\ip ರೋಮಾಪುರದ ಸೆರೆಮನೆಯಿಂದ ಪೌಲನು ಬಿಡುಗಡೆಯಾದ ನಂತರ ಮತ್ತು ನಾಲ್ಕನೇ ಮಿಷನರಿ ಪ್ರಯಾಣದಲ್ಲಿ ಅವನು 1 ತಿಮೊಥೆಯನ ಪತ್ರಿಕೆಯನ್ನು ಬರೆದ ನಂತರ, ಮತ್ತೆ ಪೌಲನನ್ನು ನೀರೋ ಚಕ್ರವರ್ತಿಯ ಆಳ್ವಿಕೆಯಡಿಯಲ್ಲಿ ಸೆರೆಮನೆಗೆ ಹಾಕಲಾಯಿತು. ಈ ಸಮಯದಲ್ಲಿ ಅವನು 2 ತಿಮೊಥೆಯನ ಪತ್ರಿಕೆಯನ್ನು ಬರೆದನು. ಅವನು ಮೊದಲ ಬಾರಿ ಸೆರೆಮನೆಯಲ್ಲಿದ್ದಾಗ, ಅವನು ‘ಬಾಡಿಗೆ ಮನೆ’ ಯಲ್ಲಿ (ಅ.ಪೊ. 28:30) ವಾಸವಾಗಿದ್ದ ಸ್ಥಿತಿಗೂ ಇದಕ್ಕೂ ವ್ಯತ್ಯಾಸವಿದೆ, ಈಗ ಅವನು ಸಾಮಾನ್ಯ ಅಪರಾಧಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿ (1:16; 2:9), ಶೀತಲ ಕಾರಾಗೃಹದಲ್ಲಿ ಬಳಲುತ್ತಿದ್ದಾನೆ (4:13). ತನ್ನ ಕೆಲಸವು ಮುಗಿದಿದೆ ಮತ್ತು ತನ್ನ ಜೀವನದ ಅಂತ್ಯವು ಸಮೀಪವಾಗಿದೆ ಎಂದು ಪೌಲನಿಗೆ ತಿಳಿದಿತ್ತು (4: 6-8).
\is ಬರೆದ ದಿನಾಂಕ ಮತ್ತು ಸ್ಥಳ
\ip ಸರಿಸುಮಾರು ಕ್ರಿ.ಶ. 66-67 ರ ನಡುವೆ ಬರೆಯಲ್ಪಟ್ಟಿದೆ.
\ip ಪೌಲನು ರೋಮಾಪುರದಲ್ಲಿ ತನ್ನ ಎರಡನೆಯ ಸೆರೆವಾಸದಲ್ಲಿದ್ದುಕೊಂಡು, ತನ್ನ ರಕ್ತಸಾಕ್ಷಿಯ ಮರಣಕ್ಕಾಗಿ ಕಾಯುತ್ತಿರುವಾಗ ಅವನು ಈ ಪತ್ರಿಕೆಯನ್ನು ಬರೆದನು.
\is ಸ್ವೀಕೃತದಾರರು
\ip ತಿಮೊಥೆಯು ಎರಡನೆಯ ತಿಮೊಥೆಯನ ಪತ್ರಿಕೆಯ ಪ್ರಾಥಮಿಕ ಓದುಗನಾಗಿದ್ದಾನೆ, ಆದರೆ ಖಂಡಿತವಾಗಿ ಅವನು ಸಭೆಯೊಂದಿಗೆ ಇದರ ವಿಷಯವನ್ನು ಹಂಚಿಕೊಂಡನು.
\is ಉದ್ದೇಶ
\ip ತಿಮೊಥೆಯನಿಗೆ ಅಂತಿಮ ಪ್ರೋತ್ಸಾಹವನ್ನು ನೀಡಲು ಮತ್ತು ಪೌಲನು ಅವನಿಗೆ ವಹಿಸಿಕೊಟ್ಟ ಕಾರ್ಯಭಾರವನ್ನು ಧೈರ್ಯದಿಂದ (1:3-14), ಶ್ರದ್ಧೆಯಿಂದ (2:1-26), ಮತ್ತು ನಿಷ್ಠೆಯಿಂದ (3:14-17; 4:1-8) ಮುಂದುವರಿಸುವಂತೆ ಪ್ರೇರೇಪಿಸಲು ಬರೆದನು.
\is ಮುಖ್ಯಾಂಶ
\ip ನಂಬಿಗಸ್ತವಾದ ಸೇವೆಗಾಗಿ ನಿಯೋಗ
\iot ಪರಿವಿಡಿ
\io1 1. ಸೇವೆಗೆ ಪ್ರೇರಣೆ — 1:1-18
\io1 2. ಸೇವೆಯಲ್ಲಿರಬೇಕಾದ ಮಾದರಿ — 2:1-26
\io1 3. ಸುಳ್ಳು ಬೋಧನೆಯ ವಿರುದ್ಧ ಎಚ್ಚರಿಕೆ — 3:1-17
\io1 4. ಪ್ರೋತ್ಸಾಹದ ಮಾತುಗಳು ಮತ್ತು ಆಶೀರ್ವಾದಗಳು — 4:1-22
\v 3 \f + \fr 1:3 \ft ರೋಮಾ. 1:9\f*ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ \f + \fr 1:3 \ft ಅ. ಕೃ. 22:3; 24:14\f*ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. \f + \fr 1:3 \ft 1 ತಿಮೊ. 3:9; ಅ. ಕೃ. 23:1\f*ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ \f + \fr 1:3 \ft ರೋಮಾ. 1:8\f*ಸ್ತೋತ್ರಸಲ್ಲಿಸುತ್ತೇನೆ.
\v 4 ನಾನು \f + \fr 1:4 \ft ಅ. ಕೃ. 20:37\f*ನಿನ್ನ ಕಣ್ಣೀರನ್ನು ನೆನಪಿಗೆ ತಂದು \f + \fr 1:4 \ft ಫಿಲಿ. 1:8\f*ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.
\v 5 ನಿನ್ನಲ್ಲಿರುವ \f + \fr 1:5 \ft 1 ತಿಮೊ. 1:5 \f*ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ \f + \fr 1:5 \ft ಅ. ಕೃ. 16:1; 1 ತಿಮೊ. 3:15\f*ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
\p
\v 6 ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ \f + \fr 1:6 \ft 1 ತಿಮೊ. 4:14, 1 ಥೆಸ. 5:19\f*ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ.
\v 17 ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ \f + \fr 2:17 \ft 1 ತಿಮೊ. 1:20\f*ಹುಮೆನಾಯನೂ ಪಿಲೇತನೂ ಇದ್ದಾರೆ.
\v 18 ಅವರು ಸತ್ಯಭ್ರಷ್ಟರಾಗಿ \f + \fr 2:18 \ft 1 ಕೊರಿ 15:12\f*ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.
\v 19 ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ \f + \fr 2:19 \ft ಅರಣ್ಯ 16:5; ನಹೂ. 1:7; ಯೋಹಾ 10:14, 27; 1 ಕೊರಿ 8:3\f*“ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.
\p
\v 20 \f + \fr 2:20 \ft 1 ತಿಮೊ. 3:15\f*ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ \f + \fr 2:20 \ft ರೋಮಾ. 9:21\f*ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.
\v 21 \f + \fr 2:21 \ft ಜ್ಞಾ. 25:4; ಯೆಶಾ 52:11\f*ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, \f + \fr 2:21 \ft 2 ತಿಮೊ. 3:17; ತೀತ 3:1\f*ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.
\p
\v 22 ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
\v 23 \f + \fr 2:23 \ft 1 ತಿಮೊ. 6:4\f*ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
\v 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.
\v 6 ಅವರಲ್ಲಿ ಕೆಲವರು \f + \fr 3:6 \ft ತೀತ 1:11\f*ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ.
\v 7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ \f + \fr 3:7 \ft 1 ತಿಮೊ 2:4\f*ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.
\v 8 \f + \fr 3:8 \ft ವಿಮೋ 7:11\f*ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ.
\v 9 ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. \f + \fr 3:9 \ft ವಿಮೋ 7:12; 8:18; 9:11\f*ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
\p
\v 10 \f + \fr 3:10 \ft ಫಿಲಿ 2:22\f*ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,
\v 2 ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ \f + \fr 4:2 \ft 1 ತಿಮೊ 5:20; ತೀತ 1:13; 2:15\f*ಖಂಡಿಸು, ಗದರಿಸು, ಎಚ್ಚರಿಸು.
\v 3 ಯಾಕೆಂದರೆ ಜನರು \f + \fr 4:3 \ft 1 ತಿಮೊ 1:10\f*ಸ್ವಸ್ಥಬೋಧನೆಯನ್ನು ಒಪ್ಪಲಾರದ \f + \fr 4:3 \ft 2 ತಿಮೊ 3:1\f*ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
\v 4 ಅವರು ಸತ್ಯ ಬೋಧನೆಗೆ ಕಿವಿಗೊಡದೆ \f + \fr 4:4 \ft 1 ತಿಮೊ 1:4,6\f*ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
\v 5 ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ \f + \fr 4:5 \ft 1 ಪೇತ್ರ 1:13\f*ಸ್ವಸ್ಥಚಿತ್ತನಾಗಿರು, \f + \fr 4:5 \ft 2 ತಿಮೊ 1:8; 2:3; 9\f*ಹಿಂಸೆಯನ್ನು ತಾಳಿಕೋ, \f + \fr 4:5 \ft ಅ. ಕೃ 21:8; ಎಫೆ 4:11\f*ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
\v 6 ಯಾಕೆಂದರೆ ನಾನಂತೂ \f + \fr 4:6 \ft ಫಿಲಿ 2:17\f*ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. \f + \fr 4:6 \ft ಫಿಲಿ 1:23\f*ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
\v 11 \f + \fr 4:11 \ft 1 ತಿಮೊ 1:15\f*ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. \f + \fr 4:11 \ft ಅ. ಕೃ 12:12\f*ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
\v 12-13 \f + \fr 4:12-13 \ft ಅ. ಕೃ 20:4; ಎಫೆ 6:21; ಕೊಲೊ 4:7; ತೀತ 3:12\f*ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
\p
\v 14 \f + \fr 4:14 \ft 1 ತಿಮೊ 1:20\f*ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. \f + \fr 4:14 \ft ಕೀರ್ತ 62:12; ಜ್ಞಾ 24:12\f*ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
\v 15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
\v 16 ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. \f + \fr 4:16 \ft ಅ. ಕೃ 7:60 \f*ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
\v 17 \f + \fr 4:17 \ft ಅ. ಕೃ 23:11; 27:23; ಮತ್ತಾ 10:19\f*ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, \f + \fr 4:17 \ft ಅ. ಕೃ 9:15\f*ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು \f + \fr 4:17 \ft 1 ಪೇತ್ರ 5:8; ಕೀರ್ತ 22:21\f*ಸಿಂಹದ ಬಾಯೊಳಗಿಂದ ತಪ್ಪಿಸಿದನು.
\v 18 \f + \fr 4:18 \ft ಮತ್ತಾ 6:13\f*ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. \f + \fr 4:18 \ft ರೋಮಾ 11:36\f*ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.