kn_ulb/66-JUD.usfm

282 lines
14 KiB
Plaintext

\id JUD
\ide UTF-8
\sts JUD, Free Bible Kannada
\h ಯೂದನು ಬರೆದ ಪತ್ರಿಕೆ
\toc1 ಯೂದನು ಬರೆದ ಪತ್ರಿಕೆ
\toc2 ಯೂದನು ಬರೆದ ಪತ್ರಿಕೆ
\toc3 jud
\mt1 ಯೂದನು ಬರೆದ ಪತ್ರಿಕೆ
\s5
\c 1
\s1 ಪೀಠಿಕೆ
\p
\v 1 ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ
\f +
\fr 1:1
\ft 1 ಥೆಸ. 1:4; 2 ಥೆಸ. 2:13:
\f* ದೇವರಲ್ಲಿ ಪ್ರಿಯರಾದವರಿಗೆ,
\f +
\fr 1:1
\ft ಯೋಹಾ. 17:11, 15; 1 ಥೆಸ. 5:23:
\f* ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,
\v 2 ನಿಮಗೆ
\f +
\fr 1:2
\ft 2 ಯೋಹಾ. 3:
\f* ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.
\s1 ದುರ್ಬೋಧಕರು
\s5
\p
\v 3 ಪ್ರಿಯರೇ,
\f +
\fr 1:3
\ft ತೀತ. 1:4:
\f* ನಮಗೆ
\f +
\fr 1:3
\ft ಅಥವಾ, ಹಂಚಿಕೊಳ್ಳುವ.
\f* ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು
\f +
\fr 1:3
\ft 1 ತಿಮೊ. 6:12; 2 ತಿಮೊ. 4:7; ಲೂಕ. 13:24; 1 ಕೊರಿ. 9:25; ಫಿಲಿ. 1:27:
\f* ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
\v 4 ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು
\f +
\fr 1:4
\ft ತೀತ. 1:16; 2 ಪೇತ್ರ. 2:1; 1 ಯೋಹಾ. 2:22:
\f* ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ.
\f +
\fr 1:4
\ft 1 ಪೇತ್ರ. 2:8:
\f* ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.
\s5
\p
\v 5 ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು
\f +
\fr 1:5
\ft 2 ಪೇತ್ರ. 1:12:
\f* ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತದೇಶದೊಳಗಿಂದ ರಕ್ಷಿಸಿದರೂ, ತರುವಾಯ
\f +
\fr 1:5
\ft ಅರಣ್ಯ. 14:29, 37; 26:64, 65; ಕೀರ್ತ. 106:26; ಇಬ್ರಿ. 3:17-19:
\f* ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.
\v 6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ
\f +
\fr 1:6
\ft 2 ಪೇತ್ರ. 2:4. ಪ್ರಕ. 20:2:
\f* ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ.
\s5
\v 7
\f +
\fr 1:7
\ft ಆದಿ. 19:24:
\f* ಸೊದೋಮ್ ಗೊಮೋರ ಪಟ್ಟಣಗಳವರೂ,
\f +
\fr 1:7
\ft ಆದಿ. 10:19; 14:2, 8; ಧರ್ಮೋ. 29:23; ಹೋಶೇ. 11:8:
\f* ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು,
\f +
\fr 1:7
\ft 2 ಪೇತ್ರ. 2:10. ಸಲಿಂಗಕಾಮಿಗಳಾಗಿದ್ದರು.
\f* ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ.
\v 8 ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.
\s5
\v 9 ಆದರೂ
\f +
\fr 1:9
\ft 1 ಥೆಸ. 4:16:
\f* ಪ್ರಧಾನ ದೇವದೂತನಾದ
\f +
\fr 1:9
\ft ದಾನಿ. 10:13; 12:1; ಪ್ರಕ. 12:7:
\f* ಮೀಕಾಯೇಲನು
\f +
\fr 1:9
\ft ಧರ್ಮೋ. 34:6:
\f* ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ,
\f +
\fr 1:9
\ft 2 ಪೇತ್ರ. 2:11:
\f* ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನ್ನಾಡದೆ,
\f +
\fr 1:9
\ft ಜೆಕ. 3:2:
\f* <<ಕರ್ತನು ನಿನ್ನನ್ನು ಗದರಿಸಲಿ>> ಎಂದನು.
\v 10 ಆದರೆ ಈ ಜನರು
\f +
\fr 1:10
\ft 2 ಪೇತ್ರ. 2:12:
\f* ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
\v 11 ಅವರ ಗತಿಯನ್ನು ಏನೆಂದು ಹೇಳಲಿ? ಇವರು
\f +
\fr 1:11
\ft ಆದಿ. 4:5-8:
\f* ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ
\f +
\fr 1:11
\ft ಅರಣ್ಯ. 31:15, 16; 2 ಪೇತ್ರ. 2:15:
\f* ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ,
\f +
\fr 1:11
\ft ಅರಣ್ಯ. 16:1-35:
\f* ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.
\s5
\v 12 ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು,
\f +
\fr 1:12
\ft ಅಥವಾ, ಕಳಂಕಕ್ಕೆ ಕಾರಣರಾಗಿದ್ದು.
\f* ನಿಮ್ಮ
\f +
\fr 1:12
\ft 2 ಪೇತ್ರ. 2:13:
\f* ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ.
\f +
\fr 1:12
\ft ಯೆಹೆ. 34:2, 8, 10:
\f* ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು
\f +
\fr 1:12
\ft ಎಫೆ. 4:14; ಇಬ್ರಿ. 13:9:
\f* ಗಾಳಿಯಿಂದ ಬಡಿಸಿಕೊಂಡು ಹೋಗುವ
\f +
\fr 1:12
\ft 2 ಪೇತ್ರ. 2:17:
\f* ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ,
\f +
\fr 1:12
\ft ಎರಡು ಸಾರಿ ಸತ್ತ.
\f* ಸಂಪೂರ್ಣವಾಗಿ ಸತ್ತ,
\f +
\fr 1:12
\ft ಮತ್ತಾ 15:13:
\f* ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.
\v 13
\f +
\fr 1:13
\ft ಫಿಲಿ. 3:19:
\f* ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ
\f +
\fr 1:13
\ft ಯೆಶಾ. 57:20:
\f* ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ
\f +
\fr 1:13
\ft 2 ಪೇತ್ರ. 2:17:
\f* ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ.
\s5
\p
\v 14 ಇಂಥವರ ವಿಷಯದಲ್ಲೇ
\f +
\fr 1:14
\ft ಆದಿ. 5:18:
\f* ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ,
\f +
\fr 1:14
\ft ಧರ್ಮೋ. 33:2; ದಾನಿ. 7:10; ಜೆಕ. 14:5; ಮಾರ್ಕ. 8:38; 1 ಥೆಸ. 3:13; 2 ಥೆಸ. 1:7:
\f* <<ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,
\v 15
\f +
\fr 1:15
\ft 2 ಪೇತ್ರ. 2:5:
\f* ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು>> ಎಂಬುದಾಗಿ ಪ್ರವಾದಿಸಿದನು.
\p
\v 16 ಇವರು ಗೊಣಗುಟ್ಟುವವರೂ, ದೂರು ಹೇಳುವವರೂ,
\f +
\fr 1:16
\ft 2 ಪೇತ್ರ. 2:10:
\f* ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ,
\f +
\fr 1:16
\ft 2 ಪೇತ್ರ. 2:18:
\f* ಬಂಡಾಯಿಕೊಚ್ಚಿಕೊಳ್ಳುವವರು,
\f +
\fr 1:16
\ft ಯಾಜ. 19:5; ಧರ್ಮೋ. 10:17:
\f* ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.
\s ಎಚ್ಚರಿಕೆಗಳೂ ಪ್ರಬೋಧನೆಗಳೂ
\s5
\p
\v 17 ಪ್ರಿಯರೇ,
\f +
\fr 1:17
\ft 2 ಪೇತ್ರ. 3:2:
\f* ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
\v 18
\f +
\fr 1:18
\ft 2 ಪೇತ್ರ. 3:3:
\f* <<ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು>> ಅವರು ನಿಮಗೆ ಹೇಳಿದರು.
\v 19 ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ,
\f +
\fr 1:19
\ft 1 ಕೊರಿ. 2:14:
\f* ಪ್ರಾಕೃತ ಮನುಷ್ಯರೂ,
\f +
\fr 1:19
\ft ರೋಮಾ. 8:9; ಫಿಲಿ. 3:3:
\f* ದೇವರಾತ್ಮ ಇಲ್ಲದವರೂ ಆಗಿದ್ದಾರೆ.
\s5
\v 20 ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ
\f +
\fr 1:20
\ft ಕೊಲೊ. 2:7:
\f* ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ,
\f +
\fr 1:20
\ft ಎಫೆ. 6:18; ರೋಮಾ. 8:26:
\f* ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ.
\v 21
\f +
\fr 1:21
\ft ತೀತ. 2:13; 2 ಪೇತ್ರ. 3:12:
\f* ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ,
\f +
\fr 1:21
\ft 2 ಕೊರಿ. 13:14; ಅ. ಕೃ. 13:43
\f* ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.
\s5
\v 22 ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ,
\v 23
\f +
\fr 1:23
\ft ಆಮೋ. 4:1; ಜೆಕ. 3:2:
\f* ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು
\f +
\fr 1:23
\ft 2 ಕೊರಿ. 5:11:
\f* ಭಯಪಡುತ್ತಾ ಕರುಣಿಸಿರಿ.
\f +
\fr 1:23
\ft ಪ್ರಕ. 3:4; ಜೆಕ. 3:4:
\f* ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.
\s ಅಂತ್ಯಾಶೀರ್ವಾದ
\s5
\p
\v 24 ಮುಗ್ಗರಿಸದಂತೆ
\f +
\fr 1:24
\ft ಯೋಹಾ. 17:12:
\f* ನಿಮ್ಮನ್ನು ಕಾಪಾಡಿಕೊಳ್ಳುತ್ತಾ,
\f +
\fr 1:24
\ft ಕೊಲೊ. 1:22; 1 ಪೇತ್ರ. 4:13:
\f* ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು
\f +
\fr 1:24
\ft ಎಫೆ. 1:4; 5:27; ಫಿಲಿ. 2, 15; ಪ್ರಕ. 14:5:
\f* ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ
\f +
\fr 1:24
\ft ರೋಮಾ. 16:25; ಎಫೆ. 3:20:
\f* ಶಕ್ತನಾಗಿರುವ,
\v 25 ನಮ್ಮ ರಕ್ಷಕನಾದ
\f +
\fr 1:25
\ft ಯೋಹಾ 5:44; 1 ತಿಮೊ. 1:17:
\f* ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ,
\f +
\fr 1:25
\ft ರೋಮಾ. 11:36:
\f* ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.