diff --git a/en_tn_44-JHN.tsv b/en_tn_44-JHN.tsv index c65f5a0..e2bd063 100644 --- a/en_tn_44-JHN.tsv +++ b/en_tn_44-JHN.tsv @@ -1,4 +1,4 @@ -"Book" "Chapter" "Verse" "ID" "SupportReference" "OrigQuote" "Occurrence" "GLQuote" "OccurrenceNote" +Book Chapter Verse ID SupportReference OrigQuote Occurrence GLQuote OccurrenceNote "JHN" "front" "intro" "t6za" 0 "# ಯೋಹಾನನ ಸುವಾರ್ತೆಗೆ ಪರಿಚಯ

## ಭಾಗ 1: ಸಾಮಾನ್ಯ ಪರಿಚಯ

### ಯೋಹಾನ ( ) 1ರ ಸುವಾರ್ತೆಯ ರೂಪರೇಖೆ

1. ಯೇಸು ಯಾರು ಎಂಬುವುದರ ಪರಿಚಯ (1:1-18) )
1. ಸ್ನಾನಿಕನಾದ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ನೀಡುತ್ತಾನೆ ಮತ್ತು ಯೇಸು 12 ಶಿಷ್ಯರನ್ನು ಆರಿಸಿಕೊಳ್ಳುತ್ತಾನೆ (1:19–51)
1. ಯೇಸು ಜನರಿಗೆ ಬೋಧಿಸುತ್ತಾನೆ, ಕಲಿಸುತ್ತಾನೆ ಮತ್ತು ಗುಣಪಡಿಸುತ್ತಾನೆ (2–11)
1. ಯೇಸುವಿನ ಮರಣದ ಏಳು ದಿನಗಳ ಮೊದಲು (12–19)

*ಮರಿಯಳು ಯೇಸವಿನ ಪಾದಕ್ಕೆ ತೈಲವನ್ನು ಹಚ್ಚುತ್ತಾಳೆ* (12:1–11)
*ಯೇಸು ಕತ್ತೆಯ ಮೇಲೆ ಯರೂಸಲೇಮಿಗೆ ಹೋಗುತ್ತಾನೆ* (12:12–19)
. *ಕೆಲವು ಗ್ರೀಕ್ ಪುರುಷರು ಯೇಸುವನ್ನು ನೋಡಲು ಬಯಸುತ್ತಾರೆ* (12:20–36)
*ಯೆಹೂದ್ಯರ ನಾಯಕರು ಯೇಸುವನ್ನು ತಿರಸ್ಕರಿಸುತ್ತಾರೆ* (12:37–50)
*ಯೇಸು ತನ್ನ ಶಿಷ್ಯರಿಗೆ ಬೋಧಿಸುತ್ತಾನೆ* (13–16)
*ಯೇಸು ತನಗಾಗಿ ಮತ್ತು ತನ್ನ ಶಿಷ್ಯರಿಗಾಗಿ ಪ್ರಾರ್ಥಿಸುತ್ತಾನೆ* (17)
. *ಯೇಸುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ* (18:1–19:15)
*ಯೇಸುವನ್ನು ಶಿಲುಬೆಗೇರಿಸಿ ಸಮಾಧಿ ಮಾಡಲಾಗಿದೆ* (19:16–42)

1. ಯೇಸು ಸತ್ತವರೊಳಗಿನಿಂದ ಎದ್ದಿದ್ದಾನೆ (20:1–29)
1. ಯೋಹಾನನು ತಾನು ಸುವಾರ್ತೆಯನ್ನು ಬರೆದ ಕಾರಣವನ್ನು ತಿಳಿಸುತ್ತಾರೆ (20:30–31)
1. ಯೇಸು ಶಿಷ್ಯರೊಂದಿಗೆ ಭೇಟಿ ಮಾಡುತ್ತಾನೆ (21)

ಪ್ರತಿಯೊಂದು ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳಲ್ಲಿ ಹೆಚ್ಚು ವಿವರವಾದ ರೂಪರೇಖೆಗಳಿವೆ.

### ಯೊಹಾನನ ಸುವಾರ್ತೆ ಯಾವುದರ ಬಗ್ಗೆ?

ಯೋಹಾನನ ಸುವಾರ್ತೆಯು ಹೊಸ ಒಡಂಬಡಿಕೆಯ ನಾಲ್ಕು ಪುಸ್ತಕಗಳಲ್ಲಿ ಒಂದಾಗಿದೆ. ಅದು ಯೇಸು ಕ್ರಿಸ್ತನ ಬೋಧನೆ ಮತ್ತು ಜೀವನವನ್ನು ವಿವರಿಸುತ್ತದೆ. ಈ ಪುಸ್ತಕಗಳನ್ನು “ಸುವಾರ್ತೆಗಳು” ಎಂದು ಕರೆಯಲಾಗುತ್ತದೆ. ಅಂದರೆ “ಶುಭ ಸಮಾಚಾರ”. ಸುವಾರ್ತೆಯ ಲೇಖಕರು ಯೇಸು ಯಾರು ಮತ್ತು ಆತನು ಏನು ಮಾಡಿದ್ದಾನೆ ಎಂಬ ವಿವಿಧ ಅಂಶಗಳ ಬಗ್ಗೆ ಬರೆದಿದ್ದಾನೆ. “ಯೇಸುವು ಕ್ರಿಸ್ತನೆಂದು, ಜೀವವುಳ್ಳ ದೇವರ ಮಗನೆಂದು ಜನರು ನಂಬುವಂತೆ” ಅವರು ತಮ್ಮ ಸುವಾರ್ತೆಯನ್ನು ಬರೆದಿದ್ದಾರೆಂದು ಯೋಹಾನನು ಹೇಳಿದನು ([20:31](../20/31.md)). ಯೇಸು ಮಾನವ ರೂಪದಲ್ಲಿರುವ ದೇವರು ಎಂದು ಯೋಹಾನನ ಸುವಾರ್ತೆ ಪದೇ ಪದೇ ಒತ್ತಿ ಹೇಳುತ್ತದೆ.

ಯೋಹಾನರ ಸುವಾರ್ತೆಯು ಇತರ ಮೂರು ಸುವಾರ್ತೆಗಳಿಗಿಂತ ಬಹಳ ವಿಭಿನ್ನವಾಗಿದೆ. ಇತರ ಬರಹಗಾರರು ತಮ್ಮ ಸುವಾರ್ತೆಗಳಲ್ಲಿ ಸೇರಿಸಿದ ಕೆಲವು ಬೋಧನೆಗಳನ್ನು ಮತ್ತು ಘಟನೆಗಳನ್ನು ಯೋಹಾನನು ಸೇರಿಸಲಿಲ್ಲ. ಅಲ್ಲದೆ ಇತರ ಸುವಾರ್ತೆಗಳಲ್ಲಿ ಇಲ್ಲದ ಕೆಲವು ಬೋಧನೆಗಳನ್ನು ಮತ್ತು ಘಟನೆಗಳನ್ನು ಯೋಹಾನನು ಬರೆದಿದ್ದಾನೆ

.ಯೇಸು ತನ್ನ ಬಗ್ಗೆ ಹೇಳಿರುವ ವಿಷಯಗಳು ಸತ್ಯವೆಂದು ಸಾಬೀತುಪಡಿಸಲು ಯೇಸು ಮಾಡಿದ ಅದ್ಭುತ ಸೂಚಕಗಳ ಬಗ್ಗೆ ಯೋಹಾನನು ಬರೆದನು. (ನೋಡಿ: [[rc://kn/tw/dict/bible/kt/sign]])

### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಅನುವಾದಿಸಬೇಕು?

ಅನುವಾದಕರು ಈ ಪುಸ್ತಕವನ್ನು ಅದರ ಸಾಂಪ್ರದಾಯಿಕ ಶೀರ್ಷಿಕೆ “ಯೋಹಾನನ ಸುವಾರ್ತೆ” ಅಥವಾ “ಯೋಹಾನನ ಪ್ರಕಾರ ಸುವಾರ್ತೆ” ಅಥವಾ ಅವರು ಸ್ಪಷ್ಟವಾದ ಶೀರ್ಷಿಕೆಯನ್ನು ಆಯ್ಕೆ ಮಾಡಬಹುದು, ಉದಾಹರಣೆಗೆ “ಯೇಸುವಿನ ಬಗ್ಗೆ ಯೋಹಾನನು ಬರೆದ ಶುಭ ಸಮಾಚಾರ(ನೋಡಿ: [[rc://kn/ta/man/translate/translate-names]])

### ಯೋಹಾನನ ಸುವಾರ್ತೆ ಬರೆದವರು ಯಾರು?

ಈ ಪುಸ್ತಕವು ಲೇಖಕರ ಹೆಸರನ್ನು ನೀಡುವುದಿಲ್ಲ. ಆದಾಗ್ಯೂ ಆರಂಭಿಕ ಕ್ರೈಸ್ತ ಕಾಲದಿಂದಲೂ ಅನೇಕ ಕ್ರೈಸ್ತರು ಅಪೊಸ್ತಲನಾದ ಯೋಹಾನನು ಈ ಸುವಾರ್ತೆಯ ಲೇಖಕ ಎಂದು ಭಾವಿಸಿದ್ದಾರೆ. ಅಪೊಸ್ತಲನಾದ ಯೋಹಾನನು ಈ ಸುವಾರ್ತೆಯನ್ನು ಬರೆದಿದ್ದಾನೆ ಎಂಬುವುದಕ್ಕೆ ಹೆಚ್ಚಿನ ಪುರಾವೆಯ ಪುಸ್ತಕದಲ್ಲಿ ಆತನ ಹೆಸರು ಒಮ್ಮೆಯೂ ಕಂಡುಬರುವುದಿಲ್ಲ. ಬದಲಾಗಿ ಇತರ ಸುವಾರ್ತೆಯಲ್ಲಿ ಯೋಹಾನನ ಉಪಸ್ಥಿತಿ ಸೂಚಿಸುವ ಸ್ಥಳಗಳಲ್ಲಿ ಈ ಸುವಾರ್ತೆಯು “ಯೇಸುವಿನ ಪ್ರಿಯ ಶಿಷ್ಯ” ಅಥವಾ “ಇನ್ನೊಬ್ಬ ಶಿಷ್ಯ” ಎಂಬ ಪದಗುಚ್ಛವನ್ನು ಒಳಗೊಂಡಿದೆ ([13:23–25](../13/23.md); [19:26–27](../19/26.md); [20:2–8](../20/02.md); [21:7](../21/07.md), [20–24](../21/20.md)). ಯೇಸುವಿನೊಂದಿಗೆ ತಾನು ನಿಕಟ ಸಂಬಂಧವನ್ನು ಹೊಂದಿದ್ದನೆಂದು ನಮ್ರತೆಯಿಂದ ಹೇಳುವುದಕ್ಕಾಗಿ ಅಪೊಸ್ತಲನಾದ ಯೋಹಾನನು ಈ ರೀತಿಯಾಗಿ ತನ್ನನ್ನು ಉಲ್ಲೇಖಿಸಿಕೊಂಡಿರಬಹುದು. ಆತನು ಆದಿ ಸಭೆಯ “ಸ್ತಂಭಗಳು” ಆಗಿರುವ ಯೇಸುವಿನ ಶಿಷ್ಯರ ಆಂತರಿಕ ವಲಯದ ಭಾಗವಾಗಿದ್ದನು ([Galatians 2:9](../../gal/02/09.md)).

## ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಯೇಸುವಿನ ಜೀವನದ ಕೊನೆಯ ವಾರದ ಬಗ್ಗೆ ಯೋಹಾನನು ಏಕೆ ಹೆಚ್ಚಾಗಿ ಬರೆಯುತ್ತಾನೆ?

ಯೋಹಾನನು ಯೇಸುವಿನ ಅಂತಿಮ ವಾರದ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ. ಯೇಸುವಿನ ಅಂತಿಮ ವಾರ ಮತ್ತು ಅಂತಿಮವಾರ ಮತ್ತು ಶಿಲುಬೆಯ ಮರಣದ ಬಗ್ಗೆ ತನ್ನ ಶೋತೃಗಳು ಆಳವಾಗಿ ಯೋಚಿಸಬೇಕೆಂದು ಯೋಹಾನನು ಬಯಸಿದನು. ತನ್ನ ವಿರುದ್ಧ ಪಾಪ ಮಾಡಿದವರನ್ನು ಕ್ಷಮಿಸುವುದಕ್ಕಾಗಿ, ಯೇಸು ಶಿಲುಬೆಯ ಮೇಲೆ ಸ್ವಇಚ್ಛೆಯಿಂದ ಮರಣಹೊಂದಿದನು. ಎಂದು ಜನರು ಅರ್ಥಮಾಡಿಕೊಳ್ಳಬೇಕೆಂದು ಅವನು ಬಯಸಿದನು. (See: [[rc://kn/tw/dict/bible/kt/sin]])

## ಭಾಗ 3 : ಪ್ರಮುಖ ಅನುವಾದದ ಸಮಸ್ಯೆಗಳು

### ಯೇಸು ತನ್ನನ್ನು “ಮನುಷ್ಯಕುಮಾರ” ಎಂದು ಏಕೆ ಉಲ್ಲೇಖಿಸಿಕೊಳ್ಳುತ್ತಾನೆ?

ಸುವಾರ್ತೆಗಳಲ್ಲಿ ಯೇಸು ತನ್ನನ್ನು “ಮನುಷ್ಯಕುಮಾರ” ಎಂದು ಕರೆದುಕೊಳ್ಳುತ್ತಾನೆ. ಇದು [Daniel 7:13–14](../../dan/07/13.md) ರಲ್ಲಿ ಉಲ್ಲೇಖವಾಗಿದೆ. ಆ ವಾಕ್ಯವೃಂದದಲ್ಲಿ ಒಬ್ಬ ವ್ಯಕ್ತಿಯನ್ನು “ಮನುಷ್ಯಕುಮಾರ” ಎಂದು ವಿವರಿಸಲಾಗಿದೆ. ಅಂದರೆ ಆ ವ್ಯಕ್ತಿ ಮನುಷ್ಯನಂತೆ ಕಾಣುತ್ತಿದ್ದ ವ್ಯಕ್ತಿ. ದೇವರು ಈ “ಮನುಷ್ಯಕುಮಾರನಿಗೆ” ಜನಾಂಗಗಳ ಮೇಲೆ ಸದಾಕಾಲ ಅಳುವ ಅಧಿಕಾರವನ್ನು ಕೊಟ್ಟನು. ಎಲ್ಲಾ ಜನರು ಆತನನ್ನು ಶಾಶ್ವತವಾಗಿ ಆರಾಧಿಸುವರು

. ಯೇಸುವಿನ ಕಾಲದಲ್ಲಿದ್ದ ಯೆಹೂದ್ಯರು ಯಾರಿಗೂ “ಮನುಷ್ಯಕುಮಾರ” ಎಂಬ ಶೀರ್ಷಿಕೆಯನ್ನು ಬಳಸುತ್ತಿರಲಿಲ್ಲ. ಆದರೆ ಯೇಸು ತಾನು ಯಾರೆಂದು ಅವರು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಆ ಹೆಸರನ್ನು ತನಗಾಗಿ ಬಳಸಿಕೊಂಡನು. (ನೋಡಿ: [[rc://kn/tw/dict/bible/kt/sonofman]])

“ಮನುಷ್ಯಕುಮಾರ” ಎಂಬ ಶೀರ್ಷಿಕೆಯನ್ನು ಭಾಷಾಂತರಿಸುವುದು ಹಲವು ಭಾಷೆಗಳಲ್ಲಿ ಕಷ್ಟಕರವಾಗಿರುತ್ತದೆ. ಶೋತೃಗಳು ಅಕ್ಷರಶಃ ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅನುವಾದಕರು “ಮಾನವನು” ನಂತಹ ಪರ್ಯಾಯಗಳನ್ನು ಪರಿಗಣಿಸಬಹುದು. ಈ ಶೀರ್ಷಿಕೆಯನ್ನು ವಿವರಿಸಲು ಅಡಿಟಿಪ್ಪಣಿಯನ್ನು ಸೇರಿಸಿಕೊಳ್ಳುವುದು ಸಹಾಯಕವಾಗಿರಬಹುದು.

### ಯೋಹಾನನ ಸುವಾರ್ತೆಯಲ್ಲಿ “ಸೂಚಕ ಕಾರ್ಯ” ಎಂಬ ಪದದ ಅರ್ಥವೇನು?

ಹೊಸ ಒಡಂಬಡಿಕೆಯ ಇತರ ಲೇಖಕರು ಯೇಸು ಮಾಡಿದ ಅದ್ಭುತವನ್ನು ಉಲ್ಲೇಖಿಸಲು “ಪ್ರಬಲ ಕಾರ್ಯಗಳು” ಅಥವಾ “ಅದ್ಭುತಗಳು” ಎಂಬ ಪದಗಳನ್ನು ಬಳಸುತ್ತಾರೆ. ಆದರೆ ಯೋಹಾನನು “ಸೂಚಕಕಾರ್ಯ” ಎಂಬ ಪದವನ್ನು ಬಳಸಲು ಬಯಸುತ್ತಾನೆ. ಯೋಹಾನನು “ಸೂಚಕಕಾರ್ಯ” ಎಂದು ಕರೆಯುವ ಅದ್ಭುತಗಳು ದೈವಿಕ ಶಕ್ತಿಯ ಗಮನಾರ್ಹ ಪ್ರದರ್ಶನಗಳಾಗಿವೆ. ಯೇಸುವಿನ ಅದ್ಭುತಗಳು ಪ್ರಮುಖ ಉದ್ದೇಶವೆಂದರೆ ಯೇಸು ದೇವರೆಂದು ಮತ್ತು ಯೇಸು ತನ್ನ ಬಗ್ಗೆ ಹೇಳಿಕೊಂಡ ಪ್ರತಿ ಮಾತುಗಳು ಸತ್ಯವೆಂದು ಸಾಬೀತುಪಡಿಸುವುದಕ್ಕಾಗಿ ಯೋಹಾನನು ಅವುಗಳನ್ನು “ಸೂಚಕ ಕಾರ್ಯ” ಎಂದು ಒತ್ತಿ ಹೇಳುತ್ತಾನೆ. ಯೋಹಾನನು ತನ್ನ ಸುವಾರ್ತೆಯಲ್ಲಿ ಯೇಸು ಮಾಡಿರುವ ಕೆಲವು ಸೂಚಕಕಾರ್ಯಗಳನ್ನು ಮಾತ್ರ ಬರೆದಿದ್ದೇನೆ ಎಂದು ಹೇಳಿದನು. ಯೇಸುಕ್ರಿಸ್ತನು ದೇವರ ಮಗನೆಂದು ಮತ್ತು ನೀವು ಆತನನ್ನು ನಂಬಿದರೆ ಆತನ ಹೆಸರಿನಲ್ಲಿ ಜೀವವನ್ನು ಹೊಂದುವಿರಿ ಎಂದು ನಂಬುವುದಕ್ಕಾಗಿ ಇವುಗಳನ್ನು ಬರೆಯಲಾಗಿದೆ ಎಂದು ಯೋಹಾನನು ಹೇಳಿದನು ([20:30–31](../20/30.md)).

### ಯೋಹಾನನ ಸುವಾರ್ತೆಯಲ್ಲಿ “ಉಳಿಯುವುದು”, “ವಾಸಿಸುವುದು” ಮತ್ತು “ನೆಲೆಸುವುದು” ಎಂಬ ಪದಗಳ ಅರ್ಥವೇನು?

ಯೋಹಾನನು ಸಾಮಾನ್ಯವಾಗಿ “ಉಳಿಯುವುದು”, “ವಾಸಿಸುವುದು” ಮತ್ತು “ನೆಲೆಸುವುದು” ಎಂಬ ಪದಗಳನ್ನು ರೂಪಕಗಳಾಗಿ ಬಳಸಿದ್ದಾರೆ. ಒಬ್ಬ ವಿಶ್ವಾಸಿಯು ಯೇಸುವಿಗೆ ಹೆಚ್ಚು ವಿಧೇಯನಾಗಿರುತ್ತಾನೆ ಮತ್ತು ಯೇಸುವಿನ ಮಾತುಗಳು ಆತನಲ್ಲಿ “ನೆಲೆಗೊಂಡಿದೆ” ಎಂಬಂತೆ ಯೇಸುವನ್ನು ಚೆನ್ನಾಗಿ ತಿಳಿದುಕೊಂಡಿರುವ ವಿಶ್ವಾಸಿಯ ಬಗ್ಗೆ ಮಾತನಾಡುತ್ತಾನೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯಲ್ಲಿ “ವಾಸಿಸುವುದು” ಎಂಬಂತೆ ಇನ್ನೊಬ್ಬರೊಂದಿಗೆ ಆಧ್ಯಾತ್ಮಿಕವಾಗಿ ಸೇರಿಕೊಂಡಿರುವ ಬಗ್ಗೆ ಯೋಹಾನನು ಮಾತನಾಡುತ್ತಾನೆ. ಕ್ರೈಸ್ತರು ಕ್ರಿಸ್ತನಲ್ಲಿ ಮತ್ತು ದೇವರಲ್ಲಿ “ನೆಲೆಯಾಗಿದ್ದಾರೆ” ಎಂದು ಹೇಳಲಾಗುತ್ತದೆ. ತಂದೆಯು ಮಗನಲ್ಲಿ “ನೆಲೆಯಾಗಿರುತ್ತಾನೆ” ಮತ್ತು ಮಗನು ತಂದೆಯಲ್ಲಿ “ನೆಲೆಯಾಗಿರುತ್ತಾನೆ” ಎಂದು ಹೇಳಲಾಗುತ್ತದೆ. ಮಗನು ವಿಶ್ವಾಸಿಗಳಲ್ಲಿ “ನೆಲೆಯಾಗಿದ್ದಾನೆ” ಎಂದು ಹೇಳಲಾಗುತ್ತದೆ. ಪವಿತ್ರಾತ್ಮನು ವಿಶ್ವಾಸಿಗಳಲ್ಲಿ “ನೆಲೆಯಾಗಿದ್ದಾನೆ” ಎಂದು ಹೇಳಲಾಗುತ್ತದೆ

ಅನೇಕ ಅನುವಾದಕಾರರು ಈ ವಿಚಾರಗಳನ್ನು ತಮ್ಮ ಭಾಷೆಗಳಲ್ಲಿ ನಿಖರವಾಗಿ ಅದೇ ರೀತಿಯಲ್ಲಿ ಪ್ರತಿನಿಧಿಸಲು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ. ಉದಾಹರಣೆಗೆ “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ([6:56](../06/56.md)). ಅವರು ನನ್ನೊಂದಿಗೆ ಐಕ್ಯವಾಗಿರುತ್ತಾರೆ ಮತ್ತು ಕಲ್ಪನೆಯನ್ನು UST ಬಳಸುತ್ತದೆ. ಆದರೆ ಅನುವಾದಕರು ಕಲ್ಪನೆಯನ್ನು ವ್ಯಕ್ತಪಡಿಸಲು ಇತರ ಮಾರ್ಗಗಳನ್ನು ಹುಡುಕಬೇಕಾಗಬಹುದು

.“ನನ್ನ ಮಾತುಗಳು ನಿಮ್ಮಲ್ಲಿ ನೆಲೆಗೊಂಡಿವೆ([15:7](../15/07.md)) ಎಂಬ ವಾಕ್ಯವೃಂದದಲ್ಲಿ, UST ಈ ಕಲ್ಪನೆಯನ್ನು “ನಾನು ನಿಮಗೆ ಕಲಿಸಿದ್ದನ್ನು ಅನುಸರಿಸಿ” ಎಂದು ವ್ಯಕ್ತಪಡಿಸುತ್ತದೆ. ಅನುವಾದಕರು ಈ ಭಾಷಾಂತರವನ್ನು ಮಾದರಿಯಾಗಿ ಬಳಸಲು ಸಾಧ್ಯವೆಂದು ಕಂಡುಕೊಳ್ಳಬಹುದು.

### ಯೋಹಾನನ ಸುವಾರ್ತೆಯಲ್ಲಿ ಎರಡು ಅರ್ಥ ಎಂದರೇನು?

ಯೋಹಾನನು ಸಾಂದರ್ಭಿಕವಾಗಿ ಈ ಸುವಾರ್ತೆಯನ್ನು ಅವರು ಮೂಲತಃ ಬರೆದ ಭಾಷೆಯಲ್ಲಿ ಎರಡು ಅರ್ಥಗಳನ್ನು ಹೊಂದಿರುವ ಪದಗಳು ಅಥವಾ ಪದಗುಚ್ಛಗಳನ್ನು ಬಳಸಿದರು. ಉದಾಹರಣೆಗೆ, ULT, “ಹೊಸದಾಗಿ ಹುಟ್ಟು” ಎಂದು ಅನುವಾದಿಸಲಾದ ಪದಗುಚ್ಛವು “ಮೇಲಣಿಂದ ಹುಟ್ಟಿದೆ” ಎಂದು ಅರ್ಥೈಸಬಹುದು ([3:3](../03/03.md), [7](../03/07.md)). ಅಂತಹ ಸಂದರ್ಭಗಳಲ್ಲಿ, ನೀವು ಒಂದು ಅರ್ಥವನ್ನು ಆರಿಸಲು ಮತ್ತು ಇನ್ನೊಂದು ಅರ್ಥವನ್ನು ಅಡಿಟಿಪ್ಪಣಿಯಲ್ಲಿ ಹಾಕಲು ಬಯಸಬಹುದು.

### ಯೋಹಾನನು ಸುವಾರ್ತೆಯಲ್ಲಿ ಪ್ರಮುಖ ಸಮಸ್ಯೆಗಳು ಯಾವುವು?

ಕೆಳಗಿನ ಬರುತ್ತವೆ. ಆದರೆ ಆಧುನಿಕ ಆವೃತ್ತಿಗಳಲ್ಲಿ ಇವುಗಳನ್ನು ಸೇರಿಸಲಾಗಿಲ್ಲ. ಈ ವಚನಗಳನ್ನು ಅನುವಾದಿಸದಂತೆ ಅನುವಾದಕರಿಗೆ ಸಲಹೆ ನೀಡಲಾಗಿದೆ. ಆದಾಗ್ಯೂ ಈ ಅನುವಾದಕರ ಪ್ರದೇಶದಲ್ಲಿ ಸತ್ಯವೇದದ ಹಳೆಯ ಆವೃತ್ತಿಗಳಿದ್ದರೆ, ಅನುವಾದಕರು ಈ ವಚನಗಳನ್ನು ಸೇರಿಸಿಕೊಳ್ಳಬಹುದು. ಅವುಗಳನ್ನು ಅನುವಾದಿಸಿದರೆ, ಅವು ಮೂಲತಃ ಯೋಹಾನನ ಸುವಾರ್ತೆಯಲ್ಲಿಲ್ಲ ಎಂದು ಸೂಚಿಸಲು ಚೌಕಾಕಾರದ ಆವರಣಗಳಲ್ಲಿ (\\[\\]) ಹಾಕಬೇಕು.

“ಚಲಿಸುವ ನೀರಿಗಾಗಿ ಕಾಯುತ್ತಿದೆ. ಯಾಕೆಂದರೆ ಯೆಹೋನನ ದೂತನು ಕೊಳಕ್ಕೆ ಇಳಿದು ಕೆಲವು ಸಮಯಗಳಲ್ಲಿ ನೀರನ್ನು ಕಲಕಿದನು ಮತ್ತು ಕಲಕಿದ ನೀರನ್ನು ಮೊದಲು ಪ್ರವೇಶಿಸಿದವರು ರೋಗದಿಂದ ಸ್ವಸ್ಥತೆ ಹೊಂದುತ್ತಿದ್ದರು” (5:3-4)
* ಅವುಗಳ ಮಧ್ಯದಲ್ಲಿ ಹಾದು ಹೋಗುವುದು ಮತ್ತು ಅಲ್ಲಿಂದ ಹಾದು ಹೊರಟು ಹೋದನು” ([8:59](../08/59.md))

. ಕೆಳಗಿನ ವಾಕ್ಯ ವೃಂದವನ್ನು ಸತ್ಯವೇದದಲ್ಲಿನ ಅತ್ಯಂತ ಹಳೆಯ ಮತ್ತು ಆಧುನಿಕ ಆವೃತ್ತಿಗಳಲ್ಲಿ ಸೇರಿಸಲಾಗಿದೆ. ಆದರೆ ಇದು ಸತ್ಯವೇದದಲ್ಲಿನ ಆರಂಭಿಕ ಪ್ರತಿಗಳಲ್ಲಿಲ್ಲ. ಈ ವಾಕ್ಯವೃಂದವನ್ನು ಅನುವಾದಿಸಲು ಅನುವಾದಕರಿಗೆ ಸಲಹೆ ನೀಡಲಾಗಿದೆ. ಇದು ಯೋಹಾನನ ಸುವಾರ್ತೆಗೆ ಮೂಲವಾಗಿರಬಾರದು ಎಂದು ಸೂಚಿಸಲು ಚೌಕಾಕಾರದ ಆವರಣಗಳ ಒಳಗೆ ಹಾಕಬೇಕು. (\\[\\])

*ವ್ಯಭಿಚಾರಿ ಸ್ತ್ರೀಯ ಕಥೆ ([7:53](../07/53.md)–[8:11](../08/11.md)) (ನೋಡಿ: [[rc://kn/ta/man/translate/translate-textvariants]])" "JHN" 1 "intro" "k29b" 0 "# ಯೋಹಾನ 1 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಿರ್ಮಾಣ

1. ಯೇಸು ದೇವರಾಗಿದ್ದಾನೆ (1:1–5)
2. ಸ್ನಾನಿಕನಾದ ಯೋಹಾನನು ಯೇಸುವಿನ ಸಾಕ್ಷಿಯಾಗಿದ್ದನು(1:6–8)
3. ಯೇಸುವಿನ ಸೇವೆಯ ಸಾರಾಂಶ (1:9–13)
4. ಯೇಸು ಶರೀರದಲ್ಲಿರುವ ದೇವರು (1:14–18)
5. ಸ್ನಾನಿಕನಾದ ಯೋಹಾನನು ಯೇಸುವಿಗಾಗಿ ಮಾರ್ಗ ಸಿದ್ಧಪಡಿಸುತ್ತಾನೆ (1:19–34)
6. ಯೇಸುವು ಆಂದ್ರೆಯ, ಪೇತ್ರ ಮತ್ತು ಫಿಲಿಪ್ಪ ಮತ್ತು ನತಾನಯೇಲರನ್ನು ಭೇಟಿ ಮಾಡಿದನು (1:35–51)

. ಕೆಲವು ಭಾಷಾಂತರಗಳು ಓದಲು ಸುಲಭವಾಗುವಂತೆ ಕವನದ ಪ್ರತಿಯೊಂದು ಸಾಲನ್ನು ಉಳಿದ ಪಠ್ಯಕ್ಕಿಂತ ಬಲಕ್ಕೆ ಹೊಂದಿಸುತ್ತವೆ. ಹಳೆಯ ಒಡಂಬಡಿಕೆಯ ವಚನಗಳಾದ [1:23](../01/23.md) ನಲ್ಲಿನ ಕವನದೊಂದಿಗೆ ULT ಇದನ್ನು ಮಾಡುತ್ತದೆ

## ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು

### “ವಾಕ್ಯ”

ಯೇಸುವನ್ನು ಉಲ್ಲೇಖಿಸಲು ಯೋಹಾನನು “ವಾಕ್ಯ” ಎಂಬ ಪದಗುಚ್ಛವನ್ನು ಬಳಸುತ್ತಾನೆ ([1:1](../01/01.md), [14](../01/14.md)). ಯೇಸು ಭೌತಿಕ ದೇಹವನ್ನು ಹೊಂದಿರುವ ವ್ಯಕ್ತಿ ಎಂಬ ದೇವರ ಪ್ರಮುಖ ಸಂದೇಶವನ್ನು ಎಲ್ಲಾ ಜನರಿಗೆ ಯೋಹಾನನು ಹೇಳುತ್ತಿದ್ದಾನೆ. (ನೋಡಿ: [[rc://kn/tw/dict/bible/kt/wordofgod]])

### ಬೆಳಕು ಮತ್ತು ಕತ್ತಲೆ

[1:4–9](../01/04.md) ರಲ್ಲಿ ಯೋಹಾನನು ವಿಸ್ತೃತ ರೂಪಕವನ್ನು ಬಳಸುತ್ತಾನೆ. ಇದರಲ್ಲಿ ಬೆಳಕು ಸತ್ಯ ಮತ್ತು ಒಳ್ಳೆಯದನ್ನು ಹಾಗೂ ಕತ್ತಲೆ ಸುಳ್ಳು ಮತ್ತು ಕೆಟ್ಟದ್ದನ್ನು ಪ್ರತಿನಿಧಿಸುತ್ತದೆ. ಯೇಸು ದೇವರ ಸತ್ಯ ಮತ್ತು ಒಳ್ಳೆಯತನವನ್ನು ಮಾನವ ದೇಹದಲ್ಲಿ ಪ್ರದರ್ಶಿಸಲಾಗಿದೆ ಎಂದು ತೋರಿಸಲು ಯೋಹಾನನು ಆ ಬೆಳಕಿನ ರೂಪಕವನ್ನು ಯೇಸುವಿಗೆ ಅನ್ವಯಿಸುತ್ತಾನೆ. (ನೋಡಿ: [[rc://kn/tw/dict/bible/kt/righteous]])

### “ದೇವರ ಮಕ್ಕಳು”

. ದೇವರು ಜನರನ್ನು ಸೃಷ್ಟಿಸಿದ ಕಾರಣ ಜನರನ್ನು ಕೆಲವೊಮ್ಮೆ “ದೇವರ ಮಕ್ಕಳು” ಎಂದು ವಿವರಿಸಲಾಗುತ್ತದೆ. ಆದಾಗ್ಯೂ ಈ ಅಧ್ಯಾಯದಲ್ಲಿ ಯೋಹಾನನು ಈ ಅಭಿವ್ಯಕ್ತಿಯನ್ನು ವಿಭಿನ್ನ ಅರ್ಥದಲ್ಲಿ ಬಳಸುತ್ತಾನೆ. ಯೇಸುವಿನಲ್ಲಿ ನಂಬಿಕೆ ಮತ್ತು ಭರವಸೆಯನ್ನು ಇರಿಸುವ ಮೂಲಕ ದೇವರೊಂದಿಗೆ ತಂದೆ-ಮಗುವಿನ ಸಂಬಂಧವನ್ನು ಪ್ರವೇಶಿಸಿದ ಜನರನ್ನು ವಿವರಿಸಲು ಯೋಹಾನನು ಅದನ್ನು ಬಳಸುತ್ತಾನೆ. ದೇವರು ನಿಜವಾಗಿಯೂ ಎಲ್ಲಾ ಜನರನ್ನು ಸೃಷ್ಟಿಸಿದ್ದಾನೆ. ಆದರೆ ಜನರು ಯೇಸುವನ್ನು ನಂಬುವ ಮೂಲಕ ಮಾತ್ರ ಈ ಅರ್ಥದಲ್ಲಿ ದೇವರ ಮಕ್ಕಳಾಗಬಹುದು. ಈ ಬಳಕೆಯಲ್ಲಿ “ಮಕ್ಕಳು” ಯುವಕರನ್ನು ಉಲ್ಲೇಖಿಸುವುದಿಲ್ಲ. ಆದರೆ ಜನರು ಯಾವುದೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಹೊಂದಿರುವ ಸಂಬಂಧವನ್ನು ಮಾತ್ರ ಉಲ್ಲೇಖಿಸುತ್ತಾರೆ. (ನೋಡಿ: [[rc://kn/tw/dict/bible/kt/believe]])

## ಈ ಅಧ್ಯಾಯದಲ್ಲಿನ ಪ್ರಮುಖ ಅಲಂಕಾರಗಳ

### ರೂಪಕಗಳು

ಯೋಹಾನನು ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಹಾಗೂ ದೇವರು ಯೇಸುವಿನ ಮೂಲಕ ಜನರಿಗೆ ಏನು ಹೇಳಲು ಬಯಸುತ್ತಾನೆ ಎಂಬುದರ ಕುರಿತು ಶೋತೃಗಳಿಗೆ ಹೇಳಲು ಆತನು ಬೆಳಕು ಮತ್ತು ಕತ್ತಲೆಯ ರೂಪಕವನ್ನು ಮತ್ತು ವಾಕ್ಯವನ್ನು ಬಳಸುತ್ತಾನೆ. (ನೋಡಿ: [[rc://kn/ta/man/translate/figs-metaphor]])

## ಈ ಅಧ್ಯಾಯದಲ್ಲಿನ ಇತರ ಸಂಭಾವ್ಯ ಅನುವಾದ ತೊಂದರೆಗಳು

### “ಆದಿಯಲ್ಲಿ”

ಕೆಲವು ಭಾಷೆಗಳು ಮತ್ತು ಸಂಸ್ಕೃತಿಗಳು ಜಗತ್ತಿನ ಬಗ್ಗೆ ಮಾತನಾಡುವಾಗ ಅದಕ್ಕೆ ಪ್ರಾರಂಭವಿಲ್ಲದಂತೆ ಮತ್ತು ಅದು ಯಾವಾಗಲೂ ಅಸ್ತಿತ್ವದಲ್ಲಿರುವ ರೀತಿಯಲ್ಲಿ ಮಾತನಾಡುತ್ತವೆ. ಆದರೆ “ಬಹಳ ಹಿಂದೆ” ಎನ್ನುವುದು “ಆದಿಯಲ್ಲಿ” ಎಂಬುವುದಕ್ಕೆ ವಿಭಿನ್ನವಾಗಿದೆ ಮತ್ತು ನಿಮ್ಮ ಅನುವಾದವು ಸರಿಯಾಗಿ ಸಂವಹಿಸುತ್ತದೆಯೇ ಎಂದು ನೀವು ಖಚಿತವಾಗಿ ತಿಳಿದುಕೊಳ್ಳಬೇಕು.

###“ಮನುಷ್ಯಕುಮಾರ”

ಯೇಸು ಈ ಅಧ್ಯಾಯದಲ್ಲಿ ತನ್ನನ್ನು “ಮನುಷ್ಯಕುಮಾರ” ಎಂದು ಉಲ್ಲೇಖಿಸುತ್ತಾನೆ ([1:51](../01/51.md)). ಬೇರೆಯವರ ಬಗ್ಗೆ ಮಾತನಾಡುವಂತೆ ಜನರು ತಮ್ಮ ಬಗ್ಗೆ ಮಾತನಾಡಲು ನಿಮ್ಮ ಭಾಷೆಯು ಅನುಮತಿಸುವುದಿಲ್ಲ. ಯೋಹಾನನ ಸುವಾರ್ತೆಗೆ ಸಾಮಾನ್ಯ ಪರಿಚಯದ ಭಾಗ 3ರಲ್ಲಿ ಈ ಪರಿಕಲ್ಪನೆಯ ಚರ್ಚೆ ನೋಡಿರಿ. (ನೋಡಿ: [[rc://kn/tw/dict/bible/kt/sonofman]] ಮತ್ತು [[rc://kn/ta/man/translate/figs-123person]])"