kn_ulb/18-JOB.usfm

3863 lines
268 KiB
Plaintext

\id JOB - Kannada Unlocked Literal Bible
\ide UTF-8
\rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License
\h ಯೋಬನು
\toc1 ಯೋಬನು
\toc2 ಯೋಬನು
\toc3 job
\mt1 ಯೋಬನು
\is ಗ್ರಂಥಕರ್ತೃತ್ವ
\ip ಯೋಬನ ಪುಸ್ತಕವನ್ನು ಬರೆದವರು ಯಾರೆಂದು ನಿಜವಾಗಿಯೂ ಯಾರಿಗೂ ತಿಳಿದಿರುವುದಿಲ್ಲ. ಯಾವ ಗ್ರಂಥಕರ್ತನನ್ನೂ ಗುರುತಿಸಲಾಗಿಲ್ಲ. ಬಹುಶಃ ಒಬ್ಬನಿಗಿಂತ ಹೆಚ್ಚು ಗ್ರಂಥಕರ್ತರು ಇರುವ ಸಾಧ್ಯತೆಗಳಿವೆ. ಸತ್ಯವೇದದ ಎಲ್ಲಾ ಪುಸ್ತಕಗಳಿಗಿಂತ ಯೋಬನು ಅತ್ಯಂತ ಹಳೆಯ ಪುಸ್ತಕವಾಗಿರುವ ಸಾಧ್ಯತೆಯಿದೆ. ಯೋಬನು ಅಸಹನೀಯ ದುರಂತಗಳನ್ನು ಅನುಭವಿಸಿದ ಒಳ್ಳೆಯ ಮತ್ತು ಭಕ್ತಿವಂತನಾದ ವ್ಯಕ್ತಿಯಾಗಿದ್ದನು ಮತ್ತು ಅಂತಹ ವಿಪತ್ತುಗಳು ಅವನಿಗೆ ಏಕೆ ಸಂಭವಿಸಿದ್ದವು ಎಂದು ಅವನು ಮತ್ತು ಅವನ ಸ್ನೇಹಿತರು ತಿಳಿದುಕೊಳ್ಳಲು ಪ್ರಯತ್ನಿಸಿದರು. ಈ ಪುಸ್ತಕದ ಪ್ರಮುಖ ವ್ಯಕ್ತಿಗಳಲ್ಲಿ ಯೋಬನು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಮತ್ತು ಬೂಜಿನವನಾದ ಎಲೀಹು ಸೇರಿದ್ದಾರೆ.
\is ಬರೆದ ದಿನಾಂಕ ಮತ್ತು ಸ್ಥಳ
\ip ಗೊತ್ತಿಲ್ಲ.
\ip ಇದು ಬಹಳಷ್ಟು ಕಾಲವಾದ ಮೇಲೆ ಬರೆಯಲ್ಪಟ್ಟಿತು ಎಂಬ ಲಕ್ಷಣಗಳನ್ನು ಈ ಪುಸ್ತಕದ ಬಹುತೇಕ ಭಾಗವು ತೋರಿಸುತ್ತದೆ, ಇದು ಸೆರೆವಾಸದ ಅಥವಾ ಅದಾದ ಸ್ವಲ್ಪಕಾಲದ ನಂತರದ ಸಮಯದಲ್ಲಿ ಬರೆಯಲ್ಪಟ್ಟಿರಬಹುದು ಮತ್ತು ಎಲೀಹುವಿನ ಅಧ್ಯಾಯಗಳು ಇದಾಗಿ ಇನ್ನೂ ಹೆಚ್ಚು ಕಾಲವಾದ ಮೇಲೆ ಬರೆಯಲ್ಪಟ್ಟಿರಬಹುದು.
\is ಸ್ವೀಕೃತದಾರ
\ip ಪ್ರಾಚೀನ ಯೆಹೂದ್ಯರು ಮತ್ತು ಸತ್ಯವೇದದ ಭವಿಷ್ಯದ ಓದುಗಾರರೆಲ್ಲರು. ಯೋಬನ ಪುಸ್ತಕದ ಮೂಲ ಪ್ರೇಕ್ಷಕರು ದಾಸರಾಗಿದ್ದ ಇಸ್ರಾಯೇಲ್ಯರ ಮಕ್ಕಳು ಎಂದು ಸಹ ನಂಬಲಾಗಿದೆ, ಐಗುಪ್ತದವರ ಅಧೀನತೆಯಲ್ಲಿ ಕಷ್ಟವನ್ನುಭವಿಸಿದಂತಹ ಅವರಿಗೆ ಕೊಂಚ ಸಾಂತ್ವನ ನೀಡಲು ಮೋಶೆಯು ಉದ್ದೇಶಿಸಿದ್ದನ್ನು ಎಂದು ನಂಬಲಾಗಿದೆ.
\is ಉದ್ದೇಶ
\ip ಯೋಬನ ಪುಸ್ತಕವು ಈ ಕೆಳಗಿನವುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ: ಸೈತಾನನು ಆರ್ಥಿಕ ಮತ್ತು ದೈಹಿಕ ವಿನಾಶವನ್ನು ತರಲು ಸಾಧ್ಯವಿಲ್ಲ, ಸೈತಾನನು ಮಾಡಬಹುದಾದ ಮತ್ತು ಮಾಡಲಾಗದವುಗಳ ಮೇಲೆ ದೇವರು ಅಧಿಕಾರವುಳ್ಳವನಾಗಿದ್ದಾನೆ. ಲೋಕದ ಎಲ್ಲ ಸಂಕಷ್ಟಗಳ ಹಿಂದಿರುವ "ಯಾಕೆ" ಎಂಬ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಮಾನವ ಸಾಮರ್ಥ್ಯಕ್ಕೆ ಮೀಗಿಲಾದುದು ಆಗಿದೆ. ದುಷ್ಟರು ತಮ್ಮ ತಕ್ಕ ಪ್ರತಿಫಲವನ್ನು ಹೊಂದಿಕೊಳ್ಳುತ್ತಾರೆ. ಶುದ್ಧೀಕರಿಸಲು, ಪರೀಕ್ಷಿಸಲು, ಕಲಿಸಲು ಅಥವಾ ಆತ್ಮವನ್ನು ಬಲಪಡಿಸಲು ನಮ್ಮ ಜೀವನದಲ್ಲಿ ಕೆಲವೊಮ್ಮೆ ಸಂಕಷ್ಟಗಳು ಅನುಮತಿಸಲ್ಪಡಬಹುದು.
\is ಮುಖ್ಯಾಂಶ
\ip ಕಷ್ಟಗಳ ಮೂಲಕ ಆಶೀರ್ವಾದಗಳು
\iot ಪರಿವಿಡಿ
\io1 1. ಪೀಠಿಕೆ ಮತ್ತು ಸೈತಾನನ ಆಕ್ರಮಣ (1:1—2:13)
\io1 2. ತನ್ನ ಕಷ್ಟವನ್ನು ಕುರಿತು ಮೂವರು ಸ್ನೇಹಿತರ ಜೊತೆ ಯೋಬನ ಚರ್ಚೆ (3:1—31:40)
\io1 3. ಎಲೀಹು ದೇವರ ಒಳ್ಳೆಯತನವನ್ನು ಘೋಷಿಸಿದ್ದು (32:1—37:24)
\io1 4. ದೇವರು ಯೋಬನಿಗೆ ಸಾರ್ವಭೌಮತ್ವವನ್ನು ಪ್ರಕಟಿಸಿದ್ದು (38:1—41:34)
\io1 5. ದೇವರು ಯೋಬನನ್ನು ಪುನಃಸ್ಥಾಪಿಸಿದ್ದು (42:1-17)
\s5
\c 1
\s ಯೋಬನು ಮತ್ತು ಅವನ ಕುಟುಂಬ
\p
\v 1 ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು.
\v 2 ಅವನಿಗೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳೂ ಇದ್ದರು.
\v 3 ಅವನಿಗೆ ಏಳು ಸಾವಿರ ಕುರಿಗಳೂ, ಮೂರು ಸಾವಿರ ಒಂಟೆಗಳೂ, ಐನೂರು ಜೋಡಿ ಎತ್ತುಗಳೂ, ಐನೂರು ಹೆಣ್ಣು ಕತ್ತೆಗಳೂ, ಬಹುಮಂದಿ ಸೇವಕರೂ ಇದ್ದುದರಿಂದ ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವತ್ತುಳ್ಳವನಾಗಿದ್ದನು.
\s5
\p
\v 4 ಅವನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ನಡೆಸುತ್ತಾ ಆ ಭೋಜನಕ್ಕೆ ತಮ್ಮ ಮೂವರು ಅಕ್ಕತಂಗಿಯರನ್ನೂ ಕರೆಕಳುಹಿಸುತ್ತಿದ್ದರು.
\v 5 ಔತಣದ ಸರದಿ ತೀರಿದ ನಂತರ ಯೋಬನು, <<ನನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು>> ಎಂದು ಅವರನ್ನು ಕರೆಯಿಸಿ ಶುದ್ಧಿಪಡಿಸಿ, ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುವುದು ದೈನಂದಿನ ಕ್ರಮವಾಗಿತ್ತು.
\s ಯೋಬನ ಮೊದಲನೆಯ ಪರೀಕ್ಷೆ
\s5
\p
\v 6 ಒಂದು ದಿನ ದೇವದೂತರು
\f +
\fr 1:6
\fq ದೇವದೂತರು
\ft ಅಥವಾ ದೇವರ ಮಕ್ಕಳು.
\f* ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು.
\v 7 ಯೆಹೋವನು ಸೈತಾನನನ್ನು, <<ಎಲ್ಲಿಂದ ಬಂದೆ?>> ಎಂದು ಕೇಳಲು ಸೈತಾನನು ಯೆಹೋವನಿಗೆ, <<ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು>> ಎಂದು ಹೇಳಿದನು.
\v 8 ಆಗ ಯೆಹೋವನು, <<ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ>> ಎಂದು ಸೈತಾನನಿಗೆ ಹೇಳಿದನು.
\s5
\p
\v 9 ಅದಕ್ಕೆ ಸೈತಾನನು, <<ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?
\v 10 ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.
\v 11 ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?>> ಎಂದನು.
\v 12 ಯೆಹೋವನು ಸೈತಾನನಿಗೆ, <<ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ>> ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.
\s5
\p
\v 13 ಇದಾದ ಬಳಿಕ ಒಂದು ದಿನ ಯೋಬನ ಗಂಡು ಹೆಣ್ಣು ಮಕ್ಕಳು ಹಿರಿಯವನ ಮನೆಯಲ್ಲಿ ಔತಣದಲ್ಲಿ ಊಟಮಾಡಿ ಕುಡಿಯುತ್ತಿರುವಾಗ,
\v 14 ಒಬ್ಬ ದೂತನು ಯೋಬನ ಬಳಿಗೆ ಬಂದು, <<ನಿನ್ನ ಎತ್ತುಗಳು ಉಳುತ್ತಾ ಇರುವಾಗ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇದ್ದವು.
\v 15 ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ಈ ಸುದ್ದಿಯನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ>> ಎಂದು ಹೇಳಿದನು.
\s5
\p
\v 16 ಅವನು ಮಾತನಾಡುತ್ತಿರುವಾಗಲೇ ಮತ್ತೊಬ್ಬನು ಬಂದು, <<ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ, ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ>> ಎಂದನು.
\v 17 ಅಷ್ಟರಲ್ಲಿ ಇನ್ನೊಬ್ಬನು ಬಂದು, <<ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ>> ಎಂದನು.
\s5
\p
\v 18 ಅವನು ಇನ್ನು ಮಾತನಾಡುತ್ತಿರುವಾಗಲೆ ಬೇರೊಬ್ಬನು ಬಂದು, <<ನಿನ್ನ ಗಂಡು, ಹೆಣ್ಣು ಮಕ್ಕಳು ತಮ್ಮ ಅಣ್ಣನ ಮನೆಯಲ್ಲಿ ತಿಂದು ಕುಡಿಯುತ್ತಿರುವಾಗ,
\v 19 ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ>> ಎಂದನು.
\s5
\p
\v 20 ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ,
\v 21 <<ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ>> ಎಂದು ಹೇಳಿದನು.
\v 22 ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.
\s5
\c 2
\s ಯೋಬನ ಎರಡನೆಯ ಪರೀಕ್ಷೆ
\p
\v 1 ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು.
\v 2 ಯೆಹೋವನು, <<ಎಲ್ಲಿಂದ ಬಂದೆ?>> ಎಂದು ಸೈತಾನನನ್ನು ಕೇಳಲು ಸೈತಾನನು ಯೆಹೋವನಿಗೆ, <<ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು>> ಎಂದನು.
\s5
\v 3 ಆಗ ಯೆಹೋವನು ಸೈತಾನನಿಗೆ, <<ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ>> ಎಂದನು.
\s5
\v 4 ಯೆಹೋವನ ಆ ಮಾತಿಗೆ ಸೈತಾನನು, <<ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.
\v 5 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ>> ಎಂದನು.
\v 6 ಯೆಹೋವನು ಸೈತಾನನಿಗೆ, <<ನೋಡು, ಅವನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು>> ಎಂದು ಅಪ್ಪಣೆ ಕೊಟ್ಟನು.
\s5
\v 7 ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟು ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು.
\v 8 ಯೋಬನು ಒಂದು ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯಲ್ಲಿ ಕುಳಿತುಕೊಂಡಿದ್ದನು.
\s5
\v 9 ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, <<ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ>> ಎಂದು ಹೇಳಿದಳು.
\v 10 ಆಗ ಯೋಬನು ಆಕೆಗೆ, <<ಮೂರ್ಖಳು ಮಾತನಾಡಿದಂತೆ ನೀನು ಮಾತನಾಡುತ್ತಿ. ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುವಾಗ ಕೆಟ್ಟದ್ದನ್ನು ಹೊಂದಬಾರದೋ?>> ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತು ಅವನ ತುಟಿಗಳಿಂದ ಹೊರಡಲಿಲ್ಲ.
\s ಯೋಬನ ಮೂವರು ಮಿತ್ರರು
\s5
\p
\v 11 ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, <<ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ>> ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.
\s5
\v 12 ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು.
\v 13 ಬಳಿಕ ಅವನಿಗೆ ವಿಪರೀತ ಬಾಧೆ ಎಂದು ತಿಳಿದು ಏಳು ದಿನಗಳವರೆಗೆ ಹಗಲಿರುಳೂ ನೆಲದ ಮೇಲೆ ಅವನೊಂದಿಗೆ ಕುಳಿತುಕೊಂಡರು. ಅವನ ಸಂಗಡ ಒಬ್ಬರೂ ಮಾತನಾಡದೇ ಇದ್ದರು.
\s5
\c 3
\s ಯೋಬನ ಮೊದಲನೆಯ ಸಂಭಾಷಣೆ
\q
\v 1 ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ,
\q
\v 2 ಯೋಬನು ಇಂತೆಂದನು,
\q
\v 3 <<ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, <ಗರ್ಭದಲ್ಲಿ ಪುರುಷಾಂಕುರವಾಯಿತು> ಎಂದು ನುಡಿದ ರಾತ್ರಿಯು ನಾಶವಾಗಲಿ
\s5
\q
\v 4 ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
\q
\v 5 ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ.
\s5
\q
\v 6 ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ.
\q
\v 7 ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.
\s5
\q
\v 8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ.
\q
\v 9 ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ.
\q
\v 10 ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ.
\s5
\q
\v 11 ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ?
\q
\v 12 ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ?
\s5
\q
\v 13 ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು.
\q
\v 14 ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ.
\s5
\q
\v 15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು.
\q
\v 16 ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು.
\s5
\q
\v 17 ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು.
\q
\v 18 ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು.
\q
\v 19 ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
\s5
\q
\v 20 ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ?
\q
\v 21 ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
\q
\v 22 ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ.
\s5
\q
\v 23 ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?
\q
\v 24 ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ.
\s5
\q
\v 25 ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು.
\q
\v 26 ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.>>
\s5
\c 4
\s ಎಲೀಫಜನ ಪ್ರತ್ಯುತ್ತರ
\p
\v 1 ಅದಕ್ಕೆ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಕೊಟ್ಟನು,
\q
\v 2 <<ಒಬ್ಬನು ನಿನ್ನ ಸಂಗಡ ಮಾತನಾಡ ತೊಡಗಿದರೆ ನಿನಗೆ ಬೇಸರಿಕೆ ಉಂಟಾಗುವುದೋ?
\q ಮಾತನಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?
\q
\v 3 ಇಗೋ, ನೀನು ಅನೇಕರನ್ನು ಶಿಕ್ಷಿಸಿ,
\q ಜೋಲು ಬಿದ್ದ ಕೈಗಳನ್ನು ಬಲಗೊಳಿಸಿದ್ದಿ.
\s5
\q
\v 4 ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ,
\q ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದಿ.
\q
\v 5 ಈಗಲಾದರೋ ನಿನಗೆ ಶ್ರಮೆ ಬಂತು, ಆದುದರಿಂದ ನೀನು ಬೇಸರಗೊಂಡಿರುವಿ.
\q ಅದು ನಿನ್ನನ್ನೇ ತಗಲಿರುವ ಕಾರಣ ನಿನಗೆ ಭ್ರಮೆಯುಂಟಾಗಿದೆ.
\q
\v 6 ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ,
\q ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ?
\s5
\q
\v 7 ನೀನೇ ಆಲೋಚನೆಮಾಡು, ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ?
\q ಯಥಾರ್ಥರು ಅಳಿದು ಹೋದದ್ದೆಲ್ಲಿ?
\q
\v 8 ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು,
\q ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು.
\q
\v 9 ದೇವರ ಶ್ವಾಸದಿಂದ ನಾಶವಾಗುತ್ತಾರೆ.
\q ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ.
\s5
\q
\v 10 ಸಿಂಹ ಗರ್ಜನೆಯೂ ಆರ್ಭಟಿಸುವ ಸಿಂಹದ ಧ್ವನಿಯೂ,
\q ಅಡಗಿ ಪ್ರಾಯದ ಸಿಂಹಗಳ ಕೋರೆಗಳು ಮುರಿಯಲ್ಪಡುವವು.
\q
\v 11 ಮೃಗೇಂದ್ರನು ಆಹಾರವಿಲ್ಲದೆ ಸಾಯುವನು.
\q ಸಿಂಹದ ಮರಿಗಳು ಚದರಿಹೋಗುವವು.
\s5
\q
\v 12 ಒಂದು ಸಂಗತಿಯು ನನಗೆ ರಹಸ್ಯವಾಗಿ ತಿಳಿದುಬಂತು.
\q ಅದು ಪಿಸುಮಾತಿನ ಸದ್ದಾಗಿ ನನ್ನ ಕಿವಿಗೆ ಬಿತ್ತು.
\q
\v 13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ,
\q ರಾತ್ರಿಯ ಕನಸುಗಳಿಂದ ಯೋಚನೆಗಳಲ್ಲಿರುವಾಗ
\s5
\q
\v 14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು,
\q ಭಯಂಕರವಾದ ದಿಗಿಲು ಉಂಟಾಯಿತು.
\q
\v 15 ಆಗ ಆತ್ಮವೊಂದು ನನ್ನ ಮುಖದ ಮುಂದೆ ಸುಳಿಯಲು,
\q ಮೈಯೆಲ್ಲಾ ರೋಮಾಂಚನವಾಯಿತು.
\s5
\q
\v 16 ನನ್ನ ಕಣ್ಣ ಮುಂದೆ ಒಂದು ಆತ್ಮವು ಇತ್ತು,
\q ನಿಂತಿದ್ದರೂ ಅದು ಏನೆಂಬುದು ಗೊತ್ತಾಗಲಿಲ್ಲ.
\q ಒಂದು ಸೂಕ್ಷ್ಮ ಧ್ವನಿಯು ಕೇಳಬಂತು.>>
\q
\v 17 ಅದೇನೆಂದರೆ, <<ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ?
\q ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?
\s5
\q
\v 18 ಆಹಾ, ಆತನು ತನ್ನ ಸೇವಕರಲ್ಲಿಯೂ ನಂಬಿಕೆಯನ್ನಿಡುವುದಿಲ್ಲ,
\q ತನ್ನ ದೂತರ ಮೇಲೆ ತಪ್ಪುಹೊರಿಸುತ್ತಾನೆ.
\q
\v 19 ಧೂಳಿನಲ್ಲಿರುವ ಅಸ್ತಿವಾರದ ಮೇಲೆ,
\q ಮಣ್ಣಿನಿಂದಾದ ಶರೀರಗಳೆಂಬ ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪು ಕಂಡುಹಿಡಿಯಬಹುದು.
\q ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ.
\s5
\q
\v 20 ಉದಯಾಸ್ತಮಾನಗಳ ಮಧ್ಯದಲ್ಲಿ (ಜೀವಿಸಿ) ಜಜ್ಜಲ್ಪಡುತ್ತಾರೆ.
\q ಹೀಗೆ ನಿತ್ಯನಾಶ ಹೊಂದುವುದನ್ನು ಯಾರೂ ಲಕ್ಷಿಸುವುದಿಲ್ಲ.
\q
\v 21 ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದಷ್ಟೆ. ಅವರು ಜ್ಞಾನವಿಲ್ಲದವರಾಗಿ ಸಾಯುವರು>> ಎಂಬುದೇ.
\s5
\c 5
\s ಎಲೀಫಜನ ಪ್ರತ್ಯುತ್ತರದ ಮುಂದುವರಿಕೆ
\q
\v 1 <<ನೀನು ಕೂಗಿದರೆ, ನಿನಗೆ ಉತ್ತರಕೊಡುವವರುಂಟೋ?
\q ಪರಿಶುದ್ಧ ದೇವದೂತರಲ್ಲಿ ಯಾರನ್ನು ಆಶ್ರಯಿಸುವಿ?
\q
\v 2 ಕೋಪದಿಂದ ಮೂರ್ಖನಿಗೆ ನಾಶವು,
\q ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.
\q
\v 3 ಮೂರ್ಖನು ಬೇರೂರುವುದನ್ನು ನಾನು ನೋಡಿದೆನು.
\q ಕೂಡಲೆ ಅವನ ನಿವಾಸವು ಶಾಪಗ್ರಸ್ತವೆನ್ನುವುದಕ್ಕೆ ಆಸ್ಪದವಾಯಿತು.
\s5
\q
\v 4 ಅವನ ಮಕ್ಕಳು ಆಶ್ರಯವಿಲ್ಲದೆ ನ್ಯಾಯಸ್ಥಾನದಲ್ಲಿ ಸೋತುಹೋಗುವರು.
\q ಅವರನ್ನು ಬಿಡಿಸತಕ್ಕವರು ಯಾರೂ ಇಲ್ಲ.
\q
\v 5 ಹಸಿದವನು ಅವರ ಬೆಳೆಯನ್ನು
\q ಮುಳ್ಳುಬೇಲಿಹಾಕಿದ್ದರೂ ತಿಂದುಬಿಡುವನು.
\q ಅವರ ಸೊತ್ತನ್ನು ನುಂಗಲು ಬಾಯಿ ತೆರೆದು ಕಾದಿರುವರು.
\s5
\q
\v 6 ಕೇಡು ಉದ್ಭವಿಸುವುದು ಮಣ್ಣಿನಿಂದಲ್ಲ;
\q ದುಃಖವು ಭೂಮಿಯಿಂದ ಮೊಳೆಯುವುದಿಲ್ಲ.
\q
\v 7 ಜ್ವಾಲೆಗಳು ಮೇಲಕ್ಕೆ ಹಾರುವುದು,
\q ಮನುಷ್ಯರು ಶ್ರಮೆಯನ್ನು ಅನುಭವಿಸುವುದೂ ಸಹಜ.
\s5
\q
\v 8 (ಈ ಸಂದರ್ಭದಲ್ಲಿ) ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು;
\q ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು.
\q
\v 9 ಆತನು ಅಪ್ರಮೇಯ ಮಹಾಕಾರ್ಯಗಳನ್ನೂ,
\q ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
\q
\v 10 ಭೂಮಿಯ ಮೇಲೆ ಮಳೆಸುರಿಸಿ,
\q ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.
\s5
\q
\v 11 ಹೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ಏರಿಸಿ,
\q ದುಃಖಿಸುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಾನೆ.
\q
\v 12 ಯುಕ್ತಿವಂತರ ಕೈಯಿಂದ ಏನೂ ಆಗದಂತೆ,
\q ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.
\q
\v 13 ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡಿದುಕೊಂಡು,
\q ವಕ್ರಬುದ್ಧಿಯುಳ್ಳವರ ಆಲೋಚನೆಯನ್ನು ನಿರರ್ಥಕ ಮಾಡುತ್ತಾನೆ.
\s5
\q
\v 14 ಅವರು ಹಗಲಿನಲ್ಲೇ ಕತ್ತಲೆಯಿಂದ ಸುತ್ತುವರೆದು,
\q ಮಧ್ಯಾಹ್ನದಲ್ಲೇ ರಾತ್ರಿಯವರಂತೆ ತಡಕಾಡುತ್ತಾರೆ.
\q
\v 15 ಇಂಥವರ ಬಾಯೆಂಬ ಕತ್ತಿಯಿಂದಲೂ,
\q ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.
\q
\v 16 ಹೀಗೆ ಬಡವನಿಗೆ ನಿರೀಕ್ಷೆಯುಂಟಾಗುವುದು,
\q ಅನ್ಯಾಯವು ಬಾಯಿ ಮುಚ್ಚಿಕೊಳ್ಳುವುದು.
\s5
\q
\v 17 ಇಗೋ, ದೇವರು ಯಾರನ್ನು ಶಿಕ್ಷಿಸುವನೋ ಅವನು ಧನ್ಯನು;
\q ಸರ್ವಶಕ್ತನಾದ ದೇವರ ದಂಡನೆಯನ್ನು ತಾತ್ಸಾರಮಾಡಬೇಡ.
\q
\v 18 ಗಾಯಮಾಡುವವನೂ ಗಾಯಕಟ್ಟುವವನೂ ಆತನೇ;
\q ಹೊಡೆಯುವ ಕೈಯೇ ವಾಸಿಮಾಡುತ್ತದೆ.
\q
\v 19 ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು;
\q ಏಳನೆಯ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟದು.
\s5
\q
\v 20 ಬರಗಾಲದಲ್ಲಿ ಮರಣದಿಂದಲೂ,
\q ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.
\q
\v 21 ನಾಲಿಗೆಯೆಂಬ ಕೊರಡೆಗೆ ನೀನು ಮರೆಯಾಗಿರುವಿ;
\q ವಿನಾಶವುಂಟಾದರೂ ನೀನು ಹೆದರುವುದಿಲ್ಲ.
\q
\v 22 ನೀನು ನಾಶಕ್ಕೂ, ಕ್ಷಾಮಕ್ಕೂ ನಗುವಿ;
\q ಕಾಡುಮೃಗಗಳಿಗೆ ಅಂಜಬೇಕಾಗಿಲ್ಲ.
\s5
\q
\v 23 ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವಿ;
\q ಕಾಡುಮೃಗಗಳೂ ನಿನ್ನ ಸಂಗಡ ಸಮಾಧಾನವಾಗಿರುವವು.
\q
\v 24 ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವುದು;
\q ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
\q
\v 25 ನಿನ್ನ ಸಂತಾನವು ದೊಡ್ಡದ್ದೆಂದೂ,
\q ನಿನ್ನ ಸಂತತಿಯವರು ಭೂಮಿಯ ಹುಲ್ಲಿನಂತೆ ಲೆಕ್ಕವಿಲ್ಲದವರು ಎಂದೂ ನಂಬಿರುವಿ.
\s5
\q
\v 26 ಸುಗ್ಗೀಕಾಲದಲ್ಲಿ ತೆನೆಯ ಸಿವುಡು ಮನೆಗೆ ಸೇರುವಂತೆ,
\q ನೀನು ವೃದ್ಧಾಪ್ಯ ಕಳೆದ ಮೇಲೆ ಸಮಾಧಿಗೆ ಸೇರುವಿ.
\q
\v 27 ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು,
\q ನಿನ್ನಷ್ಟಕ್ಕೆ ನೀನೇ ತಿಳಿದುಕೋ.>>
\s5
\c 6
\s ಯೋಬನ ಎರಡನೆಯ ಸಂಭಾಷಣೆ: ಎಲೀಫಜನಿಗೆ ಪ್ರತ್ಯುತ್ತರ
\q
\v 1 ಆ ಮೇಲೆ ಯೋಬನು ಮತ್ತೆ ಇಂತೆಂದನು,
\q
\v 2 <<ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು;
\q ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.
\q
\v 3 ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು
\q ದುಡುಕಿನಿಂದ ಮಾತನಾಡಿದ್ದೇನೆ.
\s5
\q
\v 4 ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ;
\q ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.
\q
\v 5 ಕಾಡುಕತ್ತೆಗೆ ಹುಲ್ಲಿರಲು ಅರಚೀತೇ?
\q ಎತ್ತಿಗೆ ಮೇವಿರಲು ಕೂಗೀತೇ?
\q
\v 6 ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ?
\q ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?
\s5
\q
\v 7 ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.
\q
\v 8 ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ,
\q ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?
\q
\v 9 ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ,
\q ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.
\s5
\q
\v 10 ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು.
\q ಪರಿಶುದ್ಧ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.
\q
\v 11 ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ?
\q ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?
\s5
\q
\v 12 ನನ್ನ ಬಲವು ಕಲ್ಲಿನ ಬಲವೋ?
\q ಅಥವಾ ನನ್ನ ಶರೀರವು ತಾಮ್ರದ್ದೋ?
\q
\v 13 ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ,
\q ನನ್ನ ಸಾಮರ್ಥ್ಯವು ತೊಲಗಿಹೋಗಿದೆ.
\s5
\q
\v 14 ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ;
\q ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
\q
\v 15 ನನ್ನ ಸಹೋದರರಾದರೋ ತೊರೆಯ ಹಾಗೂ,
\q ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.
\q
\v 16 ಹಿಮವು ಅಡಗಿರುವ ಪ್ರವಾಹಗಳು,
\q ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.
\q
\v 17 ಬೇಸಿಗೆ ಬರುತ್ತಲೇ ಮಾಯವಾಗುವವು,
\q ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.
\s5
\q
\v 18 ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ,
\q ಮರುಭೂಮಿಗೆ ತಿರುಗಿ ನಾಶವಾಗುತ್ತವೆ.
\q
\v 19 ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು,
\q ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.
\q
\v 20 ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.
\s5
\q
\v 21 ಈಗ ನೀವು ಹಾಗೆಯೇ ಇದ್ದೀರಿ.
\q (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.
\q
\v 22 ನನ್ನ ಬಿನ್ನಹವೇನು? <ನನಗೆ ದಾನಮಾಡಿರಿ> ಎಂದು ಬಿನ್ನವಿಸಿದೆನೋ?
\q ನಿಮ್ಮ ಆಸ್ತಿಯಿಂದ, <ನನಗಾಗಿ ಲಂಚಕೊಡಿರಿ> ಎಂದೆನೋ?
\q
\v 23 ವಿರೋಧಿಯ ಕೈಯಿಂದ, <ನನ್ನನ್ನು ರಕ್ಷಿಸಿರಿ> ಎಂದು ಕೇಳಿಕೊಂಡೆನೋ?
\q ಬಲಾತ್ಕರಿಸುವವರಿಂದ, <ನನ್ನನ್ನು ವಿಮೋಚಿಸಿರಿ> ಎಂದು ಬೇಡಿಕೊಂಡೆನೋ?
\s5
\q
\v 24 ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಳಿಯಪಡಿಸಿರಿ,
\q ನಾನು ಮೌನದಿಂದಿರುವೆನು.
\q
\v 25 ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ,
\q ಆದರೆ ನಿಮ್ಮ ಖಂಡನೆಯು ನಿರಾರ್ಥಕ?
\s5
\q
\v 26 ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ?
\q ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?
\q
\v 27 ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು;
\q ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
\s5
\q
\v 28 ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ,
\q ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?
\q
\v 29 ದಯವಿಟ್ಟು
\f +
\fr 6:29
\fq ದಯವಿಟ್ಟು
\ft ಅನೇಕ ಸಾಂಪ್ರದಾಯಿಕ ಭಾಷಾಂತರಗಳಲ್ಲಿ "ಹಿಂದಿರುಗಿರಿ" ಎಂಬ ಅಕ್ಷರಶಃವಾದ ಭಾಷಾಂತರವಿದೆ, ಯೋಬ. 6:29, ಮೂವರು ಸ್ನೇಹಿತರು ಯೋಬನಿಂದ ದೂರ ಹೋಗುತ್ತಿದ್ದರು ಮತ್ತು ಅವನು ಅವರನ್ನು ಹಿಂದಿರುಗಿ ಕರೆದನು ಎಂಬ ಅಭಿಪ್ರಾಯವನ್ನು ಇದು ನೀಡುತ್ತದೆ; ಇಲ್ಲಿರುವ ಈ ಪದಕ್ಕೆ "ದಯವಿಟ್ಟು, ಮತ್ತೊಮ್ಮೆ ಯೋಚಿಸಿರಿ, ಪುನಃ ಅದನ್ನು ಯೋಚಿಸಿರಿ" ಎಂಬರ್ಥವಿದೆ.
\f* ನನ್ನ ವಿಚಾರಣೆಗೆ
\q ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.
\q
\v 30 ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ?
\q ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?
\s5
\c 7
\s ಯೋಬನು ದೇವರಿಗಿಟ್ಟ ಮೊರೆ
\q
\v 1 ಭೂಲೋಕದಲ್ಲಿ ಮನುಷ್ಯನಿಗೆ ದುಡಿಯುವ ಕಾಲ ಉಂಟಲ್ಲವೇ.
\q ಅವನ ದಿನಗಳು ಜೀತದಾಳಿನ ದಿನಗಳಂತೆ ಕಳೆಯುತ್ತವೆ.
\q
\v 2 ನಾನು ಸಂಜೆಯನ್ನು ಬಯಸುವ ದಾಸನಂತೆಯೂ,
\q ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ.
\q
\v 3 ಬೇಸರಿಕೆಯ ಮಾಸಗಳೂ,
\q ಆಯಾಸದ ರಾತ್ರಿಗಳೂ ನನ್ನ ಪಾಲಿಗೆ ನೇಮಕವಾಗಿವೆ.
\s5
\q
\v 4 ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೋ ಅಂದುಕೊಳ್ಳುವೆನು;
\q ರಾತ್ರಿಯು ಬೆಳೆಯುತ್ತಾ ಹೋಗುತ್ತದೆ.
\q ಉದಯದವರೆಗೂ ಹೊರಹೊರಳಿ ಸಾಕಾಗುತ್ತದೆ.
\q
\v 5 ಹುಳಗಳೂ, ಮಣ್ಣುಹಕ್ಕಳೆಗಳೂ ನನ್ನ ಮಾಂಸವನ್ನು ಮುಸುಕಿವೆ.
\q (ಬಿರಿದ) ಚರ್ಮವು ಕೂಡುತ್ತಾ ಬಂದು ಬಿರಿಯುತ್ತದೆ.
\s5
\q
\v 6 ನನ್ನ ದಿನಗಳು ಮಗ್ಗದ ಲಾಳಿಗಿಂತ ವೇಗವಾಗಿ,
\q ನಿರೀಕ್ಷೆಯಿಲ್ಲದೆ ಕಳೆದು ಹೋಗುತ್ತವೆ.
\q
\v 7 ನನ್ನ ಜೀವವು ಗಾಳಿಯಂತೆ ಇದೆಯೆಂತಲೂ,
\q ನನ್ನ ಕಣ್ಣು ಇನ್ನು ಸುಖವನ್ನು ಕಾಣುವುದಿಲ್ಲವೆಂತಲೂ ನೆನಪು ಮಾಡಿಕೋ.
\s5
\q
\v 8 ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವುದಿಲ್ಲ,
\q ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವುದಿಲ್ಲ.
\q
\v 9 ಮೋಡ ಹರಿದು ಮಾಯವಾಗುವಂತೆ,
\q ಪಾತಾಳಕ್ಕೆ ಇಳಿದು ಹೋದವನು ತಿರುಗಿ ಬರುವುದಿಲ್ಲ.
\q
\v 10 ಅವನು ತನ್ನ ಮನೆಗೆ ಪುನಃ ಸೇರುವುದಿಲ್ಲ,
\q ಇನ್ನು ಮೇಲೆ ಅವನ ನಿವಾಸಕ್ಕೆ ಅವನ ಪರಿಚಯ ಇರುವುದಿಲ್ಲ.
\s5
\q
\v 11 ನಾನಂತೂ ಬಾಯಿಮುಚ್ಚುವುದಿಲ್ಲ;
\q ಆತ್ಮವೇದನೆಯಿಂದ ಮಾತನಾಡುವೆನು,
\q ಮನೋವ್ಯಥೆಯಿಂದ ಪ್ರಲಾಪಿಸುವೆನು.
\q
\v 12 ನೀನು ನನ್ನ ಮೇಲೆ ಕಾವಲಿಡುವುದೇಕೆ?
\q ನಾನೇನು ಸಮುದ್ರವೋ, ಸಾಗರವೆಂಬ ಘಟಸರ್ಪವೋ?
\s5
\q
\v 13 ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು,
\q ನನ್ನ ಮಂಚವು ನನ್ನ ಬಾಧೆಯನ್ನು ಹೊರುವುದು ಅಂದುಕೊಳ್ಳುವಾಗ
\q
\v 14 ನೀನು ಸ್ವಪ್ನಗಳಿಂದ ನನ್ನನ್ನು ಬೆದರಿಸಿ,
\q ದರ್ಶನಗಳ ಮೂಲಕ ಭಯಪಡಿಸುವಿ.
\q
\v 15 ನನ್ನ ಆತ್ಮವು ಈ ಅಸ್ಥಿಪಂಜರದಲ್ಲಿ ಉಳಿಯುವುದಕ್ಕಿಂತಲೂ,
\q ಉಸಿರುಕಟ್ಟಿ ಸಾಯುವುದೇ ಲೇಸೆಂದು ಬಯಸುತ್ತದೆ.
\s5
\q
\v 16 ನಾನು ಬೇಸರಗೊಂಡಿದ್ದೇನೆ, ಹೀಗೆ ನಿರಂತರ ಬದುಕುವುದಕ್ಕೆ ಇಷ್ಟವಿಲ್ಲ.
\q ನನ್ನನ್ನು ಬಿಟ್ಟುಬಿಡು; ನನ್ನ ದಿನಗಳು ಉಸಿರಿನಂತಿವೆ.
\q
\v 17 ಮಾನವನು ಎಷ್ಟರವನು, ಅವನನ್ನು ನೀನು ಏಕೆ ಲಕ್ಷಿಸಬೇಕು?
\q ಅವನಲ್ಲಿ ಏಕೆ ಮನಸ್ಸಿಡಬೇಕು?
\q
\v 18 ದಿನಂಪ್ರತಿ ಅವನ ಮೇಲೆ ಲಕ್ಷ್ಯವಿಟ್ಟು,
\q ಕ್ಷಣಕ್ಷಣಕ್ಕೂ ಅವನನ್ನು ಪರಿಶೋಧಿಸುವುದೇಕೆ?
\s5
\q
\v 19 ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿ ತಿರುಗಿಸದೆ ಇರುವಿ?
\q ಉಗುಳನ್ನು ನುಂಗುವಷ್ಟು ಕಾಲವಾದರೂ ನನ್ನನ್ನು ಬಿಡುವುದಿಲ್ಲವೇ?
\q
\v 20 ಮನುಷ್ಯರ ಮೇಲೆ ಕಾವಲಿಡುವವನೇ,
\q ನಾನು ಪಾಪ ಮಾಡಿದ್ದರೂ ನನ್ನ ಕೃತ್ಯದಿಂದ ನಿನಗೆ ಏನಾಯಿತು?
\q ನನ್ನನ್ನು ಶಿಕ್ಷೆಗೆ ಗುರಿಮಾಡಿಕೊಂಡದ್ದೇಕೆ? ನನಗೆ ನಾನೇ ಭಾರವಾಗಿದ್ದೇನೆ.
\s5
\q
\v 21 ನೀನು ನನ್ನ ಅಪರಾಧವನ್ನು ಕ್ಷಮಿಸಿ ನನ್ನ ದೋಷವನ್ನು ಏಕೆ ಪರಿಹರಿಸುವುದಿಲ್ಲ?
\q ನಾನು ಈಗ ಮಣ್ಣಿನಲ್ಲಿ ಮಲಗಿಕೊಳ್ಳುವೆನು;
\q ನೀನು ನನ್ನನ್ನು ಹುಡುಕುವಾಗ ನಾನು ಇಲ್ಲದೆ ಹೋಗಿರುವೆನು.
\s5
\c 8
\s ಬಿಲ್ದದನ ಮೊದಲನೆಯ ಪ್ರತ್ಯುತ್ತರ
\p
\v 1 <<ಆಗ ಶೂಹ್ಯನಾದ ಬಿಲ್ದದನು ಹೀಗೆಂದನು,
\q
\v 2 <<ಬಿರುಗಾಳಿಯಂತಿರುವ ಮಾತುಗಳನ್ನಾಡಿ ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವಿ?
\q
\v 3 ದೇವರು ಅನ್ಯಾಯವಾದ ತೀರ್ಪನ್ನು ಕೊಡುವನೋ?
\q ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವನೋ?
\s5
\q
\v 4 ಒಂದು ವೇಳೆ ನಿನ್ನ ಮಕ್ಕಳು ಆತನಿಗೆ ವಿರುದ್ಧವಾಗಿ ಪಾಪ ಮಾಡಿದ್ದರಿಂದ,
\q ಆತನು ಅವರನ್ನು ಅವರ ದುಷ್ಕೃತ್ಯದ ಕೈಗೆ ಒಪ್ಪಿಸಿದನೋ ಏನೋ?
\q
\v 5 ನೀನು ಶುದ್ಧನೂ, ಯಥಾರ್ಥನೂ ಆಗಿ ಕುತೂಹಲದಿಂದ ಆತನ ಪ್ರಸನ್ನತೆಯನ್ನು ಬಯಸಿ,
\q ಸರ್ವಶಕ್ತನಾದ ದೇವರಿಗೆ ನಿನ್ನ ವಿಜ್ಞಾಪನೆಯನ್ನು ಮಾಡಿಕೊಂಡರೆ,
\s5
\q
\v 6 ಆತನು ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು,
\q ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವನು.
\q
\v 7 ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ,
\q ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವುದು.
\s5
\q
\v 8 ದಯಮಾಡಿ, ಪೂರ್ವಿಕರನ್ನು ವಿಚಾರಿಸಿ,
\q ಅವರ ಪೂರ್ವಿಕರು ಕಂಡುಕೊಂಡದ್ದಕ್ಕೂ ಮನಸ್ಸಿಡು.
\q
\v 9 ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು.
\q ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ.
\q
\v 10 ಅವರು ನಿನಗೆ ಬೋಧಿಸಿ ಬುದ್ಧಿಹೇಳಿ,
\q ಮನಃಪೂರ್ವಕವಾಗಿ ಮಾತನಾಡುವುದಿಲ್ಲವೋ?
\s5
\q
\v 11 ಜವುಗು ಇಲ್ಲದೆ ಜಂಬುಹುಲ್ಲು ಬೆಳೆಯುವುದೇ?
\q ನೀರಿಲ್ಲದೆ ಆಪುಹುಲ್ಲು ಮೊಳೆಯುವುದೇ?
\q
\v 12 ಇನ್ನೂ ಎಳೆಯದಾಗಿರುವಾಗಲೇ ಮಿಕ್ಕ ಎಲ್ಲಾ ಸಸಿಗಳಿಗಿಂತಲೂ ಮುಂಚಿತವಾಗಿ,
\q ಯಾರೂ ಕೊಯ್ಯದೆ ಇದು ಒಣಗಿ ಹೋಗುವುದು.
\s5
\q
\v 13 ದೇವರನ್ನು ಮರೆತು ಬಿಟ್ಟವರೆಲ್ಲರ ಗತಿಯು ಹೀಗೆಯೇ ಇರುವುದು;
\q ಭ್ರಷ್ಟನ ನಿರೀಕ್ಷೆಯು ನಿರರ್ಥಕವಾಗುವುದು.
\q
\v 14 ಅವನ ಭರವಸವು ಭಂಗವಾಗುವುದು,
\q ಅವನ ಆಶ್ರಯವು ಜೇಡದ ಮನೆಯಂತಿರುವುದು.
\q
\v 15 ಅವನು ಆ ಮನೆಯನ್ನು ಆತುಕೊಂಡರೆ ಅದು ನಿಲ್ಲುವುದಿಲ್ಲ;
\q ಅದನ್ನು ಹಿಡುಕೊಂಡರೆ ಅದು ಸ್ಥಿರವಾಗಿರದು.
\s5
\q
\v 16 ಅವನು ಬಳ್ಳಿಯಂತೆ ಬಿಸಿಲಿನಲ್ಲಿಯೂ ಹಸಿಯಾಗಿದ್ದು,
\q ತೋಟದಲ್ಲೆಲ್ಲಾ ಕವಲೊಡೆದು ಹರಡಿ
\q
\v 17 (ಕಲ್ಲು) ಕುಪ್ಪೆಯ ಮೇಲೆ ತನ್ನ ಬೇರುಗಳನ್ನು ಹೆಣೆದುಕೊಂಡು,
\q ಕಲ್ಲುಬಿರುಕಿನಲ್ಲಿಯೂ ನುಗ್ಗಬಲ್ಲನು.
\q
\v 18 ಅವನನ್ನು ಅಲ್ಲಿಂದ ಕಿತ್ತು ಹಾಕಿದರೆ ಆ ಸ್ಥಳವು,
\q <ನಿನ್ನನ್ನು ಕಾಣೆ> ಎಂದು ಕೂಗುವುದು.
\s5
\q
\v 19 ಆ ಮಣ್ಣಿನಿಂದ ಬೇರೆ ಸಸಿಗಳು ಮೊಳೆಯುವವು.
\q ಆಹಾ, ಇದೇ ಅವನ ಗತಿಯ ಸುಖ!
\q
\v 20 ಇಗೋ ದೇವರು ನಿರ್ದೋಷಿಯನ್ನು ತಳ್ಳಿಬಿಡುವುದಿಲ್ಲ,
\q ಕೆಡುಕರನ್ನು ಕೈಹಿಡಿಯುವುದಿಲ್ಲ.
\s5
\q
\v 21 ಆತನು ಇನ್ನು ಮೇಲೆ ನಿನ್ನ ಬಾಯನ್ನು ನಗುವಿನಿಂದಲೂ,
\q ತುಟಿಗಳನ್ನು ಉತ್ಸಾಹ ಧ್ವನಿಯಿಂದಲೂ ತುಂಬಿಸುವನು.
\q
\v 22 ನಿನ್ನ ಶತ್ರುಗಳನ್ನು ಅವಮಾನವು ಮುಸುಕುವುದು;
\q ದುಷ್ಟರ ನಿವಾಸವು ನಿರ್ಮೂಲವಾಗುವುದು.>>
\s5
\c 9
\s ಯೋಬನ ಮೂರನೆಯ ಸಂಭಾಷಣೆ: ಬಿಲ್ದದನಿಗೆ ಪ್ರತ್ಯುತ್ತರ
\q
\v 1 ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಇಂತೆಂದನು,
\q
\v 2 <<ನೀನು ಹೇಳಿದ್ದು ಸತ್ಯವೇ ಸರಿ.
\q ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
\q
\v 3 ಆತನೊಂದಿಗೆ ವ್ಯಾಜ್ಯಮಾಡಬೇಕೆಂದು ಇಷ್ಟಪಟ್ಟರೂ,
\q ಆತನ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಕೊಡಲಾರನು.
\s5
\q
\v 4 ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು.
\q ಆತನ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?
\q
\v 5 ಆತನು ಪರ್ವತಗಳನ್ನು ಅರಿಯದಂತೆ ಸರಿಸಿ
\q ಕೋಪದಿಂದ ಅವುಗಳನ್ನು ಉರುಳಿಸುತ್ತಾನೆ.
\q
\v 6 ಭೂಲೋಕವನ್ನು ಕದಲಿಸಿ
\q ಅದರ ಸ್ತಂಭಗಳನ್ನು ನಡುಗಿಸುತ್ತಾನೆ.
\s5
\q
\v 7 ಹುಟ್ಟಬೇಡವೆಂದು ಆತನು ಅಪ್ಪಣೆ ಕೊಟ್ಟರೆ ಸೂರ್ಯನು ಹುಟ್ಟುವುದಿಲ್ಲ;
\q ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ.
\q
\v 8 ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ.
\q ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.
\q
\v 9 ನಕ್ಷತ್ರಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ,
\q ದಕ್ಷಿಣ ದಿಕ್ಕಿನ ನಕ್ಷತ್ರಗೃಹಗಳನ್ನೂ ನಿರ್ಮಿಸಿದವನು ಆತನೇ.
\s5
\q
\v 10 ಅಪ್ರಮೇಯ ಮಹಾಕಾರ್ಯಗಳನ್ನೂ,
\q ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
\q
\v 11 ಆಹಾ, ಆತನು ನನ್ನ ಪಕ್ಕದಲ್ಲಿ ದಾಟಿಹೋದರೂ ನಾನು ಕಾಣುವುದಿಲ್ಲ;
\q ಮುಂದಕ್ಕೆ ಹಾದುಹೋದರೂ ನನಗೆ ತಿಳಿಯುವುದಿಲ್ಲ.
\q
\v 12 ಇಗೋ ಹಿಡಿದುಕೊಳ್ಳುತ್ತಾನೆ, ಆತನನ್ನು ತಳ್ಳುವವರು ಯಾರು?
\q <ನೀನು ಏನು ಮಾಡುತ್ತಿ?> ಎಂದು ಆತನನ್ನು ಕೇಳುವವರಾರು?
\b
\s5
\q
\v 13 ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವುದಿಲ್ಲ;
\q ರಾಹಾಬನ ಸಹಾಯಕರು ಆತನಿಗೆ ಅಡ್ಡಬಿದ್ದರಲ್ಲಾ.
\q
\v 14 ನಾನಾದರೋ ದೇವರೊಂದಿಗೆ ವಾದಿಸಿ,
\q ಆತನಿಗೆ ಉತ್ತರಕೊಡುವುದಕ್ಕೆ ಮತ್ತೂ ಅಶಕ್ತನು.
\q
\v 15 ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು;
\q ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.
\s5
\q
\v 16 ನಾನು ಕರೆದಾಗ ಆತನು ನನಗೆ ಕಾಣಿಸಿಕೊಂಡಿದ್ದರೂ,
\q ನನ್ನ ವಿಜ್ಞಾಪನೆಯನ್ನು ಲಾಲಿಸುವನೆಂದು ನಂಬುತ್ತಿರಲಿಲ್ಲ.
\q
\v 17 ಆತನು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾ,
\q ಸುಮ್ಮಸುಮ್ಮನೆ ಒಂದರ ಮೇಲೊಂದು ಗಾಯಮಾಡುತ್ತಾ,
\q
\v 18 ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ
\q ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.
\s5
\q
\v 19 ನಾನು ಬಲಿಷ್ಠನ ಶಕ್ತಿಯನ್ನು ಮೊರೆಹೋಗುವೆನೆಂದರೆ ದೇವರು, <ಇಗೋ, ಇದ್ದೇನೆ> ಎನ್ನುವನು.
\q ನ್ಯಾಯವಿಚಾರಣೆಯು ಆಗಲಿ ಎಂದರೆ ಆತನು ನನಗೆ, <ಕಾಲ ನಿಯಾಮಕರು ಯಾರು?> ಎನ್ನುವನು.
\q
\v 20 ನಾನು ನೀತಿವಂತನಾಗಿದ್ದರೂ ನನ್ನ ಬಾಯೇ ನನ್ನನ್ನು ಅಪರಾಧಿಯೆಂದು ತೋರ್ಪಡಿಸುವುದು.
\q ನಾನು ನಿರ್ದೋಷಿಯಾಗಿದ್ದರೂ ಆತನು ನನ್ನನ್ನು ದುರ್ಮಾರ್ಗಿಯೆಂದು ನಿರೂಪಿಸುವನು.
\s5
\q
\v 21 ನಾನು ನಿರ್ದೋಷಿಯೇ ಹೌದು; ನನ್ನ ವಿಷಯದಲ್ಲಿ ನನಗೇನೂ ಚಿಂತೆಯಿಲ್ಲ;
\q ನನ್ನ ಪ್ರಾಣವನ್ನು ತಿರಸ್ಕರಿಸುತ್ತೇನೆ.
\q
\v 22 ಎಲ್ಲಾ ಒಂದೇ. ಆದಕಾರಣ <ನಾನು,
\q ನಿರ್ದೋಷಿಯನ್ನೂ, ದೋಷಿಯನ್ನೂ ಆತನು ನಾಶ ಮಾಡುತ್ತೇನೆ> ಎಂದು ಹೇಳುತ್ತಾನೆ.
\q
\v 23 ವಿಪತ್ತು ಆಕಸ್ಮಾತ್ತಾಗಿ ಜನರನ್ನು ಸಂಹರಿಸಲು,
\q ನಿರ್ಮಲಚಿತ್ತರು ಮನಗುಂದುವುದನ್ನು ಆತನು ನೋಡಿ ಹಾಸ್ಯಮಾಡುವನು.
\q
\v 24 ಭೂಲೋಕವು ದುಷ್ಟರ ಕೈ ಸೇರಿದೆ;
\q ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ.
\q ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?
\s5
\q
\v 25 ನನ್ನ ದಿನಗಳು ಓಟಗಾರನಿಗಿಂತ ಶೀಘ್ರವಾಗಿರುತ್ತವೆ.
\q ಯಾವ ಸುಖವನ್ನೂ ಕಾಣದೆ ಓಡಿ ಹೋಗುತ್ತವೆ.
\q
\v 26 ಬೆಂಡಿನ ದೋಣಿಗಳು ದಾಟಿ ಹೋಗುವಂತೆಯೂ,
\q ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ವೇಗವಾಗಿ ಗತಿಸಿ ಹೋಗುತ್ತವೆ.
\s5
\q
\v 27 ನಾನು ನನ್ನ ಪ್ರಲಾಪವನ್ನು ಮರೆತುಬಿಟ್ಟು,
\q ಕಳೆಗುಂದಿದ ನನ್ನ ಮುಖವನ್ನು ಮಾರ್ಪಡಿಸಿಕೊಂಡು ಹರ್ಷಿಸುವೆನೆಂದು ಮನಸ್ಸು ಮಾಡಿದರೆ,
\q
\v 28 ನನ್ನ ಎಲ್ಲಾ ಸಂಕಟಗಳಿಂದ ನನಗೆ ಭಯವುಂಟಾಗುತ್ತದೆ;
\q ನೀನು ನನ್ನನ್ನು ನಿರ್ದೋಷಿಯೆಂದು ಎಣಿಸುವುದಿಲ್ಲವೆಂದು ತಿಳಿದುಕೊಳ್ಳುತ್ತೇನೆ.
\q
\v 29 ನಾನು ಅಪರಾಧಿಯೆಂದು ನಿರ್ಣಯಿಸಲ್ಪಡಬೇಕಷ್ಟೆ.
\q ನಾನು ವ್ಯರ್ಥವಾಗಿ ಪ್ರಯಾಸಪಡುವುದೇಕೆ?
\s5
\q
\v 30 ನಾನು ಹಿಮದಿಂದ ಸ್ನಾನಮಾಡಿದರೂ,
\q ಚೌಳಿನಿಂದ
\f +
\fr 9:30
\fq ಚೌಳಿನಿಂದ
\ft ಅಥವಾ ಸಾಬೂನಿನಿಂದ.
\f* ನನ್ನ ಕೈಗಳನ್ನು ತೊಳಕೊಂಡರೂ,
\q
\v 31 ನೀನು ನನ್ನನ್ನು ಗುಂಡಿಯಲ್ಲಿ ಮುಳುಗಿಸಿ,
\q ನನ್ನ ಬಟ್ಟೆಗಳಿಗೆ ನಾನು ಅಸಹ್ಯನಾಗುವಂತೆ ಮಾಡುವಿ.
\s5
\q
\v 32 ಆತನು ನನ್ನಂಥವನಲ್ಲ, ಮನುಷ್ಯನಲ್ಲ,
\q ನಾನು ಆತನೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವುದು ಹೇಗೆ?
\q
\v 33 ನಮ್ಮಿಬ್ಬರ ಮೇಲೆ ಕೈಯಿಡುವವನಾಗಿಯೂ,
\q ಮಧ್ಯಸ್ಥನಾಗಿಯೂ ಇರುವ ನ್ಯಾಯಾಧಿಪತಿಯು ಯಾರೂ ಇಲ್ಲ.
\s5
\q
\v 34 ನನ್ನ ಮೇಲೆ ಎತ್ತಿರುವ ತನ್ನ ದಂಡವನ್ನು ಆತನು ತೆಗೆದುಹಾಕಲಿ,
\q ಆತನಿಂದಾಗುವ ದಿಗಿಲು ನನ್ನನ್ನು ಹೆದರಿಸದಿರಲಿ.
\q
\v 35 ಹೀಗಿದ್ದರೆ ನಾನು ಭಯಪಡದೆ ಮಾತನಾಡುವೆನು;
\q ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.>>
\s5
\c 10
\s ಯೋಬನ ಮತ್ತೆ ದೇವರಿಗಿಟ್ಟ ಮೊರೆ
\q
\v 1 ನನ್ನ ಜೀವವೇ ನನಗೆ ಬೇಸರವಾಗಿದೆ.
\q ಎದೆಬಿಚ್ಚಿ ಮೊರೆಯಿಡುವೆನು;
\q ಮನೋವ್ಯಥೆಯಿಂದ ನುಡಿಯುವೆನು.
\q
\v 2 ನಾನು ದೇವರ ಮುಂದೆ, <<ನನ್ನನ್ನು ಅಪರಾಧಿಯೆಂದು ನಿರ್ಣಯಿಸಬೇಡ,
\q ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀ ತಿಳಿಸು ಎನ್ನುವೆನು.
\q
\v 3 ನೀನು ದುಷ್ಟರ ಆಲೋಚನೆಗೆ ಪ್ರಸನ್ನನಾಗಿ
\q ನಿನ್ನ ಕೈಕಷ್ಟದಿಂದ ಸೃಷ್ಟಿಸಿದ್ದನ್ನು ತಿರಸ್ಕರಿಸಿ,
\q ಬಾಧಿಸುವುದು ನಿನಗೆ ಸಂತೋಷವೋ?
\s5
\q
\v 4 ನೀನು ಮಾಂಸದ ಕಣ್ಣುಳ್ಳವನೋ?
\q ಮನುಷ್ಯರು ನೋಡುವಂತೆ ನೋಡುತ್ತೀಯಾ?
\q
\v 5 ನಿನ್ನ ದಿನಗಳು ಮನುಷ್ಯನ ದಿನಗಳಷ್ಟು ಅಲ್ಪವಾಗಿವೆಯೋ?
\q ನಿನ್ನ ಸಂವತ್ಸರಗಳೂ ಮಾನವನ ದಿನಗಳಷ್ಟೇನೇ,
\q
\v 6 ನೀನು ಇಷ್ಟು ಅವಸರದಿಂದ ನನ್ನ ದೋಷವನ್ನು ಹುಡುಕಿ,
\q ನನ್ನ ಪಾಪವನ್ನು ವಿಚಾರಿಸುವುದೇಕೆ?
\q
\v 7 ನಾನು ಅಪರಾಧಿಯಲ್ಲವೆಂದು ನಿನಗೆ ತಿಳಿಯಿತಲ್ಲಾ;
\q ನಿನ್ನ ಕೈಯೊಳಗಿಂದ ಬಿಡಿಸತಕ್ಕವರು ಯಾರೂ ಇಲ್ಲವೋ?
\s5
\q
\v 8 ನೀನು ನನ್ನನ್ನು ನಿರ್ಮಿಸಿ ರೂಪಿಸಿದ್ದರೂ,
\q ಈಗ ಮನಸ್ಸನ್ನು ಬೇರೆ ಮಾಡಿಕೊಂಡು ನನ್ನನ್ನು ನಾಶ ಮಾಡಿಬಿಡುವೆಯಾ?
\q
\v 9 ನೀನು ನನ್ನನ್ನು ಜೇಡಿಮಣ್ಣಿನಿಂದಲೇ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ.
\q ನನ್ನನ್ನು ತಿರುಗಿ ಮಣ್ಣಾಗುವಂತೆ ಮಾಡುವೆಯಾ?
\s5
\q
\v 10 ನೀನು ನನ್ನನ್ನು ಹಾಲಿನಂತೆ ಹೊಯ್ದು,
\q ಮೊಸರಿನ ಹಾಗೆ ಹೆಪ್ಪುಗಟ್ಟಿಸಿದಿಯಲ್ಲಾ.
\q
\v 11 ನನ್ನನ್ನು ಎಲುಬು ನರಗಳಿಂದ ಹೆಣೆದು
\q ಮಾಂಸಚರ್ಮಗಳಿಂದ ಹೊದಿಸಿದಿ.
\s5
\q
\v 12 ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆತೋರಿಸಿದ್ದಿ;
\q ನಿನ್ನ ಪರಾಂಬರಿಕೆ ನನ್ನ ಆತ್ಮವನ್ನು ಕಾಪಾಡಿದೆ.
\q
\v 13 ಆದರೂ ನಿನ್ನ ಹೃದಯದಲ್ಲಿ ಇವುಗಳನ್ನು ಮರೆಮಾಡಿಕೊಂಡಿದ್ದಿ,
\q ಇವು ನಿನ್ನಲ್ಲಿ ಇದ್ದೇ ಇರುತ್ತವೆಂದು ನನಗೆ ಗೊತ್ತುಂಟು.
\q
\v 14 ಅದೇನೆಂದರೆ, ನಾನು ತಪ್ಪುಮಾಡಿದರೆ ನೀನು ಗಮನಿಸುತ್ತಿ;
\q ನನ್ನ ದೋಷವನ್ನು ಕ್ಷಮಿಸುವುದಿಲ್ಲ.
\s5
\q
\v 15 ಅಯ್ಯೋ, ನಾನು ದುರ್ಮಾರ್ಗಿಯಾದರೆ ನನಗೇನು ಗತಿ! ನಾನು ಸನ್ಮಾರ್ಗಿಯಾದರೂ,
\q ನನ್ನ ಶ್ರಮೆಗಳನ್ನು ನೋಡುತ್ತಾ ಅವಮಾನಭರಿತನಾಗಿ ತಲೆಯೆತ್ತಲಾರೆನು.
\q
\v 16 ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ;
\q ನಿನ್ನ ಅದ್ಭುತ ಚಮತ್ಕಾರವನ್ನು ತಿರುಗಿ ನನ್ನಲ್ಲಿ ತೋರಿಸುವಿ.
\s5
\q
\v 17 ನನ್ನ ವಿರುದ್ಧವಾಗಿ ಹೊಸ ಹೊಸ ಸಾಕ್ಷಿಗಳನ್ನು ಬರಮಾಡಿ
\q ಹೆಚ್ಚೆಚ್ಚಾಗಿ ನನ್ನ ಮೇಲೆ ಸಿಟ್ಟುಗೊಳ್ಳುವಿ.
\q ಸೈನ್ಯವು ತರಂಗ ತರಂಗವಾಗಿ ನನ್ನ ಮೇಲೆ ಬೀಳುವುದಲ್ಲಾ.
\b
\s5
\q
\v 18 ನನ್ನನ್ನು ಗರ್ಭದಿಂದ ಏಕೆ ಹೊರತೆಗೆದೆ?
\q ಯಾರೂ ನನ್ನನ್ನು ನೋಡದಿರುವಾಗಲೇ ನಾನು ಪ್ರಾಣಬಿಡಬೇಕಾಗಿತ್ತು.
\q
\v 19 ಆಗ ನಾನು ಇರುತ್ತಿರಲಿಲ್ಲ;
\q ನನ್ನನ್ನು ಗರ್ಭದಿಂದ ಸಮಾಧಿಗೆ ಹೊತ್ತುಕೊಂಡು ಹೋಗುತ್ತಿದ್ದರು.
\s5
\q
\v 20 ನನ್ನ ದಿನಗಳು ಅಲ್ಪವಾಗಿರುತ್ತವಲ್ಲಾ? ಬಿಡು,
\q ನಿನ್ನ ದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸು.
\q
\v 21 ನಾನು ಅಂಧಕಾರದಿಂದಲೂ,
\q ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವುದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ.
\q ಆ ದೇಶದಿಂದ ತಿರುಗಿ ಬರಲಾರೆನು.
\q
\v 22 ರಾತ್ರಿಗೂ, ಮರಣಾಂಧಕಾರಕ್ಕೂ ಸಮಾನವಾದ,
\q ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ,
\q ಅದರ ಬೆಳಕು ರಾತ್ರಿಯ ಬೆಳಕಿನಂತೆ.>>
\s5
\c 11
\s ಚೋಫರನ ಮೊದಲನೆಯ ಪ್ರತ್ಯುತ್ತರ
\q
\v 1 ಆಗ ನಾಮಾಥ್ಯನಾದ ಚೋಫರನು ಹೀಗೆಂದನು,
\q
\v 2 <<ಬಹಳ ಮಾತುಗಳಿಗೆ ಉತ್ತರ ಕೊಡಬಾರದೋ?
\q ವ್ಯರ್ಥವಾಗಿ ಮಾತನಾಡುವವ ನೀತಿವಂತನೆಂದು ಹೇಳಿಸಿಕೊಂಡಾನೇ?
\q
\v 3 ನೀನು ಬಡಾಯಿಕೊಚ್ಚಿದರೆ ಮನುಷ್ಯರು ಸುಮ್ಮನಿರಬೇಕೋ?
\q ನೀನು ಕುಚೋದ್ಯವಾಗಿ ಮಾತನಾಡುವಾಗ ನಿನ್ನನ್ನು ಯಾರೂ ನಾಚಿಕೆಗೆ ಒಳಪಡಿಸಬಾರದೋ?
\s5
\q
\v 4 <ನನ್ನ ಬೋಧನೆಯು ನಿರ್ಮಲವಾದದ್ದು,
\q ದೇವದೃಷ್ಟಿಯಲ್ಲಿ ಶುದ್ಧನಾಗಿದ್ದೇನೆ> ಎಂದು ನೀನು ಹೇಳಿದ್ದೀಯಲ್ಲಾ.
\q
\v 5 ಆಹಾ, ದೇವರು ಬಾಯ್ದೆರೆದು
\q ನಿನ್ನ ವಿರುದ್ಧವಾಗಿ ಮಾತನಾಡಿದರೆ ಎಷ್ಟೋ ಉತ್ತಮ!
\q
\v 6 ಆತನು ಜ್ಞಾನದ ರಹಸ್ಯಗಳನ್ನು ನಿನಗೆ ತಿಳಿಸಿ,
\q ಸುಜ್ಞಾನವು ಬಹುಮುಖವಾಗಿದೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು!
\q ದೇವರು ನಿನ್ನ ಅಧರ್ಮವನ್ನೆಲ್ಲಾ ಗಣನೆಗೆ ತರಲಿಲ್ಲವೆಂದು ತಿಳಿದುಕೋ!
\s5
\q
\v 7 ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲೆಯಾ?
\q ಸರ್ವಶಕ್ತನಾದ ದೇವರನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?
\q
\v 8 ಆಹಾ, (ಆತನ ಜ್ಞಾನವು) ಆಕಾಶದ ಹಾಗೆ ಉನ್ನತವಾಗಿದೆ; ನೀನು ಮಾಡುವುದೇನು?
\q ಪಾತಾಳಕ್ಕಿಂತ ಆಳವಾಗಿದೆ; ನೀನು ತಿಳಿದುಕೊಳ್ಳುವುದೇನು?
\q
\v 9 ಅದರ ಅಳತೆಯು ಭೂಮಿಗಿಂತಲೂ ಉದ್ದವಾಗಿದೆ,
\q ಸಮುದ್ರಕ್ಕಿಂತಲೂ ಅಗಲವಾಗಿದೆ.
\s5
\q
\v 10 ಆತನು ಹಾದುಹೋದರೂ, ಸೆರೆಯಲ್ಲಿಟ್ಟರೂ,
\q ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?
\q
\v 11 ಆತನೇ ವ್ಯರ್ಥ ಜನರನ್ನು ತಿಳಿದುಕೊಳ್ಳುವನು;
\q ಯಾವ ವಿಮರ್ಶೆಯೂ ಇಲ್ಲದೆ ಅಧರ್ಮವನ್ನು ಕಂಡು ಹಿಡಿಯುವನು.
\q
\v 12 ಕಾಡುಕತ್ತೆಯ ಮರಿಗೆ ನರಜನ್ಮವಾದರೆ
\q ಅವಿವೇಕಿಯಾದ ಮನುಷ್ಯನು ವಿವೇಕವನ್ನು ಪಡೆಯುವನು.
\b
\s5
\q
\v 13 ನೀನಂತು ಮನಸ್ಸನ್ನು ಪರಿವರ್ತಿಸಿಕೊಂಡು
\q ದೇವರ ಕಡೆಗೆ ಕೈಗಳನ್ನೆತ್ತಿ ಸ್ತುತಿಸು.
\q
\v 14 ಅಧರ್ಮವು ನಿನ್ನ ಕೈಯಲ್ಲಿದ್ದರೆ ಅದನ್ನು ದೂರಮಾಡಿಬಿಡು;
\q ಅನ್ಯಾಯವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
\s5
\q
\v 15 ಆಗ ನೀನು ನಿಷ್ಕಳಂಕವಾದ ಮುಖವನ್ನೆತ್ತಿಕೊಂಡು,
\q ಸ್ಥಿರಚಿತ್ತನೂ, ನಿರ್ಭಯನೂ ಆಗಿರುವಿ.
\q
\v 16 ನಿನ್ನ ಕಷ್ಟವನ್ನು ಮರೆತುಬಿಡುವಿ;
\q ಹರಿದುಹೋದ ನೀರನ್ನೋ ಎಂಬಂತೆ ಅದನ್ನು ಜ್ಞಾಪಿಸಿಕೊಳ್ಳುವಿ.
\q
\v 17 ನಿನ್ನ ಜೀವಮಾನವು ಮಧ್ಯಾಹ್ನದ ಬೆಳಕಿಗಿಂತ ಹೆಚ್ಚಾಗಿ ಪ್ರಜ್ವಲಿಸುವುದು,
\q ಕತ್ತಲಿದ್ದರೂ ಹಗಲಿನಂತಿರುವುದು.
\s5
\q
\v 18 ನಿರೀಕ್ಷೆಗೆ ಆಸ್ಪದವಿರುವುದರಿಂದ ಧೈರ್ಯಗೊಂಡಿರುವಿ,
\q ಸುತ್ತಲೂ ನೋಡಿ ಅಪಾಯವಿಲ್ಲವೆಂದು ವಿಶ್ರಮಿಸಿಕೊಳ್ಳುವಿ.
\q
\v 19 ಮಲಗಿಕೊಂಡಾಗ ನಿನ್ನನ್ನು ಯಾರೂ ಹೆದರಿಸುವುದಿಲ್ಲ.
\q ಅನೇಕರು ನಿನ್ನ ಮುಖ ಪ್ರಸನ್ನತೆಯನ್ನು ಅಪೇಕ್ಷಿಸುವರು.
\s5
\q
\v 20 ಆದರೆ ದುಷ್ಟರು ನಿರಾಶ್ರಯರಾಗಿ ಕಂಗೆಡುವರು,
\q ಪ್ರಾಣಬಿಡಬೇಕೆಂಬುದೇ ಅವರ ಬಯಕೆ.>>
\s5
\c 12
\s ಯೋಬನ ನಾಲ್ಕನೆಯ ಸಂಭಾಷಣೆ: ಚೋಫರನಿಗೆ ನೀಡಿದ ಪ್ರತ್ಯುತ್ತರ
\p
\v 1 ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಹೀಗೆ ಹೇಳಿದನು,
\q
\v 2 <<ಹೌದು, ನೀವೇ ಮನುಷ್ಯರು;
\q ಜ್ಞಾನವು ನಿಮ್ಮೊಡನೆಯೇ ಸಾಯುವುದು, ನಿಜ.
\q
\v 3 ನಿಮ್ಮ ಹಾಗೆ ನನಗೂ ಬುದ್ಧಿಯುಂಟು,
\q ನಿಮಗಿಂತ ನಾನು ಕಡೆಯಲ್ಲ.
\q ಇಂಥವು ಯಾರಿಗೆ ತಾನೇ ಗೊತ್ತಿಲ್ಲ.
\s5
\q
\v 4 ನಾನು ಗೆಳೆಯನ ಗೇಲಿಗೆ ಗುರಿಯಾಗಿದ್ದೇನೆ!
\q ದೇವರನ್ನು ಪ್ರಾರ್ಥಿಸಿದೆನಲ್ಲಾ, ಆತನು ಲಾಲಿಸಿದನಲ್ಲಾ,
\q ನೀತಿವಂತನೂ, ನಿರ್ದೋಷಿಯೂ ಆದವನು ಹಾಸ್ಯಾಸ್ಪದನಾಗಿದ್ದೇನೆ.
\q
\v 5 ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬುದು ನೆಮ್ಮದಿಯಿಂದಿರುವವನ ಯೋಚನೆ;
\q ಜಾರಿ ಬಿದ್ದವರಿಗೆ ಅಪಮಾನವು ಕಾದಿರುತ್ತದೆ.
\q
\v 6 ಕಳ್ಳರ ಗುಡಾರಗಳಾದರೋ ಸಮೃದ್ಧವಾಗಿರುವವು,
\q ಕೈಯಲ್ಲಿರುವುದನ್ನೇ ದೇವರನ್ನಾಗಿ ಮಾಡಿಕೊಂಡು,
\q ದೇವರನ್ನು ಕೋಪಕ್ಕೆ ಗುರಿಮಾಡುವವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದಿರುವರು.
\s5
\q
\v 7 ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು;
\q ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು;
\q
\v 8 ಭೂಮಿಯನ್ನು ಮಾತನಾಡಿಸು, ನಿನಗೆ ಬೋಧಿಸುವುದು;
\q ಸಮುದ್ರದ ಮೀನುಗಳು ನಿನಗೆ ಹೇಳುವವು.
\s5
\q
\v 9 ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ
\q ಸಕಲ ಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವುದಿಲ್ಲ?
\q
\v 10 ಪ್ರತಿ ಪ್ರಾಣಿಯ ಪ್ರಾಣವು,
\q ಸಮಸ್ತ ಮನುಷ್ಯರ ಆತ್ಮಗಳೂ
\q ಯೆಹೋವನ ಕೈಯಲ್ಲಿರುವವು.
\s5
\q
\v 11 ಬಾಯಿಯು ಆಹಾರವನ್ನು ರುಚಿ ನೋಡುವ ಪ್ರಕಾರ
\q ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
\q
\v 12 ಜ್ಞಾನವು ವೃದ್ಧರಲ್ಲೇ ಅಡಗಿದೆಯೋ?
\q ದಿರ್ಘಾಷ್ಯರಲ್ಲಿ ವಿವೇಕವಿದೆ.
\s5
\q
\v 13 ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು,
\q ಆಲೋಚನೆಯೂ, ವಿವೇಕವೂ ಆತನವೇ.
\q
\v 14 ಇಗೋ, ಯಾರೂ ಕಟ್ಟದ ಹಾಗೆ ಕೆಡವಿಬಿಡುವನು,
\q ಯಾರೂ ಬಿಡಿಸದಂತೆ ಸೆರೆಹಾಕುವನು.
\q
\v 15 ನೋಡಿರಿ, ಆತನು ನೀರುಗಳನ್ನು ತಡೆದರೆ ಬೆಳೆಗಳು, ಭೂಮಿ ಒಣಗಿಹೋಗುತ್ತದೆ;
\q ನೀರನ್ನು ಬಿಟ್ಟರೆ ಭೂಮಿಯನ್ನು ಆವರಿಸುತ್ತದೆ.
\s5
\q
\v 16 ಆತನಲ್ಲಿ ಬಲವೂ, ಸಾಮರ್ಥ್ಯವೂ ಉಂಟು;
\q ತಪ್ಪಿದವನೂ, ತಪ್ಪಿಸಿದವನೂ ಆತನಿಗೆ ಅಧೀನರಾಗಿರುವರು.
\q
\v 17 ಮಂತ್ರಿಗಳನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು,
\q ನ್ಯಾಯಾಧಿಪತಿಗಳನ್ನು ಹುಚ್ಚರನ್ನಾಗಿ ಮಾಡುವನು.
\q
\v 18 ಅರಸರು ಹಾಕಿದ ಬಂಧನವನ್ನು ಬಿಚ್ಚಿಬಿಟ್ಟು
\q ಅವರ ಸೊಂಟಕ್ಕೆ ನಡುಕಟ್ಟನ್ನು ಬಿಗಿಯುವನು.
\s5
\q
\v 19 ಯಾಜಕರನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು,
\q ಪ್ರಧಾನರನ್ನು ದೊಬ್ಬಿಬಿಡುವನು.
\q
\v 20 ಆಲೋಚನಾಕರ್ತರ ವಾಕ್ಚಾತುರ್ಯವನ್ನು ಕುಗ್ಗಿಸುತ್ತಾನೆ,
\q ಹಿರಿಯರ ವಿವೇಕವನ್ನು ತೆಗೆದುಹಾಕುವನು.
\q
\v 21 ಪ್ರಭುಗಳಿಗೆ ಅವಮಾನವನ್ನು ಉಂಟುಮಾಡಿ
\q ಬಲಿಷ್ಠರ ನಡುಕಟ್ಟನ್ನು ಸಡಿಲಿಸುವನು.
\s5
\q
\v 22 ಅಗಾಧ ವಿಷಯಗಳನ್ನು ಕತ್ತಲೊಳಗಿಂದ ಬಯಲಿಗೆ ತಂದು
\q ಗಾಢಾಂಧಕಾರವನ್ನು ಪ್ರಕಾಶಗೊಳಿಸುವನು.
\q
\v 23 ಜನಾಂಗಗಳನ್ನು ವೃದ್ಧಿಗೊಳಿಸಿ ನಾಶಪಡಿಸುವನು,
\q ಅವುಗಳನ್ನು ವಿಸ್ತರಿಸಿ ಗಡೀಪಾರುಮಾಡುವನು.
\s5
\q
\v 24 ಪ್ರಜಾಪ್ರಮುಖರ ಬುದ್ಧಿಯನ್ನು ತೊಲಗಿಸಿ,
\q ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವನು.
\q
\v 25 ಅವರು ಬೆಳಕಿಲ್ಲದ ಕತ್ತಲಲ್ಲಿ ತಡಕಾಡುವರು;
\q ಅವರನ್ನು ಅಮಲೇರಿದವರಂತೆ ಓಲಾಡಿಸಿ ತಡವರಿಸುವಂತೆ ಮಾಡುವನು.>>
\s5
\c 13
\s ಯೋಬನ ಪ್ರತ್ಯುತ್ತರದ ಮುಂದುವರಿಕೆ
\q
\v 1 ಇಗೋ, ಇವುಗಳನ್ನೆಲ್ಲಾ ನನ್ನ ಕಣ್ಣು ಕಂಡಿದೆ,
\q ಕಿವಿಯು ಕೇಳಿ ಗ್ರಹಿಸಿದೆ.
\q
\v 2 ನೀವು ತಿಳಿದಿರುವುದನ್ನು ನಾನೂ ತಿಳಿದಿದ್ದೇನೆ.
\q ನಿಮಗಿಂತ ನಾನು ಕಡೆಯಲ್ಲ.
\s5
\q
\v 3 ಆದರೆ ನಾನು ಸರ್ವಶಕ್ತನಾದ ದೇವರ ಸಂಗಡ ಮಾತನಾಡಬೇಕು,
\q ದೇವರೊಂದಿಗೆ ವಾದಿಸಲು ಅಪೇಕ್ಷಿಸುತ್ತೇನೆ.
\q
\v 4 ನೀವಾದರೋ ಸುಳ್ಳನ್ನು ಪ್ರತಿಪಾದಿಸುವವರಾಗಿದ್ದೀರಿ,
\q ನೀವೆಲ್ಲರೂ ವ್ಯರ್ಥ ವೈದ್ಯರೇ.
\q
\v 5 ನೀವು ಬಾಯಿಮುಚ್ಚಿ ಸುಮ್ಮನಾದರೆ ಎಷ್ಟೋ ಉತ್ತಮ!
\q ಮೌನವೇ ನಿಮಗೆ ಜ್ಞಾನವು.
\s5
\q
\v 6 ದಯಮಾಡಿ ನನ್ನ ಆಕ್ಷೇಪಣೆಯನ್ನು ಕೇಳಿರಿ,
\q ನನ್ನ ತುಟಿಗಳ ವಾದಕ್ಕೆ ಕಿವಿಗೊಡಿರಿ.
\q
\v 7 ದೇವರ ಪಕ್ಷವಾಗಿ ಅನ್ಯಾಯವನ್ನು ನುಡಿಯುವಿರೋ?
\q ಆತನಿಗೋಸ್ಕರ ಮೋಸದ ಮಾತುಗಳನ್ನಾಡುವಿರೋ?
\q
\v 8 ಆತನಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ?
\q ದೇವರಿಗಾಗಿ ವಾದಿಸುವಿರಾ?
\s5
\q
\v 9 ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೆಯದಾಗುವುದೋ?
\q ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ?
\q
\v 10 ನೀವು ರಹಸ್ಯವಾಗಿ ಪಕ್ಷಪಾತ ಮಾಡಿದರೆ ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
\s5
\q
\v 11 ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೋ?
\q ಆತನ ಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
\q
\v 12 ನಿಮ್ಮ ಸ್ಮೃತಿಗಳು ಬೂದಿಗೆ ಸಮಾನವಾದ ಉದಾಹರಣೆ;
\q ನಿಮ್ಮ ಕೋಟೆಯು ಬರೀ ಮಣ್ಣಿನದೇ.
\s5
\q
\v 13 ಸುಮ್ಮನಿರಿ, ನನ್ನನ್ನು ಬಿಡಿರಿ, ನಾನು ಮಾತನಾಡಬೇಕು,
\q ನನಗೇನಾದರೂ ಆಗಲಿ.
\q
\v 14 ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು,
\q ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
\q
\v 15 ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ,
\q ಆದರೂ ನನ್ನ ನಡತೆಯ ಒಳ್ಳೆಯತನವನ್ನು ಆತನ ಮುಂದೆ ಸ್ಥಾಪಿಸುವೆನು.
\s5
\q
\v 16 ಭ್ರಷ್ಟನು ಆತನ ಮುಂದೆ ಬರುವುದಿಲ್ಲವೆಂಬುದೇ,
\q ನಾನು ರಕ್ಷಣೆಯನ್ನು ಹೊಂದುವೆನೆಂಬುವುದಕ್ಕೆ ಆಧಾರವಾಗಿದೆ.
\q
\v 17 ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ, ನನ್ನ ಅರಿಕೆಗೆ ಕಿವಿಗೊಡಿರಿ.
\s5
\q
\v 18 ಇಗೋ, ನನ್ನ ನ್ಯಾಯವನ್ನು ಸಿದ್ಧಪಡಿಸಿದ್ದೇನೆ;
\q ನಾನು ನೀತಿವಂತನೆಂಬುದಾಗಿ ನಿರ್ಣಯವಾಗುವುದೆಂದು ನನಗೆ ಗೊತ್ತೇ ಇದೆ.
\q
\v 19 ನನಗೆ ಪ್ರತಿವಾದಿ ಇದ್ದಾನೋ?
\q ಇದ್ದರೆ, ನಾನು ನನ್ನನ್ನು ನಿನ್ನ ದೃಷ್ಟಿಗೆ ಮರೆಮಾಡಿಕೊಂಡು, ಮೌನನಾಗಿ ಪ್ರಾಣಬಿಡುವೆನು.
\s5
\q
\v 20 ಈ ನನ್ನೆರಡು ಕೋರಿಕೆಗಳನ್ನು ಈಡೇರಿಸು.
\q ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳುವುದಿಲ್ಲ.
\q
\v 21 ನನ್ನ ಮೇಲೆತ್ತಿರುವ ನಿನ್ನ ಕೈಯನ್ನು ದೂರಮಾಡು,
\q ನಿನ್ನ ಭಯವು ನನ್ನನ್ನು ಹೆದರಿಸದಿರಲಿ.
\q
\v 22 ಆಗ ನೀನು ಕರೆದರೆ ನಾನು ಉತ್ತರಕೊಡುವೆನು,
\q ಇಲ್ಲವೆ ನಾನು ಮಾತನಾಡುವೆ, ನೀನು ಉತ್ತರಕೊಡು.
\s5
\q
\v 23 ನನ್ನ ಪಾಪದೋಷಗಳೆಷ್ಟು?
\q ನನ್ನ ಪಾಪವನ್ನೂ, ದ್ರೋಹವನ್ನೂ ನನಗೆ ತಿಳಿಯಪಡಿಸು.
\q
\v 24 ಏಕೆ ನಿನ್ನ ಮುಖವನ್ನು ಮರೆಮಾಡುತ್ತಿ?
\q ನನ್ನನ್ನು ಶತ್ರುವೆಂದೆಣಿಸಿರುವುದೇಕೆ?
\q
\v 25 ಹಾರಿಹೋಗುವ ಎಲೆಯನ್ನು ನಡುಗಿಸುವಿಯಾ?
\q ಒಣಗಿದ ಹೊಟ್ಟನ್ನು ಅಟ್ಟಿಬಿಡುವಿಯಾ?
\s5
\q
\v 26 ನನ್ನ ವಿಷಯವಾಗಿ ಕಠಿಣವಾದ ತೀರ್ಪುಗಳನ್ನು ಬರೆದು,
\q ನನ್ನ ಯೌವನದ ಪಾಪಗಳ ಬಾಧ್ಯತೆಯನ್ನು ನನಗೆ ಕೊಟ್ಟಿದ್ದಿ.
\q
\v 27 ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿದ್ದಿ;
\q ನನ್ನ ದಾರಿಗಳನ್ನೆಲ್ಲಾ ಮನದಟ್ಟುಮಾಡಿ ನನ್ನ ಹೆಜ್ಜೆಗಳ ಸುತ್ತಲೂ ಗೆರೆಯೆಳೆದಿದ್ದಿ.
\q
\v 28 ಕೊಳೆಯುವ ಪದಾರ್ಥದಂತೆಯೂ,
\q ನುಸಿ ಹಿಡಿದ ಬಟ್ಟೆಯ ಹಾಗೂ ಕ್ಷಯಿಸಿಹೋಗುತ್ತಿದ್ದೇನೆ.
\s5
\c 14
\s ಯೋಬನು ದೇವರೊಂದಿಗೆ ಪ್ರಾರ್ಥಿಸಿದ್ದು
\q
\v 1 <<ಮಾನವ ಜನ್ಮ ಪಡೆದವನು,
\q ಅಲ್ಪಾಯುಷ್ಯನಾಗಿಯೂ, ಕಳವಳದಿಂದ ತುಂಬಿದವನಾಗಿಯೂ ಇರುವನು.
\q
\v 2 ಹೂವಿನ ಹಾಗೆ ಅರಳಿ ಬಾಡುವನು,
\q ನೆರಳಿನಂತೆ ನಿಲ್ಲದೆ ಓಡಿಹೋಗುವನು.
\q
\v 3 ನೀನು ಇಂಥವನಾದ ನನ್ನ ಮೇಲೆ ಕಣ್ಣಿಟ್ಟು,
\q ನಿನ್ನ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುವಿಯಾ?
\s5
\q
\v 4 ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
\q
\v 5 ಮನುಷ್ಯನ ದಿನಗಳು ಇಷ್ಟೇ ಎಂಬುದು ತೀರ್ಮಾನವಾಗಿದೆಯಲ್ಲಾ;
\q ಅವನ ತಿಂಗಳುಗಳ ಲೆಕ್ಕವು ನಿನಗೆ ಗೊತ್ತು;
\q ದಾಟಲಾರದ ಗಡಿಗಳನ್ನು ಅವನಿಗೆ ನೇಮಿಸಿದ್ದಿ.
\q
\v 6 ನಿನ್ನ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸು,
\q ಅವನಿಗೆ ಸ್ವಲ್ಪ ವಿರಾಮವಿರಲಿ, ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.
\s ಮರಣದ ಅನಿವಾರ್ಯತೆ
\s5
\q
\v 7 ಕಡಿದ ಮರವೂ,
\q ತಾನು ಮೊಳೆಯುವುದನ್ನು ನಿಲ್ಲಿಸದೆ,
\q ಮತ್ತೆ ಚಿಗುರುವೆನೆಂದು ನಿರೀಕ್ಷಿಸುತ್ತದಲ್ಲವೇ!
\q
\v 8 ನೆಲದಲ್ಲಿ ಅದರ ಬೇರು ಹಳೆಯದಾದರೂ,
\q ಮಣ್ಣಿನಲ್ಲಿ ಸತ್ತರೂ,
\q
\v 9 ಮಳೆ ನೀರಿನ ವಾಸನೆಯಿಂದಲೇ ಅದು ಮೊಳೆತು, ಚಿಗುರಿ
\q ಗಿಡದ ಹಾಗೆ ಕವಲೊಡೆಯುವುದು.
\s5
\q
\v 10 ಮನುಷ್ಯನಾದರೋ ಸತ್ತು ಬೋರಲುಬೀಳುವನು,
\q ಪ್ರಾಣಹೋಗಲು ಅವನ ಅಂತ್ಯವಾಗುತ್ತದೆ.
\q
\v 11 ಸರೋವರದ ನೀರು ಬತ್ತುವಂತೆ,
\q ನದಿಯ ನೀರು ಆವಿಯಾಗಿ ಒಣಗುವ ಹಾಗೆ,
\q
\v 12 ಮನುಷ್ಯರು ಮಲಗಿಕೊಂಡು ಏಳದೇ ಇರುವರು;
\q ಆಕಾಶವು ಅಳಿದು ಹೋಗುವ ತನಕ ಅವರು ನಿದ್ರೆಯನ್ನು,
\q ತಿಳಿಯುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.
\s5
\q
\v 13 ನಿನ್ನ ಕೋಪವು ಇಳಿಯುವ ವರೆಗೆ ನನ್ನನ್ನು ಮರೆಮಾಡಿ,
\q ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು,
\q ನನಗೆ ಅವಧಿಯನ್ನು ಗೊತ್ತುಮಾಡಿ ಕಡೆಯಲ್ಲಿ ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!
\q
\v 14 ಒಬ್ಬ ಮನುಷ್ಯನು ಸತ್ತು ಪುನಃ ಬದುಕುವನೇ?
\q ಹಾಗಾಗುವುದಾದರೆ ನನಗೆ ಬಿಡುಗಡೆಯಾಗುವವರೆಗೆ,
\q ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.
\s5
\q
\v 15 ನೀನು ಕರೆದರೆ ಉತ್ತರಕೊಡುವೆನು,
\q ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಪ್ರೀತಿ ಹುಟ್ಟೀತು.
\q
\v 16 ಈಗ ನೀನು ನನ್ನ ಹೆಜ್ಜೆಗಳನ್ನು ಲೆಕ್ಕಿಸಿ,
\q ನನ್ನ ಪಾಪದ ಮೇಲೆ ಕಾವಲಾಗಿದ್ದೀಯಲ್ಲಾ!
\q
\v 17 ನನ್ನ ದ್ರೋಹವನ್ನು ಚೀಲದಲ್ಲಿಟ್ಟು ಮುದ್ರಿಸಿ,
\q ನನ್ನ ದೋಷವನ್ನು ಭದ್ರವಾಗಿ ಕಟ್ಟಿದ್ದೀ.
\s5
\q
\v 18 ಆದರೆ ಪರ್ವತವೂ ಬಿದ್ದು ಕರಗಿಹೋಗುವುದು,
\q ಬಂಡೆಯು ತನ್ನ ಸ್ಥಳದಿಂದ ಜರುಗುವುದು,
\q
\v 19 ನೀರು ಕಲ್ಲುಗಳನ್ನು ಸವೆಯಿಸುವುದು,
\q ಜಲಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವವು.
\q ಹೀಗೆಯೇ ಮನುಷ್ಯರ ನಿರೀಕ್ಷೆಯನ್ನು ಹಾಳುಮಾಡುವಿ.
\s5
\q
\v 20 ನೀನು ಅವನಿಗೆ ಶಾಶ್ವತವಾದ ಅಪಜಯವನ್ನುಂಟು ಮಾಡಿದ್ದರಿಂದ ಅವನು ಗತಿಸಿ ಹೋಗುವನು.
\q ನೀನು ಅವನ ಮುಖವನ್ನು ಮಾರ್ಪಡಿಸಿ ಅವನನ್ನು ತೊಲಗಿಸಿಬಿಡುವಿ.
\q
\v 21 ಅವನ ಮಕ್ಕಳು ಘನತೆಯನ್ನು ಹೊಂದುವುದು ಅವನಿಗೆ ತಿಳಿಯುವುದಿಲ್ಲ.
\q ಅವರು ಅಧೋಗತಿಗೆ ಗುರಿಯಾದರೂ ಅವನಿಗೆ ಗೋಚರವಾಗುವುದಿಲ್ಲ.
\q
\v 22 ಆದರೂ ಅವನ ದೇಹದ ಕಣಕಣವು ನೋವನ್ನು ಅನುಭವಿಸುವುದು,
\q ಅವನ ಆತ್ಮವು ಪ್ರಲಾಪಿಸುವುದು.>>
\s5
\c 15
\s ಎಲೀಫಜನು ಯೋಬನಿಗೆ ನೀಡಿದ ಎರಡನೆಯ ಪ್ರತ್ಯುತ್ತರ
\p
\v 1 ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
\q
\v 2 <<ಜ್ಞಾನಿಯು ತನ್ನ ಹೊಟ್ಟೆಯಲ್ಲಿ ಮೂಡಣ ಗಾಳಿಯನ್ನು ತುಂಬಿಕೊಂಡು,
\q ಶೂನ್ಯವಾದ ತಿಳಿವಳಿಕೆಯಿಂದ ಮಾತನಾಡಬಹುದೇ?
\q
\v 3 ಪ್ರಯೋಜನವಿಲ್ಲದ ನುಡಿಯಿಂದಲೂ,
\q ಫಲವಿಲ್ಲದ ವಾಕ್ಯಗಳಿಂದಲೂ ತರ್ಕಿಸುವುದು ಯುಕ್ತವೋ?
\s5
\q
\v 4 ಇದಲ್ಲದೆ ನೀನು ದೇವರ ಭಯವನ್ನು ಹಾಳುಮಾಡುತ್ತಿರುವೆ,
\q ನೀನು ನನ್ನನ್ನು ಪಾತಾಳಕ್ಕೆ ತಳ್ಳಿ ನನ್ನ ದೇವಭಕ್ತಿಯನ್ನು ಕ್ಷಯಗೊಳಿಸುತ್ತೀ.
\q
\v 5 ನಿನ್ನ ಪಾಪವೇ ನಿನಗೆ ಮಾತುಗಳನ್ನು ಕಲಿಸಿಕೊಡುತ್ತದೆ.
\q ಕಪಟಿಗಳು ಆಡುವ ಭಾಷೆಯನ್ನು ಆರಿಸಿಕೊಂಡಿದ್ದಿ.
\q
\v 6 ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ,
\q ನಿನ್ನ ಮಾತುಗಳು ಕೂಡ ನಿನಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ, ನಿನ್ನನ್ನು ಅಪರಾಧಿಯನ್ನಾಗಿಸುತ್ತದೆ.
\s5
\q
\v 7 ನೀನು ಆದಿಪುರುಷನೋ?
\q ಬೆಟ್ಟಗಳಿಗಿಂತ ಮುಂಚೆ ಹುಟ್ಟಿದವನೋ?
\q
\v 8 ದೇವರ ಆಲೋಚನಾ ಸಭೆಯಲ್ಲಿದ್ದುಕೊಂಡು ಅಲ್ಲಿ ಹೇಳಿದ್ದನ್ನು ಕೇಳಿದ್ದೀಯಾ?
\q ಜ್ಞಾನವನ್ನೆಲ್ಲಾ ನಿನ್ನ ಕಡೆಗೆ ಸೆಳೆದುಕೊಂಡಿದ್ದೀಯಾ?
\q
\v 9 ನಮಗೆ ತಿಳಿಯದಿರುವ ಯಾವ ವಿಷಯ ಗೊತ್ತಿದೆ?
\q ನಮ್ಮಲ್ಲಿಲ್ಲದ ಯಾವ ಸಂಗತಿಯನ್ನು ಗ್ರಹಿಸಿದ್ದೀ?
\s5
\q
\v 10 ತಲೆನರೆತು ನಿನ್ನ ತಂದೆಗಿಂತ
\q ವೃದ್ಧನಾದ ಮುದುಕನು ನಮ್ಮಲ್ಲಿದ್ದಾನೆ.
\q
\v 11 ದೇವರ ಆದರಣೆಗಳೂ,
\q ನಿನಗೆ ದೊರೆತ ಶಾಂತಿಯ ಮಾತುಗಳೂ ಸಾಲುವುದಿಲ್ಲವೇ?
\s5
\q
\v 12 ನಿನ್ನ ಹೃದಯವು ಏಕೆ ನಿನ್ನನ್ನು ಸೆಳೆದುಕೊಂಡು ಹೋಗುವುದು?
\q ನಿನ್ನ ಕಣ್ಣುಗಳು ಕಿಡಿಕಿಡಿಯಾಗುವುದೇಕೆ?
\q
\v 13 ನೀನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ವ್ಯರ್ಥವಾದ
\q ಮಾತುಗಳನ್ನು ಸುಮ್ಮನೆ ಸುರಿಸುತ್ತೀಯಲ್ಲಾ!
\q
\v 14 ನರನು ಎಷ್ಟರವನು! ಅವನು ಪರಿಶುದ್ಧನಾಗಿರುವುದು ಸಾಧ್ಯವೋ?
\q ಮಾನವನಾಗಿ ಹುಟ್ಟಿದವನು ನೀತಿವಂತನಾಗಿರಬಹುದೇ?
\s5
\q
\v 15 ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವುದಿಲ್ಲ,
\q ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.
\q
\v 16 ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ,
\q ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!
\s5
\q
\v 17 ಕೇಳು, ನಾನು ಒಂದು ಸಂಗತಿಯನ್ನು ತಿಳಿಸುವೆನು,
\q ಕಂಡದ್ದನ್ನೇ ವಿವರಿಸುವೆನು.
\q
\v 18 ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲಿ ಪರದೇಶಿಯರು ಅವರ
\q ನಾಡನ್ನು ಹಾದುಹೋಗುವಂತಿರಲಿಲ್ಲ.
\s5
\q
\v 19 ಇದೇ ಸಂಗತಿಯನ್ನು ತಮ್ಮ ಪೂರ್ವಿಕರಿಂದ ಕೇಳಿ, ಕಲಿತದ್ದದನ್ನು
\q ಮರೆಮಾಡದೆ ಪ್ರಕಟಿಸಿದ್ದಾರೆ.
\q
\v 20 ಹಿಂಸಕನಿಗೆ ಎಷ್ಟು ವರ್ಷಗಳು ನೇಮಕವಾಗಿವೆಯೋ,
\q ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.
\q
\v 21 ಭಯ ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವುದು,
\q ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.
\s5
\q
\v 22 ಕತ್ತಲೊಳಗಿಂದ ತಾನು ಹಿಂದಿರುಗುತ್ತೇನೆಂದು ಅವನು ನಂಬುವುದಿಲ್ಲ;
\q ಅವನ ಕತ್ತಿಯು ಅವನಿಗಾಗಿ ಕಾದಿದೆ.
\q
\v 23 <ರೊಟ್ಟಿ ಎಲ್ಲಿ?> ಎಂದು ಹುಡುಕುತ್ತಾ ಅಲೆದಾಡುವನೆಂಬುದಾಗಿ ನಿಶ್ಚಯಿಸಿಕೊಂಡು,
\q ಆ ಕತ್ತಲಿನ ದಿನವು ತನ್ನ ಪಕ್ಕದಲ್ಲಿ ಸಿದ್ಧವಾಗಿದೆ ಎಂದು ತಿಳಿದುಕೊಂಡಿರುವನು.
\q
\v 24 ಸಂಕಟವೂ, ಪೇಚಾಟವೂ ಯುದ್ಧಸನ್ನದ್ಧ ರಾಜರಂತೆ
\q ಅವನನ್ನು ಹೆದರಿಸಿ ಸೋಲಿಸುವವು.
\s5
\q
\v 25 ಅವನು ದೇವರಿಗೆ ವಿರುದ್ಧವಾಗಿ ಕೈಚಾಚಿ
\q ಸರ್ವಶಕ್ತನಾದ ದೇವರ ಎದುರು ನಿಂತು ಶೂರನಂತೆ ಮೆರೆದನಲ್ಲಾ.
\q
\v 26 ದೊಡ್ಡ ಬಲವುಳ್ಳ ಗುರಾಣಿಯನ್ನು ಹಿಡಿದು ತಲೆ ನಿಮಿರಿಸಿ
\q ಆತನ ಮೇಲೆ ಬೀಳಬೇಕೆಂದು ಓಡಿದನು.
\s5
\q
\v 27 ಅವನು ಮುಖದಲ್ಲಿ ಕೊಬ್ಬೇರಿಸಿಕೊಂಡು
\q ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದನು.
\q
\v 28 ಅವನು ಹಾಳು ಪಟ್ಟಣಗಳಲ್ಲಿ ಸೇರಿಕೊಂಡು,
\q <ದಿಬ್ಬಗಳಾಗಿ ಹೋಗಲಿ ಯಾರೂ ವಾಸಿಸದಿರಲಿ> ಎಂದು
\q ಶಾಪಹೊಂದಿದ ಮನೆಗಳೊಳಗೆ ವಾಸವಾಗಿದ್ದನು.
\s5
\q
\v 29 ಇಂಥವನು ಐಶ್ವರ್ಯವಂತನಾಗುವುದಿಲ್ಲ,
\q ಅವನ ಆಸ್ತಿಯು ಸ್ಥಿರವಾಗಿ ನಿಲ್ಲದು. ಅವನ ಪ್ರತಿ ಫಲವು ಭಾರದಿಂದ ಭೂಮಿಯ ಕಡೆಗೆ ಬಾಗುವುದಿಲ್ಲ.
\q
\v 30 ಕತ್ತಲೊಳಗಿಂದ ಅವನು ಪಾರಾಗುವುದಿಲ್ಲ,
\q ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು,
\q ದೇವರ ಶ್ವಾಸದಿಂದ ಒಣಗಿ ಹೋಗುವನು.
\s5
\q
\v 31 ಅವನು ಭ್ರಮೆಗೊಂಡು ಶೂನ್ಯವಾದದ್ದರ ಮೇಲೆ ನಂಬಿಕೆಯಿಡದಿರಲಿ,
\q ಇಟ್ಟರೆ ಅವನಿಗಾಗುವ ಪ್ರತಿಫಲವು ಶೂನ್ಯವೇ,
\q
\v 32 ಅವನ ಕಾಲವು ಕೊನೆಮುಟ್ಟುವುದಕ್ಕೆ ಮೊದಲೇ ಆ ಪ್ರತಿಫಲವು ತಲುಪಿಬಿಡುವುದು.
\q ಅವನ ಕೊಂಬೆಯು ಹಸುರಾಗಿರುವುದಿಲ್ಲ,
\q
\v 33 ಮಾಗದ ಹಣ್ಣುಗಳನ್ನು ಕಳೆದುಕೊಂಡ ದ್ರಾಕ್ಷಿಯ ಬಳ್ಳಿಯಂತೆ ಇರುವನು,
\q ಎಣ್ಣೆಯ ಮರದ ಹಾಗೆ ತನ್ನ ಹೂವುಗಳನ್ನು ಉದುರಿಸಿಬಿಡುವನು.
\s5
\q
\v 34 ಭ್ರಷ್ಟರ ಸಂಘವು ನಿರರ್ಥಕ,
\q ಬೆಂಕಿಯು ಲಂಚಕೋರರ ಗುಡಾರಗಳನ್ನು ಸುಟ್ಟು ಹಾಕುವುದು.
\q
\v 35 ಅವರು ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುವರು,
\q ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.>>
\s5
\c 16
\s ಯೋಬನ ಐದನೆಯ ಸಂಭಾಷಣೆ: ಎಲೀಫಜನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಹೀಗೆ ಉತ್ತರಕೊಟ್ಟನು,
\q
\v 2 <<ಇಂಥಾ ಮಾತುಗಳನ್ನು ಬಹಳವಾಗಿ ಕೇಳಿದ್ದೇನೆ,
\q ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಮಾತನಾಡುವಿರಿ.
\q ಆದರಣೆಗೆ ಬದಲಾಗಿ ಬಾಧಿಸುವವರು ನೀವು.
\q
\v 3 ನೀವಾಡುವ ಒಣಮಾತುಗಳಿಗೆ ಇತಿಮಿತಿ ಇಲ್ಲವೇ?
\q ಇಂತಹ ಮಾತನಾಡಲು ಒತ್ತಾಯಪಡಿಸಿದ್ದೇನೆಯೇ?
\s5
\q
\v 4 ನಾನೂ ನಿಮ್ಮ ಹಾಗೆ ಮಾತನಾಡಬಲ್ಲೆನು;
\q ನಾನು ನಿಮ್ಮಂತೆ ಇದ್ದಿದ್ದರೆ,
\q ನಾನು ನಿಮ್ಮ ವಿರುದ್ಧವಾಗಿ ಮಾತುಗಳನ್ನು ಹೆಣೆದು
\q ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
\q
\v 5 ನಾನೂ ಬಾಯಿಮಾತಿಗಾಗಿ ನಿಮ್ಮನ್ನು ಧೈರ್ಯಗೊಳಿಸಿ,
\q ತುಟಿಗಳ ಆದರಣೆಯಿಂದ ನಿಮ್ಮ ದುಃಖವನ್ನು ಶಮನಪಡಿಸಬಹುದಾಗಿತ್ತು.
\s5
\q
\v 6 ನಾನು ಮಾತನಾಡಿದರೂ,
\q ನನ್ನ ಮನೋವ್ಯಥೆಯು ಶಾಂತವಾಗುವುದಿಲ್ಲ.
\q ಸುಮ್ಮನಾದರೂ, ಕಷ್ಟ ನಿವಾರಣೆಯಾಗುವುದಿಲ್ಲ.
\q
\v 7 ಆದರೆ ಈಗ ಆತನು ನನ್ನನ್ನು ಕುಂದಿಸಿದ್ದಾನೆ;
\q (ದೇವಾ) ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದಿ.
\q
\v 8 ನೀನು ನನ್ನನ್ನು ಹಿಡಿದಿರುವುದು ನನಗೆ ಪ್ರತಿಸಾಕ್ಷಿಯಾಗಿದೆ,
\q ನನ್ನ ಬಲಹೀನವು ನನ್ನ ವಿರುದ್ಧವಾಗಿ
\q ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
\s5
\q
\v 9 ಆತನ ಸಿಟ್ಟು ನನ್ನನ್ನು ಸೀಳಿ ಹಿಂಸಿಸುತ್ತಿದೆ; ಆತನು ನನ್ನ ಮೇಲೆ ಹಲ್ಲು ಕಡಿದಿದ್ದಾನೆ, ಆತನು ನನ್ನ ಮೇಲೆ ದೃಷ್ಟಿಯನ್ನು ತೀಕ್ಷ್ಣ ಮಾಡಿದ್ದಾನೆ.
\q
\v 10 ನನಗೆ ವಿರುದ್ಧವಾಗಿ ಹಲವರು ಗುಂಪುಕೂಡಿ
\q ನನ್ನನ್ನು ಅಣಕಿಸಿ ಛೀಮಾರಿ ಹಾಕಿ,
\q ನನ್ನ ದವಡೆಯ ಮೇಲೆ ಬಡಿದಿದ್ದಾರೆ.
\s5
\q
\v 11 ದೇವರು ನನ್ನನ್ನು ಅಪರಿಶುದ್ಧರಿಗೆ ಒಪ್ಪಿಸಿ,
\q ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾನೆ.
\q
\v 12 ನಾನು ನೆಮ್ಮದಿಯಿಂದ್ದಾಗ ಆತನು ನನ್ನನ್ನು ಒಡೆದು ಹಾಕಿದನು;
\q ಕತ್ತುಹಿಡಿದು ನನ್ನನ್ನು ಚೂರು ಚೂರು ಮಾಡಿದನು. ಬಾಣ ಪ್ರಯೋಗಿಸಲು
\q ನನ್ನನ್ನು ಗುರಿಮಾಡಿಕೊಂಡಿದ್ದಾನೆ.
\s5
\q
\v 13 ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ.
\q ಆತನು ಕರುಣೆಯಿಲ್ಲದೆ ನನ್ನ ಅಂತರಂಗವನ್ನು ಇರಿದು,
\q ಭೂಮಿಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
\q
\v 14 ಮೇಲಿಂದ ಮೇಲೆ ನನಗೆ ಪೆಟ್ಟುಕೊಟ್ಟು ನನ್ನನ್ನು ಶಕ್ತಿಹೀನನಾಗಿ ಮಾಡಿದ್ದಾನೆ
\q ಶೂರನ ಹಾಗೆ ನನ್ನ ಮೇಲೆ ಎರಗುತ್ತಾನೆ.
\s5
\q
\v 15 ಗೋಣಿಯನ್ನು ಹೊಲೆದು ಮೈಮೇಲೆ ಹಾಕಿಕೊಂಡಿದ್ದೇನೆ;
\q ನನ್ನ ಕೊಂಬನ್ನು ಧೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.
\q
\v 16 ಕಣ್ಣೀರು ಸುರಿಯುವುದರಿಂದ ನನ್ನ ಮುಖವು ಕೆಂಪಾಗಿ ಹೋಗಿದೆ.
\q ರೆಪ್ಪೆಯ ಮೇಲೆ ಮರಣಾಂಧಕಾರವು ಕವಿದಿದೆ.
\q
\v 17 ಆದರೆ ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿಲ್ಲವಲ್ಲಾ,
\q ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.
\s5
\q
\v 18 ಭೂಮಿಯೇ, ನನ್ನ ರಕ್ತವನ್ನು
\f +
\fr 16:18
\fq ನನ್ನ ರಕ್ತವನ್ನು
\ft ಅಥವಾ ನನಗೆ ಮಾಡಿದ ಅಪರಾಧಗಳನ್ನು.
\f* ಮುಚ್ಚಬೇಡ!
\q ನನ್ನ ಮೊರೆಗೆ ಬಿಡುವು ಸಿಕ್ಕದಿರಲಿ!
\q
\v 19 ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು,
\q ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.
\s5
\q
\v 20 ಗೆಳೆಯರೋ ನನ್ನನ್ನು ಹೀನೈಸುವವರಾಗಿದ್ದಾರೆ,
\q ನಾನಾದರೋ ದೇವರ ಮುಂದೆ ಕಣ್ಣೀರು ಸುರಿಸುತ್ತಿರುವೆನು.
\q
\v 21 ನನ್ನ ನ್ಯಾಯವನ್ನು ದೇವರ ಮುಂದೆಯೂ,
\q ಮಾನವನ ನ್ಯಾಯವನ್ನು ಅವನ ಮಿತ್ರನ ಮುಂದೆಯೂ ಸ್ಥಾಪಿಸಲಿ ಎಂದು ದೇವರಿಗೆ ಕಣ್ಣೀರು ಸುರಿಸುತ್ತೇನೆ.
\q
\v 22 ನಾನು ಹಿಂದಿರುಗದ ದಾರಿಯನ್ನು,
\q ಕೆಲವು ವರ್ಷಗಳೊಳಗೆ ಹಿಡಿಯುವೆನು.>>
\s5
\c 17
\s ಯೋಬನ ಪ್ರತ್ಯುತ್ತರದ ಮುಂದುವರಿಕೆ
\q
\v 1 <<ನನ್ನ ಉಸಿರು ಕಟ್ಟುತ್ತಿದೆ
\f +
\fr 17:1
\fq ನನ್ನ ಉಸಿರು ಕಟ್ಟುತ್ತಿದೆ
\ft ಅಥವಾ ನನ್ನ ಆತ್ಮವು ಒಡೆದುಹೋಗಿದೆ.
\f* , ನನ್ನ ಆಯಷ್ಕಾಲವು
\f +
\fr 17:1
\fq ಆಯಷ್ಕಾಲವು
\ft ಅಥವಾ ದಿನಗಳು.
\f* ಮುಗಿದಿವೆ,
\q ಗೋರಿಯು ನನಗಾಗಿ ಕಾದಿದೆ.
\q
\v 2 ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ,
\q ಅವರ ಕೆಣಕಾಟವು ಯಾವಾಗಲೂ ನನ್ನ ಕಣ್ಣಿನ ಮುಂದೆ ಇದೆ.
\q
\v 3 ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು,
\q ನನ್ನ ಕೈ ಮೇಲೆ ಕೈ ಹಾಕತಕ್ಕವರು ನನಗೆ ಇನ್ನಾರೂ ಇಲ್ಲ.
\s5
\q
\v 4 ವಿವೇಕವು ಪ್ರವೇಶಿಸದಂತೆ;
\q ಅವರ ಮನಸ್ಸನ್ನು, ಹೃದಯವನ್ನು ಮುಚ್ಚಿರುವೆ, ಹೀಗೆ ಅವರು ಜಯಶೀಲರಾಗದಂತೆ ತಡೆಯುವೆ.
\q
\v 5 ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ,
\q ಅವನ ಮಕ್ಕಳು ಕಂಗೆಡುವರು.
\s5
\q
\v 6 ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ,
\q ಜನರ ಉಗುಳಿಗೆ ನನ್ನ ಮುಖ ಗುರಿಯಾಗಿದೆ.
\q
\v 7 ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ,
\q ನನ್ನ ಅಂಗಗಳೆಲ್ಲಾ ನೆರಳಿನಂತೆ ನಿಸ್ಸಾರವಾಗಿವೆ.
\q
\v 8 ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ,
\q ಮತ್ತು ನಿರಪರಾಧಿಯು ಭ್ರಷ್ಟನ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
\s5
\q
\v 9 ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು,
\q ಶುದ್ಧಹಸ್ತನು ಬಲಗೊಳ್ಳುತ್ತಲೇ ಇರುವನು.
\q
\v 10 ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ,
\q ನಿಮ್ಮಲ್ಲಿ ಒಬ್ಬ ಜ್ಞಾನಿಯನ್ನಾದರೂ ಕಾಣೆನು.
\s5
\q
\v 11 ನನ್ನ ದಿನಗಳು ಮುಗಿದುಹೋದವು.
\q ನನ್ನ ಉದ್ದೇಶಗಳೂ, ನನ್ನ ಹೃದಯದ ಆಶೆಗಳೂ ಭಂಗವಾದವು.
\q
\v 12 ಇವರು ಇರುಳನ್ನು ಹಗಲೆಂದು ಸಾಧಿಸಿ,
\q ಕತ್ತಲಿಂದ ಬೆಳಕು ಬೇಗನೆ ಬರುವುದೆಂದು ತಿಳಿಸುತ್ತಾರೆ.
\s5
\q
\v 13 ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ,
\q ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ.
\q
\v 14 ಸಮಾಧಿಯನ್ನು, <ನೀನು, ನನ್ನ ತಂದೆ>
\q ಎಂದೂ ಹುಳವನ್ನು, <ನನ್ನ ತಾಯಿ, ನನ್ನ ತಂಗಿ> ಎಂದೂ ಕರೆಯುವುದಾದರೆ,
\q
\v 15 ನನ್ನ ನಿರೀಕ್ಷೆ ಎಂಥದು?
\q ನನ್ನ ನಿರೀಕ್ಷೆಯನ್ನು ಯಾರು ನೋಡುವರು?
\q
\v 16 ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ?
\q ನಾವು ಜೊತೆಯಾಗಿ ಧೂಳಿಗೆ ಸೇರಲು ಸಾಧ್ಯವೇ?>>
\s5
\c 18
\s ಬಿಲ್ದದನು ಯೋಬನಿಗೆ ನೀಡಿದ ಎರಡನೆಯ ಪ್ರತ್ಯುತ್ತರ
\p
\v 1 ಆಗ ಶೂಹ್ಯನಾದ ಬಿಲ್ದದನು ಪ್ರತ್ಯುತ್ತರವಾಗಿ ಹೀಗೆಂದನು,
\q
\v 2 <<ಇನ್ನೆಷ್ಟರವರೆಗೆ ಮಾತುಗಳನ್ನು ಹಿಡಿಯುವುದಕ್ಕೆ ಹೊಂಚು ಹಾಕುತ್ತಿರುವೆ?
\q ಮೊದಲು ನೀನು ಆಲೋಚಿಸು, ಆ ಮೇಲೆ ಮಾತನಾಡೋಣ.
\s5
\q
\v 3 ಏಕೆ ನಮ್ಮನ್ನು ಮೃಗಗಳೆಂದು ಎಣಿಸಿದ್ದೀ?
\q ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?
\q
\v 4 ಸಿಟ್ಟಿನಿಂದ ನಿನ್ನನ್ನು ಸೀಳಿಕೊಳ್ಳುವವನೇ,
\q ನಿನಗಾಗಿ ಲೋಕವೇ ಹಾಳಾಗಬೇಕೋ,
\q ಬಂಡೆಯು ತನ್ನ ಸ್ಥಳದಿಂದ ಜರುಗಬೇಕೋ?
\b
\s5
\q
\v 5 ಹೇಗಾದರೂ ದುಷ್ಟನ ದೀಪವು ಆರುವುದು,
\q ಅವನ ಒಲೆಯು ಉರಿಯುವುದಿಲ್ಲ.
\q
\v 6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು,
\q ಅವನ ಮೇಲಣ ತೂಗು ದೀವಿಗೆಯು ನಂದಿಹೋಗುವುದು.
\s5
\q
\v 7 ಅವನ ಬಲವುಳ್ಳ ಹೆಜ್ಜೆಗಳು ಇಕ್ಕಟ್ಟಾಗುವುದು,
\q ಅವನ ಆಲೋಚನೆಯೇ ಅವನನ್ನು ಕೆಡವಿಹಾಕುವುದು.
\q
\v 8 ತನ್ನ ಹೆಜ್ಜೆಗಳಿಂದಲೇ ಬಲೆಗೆ ಬೀಳುವನು,
\q ಹಾಳು ಗುಂಡಿಯ ಮೇಲೆ ನಡೆಯುವನು.
\s5
\q
\v 9 ಬಲೆ ಅವನ ಹಿಮ್ಮಡಿಯನ್ನು ಸಿಕ್ಕಿಸಿ ಕಚ್ಚುವುದು,
\q ಉರುಲು ಅವನನ್ನು ಹಿಡಿಯುವುದು
\f +
\fr 18:9
\fq ಉರುಲು ಅವನನ್ನು ಹಿಡಿಯುವುದು
\ft ಅಥವಾ ಹಿಡಿದೆಳೆಯುವವರು ಅವನನ್ನು ಸೋಲಿಸಿದ್ದಾರೆ.
\f* .
\q
\v 10 ನೆಲದ ಮೇಲೆ ಪಾಶವೂ,
\q ದಾರಿಯಲ್ಲಿ ಜಾಲವೂ ಅವನಿಗಾಗಿ ಹೊಂಚಿಕೊಂಡಿರುವವು.
\q
\v 11 ಎಲ್ಲಾ ಕಡೆಯಲ್ಲಿಯೂ ಅಪಾಯಗಳು ಅವನನ್ನು ಹೆದರಿಸಿ;
\q ಅವನ ಹಿಮ್ಮಡಿ ತುಳಿಯುತ್ತಾ ಬೆನ್ನು ಹತ್ತುವವು.
\s5
\q
\v 12 ಅವನ ಬಲವು ಕುಂದಿಹೋಗುವುದು.
\q ಅವನು ಎಡವಿ ಬಿದ್ದಾನೇ ಎಂದು ವಿಪತ್ತು ಕಾದಿರುವುದು.
\q
\v 13 ಮೃತ್ಯುವಿನ ಹಿರಿಯ ಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು,
\q ಅವನ ಅಂಗಗಳನ್ನು ನುಂಗಿಬಿಡುವನು.
\s5
\q
\v 14 ಅವನ ನಿರ್ಭಯದ ಗುಡಾರದಿಂದ ಅವನನ್ನು ಎಳೆದು,
\q ಮಹಾಭೀತಿಗಳ ರಾಜನ ಸನ್ನಿಧಿಗೆ ಸಾಗಿಸಿಕೊಂಡು ಹೋಗುವನು.
\b
\q
\v 15 ಅವನ ಸಂಬಂಧಿಕರಲ್ಲದವರು ಅವನ ಗುಡಾರದಲ್ಲಿ ವಾಸಿಸುವರು,
\q ಅವನ ಮನೆಯ ಮೇಲೆ ಗಂಧಕವು ಎರಚಲ್ಪಡುವುದು.
\s5
\q
\v 16 ಅವನ ವಂಶವೃಕ್ಷದ ಬೇರುಗಳು ಒಣಗುವುದು,
\q ಅದರ ರೆಂಬೆಯು ಮೇಲೆ ಬಾಡುವುದು.
\q
\v 17 ಅವನ ಸ್ಮರಣೆಯು ಭೂಮಿಯಲ್ಲಿ ಅಳಿದುಹೋಗುವುದು,
\q ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ಇರುವುದಿಲ್ಲ.
\s5
\q
\v 18 ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ,
\q ಲೋಕದಿಂದಲೇ ಅಟ್ಟಿಬಿಡುವರು.
\q
\v 19 ಅವನಿಗೆ ಸ್ವಜನರಲ್ಲಿ ಮಗನಾಗಲಿ, ಮೊಮ್ಮಗನಾಗಲಿ ಇರುವುದಿಲ್ಲ.
\q ಅವನು ವಾಸಿಸುವ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.
\q
\v 20
\f +
\fr 18:20
\ft ಅಥವಾ ಹಿಂದಿನವರು ಅವನ ನಾಶನ ದಿನವನ್ನು ನೋಡಿ ಹೇಗೆ ಬೆರಗಾದರೋ ಹಾಗೆಯೇ ಮುಂದಿನವರೂ ಅದಕ್ಕೆ ವಿಸ್ಮಯಪಡುವರು.
\f* ಪಡುವಣದವರು ಅವನ ನಾಶದ ದಿನವನ್ನು ನೋಡಿ ಹೆದರುವರು,
\q ಹಾಗೆಯೇ ಮೂಡಣದವರು ಭಯಭ್ರಾಂತರಾಗುವರು.
\s5
\q
\v 21 ಕೆಡುಕರ ನಿವಾಸಗಳ ಸ್ಥಿತಿಯು ಇಂಥದೇ.
\q ದೇವರನ್ನು ಲಕ್ಷಿಸದವನ ಸ್ಥಿತಿಯು ಹೀಗೆಯೇ ಇರುತ್ತದೆ.>>
\s5
\c 19
\s ಯೋಬನ ಆರನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಪುನಃ ಇಂತೆಂದನು,
\q
\v 2 <<ಎಷ್ಟರವರೆಗೆ ನನ್ನ ಆತ್ಮವನ್ನು ನೋಯಿಸಿ,
\q ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?
\s5
\q
\v 3 ಈವರೆಗೆ ಹತ್ತಾರು ಸಾರಿ ನನ್ನನ್ನು ಅವಮಾನಪಡಿಸಿ
\q ನನಗೆ ಕೇಡುಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಿಲ್ಲವಲ್ಲಾ.
\q
\v 4 ನಾನು ನಿಜವಾಗಿ ತಪ್ಪುಮಾಡಿದ್ದರೆ ಆ ತಪ್ಪು ನನ್ನದೇ.
\b
\s5
\q
\v 5 ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು
\q ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ?
\q
\v 6 ಹೀಗಾದರೆ ನನ್ನ ನ್ಯಾಯವನ್ನು ತಿರುಗಿಸಿಬಿಟ್ಟು ನನ್ನ ಸುತ್ತಲೂ
\q ತನ್ನ ಬಲೆಯನ್ನೊಡ್ಡಿದವನು ದೇವರೇ ಎಂದು ತಿಳಿದುಕೊಳ್ಳಿರಿ.
\b
\s5
\q
\v 7 ಇಗೋ, ಬಲಾತ್ಕಾರವೆಂದು ನಾನು ಕೂಗಿಕೊಂಡರೂ, ಯಾವ ಉತ್ತರವೂ ಇಲ್ಲ.
\q ನಾನು ಮೊರೆಯಿಟ್ಟರೂ, ನ್ಯಾಯವು ನೆರವೇರದು.
\q
\v 8 ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ,
\q ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ.
\q
\v 9 ನನ್ನ ಘನತೆಯನ್ನು ಸುಲಿದುಬಿಟ್ಟು,
\q ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾನೆ.
\s5
\q
\v 10 ಆತನು ನನ್ನನ್ನು ಸುತ್ತುಮುತ್ತಲೂ ಕೆಡವಿದ್ದರಿಂದ ಇಲ್ಲದೆ ಹೋದೆನು.
\q ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟಿದ್ದಾನೆ.
\q
\v 11 ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ; ಉರಿಯುವಂತೆ ಮಾಡಿ
\q ನನ್ನನ್ನು ವೈರಿಯೆಂದೆಣಿಸಿದ್ದಾನೆ.
\q
\v 12 ಆತನ ದಂಡುಗಳು ಒಟ್ಟಿಗೆ ಮುಂದುವರೆದು
\q ನನ್ನ ವಿರುದ್ಧವಾಗಿ ದಿಬ್ಬಹಾಕಿ,
\q ನನ್ನ ಗುಡಾರದ ಸುತ್ತಲೂ ಇಳಿದಿವೆ.
\b
\s5
\q
\v 13 ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ,
\q ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.
\q
\v 14 ನನ್ನ ಬಂಧುಗಳು ನನ್ನನ್ನು ಬಿಟ್ಟುಬಿಟ್ಟಿದ್ದಾರೆ,
\q ನನಗೆ ಪರಿಚಯವಿದ್ದವರು ನನ್ನನ್ನು ಮರೆತಿದ್ದಾರೆ.
\s5
\q
\v 15 ನನ್ನ ಪರಿಜನರೂ, ದಾಸಿಯರೂ ನನ್ನನ್ನು ಅನ್ಯನೆಂದೆಣಿಸುತ್ತಾರೆ,
\q ಅವರ ದೃಷ್ಟಿಗೆ ಪರದೇಶಿಯಾಗಿದ್ದಾನೆ.
\q
\v 16 ನಾನು ನನ್ನ ಆಳನ್ನು ಕರೆದರೂ ಅವನು ಉತ್ತರಕೊಡುವುದಿಲ್ಲ,
\q ಬಾಯಿ ತೆರೆದು ಬೇಡಿಕೊಳ್ಳಬೇಕಾಗಿ ಬಂತು.
\s5
\q
\v 17 ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ,
\q ನನ್ನ ಒಡಹುಟ್ಟಿದವರಿಗೂ
\f +
\fr 19:17
\fq ಒಡಹುಟ್ಟಿದವರಿಗೂ
\ft ಅಥವಾ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ.
\f* ಹೇಸಿಕೆಯಾಗಿದ್ದೇನೆ.
\q
\v 18 ಚಿಕ್ಕವರೂ ಕೂಡ ನನ್ನನ್ನು ಹೀನೈಸುತ್ತಾರೆ,
\q ನಾನು ಏಳಲು ಪ್ರಯಾಸಪಡುತ್ತಿರುವಾಗ ಅವರ ಹರಟೆಗೆ ಗುರಿಯಾಗುತ್ತೇನೆ.
\q
\v 19 ನನ್ನ ಆಪ್ತಮಿತ್ರರೆಲ್ಲರೂ ನನ್ನನ್ನು ನೋಡಿ ಹೇಸಿಕೊಳ್ಳುತ್ತಾರೆ;
\q ನನ್ನ ಪ್ರೀತಿಪಾತ್ರರು ಸಹ ನನ್ನ ಮೇಲೆ ತಿರುಗಿಬಿದ್ದಿದ್ದಾರೆ.
\s5
\q
\v 20 ನನ್ನ ಎಲುಬು ಚರ್ಮಕ್ಕೂ, ಮಾಂಸಕ್ಕೂ ಅಂಟಿಹೋಗಿದೆ,
\q ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು (ಮರಣಕ್ಕೆ) ಓರೆಯಾಗಿದ್ದೇನೆ.
\b
\q
\v 21 ನನ್ನ ಮಿತ್ರರೇ, ಕರುಣಿಸಿರಿ, ನೀವಾದರೂ ಕರುಣಿಸಿರಿ!
\q ದೇವರ ಕೈ ನನ್ನನ್ನು ಹೊಡೆಯಿತಲ್ಲಾ.
\q
\v 22 ದೇವರ ಹಾಗೆ ನೀವೂ ನನ್ನನ್ನು ಏಕೆ ಹಿಂಸಿಸುತ್ತೀರಿ?
\q ನನ್ನನ್ನು ಹಿಂಸಿಸಿ ನಿಮಗೆ ಸಾಕಾಗಲಿಲ್ಲವೋ?
\s5
\q
\v 23 ಆಹಾ, ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಲೇಸು!
\q ಪುಸ್ತಕದಲ್ಲಿ ದಾಖಲಿಸಿದರೆ ಎಷ್ಟೋ ಒಳ್ಳೆಯದು!
\q
\v 24 ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸ ಎರೆದು,
\q ಶಾಶ್ವತ ಶಾಸನವಾಗಿ ಮಾಡಿದರೆ ನನಗೆ ಎಷ್ಟೋ ಉಪಕಾರ!
\b
\s5
\q
\v 25 ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು,
\q ಕೊನೆಯಲ್ಲಿ ಆತನು ಭೂಮಿಗೆ
\f +
\fr 19:25
\fq ಭೂಮಿಗೆ
\ft ಹೀಬ್ರೂ ಪದವಾದ "ಧೂಳು" ಎಂಬ ಪದವನ್ನು ಭೂಮಿ ಎಂದು ಭಾಷಾಂತರಿಸಲಾಗಿದೆ, ಆದ್ದರಿಂದ ಕೆಲವರು ಇದನ್ನು ಸಮಾಧಿ "ಅಥವಾ, ನನ್ನ ಸಮಾಧಿಯ ಮೇಲೆ" ಎಂಬುದಾಗಿ ಸೂಚಿಸುತ್ತಾರೆ. ಆದರೆ ಬಹುತೇಕ ಪಂಡಿತರು, ಭೂಮಿಯ ಮೇಲೆ ನಿಂತುಕೊಳ್ಳುವನು ಎಂಬುದು 31:14 ರಲ್ಲಿರುವ ನ್ಯಾಯಾಲಯದಲ್ಲಿ "ಸಾಕ್ಷಿಯಾಗಿ ನಿಲ್ಲುವನು" ಎಂಬರ್ಥವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಯಾಗಿದೆ ಎಂದು ಒಪ್ಪುತ್ತಾರೆ; ಧರ್ಮೋ 19:16; ಕೀರ್ತನೆ. 12:5; ಯೆಶಾಯ 19:21.
\f* ಇಳಿದು ಬರುವನು.
\q
\v 26 ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ,
\q ದೇಹಧಾರಿಯಾಗಿ ದೇವರನ್ನು ನೋಡುವೆನು.
\q
\v 27 ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು,
\q ಮತ್ತೊಬ್ಬನಾಗಿ ಅಲ್ಲ.
\q ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ.
\b
\s5
\q
\v 28 ಅವನಿಗೆ, <ಆದಷ್ಟು ಹಿಂಸೆಯನ್ನು ಮಾಡೋಣ,
\q ಅವನಿಗೆ ಸಂಭವಿಸಿದ್ದಕ್ಕೆ ಮೂಲವು ಅವನಲ್ಲಿಯೇ ಅಡಗಿದೆ> ಎಂದು ನೀವು ಆಡಿಕೊಂಡ ಕಾರಣ,
\q
\v 29 ಕತ್ತಿಗೆ ಭಯಪಡಿರಿ,
\q ಏಕೆಂದರೆ ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ,
\q ಇದರಿಂದ ನ್ಯಾಯನಿರ್ಣಯವುಂಟೆಂದು ತಿಳಿದುಕೊಳ್ಳುವಿರಿ.>>
\s5
\c 20
\s ಚೋಫರನು ಯೋಬನಿಗೆ ನೀಡಿದ ಎರಡನೆಯ ಪ್ರತ್ಯುತ್ತರ
\p
\v 1 ಆ ಮೇಲೆ ನಾಮಾಥ್ಯನಾದ ಚೋಫರನು ಹೀಗೆಂದನು,
\q
\v 2 <<ನನ್ನ ಮನೋವ್ಯಥೆಯು ಪ್ರತ್ಯುತ್ತರವನ್ನು ನನಗೆ ಹೇಳಿಕೊಡುತ್ತದೆ,
\q ಆತುರವು ನನ್ನಲ್ಲಿ ತುಂಬಿದೆ.
\q
\v 3 ಏಕೆಂದರೆ ನಾನು ಅಪಮಾನಕರವಾದ ನಿನ್ನ ಖಂಡನೆಯನ್ನು ಕೇಳಿದ್ದೇನೆ,
\q ಆದಕಾರಣ ನನ್ನ ಆತ್ಮವು ನನ್ನ ಬುದ್ಧಿಯಿಂದಲೇ ಕಲಿತ ಉತ್ತರವನ್ನು ನನಗೆ ತಿಳಿಸುತ್ತದೆ.
\s5
\q
\v 4 ಮನುಷ್ಯನು ಲೋಕದಲ್ಲಿ ಉದ್ಭವಿಸಿದ
\q ಪುರಾತನಕಾಲದಿಂದಲೂ,
\q
\v 5 ದುಷ್ಟರ ಉತ್ಸಾಹ ಧ್ವನಿಯು ಅಲ್ಪಕಾಲದ್ದು,
\q ಭ್ರಷ್ಟನ ಉಲ್ಲಾಸವು ಕ್ಷಣಿಕವಾದದ್ದು ಎಂದು ನಿನಗೆ ಗೊತ್ತಿಲ್ಲವೋ?
\s5
\q
\v 6 ಅವನ ಪ್ರತಿಷ್ಠೆಯು ಆಕಾಶಕ್ಕೆ ಏರಿದರೂ,
\q ಅವನ ತಲೆಯು ಮೋಡಗಳಿಗೆ ತಗುಲಿದರೂ,
\q
\v 7 ತನ್ನ ಮಲದ ಹಾಗೆ ನಿತ್ಯನಾಶನವನ್ನೂ ಹೊಂದುವನು,
\q ಅವನನ್ನು ಕಂಡವರು ಕೂಡ <ಅವನು ಎಲ್ಲಿ?> ಎನ್ನುವರು.
\s5
\q
\v 8 ಅವನು ಸ್ವಪ್ನದಂತೆ ಮರೆಯಾಗಿ ಸಿಕ್ಕುವುದಿಲ್ಲ,
\q ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.
\q
\v 9 ಕಂಡವನ ಕಣ್ಣಿಗೆ ಮತ್ತೆ ಕಾಣಿಸನು,
\q ಅವನ ನಿವಾಸವು ಅವನನ್ನು ತಿರುಗಿ ನೋಡುವುದೇ ಇಲ್ಲ.
\s5
\q
\v 10 ಅವನ ಮಕ್ಕಳು ದರಿದ್ರರ ದಯೆಯನ್ನು ಬೇಡುವರು.
\q ಅವನು ತನ್ನ ಕೈಯಿಂದಲೇ
\f +
\fr 20:10
\fq ತನ್ನ ಕೈಯಿಂದಲೇ
\ft ಅಥವಾ ತನ್ನ ಮಕ್ಕಳ ಕೈಯಿಂದಲೇ.
\f* ತನ್ನ ಆಸ್ತಿಯನ್ನು ಹಿಂದಕ್ಕೆ ಕೊಟ್ಟು ಬಿಡಬೇಕಾಗುವುದು.
\q
\v 11 ಯೌವನವು ಅವನ ಎಲುಬುಗಳಲ್ಲಿ ಇನ್ನೂ ತುಂಬಿರುವಾಗಲೇ,
\q ಅದು ಅವನೊಂದಿಗೆ ಧೂಳಿನಲ್ಲಿ ಮಲಗುವುದು.
\b
\s5
\q
\v 12 ಕೆಟ್ಟತನವು ಅವನ ಬಾಯಿಗೆ ಸಿಹಿಯಾಗಿರಲು,
\q ಅವನು ನಾಲಿಗೆಯ ಕೆಳಗೆ ಅದನ್ನು ಅಡಗಿಸಿ,
\q
\v 13 ನುಂಗದೆ ಕಾಪಾಡುತ್ತಾ
\q ಬಾಯಲ್ಲೇ ಇಟ್ಟುಕೊಂಡಿದ್ದರೂ
\q
\v 14 ತಿಂದ ಮೇಲೆ ಆ ಪದಾರ್ಥವು ಮಾರ್ಪಟ್ಟು,
\q ಅವನೊಳಗೆ ಹಾವಿನ ವಿಷವಾಗುವುದು.
\s5
\q
\v 15 ನುಂಗಿದ ಐಶ್ವರ್ಯವನ್ನು ಅವನು ಕಾರುವನು,
\q ದೇವರು ಅವನ ಹೊಟ್ಟೆಯೊಳಗಿಂದ ಅದನ್ನು ಕಕ್ಕಿಸಿ ಬಿಡುವನು.
\q
\v 16 ಅವನು ಚೀಪುವುದು ಹಾವಿನ ವಿಷವೇ,
\q ಸರ್ಪದ ನಾಲಿಗೆಯು ಅವನನ್ನು ಕೊಲ್ಲುವುದು.
\s5
\q
\v 17 ಜೇನೂ, ಮೊಸರೂ ಸಮೃದ್ಧಿಯಾಗಿ ಹರಿಯುವ
\q ನದಿಗಳನ್ನು ಅವನು ನೋಡುವುದೇ ಇಲ್ಲ.
\q
\v 18 ಅವನು ದುಡಿದದ್ದನ್ನು ಅನುಭವಿಸದೆ ಪರರ ಪಾಲು ಮಾಡುವನು,
\q ಅವನ ಲಾಭದಿಂದಾಗತಕ್ಕ ಆನಂದವು ಅವನಿಗೆ ಸಿಕ್ಕುವುದಿಲ್ಲ.
\q
\v 19 ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ;
\q ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.
\s5
\q
\v 20 ಅವನ ಹೊಟ್ಟೆಗೆ ತೃಪ್ತಿಯಿಲ್ಲವಾದ ಕಾರಣ,
\q ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ.
\q
\v 21 ಏನೂ ಉಳಿಯದಂತೆ ಅವನು ನುಂಗಿಬಿಟ್ಟಿದರಿಂದ;
\q ಅವನ ಸುಖವು ಅಸ್ಥಿರವಾಗಿರುವುದು.
\q
\v 22 ಸಮೃದ್ಧಿಯು ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು.
\q ಶ್ರಮೆಯನ್ನು ಅನುಭವಿಸುವ ಪ್ರತಿಯೊಬ್ಬನ ಕೈ ಅವನ ಮೇಲೆ ಬೀಳುವುದು.
\b
\s5
\q
\v 23 ಅವನ ಹೊಟ್ಟೆ ತುಂಬುವುದು, ಹೌದು, ದೇವರು ತನ್ನ ಕೋಪಾಗ್ನಿಯನ್ನು ಕಳುಹಿಸಿ;
\q ಅದನ್ನೇ ಆಹಾರವನ್ನಾಗಿ ಅವನ ಮೇಲೆ ಸುರಿಸುವನು.
\q
\v 24 ಕಬ್ಬಿಣದ ಆಯುಧದ ದೆಸೆಯಿಂದ ಓಡಿಹೋಗುವನು,
\q ತಾಮ್ರದ ಬಿಲ್ಲು ಅವನನ್ನು ಇರಿಯುವುದು.
\q
\v 25 ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಹೊರಬರುವುದು,
\q ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವುದು,
\q ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.
\s5
\q
\v 26 ಅವನ ನಿಧಿನಿಕ್ಷೇಪಗಳಿಗಾಗಿ ಪೂರ್ಣಾಂಧಕಾರವು ಕಾದಿರುವುದು,
\q ಯಾರೂ ಹೊತ್ತಿಸದ ಬೆಂಕಿಯು ಅವನನ್ನು ತಿಂದುಹಾಕಿ,
\q ಅವನ ಗುಡಾರದಲ್ಲಿ ತಪ್ಪಿಸಿಕೊಂಡದ್ದನ್ನು ಮೇದು ಬಿಡುವುದು.
\q
\v 27 ಆಕಾಶವು ಅವನ ಪಾಪವನ್ನು ಬಯಲುಪಡಿಸುವುದು.
\q ಭೂಮಿಯು ಅವನ ವಿರುದ್ಧ ಸಾಕ್ಷಿಯಾಗಿ ಏಳುವುದು.
\s5
\q
\v 28 ದೇವರ ಸಿಟ್ಟಿನ ದಿನದಲ್ಲಿ ಅವನ ಮನೆಯ ಧನಧಾನ್ಯಗಳು
\f +
\fr 20:28
\fq ಅವನ ಮನೆಯ ಧನಧಾನ್ಯಗಳು
\ft ಅಥವಾ ಅವನ ಮನೆಯನ್ನು.
\f* ,
\q ಪ್ರವಾಹದಿಂದ ಕೊಚ್ಚಿಕೊಂಡು ತೊಲಗಿಹೋಗುವವು.
\q
\v 29 ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ,
\q ದೇವರು ನೇಮಿಸಿರುವ ಸ್ವಾಸ್ತ್ಯವೂ ಇವೇ.>>
\s5
\c 21
\s ಯೋಬನ ಏಳನೆಯ ಸಂಭಾಷಣೆ: ಚೋಫರನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಇಂತೆಂದನು,
\q
\v 2 <<ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ.
\q ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ.
\q
\v 3 ತಾಳ್ಮೆಯಿಂದಿರಿ, ನಾನೂ ಮಾತನಾಡುವೆನು,
\q ಆಮೇಲೆ ಹಾಸ್ಯಮಾಡಿದರೂ ಮಾಡಿರಿ.
\s5
\q
\v 4 ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿರುವೆನೆ?
\q ನಾನೇಕೆ ಬೇಸರಗೊಳ್ಳಬಾರದು?
\q
\v 5 ನನ್ನ ಕಡೆಗೆ ಗಮನಿಸಿ,
\q ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ,
\q
\v 6 ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ,
\q ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ.
\s5
\q
\v 7 ದುಷ್ಟರು ಬಾಳಿ ವೃದ್ಧರಾಗುವುದಕ್ಕೂ, ಬಲಿಷ್ಠರಾಗಿ
\q ಪ್ರಬಲಿಸುವುದಕ್ಕೂ ಕಾರಣವೇನು?
\q
\v 8 ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು,
\q ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು.
\q
\v 9 ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದ ಇರುವವು;
\q ದೇವರ ದಂಡವು ಅವರ ಮೇಲೆ ಬೀಳದು.
\s5
\q
\v 10 ಅವರ ಗೂಳಿಯು ಬೇಸರಗೊಳ್ಳದೆ ಸಂತತಿಯನ್ನು ಹುಟ್ಟಿಸುತ್ತದೆ;
\q ಅವರ ಹಸುವು ಕಂದುಹಾಕದೆ ಈಯುವುದು.
\q
\v 11 ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು,
\q ಅವರ ಮಕ್ಕಳು ಕುಣಿದಾಡುವರು.
\q
\v 12 ಅವರು ದಮ್ಮಡಿ ಕಿನ್ನರಿಗಳೊಡನೆ ಸ್ವರವೆತ್ತಿ,
\q ಕೊಳಲಿನ ಧ್ವನಿಗೆ ಉಲ್ಲಾಸಪಡುವರು.
\s5
\q
\v 13 ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು,
\q ಸಮಾಧಾನದಿಂದ
\f +
\fr 21:13
\fq ಸಮಾಧಾನದಿಂದ
\ft ಅಥವಾ ಕ್ಷಣಮಾತ್ರದಲ್ಲಿ.
\f* ಸಮಾಧಿಗೆ ಸೇರುವರು.
\q
\v 14 ಆದರೆ ಇವರೇ ದೇವರನ್ನು ಕುರಿತು, <ನಮ್ಮಿಂದ ತೊಲಗಿ ಹೋಗು,
\q ನಿನ್ನ ಮಾರ್ಗಗಳ ತಿಳಿವಳಿಕೆಯೇ ನಮಗೆ ಬೇಡ ಎಂದೂ
\q
\v 15 ಆ ಸರ್ವಶಕ್ತನಾದ ದೇವರು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು?
\q ಆತನಿಗೆ ವಿಜ್ಞಾಪನೆ ಮಾಡುವುದರಿಂದ ಪ್ರಯೋಜನವೇನು?> ಎಂದೂ ಹೇಳುತ್ತಿದ್ದರು.
\s5
\q
\v 16 ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವುದಿಲ್ಲ,
\q ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
\q
\v 17 ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ?
\q ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ?
\q ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಾರಿ?
\q
\v 18 ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸಾರಿ?
\q ಎಷ್ಟು ಸಾರಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು?
\b
\s5
\q
\v 19 <ದೇವರು ದುಷ್ಟನ ಪಾಪ ಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ> ಎನ್ನುತ್ತೀರೋ,
\q ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೆ ಕೊಟ್ಟುಬಿಡಲಿ.
\q
\v 20 ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ,
\q ಸರ್ವಶಕ್ತನಾದ ದೇವರ ರೌದ್ರರಸವನ್ನು ಪಾನಮಾಡಲಿ.
\q
\v 21 ಅವನಿಗೆ ನೇಮಕವಾದ ದಿನಗಳು ಮುಗಿದುಹೋದ ಮೇಲೆ
\q ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು?
\b
\s5
\q
\v 22 ಮೇಲಣ ಲೋಕದವರಿಗೂ, ನ್ಯಾಯತೀರಿಸುವ ದೇವರಿಗೂ ಜ್ಞಾನಬೋಧನೆಯನ್ನು ಮಾಡಬಹುದೇ?
\q
\v 23 ಒಬ್ಬನು ಸಮೃದ್ಧನಾಗಿ, ತುಂಬಾ ಸುಖದಿಂದಲೂ, ನೆಮ್ಮದಿಯಿಂದಲೂ ಇರುವಾಗ ಸಾಯುವನು.
\q
\v 24 ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವುದು,
\q ಅವನ ಎಲಬುಗಳು ಮಜ್ಜೆಯಿಂದ ಸಾರವಾಗಿರುವುದು.
\s5
\q
\v 25 ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ,
\q ಮನೋವ್ಯಥೆಪಡುತ್ತಾ ಸಾಯುವನು.
\q
\v 26 ಇಬ್ಬರೂ ಧೂಳಿನಲ್ಲಿ ಮಲಗುವರು,
\q ಹುಳುಗಳು ಅವರನ್ನು ಮುತ್ತಿಕೊಳ್ಳುವವು.
\b
\s5
\q
\v 27 ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ,
\q ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ.
\q
\v 28 <ಪ್ರಧಾನನ ಮನೆ ಏನಾಯಿತು?
\q ದುಷ್ಟರು ವಾಸಿಸಿದ ಗುಡಾರವೆಲ್ಲಿ?> ಎನ್ನುತ್ತೀರಷ್ಟೆ.
\s5
\q
\v 29 ನೀವು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ?
\q ಅವರು ಕೊಟ್ಟ ದೃಷ್ಟಾಂತಗಳಿಂದ,
\q
\v 30 ಆಪತ್ತಿನ ದಿನದಲ್ಲಿ ದುಷ್ಟನು ಉಳಿದು,
\q ಕೋಪವು ತುಂಬಿ ತುಳುಕುವ ದಿನದಲ್ಲಿ ತಪ್ಪಿಸಲ್ಪಡುವನು ಎಂಬುದು ನಿಮಗೆ ಗೊತ್ತಾಗಲಿಲ್ಲವೋ?
\s5
\q
\v 31 ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು?
\q ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು?
\q
\v 32 ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು;
\q ಅವನ ಗೋರಿಗೆ ಕಾವಲಿಡುವರು.
\q
\v 33 ಆ ಕಣಿವೆಯ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು.
\q ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು,
\q ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು.
\s5
\q
\v 34 ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ!
\q ನಿಮ್ಮ ಉತ್ತರಗಳಲ್ಲಿ ಉಳಿದಿರುವುದು ಮಿತ್ರ ದ್ರೋಹವೇ.>>
\s5
\c 22
\s ಎಲೀಫಜನು ಯೋಬನಿಗೆ ನೀಡಿದ ಮೂರನೆಯ ಪ್ರತ್ಯುತ್ತರ
\p
\v 1 ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
\q
\v 2 <<ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು?
\q ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.
\q
\v 3 ನೀನು ನೀತಿವಂತನಾಗಿರುವುದು ಸರ್ವಶಕ್ತನಾದ ದೇವರಿಗೆ ಸುಖವೋ?
\q ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?
\s5
\q
\v 4 ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ
\q ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?
\q
\v 5 ನಿನ್ನ ಕೆಟ್ಟತನವು ಬಹಳವಲ್ಲವೇ?
\q ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?
\b
\s5
\q
\v 6 ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ,
\q ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.
\q
\v 7 ಬಳಲಿದವನಿಗೆ ನೀರು ಕೊಡದೆ,
\q ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.
\q
\v 8 ಬಲಿಷ್ಠನಾದರೆ ದೇಶವೇ ಅವನದು,
\q ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.
\s5
\q
\v 9 ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು,
\q ಅನಾಥರ ಕೈಗಳನ್ನು ಮುರಿದಿದ್ದಿ.
\q
\v 10 ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ,
\q ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.
\q
\v 11 ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ
\q ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.
\b
\s5
\q
\v 12 ದೇವರು ಉನ್ನತ ಆಕಾಶದಲ್ಲಿಲ್ಲವೋ?
\q ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!
\q
\v 13 ನೀನಾದರೋ, <ದೇವರಿಗೆ ಏನು ಗೊತ್ತು?
\q ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?
\q
\v 14 ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು;
\q ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ> ಎಂದು ಹೇಳಿಕೊಂಡೆಯಲ್ಲವೇ.
\b
\s5
\q
\v 15 ಕೆಟ್ಟವರು ಮೊದಲಿನಿಂದಲೂ,
\q ನಡೆದ ದಾರಿಯನ್ನು ನೀನು ಹಿಡಿಯುವಿಯಾ?
\q
\v 16 ಅಕಾಲ ಮರಣವು ಅವರನ್ನು ಅಪಹರಿಸಿತು,
\q ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.
\q
\v 17 ಅವರು ಆತನನ್ನು ಕುರಿತು, <ನಮ್ಮಿಂದ ತೊಲಗಿ ಹೋಗು,
\q ಸರ್ವಶಕ್ತನಾದ ದೇವರು ನಮಗೇನು ಮಾಡಾನು> ಎಂದು ಹೇಳಿಕೊಳ್ಳುತ್ತಿದ್ದರು.
\s5
\q
\v 18 ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು.
\q ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
\q
\v 19 ನೀತಿವಂತರು ಇದನ್ನು ನೋಡಿ ಹಿಗ್ಗುವರು,
\q ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.
\q
\v 20 <ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು> ಎಂದು,
\q ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.
\b
\s5
\q
\v 21 ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು,
\q ಇದರಿಂದ ನಿನಗೆ ಶುಭವಾಗುವುದು.
\q
\v 22 ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ,
\q ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.
\s5
\q
\v 23 ನೀನು ಸರ್ವಶಕ್ತನಾದ ದೇವರ ಕಡೆಗೆ ತಿರುಗಿಕೊಂಡು,
\q ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.
\q
\v 24 ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು,
\q ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.
\q
\v 25 ಸರ್ವಶಕ್ತನಾದ ದೇವರು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.
\s5
\q
\v 26 ಆಗ ನೀನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು,
\q ದೇವರ ಅಭಿಮುಖನಾಗಿರುವೆ.
\q
\v 27 ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು,
\q ಆತನಿಗೆ ಹರಕೆಗಳನ್ನು ಒಪ್ಪಿಸುವಿ.
\q
\v 28 ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು,
\q ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
\s5
\q
\v 29 ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ,
\q ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.
\q
\v 30 ನಿರ್ದೋಷಿಯನ್ನು ಆತನು ತಪ್ಪಿಸುವನು,
\q ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.>>
\s5
\c 23
\s ಯೋಬನ ಎಂಟನೆಯ ಸಂಭಾಷಣೆ: ಎಲೀಫಜನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಇಂತೆಂದನು,
\q
\v 2 <<ನಾನು ನನ್ನ ನರಳಾಟವನ್ನು ಎಷ್ಟು ಬಿಗಿಹಿಡಿದರೂ;
\q ಆ ನನ್ನ ಮುಲುಗುವಿಕೆಯು ದೇವದ್ರೋಹವೆಂದು ಈಗಲೂ ಎಣಿಸುತ್ತೀರಾ?
\s5
\q
\v 3 ಆಹಾ, ಆತನ ದರ್ಶನವು ಎಲ್ಲಿ ಆದೀತು, ನನಗೆ ಗೊತ್ತಾಗಿದ್ದರೆ ಎಷ್ಟೋ ಸಂತೋಷ!
\q ಆತನ ಸನ್ನಿಧಿಯನ್ನು ಸೇರೆನು.
\q
\v 4 ನನ್ನ ಬಾಯಿಯನ್ನು ತರ್ಕಗಳಿಂದ ತುಂಬಿಸಿಕೊಂಡು
\q ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸುವೆನು.
\q
\v 5 ಆತನ ಪ್ರತ್ಯುತ್ತರದ ಮಾತುಗಳನ್ನು ತಿಳಿದುಕೊಂಡು
\q ಆತನು ನನಗೆ ಹೇಳುವುದನ್ನು ವಿವೇಚಿಸುವೆನು.
\s5
\q
\v 6 ಆತನು ತನ್ನ ಮಹಾಶಕ್ತಿಯಿಂದ ನನ್ನ ಸಂಗಡ ವ್ಯಾಜ್ಯವಾಡುವನೋ?
\q ಇಲ್ಲವೇ ಇಲ್ಲ; ನನ್ನ ವಿಜ್ಞಾಪನೆಯನ್ನು ಗಮನಿಸುವನು.
\q
\v 7 ಅಲ್ಲಿ ಯಥಾರ್ಥಚಿತ್ತನು ಆತನೊಂದಿಗೆ ವಾದಿಸುವನು.
\q ನನ್ನ ನ್ಯಾಯಾಧಿಪತಿಯಿಂದ ನನಗೆ ನಿತ್ಯವಾದ ಬಿಡುಗಡೆಯಾಗುವುದು.
\b
\s5
\q
\v 8 ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವುದಿಲ್ಲ,
\q ಹಿಂದೆ ಹೋದರೂ ಆತನನ್ನು ತಿಳಿಯಲಾರೆನು.
\q
\v 9 ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು,
\q ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವುದಿಲ್ಲ.
\s5
\q
\v 10 ಆತನಾದರೋ ನನ್ನ ದಾರಿಯನ್ನು ಬಲ್ಲನು,
\q ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು.
\q
\v 11 ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ,
\q ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.
\q
\v 12 ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ,
\q ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.
\b
\s5
\q
\v 13 ಆತನಂತು ಒಂದೇ ಮನಸ್ಸುಳ್ಳವನಾಗಿದ್ದಾನೆ, ತಿರುಗಿಸಬಲ್ಲವರು ಯಾರು?
\q ತಾನು ಬಯಸಿದ್ದನ್ನೇ ಮಾಡುತ್ತಾನೆ.
\q
\v 14 ನನ್ನ ವಿಷಯದಲ್ಲಿ ನೇಮಕವಾದದ್ದನ್ನು ಪೂರೈಸುವವನಷ್ಟೆ,
\q ಆತನಲ್ಲಿ ಇಂಥಾ ಸಂಕಲ್ಪಗಳು ಅನೇಕವಾಗಿವೆ.
\s5
\q
\v 15 ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಗಾಬರಿಯಾಗಿದ್ದೇನೆ;
\q ಇದನ್ನೆಲ್ಲಾ ಯೋಚಿಸಿಕೊಳ್ಳುವಾಗ ಆತನಿಗೆ ಹೆದರುತ್ತೇನೆ.
\q
\v 16 ನನ್ನ ಹೃದಯವನ್ನು ಕುಂದಿಸಿದವನು ದೇವರೇ,
\q ನನ್ನನ್ನು ಗಾಬರಿಪಡಿಸಿದವನು ಸರ್ವಶಕ್ತನಾದ ದೇವರೇ.
\q
\v 17 ನಾನು ಹಾಳಾದದ್ದಕ್ಕೆ ಈ ಅಂಧಕಾರವು ಕಾರಣವಲ್ಲ,
\q ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲು ಕಾರಣವಲ್ಲ.>>
\s5
\c 24
\s ಯೋಬನ ಪ್ರತ್ಯುತ್ತರದ ಮುಂದುವರಿಕೆ
\b
\q
\v 1 <<ಸರ್ವಶಕ್ತನಾದ ದೇವರು ಏಕೆ ದುಷ್ಟರಿಗೆ ದಂಡನೆಯ ಕಾಲಗಳನ್ನು ನೇಮಿಸಿ ಇಟ್ಟುಕೊಂಡಿಲ್ಲ?
\q ಆತನನ್ನು ಅರಿತವರಿಗೆ ಆತನ ನ್ಯಾಯತೀರ್ಪಿನ ದಿನಗಳು ಏಕೆ ಗೋಚರವಾಗುವುದಿಲ್ಲ?
\s5
\q
\v 2 ಮೇರೆಗಳನ್ನು ದಾಟಿ ಆಶ್ರಯಿಸಿಕೊಳ್ಳುವವರು ಇದ್ದಾರೆ.
\q ದನಕುರಿಗಳನ್ನು ಅಪಹರಿಸಿ ಸಾಕಿಕೊಳ್ಳುವವರಿದ್ದಾರೆ.
\q
\v 3 ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುತ್ತಾರೆ,
\q ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
\q
\v 4 ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ,
\q ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.
\s5
\q
\v 5 ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ,
\q ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು;
\q ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.
\q
\v 6 ತಮ್ಮ ಹೊಟ್ಟೆಗಾಗಿ ಬಯಲಿನಲ್ಲಿ ಸೊಪ್ಪನ್ನು ಕೊಯ್ದುಕೊಳ್ಳುವರು,
\q ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುವರು.
\q
\v 7 ಹೊದಿಕೆ ಇಲ್ಲದೆ ಬೆತ್ತಲೆಯಾಗಿ ರಾತ್ರಿಯನ್ನು ಕಳೆಯುವರು,
\q ಚಳಿಗಾಲದಲ್ಲಿಯೂ ಅವರಿಗೆ ಬಟ್ಟೆಯಿಲ್ಲ.
\s5
\q
\v 8 ಮಲೆನಾಡಿನ ದೊಡ್ಡ ಮಳೆಯಿಂದ ನೆನೆದುಹೋಗಿ,
\q ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುವರು.
\q
\v 9 ತಂದೆಯಿಲ್ಲದ ಮಗುವನ್ನು ತಾಯಿಯ ಮೊಲೆಯಿಂದ ಕಿತ್ತು,
\q ಬಡವರಿಂದ ಒತ್ತೆ ತೆಗೆದುಕೊಳ್ಳುವವರಿದ್ದಾರೆ.
\q
\v 10 ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು;
\q ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.
\s5
\q
\v 11 ಯಜಮಾನರ ಪೌಳಿಗೋಡೆಗಳೊಳಗೇ ಇದ್ದುಕೊಂಡು ಎಣ್ಣೆಗಾಣವನ್ನು ತಿರುಗಿಸುವರು;
\q ದಾಹಗೊಂಡೇ ಅವರ ತೊಟ್ಟಿಗಳಲ್ಲಿ ದ್ರಾಕ್ಷಿಯನ್ನು ತುಳಿಯುವರು.
\q
\v 12 ತುಂಬಿದ ಪಟ್ಟಣದೊಳಗಿಂದ ಜನರು ನರಳುವರು,
\q ಗಾಯಪಟ್ಟವರು ಮೊರೆಯಿಡುವರು,
\q
\f +
\fr 24:12
\ft ಅಥವಾ ದೇವರು ದುಷ್ಟರಾದ ಧನಿಕರನ್ನು ಆರೋಪಿಸುವುದಿಲ್ಲ.
\f* ಆದರೆ ದೇವರಾದರೋ ಅವರ ಮೊರೆಗೆ ಕಿವಿಗೊಡನು.
\b
\s5
\q
\v 13 ಬೆಳಕಿನ ವಿರುದ್ಧ ತಿರುಗಿ ಬಿದ್ದವರು ಇದ್ದಾರೆ;
\q ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ,
\q ಅದರ ಹಾದಿಗಳಲ್ಲಿ ಇರುವುದಿಲ್ಲ.
\q
\v 14 ಕೊಲೆಪಾತಕನು ಮುಂಜಾನೆ ಎದ್ದು,
\q ದಿಕ್ಕಿಲ್ಲದ ಬಡವರನ್ನು ಕೊಂದು,
\q ರಾತ್ರಿಯಲ್ಲಿ ಕಳ್ಳನಂತಿರುವನು.
\s5
\q
\v 15 ಜಾರನು ತಾನು, ಯಾರ ಕಣ್ಣಿಗೂ ಬೀಳಬಾರದು ಎಂದು,
\q ಸಂಜೆಯನ್ನು ಎದುರು ನೋಡುತ್ತಿದ್ದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
\q
\v 16 ಅವರು ಕತ್ತಲಲ್ಲಿ ಕನ್ನಕೊರೆದು ಮನೆಗಳೊಳಗೆ ನುಗ್ಗಿ;
\q ಹಗಲಿನಲ್ಲಿ ಅಡಗಿಕೊಂಡಿದ್ದು;
\q ಬೆಳಕನ್ನು ತಿಳಿಯದೆ ಇರುವರು.
\q
\v 17 ಅವರೆಲ್ಲರಿಗೂ ಬೆಳಕು ಕಾರ್ಗತ್ತಲಿನಂತಿರುವುದು,
\q ಕಾರ್ಗತ್ತಲಿನ ಅಪಾಯಗಳನ್ನು ಅವರು ಬಲ್ಲರಷ್ಟೆ.
\b
\s5
\q
\v 18 (ನೀವು ಹೇಳುವುದೇನೆಂದರೆ) ದುಷ್ಟನು ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುವನು,
\q ಭೂಲೋಕದ ಅವನ ಆಸ್ತಿಯು ಶಾಪಗ್ರಸ್ತವಾಗಿರುವುದು.
\q ದ್ರಾಕ್ಷಿತೋಟಗಳ ಕಡೆಗೆ ತಿರುಗಲಾರನು.
\q
\v 19 ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ,
\q ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು.
\s5
\q
\v 20 ಹೆತ್ತ ಹೊಟ್ಟೆಯೇ ಅವನನ್ನು ಮರೆತುಬಿಡುವುದು;
\q ಹುಳವು ಅವನ ಹೆಣವನ್ನು ಸವಿದು ತಿನ್ನುವುದು;
\q ಇನ್ನು ಮೇಲೆ ಯಾರಿಗೂ ಅವನ ನೆನಪಿರದು;
\q ಅನ್ಯಾಯವು ಮರದ ಹಾಗೆ ಮುರಿಯಲ್ಪಡುವುದು.
\q
\v 21 ಅವನು ಮಕ್ಕಳಿಲ್ಲದ ಬಂಜೆಯರನ್ನು ನುಂಗಿಬಿಟ್ಟು,
\q ವಿಧವೆಯರನ್ನು ಉದ್ಧರಿಸದೆ ಹೋದನಷ್ಟೆ (ಎಂಬುದೇ).
\s5
\q
\v 22 ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ,
\q ಅವರು ತಮ್ಮ ಜೀವವು ಇನ್ನು ಉಳಿಯುವುದಿಲ್ಲವೆಂದು ನಂಬಿದ್ದರೂ ಉದ್ಧಾರವಾಗುವರು.
\q
\v 23 ದೇವರು ಅವರಿಗೆ ಅಭಯವನ್ನು ಕೊಟ್ಟಿದ್ದರಿಂದ ಅವರು ಅದನ್ನು ಆಧಾರಮಾಡಿಕೊಳ್ಳುವರು;
\q ಆತನ ಕಟಾಕ್ಷವು ಅವರ ಮಾರ್ಗಗಳ ಮೇಲಿರುವುದು.
\s5
\q
\v 24 ಅವರು ಉನ್ನತಿಗೆ ಬರುವರು;
\q ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ?
\q ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.
\q
\v 25 ಹೀಗಲ್ಲವೆಂದು ನೀವು ನಂಬಿದರೆ ನಾನು ಸುಳ್ಳುಗಾರನೆಂದೂ ನನ್ನ ಮಾತುಗಳು ನಿರರ್ಥಕವೆಂದೂ;
\q ನಿಮ್ಮಲ್ಲಿ ಯಾರು ಸ್ಥಾಪಿಸಬಲ್ಲರು?.>>
\s5
\c 25
\s ಬಿಲ್ದದನು ಯೋಬನಿಗೆ ನೀಡಿದ ಮೂರನೆಯ ಪ್ರತ್ಯುತ್ತರ
\p
\v 1 ಆ ಮೇಲೆ ಶೂಹ್ಯನಾದ ಬಿಲ್ದದನು ಹೀಗೆಂದನು,
\q
\v 2 <<ಆತನಲ್ಲಿ ಪ್ರಭುತ್ವವೂ ಭೀಕರತ್ವವೂ ಉಂಟು,
\q ತನ್ನ ಉನ್ನತ ಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವನು ಆತನೇ.
\q
\v 3 ಆತನ ಸೈನ್ಯಗಳಿಗೆ ಲೆಕ್ಕವಿದೆಯೋ?
\q ಆತನ ತೇಜಸ್ಸು ಯಾರಲ್ಲಿಯೂ ಮೂಡುವುದಿಲ್ಲ?
\s5
\q
\v 4 ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವುದು ಹೇಗೆ?
\q ಮಾನವನಾಗಿ ಹುಟ್ಟಿದವನು ಪರಿಶುದ್ಧನಾಗಿರುವುದು ಸಾಧ್ಯವೋ?
\q
\v 5 ನೋಡಿರಿ, ಆತನ ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ,
\q ನಕ್ಷತ್ರಗಳೂ ಶುದ್ಧವಲ್ಲ.
\q
\v 6 ಹೀಗಿರುವಲ್ಲಿ ನರಹುಳವು ಅಶುದ್ಧವಾದದ್ದು!
\q ನರಕ್ರಿಮಿಯು ಎಷ್ಟೋ ಅಪವಿತ್ರವಾಗಿದ್ದಾನೆ!>>
\s5
\c 26
\s ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಹೀಗೆ ಉತ್ತರಕೊಟ್ಟನು,
\q
\v 2 <<ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು!
\q ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.
\q
\v 3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ!
\q ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!
\q
\v 4 ಯಾರಿಗೆ ಮಾತುಗಳನ್ನು ಕಲಿಸಿದ್ದಿ?
\q ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?>>
\s ಬಿಲ್ದದನ ಪ್ರತ್ಯುತ್ತರ
\b
\s5
\q
\v 5 ಅದಕ್ಕೆ ಬಿಲ್ದದನು, <<ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ,
\q ಪ್ರೇತಗಳು ಆತನ ಭಯದಿಂದ ಯಾತನೆಪಡುವವು.
\q
\v 6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ,
\q ನಾಶಲೋಕವು ಮರೆಯಾಗಿಲ್ಲ.
\s5
\q
\v 7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ,
\q ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.
\q
\v 8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು,
\q ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.
\s5
\q
\v 9 ತನ್ನ ಸಿಂಹಾಸನಕ್ಕೆ ಮರೆಯಾಗಿ,
\q ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.
\q
\v 10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ,
\q ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.
\s5
\q
\v 11 ಆಕಾಶಮಂಡಲದ ಸ್ತಂಭಗಳು,
\q ಆತನ ಗದರಿಕೆಯಿಂದ ಬೆರಗಾಗಿ ಕದಲುವವು.
\q
\v 12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು;
\q ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.
\s5
\q
\v 13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು,
\q ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.
\q
\v 14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ.
\q ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ,
\q ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?>>
\s5
\c 27
\s ಯೋಬನು ಮತ್ತೊಮ್ಮೆ ಪ್ರತ್ಯುತ್ತರ ನೀಡಿದ್ದು
\p
\v 1 ಆಗ ಯೋಬನು ಮತ್ತೆ ಪ್ರಸ್ತಾಪಿಸಿ ಹೀಗೆಂದನು,
\q
\v 2 <<ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ,
\q ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಇನ್ನೂ ಆಡುತ್ತಿದೆ (ಕೇಳಿರಿ)!
\q
\v 3 ನನ್ನ ನ್ಯಾಯವನ್ನು ತಪ್ಪಿಸಿದ ದೇವರಾಣೆ,
\q ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತನಾದ ದೇವರಾಣೆ,
\s5
\q
\v 4 ನನ್ನ ತುಟಿಗಳು ಅನ್ಯಾಯವನ್ನು ನುಡಿಯುವುದೇ ಇಲ್ಲ,
\q ನನ್ನ ನಾಲಿಗೆಯು ಎಂದಿಗೂ ಮೋಸದ ಮಾತುಗಳನ್ನಾಡುವುದಿಲ್ಲ.
\q
\v 5 ನೀವು ನ್ಯಾಯವಂತರೆಂದು ನಾನು ಒಪ್ಪುವುದು ಅಸಾಧ್ಯ.
\q ಸಾಯುವ ತನಕ ನನ್ನ ಯಥಾರ್ಥತ್ವವನ್ನು ಬಿಡುವುದಿಲ್ಲ.
\s5
\q
\v 6 ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು.
\q ನನ್ನ ಜೀವಮಾನದ ಯಾವ ದಿನಚರಿಯಲ್ಲಿಯೂ, ಮನಸ್ಸಾಕ್ಷಿಯು ತಪ್ಪು ತೋರಿಸುವುದಿಲ್ಲ.
\b
\q
\v 7 ನನ್ನ ಹಗೆಗೆ ದುಷ್ಟನ ಗತಿಯಾಗಲಿ,
\q ನನ್ನ ವಿರುದ್ಧವಾಗಿ ಎದ್ದವನು ಅ ನೀತಿವಂತನ ಗತಿಯನ್ನು ಕಾಣಲಿ!
\s5
\q
\v 8 ದೇವರು ಭ್ರಷ್ಟನ ಆತ್ಮವನ್ನು ಕಡಿದು ಎಳೆಯುವಾಗ,
\q ಅವನಿಗೆ ನಿರೀಕ್ಷೆಯೆಲ್ಲಿರುವುದು?
\q
\v 9 ಅವನಿಗೆ ಶ್ರಮೆ ಬರಲು,
\q ದೇವರು ಅವನ ಮೊರೆಯನ್ನು ಆಲೈಸುವನೋ?
\q
\v 10 ಅವನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು,
\q ಆತನನ್ನು ಸರ್ವದಾ ಪ್ರಾರ್ಥಿಸುವನೇ?
\b
\s5
\q
\v 11 ನಾನು ಸರ್ವಶಕ್ತನಾದ ದೇವರ ಕ್ರಮವನ್ನು ಮರೆಮಾಡದೆ;
\q ದೇವರ ಹಸ್ತದ ಮಹಿಮೆಯ ವಿಷಯವನ್ನು ನಿಮಗೆ ಬೋಧಿಸುವೆನು.
\q
\v 12 ಇಗೋ, ನೀವೆಲ್ಲರು ಸ್ವತಃ ನೋಡಿದ್ದೀರಿ;
\q ಏಕೆ ಇಂಥ ವ್ಯರ್ಥವಾದ ಆಲೋಚನೆಗಳನ್ನು ಮಾಡಿಕೊಳ್ಳುತ್ತೀರಿ?
\s5
\q
\v 13 ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ,
\q ಹಿಂಸಿಸುವವನಿಗೆ ಸರ್ವಶಕ್ತನಾದ ದೇವರಿಂದ ಸಿಕ್ಕುವ ಸ್ವಾಸ್ತ್ಯವೂ ಹೀಗಿರುತ್ತದೆ.
\q
\v 14 ಅವನಿಗೆ ಮಕ್ಕಳು ಹೆಚ್ಚಿದರೆ ಕತ್ತಿಗೆ ತುತ್ತಾಗುವರು,
\q ಅವನ ಸಂತತಿಯವರಿಗೆ ಅನ್ನದ ಕೊರತೆ ತಪ್ಪದು.
\s5
\q
\v 15 ಅವನ ಮನೆಯವರಲ್ಲಿ ಯಾರಾದರೂ ಉಳಿದರೆ ವ್ಯಾಧಿಯು ಅವರನ್ನು ಮಣ್ಣಿಗೆ ಸೇರಿಸುವುದು,
\q
\f +
\fr 27:15
\ft ಅಥವಾ ಅವನ
\f* ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
\q
\v 16 ಅವನು ಬೆಳ್ಳಿಯನ್ನು ಧೂಳಿನ ಹಾಗೆ ಹೇರಳವಾಗಿ ಕೂಡಿಸಿಟ್ಟು,
\q ವಸ್ತ್ರಗಳನ್ನು ಮಣ್ಣಿನಂತೆ ವಿಶೇಷವಾಗಿ ಸಿದ್ಧಮಾಡಿಕೊಂಡರೂ,
\q
\v 17 ಆ ವಸ್ತ್ರಗಳನ್ನು ನೀತಿವಂತರು ಧರಿಸಿಕೊಳ್ಳುವರು.
\q ಆ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
\s5
\q
\v 18 ಅವನು ಕಟ್ಟಿಕೊಂಡ ಮನೆಯು ಜೇಡರ ಹುಳದ ಗೂಡಿನಂತೆಯೂ,
\q ಕಾವಲುಗಾರನು ಹಾಕಿಕೊಂಡ ಗುಡಿಸಿಲಂತೆಯೂ ದುರ್ಬಲವಾಗಿರುವುದು.
\q
\v 19 ಅವನು ಧನಿಕನಾಗಿ ನಿದ್ರಿಸಿದರೂ ಮತ್ತೆ ನಿದ್ರೆಯನ್ನು ಕಾಣದೆ ಹೋಗುವನು,
\q ತನ್ನ ಕಣ್ಣನ್ನು ತೆರೆಯುತ್ತಲೇ ಎಲ್ಲವೂ ಮಾಯವಾಗುತ್ತದೆ.
\s5
\q
\v 20 ವಿಪತ್ತಿನ ಹೊಳೆಗಳು ಅವನನ್ನು ಹಿಂದಟ್ಟಿ ಹಿಡಿಯುವವು,
\q ರಾತ್ರಿಯಲ್ಲಿ ಬಿರುಗಾಳಿಯು ಅವನನ್ನು ಅಪಹರಿಸುವುದು.
\q
\v 21 ಮೂಡಣ ಗಾಳಿಯು ಕೊಚ್ಚಿಕೊಂಡು ಹೋಗುವುದರಿಂದ ಅವನು ಹಾರಿ ಹೋಗುವನು,
\q ಅದು ಅವನನ್ನು ಬಡಿದು ಅವನ ಸ್ಥಳದಿಂದ ದೂರಮಾಡುವುದು.
\s5
\q
\v 22 ಆ
\f +
\fr 27:22
\ft ಅಥವಾ ದೇವರು
\f* ಗಾಳಿಯು ಕರುಣೆ ಇಲ್ಲದೆ ಅವನ ಮೇಲೆ ತನ್ನ ಬಾಣಗಳನ್ನು ಎಸೆಯುತ್ತಲಿರುವನು,
\q ಅವನು ಆತನ ಕೈಯಿಂದ ತಪ್ಪಿಸಿಕೊಳ್ಳಲೇ ಬೇಕೆಂದಿರುವನು.
\q
\v 23 ಜನರು ಅವನನ್ನು ನೋಡಿ ಚಪ್ಪಾಳೆಹೊಡೆದು ಛೀಮಾರಿ ಹಾಕಿ,
\q ಆಚೆಗೆ ಹೊರಡಿಸುವರು.>>
\s5
\c 28
\s ಯೋಬನು ಜ್ಞಾನ ಮತ್ತು ತಿಳಿವಳಿಕೆ ಕುರಿತು ಮಾತನಾಡಿದ್ದು
\b
\q
\v 1 <<ಬೆಳ್ಳಿ ಸಿಕ್ಕುವ ಗಣಿಯೂ,
\q ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ.
\q
\v 2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು,
\q ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
\s5
\q
\v 3 ಮನುಷ್ಯರು ಕತ್ತಲನ್ನು ನಿವಾರಿಸಿ ಕಾರ್ಗತ್ತಲಲ್ಲಿಯೂ,
\q ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ವರೆಗೆ ಹುಡುಕುವರು.
\q
\v 4 ಗಣಿಯನ್ನು ತೋಡಿ ತೋಡಿ ಭೂಮಿಯೊಳಗೆ ಬಹುದೂರ ಜನರು ವಾಸಸ್ಥಳಗಳಿಂದ ದೂರವಾಗುವರು,
\q ಭೂಮಿಯ ಮೇಲೆ ನಡೆದಾಡುವವರಿಗೆ ಕಾಣದೆ, ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ಅಲೆದಾಡುವರು.
\s5
\q
\v 5 ಭೂಮಿಯು ಅನ್ನವನ್ನು ಕೊಡುವುದು,
\q ಅದರ ಕೆಳಭಾಗವು ಬೆಂಕಿ ಬಿದ್ದಂತೆ ಹಾಳಾಗಿರುವುದು.
\q
\v 6 ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು,
\q ಅದರಲ್ಲಿ ಚಿನ್ನದ ಪುಡಿಯೂ ಇರುವುದು.
\s5
\q
\v 7 ಆ ದಾರಿಯು ಯಾವ ಹದ್ದಿಗೂ ತಿಳಿಯದು,
\q ಗಿಡಗದ ಕಣ್ಣಿಗೂ ಬಿದ್ದಿಲ್ಲ.
\q
\v 8 ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ,
\q ಸಿಂಹವು ಆ ಮಾರ್ಗವನ್ನು ತುಳಿದಿಲ್ಲ.
\s5
\q
\v 9 ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡದ ತನಕ ಕೆಡವಿಬಿಡುವನು.
\q
\v 10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು;
\q ಅವನ ಕಣ್ಣು ಅಮೂಲ್ಯ ಪದಾರ್ಥಗಳನ್ನೆಲ್ಲಾ ಕಾಣುವುದು.
\q
\v 11 ನೀರಿನ ಒರತೆಗಳನ್ನು ಹುಡುಕಿ ಹೊರತರುತ್ತಾನೆ,
\q ಮರೆಯಾಗಿದ್ದ ವಸ್ತುವನ್ನು ಬೆಳಕಿಗೆ ತರುವನು.
\b
\s5
\q
\v 12 ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ?
\q
\v 13 ಅದರ ಕ್ರಯವು ಯಾರಿಗೂ ಗೊತ್ತಿಲ್ಲ,
\q ಭೂಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
\q
\v 14 ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು,
\q ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು.
\s5
\q
\v 15 ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ,
\q ಅದರ ಬೆಲೆಗೆ ಬೆಳ್ಳಿಯನ್ನು ತೂಗುವುದು ಅಶಕ್ಯ.
\q
\v 16 ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ,
\q ಇಂದ್ರನೀಲ, ಇವುಗಳಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತು ಮಾಡುವುದಕ್ಕೆ ಆಗದು.
\q
\v 17 ಬಂಗಾರವಾಗಲಿ, ಸ್ಫಟಿಕವಾಗಲಿ ಅದಕ್ಕೆ ಸಮವಾದೀತೇ?
\q ಚಿನ್ನದ ಆಭರಣಗಳನ್ನು ಅದಕ್ಕೆ ಬದಲಾಗಿಕೊಡುವುದು ಸಾಧ್ಯವೋ?
\s5
\q
\v 18 ಜ್ಞಾನವಿರುವಲ್ಲಿ ಹವಳವೂ, ಸ್ಫಟಿಕವೂ ನೆನಪಿಗೆ ಬರುವುದಿಲ್ಲ.
\q ಮುತ್ತುಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವುದು ಕಷ್ಟ!
\q
\v 19 ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಿಲ್ಲ,
\q ಶುದ್ಧ ಕನಕದೊಡನೆ ಅದನ್ನು ತೂಗಲಾಗದು.
\b
\s5
\q
\v 20 ಹೀಗಿರಲು ಜ್ಞಾನವು ಎಲ್ಲಿಂದ ಬರುವುದು?
\q ವಿವೇಕವು ಯಾವ ಸ್ಥಳದಲ್ಲಿ ದೊರಕೀತು?
\q
\v 21 ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ,
\q ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
\q
\v 22 ನಾಶನವೂ
\f +
\fr 28:22
\fq ನಾಶನವೂ
\ft ಅಥವಾ ಅಬ್ಬದೋನ್ ಅಂದರೆ ಅಧೋಲೋಕ.
\f* , ಮೃತ್ಯುವೂ,
\q <ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆ> ಎಂದು ಹೇಳುವವು.
\s5
\q
\v 23 ಅದರ ಮಾರ್ಗವನ್ನು ಬಲ್ಲವನು ದೇವರೇ;
\q ಅದರ ಸ್ಥಳವು ಆತನೊಬ್ಬನಿಗೇ ಗೊತ್ತು.
\q
\v 24 ಆತನೊಬ್ಬನೇ ಭೂಮಿಯ ಕಟ್ಟಕಡೆಯ ತನಕ
\q ದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ.
\q
\v 25 ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ
\q ನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿದನು.
\s5
\q
\v 26 ಮಳೆಗೆ ಕಟ್ಟಳೆಯನ್ನೂ,
\q ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ,
\q
\v 27 ಜ್ಞಾನವನ್ನು ಕಂಡು ಲಕ್ಷಿಸಿದನು,
\q ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆಮಾಡಿದನು.
\q
\v 28 ಆಮೇಲೆ ಮನುಷ್ಯರಿಗೆ,
\q <ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ> >> ಎಂದು ಹೇಳಿದನು.
\s5
\c 29
\s ಯೋಬನ ಅಂತಿಮ ಸಂಭಾಷಣೆ
\p
\v 1 ತರುವಾಯ ಯೋಬನು ಪ್ರಸ್ತಾಪವನ್ನೆತ್ತಿ ಇಂತೆಂದನು,
\q
\v 2 <<ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು!
\q ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಿದ್ದನಲ್ಲಾ!
\q
\v 3 ಆತನ ದೀಪವು ನನ್ನ ತಲೆಯ ಮೇಲೆ ಪ್ರಕಾಶಿಸುತ್ತಿತ್ತು,
\q ಆತನ ಬೆಳಕಿನಿಂದ ಕತ್ತಲಲ್ಲೂ ಸಂಚರಿಸುತ್ತಿದ್ದೆನು.
\s5
\q
\v 4 ಆ ದಿನಗಳು ನನ್ನ ಜೀವಮಾನದ ಸುಗ್ಗೀಕಾಲವು,
\q ದೇವರ ಸ್ನೇಹವು ನನ್ನ ಗುಡಾರವನ್ನು ಆವರಿಸಿಕೊಂಡಿತ್ತು.
\q
\v 5 ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು,
\q ನನ್ನ ಮಕ್ಕಳು ನನ್ನ ಸುತ್ತಲಿದ್ದರು.
\q
\v 6 ಹಾಲು ತುಪ್ಪದಲ್ಲಿ ನನ್ನ ಪಾದಗಳನ್ನು ತೊಳೆಯುತ್ತಿದ್ದೆ,
\q ಬಂಡೆಯು ನನಗೋಸ್ಕರ ಎಣ್ಣೆಯನ್ನು ಪ್ರವಾಹವಾಗಿ ಸುರಿಸುತ್ತಿತ್ತು.
\s5
\q
\v 7 ಊರ ಮುಂದಿನ ಚಾವಡಿಗೆ ಹೋದಾಗಲೂ,
\q ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ
\q
\v 8 ಯೌವನಸ್ಥರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು,
\q ವೃದ್ಧರು ಎದ್ದು ನಿಂತರು.
\s5
\q
\v 9 ಪ್ರಭುಗಳು ಮೌನವಾಗಿ
\q ಬಾಯ ಮೇಲೆ ಕೈಯಿಟ್ಟುಕೊಂಡರು.
\q
\v 10 ಮುಖಂಡರ ನಾಲಿಗೆಯು
\q ಸೇದಿಹೋಗಿ ಧ್ವನಿಯಡಗಿತು.
\s5
\q
\v 11 ಕೇಳಿದ ಕಿವಿಯು ನನ್ನನ್ನು ಹರಸಿತು,
\q ನೋಡಿದ ಕಣ್ಣು ಸಾಕ್ಷಿ ಕೊಟ್ಟಿತು.
\q
\v 12 ಏಕೆಂದರೆ ಅಂಗಲಾಚುವ ಬಡವನನ್ನೂ,
\q ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.
\q
\v 13 ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು,
\q ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.
\s5
\q
\v 14 ನಾನು ಧರ್ಮವನ್ನು ಧರಿಸಿಕೊಂಡೆನು,
\q ಧರ್ಮವು ನನ್ನನ್ನು ಧರಿಸಿತು.
\q ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.
\q
\v 15 ನಾನು ಕುರುಡನಿಗೆ ಕಣ್ಣಾಗಿಯೂ,
\q ಕುಂಟನಿಗೆ ಕಾಲಾಗಿಯೂ ಇದ್ದೆನು.
\q
\v 16 ದರಿದ್ರರಿಗೆ ತಂದೆಯಾಗಿ,
\q ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.
\s5
\q
\v 17 ಅನ್ಯಾಯಗಾರನ ಕೋರೆಗಳನ್ನು ಮುರಿದು,
\q ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.
\b
\q
\v 18 ಆಗ ನಾನು ಹೇಳಿದ್ದೇನೆಂದರೆ, <ನನ್ನ ಗೂಡಿನಲ್ಲಿಯೇ ನಾನು ಸಾಯುವೆನು,
\q ನನ್ನ ದಿನಗಳು ಮರಳಿನಂತೆ ಅಸಂಖ್ಯವಾಗಿರುವವು.
\q
\v 19 ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು,
\q ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವುದು.
\s5
\q
\v 20 ನನ್ನ ಮಾನವು ಹೊಸದಾಗುತ್ತಲೂ,
\q ನನ್ನ ಬಿಲ್ಲು ಕೈಯಲ್ಲಿ ಬಲಗೊಳ್ಳುತ್ತಲೂ ಇರುವವು> ಎಂಬುದೇ.
\q
\v 21 ಜನರು ಕಾದುಕೊಂಡಿದ್ದು ನನ್ನ ಮಾತಿಗೆ ಕಿವಿಗೊಟ್ಟು,
\q ನನ್ನ ಆಲೋಚನೆಯನ್ನು ತಿಳಿದುಕೊಳ್ಳಬೇಕೆಂದು ಮೌನವಾಗಿದ್ದರು.
\q
\v 22 ನಾನು ಮಾತನಾಡಿದ ಮೇಲೆ ಮತ್ತೆ ಅವರು ಮಾತನಾಡುತ್ತಿರಲಿಲ್ಲ,
\q ನನ್ನ ವಚನವೃಷ್ಟಿಯು ಅವರ ಮೇಲೆ ಬೀಳುತ್ತಿತ್ತು,
\s5
\q
\v 23 ಮಳೆಯನ್ನು ಹೇಗೋ ಹಾಗೆಯೇ ನನ್ನನ್ನು ಎದುರು ನೋಡುತ್ತಾ,
\q ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.
\q
\v 24 ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು,
\q ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.
\s5
\q
\v 25 ನಾನು ಅವರಿಗೆ ತಕ್ಕ ಮಾರ್ಗವನ್ನು ಆರಿಸಿಕೊಟ್ಟು,
\q ತನ್ನ ಸೈನ್ಯಗಳ ಮಧ್ಯದಲ್ಲಿ ಕುಳಿತಿರುವ ರಾಜನಂತೆಯೂ,
\q ದುಃಖಿತರನ್ನು ಸಂತೈಸುವ ಮುಖಂಡನಾಗಿ ಆಸೀನನಾಗಿದ್ದೆನು.>>
\s5
\c 30
\s ಯೋಬನು ತನ್ನ ಸಂಕಟದ ಬಗ್ಗೆ ಮಾತನಾಡಿದ್ದು
\p
\v 1 ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ;
\q ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು.
\q
\v 2 ಅವರ ಕೈ ಬಲದಿಂದ ನನಗೆ ಏನಾದೀತು?
\q ಅವರ ಪುಷ್ಟಿಯು ಕುಗ್ಗಿಹೋಗಿದೆಯಷ್ಟೆ.
\q
\v 3 ಅವರು ಕೊರತೆಯಿಂದಲೂ, ಹಸಿವಿನಿಂದಲೂ ಸೊರಗಿ,
\q ನಿನ್ನೆಯವರೆಗೂ ಹಾಳುಬೀಳಾದ ಒಣ ನೆಲವನ್ನು ನೆಕ್ಕುವರು.
\s5
\q
\v 4 ಪೊದೆಗಳಲ್ಲಿ ಉಪ್ಪಿನ ಸೊಪ್ಪನ್ನು ಕಿತ್ತು, ತಿಂದು
\q ಜಾಲಿಯ ಬೇರುಗಳನ್ನೂ ಆಹಾರಮಾಡಿಕೊಳ್ಳುವರು.
\q
\v 5 ಜನರು ಅವರನ್ನು ತಮ್ಮ ಮಧ್ಯದಿಂದ ತಳ್ಳಿಬಿಟ್ಟು,
\q ಕಳ್ಳನನ್ನು ಓಡಿಸುವ ಹಾಗೆ ಕೂಗಾಡಿ ಓಡಿಸುವರು.
\q
\v 6 ಅವರು ಭಯಂಕರವಾದ ತಗ್ಗುಗಳ ಸಂದುಗಳಲ್ಲಿ ವಾಸಿಸತಕ್ಕವರು,
\q ಭೂಮಿಯಲ್ಲಿಯೂ, ಬಂಡೆಗಳಲ್ಲಿಯೂ ಇರುವ ಗುಹೆಗಳೇ ಅವರ ಮನೆಗಳು.
\s5
\q
\v 7 ಪೊದೆಗಳ ಮಧ್ಯದಲ್ಲಿ ಅರಚುವರು ಕತ್ತೆಗಳಂತೆ,
\q ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುವರು.
\q
\v 8 ಮೂರ್ಖರ ಮಕ್ಕಳಾದ ಈ ನೀಚ ಜಾತಿಯವರು ದೇಶಭ್ರಷ್ಟರು.
\q ಅವರು ಕೊರಡೆಗಳ ಪೆಟ್ಟಿನಿಂದ ದೇಶದಿಂದ ಹೊರಹಾಕಲ್ಪಟ್ಟಿದ್ದರೆ.
\s5
\q
\v 9 ಈಗಲಾದರೋ ನನ್ನ ಮೇಲೆ ಗೇಲಿಮಾಡುವ ಹಾಡುಗಳನ್ನು ಕಟ್ಟುವರು.
\q ಮತ್ತು ಅವರ ಕಟ್ಟುಕಥೆಗಳಿಗೆ ಆಸ್ಪದವಾಗಿದ್ದೇನೆ.
\q
\v 10 ನನಗೆ ಅಸಹ್ಯಪಟ್ಟು ದೂರ ನಿಂತು,
\q ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು.
\b
\q
\v 11 ದೇವರು ತಾನು ಹಾಕಿದ್ದ ಕಟ್ಟನ್ನು ಸಡಲಿಸಿ ನನ್ನನ್ನು ಬಾಧಿಸುವುದಕ್ಕೆ ಅವರನ್ನು ಬಿಟ್ಟಿದ್ದಾನೆ.
\q ಅವರು ನನ್ನ ಎದುರಿನಲ್ಲಿಯೇ ಕಡಿವಾಣವನ್ನು ಕಿತ್ತು ಹಾಕಿದ್ದಾರೆ.
\s5
\q
\v 12 ಆ ಕಲಹಗಾರರು ನನ್ನ ಬಲಗಡೆ ಎದ್ದು,
\q ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ.
\q
\v 13 ಅವರು ನನ್ನ ದಾರಿಯನ್ನು ಕಡಿದು, ನನ್ನ ಉಪದ್ರವವನ್ನು ಹೆಚ್ಚಿಸುತ್ತಾರೆ;
\q ಅವರನ್ನು ಎದುರಿಸತಕ್ಕ ಸಹಾಯಕನು ಯಾರೂ ಇಲ್ಲ.
\s5
\q
\v 14 ಕೋಟೆ ಬಿರುಕುಗಳಲ್ಲಿ ನುಗ್ಗಿ,
\q ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.
\q
\v 15 ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು;
\q ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ;
\q ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು.
\s5
\q
\v 16 ಈಗ ನನ್ನ ಆತ್ಮವು ಕರಗಿಹೋಗಿದೆ,
\q ಬಾಧೆಯ ದಿನಗಳು ನನ್ನನ್ನು ಹಿಡಿದುಕೊಂಡಿವೆ.
\q
\v 17 ರಾತ್ರಿಯು ನನ್ನ ಎಲುಬುಗಳನ್ನು ಕೊರೆದು ಕೀಳುತ್ತದೆ,
\q ನನ್ನನ್ನು ಕಚ್ಚುತ್ತಿರುವ ಸಂಕಟಗಳು ಸುಮ್ಮನಿರುವುದಿಲ್ಲ.
\s5
\q
\v 18 ನನ್ನ ಬಟ್ಟೆಯು ರೋಗದ ಅಧಿಕ ಬಲದಿಂದ ಕೆಟ್ಟುಹೋಗಿ;
\q ಅಂಗಿಯ ಕೊರಳ ಪಟ್ಟಿಯ ಹಾಗೆ ನನ್ನನ್ನು ಸುತ್ತಿಕೊಂಡಿದೆ.
\q
\v 19 ಆತನು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾನೆ,
\q ಧೂಳುಬೂದಿಗಳಿಗೆ ಸಮಾನನಾಗಿದ್ದೇನೆ.
\b
\s5
\q
\v 20 ಓ ದೇವರೇ ನಾನು ನಿನಗೆ ಮೊರೆಯಿಟ್ಟರೂ ನೀನು ಉತ್ತರಕೊಡುವುದಿಲ್ಲ,
\q ಎದ್ದು ನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿ.
\q
\v 21 ನೀನು ನನಗೆ ಕ್ರೂರನಾಗಿ ಮಾರ್ಪಟ್ಟಿದ್ದಿ,
\q ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತಿ.
\s5
\q
\v 22 ನನ್ನನ್ನು ಬಿರುಗಾಳಿಗೆ ಎತ್ತಿ ತೂರಿಬಿಟ್ಟು,
\q ಅದರ ಆರ್ಭಟದಲ್ಲಿ ಮಾಯಮಾಡುತ್ತಿ.
\q
\v 23 ನೀನು ನನ್ನನ್ನು ಮರಣಕ್ಕೆ ಗುರಿಮಾಡಿ,
\q ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.
\s5
\q
\v 24 ಆದರೂ ನಾಶಕ್ಕೆ ಒಳಗಾದವನು ಕೈಚಾಚುವುದಿಲ್ಲವೋ?
\q ಆಪತ್ತಿಗೆ ಒಳಪಟ್ಟವನು ಕೂಗಿಕೊಳ್ಳುವುದಿಲ್ಲವೋ?
\q
\v 25 ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ?
\q ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ.
\q
\v 26 ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು,
\q ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು.
\b
\s5
\q
\v 27 ನನ್ನ ಹೃದಯವು ಕುದಿಯುತ್ತಿದೆ,
\q ಅದಕ್ಕೆ ಶಾಂತಿಯಿಲ್ಲ; ಬಾಧೆಯ ದಿನಗಳು ನನಗೆ ಒದಗಿವೆ.
\q
\v 28 ಸಂತೈಸುವ ಸೂರ್ಯನಿಲ್ಲದೆ;
\q ಮಂಕುಬಡಿದಂತೆ ಅಲೆಯುತ್ತಾ
\q ಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ.
\q ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ.
\q
\v 29 ನಾನು ನರಿಗಳ ತಮ್ಮನೂ,
\q ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.
\s5
\q
\v 30 ನನ್ನ ಚರ್ಮವು ಕರಿದಾಗಿ ಉದುರುತ್ತದೆ,
\q ನನ್ನ ಎಲುಬುಗಳು ತಾಪದಿಂದ ಬೆಂದಿದೆ.
\q
\v 31 ಇದರಿಂದ ನನ್ನ ಕಿನ್ನರಿಯಲ್ಲಿ ಗೋಳಾಟವೂ,
\q ನನ್ನ ಕೊಳಲಿನಲ್ಲಿ ಅಳುವ ಧ್ವನಿಯೂ ಕೇಳಿಸುತ್ತವೆ.
\s5
\c 31
\s ಯೋಬನು ತನ್ನ ನಿರ್ದೋಷದ ಬಗ್ಗೆ ಮಾತನಾಡಿದ್ದು
\q
\v 1 <<ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು
\q ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,
\q
\v 2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು,
\q ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
\s5
\q
\v 3 ಆತನು ಅನ್ಯಾಯಗಾರರಿಗೆ ವಿಪತ್ತನ್ನೂ,
\q ಕೆಡುಕರಿಗೆ ಉಪದ್ರವವನ್ನೂ ಕೊಡುತ್ತಾನಲ್ಲವೆ?
\q
\v 4 ಆತನೇ ನನ್ನ ನಡತೆಯನ್ನು ನೋಡಿ ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದೆನು.
\b
\s5
\q
\v 5 ಒಂದು ವೇಳೆ ನಾನು ಕಪಟತನದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದರೆ,
\q
\v 6 ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ,
\q ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!
\s5
\q
\v 7 ನನ್ನ ನಡತೆಯಲ್ಲಿ ದಾರಿತಪ್ಪಿದ್ದರೆ,
\q ನನ್ನ ಹೃದಯವು ಕಂಡಕಂಡದ್ದನ್ನು ಹಿಂಬಾಲಿಸಿದ್ದರೆ,
\q ನನ್ನ ಕೈಗಳಲ್ಲಿ ಕಲ್ಮಷವು ಅಂಟಿಕೊಂಡಿದ್ದರೆ,
\q
\v 8 ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ,
\q ನನ್ನ ಬೆಳೆಯು ನಿರ್ಮೂಲವಾಗಲಿ!
\s5
\q
\v 9 ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮೋಹಗೊಂಡು,
\q ನಾನು ನೆರೆಯವನ ಬಾಗಿಲಲ್ಲಿ ಹೊಂಚು ಹಾಕಿದ್ದರೆ,
\q
\v 10 ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ,
\q ಇತರರು ಆಕೆಯನ್ನು ಸಂಗಮಿಸಲಿ!
\s5
\q
\v 11 ನಾನು ಹೀಗೆ ಮಾಡಿದ್ದರೆ ಅದು ದುಷ್ಕಾರ್ಯವೇ ಸರಿ,
\q ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.
\q
\v 12 ಅದು ನಾಶ ಲೋಕದವರೆಗೂ ನುಂಗುವ ಬೆಂಕಿಯಾಗಿದ್ದು,
\q ನನ್ನ ಆದಾಯವನ್ನೆಲ್ಲಾ ನಿರ್ಮೂಲಮಾಡುತ್ತಿತ್ತು.
\s5
\q
\v 13 ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ,
\q ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ
\q
\v 14 ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?
\q
\v 15 ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಗರ್ಭದಲ್ಲಿ ರೂಪಿಸಿದನಲ್ಲವೇ.
\b
\s5
\q
\v 16 ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?
\q
\v 17 ಅಥವಾ ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ,
\q ನಾನೊಬ್ಬನೇ ತಿಂದೆನೋ?
\q
\v 18 ಹಾಗಲ್ಲ, ನಾನು ಬಾಲ್ಯದಿಂದಲೂ ತಂದೆಯ ರೀತಿಯಲ್ಲಿ ಅನಾಥನನ್ನು ಸಾಕುತ್ತಾ,
\q ನಾನು ಹುಟ್ಟಿದಂದಿನಿಂದಲು ಅನಾಥಳಿಗೆ ದಾರಿತೋರಿಸುತ್ತಾ ಇದ್ದೇನಷ್ಟೆ.
\s5
\q
\v 19 ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ,
\q ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,
\q
\v 20 ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ, ನಾನು ಅವರಿಂದ ಹರಸಲ್ಪಡಲಿಲ್ಲವೋ?
\q
\v 21 ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು,
\q ಅನಾಥನ ಮೇಲೆ ಕೈಮಾಡಿದೆನೋ?
\s5
\q
\v 22 ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ,
\q ತೋಳು ಸಂದಿನಿಂದ ಮುರಿದು ಬೀಳಲಿ.
\q
\v 23 ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ,
\q ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.
\b
\s5
\q
\v 24 ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು,
\q ಅಪರಂಜಿಗೆ, <ನಿನ್ನನ್ನೇ ನಂಬಿದ್ದೇನೆ> ಎಂದು ಹೇಳಿದ್ದರೆ,
\q
\v 25 ನನ್ನ ಆಸ್ತಿ ದೊಡ್ಡದೆಂದೂ,
\q ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ,
\s5
\q
\v 26 ಸೂರ್ಯನು ಪ್ರಕಾಶಿಸುವುದನ್ನಾಗಲಿ,
\q ಚಂದ್ರನು ಕಳೆತುಂಬಿದವನಾಗಿ ಚಲಿಸುವುದನ್ನಾಗಲಿ ನಾನು ನೋಡಿದಾಗ,
\q
\v 27 ಹೃದಯವು ಮರುಳುಗೊಂಡು, ಕೈಯನ್ನು ಬಾಯಿ ಮುದ್ದಾಡಿದ್ದರೆ,
\q
\v 28 ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು,
\q ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.
\s5
\q
\v 29 ನನ್ನನ್ನು ದ್ವೇಷಿಸುವವನಿಗೆ ಕೇಡು ಬಂದಾಗ ಉಬ್ಬಿಕೊಂಡು,
\q ಅವನ ನಾಶನಕ್ಕೆ ಹಿಗ್ಗಿದೆನೋ?
\q
\v 30 ಇಲ್ಲವೇ ಇಲ್ಲ,
\q ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವುದಕ್ಕೆ ನಾನು ಒಪ್ಪಲೇ ಇಲ್ಲ.
\s5
\q
\v 31 ನನ್ನ ಗುಡಾರದ ಆಳುಗಳು,
\q <ನಮ್ಮ ಯಜಮಾನ ಬಡಿಸಿದ ಮಾಂಸದಿಂದ ತೃಪ್ತರಾಗದವರು ಎಲ್ಲಿಯೂ ಸಿಕ್ಕಲಾರರು> ಎಂದು ಹೇಳಿಕೊಳ್ಳುತ್ತಿರಲಿಲ್ಲವೋ?
\q
\v 32 ಪರಸ್ಥಳದವನು ಬಯಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ,
\q ದಾರಿಗೆ ನನ್ನ ಮನೆಯ ಬಾಗಿಲುಗಳನ್ನು ತೆರೆದಿದ್ದೆನಷ್ಟೆ.
\s5
\q
\v 33 ಮನುಷ್ಯನು ಜನ ಸಮುದಾಯಕ್ಕೆ ಹೆದರಿದ್ದರಿಂದಾಗಲಿ,
\q ಕುಲೀನರ ತಿರಸ್ಕಾರವು ನನಗೆ ಭಯ ಹುಟ್ಟಿಸಿದ್ದರಿಂದಾಗಲಿ,
\q
\v 34 ನಾನು ಬಾಗಿಲು ದಾಟದೆ ಮೌನವಾಗಿದ್ದು,
\q ಸಾಮಾನ್ಯ ಜನರ ಹಾಗೆ ನನ್ನ ದ್ರೋಹಗಳನ್ನು ಮರೆಮಾಡಿ,
\q ಎದೆಯಲ್ಲಿ ನನ್ನ ಪಾಪವನ್ನು ಬಚ್ಚಿಟ್ಟುಕೊಂಡಿದ್ದರೆ,
\s5
\q
\v 35 ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು!
\q ಇದೇ ನನ್ನ ಕೈಗುರುತು ನೋಡಿರಿ,
\q ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ!
\q ನನ್ನ ವಿರೋಧಿಯು ಬರೆದುಕೊಂಡ ಅಪಾದನೆಯ ಪತ್ರವು ನನಗೆ ಸಿಕ್ಕಿದರೆ ಎಷ್ಟೋ ಸಂತೋಷ!
\q
\v 36 ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು,
\q ಕಿರೀಟವನ್ನಾಗಿ ಧರಿಸುತ್ತಿದ್ದೆನು.
\q
\v 37 ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು,
\q ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.
\s5
\q
\v 38 ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲ ಗೆರೆಗಳೆಲ್ಲಾ ಅತ್ತರೆ,
\q
\v 39 ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ,
\q ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,
\q
\v 40 ಗೋದಿಗೆ ಬದಲಾಗಿ ಮುಳ್ಳುಗಳೂ,
\q ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.>> ಎಂದನು.
\q ಹೀಗೆ ಯೋಬನ ಮಾತುಗಳು ಮುಗಿದವು.
\s5
\c 32
\s ಎಲೀಹುವಿನ ಮೊದಲನೆಯ ಸಂಭಾಷಣೆ
\p
\v 1 ಆಗ ಯೋಬನು ಸ್ವಂತ ಗಣನೆಯಲ್ಲಿ ನೀತಿವಂತನಾಗಿದ್ದರಿಂದ ಆ ಮೂವರು ಅವನಿಗೆ ಉತ್ತರಕೊಡುವುದನ್ನು ನಿಲ್ಲಿಸಿಬಿಟ್ಟರು.
\v 2 ಆಮೇಲೆ ಬೂಜ್ ಕುಲಕ್ಕೂ, ರಾಮ್ ಗೋತ್ರಕ್ಕೂ ಸೇರಿದ ಬರಕೇಲನ ಮಗನಾದ ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡಿದ್ದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟು ಬಂತು.
\s5
\p
\v 3 ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದುದರಿಂದ ಅವನು ಅವರ ಮೇಲೂ ಕೋಪಿಸಿಕೊಂಡನು.
\v 4 ಅವರು ತನಗಿಂತ ವೃದ್ಧರಾಗಿದ್ದ ಕಾರಣ, ಎಲೀಹು ಯೋಬನೊಂದಿಗೆ ಮೊದಲು ಮಾತನಾಡದೆ ತಡೆದಿದ್ದನು.
\v 5 ಎಲೀಹು ಈ ಮೂವರ ಬಾಯಲ್ಲಿ ತಕ್ಕ ಉತ್ತರವಿಲ್ಲದ್ದನ್ನು ಕಂಡು ರೋಷಗೊಂಡನು.
\s5
\p
\v 6 ಆಗ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಆ ಎಲೀಹು ಇಂತೆಂದನು, <<ನಾನು ಯೌವನಸ್ಥನು, ನೀವು ನನಗಿಂತ ಹಿರಿಯರು;
\q ಆದುದರಿಂದ ಸಂಕೋಚಪಟ್ಟು ನನ್ನ ಅಭಿಪ್ರಾಯವನ್ನು ನಿಮಗೆ ಅರಿಕೆಮಾಡಲು ಹೆದರಿದೆನು.>>
\q
\v 7 ಅದಕ್ಕೆ ಅವನು, <<ಹೆಚ್ಚು ದಿನಗಳವರು ಮಾತನಾಡಲಿ,
\q ಬಹಳ ವರ್ಷದವರು ಜ್ಞಾನೋಪದೇಶಮಾಡಲಿ>> ಎಂದುಕೊಂಡಿದ್ದೆನು.
\s5
\q
\v 8 ಆದರೆ ಮನುಷ್ಯರಲ್ಲಿ ಆತ್ಮವೊಂದುಂಟು,
\q ಸರ್ವಶಕ್ತನಾದ ದೇವರ ಶ್ವಾಸದಿಂದ ಅವರಿಗೆ ವಿವೇಕ ದೊರೆಯುತ್ತದೆ.
\q
\v 9 ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ.
\q
\v 10 ಆದಕಾರಣ, <<ನನ್ನ ಕಡೆಗೆ ಕಿವಿಗೊಡಿರಿ,
\q ನಾನು ನನ್ನ ಅಭಿಪ್ರಾಯವನ್ನು ಅರಿಕೆಮಾಡುವೆನೆಂದು ಹೇಳಿಕೊಳ್ಳುತ್ತೇನೆ.
\s5
\q
\v 11 ಇಗೋ, ನೀವು ಆಡುತ್ತಿದ್ದ ಮಾತುಗಳನ್ನು ಕಾದು ಕೇಳುತ್ತಿದ್ದೆನು;
\q ಏನು ಹೇಳಬೇಕೆಂದು ನೀವು ಆಲೋಚಿಸುತ್ತಿದ್ದಾಗ ನಿಮ್ಮ ನ್ಯಾಯಗಳಿಗಾಗಿ ಕಿವಿಗೊಟ್ಟಿದ್ದೆನು.
\q
\v 12 ನಿಮ್ಮ ಮೇಲೆ ಲಕ್ಷ್ಯವಿಟ್ಟಿದ್ದೆನು;
\q ಆಹಾ, ನಿಮ್ಮಲ್ಲಿ ಯೋಬನನ್ನು ಖಂಡಿಸಬಲ್ಲವನು,
\q ಅವನ ಮಾತುಗಳಿಗೆ ಉತ್ತರಕೊಡತಕ್ಕವನು, ಯಾರೂ ಸಿಕ್ಕಲಿಲ್ಲ.
\s5
\q
\v 13 <ನಾವು ಅವನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ,
\q ದೇವರೇ ಅವನನ್ನು ಖಂಡಿಸಿಬಿಡಲಿ, ಮನುಷ್ಯನಿಂದಾಗುವುದಿಲ್ಲ> ಎಂದು ಅಂದುಕೊಳ್ಳಬೇಡಿರಿ.
\q
\v 14 ಅವನು ನನಗೆ ಪ್ರತಿಕೂಲವಾಗಿ ಇನ್ನೂ ವಾದವನ್ನು ಹೂಡಲಿಲ್ಲ;
\q ನಾನೂ ಅವನಿಗೆ ಉತ್ತರಕೊಡುವಾಗ ನಿಮ್ಮ ಹಾಗೆ ಮಾತನಾಡೆನು.
\b
\s5
\q
\v 15 ಅವರು ಬೆರಗಾಗಿ ಇನ್ನು ಉತ್ತರಕೊಡಲಾರರು,
\q ಅವರ ಸೊಲ್ಲೇ ಅಡಗಿಹೋಯಿತು.
\q
\v 16 ಅವರು ಇನ್ನು ಉತ್ತರಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ,
\q ನಾನೂ ಕಾದುಕೊಂಡಿರಬೇಕೋ?
\s5
\q
\v 17 ನಾನೂ ನನ್ನ ಪಾಲಿನ ಉತ್ತರವನ್ನು ಹೇಳುವೆನು,
\q ನಾನೂ ನನ್ನ ಅಭಿಪ್ರಾಯವನ್ನು ತಿಳಿಸುವೆನು.
\q
\v 18 ನನ್ನಲ್ಲಿ ಮಾತುಗಳು ತುಂಬಿವೆ,
\q ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.
\q
\v 19 ಆಹಾ, ದ್ರಾಕ್ಷಾರಸವನ್ನು ತುಂಬಿ,
\q ಬಾಯಿಕಟ್ಟಿದ ಹೊಸ ಬುದ್ದಲಿಗಳಂತೆ ನನ್ನ ಹೊಟ್ಟೆಯು ಒಡೆದುಹೋಗುವ ಹಾಗಿದೆ.
\s5
\q
\v 20 ನನಗೆ ಉಪಶಮನವಾಗುವ ಹಾಗೆ ಮಾತನಾಡುವೆನು.
\q ನನ್ನ ತುಟಿಗಳನ್ನು ತೆರೆದು ಉತ್ತರ ಹೇಳುವೆನು.
\q
\v 21 ಆದರೆ ನಾನು ಯಾರಿಗೂ ಮುಖದಾಕ್ಷಿಣ್ಯವನ್ನು ತೋರಿಸಬಾರದು,
\q ಯಾವ ಮನುಷ್ಯನಿಗಾದರೂ ಮುಖಸ್ತುತಿಯನ್ನು ಮಾಡಕೂಡದು.
\q
\v 22 ಮುಖಸ್ತುತಿಯನ್ನು ಮಾಡುವುದಕ್ಕೆ ನನ್ನಿಂದಾಗುವುದಿಲ್ಲ;
\q ಮಾಡಿದರೆ ನನ್ನ ಸೃಷ್ಟಿಕರ್ತನು ನನ್ನನ್ನು ಬೇಗ ನಿರ್ಮೂಲ ಮಾಡುವೆನು.
\s5
\c 33
\s ಎಲೀಹು ಯೋಬನಿಗೆ ಸವಾಲೆಸೆದಿದ್ದು
\b
\q
\v 1 ಅದಿರಲಿ, ಯೋಬನೇ, ನನ್ನ ಮಾತನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು.
\q
\v 2 ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನ
\q ನಾಲಿಗೆಯು ಬಾಯಿಯೊಳಗಿಂದ ಮಾತನಾಡುತ್ತಿದೆ.
\q
\v 3 ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು,
\q ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು.
\s5
\q
\v 4 ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ,
\q ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.
\q
\v 5 ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು,
\q ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ.
\s5
\q
\v 6 ನೋಡು, ನಾನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ.
\q ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ.
\q
\v 7 ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು,
\q ನನ್ನ ಒತ್ತಾಯವು ನಿನಗೆ ಹೊರೆಯಾಗಿರದು.
\b
\s5
\q
\v 8 ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ,
\q ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡಿದ್ದಿ,
\q
\v 9 <ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನು ಪಾಪವಿಲ್ಲ.
\s5
\q
\v 10 ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು,
\q ನನ್ನನ್ನು ಶತ್ರುವೆಂದು ಎಣಿಸಿಕೊಂಡಿದ್ದಾನೆ.
\q
\v 11 ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ,
\q ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ> ಎಂದು ಹೇಳಿದೆಯಲ್ಲಾ.
\q
\v 12 ಇಗೋ, ನೀನು ಹೀಗೆ ಹೇಳಿದ್ದು ನ್ಯಾಯವಲ್ಲವೆಂಬುದೇ ನನ್ನ ಉತ್ತರ,
\q ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ.
\b
\s5
\q
\v 13
\f +
\fr 33:13
\ft ಅಥವಾ ಆತನು ತನ್ನ ಕಾರ್ಯಗಳ ಬಗ್ಗೆ ಉತ್ತರ ದಯಪಾಲಿಸುವುದಿಲ್ಲ.
\f* ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬುದಾಗಿ,
\q ನೀನು ಆತನೊಂದಿಗೆ ವ್ಯಾಜ್ಯವಾಡುವುದೇಕೆ?
\q
\v 14 ದೇವರು ಮಾತನಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು,
\q ಮನುಷ್ಯನಾದರೋ ಲಕ್ಷಿಸುವುದಿಲ್ಲ.
\q
\v 15 ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ,
\q ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ,
\s5
\q
\v 16 ಅವರ ಕಿವಿಗಳನ್ನು ತೆರೆದು, ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆ ಹಾಕುವನು.
\q
\v 17 ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು,
\q ಮಾನವನಿಗೆ ಗರ್ವವನ್ನು ಮರೆಮಾಡುವನು.
\q
\v 18 ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು,
\q ಅವನ ಜೀವವನ್ನು ದೈವಾಸ್ತ್ರದಿಂದ ಅಳಿದು ಹೋಗದ ಹಾಗೆ ನಿಲ್ಲಿಸುವನು.
\b
\s5
\q
\v 19 ಇದಲ್ಲದೆ ಸಂಕಟದಿಂದಲೂ, ನಿತ್ಯವಾದ ಎಲುಬುಗಳ ನೋವಿನಿಂದಲೂ,
\q ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು.
\q
\v 20 ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವುದು,
\q ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವುದು.
\s5
\q
\v 21 ಅವನ ಮಾಂಸವು ಕ್ಷಯಿಸಿ ಕಾಣದೆ ಹೋಗುವುದು,
\q ಕಾಣದಿದ್ದ ಅವನ ಎಲುಬುಗಳು ಬಯಲಾಗುವವು.
\q
\v 22 ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವುದು,
\q ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವುದು.
\s5
\q
\v 23 ಮನುಷ್ಯನ ಕರ್ತವ್ಯವನ್ನು ತೋರಿಸತಕ್ಕ ಸಹಸ್ರ ದೇವದೂತರಲ್ಲಿ ಒಬ್ಬನು
\q ಅವನಿಗೆ ಮಧ್ಯಸ್ಥನಾಗಿ ಬೇಡುವುದರಿಂದ,
\q
\v 24 ದೇವರು ಒಂದು ವೇಳೆ ಆ ಮನುಷ್ಯನನ್ನು ಮೆಚ್ಚಿ ಈಡು ದೊರಕುವಂತೆ ಮಾಡಿ,
\q <ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು> ಎಂದು ಅಪ್ಪಣೆಕೊಟ್ಟರೆ,
\s5
\q
\v 25 ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವುದು.
\q ಅವನು ಪುನಃ ಎಳೆತನದ ಚೈತನ್ಯವನ್ನು ಅನುಭವಿಸುವನು.
\q
\v 26 ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ,
\q ಆತನ ದರ್ಶನ ಮಾಡಿ ಉತ್ಸಾಹದಿಂದ ಧ್ವನಿಗೈದು,
\q ತಿರುಗಿ ಆತನಿಂದ ನೀತಿವಂತನೆಂದು ಎನ್ನಿಸಿಕೊಳ್ಳುವನು.
\s5
\q
\v 27 ಅವನು ಮನುಷ್ಯರ ಮುಂದೆ ನಿಂತು, <ನಾನು ಪಾಪ ಮಾಡಿ ನ್ಯಾಯವನ್ನು ಕೆಡಿಸಿದ್ದರೂ,
\q ಆತನು ಮುಯ್ಯಿತೀರಿಸಲಿಲ್ಲ.
\q
\v 28 ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ,
\q ನನ್ನ ಜೀವವು ಬೆಳಕನ್ನು ಕಾಣುತ್ತಿರುವುದು> ಎಂದು ಕೀರ್ತನೆ ಹಾಡುವನು.
\b
\s5
\q
\v 29 ದೇವರು ಎರಡು ಸಾರಿ, ಹೌದು ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು.
\q
\v 30 ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ,
\q ಜೀವಲೋಕದ ಬೆಳಕನ್ನು ಅನುಭವಿಸುವಂತೆ ಮಾಡುವನು
\s5
\q
\v 31 ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು,
\q ನಾನೇ ಮಾತನಾಡುವೆನು.
\q
\v 32 ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು,
\q ಮಾತನಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.
\q
\v 33 ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು,
\q ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.>>
\s5
\c 34
\s ಎಲೀಹುವಿನ ಎರಡನೆಯ ಸಂಭಾಷಣೆ
\p
\v 1 ಆಗ ಎಲೀಹು ಮತ್ತೆ ಇಂತೆಂದನು,
\q
\v 2 <<ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ,
\q ಜ್ಞಾನಿಗಳೇ, ನನಗೆ ಕಿವಿಗೊಡಿರಿ!
\q
\v 3 ನಾಲಿಗೆಯು ಆಹಾರವನ್ನು ರುಚಿನೋಡುವಂತೆ,
\q ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
\s5
\q
\v 4 ನ್ಯಾಯವನ್ನೇ ಆರಿಸಿಕೊಳ್ಳೋಣ,
\q ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.
\q
\v 5 ಯೋಬನು, <ನಾನು ನೀತಿವಂತನು,
\q ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.
\q
\v 6 ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ.
\q ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ> ಎಂದು ಹೇಳಿಕೊಂಡಿದ್ದಾನೆ.
\s5
\q
\v 7 ಯೋಬನಿಗೆ ಸಮಾನನು ಯಾರು?
\q ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.
\q
\v 8 ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ,
\q ಕೆಟ್ಟವರ ಸಂಗಡ ನಡೆದಾಡುತ್ತಾನೆ.
\q
\v 9 <ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ,
\q ಅವನಿಗೆ ಯಾವ ಪ್ರಯೋಜನವೂ ಇಲ್ಲ> ಎಂದು ಹೇಳಿದ್ದಾನಷ್ಟೆ.
\b
\s5
\q
\v 10 ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ,
\q ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ,
\q ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!
\q
\v 11 ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು,
\q ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.
\q
\v 12 ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ,
\q ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.
\b
\s5
\q
\v 13 ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು?
\q ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?
\q
\v 14 ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ,
\q ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,
\q
\v 15 ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು,
\q ಪುನಃ ಮನುಷ್ಯರು ಧೂಳೇ ಆಗುವರು.
\b
\s5
\q
\v 16 ನಿನಗೆ ವಿವೇಕವಿದ್ದರೆ ಇದನ್ನು ಕೇಳು,
\q ನನ್ನ ಮಾತುಗಳ ಧ್ವನಿಗೆ ಕಿವಿಗೊಡು!
\q
\v 17 ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ?
\q ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?
\s5
\q
\v 18 ಆತನು ರಾಜನಿಗೆ, <ನೀನು ಮೂರ್ಖ>
\q ಪ್ರಭುಗಳಿಗೆ, <ನೀವು ಕೆಟ್ಟವರು> ಎಂದು ಹೇಳಬಲ್ಲನೇ?
\q
\v 19 ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ,
\q ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು;
\q ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.
\q
\v 20 ಕ್ಷಣ ಮಾತ್ರದೊಳಗೆ ಸಾಯುವರು;
\q ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು,
\q ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.
\b
\s5
\q
\v 21 ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು,
\q ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.
\q
\v 22 ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ,
\q ಅನುಕೂಲವಾದ ಯಾವ ಕತ್ತಲೂ,
\q ಯಾವ ಗಾಢಾಂಧಕಾರವೂ ಇರುವುದಿಲ್ಲ.
\q
\v 23 ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ,
\q ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.
\s5
\q
\v 24 ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು,
\q ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.
\q
\v 25 ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ,
\q ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.
\s5
\q
\v 26 ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.
\q
\v 27 ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.
\q
\v 28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು,
\q ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.
\b
\s5
\q
\v 29 ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು?
\q ವಿಮುಖನಾದರೆ ಆತನ ದರ್ಶನ ಮಾಡುವವರಾರು?
\q ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.
\q
\v 30 ಭ್ರಷ್ಟನು ಆಳಬಾರದು,
\q ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.
\s5
\q
\v 31 ಮನುಷ್ಯನು ದೇವರನ್ನು ಕುರಿತು,
\q <ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,
\q
\v 32 ನಾನು ಕಾಣದಿರುವುದನ್ನು ನೀನೇ ಸೂಚಿಸು;
\q ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ
\q ಇನ್ನು ಮೇಲೆ ಮಾಡುವುದಿಲ್ಲ> ಎಂದು ಹೇಳುವುದಕ್ಕಾದೀತೇ?
\q
\v 33 ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ?
\q ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ?
\q ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು.
\q ನಿನಗೆ ತಿಳಿದದ್ದನ್ನು ತಿಳಿಸು.
\s5
\q
\v 34 ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,
\q
\v 35 <ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ,
\q ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.>
\s5
\q
\v 36 ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ!
\q ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.
\q
\v 37 ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ;
\q ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು,
\q ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ>> ಎಂದು ನನಗೆ ಹೇಳುವರು.
\s5
\c 35
\s ಎಲೀಹುವಿನ ಮೂರನೆಯ ಸಂಭಾಷಣೆ
\p
\v 1 ಆ ಮೇಲೆ ಎಲೀಹು ಮತ್ತೆ ಇಂತೆಂದನು,
\q
\v 2 <<ನೀತಿಯಿಂದ ನನಗೇನು ಪ್ರಯೋಜನವಾಯಿತು?
\q ಪಾಪಮಾಡದೆ ಇದ್ದುದರಿಂದ ನನಗಾದ ಹೆಚ್ಚು ಲಾಭವೇನು?
\q
\v 3 ಈ ರೀತಿ ನೀನು ನುಡಿಯುವುದು ನ್ಯಾಯವೆಂದು ನೀನು ಊಹಿಸಿಕೊಂಡು,
\q ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತಿಯಾ?
\s5
\q
\v 4 ನಾನು ನಿನಗೂ, ನಿನ್ನ ಜೊತೆಗಾರರಿಗೂ ಕೂಡ ಉತ್ತರಕೊಡುವೆನು.
\q
\v 5 ಕಣ್ಣೆತ್ತಿ ಗಗನಮಂಡಲವನ್ನು ನೋಡು, ಮೇಘಮಾರ್ಗವನ್ನು ದೃಷ್ಟಿಸು,
\q ಅವು ನಿನಗಿಂತ ಎಷ್ಟೋ ಎತ್ತರವಾಗಿವೆ!
\s5
\q
\v 6 ನೀನು ಪಾಪಮಾಡಿದ್ದರೆ ಆತನಿಗೆ ಏನು ಮಾಡಿದಂತಾಯಿತು?
\q ನಿನ್ನ ದ್ರೋಹಗಳು ಹೆಚ್ಚಾಗಿದ್ದರೂ ಆತನಿಗೇನು?
\q
\v 7 ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು?
\q ನಿನ್ನ ಕೈಯಿಂದ ಆತನಿಗೆ ಲಾಭವೇನು?
\q
\v 8 ನಿನ್ನ ಕೆಟ್ಟತನದಿಂದ ನಿನ್ನಂಥ ಮನುಷ್ಯನಿಗೇ ನಷ್ಟವಾದೀತು,
\q ನಿನ್ನ ನೀತಿಯಿಂದ ನರಜನ್ಮದವನಿಗೇನು ಲಾಭ ಸಿಕ್ಕಬಹುದು.
\s5
\q
\v 9 ಅಪಾರವಾದ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾ,
\q ಬಲಿಷ್ಠರ ಭುಜಬಲದಿಂದ ಪೀಡಿತರಾಗಿ ಕೂಗಿಕೊಳ್ಳುವರು.
\q
\v 10 <ನನ್ನ ಸೃಷ್ಟಿ ಕರ್ತನಾದ ದೇವರು ಎಲ್ಲಿ?
\q ಆತನು ರಾತ್ರಿಯಲ್ಲಿಯೂ ಕೀರ್ತನೆಗಳನ್ನು ಹಾಡುತ್ತಾನಲ್ಲಾ ಎಂದು ಯಾರೂ ಹೇಳುವುದಿಲ್ಲ.
\q
\v 11 ಆತನು ಕಾಡು ಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ,
\q ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ> ಎಂದು ಹೇಳುವುದೇ ಇಲ್ಲ.
\s5
\q
\v 12 ಇಂಥಾ ಸಂದರ್ಭದಲ್ಲಿ ಅವರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುವರು,
\q ಆದರೂ ಆತನು ಉತ್ತರವನ್ನು ದಯಪಾಲಿಸುವುದಿಲ್ಲ.
\q
\v 13 ದೇವರು ಮೂರ್ಖನ ಮಾತಿಗೆ ಕಿವಿಗೊಡುವುದೇ ಇಲ್ಲ, ಸರ್ವಶಕ್ತನಾದ ದೇವರು ಅದನ್ನು ಎಂದಿಗೂ ಲಕ್ಷಿಸುವುದಿಲ್ಲ.
\q
\v 14 ಹೀಗಿರಲು ಆತನು ಕಾಣುವುದಿಲ್ಲ, ನನ್ನ ವ್ಯಾಜ್ಯವು ಆತನ ಮುಂದೆ ಇದೆ,
\q ಆತನನ್ನು ಕಾದಿರುತ್ತೇನೆ ಎಂದು ನೀನು ಹೇಳಿದರೆ ಆತನು ಕೇಳುತ್ತಾನೆಯೇ?
\s5
\q
\v 15 ಆತನು ದುಷ್ಟರ ಮೇಲೆ ತನ್ನ ಕೋಪವನ್ನು ತೀರಿಸದೆ ಇರುವ ಕಾರಣ ಆಹಾ,
\q ಆತನು ದ್ರೋಹವನ್ನು ವಿಶೇಷವಾಗಿ ಗಮನಿಸುವುದಿಲ್ಲವೆಂದು,
\q
\v 16 ಯೋಬನು ಸುಮ್ಮನೆ ಬಾಯಿ ತೆರೆಯುತ್ತಾನೆ,
\q ಯಾವ ತಿಳಿವಳಿಕೆಯೂ ಇಲ್ಲದೆ ಬಹಳ ಮಾತನಾಡುತ್ತಾನೆ.>>
\s5
\c 36
\s ಎಲೀಹುವಿನ ಅಂತಿಮ ಸಂಭಾಷಣೆ
\p
\v 1 ಆಮೇಲೆ ಎಲೀಹು ಮತ್ತೆ ಹೀಗೆಂದನು,
\q
\v 2 <<ಸ್ವಲ್ಪ ತಾಳು, ನಾನು ತಿಳಿಸುತ್ತೇನೆ,
\q ದೇವರ ಪರವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವು ಉಂಟು.
\q
\v 3 ದೂರದಿಂದ ಸಂಪಾದಿಸಿದ ನನ್ನ ತಿಳಿವಳಿಕೆಯ ಪ್ರಕಾರ,
\q ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು.
\s5
\q
\v 4 ನನ್ನ ಮಾತುಗಳು ಸುಳ್ಳಲ್ಲವೆಂಬುದು ನಿಶ್ಚಯ,
\q ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
\q
\v 5 ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವುದಿಲ್ಲ,
\q ಆತನ ಬುದ್ಧಿ ಸಾಮರ್ಥ್ಯವು ಅಪಾರವಾಗಿದೆ.
\s5
\q
\v 6 ಆತನು ದುಷ್ಟರ ಪ್ರಾಣವನ್ನು ಉಳಿಸುವುದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು.
\q
\v 7 ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ,
\q ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ,
\q ಉನ್ನತಪದವಿಗೆ ಅವರನ್ನು ತರುವನು.
\s5
\q
\v 8 ಅವರು ಒಂದು ವೇಳೆ ಬಂಧನಕ್ಕೆ ಸಿಕ್ಕಿಕೊಂಡು,
\q ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ,
\q
\v 9 ಆತನು ಅವರ ದುಷ್ಕೃತ್ಯವನ್ನೂ,
\q ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು.
\s5
\q
\v 10 ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಗಳನ್ನು ತೆರೆದು,
\q ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು.
\q
\v 11 ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ,
\q ತಮ್ಮ ದಿನಗಳನ್ನು ಸುಖದಲ್ಲಿಯೂ,
\q ವರ್ಷಗಳನ್ನು ಸಂತೋಷದಲ್ಲಿಯೂ ಕಳೆಯುವರು.
\q
\v 12 ಕೇಳದಿದ್ದರೆ ದೈವಾಸ್ತ್ರದಿಂದ ಅಳಿದುಹೋಗುವರು,
\q ಜ್ಞಾನಹೀನರಾಗಿಯೇ ಪ್ರಾಣಬಿಡುವರು.
\s5
\q
\v 13
\f +
\fr 36:13
\ft ಅಥವಾ ಕಪಟ ಹೃದಯಿಗಳು.
\f* ದೇವರನ್ನು ಹೃದಯದಲ್ಲಿ ನಂಬದಿರುವವರು ಸಿಟ್ಟುಗೊಂಡಿರುವರು,
\q ಆತನು ಅವರನ್ನು ಬಂಧಿಸುವಾಗಲೂ ಆತನಿಗೆ ಮೊರೆಯಿಡುವುದಿಲ್ಲ.
\q
\v 14 ಯೌವನದಲ್ಲೇ ಸಾಯುವರು.
\q ಅವರ ಜೀವವು ಪುರಷಗಾಮಿಗಳ ಜೀವದಂತೆ ಕ್ಷಯಿಸುವುದು.
\s5
\q
\v 15 ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು,
\q ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು.
\q
\v 16 ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ,
\q ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ,
\q ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ.
\b
\s5
\q
\v 17 ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ,
\q ನ್ಯಾಯವಿಚಾರಣೆಗೂ, ನ್ಯಾಯತೀರ್ಪಿಗೂ ಒಳಗಾಗಿದ್ದಿ.
\b
\q
\v 18 ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ!
\q ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!
\s5
\q
\v 19 ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ,
\q ಧನಸಾಮರ್ಥ್ಯವೂ ನಿನಗೆ ಈಡಾಗುವುದೇ?
\q
\v 20 ಜನಾಂಗಗಳು ತಟ್ಟನೆ ನಿರ್ಮೂಲವಾಗುವಾಗ ಅವರ ವಿರುದ್ಧ ಪಾಪಮಾಡದಂತೆ,
\q ರಾತ್ರಿಯನ್ನು ಬಯಸಬೇಡ.
\q
\v 21 ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಡಬೇಡ.
\q ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದಿ.
\s5
\q
\v 22 ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತ ಕಾರ್ಯಗಳನ್ನು ನಡೆಸುವನು,
\q ಆತನಂತಹ ಉಪದೇಶಕನು ಯಾರು?
\q
\v 23 ಆತನ ಮಾರ್ಗವನ್ನು ಆತನಿಗೆ ಯಾರು ನೇಮಿಸಿದರು?
\q <ನೀನು ಅನ್ಯಾಯವನ್ನು ನಡೆಸಿದಿ> ಎಂದು ಯಾರು ಹೇಳಬಲ್ಲರು?
\q
\v 24 ಮನುಷ್ಯರು ಕೀರ್ತಿಸುವ,
\q ಆತನ ಕೆಲಸವನ್ನು ಹೊಗಳಲು ಮರೆಯಬೇಡ.
\b
\s5
\q
\v 25 ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ;
\q ಆದರೆ ನರನು ದೂರದಿಂದ ನೋಡುತ್ತಾನಷ್ಟೆ.
\q
\v 26 ಆಹಾ, ದೇವರು ಮಹೋನ್ನತನಾಗಿದ್ದಾನೆ,
\q ನಾವು ಆತನನ್ನು ಅರಿಯಲಾರೆವು; ಆತನ ವರ್ಷಗಳು ಅಸಂಖ್ಯಾತವಾಗಿವೆ.
\s5
\q
\v 27 ನೀರಿನ ಹನಿಗಳನ್ನು ಎಳೆದುಕೊಳ್ಳುವನು,
\q ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು.
\q
\v 28 ಮೋಡಗಳು ಅದನ್ನು ಸುರಿಸಿ
\q ಸಮೃದ್ಧಿಯಾಗಿ ಜನರ ಮೇಲೆ ಚಿಮುಕಿಸುವುದು.
\q
\v 29 ಆಹಾ, ಮೇಘಗಳ ಹರಡುವಿಕೆಯನ್ನೂ,
\q ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಯಾರು ಗ್ರಹಿಸಬಲ್ಲರು?
\s5
\q
\v 30 ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು,
\q ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು.
\q
\v 31 ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ,
\q ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ.
\s5
\q
\v 32 ಕೈತುಂಬಾ ಸಿಡಿಲನ್ನು ಹಿಡಿದು
\q ನೀನು ವೈರಿಯನ್ನು ಹೊಡೆದು ಗುರಿಮುಟ್ಟುಲು ಬಿಡುವನು.
\q
\v 33 ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವುದು,
\q ದನಕರುಗಳೂ ಸಹ ಆತನ ಆಗಮನವನ್ನು ತಿಳಿಯುವವು.>>
\s5
\c 37
\s ಎಲೀಹುವಿನ ಅಂತಿಮ ಸಂಭಾಷಣೆಯ ಮುಂದುವರಿಕೆ
\b
\q
\v 1 <<ಇದಲ್ಲದೆ ನನ್ನ ಎದೆಯು ಅದಕ್ಕೆ ತತ್ತರಗೊಂಡು,
\q ಮಿಡಿಯುತ್ತ ತನ್ನ ಸ್ಥಳದಿಂದ ಕದಲುವುದು.
\q
\v 2 ಗುಡುಗುಟ್ಟುವ ದೇವರ ಧ್ವನಿಗೆ ಕಿವಿಗೊಡಿರಿ,
\q ಆತನ ಬಾಯಿಂದ ಹೊರಡುವ ಧ್ವನಿಯನ್ನು ಕೇಳಿರಿ!
\q
\v 3 ಆತನು ಅದನ್ನು ಆಕಾಶಮಂಡಲದಲ್ಲೆಲ್ಲಾ ಹಬ್ಬಿಸಿ,
\q ತನ್ನ ಸಿಡಿಲನ್ನು ಭೂಮಿಯ ಅಂಚುಗಳವರೆಗೂ ಬಿಡುವನು.
\s5
\q
\v 4 ಸಿಡಿಲಿನ ತರುವಾಯ ಗರ್ಜನೆಯುಂಟಾಗುವುದು,
\q ಆತನು ತನ್ನ ಮಹಿಮೆಯ ಶಬ್ದದಿಂದ ಗುಡುಗುವನು.
\q ಆ ಶಬ್ದವು ಕೇಳಿಸಿದ ಮೇಲೆಯೂ ಆತನು ಸಿಡಿಲುಗಳನ್ನು ತಡೆಯುವುದಿಲ್ಲ.
\q
\v 5 ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು;
\q ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು ನಡೆಸುವನು.
\q
\v 6 ಆತನು ಹಿಮಕ್ಕೆ, <ಭೂಮಿಯ ಮೇಲೆ ಬೀಳು> ಎಂದು,
\q ತನ್ನ ಶಕ್ತಿಯ ದೊಡ್ಡ ಮಳೆಗೆ, <ರಭಸದಿಂದ ಸುರಿ> ಎಂದು ಅಪ್ಪಣೆಮಾಡುವನು.
\s5
\q
\v 7 ಆತನು ತನ್ನ ಕೆಲಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು,
\q ಪ್ರತಿಯೊಬ್ಬನ ಕೈಗಳನ್ನು ಬಲಪಡಿಸುತ್ತಾನೆ.
\q
\v 8 ಆಗ ಮೃಗಗಳು ಗುಹೆಗಳನ್ನು ಸೇರಿ,
\q ತಮ್ಮ ಗುಹೆಗಳಲ್ಲಿ ವಾಸಿಸುವವು.
\q
\v 9 ಆತನ ಭಂಡಾರದ ದಕ್ಷಿಣದಿಕ್ಕಿನಿಂದ ಬಿರುಗಾಳಿಯೂ,
\q ಉತ್ತರದಿಕ್ಕಿನಿಂದ ಚಳಿಗಾಳಿಯೂ ಬರುವವು.
\s5
\q
\v 10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆಯಾಗುವುದು,
\q ವಿಶಾಲವಾದ ನೀರು ಗಟ್ಟಿಯಾಗುವುದು.
\q
\v 11 ಇದಲ್ಲದೆ ಮೋಡಗಳ ಮೇಲೆ ಮಂಜಿನ ಭಾರವನ್ನು ಹೇರಿ,
\q ತನ್ನ ಮಿಂಚಿನ ಮೇಘಮಂಡಲವನ್ನು ಹರಡುವನು.
\s5
\q
\v 12 ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವುದನ್ನೇ ಮಾಡಲಿ ಎಂದು,
\q ಅವುಗಳನ್ನು ನಡಿಸಿ ಸುತ್ತಮುತ್ತಲು ತಿರುಗಿಸುವನು.
\q
\v 13 ಆತನು ದಂಡನೆಗಾಗಲಿ, ತನ್ನ ಭೂಮಿಯ ಹಿತಕ್ಕಾಗಲಿ, ಕೃಪೆತೋರುವುದಕ್ಕಾಗಲಿ
\q ಹಾಗೂ ಒಡಂಬಡಿಕೆಯ ನಂಬಿಗಸ್ತಿಕೆಯಿಂದ ಆ ಮೇಘಗಳನ್ನು ಬರಮಾಡುವನು.
\b
\s5
\q
\v 14 ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.
\q
\v 15 ದೇವರು ಇವುಗಳನ್ನು ನಿಯಂತ್ರಿಸಿ,
\q ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ?
\s5
\q
\v 16 ಮೋಡಗಳ ತೂಗಾಟವನ್ನೂ,
\q ಜ್ಞಾನಪೂರ್ಣನ ಅದ್ಭುತಕಾರ್ಯಗಳನ್ನೂ ತಿಳಿದುಕೊಂಡಿದ್ದಿಯಾ?
\q
\v 17 ಭೂಮಿಯು ದಕ್ಷಿಣ ಗಾಳಿಯ ದೆಸೆಯಿಂದ ಸ್ತಬ್ಧವಾಗಿರುವ ಸಮಯದಲ್ಲಿ,
\q ಉಡುಪಿನ ಬಿಸಿಯನ್ನು ಅನುಭವಿಸುವ ಅರಿವು ನಿನಗಿರುತ್ತದೆಯೇ?
\s5
\q
\v 18 ತಗಡು ಬಡಿದ ಎರಕದ ದರ್ಪಣದಷ್ಟು ಗಟ್ಟಿಯಾಗಿರುವ
\q ಆಕಾಶಮಂಡಲವನ್ನು ಆತನ ಹಾಗೆ ನಿರ್ಮಿಸಬಹುದೇ?
\q
\v 19 ಆತನಿಗೆ ಹೇಳತಕ್ಕದ್ದನ್ನು ನಮಗೆ ನೀನೇ ತಿಳಿಸು,
\q ಅಂಧಕಾರವು ನಮ್ಮನ್ನು ಕವಿದಿರುವುದರಿಂದ ಏನೂ ಮಾತನಾಡಲು ಸಾಧ್ಯವಿಲ್ಲ.
\q
\v 20 ನಾನು ಮಾತನಾಡಬೇಕೆಂದು ಆತನಿಗೆ ಹೇಳಿ ಕಳುಹಿಸಲು ಸಾಧ್ಯವೇ?
\q ಹಾಗೆ ಮಾಡುವವನು ತನ್ನನ್ನೇ ನಿರ್ಮೂಲ ಮಾಡಿಕೊಂಡಂತೆ.
\b
\s5
\q
\v 21 ಇಗೋ, ಗಾಳಿಯು ಬೀಸಿ ಗಗನವನ್ನು ಶುಭ್ರಪಡಿಸಲು,
\q ಅಲ್ಲಿ ಪ್ರಜ್ವಲಿಸುವ ಪ್ರಕಾಶವನ್ನು ಯಾರೂ ದಿಟ್ಟಿಸಿ ನೋಡಲಾರರು.
\q
\v 22 ಉತ್ತರದಿಕ್ಕಿನಿಂದ ಹೊನ್ನಿನ ಹೊಳಪು ಹೊರಡುವುದು,
\q ದೇವರು ಭಯಂಕರ ತೇಜಸ್ಸನ್ನು ಧರಿಸಿಕೊಂಡಿದ್ದಾನೆ.
\s5
\q
\v 23 ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು;
\q ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ,
\q ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.
\q
\v 24 ಆದಕಾರಣ ಮನುಷ್ಯರು ಆತನಿಗೆ ಭಯಪಡುವರು,
\q ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು ಆತನು ಲಕ್ಷಿಸುವುದೇ ಇಲ್ಲ.>>
\s5
\c 38
\s ಯೆಹೋವನು ಯೋಬನಿಗೆ ಸವಾಲೆಸೆದಿದ್ದು
\p
\v 1 ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
\q
\v 2 <<ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು
\q ಮಂಕುಮಾಡುವ ಇವನು ಯಾರು?
\q
\v 3 ಶೂರನಂತೆ ನಡುಕಟ್ಟಿಕೋ;
\q ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.
\s5
\q
\v 4 ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ?
\q ನೀನು ಜ್ಞಾನಿಯಾಗಿದ್ದರೆ ಹೇಳು.
\q
\v 5 ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ.
\q ಅದರ ಮೇಲೆ ನೂಲುಹಿಡಿದವರು ಯಾರು?
\s5
\q
\v 6 ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು?
\q ಅದರ ಮೂಲೆಗಲ್ಲನ್ನು ಹಾಕಿದವರು ಯಾರು?
\q
\v 7 ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ
\q ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು,
\b
\s5
\q
\v 8 ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು,
\q ಅದರ ದ್ವಾರಗಳನ್ನು ಮುಚ್ಚಿದವರು ಯಾರು?
\q
\v 9 ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ,
\q ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ?
\s5
\q
\v 10 ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ,
\q ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು
\q
\v 11 <ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ,
\q ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು> ಎಂದು ಅಪ್ಪಣೆಕೊಟ್ಟೆನು.
\b
\s5
\q
\v 12 ನಿನ್ನ ಜೀವಮಾನದಲ್ಲಿ ಎಂದಾದರೂ <ಅರುಣೋದಯವಾಗಲಿ> ಎಂದು ಆಜ್ಞಾಪಿಸಿರುವೆಯೋ?
\q ಮುಂಜಾನೆಯ ಬೆಳಗಿಗೆ ಇರತಕ್ಕ ಸ್ಥಳವನ್ನು ಗೊತ್ತುಮಾಡಿದೆಯಾ?
\q
\v 13 ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡು ಎಂದು ಉದಯಕ್ಕೆ ಅಪ್ಪಣೆಕೊಟ್ಟೆಯಾ?
\s5
\q
\v 14 ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಬೆಳಗಾಗುವಾಗ ಭೂಮಿಯು ರೂಪ ತಾಳುತ್ತದೆ.
\q ಎಲ್ಲಾ ವಸ್ತುಗಳು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುವವು.
\q
\v 15 ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು,
\q ಎತ್ತಿದ ಕೈ ಮುರಿಯುವುದು.
\b
\s5
\q
\v 16 ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ?
\q ಭೂಮಿಯ ಕೆಳಗಣ ಸಾಗರದ ಗುಪ್ತ ಪ್ರದೇಶಗಳಲ್ಲಿ ತಿರುಗಾಡಿದ್ದೀಯೋ?
\q
\v 17 ಮರಣದ ಬಾಗಿಲುಗಳು ನಿನಗೆ ಗೋಚರವಾದವೋ?
\q ಘೋರಾಂಧಕಾರದ ಕದಗಳನ್ನು ಕಂಡೆಯಾ?
\q
\v 18 ಭೂಮಿಯ ವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ಗೊತ್ತಿದ್ದರೆ ತಿಳಿಸು.
\b
\s5
\q
\v 19 ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ?
\q
\v 20 ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ,
\q ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ?
\q
\v 21 ನಿನಗೆ ತಿಳಿದಿರಬೇಕು; ಆಗಲೂ ಹುಟ್ಟಿದ್ದಿಯಲ್ಲವೆ;
\q ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು!
\s5
\q
\v 22 ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ,
\q ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ,
\q
\v 23 ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೀಯಾ?
\q ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೀಯಾ?
\q
\v 24 ಬೆಳಕನ್ನು ಭಾಗಿಸುವುದಕ್ಕೆ,
\q ಬಿಸಿಗಾಳಿಯನ್ನು ಭೂಮಿಯ ಮೇಲೆ ವಿಸ್ತರಿಸುವುದಕ್ಕೂ ಮಾರ್ಗವೆಲ್ಲಿ?
\s5
\q
\v 25 ನಿರ್ಜನ ಪ್ರದೇಶದಲ್ಲಿಯೂ,
\q ಮನುಷ್ಯರೇ ಇಲ್ಲದ ಕಾಡಿನಲ್ಲಿಯೂ ಮಳೆಯನ್ನು ಸುರಿಸಿ,
\q
\v 26 ಹಾಳುಬೀಳಾದ ಭೂಮಿಯನ್ನು ತೃಪ್ತಿಪಡಿಸಿ,
\q ಹಸಿ ಹುಲ್ಲನ್ನು ಬೆಳೆಯಿಸಬೇಕೆಂದು,
\q
\v 27 ಅತಿವೃಷ್ಟಿಯ ಪ್ರವಾಹಕ್ಕೆ ಕಾಲುವೆಯನ್ನೂ,
\q ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಯಾರು ಕಡಿದರು?
\s5
\q
\v 28 ಮಳೆಗೆ ತಂದೆಯುಂಟೋ?
\q ಮಂಜಿನ ಹನಿಗಳನ್ನು ಪಡೆದವನು ಯಾರು?
\q
\v 29 ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು?
\q ಆಕಾಶದ ಇಬ್ಬನಿಯನ್ನು ಯಾರು ಹೆತ್ತರು?
\q
\v 30 ನೀರು ಕಲ್ಲಿನಂತೆ ಗಟ್ಟಿಯಾಗುವುದು;
\q ಸಾಗರದ ಮೇಲ್ಭಾಗವೂ ಹೆಪ್ಪುಗೊಳ್ಳುವುದು.
\b
\s5
\q
\v 31 ನೀನು ಕೃತ್ತಿಕೆಯ ಸರಪಣಿಯನ್ನು ಬಿಗಿದು,
\q ಮೃಗಶಿರದ ಸಂಕೋಲೆಯನ್ನು ಬಿಚ್ಚುವೆಯಾ?
\q
\v 32 ಆಯಾ ಸಮಯದಲ್ಲಿ ನಕ್ಷತ್ರ ರಾಶಿಗಳನ್ನು ಬರಮಾಡುವೆಯೋ?
\q ನಕ್ಷತ್ರ ಮಂಡಲ ಪರಿವಾರದೊಡನೆ ನಡೆಸುವೆಯಾ?
\q
\v 33 ಖಗೋಳದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ?
\q ಅದರ ಆಳ್ವಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ?
\b
\s5
\q
\v 34 ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ,
\q ಹೇರಳವಾದ ನೀರು ನಿನ್ನನ್ನು ಆವರಿಸುವುದೋ?
\q
\v 35 ಸಿಡಿಲುಗಳು ನಿನ್ನ ಅಪ್ಪಣೆಯಂತೆ ಹೋಗಿ ಬಂದು,
\q <ಇಗೋ, ಬಂದಿದ್ದೇವೆ> ಎನ್ನುವವೋ?
\s5
\q
\v 36 ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು?
\q ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು?
\q
\v 37 ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು?
\q ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿ,
\q
\v 38 ಧೂಳು ಹರಿದು ಒತ್ತಟ್ಟಿಗೆ ಸೇರುವಂತೆಯೂ,
\q ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಯಾರು ಮಾಡುವರು?
\b
\s5
\q
\v 39 ಗವಿಯಲ್ಲಿ ಮಲಗಿರುವ ಸಿಂಹಕ್ಕೆ ಆಹಾರ ಒದಗಿಸಲು ಬೇಟೆಯಾಡುವೆಯಾ?
\q
\v 40 ಅವುಗಳು ಗುಹೆಯಲ್ಲಿ ಕುಳಿತುಕೊಳ್ಳುವಾಗ,
\q ಪೊದೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹಗಳ ಆಶೆಯನ್ನು ತೀರಿಸುವೆಯೋ?
\s5
\q
\v 41 ತಮ್ಮ ಮರಿಗಳು, ಗುಟುಕಿಲ್ಲದೆ ಅಲೆಯುತ್ತಾ ದೇವರಿಗೆ ಮೊರೆಯಿಡುವಾಗ,
\q ಕಾಗೆಗಳಿಗೆ ಆಹಾರವನ್ನು ಯಾರು ಒದಗಿಸುವರು?>>
\s5
\c 39
\s ಯೆಹೋವನ ಸವಾಲಿನ ಮುಂದುವರಿಕೆ
\q
\v 1 ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ?
\q ಹರಿಣಗಳ ಹೆರಿಗೆಯನ್ನು ನೋಡಿಕೊಳ್ಳುವೆಯಾ?
\q
\v 2 ಅವು ಗರ್ಭವನ್ನು ಹೊರುವ ತಿಂಗಳುಗಳನ್ನು ಎಣಿಸುತ್ತೀಯೋ?
\q ಅವು ಈಯುವ ಕಾಲವನ್ನು ಗೊತ್ತುಮಾಡುವೆಯೋ?
\s5
\q
\v 3 ಅವು ಮರಿಗಳನ್ನು ಹಾಕಿದೊಡನೆಯೇ
\q ತಮ್ಮ ವೇದನೆಯನ್ನೂ ತೊರೆದುಬಿಡುವವು.
\q
\v 4 ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆದು
\q ಅಗಲಿದ ಮೇಲೆ ತಾಯಿಯ ಬಳಿಗೆ ಪುನಃ ಸೇರುವುದೇ ಇಲ್ಲ.
\b
\s5
\q
\v 5 ಕಾಡುಕತ್ತೆಯನ್ನು ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು?
\q ಅದರ ಕಟ್ಟನ್ನು ಬಿಚ್ಚಿದವರು ಯಾರು?
\q
\v 6 ನಾನು ಅಡವಿಯನ್ನು ಅದಕ್ಕೆ ಮನೆಯನ್ನಾಗಿಯೂ,
\q ಮರುಭೂಮಿಯನ್ನು ಅದರ ನಿವಾಸವನ್ನಾಗಿಯೂ ಮಾಡಿದ್ದೇನಷ್ಟೆ.
\s5
\q
\v 7 ಅದು ಊರುಗದ್ದಲವನ್ನು ಧಿಕ್ಕರಿಸಿ,
\q ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ.
\q
\v 8 ಅದರ ಕಾವಲು ವಿಶಾಲವಾದ ಬೆಟ್ಟಗಳೇ.
\q ಹಸಿರು ಎಲ್ಲಿದ್ದರೂ ಅದನ್ನು ಹುಡುಕುತ್ತಲೇ ಇರುವುದು.
\b
\s5
\q
\v 9 ಕಾಡುಕೋಣವು ನಿನ್ನನ್ನು ಸೇವಿಸಲು ಒಪ್ಪಿ,
\q ನಿನ್ನ ಗೋದಲಿಯ ಹತ್ತಿರ ತಂಗುವುದೋ?
\q
\v 10 ನೇಗಿಲ ಸಾಲಿಗೆ ಕಾಡುಕೋಣವನ್ನು ಹಗ್ಗದಿಂದ ಕಟ್ಟುವೆಯಾ?
\q ಅದು ತಗ್ಗಿನ ಭೂಮಿಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?
\s5
\q
\v 11 ಬಲ ಹೆಚ್ಚಾಗಿರುವುದರಿಂದ ಅದರಲ್ಲಿ ನಂಬಿಕೆಯಿಟ್ಟು,
\q ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯೋ?
\q
\v 12 ಅದು ನಿನ್ನ ಕಣದಲ್ಲಿ ಕಾಳನ್ನು ಕೂಡಿಸಿ,
\q ನಿನ್ನ ಬೆಳೆಯನ್ನು ಹೊತ್ತುಕೊಂಡು ಬರುವುದೆಂದು ಭರವಸವಿಡುವೆಯಾ?
\b
\s5
\q
\v 13 ಉಷ್ಟ್ರಪಕ್ಷಿಯ ಪಕ್ಷವು ಸಂತೋಷದಿಂದ ಬಡಿದಾಡುವುದು,
\q ಆದರೆ ಅದರ ರೆಕ್ಕೆಗರಿಗಳಿಗೆ ಪ್ರೀತಿಭಾವವುಂಟೋ?
\q
\v 14 ಅದು ತನ್ನ ಮೊಟ್ಟೆಗಳನ್ನು ಭೂಮಿಯಲ್ಲಿಟ್ಟು,
\q ಧೂಳಿನಿಂದಲೇ ಅವುಗಳಿಗೆ ಕಾವು ಕೊಡಿಸುವುದಲ್ಲವೇ.
\q
\v 15 ಯಾರಾದರು ಕಾಲಿನಿಂದ ತುಳಿದಾರು, ಕಾಡುಮೃಗ ತುಳಿದೀತು ಎಂದು ಯೋಚಿಸುವುದೇ ಇಲ್ಲ.
\s5
\q
\v 16 ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವುದು,
\q ತನ್ನ ಹೆರಿಗೆ ನಿಷ್ಫಲವಾದರೂ ಅದಕ್ಕೆ ಏನೂ ಚಿಂತೆ ಇಲ್ಲ.
\q
\v 17 ದೇವರು ಅದಕ್ಕೆ ಜ್ಞಾನವನ್ನು ಮರೆಮಾಡಿ,
\q ವಿವೇಕವನ್ನು ದಯಪಾಲಿಸದೆ ಇದ್ದಾನಷ್ಟೆ!
\q
\v 18 ಅದು ರೆಕ್ಕೆಬಡಿಯುತ್ತಾ ನೀಳವಾಗಿ ಓಡುವ ಸಮಯದಲ್ಲಾದರೋ,
\q ಕುದುರೆಯನ್ನೂ, ಸವಾರನನ್ನೂ ಹೀಯಾಳಿಸುವುದು.
\b
\s5
\q
\v 19 ನೀನು ಕುದುರೆಗೆ ಶಕ್ತಿಯನ್ನು ಕೊಟ್ಟು,
\q ಅದರ ಕೊರಳಿಗೆ ಗುಡುಗನ್ನು ಕಟ್ಟಿದವನು ನಿನಲ್ಲವೇ?
\q
\v 20 ಅದು ಮಿಡತೆಯ ಹಾಗೆ ಕುಪ್ಪಳಿಸಿ ಹಾರುವಂತೆ ಮಾಡಿದೆಯಾ?
\q ಅದರ ಕೆನೆತನದ ಪ್ರತಾಪವು ಭಯಂಕರವಾಗಿದೆ.
\s5
\q
\v 21 ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ,
\q ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೋಗುವುದು.
\q
\v 22 ಅದು ಕಳವಳಗೊಳ್ಳದೆ ಖಡ್ಗಕ್ಕೆ ಹಿಂದೆಗೆಯದೆ
\q ಭಯವನ್ನು ತಾತ್ಸಾರ ಮಾಡುವುದು.
\q
\v 23 ಬತ್ತಳಿಕೆಯೂ, ಥಳಥಳಿಸುವ ಭರ್ಜಿಯೂ,
\q ಈಟಿಯೂ ಅದರ ಮೇಲೆ ಜಣಜಣಿಸುವವು.
\s5
\q
\v 24 ಅದು ತುತ್ತೂರಿಯ ಶಬ್ದವನ್ನು ಕೇಳಿದರೂ,
\q ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವುದೋ ಎಂಬಂತೆ ಓಡುವುದು.
\q
\v 25 ತುತ್ತೂರಿ ಊದಿದಾಗೆಲ್ಲಾ ಆಹಾ! ಎಂದುಕೊಂಡು
\q ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ,
\q ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವುದು.
\b
\s5
\q
\v 26 ಗಿಡಗವು ತನ್ನ ರೆಕ್ಕೆಗಳನ್ನು ಹರಡಿ,
\q ದಕ್ಷಿಣದಿಕ್ಕಿಗೆ ಹಾರುವುದು ನಿನ್ನ ವಿವೇಕದಿಂದಲೋ?
\s5
\q
\v 27 ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ
\q ಗೂಡುಮಾಡುವುದು ನಿನ್ನ ಅಪ್ಪಣೆಯಿಂದಲೋ?
\q
\v 28 ಅದಕ್ಕೆ ಬಂಡೆಯೇ ನಿವಾಸವು;
\q ಅದು ಶಿಲಾಶಿಖರದಲ್ಲಿಯೂ, ದುರ್ಗದಲ್ಲಿಯೂ ತಂಗುವುದು.
\s5
\q
\v 29 ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ;
\q ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವುದು.
\q
\v 30 ಹೆಣಬಿದ್ದಲ್ಲಿ ರಣಹದ್ದೂ ಅದರ ಮರಿಗಳೂ ಹೀರುತ್ತವೆ ರಕ್ತವನ್ನು;
\s5
\c 40
\p
\v 1 ಇದಲ್ಲದೆ ಯೆಹೋವನು ಯೋಬನಿಗೆ,
\q
\v 2 <<ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ?
\q ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ>> ಎಂದು ಹೇಳಿದನು.
\s ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ
\s5
\p
\v 3 ಆಗ ಯೋಬನು ಯೆಹೋವನಿಗೆ ಉತ್ತರವಾಗಿ,
\q
\v 4 <<ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ?
\q ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು.
\q
\v 5 ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು;
\q ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು>> ಎಂದು ಹೇಳಿದನು.
\s5
\p
\v 6 ಆ ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
\q
\v 7 <<ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು,
\q ನೀನೇ ನನಗೆ ಉಪದೇಶಿಸು.
\s5
\q
\v 8 ನನ್ನ ನೀತಿಯನ್ನು ಖಂಡಿಸಿಬಿಡುವಿಯಾ?
\q ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ?
\q
\v 9 ನಿನ್ನ ಕೈಯೂ, ದೇವರ ಕೈಯೂ ಸಮವೋ?
\q ದೇವರ ಧ್ವನಿಯಂತೆ ಗುಡುಗಬಲ್ಲಿಯಾ?
\s5
\q
\v 10 ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು
\q ಪ್ರಭಾವ ಮಹತ್ವಗಳನ್ನು ಧರಿಸಿಕೋ.
\q
\v 11 ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ,
\q ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು.
\s5
\q
\v 12 ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ,
\q ದುಷ್ಟರನ್ನು ತಟ್ಟನೆ ಕೆಡವಿಬಿಡು.
\q
\v 13 ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ,
\q ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.
\q
\v 14 ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು.
\b
\s5
\q
\v 15 ನಿನ್ನಂತೆ ನನ್ನ ಸೃಷ್ಟಿಯಾಗಿರುವ
\f +
\fr 40:15
\ft ಮೂಲತಃ ಬೆಹೆಮೋತ್ ಅಂದರೆ ದೈತ್ಯಕಾರದ ಮೃಗ.
\f* ನೀರಾನೆಯನ್ನು ನೋಡು;
\q ಎತ್ತಿನ ಹಾಗೆ ಹುಲ್ಲನ್ನು ಮೇಯುವುದು.
\q
\v 16 ಇಗೋ, ಅದರ ಬಲವು ಸೊಂಟದಲ್ಲಿಯೂ,
\q ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ.
\s5
\q
\v 17 ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು;
\q ಅದರ ತೊಡೆಯ ನರಗಳು ಹೆಣೆದುಕೊಂಡಿವೆ.
\q
\v 18 ಅದರ ಮೂಳೆಗಳು ತಾಮ್ರದ ನಳಗಳಂತೆಯೂ,
\q ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು.
\s5
\q
\v 19 ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು.
\q ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ.
\q
\v 20 ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು;
\q ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು;
\q
\v 21 ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ,
\q ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು.
\s5
\q
\v 22 ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು,
\q ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು.
\q
\v 23 ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ.
\q ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.
\q
\v 24 ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ?
\q ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?>> ಎಂದನು.
\s5
\c 41
\s ಯೆಹೋವನ ಸವಾಲಿನ ಮುಂದುವರಿಕೆ
\b
\q
\v 1
\f +
\fr 41:1
\ft ದೈತ್ಯ ಮೊಸಳೆ.
\f* ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ?
\q ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?
\q
\v 2 ಅದರ ಮೂಗಿಗೆ ಗಾಳವನ್ನು ಇಡುವೆಯೋ?
\q ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ?
\q
\v 3 ಅದು ನಿನ್ನ ಬಳಿ ವಿಜ್ಞಾಪಿಸುವುದೋ?
\q ನಿನ್ನ ಸಂಗಡ ಸವಿಮಾತನಾಡೀತೇ?
\s5
\q
\v 4 ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ,
\q ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ?
\q
\v 5 ಅದನ್ನು ಪಕ್ಷಿಯಂತೆ ಆಡಿಸುವೆಯಾ?
\q ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ?
\q
\v 6 ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ?
\q ವರ್ತಕರಿಗೆ ಹಂಚಿ ಮಾರುವರೋ?
\s5
\q
\v 7 ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ
\q ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ?
\q
\v 8 ಅದರ ಮೇಲೆ ಕೈಹಾಕಿ ನೋಡು!
\q ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ.
\q
\v 9 ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ!
\q ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು.
\s5
\q
\v 10 ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ;
\q ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?
\q
\v 11 ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು?
\q ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ.
\b
\q
\v 12 ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ
\q ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು.
\s5
\q
\v 13 ಅದರ ಹೊರಕವಚವನ್ನು ಯಾರು ತೆಗೆಯುವರು?
\q ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು?
\q
\v 14 ಮುಖದ ಕದಗಳನ್ನು ಯಾರು ತೆರೆದಾರು?
\q ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.
\q
\v 15 ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ.
\q ಅವು ಬಿಗಿದು ಮುದ್ರಿಸಲ್ಪಟ್ಟಿವೆ.
\s5
\q
\v 16 ಗಾಳಿಯು ಕೂಡ ನುಗ್ಗದಂತೆ
\q ಅವು ಒಂದಕ್ಕೊಂದು ಹೊಂದಿಕೊಂಡಿವೆ.
\q
\v 17 ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ.
\q
\v 18 ಅದರ ಸೀನಿನ ತುಂತುರುಗಳು ತಳತಳಿಸುವವು,
\q ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ.
\s5
\q
\v 19 ಬಾಯೊಳಗಿಂದ ಕೊಳ್ಳಿಗಳು ಹೊರಡುವವು,
\q ಬೆಂಕಿಕಿಡಿಗಳು ಹಾರುವವು.
\q
\v 20 ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ
\q ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು.
\q
\v 21 ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು.
\s5
\q
\v 22 ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು.
\q
\v 23 ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ.
\q
\v 24 ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
\s5
\q
\v 25 ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.
\q
\v 26 ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು;
\q ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ.
\q
\v 27 ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ
\q ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು.
\s5
\q
\v 28 ಬಿಲ್ಲು ಅದನ್ನು ಓಡಿಸಲಾರದು,
\q ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು.
\q
\v 29 ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು;
\q ಬಿರ್ರನೆ ಬರುವ ಈಟಿಗೆ ನಗುವುದು.
\q
\v 30 ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ,
\q ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು.
\s5
\q
\v 31 ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು;
\q ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು.
\q
\v 32 ಸಾಗರಕ್ಕೆ ನರೆ ಬಂತೋ ಎಂಬಂತೆ
\q ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು.
\s5
\q
\v 33 ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ,
\q ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ.
\q
\v 34 ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು,
\q ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು.
\s5
\c 42
\s ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ
\p
\v 1 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
\q
\v 2 <<ನೀನು ಸಕಲ ಕಾರ್ಯಗಳನ್ನು ನಡೆಸಬಲ್ಲೆಯೆಂತಲೂ,
\q ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.
\q
\v 3 <ಜ್ಞಾನವಿಲ್ಲದೆ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?>
\q ಎಂಬ ನಿನ್ನ ಮಾತಿನಂತೆ ನಾನು ತಿಳಿಯದ ಸಂಗತಿಗಳನ್ನೂ,
\q ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರಿರುವ ಅದ್ಭುತಗಳನ್ನೂ ಕುರಿತು ಮಾತನಾಡಿದ್ದೇನೆ.
\s5
\q
\v 4 ದಯಮಾಡಿ ಕೇಳು, ನಾನೇ ಮಾತನಾಡುವೆನು; ನಾನು ಪ್ರಶ್ನೆಮಾಡುವೆನು,
\q ನೀನೇ ನನಗೆ ಉಪದೇಶಿಸು ಎಂದು ಅಪ್ಪಣೆಕೊಟ್ಟೆ.
\q
\v 5 ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.
\q
\v 6 ಆದಕಾರಣ ನಾನು ಆಡಿದ್ದನ್ನು ತಿರಸ್ಕರಿಸಿ
\q ಧೂಳಿನಲ್ಲಿಯೂ, ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ>> ಎಂದನು.
\s ಸಮಾಪ್ತಿ
\s5
\p
\v 7 ಯೆಹೋವನು ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನನ್ನು ಕುರಿತು, <<ನಿನ್ನ ಮೇಲೆಯೂ, ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀನು ಆಡಲಿಲ್ಲ.
\v 8 ಈಗ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ. ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು. ನಾನು ಅವನ ವಿಜ್ಞಾಪನೆಯನ್ನು ಲಾಲಿಸಿ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ನಿಮಗೆ ವಿಧಿಸುವುದಿಲ್ಲ. ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ>> ಎಂದು ಹೇಳಿದನು.
\v 9 ಆಗ ತೇಮಾನ್ಯನಾದ ಎಲೀಫಜನೂ, ಶೂಹ್ಯನಾದ ಬಿಲ್ದದನೂ, ನಾಮಾಥ್ಯನಾದ ಚೋಫರನೂ ಹೋಗಿ ಯೆಹೋವನು ತಮಗೆ ಆಜ್ಞಾಪಿಸಿದ ಪ್ರಕಾರ ಮಾಡಲು ಯೆಹೋವನು ಯೋಬನ ವಿಜ್ಞಾಪನೆಯನ್ನು ಲಾಲಿಸಿದನು.
\s ಯೆಹೋವನು ಯೋಬನನ್ನು ಪುನಃ ಆಶೀರ್ವದಿಸಿದ್ದು
\s5
\p
\v 10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ, ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು.
\v 11 ಆಗ ಅವನ ಎಲ್ಲಾ ಅಣ್ಣತಮ್ಮಂದಿರೂ, ಎಲ್ಲಾ ಅಕ್ಕತಂಗಿಯರೂ, ಮೊದಲು ಅವನ ಮನೆಯಲ್ಲಿ ಅವನೊಂದಿಗೆ ಭೋಜನಮಾಡುತ್ತಿದ್ದ ಎಲ್ಲಾ ಪರಿಚಿತರೂ ಅವನ ಬಳಿಗೆ ಬಂದು ಯೆಹೋವನು ಅವನ ಮೇಲೆ ಬರಮಾಡಿದ್ದ ಆಪತ್ತಿನ ವಿಷಯವಾಗಿ ತಮ್ಮ ತಮ್ಮ ಅನುತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸಿದರು. ಇದಲ್ಲದೆ ಪ್ರತಿಯೊಬ್ಬರೂ ಒಂದೊಂದು ವರಹವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.
\s5
\p
\v 12 ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ, ಆರು ಸಾವಿರ ಒಂಟೆಗಳೂ, ಒಂದು ಸಾವಿರ ಜೋಡಿ ಎತ್ತುಗಳೂ, ಒಂದು ಸಾವಿರ ಹೆಣ್ಣುಕತ್ತೆಗಳೂ ಉಂಟಾದವು.
\p
\v 13 ಇಷ್ಟು ಮಾತ್ರವಲ್ಲದೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳನ್ನೂ ಪಡೆದನು.
\v 14 ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.
\s5
\p
\v 15 ಯೋಬನ ಮಕ್ಕಳಷ್ಟು ಸುಂದರಸ್ತ್ರೀಯರು ಆ ದೇಶದಲ್ಲಿ ಎಲ್ಲಿಯೂ ಸಿಕ್ಕುತ್ತಿರಲಿಲ್ಲ. ತಂದೆಯು ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸ್ವತ್ತನ್ನು ಹಂಚಿದನು.
\v 16 ಆ ಮೇಲೆ ಯೋಬನು ನೂರನಲ್ವತ್ತು ವರ್ಷ ಬಾಳಿ ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಅಂತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು.
\v 17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು.