme ಪೌಲನ ಮತ್ತು ಅವನ ಸಂಗಡಿಗರ ಬಗ್ಗೆ ಕೊರಿಂಥದ ದೇವಜನರು ಏನನ್ನು ಕಂಡುಕೊಳ್ಳುತ್ತಾರೆಂದು ಪೌಲನಿಗೆ ಭರವಸೆ ಇದ್ದಿತು? ಕೊರಿಂಥದ ದೇವಜನರು ಅವರನ್ನು ಅನುಮೋದಿಸಲ್ಪಡದವರಲ್ಲ, ಆದರೆ ದೇವರಿಂದ ಅನುಮೋದಿತರೆಂದು ಕಂಡುಕೊಳ್ಳುವರು ಎಂಬ ಭರವಸೆ ಪೌಲನಿಗೆ ಇತ್ತು.
13:8 x6m8 ಪೌಲನು ಮತ್ತು ಅವನ ಸಂಗಡಿಗರು ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದನು? ಸತ್ಯಕ್ಕೆ ವಿರುದ್ದವಾಗಿ ಅವರು ಏನನ್ನೂ ಮಾಡಲಾರರು ಎಂದು ಪೌಲನು ಹೇಳಿದನು.
13:10 m3b8 ಪೌಲನು ಕೊರಿಂಥದ ದೇವಜನರಿಂದ ದೂರವಿದ್ದ ವೇಳೆಯಲ್ಲಿ ಈ ವಿಷಯಗಳನು ಯಾಕೆ ಬರೆದನು? ಅವನು ಅವರ ಸಂಗಡ ಇದ್ದಾಗ ಅವರೊಂದಿಗೆ ಕಠಿಣವಾಗಿ ವರ್ತಿಸಬಾರದೆಂದು ಪೌಲನು ಹೀಗೆ ಮಾಡಿದನು.
13:10 qgbu ಪೌಲನು ಕೊರಿಂಥದ ದೇವಜನರ ವಿಷಯದಲ್ಲಿ ಕರ್ತನಿಂದ ಅವನಿಗೆ ಕೊಡಲ್ಪಟ್ಟ ಅಧಿಕಾರವನ್ನು ಹೇಗೆ ಉಪಯೋಗಿಸಲು ಬಯಸಿದನು? ಪೌಲನು ಕೊರಿಂಥದ ದೇವಜನರನ್ನು ಕಟ್ಟುವುದಕ್ಕಾಗಿ ತನ್ನ ಅಧಿಕಾರವನ್ನು ಉಪಯೋಗಿಸಲು ಬಯಸಿದ್ದಾನೇ ಹೊರತು ಅವರನ್ನು ಕೆಡವಿಹಾಕವುದಕ್ಕಾಗಿ ಅಲ್ಲ.
13:11-12 qz8o ಕೊನೆಯದಾಗಿ, ಪೌಲನು ಕೊರಿಂಥದವರಿಗೆ ಏನು ಮಾಡಬೇಕೆಂದು ಬಯಸಿದನು? ಅವರು ಸಂತೋಷಪಡಬೇಕು, ಪುನ:ಸ್ಥಾಪನೆಗಾಗಿ ಕೆಲಸ ಮಾಡಬೇಕು, ಪರಸ್ಪರ ಒಬ್ಬರೊಂದಿಗೊಬ್ಬರು ಸಮ್ಮತಿಯುಳ್ಳವರಾಗಿರಬೇಕು, ಶಾಂತಿಯಿಂದ ಬದುಕಬೇಕು, ಮತ್ತು ಒಬ್ಬರಿಗೊಬ್ಬರು ಪರಿಶುದ್ದವಾದ ಮುದ್ದಿಟ್ಟು ವಂದಿಸಬೇಕೆಂದು ಪೌಲನು ಬಯಸಿದನು.
13:14 jbtv ಕೊರಿಂಥದ ಎಲ್ಲಾ ದೇವಜನರೊಂದಿಗೆ ಏನು ಇರಬೇಕೆಂದು ಪೌಲನು ಬಯಸಿದನು? ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಸಹವಾಸವೂ ಅವರೆಲ್ಲರೊಂದಿಗೆ ಇರಬೇಕೆಂದು ಪೌಲನು ಬಯಸಿದನು.