271 lines
170 KiB
Plaintext
271 lines
170 KiB
Plaintext
|
Reference ID Tags SupportReference Quote Occurrence Note
|
|||
|
front:intro f68r 0 # ರೂತಳ ಪುಸ್ತಕದ ಪೀಠಿಕೆ \n\n## ಭಾಗ 1: ಸಾಮಾನ್ಯವಾದ ಪೀಠಿಕೆ \n\n### ರೂತಳ ಪುಸ್ತಕದ ಹೊರನೋಟ\n\n1. ರೂತಳು ನೊವೊಮಿಯ ಜೊತೆಯಲ್ಲಿ ಬೇತ್ಲೆಹೇಮಿಗೆ ಹೇಗೆ ಬಂದಳು (1:1-22)\n1. ರೂತಳು ಹಕ್ಕಲತೆನೆಗಳನ್ನು ಕೂಡಿಸಿಕೊಳ್ಳುವಾಗ ಬೋವಜನು ಅವಳಿಗೆ ಸಹಾಯ ಮಾಡಿದನು (2:1-23)\n1. ಕಣದ ಹತ್ತಿರ ಬೋವಜನು ಮತ್ತು ರೂತಳು (3:1-18)\n1. ರೂತಳು ಹೇಗೆ ಬೋವಜನಿಗೆ ಹೆಂಡತಿಯಾದಳು (4:1-16)\n1. ಬೋವಜ ಮತ್ತು ರೂತಳಿಗೆ ಓಬೇದನು ಹುಟ್ಟಿದ್ದು; ದಾವೀದನ ವಂಶಾವಳಿ (4:13-22)\n \n\n### ರೂತಳ ಪುಸ್ತಕವು ಯಾವುದರ ಕುರಿತಾಗಿ ಬರೆಯಲ್ಪಟ್ಟಿದೆ? \n\nಈ ಪುಸ್ತಕವು ಇಸ್ರಾಯೇಲ್ ಸ್ತೀಯಳಲ್ಲದ ರೂತಳು ಎನ್ನುವ ಸ್ತ್ರೀಯಳ ಕುರಿತಾಗಿ ಬರೆಯಲ್ಪಟ್ಟಿರುತ್ತದೆ. ಈಕೆಯು ಯಾವ ರೀತಿ ಯೆಹೋವನ ಜನರೊಳಗೆ ಬಂದು ಸೇರಿಕೊಂಡಳೆನ್ನುವದರ ಕುರಿತಾಗಿ ಹೇಳುತ್ತದೆ. ರೂತಳೆನ್ನುವ ಈಕೆಯು ಅರಸನಾದ ದಾವೀದನ ಪೂರ್ವಜರಲ್ಲಿ ಹೇಗೆ ಸೇರಿಬಂದರೆನ್ನುವ ವಿಷಯವನ್ನು ಈ ಪುಸ್ತಕವು ವಿವರಿಸುವದು. \n\n### ಈ ಪುಸ್ತಕದ ಹೆಸರನ್ನು ಹೇಗೆ ಅನುವಾದ ಮಾಡಲಾಗಿದೆ? \n\nಈ ಪುಸ್ತಕಕ್ಕೆ **ರೂತಳು** ಎನ್ನುವ ಹೆಸರು ಸಂಪ್ರದಾಯಿಕವಾಗಿ ಇಡಲಾಗಿದೆ, ಯಾಕಂದರೆ ಈಕೆಯೇ ಈ ಪುಸ್ತಕದಲ್ಲಿ ಪ್ರಮುಖಳಾಗಿರುತ್ತಾಳೆ. ಅನುವಾದಕರು ಈ ಪುಸ್ತಕಕ್ಕೆ **ರೂತಳ ಕುರಿತಾದ ಪುಸ್ತಕ** ಎನ್ನುವ ಹೆಸರನ್ನು ಉಪಯೋಗಿಸಬಹುದು. (ನೋಡಿರಿ: [[rc://*/ta/man/translate/translate-names]])\n\n### ರೂತಳ ಪುಸ್ತಕದಲ್ಲಿ ನಡೆದಿರುವ ಘಟನೆಗಳು ಯಾವಾಗ ನಡೆದಿದ್ದವು? \n\nಇಸ್ರಾಯೇಲಿನಲ್ಲಿ ನ್ಯಾಯಾಧೀಶರು ಇರುವ ಕಾಲದಲ್ಲಿ ರೂತಳ ಕಥೆಯು ನಡೆದಿದೆ. ಇಸ್ರಾಯೇಲ್ಯರು ಕಾನಾನ್ ದೇಶದಲ್ಲಿ ಪ್ರವೇಶಿಸಿದ ನಂತರ ಈ ಪುಸ್ತಕದಲ್ಲಿರುವ ಘಟನೆಗಳು ನಡೆದವು, ಆದರೆ ಅದುವರೆಗೂ ಅವರಿಗೆ ಅರಸನಿರಲಿಲ್ಲ. ಇಸ್ರಾಯೇಲ್ಯರು ತಮ್ಮ ಶತ್ರುಗಳನ್ನು ಸೋಲಿಸುವುದಕ್ಕೆ ಸಹಾಯ ಮಾಡಲು ದೇವರು ಆಯ್ಕೆ ಮಾಡಿಕೊಂಡಿರುವ **ನ್ಯಾಯಾಧೀಶರಲ್ಲಿ** ಸ್ತ್ರೀ ಪುರುಷರುಗಳಿದ್ದರು. ಈ ನಾಯಕರು ಸಹಜವಾಗಿ ಅವರ ಮಧ್ಯೆದಲ್ಲಿ ನಡೆಯುವ ಜಗಳಗಳನ್ನು ಬಗೆಹರಿಸುವುದರ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದರು. ಜನರು ತುಂಬಾ ಪ್ರಾಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಕೂಡ ಸಹಾಯ ಮಾಡುತ್ತಿದ್ದರು. ಈ ನಾಯಕರುಗಳಲ್ಲಿರುವ ಪ್ರತಿಯೊಬ್ಬರೂ ಇಸ್ರಾಯೇಲ್ಯರಿಗೆ ಸೇವೆಯನ್ನು ಸಲ್ಲಿಸಿದ್ದರು. ಆದರೆ ಅವ<E0B285>
|
|||
|
1:intro irf4 0 # ರೂತಳು 1 ಸಾಧಾರಣವಾದ ಸೂಚನೆಗಳು \n\n## ನಿರ್ಮಾಣ ಮತ್ತು ಕ್ರಮಪಡಿಸುವಿಕೆ \n\n### **ಈ ಆಧ್ಯಾಯದಲ್ಲಿ ಸಾಮಾಜಿಕ ಪರಿಕಲ್ಪನೆಗಳು**\n\nಈ ಪುಸ್ತಕದಲ್ಲಿ ನಡೆದಿರುವ ಸಂಘಟನೆಗಳೆಲ್ಲವು ನ್ಯಾಯಾಧೀಶರ ಕಾಲದಲ್ಲಿಯೇ ನಡೆದಿವೆ. ಈ ಪುಸ್ತಕವು ನ್ಯಾಯಾಧೀಶರ ಪುಸ್ತಕದ ಒಟ್ಟಿಗೆ ಸೇರಿಸಲ್ಪಡುವ ಪುಸ್ತಕವಾಗಿದೆ. ಈ ಪುಸ್ತಕದ ಇತಿಹಾಸ ಸಂದರ್ಭವನ್ನು ಅರ್ಥಮಾಡಿಕೊಳ್ಳಬೇಕಾದರೆ, ಅನುವಾದಕರು ನ್ಯಾಯಾಧೀಶರ ಪುಸ್ತಕವನ್ನು ಒಂದುಬಾರಿ ಪುನಪರಿಶೀಲನೆ ಮಾಡಬೇಕಾಗಿರುತ್ತದೆ. \n\n## ಈ ಅಧ್ಯಾಯದಲ್ಲಿ ವಿಶೇಷವಾದ ಪರಿಕಲ್ಪನೆಗಳು\n\n### ಗಂಡ ಅಥವಾ ಮಕ್ಕಳು ಇಲ್ಲದಿರುವ ಸ್ತ್ರೀಯರು \n\nಪುರಾತನ ಕಾಲದಲ್ಲಿ ಪೂರ್ವ ದಿಕ್ಕಿನಲ್ಲಿ ಒಬ್ಬ ಹೆಂಗಸು ಗಂಡನಿಲ್ಲದೇ, ಅಥವಾ ಗಂಡು ಮಕ್ಕಳಿಲ್ಲದೇ, ಒಂದು ಗಂಭೀರವಾದ ಪರಿಸ್ಥಿತಿಯಲ್ಲಿ ಸಿಳುಕಿಕೊಂಡಿದ್ದಾಳೆ. ಆಕೆ ತನ್ನನ್ನು ತಾನು ಪೋಷಿಸಿಕೊಳ್ಳದಿರುವ ಸ್ಥಿತಿಯಲ್ಲಿದ್ದಾಳೆ. ಆದ್ದರಿಂದಲೇ ನೊವೊಮಿ ತನ್ನ ಸೊಸೆಗಳು ತಿರುಗಿ ಮದುವೆ ಮಾಡಿಕೊಳ್ಳಬೇಕೆಂದು ತನ್ನ ಸೊಸೆಗಳಿಗೆ ಹೇಳಿದಳು. \n\n# ಈ ಅಧ್ಯಾಯದಲ್ಲಿ ಕಂಡುಬರುವ ಅನುವಾದಕ್ಕೆ ಸಂಬಂಧಪಟ್ಟ ಸಮಸ್ಯೆಗಳು\n\n### ವಿಭಿನ್ನತೆ \n\nಮೋವಾಬ್ಯಳಾದ ರೂತಳ ಕ್ರಿಯೆಗಳು ಯೆಹೂದ್ಯಳಾದ ನೊವೊಮಿಯ ಕ್ರಿಯೆಗಳೊಂದಿಗೆ ವಿಭಿನ್ನವಾಗಿವೆ. ನೊವೊಮಿ ತನ್ನ ದೇವರಾಗಿರುವ ಯೆಹೋವನಲ್ಲಿ ಅಷ್ಟೊಂದು ನಂಬಿಕೆಯನ್ನು ತೋರಿಸದಿರುವ ಸಂದರ್ಭದಲ್ಲಿ ರೂತಳು ನೊವೊಮಿ ದೇವರಲ್ಲಿ ಹೆಚ್ಚಿನ ನಂಬಿಕೆಯನ್ನು ತೋರಿಸುತ್ತಿರುವುದನ್ನು ಕಾಣುತ್ತೇವೆ. (ನೋಡಿರಿ: [[rc://*/tw/dict/bible/kt/faith]] ಮತ್ತು [[rc://*/tw/dict/bible/kt/trust]])
|
|||
|
1:1 sb2j וַיְהִ֗י 1 **ಅದು** ಅಥವಾ **ನಡೆದಿರುವ ಸಂಘಟನೆ ಇದು**. ಇದು ಇತಿಹಾಸದ ಕಥೆಯನ್ನು ಆರಂಭಿಸುವ ವಿಧಾನವು ಇದಾಗಿರುತ್ತದೆ. (ನೋಡಿರಿ: [[rc://*/ta/man/translate/writing-newevent]])
|
|||
|
1:1 m9nl בִּימֵי֙ שְׁפֹ֣ט הַשֹּׁפְטִ֔ים 1 **ನ್ಯಾಯಾಧೀಶರು ಇಸ್ರಾಯೇಲ್ಯರನ್ನು ನಡೆಸಿ, ಆಳ್ವಿಕೆ ಮಾಡಿದ ಕಾಲದಲ್ಲಿ** (ನೋಡಿರಿ: [[rc://*/ta/man/translate/grammar-connect-time-simultaneous]])
|
|||
|
1:1 nm13 בָּאָ֑רֶץ 1 ಇದು ಇಸ್ರಾಯೇಲ್ ದೇಶವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಇಸ್ರಾಯೇಲ್ ದೇಶದಲ್ಲಿ" (ನೋಡಿರಿ: [[rc://*/ta/man/translate/figs-explicit]])
|
|||
|
1:1 mmb4 אִ֜ישׁ 1 **ಒಬ್ಬ ಮನುಷ್ಯ.** ಕಥೆಯಲ್ಲಿ ಒಂದು ಪಾತ್ರಯನ್ನು ಪರಿಚಯಿಸುವ ಸಾಧಾರಣವಾದ ವಿಧಾನವಿದು. (ನೋಡಿರಿ: [[rc://*/ta/man/translate/writing-participants]])
|
|||
|
1:2 e53a אֶפְרָתִ֔ים מִבֵּ֥ית לֶ֖חֶם יְהוּדָ֑ה 1 ಎಫ್ರಾತ ಎನ್ನುವ ಹೆಸರು ಎಫ್ರಾತ ಸಂತತಿಯಿಂದ ಬಂದಿರುವ ಜನರನ್ನು ಸೂಚಿಸುತ್ತದೆ. ಇವರು ಬೇತ್ಲೇಹೆಮಿನ ಸುತ್ತಮುತ್ತಲಿರುವ ಪ್ರಾಂತ್ಯದಲ್ಲಿ ಜೀವನ ಮಾಡುತ್ತಿದ್ದರು. ಪರ್ಯಾಯ ಅನುವಾದ : "ಯೆಹೂದದಲ್ಲಿರುವ ಬೇತ್ಲೇಹಿಮಿನ ಎಫ್ರಾತ ಸಂತತಿಯವರು."
|
|||
|
1:3 rxb1 הִ֖יא וּשְׁנֵ֥י בָנֶֽיהָ׃ 1 **ನೊವೊಮಿಯ ಬಳಿ ತನ್ನ ಇಬ್ಬರು ಗಂಡು ಮಕ್ಕಳು ಮಾತ್ರ ಇದ್ದಿದ್ದರು.**
|
|||
|
1:4 pk7g וַיִּשְׂא֣וּ לָהֶ֗ם נָשִׁים֙ 1 **ಮದುವೆಯಾದ ಸ್ತ್ರೀಯರು.** ಮದುವೆ ಮಾಡಿಕೊಂಡಿರುವ ಹೆಣ್ಣುಮಕ್ಕಳಿಗಾಗಿ ಈ ನುಡಿಗಟ್ಟನ್ನು ಉಪಯೋಗಿಸಲಾಗಿರುತ್ತದೆ. ಈಗಾಗಲೇ ಮದುವೆ ಮಾಡಿಕೊಂಡಿರುವ ಹೆಣ್ಣುಮಕ್ಕಳನ್ನು ಅವರು ತೆಗೆದುಕೊಳ್ಳುವುದಿಲ್ಲ. (ನೋಡಿರಿ: [[rc://*/ta/man/translate/figs-idiom]])
|
|||
|
1:4 k7y9 מֹֽאֲבִיּ֔וֹת 1 ನೊವೊಮಿಯ ಗಂಡು ಮಕ್ಕಳು ಮೋವಾಬ್ ಕುಲಕ್ಕೆ ಸಂಬಂಧಿಸಿದ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರು. ಮೋವಾಬ್ಯರು ಅನ್ಯ ದೇವರುಗಳಿಗೆ ಆರಾಧನೆ ಮಾಡುವವರಾಗಿದ್ದರು.
|
|||
|
1:4 aee6 שֵׁ֤ם הָֽאַחַת֙ & וְשֵׁ֥ם הַשֵּׁנִ֖י 1 **ಒಬ್ಬ ಸ್ತ್ರೀಯಳ ಹೆಸರು... ಇನ್ನೊಬ್ಬ ಸ್ತ್ರೀಯಳ ಹೆಸರು**
|
|||
|
1:4 rt4c כְּעֶ֥שֶׂר שָׁנִֽים 1 ಎಲೀಮೆಲೆಕನು ಮತ್ತು ನೊವೊಮಿಯವರು ಮೋವಾಬ್ ದೇಶಕ್ಕೆ ಬಂದ ಹತ್ತು ವರ್ಷದಲ್ಲಿಯೇ ತಮ್ಮ ಇಬ್ಬರು ಗಂಡು ಮಕ್ಕಳಾಗಿರುವ ಮಹ್ಲೋನ್ ಮತ್ತು ಕಿಲ್ಯೋನ್ ತೀರಿಕೊಂಡರು.
|
|||
|
1:5 dbr3 וַתִּשָּׁאֵר֙ הָֽאִשָּׁ֔ה מִשְּׁנֵ֥י יְלָדֶ֖יהָ וּמֵאִישָֽׁהּ 1 ನೊವೊಮಿ ವಿಧವೆಯಳಾದಳು ಮತ್ತು ತನ್ನ ಇಬ್ಬರು ಗಂಡು ಮಕ್ಕಳು ತೀರಿಕೊಂಡರು.
|
|||
|
1:6 u9q2 וְכַלֹּתֶ֔יהָ 1 ನೊವೊಮಿ ಗಂಡು ಮಕ್ಕಳನ್ನು ಮದುವೆ ಮಾಡಿಕೊಂಡಿರುವ ಸ್ತ್ರೀಯರು
|
|||
|
1:6 sa4z שָֽׁמְעָה֙ בִּשְׂדֵ֣ה מוֹאָ֔ב 1 **ಆಕೆ ಮೋವಾಬ್ ದೇಶದಲ್ಲಿರುವಾಗಲೇ ಆಕೆ ಕೇಳಿದಳು.** ಇಸ್ರಾಯೇಲ್ ದೇಶದಿಂದ ವಾರ್ತೆಯನ್ನು ಕೇಳಿಸಿಕೊಂಡಿದ್ದಾಳೆ ಎಂದು ಇಲ್ಲಿ ನಮಗೆ ಅರ್ಥವಾಗುತ್ತಿದೆ. ಪರ್ಯಾಯ ಅನುವಾದ : "ನೊವೊಮಿ ಮೋವಾಬ್ ದೇಶದಲ್ಲಿರುವಾಗಲೇ ಇಸ್ರಾಯೇಲ್ ದೇಶದಿಂದ ಬಂದಿರುವವರಿಂದ ವಾರ್ತೆಯನ್ನು ಕೇಳಿಸಿಕೊಂಡಿದ್ದಳು." (ನೋಡಿರಿ: [[rc://*/ta/man/translate/figs-explicit]])
|
|||
|
1:6 ser2 יְהוָה֙ 1 ಇದು ಹಳೇ ಒಡಂಬಡಿಕೆಯಲ್ಲಿ ಆತನು ತನ್ನ ಜನರಿಗೆ ತೋರಿಸಿಕೊಂಡಿರುವ ಹೆಸರಾಗಿತ್ತು.
|
|||
|
1:6 v86z פָקַ֤ד & אֶת־עַמּ֔וֹ 1 ದೇವರು ಅವರ ಅಗತ್ಯತೆಗಳನ್ನು ಕಂಡು, ಅವರಿಗೆ ಒಳ್ಳೆಯ ಬೆಳೆಗಳನ್ನು ಅನುಗ್ರಹಿಸಿದ್ದನು. ಪರ್ಯಾಯ ಅನುವಾದ : "ಇಸ್ರಾಯೇಲ್ಯರಿಗೆ ಸಹಾಯ ಮಾಡಿದ್ದನು."
|
|||
|
1:6 ab01 לָתֵ֥ת לָהֶ֖ם לָֽחֶם׃ 1 **ರೊಟ್ಟಿ** ಎನ್ನುವ ಈ ಶಬ್ದವು ಸಾಮಾನ್ಯವಾಗಿ ಆಹಾರಕ್ಕೆ ಸೂಚಿಸುತ್ತದೆ. ಪರ್ಯಾಯ ಅನುವಾದ : "ಹೇರಳವಾದ ಬೆಳೆಗಳನ್ನು ಕೊಡುವುದರ ಮೂಲಕ ಅವರಿಗೆ ಹೆಚ್ಚಿನ ಆಹಾರವನ್ನು ಪಡೆದುಕೊಂಡರು." (ನೋಡಿರಿ: [[rc://*/ta/man/translate/figs-synecdoche]])
|
|||
|
1:7 w7ti וַתֵּלַ֣כְנָה בַדֶּ֔רֶךְ 1 **ಅವರು ದಾರಿಯಲ್ಲಿ ನಡೆದುಕೊಂಡು ಹೋದರು.** ದಾರಿಯಲ್ಲಿ ನಡೆದುಕೊಂಡು ಹೋದರು ಎನ್ನುವ ಮಾತಿಗೆ ಕಾಲಿ ನಡೆಗೆಯಿಂದ ಆ ದಾರಿಯಲ್ಲಿ ಹೋದರು ಎಂದರ್ಥ.
|
|||
|
1:8 lxs2 אִשָּׁ֖ה 1 ನೊವೊಮಿ ಎರಡು ಭಾಷೆಗಳನ್ನು ಮಾತನಾಡುವ ಜನರೊಂದಿಗೆ ಮಾತನಾಡುತ್ತಿದ್ದರು. ಆದ್ದರಿಂದ ಆಕೆ ತನ್ನ ಸಂಭಾಷಣೆಗಳಲ್ಲಿ ಎರಡು ವಿಧವಾದ ಭಾಷೆಗಳನ್ನು ಉಪಯೋಗಿಸರಬೇಕು. (ನೋಡಿರಿ: [[rc://*/ta/man/translate/figs-you]])
|
|||
|
1:8 fu39 לִשְׁתֵּ֣י כַלֹּתֶ֔יהָ 1 **ತನ್ನ ಇಬ್ಬರು ಗಂಡು ಮಕ್ಕಳ ಹೆಂಡತಿಯರು** ಅಥವಾ **ತನ್ನ ಇಬ್ಬರು ಗಂಡು ಮಕ್ಕಳ ವಿಧವೆಯರು**
|
|||
|
1:8 hsf7 לְבֵ֣ית אִמָּ֑הּ 1 **ನಿಮ್ಮ ತವರು ಮನೆಗಳಿಗೆ**
|
|||
|
1:8 i262 חֶ֔סֶד 1 **ಒಡಂಬಡಿಕೆಯ ನಂಬಿಕತ್ವ** ಅಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ವಿಷಯದಲ್ಲಿ ತನ್ನ ಕರ್ತವ್ಯಗಳನ್ನು ಮತ್ತು ನೇಮ ನಿಷ್ಠೆಗಳನ್ನು ನೆರವೇರಿಸುವುದೆಂದರ್ಥ. ಪೀಠಿಕೆಯ ಭಾಗದಲ್ಲಿ ಚರ್ಚೆಯನ್ನು ನೋಡಿರಿ.
|
|||
|
1:8 g4r8 עִם־הַמֵּתִ֖ים 1 **ತೀರಿಕೊಂಡಿರುವ ನಿಮ್ಮ ಗಂಡಂದಿಯರಿಗೆ.** ಸತ್ತು ಹೋಗಿರುವಂಥಹ ತನ್ನ ಇಬ್ಬರ ಮಕ್ಕಳನ್ನು ನೊವೊಮಿ ಸೂಚಿಸುತ್ತಿದ್ದಾಳೆ. (ನೋಡಿರಿ: [[rc://*/ta/man/translate/figs-idiom]])
|
|||
|
1:8 acb4 הַמֵּתִ֖ים 1 **ತೀರಿಕೊಂಡಿರುವ ನಿಮ್ಮ ಗಂಡಂದಿಯರಿಗೆ** (ನೋಡಿರಿ: [[rc://*/ta/man/translate/figs-nominaladj]])
|
|||
|
1:9 pm6y יִתֵּ֤ן יְהוָה֙ לָכֶ֔ם וּמְצֶ֣אןָ 1 **ಯೆಹೋವ ನಿಮಗೆ ಕೊಡಬಹುದು** ಅಥವಾ **ಹೊಂದಿಕೊಳ್ಳುವಂತೆ ನಿಮಗೆ ಯೆಹೋವನು ಅನುಮತಿ ನೀಡಬಹುದು**
|
|||
|
1:9 c74v וּמְצֶ֣אןָ מְנוּחָ֔ה 1 ಇಲ್ಲಿ **ವಿಶ್ರಾಂತಿ** ಎನ್ನುವ ಪದವು ವಿಶ್ರಾಂತಿಗಾಗಿ ಕುಳಿತುಕೊಳ್ಳುವುದನ್ನು ಸೂಚಿಸುತ್ತಿಲ್ಲ. ಈ ಸ್ತ್ರೀಯರು ಮದುವೆ ಮಾಡಿಕೊಳ್ಳವುದರ ಮೂಲಕ ಯಾವ ಸ್ಥಳಕ್ಕೆ ಹೋಗಿ ಸೇರುತ್ತಾರೆ ಆ ಸ್ಥಳವನ್ನು, ನಿವಾಸ ಮಾಡುವುದಕ್ಕೆ ಯಾವ ಮನೆಗೆ ಹೋಗಿ ಸೇರುತ್ತಾರೆ ಆ ಮನೆಯನ್ನು ಸೂಚಿಸುತ್ತಿದೆ ಎಂದರ್ಥ. (ನೋಡಿರಿ: [[rc://*/ta/man/translate/figs-metaphor]])
|
|||
|
1:9 v2vx בֵּ֣ית אִישָׁ֑הּ 1 ಅವರು ಸತ್ತು ಹೋದಂಥ ಗಂಡಂದಿರಂಥಲ್ಲ, ಅಥವಾ ಬೇರೆಯವರ ಗಂಡಂದಿಯರಲ್ಲ, ಆದರೆ ಹೊಸದಾಗಿ ಮದುವೆ ಮಾಡಿಕೊಂಡರೆ ಬರುವ ಗಂಡಂದಿಯರ ಕುರಿತಾಗಿ ಮಾತನಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿದೆ. **ಮನೆ** ಎನ್ನುವ ಪದವು ಯಜಮಾನನಿಗೆ ಸಂಬಂಧಪಟ್ಟ ಭೌತಿಕ ಕಟ್ಟಡವಾಗಿರುವ ಮನೆಯನ್ನು, ಗಂಡನಿಂದ ಉಂಟಾಗುವ ಬಡತನವನ್ನು ಮತ್ತು ನಾಚಿಕೆತನದಿಂದ ಕಾಪಾಡುವ ಸಂರಕ್ಷಣೆಯನ್ನು ಸೂಚಿಸುತ್ತದೆ. (ನೋಡಿರಿ: [[rc://*/ta/man/translate/figs-metonymy]])
|
|||
|
1:9 t69w וַתִּשֶּׂ֥אנָה קוֹלָ֖ן וַתִּבְכֶּֽינָה 1 ಗಟ್ಟಿಯಾಗಿ ಅತ್ತುವುದೆನ್ನುವುದು ಇಲ್ಲಿ ಗಟ್ಟಿಯಾಗಿ ಮಾತನಾಡಲು ಉಪಯೋಗಿಸುವ ಶೈಲಿ ಅದು. ಸೊಸೆಯಂದಿರು ಗಟ್ಟಿಯಾಗಿ ಅತ್ತರು ಅಥವಾ ಜಾಸ್ತಿ ಕಣ್ಣೀರಿಟ್ಟರು. (ನೋಡಿರಿ:[[rc://*/ta/man/translate/figs-idiom]])
|
|||
|
1:10 mag8 נָשׁ֖וּב 1 ಒರ್ಫಳು ಮತ್ತು ರೂತಳು **ನಾವೂ** ಎಂಬುದಾಗಿ ಹೇಳೀದಾಗ, ಅವರು ತಮ್ಮನ್ನು ತಾವು ತೋರಿಸಿಕೊಳ್ಳುತ್ತಿದ್ದಾರೆ ಹೊರತು ನೊವೊಮಿಯನ್ನು ತೋರಿಸುತ್ತಿಲ್ಲ. ಆದ್ದರಿಂದ ಎಲ್ಲವನ್ನು ಸೇರಿಸಿಕೊಳ್ಳುವ ಮತ್ತು ವಿಶೇಷವಾಗಿ ತಿಳಿಸುವ ಭಾಷೆಗಳಲ್ಲಿ **ನಾವೂ** ಎನ್ನುವ ವಿಶೇಷವಾದ ಪದದ ರೂಪವನ್ನೇ ಬಳಸಬೇಕು. (ನೋಡಿರಿ: [[rc://*/ta/man/translate/figs-exclusive]])
|
|||
|
1:10 bq4j אִתָּ֥ךְ 1 ಇಲ್ಲಿ **ನಿನ್ನ** ಎನ್ನುವ ಏಕವಚನದ ಶಬ್ದವು ನೊವೊಮಿಯಳನ್ನು ಸೂಚಿಸುತ್ತಿದೆ. (ನೋಡಿರಿ: [[rc://*/ta/man/translate/figs-you]])
|
|||
|
1:11 ggi3 לָ֥מָּה תֵלַ֖כְנָה עִמִּ֑י 1 ಇದು ವಾಗಾಡಂಬರದ ಪ್ರಶ್ನೆ. ಪರ್ಯಾಯ ಅನುವಾದ : "ನೀವು ನನ್ನ ಜೊತೆಯಲ್ಲಿ ಬರುವುದರಲ್ಲಿ ಅರ್ಥವಿಲ್ಲ." ಅಥವಾ "ನೀವು ನನ್ನ ಜೊತೆಯಲ್ಲಿ ಬರಕೂಡದು." (ನೋಡಿರಿ: [[rc://*/ta/man/translate/figs-rquestion]])
|
|||
|
1:11 q2hn הַֽעֽוֹד־לִ֤י בָנִים֙ בְּֽמֵעַ֔י וְהָי֥וּ לָכֶ֖ם לַאֲנָשִֽׁים 1 ಇದು ವಾಗಾಡಂಬರದ ಪ್ರಶ್ನೆ. ತನ್ನ ಸೊಸೆಯಂದಿರು ತಿರುಗಿ ಮದುವೆ ಮಾಡಿಕೊಳ್ಳುವುದಕ್ಕೆ ತನ್ನ ಬಳಿ ಬೇರೆ ಗಂಡು ಮಕ್ಕಳಿಲ್ಲವಲ್ಲವೆಂದು ಹೇಳುವುದಕ್ಕೆ ನೊವೊಮಿ ಈ ಪ್ರಶ್ನೆಯನ್ನು ಬಳಸಿದ್ದಾಳೆ. ಪರ್ಯಾಯ ಅನುವಾದ : "ನಿಮಗೆ ಗಂಡಂದಿಯರಾಗುವುದಕ್ಕೆ ನನ್ನ ಬಳಿ ಗಂಡು ಮಕ್ಕಳನ್ನು ಹಡೆಯುವುದಕ್ಕೆ ಸಾಧ್ಯವಾಗುವುದಿಲ್ಲ." (ನೋಡಿರಿ: [[rc://*/ta/man/translate/figs-rquestion]])
|
|||
|
1:12 dyc4 זָקַ֖נְתִּי מִהְי֣וֹת לְאִ֑ישׁ 1 ಗಂಡ ತುಂಬಾ ಪ್ರಾಮುಖ್ಯವೆಂದು ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : ನಾನು ತಿರುಗಿ ಮದುವೆಮಾಡಿಕೊಂಡು, ಮಕ್ಕಳನ್ನು ಹಡೆಯುವುದಕ್ಕೆ ತುಂಬಾ ವೃದ್ಧಳಾಗಿದ್ದೇನೆ. (ನೋಡಿರಿ: [[rc://*/ta/man/translate/figs-explicit]])
|
|||
|
1:12 abc1 כִּ֤י אָמַ֨רְתִּי֙ יֶשׁ־לִ֣י תִקְוָ֔ה גַּ֣ם הָיִ֤יתִי הַלַּ֨יְלָה֙ לְאִ֔ישׁ וְגַ֖ם יָלַ֥דְתִּי בָנִֽים 1 ಈ ವಾಗಾಡಂಬರದ ಪ್ರಶ್ನೆಯು ಇಲ್ಲಿ ಆರಂಭವಾಗಿ, ಮುಂದೆ ಬರುವಂಥಹ ವಚನದಲ್ಲಿ ಮುಂದೆವರೆಯುತ್ತದೆ. ಅವರು ತಿರುಗಿ ಮದುವೆ ಮಾಡಿಕೊಳ್ಳುವುದಕ್ಕೆ ಗಂಡು ಮಕ್ಕಳನ್ನು ಹಡೆಯುವುದು ತುಂಬಾ ಕಷ್ಟವೆಂದು ಹೇಳುವುದಕ್ಕೆ ನೊವೊಮಿ ಈ ಪ್ರಶ್ನೆಯನ್ನು ಬಳಸುತ್ತಿದ್ದಾಳೆ. ಪರ್ಯಾಯ ಅನುವಾದ : "ಸಾಧ್ಯವಾಗುವುದಾದರೆ, ನಾನು ಮದುವೆ ಮಾಡಿಕೊಂಡು, ಮಕ್ಕಳನ್ನು ಹಡೆಯುವುದಕ್ಕೆ ಸಿದ್ಧಳಾಗಿದ್ದೇನೆ … " (ನೋಡಿರಿ: [[rc://*/ta/man/translate/figs-rquestion]])
|
|||
|
1:12 kh9g יָלַ֥דְתִּי בָנִֽים 1 **ಮಕ್ಕಳನ್ನು ಹಡೆಯುವುದು** ಅಥವಾ **ಗಂಡು ಮಕ್ಕಳನ್ನು ಹಡೆಯುವುದು**
|
|||
|
1:13 gmc2 אֲשֶׁ֣ר יִגְדָּ֔לוּ הֲלָהֵן֙ תֵּֽעָגֵ֔נָה לְבִלְתִּ֖י הֱי֣וֹת לְאִ֑ישׁ 1 ಮುಂದಿನ ವಚನದಲ್ಲಿ ನೊವೊಮಿ ಆರಂಭಿಸಿದ ವಾಗಾಡಂಬರದ ಪ್ರಶ್ನೆಯು ಸಂಪೂರ್ತಿಗೊಳಿಸಿ, ಅದೇ ಅರ್ಥವನ್ನು ಒತ್ತಿ ಹೇಳುವಂಥ ಎರಡನೇಯ ವಾಗಾಡಂಬರದ ಪ್ರಶ್ನೆಯು ಕೇಳುವುದನ್ನು ನೋಡುವೆವು. ಪರ್ಯಾಯ ಅನುವಾದ : " … ಅವರು ದೊಡ್ಡವರಾಗುವವರೆಗು ನೀವು ಕಾದುಕೊಂಡಿರುವುದಕ್ಕಾಗುವುದಿಲ್ಲ, ಆದಕಾರಣ ನೀವು ಅವರನ್ನು ಮದುವೆ ಮಾಡಿಕೊಳ್ಳಬಹುದು." (ನೋಡಿರಿ: [[rc://*/ta/man/translate/figs-rquestion]])
|
|||
|
1:13 ab04 אֲשֶׁ֣ר יִגְדָּ֔לוּ הֲלָהֵן֙ תֵּֽעָגֵ֔נָה לְבִלְתִּ֖י הֱי֣וֹת לְאִ֑ישׁ 1 ಇದು ಮೈದುನದಿಂದ ಸಂತಾನವನ್ನು ಹುಟ್ಟಿಸುವ ಮದುವೆಯ ಆಚಾರವನ್ನು ಸೂಚಿಸುತ್ತದೆ. ಆ ಆಚಾರದ ಪ್ರಕಾರವೇ, ಮದುವೆ ಮಾಡಿಕೊಂಡಿರುವ ವ್ಯಕ್ತಿಯು ತೀರಿಕೊಂಡರೆ, ತೀರಿಕೊಂಡಿರುವ ಗಂಡನ ಸಹೋದರರಲ್ಲಿ ವಿಧವಯೆಳಾಗಿರುವ ಸ್ತ್ರೀಯನ್ನು ಮದುವೆ ಮಾಡಿಕೊಳ್ಳಬಹುದು. ಇನ್ನೂ ಹೆಚ್ಚಿನ ವಿವರಣೆಗಾಗಿ ಪೀಠಿಕೆಯನ್ನು ನೋಡಿರಿ.
|
|||
|
1:13 gh99 מַר־לִ֤י מְאֹד֙ 1 ಕಹಿ ಅನುಭವ ಎನ್ನುವದು ದುಃಖಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ಈ ರೀತಿ ನಡೆದಿರುವುದರಿಂದ ನಾನು ಎಷ್ಟೋ ದುಃಖಪಡುತ್ತಿದ್ದೇನೆ" (ನೋಡಿರಿ: [[rc://*/ta/man/translate/figs-metaphor]])
|
|||
|
1:13 z9u3 יָצְאָ֥ה בִ֖י יַד־יְהוָֽה 1 **ಹಸ್ತ** ಎನ್ನುವ ಶಬ್ದವು ಯೆಹೋವನ ಶಕ್ತಿಯನ್ನು ಅಥವಾ ಪ್ರಭಾವವನ್ನುಸೂಚಿಸುತ್ತದೆ. ಪರ್ಯಾಯ ಅನುವಾದ : "ಯೆಹೋವನು ನನಗೆ ಅತಿ ಗಂಭೀರವಾದ ಸಂಘಟನೆಗಳನ್ನು ಅನುಭವಿಸುವಂತೆ ಮಾಡಿದ್ದಾನೆ. (ನೋಡಿರಿ: [[rc://*/ta/man/translate/figs-metonymy]])
|
|||
|
1:13 ab02 יָצְאָ֥ה בִ֖י יַד־יְהוָֽה 1 ಯೆಹೋವನು ಮಾಡಿದ್ದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ : "ಯೆಹೋವನು ನಮ್ಮ ಗಂಡಂದಿಯರನ್ನು ತೆಗೆದುಕೊಂಡು ಹೋಗಿದ್ದಾನೆ" (ನೋಡಿರಿ: [[rc://*/ta/man/translate/figs-explicit]])
|
|||
|
1:14 n47v וַתִּשֶּׂ֣נָה קוֹלָ֔ן וַתִּבְכֶּ֖ינָה 1 ಈ ಮಾತಿಗೆ ತುಂಬಾ ಗಟ್ಟಿಯಾಗಿ ಅತ್ತಿದ್ದಾರೆ ಅಥವಾ ಕಣುವಾಗಿ ಕಣ್ಣೀರಿಟ್ಟಿದ್ದಾರೆ ಎಂದರ್ಥ. (ನೋಡಿರಿ: [[rc://*/ta/man/translate/figs-idiom]])
|
|||
|
1:14 t4sl וְר֖וּת דָּ֥בְקָה בָּֽהּ 1 **ರೂತಳು ನೊವೊಮಿಗೆ ಅಂಟಿಕೊಂಡಿದ್ದಾಳೆ.** ಪರ್ಯಾಯ ಅನುವಾದ : "ರೂತಳು ಅವಳನ್ನು ಬಿಟ್ಟು ಹೋಗಲು ತಿರಸ್ಕಾರ ಮಾಡಿದ್ದಾಳೆ" ಅಥವಾ "ರೂತಳು ಆಕೆಯನ್ನು ಬಿಟ್ಟು ಹೋಗಲಿಲ್ಲ" (ನೋಡಿರಿ: [[rc://*/ta/man/translate/figs-explicit]])
|
|||
|
1:15 ld6g הִנֵּה֙ 1 **ಗಮನ ಹರಿಸಿರಿ, ಯಾಕಂದರೆ ನಾನು ಯಾವುದರ ಕುರಿತಾಗಿ ಹೇಳುತ್ತೇನೋ ಅದು ನಿಜ ಮತ್ತು ತುಂಬಾ ಪ್ರಾಮುಖ್ಯವಾಗಿರುತ್ತದೆ.**
|
|||
|
1:15 nqm3 יְבִמְתֵּ֔ךְ 1 **ನಿನ್ನ ಗಂಡನ ಸಹೋದರನ ಹೆಂಡತಿ** ಅಥವಾ **ಓರ್ಫಾ.** ಈ ವ್ಯಕ್ತಿಯನ್ನು ಸೂಚಿಸುವುದಕ್ಕೆ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/writing-participants]])
|
|||
|
1:15 man4 אֱלֹהֶ֑יהָ 1 ಓರ್ಪಾ ಮತ್ತು ರೂತಳು ನೊವೊಮಿಯ ಮಕ್ಕಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ಮುಂಚಿತವಾಗಿ ಅವರು ವೋವಾಬ್ ದೇವರುಗಳನ್ನು ಆರಾಧನೆ ಮಾಡಿದ್ದರು. ಅವರ ವಿವಾಹದಲ್ಲಿ ಅವರು ಯೆಹೋವಾನನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು. ಇವಾಗ, ಓರ್ಫಾ ತಿರುಗಿ ಮೋವಾಬ್ ದೇವರುಗಳನ್ನು ಆರಾಧನೆ ಮಾಡುವದಕ್ಕೆ ಹಿಂದುರಿಗಿ ಹೋಗಿದ್ದಾಳೆ.
|
|||
|
1:16 z5ug וּבַאֲשֶׁ֤ר תָּלִ֨ינִי֙ 1 **ನೀನು ನಿವಾಸ ಮಾಡುವ ಸ್ಥಳದಲ್ಲಿ**
|
|||
|
1:16 b518 עַמֵּ֣ךְ עַמִּ֔י 1 ರೂತಳು ನೊವೊಮಿ ಜನರಾಗಿರುವ ಇಸ್ರಾಯೇಲ್ಯರನ್ನು ಸೂಚಿಸುತ್ತಿದ್ದಾಳೆ. ಪರ್ಯಾಯ ಅನುವಾದ : "ನಿಮ್ಮ ದೇಶದ ಜನರೇ ನನ್ನ ಸ್ವಂತ ಜನರನ್ನಾಗಿ ಪರಿಗಣಿಸುವೆನು" ಅಥವಾ "ನಿಮ್ಮ ಬಂಧುಗಳೇ ನನ್ನ ಸ್ವಂತ ಬಂಧುಗಳೆಂದು ಪರಿಗಣಿಸುವೆನು" (ನೋಡಿರಿ: [[rc://*/ta/man/translate/figs-explicit]])
|
|||
|
1:17 lql7 בַּאֲשֶׁ֤ר תָּמ֨וּתִי֙ אָמ֔וּת 1 ನೊವೊಮಿಯಂತೆ ಅದೇ ಸ್ಥಳದಲ್ಲಿ ಮತ್ತು ಅದೇ ಪಟ್ಟಣದಲ್ಲಿ ಉಳಿದ ತನ್ನ ಜೀವಿತವು ಕಳೆಯಬೇಕೆನ್ನುವ ರೂತಳ ಆಶೆಯನ್ನು ಇದು ನಮಗೆ ಸ್ಪಷ್ಟವಾಗಿ ತೋರಿಸುತ್ತದೆ. (ನೋಡಿರಿ: [[[rc://*/ta/man/translate/figs-idiom]])
|
|||
|
1:17 sje3 יַעֲשֶׂ֨ה יְהוָ֥ה לִי֙ וְכֹ֣ה יֹסִ֔יף כִּ֣י 1 ನೊವೊಮಿಯು ಹೇಳುವದನ್ನು ಮಾಡುವುದಕ್ಕೆ ರೂತಳು ಖಂಡಿತವಾಗಿ ಮಾಡುವಳೆಂದು ತೋರಿಸುವುದಕ್ಕೆ ರೂತಳು ಆ ರೀತಿ ತೋರಿಸಿಕೊಳ್ಳುವಿಕೆಯು ಕೂಡ ಸಂಪ್ರದಾಯಿಕವಾದ ಒಂದು ಶೈಲಿಯಾಗಿರುತ್ತದೆ. ಆಕೆಯು ತನ್ನ ಮೇಲೆ ಶಾಪವನ್ನು ಹಾಕಿಕೊಳ್ಳುತ್ತಿದ್ದಾಳೆ, ಆಕೆಯು ಹೇಳಿದ್ದನ್ನು ರೂತಳು ಮಾಡದಿದ್ದರೇ ದೇವರು ತನ್ನನ್ನು ಶಿಕ್ಷಿಸಲಿ ಎಂದು ದೇವರನ್ನು ಕೇಳಿಕೊಳ್ಳುತ್ತಿದ್ದಾಳೆ. ಈ ರೀತಿ ಮಾಡುವುದಕ್ಕೆ ನಿಮ್ಮ ಭಾಷೆಯಲ್ಲಿ ಯಾವರೀತಿ ಮಾಡುವರೋ ಅದನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/figs-idiom]])
|
|||
|
1:17 abc2 כִּ֣י הַמָּ֔וֶת יַפְרִ֖יד בֵּינִ֥י וּבֵינֵֽךְ 1 **ಮರಣವನ್ನು ಹೊರತುಪಡಿಸಿ ನಮ್ಮನ್ನು ಅಗಲಿಸುವಂಥದ್ದು ಯಾವುದಾದರೂ ಇದೆಯೋ** ಅಥವಾ **ನೀವು ಮತ್ತು ನಾನು ಜೀವಂತವಾಗಿರುವಾಗಲೇ ನಾನು ನಿಮ್ಮನ್ನು ತೊರೆದರೆ**
|
|||
|
1:17 ab05 יַפְרִ֖יד בֵּינִ֥י וּבֵינֵֽךְ 1 ಇದು ಇಬ್ಬರು ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಸೂಚಿಸುವ ನುಡಿಗಟ್ಟಾಗಿರುತ್ತದೆ. ಪರ್ಯಾಯ ಅನುವಾದ : "ನಮ್ಮಿಬ್ಬರನ್ನು ಅಗಲಿಸುವುದು" ಅಥವಾ "ನಮ್ಮ ನಡುವೆ ಬರುವಂಥದ್ದು" (ನೋಡಿರಿ: [[rc://*/ta/man/translate/figs-idiom]])
|
|||
|
1:18 rsq2 וַתֶּחְדַּ֖ל לְדַבֵּ֥ר אֵלֶֽיהָ 1 **ರೂತಳ ಜೊತೆ** **ನೊವೊಮಿ** **ವಾದಿಸುವುದನ್ನು ನಿಲ್ಲಿಸಿದಳು**
|
|||
|
1:19 j9wa וַיְהִ֗י 1 ಈ ವಾಕ್ಯವು ಕಥೆಯನ್ನು ಹೊಸ ಸಂಘಟನೆಯನ್ನು ಪರಿಚಯಿಸುತ್ತಿದೆ. (ನೋಡಿರಿ: [[rc://*/ta/man/translate/writing-newevent]])
|
|||
|
1:19 jdr1 כְּבֹאָ֨נָה֙ בֵּ֣ית לֶ֔חֶם 1 ಇದು ಹಿನ್ನೆಲೆಯ ಉಪವಾಕ್ಯವಾಗಿರುತ್ತದೆ, ನೊವೊಮಿಯು ರೂತಳ ಜೊತೆಯಲ್ಲಿ ಬೇತ್ಲೇಹೇಮಿಗೆ ಹಿಂದುರಿಗಿ ಹೋದನಂತರ ಹೊಸ ಘಟನೆಯು ನಡೆಯುತೆಂದು ವಿವರಿಸುತ್ತದೆ. (ನೋಡಿರಿ: [[rc://*/ta/man/translate/grammar-connect-time-background]])
|
|||
|
1:19 y3us כָּל־הָעִיר֙ 1 ಇಲ್ಲಿ **ಊರು (ಅಥವಾ ಪಟ್ಟಣ)** ಎನ್ನುವ ಪದವು ಒಂದು ಸ್ಥಳದಲ್ಲಿ ನಿವಾಸ ಮಾಡುವ ಜನರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ : "ಪಟ್ಟಣದಲ್ಲಿರುವ ಜನರೆಲ್ಲರು" (ನೋಡಿರಿ: [ [[rc://*/ta/man/translate/figs-metonymy]])
|
|||
|
1:19 abc3 כָּל־הָעִיר֙ 1 ಇಲ್ಲಿ **ಅಲ್ಲೆಲ್ಲಾ** ಎನ್ನುವದು ಅತಿಶಯೋಕ್ತಿ ಪದವಾಗಿರುತ್ತದೆ. ಆ ಊರಿನ ಜನರೆಲ್ಲರೂ ತುಂಬಾ ಉತ್ಸುಕರಾಗಿದ್ದರು, ಆದರೆ ಈ ವಾರ್ತೆಯನ್ನು ಕೇಳಿಸಿಕೊಂಡ ಆ ಊರಿನ ಜನರಲ್ಲಿ ಕೆಲವರು ಮಾತ್ರ ಉತ್ಸುಕರಾಗಿರಲಿಲ್ಲ. (ನೋಡಿರಿ: [[rc://*/ta/man/translate/figs-hyperbole]])
|
|||
|
1:19 xnb3 הֲזֹ֥את נָעֳמִֽי 1 ಎಷ್ಟೊಂದೋ ವರ್ಷಗಳಿಂದ ನೊವೊಮಿ ಬೇತ್ಲೆಹೇಮಿನಲ್ಲಿ ನಿವಾಸ ಮಾಡಿದ್ದಳು. ಈಗ ಆಕೆಗೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳು ಇಲ್ಲದೇ ಹೋದರು. ಈಗ ನೊವೊಮಿ ಬೆತ್ಲೇಹೇಮಿಗೆ ಬಂದ ನೊವೊಮಿಯನ್ನು ನೋಡಿದ ಸ್ತ್ರೀಯರು ಈಕೆ ನೊವೊಮಿಯಳ ಎನ್ನುವ ಸಂದೇಹವನ್ನು ವ್ಯಕ್ತಗೊಳಿಸುತ್ತಿದ್ದಾರೆ. ಇದನ್ನು ನಿಜವಾದ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಿರೇ ಹೊರತು ವಾಗಾಡಂಬರದ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಬೇಡಿರಿ.
|
|||
|
1:20 stw5 אַל־תִּקְרֶ֥אנָה לִ֖י נָעֳמִ֑י 1 **ನೊವೊಮಿ** ಎನ್ನುವ ಹೆಸರಿಗೆ **ನನ್ನ ಸಂತೋಷ** ಎಂದರ್ಥ. ನೊವೊಮಿ ತನ್ನ ಗಂಡನನ್ನು ಮತ್ತು ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಳು. ತನ್ನ ಜೀವಿತವು ತನ್ನ ಹೆಸರಿಗೆ ಸರಿಹೋಗುತ್ತದೆಯೆಂದು ಆಕೆ ಎಂದಿಗೂ ಭಾವಿಸುವಂತಿಲ್ಲ.
|
|||
|
1:20 swe9 מָרָ֔א 1 ಈ ಹೆಸರಿಗೆ ಹಿಬ್ರೂ ಭಾಷೆಯಲ್ಲಿ ಅಕ್ಷರಶಃವಾಗಿ "ಕಹಿ" ಎಂದರ್ಥ. ಇದು ಹೆಸರಾಗಿರುವದರಿಂದ, **ಕಹಿ** ಎಂದು ಅರ್ಥ ಬರುವಂತಹ ಆಂಗ್ಲ ಭಾಷೆಯ ರೂಪವನ್ನು ನೀವು ಬಳಸಬಹುದು, ಮತ್ತು ಹಿಬ್ರೂ ಭಾಷೆಯ ಹೆಸರಿಗೆ ಆಂಗ್ಲ ಭಾಷೆಯ ಶಬ್ದವು ಕೊಡುವ ಅರ್ಥಕ್ಕೆ ವಿವರಣೆ ಕೊಡುವುದಕ್ಕೆ ಬೈಬಲ್ ಪುಟದಲ್ಲಿ ಕೆಳಭಾಗ ಸೂಚನೆಯನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/translate-names]])
|
|||
|
1:21 n9zc אֲנִי֙ מְלֵאָ֣ה הָלַ֔כְתִּי וְרֵיקָ֖ם הֱשִׁיבַ֣נִי יְהוָ֑ה 1 ನೊವೊಮಿ ಬೇತ್ಲೆಹೇಮ್ ಊರನ್ನು ಬಿಟ್ಟು ಹೋದನಂತರ, ಆಕೆ ತನ್ನ ಗಂಡನನ್ನು ಮತ್ತು ತನ್ನ ಇಬ್ಬರು ಗಂಡು ಮಕ್ಕಳನ್ನು ಪಡೆದುಕೊಂಡಿದ್ದಳು, ಅವಾಗ ಆಕೆ ಸಂತೋಷವಾಗಿದ್ದಳು. ತನ್ನ ಗಂಡ ಮತ್ತು ತನ್ನ ಇಬ್ಬರು ಗಂಡು ಮಕ್ಕಳು ಸತ್ತು ಹೋಗಿದ್ದಕ್ಕೆ, ಅವರಿಲ್ಲದಂತೆ ಆಕೆ ತಿರುಗಿ ಬೇತ್ಲೆಹೇಮಿಗೆ ಬರಲು ಆಕೆಯನ್ನು ದೇವರು ಶಪಿಸಿದ್ದಾರೆಂದು ನೊವೊಮಿ ಯೆಹೋವನ ಮೇಲೆ ನಿಂದೆಯನ್ನು ಹಾಕುತ್ತಿದ್ದಾಳೆ. ಈಗ ಆಕೆ ಕಹಿಯಾಗಿ ಮತ್ತು ಅಸಂತೋಷವಾಗಿದ್ದಾಳೆ.
|
|||
|
1:21 jqx5 עָ֣נָה בִ֔י 1 **ನನ್ನನ್ನು ತಪ್ಪು ಮಾಡಿದವಳನ್ನಾಗಿ ತೀರ್ಪು ಮಾಡಿದ್ದಾನೆ**
|
|||
|
1:21 t1p8 הֵ֥רַֽע לִֽי 1 **ನನ್ನ ಮೇಲೆ ಉಪದ್ರವವನ್ನು ತೆಗೆದುಕೊಂಡು ಬಂದಿದ್ದಾನೆ** ಅಥವಾ **ನನ್ನ ಜೀವನದಲ್ಲಿ ದುರಂತವನ್ನು ತೆಗೆದುಕೊಂಡು ಬಂದಿದ್ದಾನೆ**
|
|||
|
1:22 cx7g וַתָּ֣שָׁב נָעֳמִ֗י וְר֨וּת 1 ಇಲ್ಲಿ ಸಾರಾಂಶ ವಚನವು ಆರಂಭವಾಗುತ್ತದೆ. ಆಂಗ್ಲ ಭಾಷೆಯಲ್ಲಿ ಉಪಯೋಗಿಸಿದ **So**. ಎನ್ನುವದರ ಮೂಲಕ ಇಲ್ಲಿ ಅರ್ಥವಾಗುತ್ತದೆ. ನಿಮ್ಮ ಭಾಷೆಯಲ್ಲಿ ಈ ಅಧ್ಯಾಯದ ಮುಕ್ತಾಯವನ್ನು ಹೇಗೆ ಮಾಡಿದ್ದಾರೆಂದು ಗಮನಿಸಿಕೊಳ್ಳಿರಿ ಮತ್ತು ಅದನ್ನು ಇಲ್ಲಿಯೂ ಅನುಸರಿಸಿರಿ. (ನೋಡಿರಿ: [[rc://*/ta/man/translate/writing-endofstory]])
|
|||
|
1:22 jdr2 וְהֵ֗מָּה בָּ֚אוּ בֵּ֣ית לֶ֔חֶם בִּתְחִלַּ֖ת קְצִ֥יר שְׂעֹרִֽים 1 ಈ ವಾಕ್ಯವು ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತದೆ, ಇಸ್ರಾಯೇಲ್ಯರು ಹೊಲಗಳಲ್ಲಿ ಜವಗೋಧಿಯ ಸುಗ್ಗಿಯನ್ನು ಆರಂಭಿಸಿದ ಸಮಯದಲ್ಲಿ ನೊವೊಮಿ ಮತ್ತು ರೂತಳು ಬೇತ್ಲೆಹೇಮಿಗೆ ಬಂದಿರುವ ಸಂದರ್ಭವನ್ನು ವಿವರಿಸುತ್ತಿದೆ. (ನೋಡಿರಿ: [[rc://*/ta/man/translate/writing-background]])
|
|||
|
1:22 bgy3 בִּתְחִלַּ֖ת קְצִ֥יר שְׂעֹרִֽים 1 **ಜವಗೋಧಿಯ ಸುಗ್ಗಿ** ಎನ್ನುವ ಮಾತು ಬಾಯಿ ಮಾತಿನಿಂದ ಅನುವಾದ ಮಾಡಬಹುದು. ಪರ್ಯಾಯ ಅನುವಾದ : "ರೈತರು ಜವಗೋಧಿಯ ಕೊಯ್ಲನ್ನು ಆರಂಭ ಮಾಡುವ ಸಮಯದಲ್ಲಿ" (ನೋಡಿರಿ: [[rc://*/ta/man/translate/figs-abstractnouns]])
|
|||
|
2:intro ld2v 0 # ರೂತಳು 02 ಸಾಧಾರಣವಾದ ಸೂಚನೆಗಳು \n\n# ಈ ಅಧ್ಯಾಯದಲ್ಲಿ ಕಂಡುಬರುವ ಅನುವಾದಕ್ಕೆ ಸಂಬಂಧಪಟ್ಟ ಸಮಸ್ಯೆಗಳು \n\n### **ಹಕ್ಕಲತೆನೆ ಮಾಡುವುದಕ್ಕೆ ಇನ್ನೊಂದು ಹೊಲಕ್ಕೆ ಹೋಗಬೇಡ**\n\nಈ ಮಾತನ್ನು ಬೋವಜನು ಹೇಳಿದ್ದನು, ಯಾಕಂದರೆ ಇನ್ನೊಬ್ಬರ ಹೊಲದಲ್ಲಿ ರೂತಳಿಗೆ ಅಷ್ಟು ಸಂರಕ್ಷಣೆಯು ಸಿಗುವುದಿಲ್ಲವೆಂದೆಣಿಸಿದ್ದನು. ಬೋವಜನ ಹಾಗೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆ ತೋರಿಸಿ ಮತ್ತು ಕೃಪೆಯನ್ನು ತೋರಿಸುವುದೆಲ್ಲವೆಂದು ಆ ಮಾತಿಗೆ ಅರ್ಥವೆಂದು ತಿಳಿದುಕೊಳ್ಳಬಹುದು. (ನೋಡಿರಿ: [[rc://*/tw/dict/bible/kt/grace]] ಮತ್ತು [[rc://*/tw/dict/bible/kt/lawofmoses]] and [[rc://*/ta/man/translate/figs-explicit]])
|
|||
|
2:1 ab10 וּֽלְנָעֳמִ֞י מוֹדַ֣ע לְאִישָׁ֗הּ 1 1ನೇ ವಚನವು ಬೋವಜನ ಕುರಿತು ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತದೆ. ಇದರಿಂದ ಅವನ ಕುರಿತಾಗಿ ಓದುಗಾರರು ಚೆನ್ನಾಗಿ ಅರ್ಥಮಾಡಿಕೊಳ್ಳುವರು. ನಿಮ್ಮ ಭಾಷೆಯಲ್ಲಿಯು ಹಿನ್ನೆಲೆಯ ಮಾಹಿತಿಯನ್ನು ಕೊಡುವುದಕ್ಕೆ ವಿಶೇಷವಾದ ವಿಧಾನವಿರಬಹುದು. (ನೋಡಿರಿ: [[rc://*/ta/man/translate/writing-background]])
|
|||
|
2:1 t2sn וּֽלְנָעֳמִ֞י מוֹדַ֣ע לְאִישָׁ֗הּ 1 ಈ ವಾಕ್ಯವು ಕಥೆಯಲ್ಲಿ ಬರುವಂಥಹ ಮತ್ತೊಂದು ಭಾಗವನ್ನು ಪರಿಚಯ ಮಾಡುತ್ತಿದೆ. ಅದರಲ್ಲಿ ರೂತಳು ಬೋವಜನನ್ನು ಭೇಟಿಯಾಗುವಳು. ಇಲ್ಲಿ ಬೋವಜನು ಕಥೆಯಲ್ಲಿ ಭಾಗವಹಿಸುವ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿದ್ದಾನೆ. ಕಥೆಯಲ್ಲಿ ಹೊಸ ಪಾತ್ರಗಳನ್ನು ಅಥವಾ ಹೊಸ ಘಟನೆಗಳನ್ನು ಪರಿಚಯ ಮಾಡುವ ವಿಶೇಷವಾದ ವಿಧಾನವು ನಿಮ್ಮ ಭಾಷೆಯಲ್ಲಿಯೂ ಇರಬಹುದು. (ನೋಡಿರಿ: [[rc://*/ta/man/translate/writing-participants]])
|
|||
|
2:1 b4q7 אִ֚ישׁ גִּבּ֣וֹר חַ֔יִל 1 **ಒಬ್ಬ ಪ್ರಮುಖ ಶ್ರೀಮಂತ.** ಈ ಮಾತಿಗೆ ಒಳ್ಳೆಯ ಹೆಸರನ್ನು ಪಡೆದು, ತನ್ನ ಜನರ ಮಧ್ಯೆದಲ್ಲಿ ಚೆನ್ನಾಗಿ ಗೊತ್ತಿದ್ದವನು ಮತ್ತು ಬೋವಜನು ಎಲ್ಲಾವುದರಲ್ಲಿ ಸಮೃದ್ಧಿಯುಳ್ಳವನಾಗಿದ್ದನೆಂದರ್ಥ.
|
|||
|
2:1 ab09 מִמִּשְׁפַּ֖חַת אֱלִימֶ֑לֶךְ 1 ಇಲ್ಲಿ ಉಪಯೋಗಿಸಲ್ಪಟ್ಟಿರುವ **ಗೋತ್ರ** ಎನ್ನುವ ಪದಕ್ಕೆ ಬೋವಜನು ಎಲೀಮೆಲೆಕನ ಸಂಬಂಧಿಯಾಗಿದ್ದನು, ಆದರೆ ಎಲೀಮೆಲೆಕನ ತಂದೆತಾಯಿಗಳಿಗೆ ಹುಟ್ಟಿದವನಲ್ಲ. ಗೋತ್ರಕ್ಕೆ ಎಲೀಮೆಲೆಕನ ಹೆಸರನ್ನು ಇಡಲಾಗಿದೆಯೆಂದು ಅಥವಾ ಆ ಗೋತ್ರಕ್ಕೆ ಎಲೀಮೆಲೆಕನು ಪೂರ್ವಜನೆಂಬುದಾಗಿ ಅಥವಾ ನಾಯಕನೆಂಬುದಾಗಿ ಈ ವಾಕ್ಯವು ಹೇಳುತ್ತಿಲ್ಲ.
|
|||
|
2:2 am6a ר֨וּת הַמּוֹאֲבִיָּ֜ה 1 ಇಲ್ಲಿ ಕಥೆಯು ಪುನರಾರಂಭವಾಗುತ್ತಿದೆ. ಹಿನ್ನೆಲೆಯ ಮಾಹಿತಿಯನ್ನು ಕೊಟ್ಟನಂತರ ಕಥೆಯಲ್ಲಿ ನಡೆದ ಸಂಘಟನೆಗಳನ್ನು ತಿರುಗಿ ಹೇಳುವುದಕ್ಕೆ ನಿಮ್ಮ ಭಾಷೆಯ ವಿಧಾನದಲ್ಲಿ ಇದನ್ನು ಸೂಚಿಸಬಹುದು.
|
|||
|
2:2 c7rk הַמּוֹאֲבִיָּ֜ה 1 ಇದು ಮೋವಾಬ್ ಕುಲದಿಂದ ಅಥವಾ ದೇಶದಿಂದ ಬಂದಿರುವ ಸ್ತ್ರೀಯಳು ಎಂದು ಇನ್ನೊಂದು ವಿಧಾನದಲ್ಲಿ ಹೇಳುವ ಮಾತಾಗಿರುತ್ತದೆ.
|
|||
|
2:2 qt4q וַאֲלַקֳטָּ֣ה בַשִׁבֳּלִ֔ים 1 **ಕೊಯ್ಯುವವರಿಂದ ಬಿಡಲ್ಪಟ್ಟ ಹಕ್ಕಲತೆನೆಗಳನ್ನು ಕೂಡಿಸಿಕೊಂಡು** ಅಥವಾ **ಕೊಯ್ಯುವವರಿಂದ ಬಿಡಲ್ಪಟ್ಟ ಹಕ್ಕಲತೆನೆಗಳನ್ನು ಆರಿಸಿಕೊಂಡು**
|
|||
|
2:2 j59b אֶמְצָא־חֵ֖ן בְּעֵינָ֑יו 1 **ಯಾರ ದೃಷ್ಟಿಯಲ್ಲಿ ನಾನು ದಯೆಯನ್ನು ಕಂಡುಕೊಳ್ಳುತ್ತೇನೋ** ಎನ್ನುವ ಮಾತು ಒಂದು ನುಡಿಗಟ್ಟಾಗಿರುತ್ತದೆ. ಈ ಮಾತಿಗೆ, "ಯಾರು ನನ್ನನ್ನು ಅನುಮೋದನೆ ಮಾಡುತ್ತಾರೋ" ಎಂದರ್ಥ. ಇನ್ನೊಬ್ಬರ ಅನುಮತಿ ಅಥವಾ ಅನುಮೋದನೆಯನ್ನು ಪಡೆದುಕೊಳ್ಳುವುದರ ಕುರಿತಾಗಿ ರೂತಳು ಮಾತನಾಡುತ್ತಿದ್ದಾಳೆ. ಪರ್ಯಾಯ ಅನುವಾದ : "ಯಾರು ನನಗೆ ದಯೆ ತೋರಿಸುತ್ತಾರೋ" (ನೋಡಿರಿ: [[rc://*/ta/man/translate/figs-idiom]])
|
|||
|
2:2 abc5 בְּעֵינָ֑יו 1 **ದೃಷ್ಟಿಯಲ್ಲಿ** ಎನ್ನುವ ಲಾಕ್ಷಣಿಕ ಶಬ್ದವು ನೋಡುವದನ್ನು ಸೂಚಿಸುತ್ತದೆ. ನೋಡುವುದೆನ್ನುವುದು ಜ್ಞಾನಕ್ಕೆ, ಗಮನಿಸುವುದಕ್ಕೆ, ಶ್ರದ್ಧೆ ತೋರಿಸುವುದಕ್ಕೆ, ಅಥವಾ ತೀರ್ಪು ಮಾಡುವುದಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ಯಾರು ನಿರ್ಧರಿಸುತ್ತಾರೋ [ಯಾರು ದಯೆ ತೋರಿಸುತ್ತಾರೋ]" (ನೋಡಿರಿ: [[rc://*/ta/man/translate/figs-metaphor]])
|
|||
|
2:2 ed93 בִתִּֽי 1 ರೂತಳು ನೊವೊಮಿಯನ್ನು ತನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದಳು, ನೊವೊಮಿ ಕೂಡ ರೂತಳನ್ನು ತನ್ನ ಸ್ವಂತ ಮಗಳಿನಂತೆ ನೋಡಿಕೊಳ್ಳುತ್ತಿದ್ದಳು. ಇದು ನಿಮ್ಮ ಭಾಷೆಯಲ್ಲಿ ಗಂದಲಕ್ಕೆ ಉಂಟು ಮಾಡಿದರೆ, ನಿಮ್ಮ ಭಾಷೆಯಲ್ಲಿ ಇಬ್ಬರ ಹೆಂಗಸರ ಮಧ್ಯೆದಲ್ಲಿ ಇರುವ ಈ ಆತ್ಮೀಯ ಸಂಬಂಧವನ್ನು ತೋರಿಸುವ ಪದವನ್ನು ಅಥವಾ ಮಾತನ್ನು ಉಪಯೋಗಿಸಿರಿ.
|
|||
|
2:3 ht73 וַיִּ֣קֶר מִקְרֶ֔הָ 1 ರೂತಳು ನೊವೊಮಿಯ ಸಂಬಂಧಿಕರಾಗಿರುವ ಬೋವಜ ಹೊಲದಲ್ಲಿ ಹಕ್ಕಲಾಯುವಳೆಂದು ರೂತಳೀಗೆ ಗೊತ್ತಿರಲಿಲ್ಲವೆಂದು ಈ ಮಾತಿಗೆ ಅರ್ಥ.
|
|||
|
2:3 ab11 מִמִּשְׁפַּ֥חַת אֱלִימֶֽלֶךְ 1 **ಗೋತ್ರ (ಅಥವಾ ಕುಲ)** ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಅರ್ಥವೇನೆಂದರೆ ಬೋವಜನು ಎಲೀಮೆಲೆಕನಿಗೆ ಸಂಬಂಧಿಯಾಗಿದ್ದನು. ಆದರೆ ಎಲೀಮೆಲೆಕನ ತಂದೆತಾಯಿಗಳಿಗೆ ಹುಟ್ಟಿದವನಲ್ಲ. ಗೋತ್ರಕ್ಕೆ ಎಲೀಮೆಲೆಕನ ಹೆಸರನ್ನು ಇಡಲಾಗಿದೆಯೆಂದು ಅಥವಾ ಆ ಗೋತ್ರಕ್ಕೆ ಎಲೀಮೆಲೆಕನು ಪೂರ್ವಜನೆಂಬುದಾಗಿ ಅಥವಾ ನಾಯಕನೆಂಬುದಾಗಿ ಈ ವಾಕ್ಯವು ಹೇಳುತ್ತಿಲ್ಲ
|
|||
|
2:4 vys2 וְהִנֵּה 1 **ಆಗ** ಎನ್ನುವ ಪದವು ಮೊಟ್ಟಮೊದಲಬಾರಿ ಬೋವಜನು ರೂತಳನ್ನು ನೋಡುವುದಕ್ಕೆ ಹೊಲಕ್ಕೆ ಬರುವ ಪ್ರಾಮುಖ್ಯವಾದ ಸಂಘಟನೆಯ ಕುರಿತಾಗಿ ನಮಗೆ ಎಚ್ಚರಗೊಳಿಸುತ್ತದೆ. ಕಥೆಯ ಮುಂದಿನ ಭಾಗದಲ್ಲಿ ಎನಾಗುತ್ತದೆಯೆಂದು ಆಸಕ್ತಿಯನ್ನುಂಟು ಮಾಡುವುದಕ್ಕೆ ಬೇರೊಬ್ಬರನ್ನು ಎಚ್ಚರಿಗೊಳಿಸಲು ನಿಮ್ಮ ಭಾಷೆಯಲ್ಲಿಯೂ ಒಂದು ವಿಶೇಷವಾದ ವಿಧಾನವಿರಬಹುದು. (ನೋಡಿರಿ: [[rc://*/ta/man/translate/figs-distinguish]])
|
|||
|
2:4 q1lv בָּ֚א מִבֵּ֣ית לֶ֔חֶם 1 ಬೇತ್ಲೆಹೇಮ್ ಊರಿನ ಹೊಲಗಳು ಎಷ್ಟು ದೂರದಲ್ಲಿದ್ದವೆನ್ನುವುದು ನಮಗೆ ಇಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿಲ್ಲ.
|
|||
|
2:4 r4bl יְבָרֶכְךָ֥ יְהוָֽה 1 **ಯೇಹೋವನು ನಿನಗೆ ಒಳ್ಳೆಯ ಕಾರ್ಯಗಳನ್ನು ಮಾಡಲಿ.** ಇದು ಅತಿ ಸಾಧಾರಣವಾದ ಆಶೀರ್ವಾದ.
|
|||
|
2:5 a5ht לְמִ֖י הַנַּעֲרָ֥ה הַזֹּֽאת 1 ಆ ಸಂಸ್ಕೃತಿಯಲ್ಲಿ ಸ್ತ್ರೀಯರು ತಮ್ಮ ಪುರುಷ ಸಂಬಂಧಿಗಳ ಅಧಿಕಾರದ ಕೆಳಗೆ ಇರುತ್ತಿದ್ದರು. ರೂತಳ ಗಂಡ ಅಥವಾ ತಂದೆ ಯಾರೆಂದು ಬೋವಜನು ಕೇಳುತ್ತಿದ್ದಾನೆ. ರೂತಳು ಗುಲಾಮಳೆಂದು ಬೋವಜನು ಅಂದುಕೊಂಡಿಲ್ಲ.
|
|||
|
2:5 ab16 לְנַעֲר֔וֹ 1 ಈ **ಸೇವಕನು** ಬೋವಜನಿಗೆ ಕೆಲಸ ಮಾಡಿದ್ದ ಮತ್ತು ಬೋವಜನ ಕೆಲಸಗಾರರಿಗೆ ಏನು ಮಾಡಬೇಕೆಂದು ಹೇಳಿದ ಒಬ್ಬ ಯೌವ್ವನಸ್ತನಾಗಿದ್ದನು.
|
|||
|
2:5 sdf9 הַנִּצָּ֖ב עַל 1 **ಯಾರ ಅಧಿಕಾರದಲ್ಲಿದ್ದಾಳೆ** ಅಥವಾ **ಯಾರು ನೋಡಿಕೊಳ್ಳುತ್ತಿದ್ದಾರೆ**
|
|||
|
2:7 ab17 אֲלַקֳטָה־נָּא֙ 1 **ಹಕ್ಕಲಾಯುವುದು** ಎಂದರೆ ಹೊಲದಲ್ಲಿ ಕೆಲಸ ಮಾಡುವವರು ಕೊಯ್ಯುವಾಗ ಕೆಳಗೆ ಬಿಟ್ಟಿರುವ ಅಥವಾ ಕೆಳಗೆ ಬಿದ್ದುಹೋಗಿರುವ ಧಾನ್ಯಗಳನ್ನು ಸಂಗ್ರಹಿಸಿಕೊಳ್ಳುವುದು ಎಂದರ್ಥ. ಇದು ದೇವರು ಮೋಶೆಗೆ ಕೊಟ್ಟಿರುವ ಧರ್ಮಶಾಸ್ತ್ರದ ಒಂದು ಭಾಗವಾಗಿದ್ದಿತ್ತು. ಹೊಲದಲ್ಲಿ ಕೆಲಸ ಮಾಡುವವರು ಬಿಡಲ್ಪಟ್ಟಿರುವ ತೆನೆಗಳನ್ನು ಹಕ್ಕಲಾಯುವುದಕ್ಕೆ ತಿರುಗಿ ಹಿಂದಕ್ಕೆ ಹೋಗಬಾರದು. ಆದರೆ ಬಡವರು ಅಥವಾ ಬೇರೆ ಯಾತ್ರಿಕರು ಮಾತ್ರವೇ ಬಿಡಲ್ಪಟ್ಟಿರುವ ತೆನೆಗಳನ್ನು ಆರಿಸಿಕೊಳ್ಳಬೇಕು. ಯಾಜಕ.19:10 ಮತ್ತು ಧರ್ಮೋ.24:21 ವಚನಗಳನ್ನು ನೋಡಿರಿ.
|
|||
|
2:7 kj7a הַבַּ֖יִת 1 **ಮನೆ** ಅಥವಾ **ಆಶ್ರಯ**. ಹೊಲಕ್ಕೆ ಬಂದ ಕೆಲಸಗಾರರು ಸೂರ್ಯನ ಬಿಸಿಲಿಗೆ ಗುರಿಯಾಗದೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನೆರಳನ್ನು ಒದಗಿಸುವುದಕ್ಕೆ ಹೊಲದಲ್ಲಿ ತಾತ್ಕಾಲಿಕವಾಗಿ ಆಶ್ರಯವನ್ನು ಕೊಡುವ ಒಂದು ತೋಟದ ಮನೆ ಎಂದು ಕರೆಯಬಹುದು.
|
|||
|
2:8 ltk3 הֲל֧וֹא שָׁמַ֣עַתְּ בִּתִּ֗י 1 ಈ ಮಾತು ಒಂದು ಆಜ್ಙೆಯಂತೆ ಬರೆಯಲ್ಪಟ್ಟಿದೆ. ಪರ್ಯಾಯ ಅನುವಾದ : "ನನ್ನ ಮಗಳೇ, ನನ್ನ ಮಾತನ್ನು ಕೇಳು" ಅಥವಾ "ನನ್ನ ಮಗಳೇ, ನಾನು ಹೇಳುತ್ತಿರುವದನ್ನು ಚೆನ್ನಾಗಿ ಕೇಳಿಸಿಕೋ!" (ನೋಡಿರಿ: [[rc://*/ta/man/translate/figs-rquestion]])
|
|||
|
2:8 ke9b בִּתִּ֗י 1 ಇದು ಚಿಕ್ಕವಳನ್ನು ಮಾತನಾಡಿಸುವ ಒಂದು ಪದ್ಧತಿಯಾಗಿದ್ದಿತ್ತು. ರೂತಳು ಬೋವಜನ ಮಗಳಲ್ಲ, ಆದರೆ ಆತನು ಆಕೆಯನ್ನು ಮರ್ಯಾದೆಯಿಂದ, ಗೌರವದಿಂದ ಮಾತನಾಡಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅಂಥಹ ಸಂಭಾಷಣೆಯನ್ನುಂಟು ಮಾಡುವ ಪದವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/figs-idiom]])
|
|||
|
2:9 jq6n עֵינַ֜יִךְ בַּשָּׂדֶ֤ה 1 **ಕಣ್ಣುಗಳು** ಎನ್ನುವ ಈ ಪದವು ನೋಡುವದನ್ನು ತೋರಿಸುವ ಗೌಣೀಲಕ್ಷಣೆಯಾಗಿರುತ್ತದೆ. ಪರ್ಯಾಯ ಅನುವಾದ : "ಆ ಹೊಲವನ್ನೇ ನೋಡು" ಅಥವಾ "ಆ ಹೊಲದ ಮೇಲೆ ಮಾತ್ರವೇ ನಿನ್ನ ಶ್ರದ್ಧೆಯನ್ನು ಇಡು" (ನೋಡಿರಿ: [[rc://*/ta/man/translate/figs-metonymy]])
|
|||
|
2:9 xc6u הֲל֥וֹא צִוִּ֛יתִי אֶת־הַנְּעָרִ֖ים לְבִלְתִּ֣י נָגְעֵ֑ךְ 1 ಬೋವಜ ತನ್ನ ಆತಿಥ್ಯವನ್ನು ಒತ್ತಿ ಹೇಳುವುದಕ್ಕೆ ಈ ಪ್ರಶ್ನೆಯನ್ನು ಬಳಸಿದನು - ರೂತಳಿಗೆ ಸಹಾಯ ಮಾಡುವುದಕ್ಕೆ ಆತನು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಟ್ಟಿದ್ದನು. ಪರ್ಯಾಯ ಅನುವಾದ : "ಯಾವ ಮನುಷ್ಯರು ನಿನಗೆ ಯಾವ ತೊಂದರೆ ಮಾಡದಂಥೆ ಎಲ್ಲರಿಗೂ ನಾನು ಕಠಿಣವಾದ ಆಜ್ಞೆಗಳನ್ನು ಜಾರಿ ಮಾಡಿದ್ದೇನೆ." (ನೋಡಿರಿ: [[rc://*/ta/man/translate/figs-rquestion]])
|
|||
|
2:9 ub62 אֶת־הַנְּעָרִ֖ים 1 **ಯೌವ್ವನ ಪುರುಷ ಕೆಲಸಗಾರರಿಗೆ** ಅಥವಾ **ಸೇವಕರಿಗೆ**. ಹೊಲದಲ್ಲಿ ಕೊಯ್ಲು ಕೆಲಸ ಮಾಡುವ ಯೌವ್ವನ ಪುರುಷರನ್ನು ಸೂಚಿಸುವುದಕ್ಕೆ **ಯೌವ್ವನ ಪುರುಷರು** ಎಂಬುದಾಗಿ ಮೂರುಸಲ ಉಪಯೋಗಿಸಲ್ಪಟ್ಟಿದೆ.
|
|||
|
2:9 v5e4 לְבִלְתִּ֣י נָגְעֵ֑ךְ 1 ಪುರುಷರು ಭೌತಿಕವಾಗಿ ಅಥವಾ ಲೈಂಗಿಕವಾಗಿ ರೂತಳಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲವೆಂದು ಸೌಮ್ಯವಾಗಿ ಹೇಳುವ ವಿಧಾನವಿದು. ರೂತಳು ಹೊಲದಲ್ಲಿ ಹಕ್ಕಲಾಯುವುದನ್ನು ಈ ಪುರುಷರು (ಅಥವಾ, ಸೇವಕರು) ನಿಲ್ಲಿಸುವುದಿಲ್ಲವೆಂದು ಹೇಳುತ್ತಿರಬಹುದು. (ನೋಡಿರಿ: [[rc://*/ta/man/translate/figs-euphemism]])
|
|||
|
2:9 ahr7 מֵאֲשֶׁ֥ר יִשְׁאֲב֖וּן הַנְּעָרִֽים 1 ನೀರನ್ನು ತಂದುಕೊಡುವುದು ಎಂದರೆ ಬಾವಿಯೊಳಗಿಂದ ನೀರನ್ನು ಎಳೆದು ತೆಗೆದು ಕೊಡುವುದು ಅಥವಾ ಸಂಗ್ರಹಿಸಿಟ್ಟಿರುವ ನೀರನ್ನು ಹೊರ ತೆಗೆದು ಕೊಡುವುದು ಎಂದರ್ಥ.
|
|||
|
2:10 az6y וַתִּפֹּל֙ עַל־פָּנֶ֔יהָ וַתִּשְׁתַּ֖חוּ אָ֑רְצָה 1 ಈ ಎಲ್ಲಾ ಕ್ರಿಯೆಗಳು ಮಾನ್ಯದಿಂದ ಮತ್ತು ಪೂಜ್ಯ ಭಾವನೆಯಿಂದ ತುಂಬಿದವುಗಳಾಗಿವೆ. ಬೋವಜನು ರೂತಳಿಗೆ ಮಾಡಿರುವ ಕಾರ್ಯಗಳಿಗಾಗಿ ಕೃತಜ್ಞತೆಯೊಳಗಿಂದ ರೂತಳು ಬೋವಜನಿಗೆ ತೋರಿಸಿದ ಗೌರವವಾಗಿತ್ತು. (ನೋಡಿರಿ: [[rc://*/ta/man/translate/translate-symaction]])
|
|||
|
2:10 ab12 וַתִּפֹּל֙ עַל־פָּנֶ֔יהָ וַתִּשְׁתַּ֖חוּ אָ֑רְצָה 1 ಈ ಪದಗಳೇನೆಂದರೆ ಒಂದೇ ಕ್ರಿಯೆಯಲ್ಲಿ ಎರಡು ಅರ್ಥಗಳನ್ನು ಕೊಡುತ್ತವೆ. ನಿಮ್ಮ ಭಾಷೆಯಲ್ಲಿ ಇದೇನಾದರೂ ಗೊಂದಲಪಡಿಸುವುದಾದರೆ ಯುಎಸ್‌ಟಿಯಲ್ಲಿ ಇದ್ದ ಹಾಗೆಯೇ ಒಂದೇ ವಿವರಣೆಯನ್ನು ಬಳಸಿರಿ. (ನೋಡಿರಿ: [[rc://*/ta/man/translate/figs-doublet]])
|
|||
|
2:10 ab13 וַתִּפֹּל֙ עַל־פָּנֶ֔יהָ 1 ತನ್ನ ಮುಖವನ್ನು ನೆಲಕ್ಕೆ ಬಾಗಿಸಿ, ನಮಸ್ಕರಿಸಿದಳು ಎನ್ನುವದು ಒಂದು ಸಂಪ್ರದಾಯಕವಾದ ಪದ್ಧತಿ. (ನೋಡಿರಿ: [[rc://*/ta/man/translate/figs-idiom]])
|
|||
|
2:10 ug7p מַדּוּעַ֩ מָצָ֨אתִי חֵ֤ן בְּעֵינֶ֨יךָ֙ לְהַכִּירֵ֔נִי וְאָּנֹכִ֖י נָכְרִיָּֽה 1 ಇಲ್ಲಿ ರೂತಳು ನಿಜವಾದ ಪ್ರಶ್ನೆಯನ್ನು ಕೇಳುತ್ತಿದ್ದಾಳೆ
|
|||
|
2:10 abc7 מָצָ֨אתִי חֵ֤ן בְּעֵינֶ֨יךָ֙ 1 **ನಿಮ್ಮ ದೃಷ್ಟಿಯಲ್ಲಿ ದಯೆಯನ್ನು ಹೊಂದಿಕೊಂಡಿದ್ದೇನೆ** ಎನ್ನುವ ಮಾತಿಗೆ "ಇನ್ನೊಬ್ಬರ ಅನುಮೋದನೆ ಹೊಂದಿದ್ದೀರೀ" ಎಂದು ಅರ್ಥ ಕೊಡುವ ಒಂದು ನುಡಿಗಟ್ಟಾಗಿರುತ್ತದೆ. ಕರುಣೆಯನೆಯನ್ನು ಅಥವಾ ಅನುಮೋದನೆಯನ್ನು ಸಂಪಾದಿಸಿಕೊಂಡ ಹಾಗೆಯೇ ಇತರರ ದಯೆಯನ್ನು ಸಂಪಾದಿಸಿಕೊಳ್ಳುವುದರ ಕುರಿತಾಗಿ ರೂತಳು ಮಾತನಾಡುತ್ತಿದ್ದಾಳೆ. ಪರ್ಯಾಯ ಅನುವಾದ : "ನೀವು ನನ್ನ ಮೇಲೆ ದಯೆ ತೋರಿಸಿದ್ದೀರಿ." (ನೋಡಿರಿ: [[rc://*/ta/man/translate/figs-idiom]])
|
|||
|
2:10 abc8 בְּעֵינֶ֨יךָ֙ 1 **ಕಣ್ಣುಗಳು** ಎನ್ನುವ ಗೌಣೀಲಕ್ಷಣೆಯು ನೋಡುವುದನ್ನು ಸೂಚಿಸುತ್ತದೆ. ನೋಡುವುದೆನ್ನುವುದು ಜ್ಞಾನ, ಗಮನಿಸುವುದು, ಶ್ರದ್ದೆ, ಅಥವಾ ತೀರ್ಪು ಎನ್ನುವ ಅರ್ಥಗಳ ಕುರಿತಾಗಿ ರೂಪಕಲಂಕಾರವಾಗಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : "ನಿಮ್ಮ ತೀರ್ಪಿನಲ್ಲಿ" ಅಥವಾ "ನೀವು ನಿರ್ಧಾರಿಸಿದ ಪ್ರಕಾರ" (ನೋಡಿರಿ: [[rc://*/ta/man/translate/figs-metaphor]])
|
|||
|
2:10 x6f8 נָכְרִיָּֽה 1 **ಪರದೇಶಿ** ಎಂದರೆ ಬೇರೊಂದು ದೇಶದಿಂದ ಬಂದ ವ್ಯಕ್ತಿ ಎಂದರ್ಥ. ರೂತಳು ರಹಸ್ಯವಾಗಿ ಇಸ್ರಾಯೇಲ್ ದೇವರಿಗೆ ತನ್ನ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದರೂ, ಆಕೆ ಮೋವಾಬ್ ದೇಶದಿಂದ ಬಂದವಳೆಂದು, ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟವಳಲ್ಲವೆಂದು ಪ್ರತಿಯೊಬ್ಬರಿಗೆ ಗೊತ್ತಿತ್ತು. ಇಸ್ರಾಯೇಲ್ಯರು ಪರದೇಶಿಯರಿಗೆ ದಯೆ ತೋರಿಸಬೇಕೆಂದು ದೇವರು ಅವರಿಂದ ಬಯಸಿದ್ದರೂ, ಅವರು ತೋರಿಸುತ್ತಿರಲಿಲ್ಲ. ಬೋವಜನು ದೇವರನ್ನು ಮೆಚ್ಚಿಸುವುದಕ್ಕೆ ಜೀವಿಸಿದ್ದಾನೆಂದು ಇದು ತೋರಿಸುತ್ತಿದೆ.
|
|||
|
2:11 ab14 וַיַּ֤עַן בֹּ֨עַז֙ וַיֹּ֣אמֶר 1 **ಉತ್ತರಿಸಿ** ಮತ್ತು **ಹೇಳಿದ್ದನು** ಎನ್ನುವ ಎರಡು ಪದಗಳು ಒಂದೇ ಕ್ರಿಯಾಪದವನ್ನು ವಿವರಿಸುತ್ತವೆ. ಇದು ನಿಮ್ಮ ಭಾಷೆಯಲ್ಲಿ ಗೊಂದಲಪಡಿಸುವುದಾದರೇ, ಯುಎಸ್‌ಟಿಯಲ್ಲಿ ಇದ್ದಂಥೆ ಈ ವಿಷಯಕ್ಕಾಗಿ ಒಂದೇ ಕ್ರಿಯಾಪದವನ್ನು ನೀವು ಉಪಯೋಗಿಸಬಹುದು. (ನೋಡಿರಿ: [[rc://*/ta/man/translate/figs-doublet]])
|
|||
|
2:11 app6 הֻגֵּ֨ד הֻגַּ֜ד לִ֗י 1 ಇದು ಕ್ರಿಯಾತ್ಮಕ ರೂಪದಲ್ಲಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : **ಈ ಸುದ್ದಿಯನ್ನು ಜನರು ನನಗೆ ಹೇಳಿದ್ದಾರೆ** ಅಥವಾ **ಜನರು ನನಗೆ ತಿಳಿಸಿದ್ದಾರೆ** (ನೋಡಿರಿ: [[rc://*/ta/man/translate/figs-activepassive]])
|
|||
|
2:11 abc9 הֻגֵּ֨ד הֻגַּ֜ד 1 ಹೇಳಲ್ಪಟ್ಟಿರುವ ಮಾತಿನ ಉದ್ದೇಶವನ್ನು ಅಥವಾ ನಿಶ್ಚಿತತೆಯನ್ನು ಒತ್ತಿ ಹೇಳುವುದಕ್ಕೆ ಮೂಲ ಹಿಬ್ರೂ ಭಾಷೆಯಲ್ಲಿ **ವರದಿಯನ್ನು** ತಿಳಿಸುವುದಕ್ಕೆ ಪದದ ಎರಡು ರೂಪಗಳು ಇಲ್ಲಿ ಪುನರಾವರ್ತಿಸಿ ಹೇಳಲಾಗಿದೆ. (ನೋಡಿರಿ: [[rc://*/ta/man/translate/figs-idiom]])
|
|||
|
2:11 r44n וַתֵּ֣לְכִ֔י אֶל־עַ֕ם 1 ರೂತಳು ತನಗೆ ಗೊತ್ತಿಲ್ಲದ ದೇಶಕ್ಕೆ, ಗೊತ್ತಿಲ್ಲದ ಜನರ ಮಧ್ಯೆದೊಳಗೆ, ಗ್ರಾಮದೊಳಗೆ ಬಂದು, ನೊವೊಮಿ ಜೊತೆಯಲ್ಲಿರುವುದಕ್ಕೆ ಬಂದಿರುವ ರೂತಳನ್ನು ಬೋವಜನು ಸೂಚಿಸುತ್ತಿದ್ದಾನೆ. (ನೋಡಿರಿ: [[rc://*/ta/man/translate/figs-metonymy]])
|
|||
|
2:11 ab60 תְּמ֥וֹל שִׁלְשֽׁוֹם׃ 1 ಇದೊಂದು ನುಡಿಗಟ್ಟು, ಈ ಮಾತಿಗೆ "ಇತ್ತೀಚಿಗೆ" ಅಥವಾ "ಮುಂಚಿತವಾಗಿ" ಎಂದರ್ಥ.
|
|||
|
2:12 x5ct יְשַׁלֵּ֥ם יְהוָ֖ה פָּעֳלֵ֑ךְ 1 **ಯೆಹೋವನು ನಿನಗೆ ಉಪಕಾರ ಮಾಡುವನು** ಅಥವಾ **ಯೆಹೋವನು ನಿನಗೆ ಹಿಂದುರಿಗಿ ಉಪಕಾರವನ್ನು ಮಾಡುವನು**
|
|||
|
2:12 s2vm פָּעֳלֵ֑ךְ 1 ಬೋವಜನು 11ನೇ ವಚನದಲ್ಲಿ ವಿವರಿಸಿದ ಪ್ರತಿಯೊಂದನ್ನು ಇದು ಸೂಚಿಸುತ್ತದೆ. ಪರ್ಯಾಯ ಅನುವಾದ : "ನಿನ್ನ ಒಳ್ಳೆಯ ಕ್ರಿಯೆಗಳು."
|
|||
|
2:12 gnn5 וּתְהִ֨י מַשְׂכֻּרְתֵּ֜ךְ שְׁלֵמָ֗ה מֵעִ֤ם יְהוָה֙ 1 ಇದು ಮುಂಚಿತವಾಗಿ ಹೇಳಲ್ಪಟ್ಟ ವಚನಕ್ಕೆ ಸಮಾಂತರವಾಗಿರುವ ಕಾವ್ಯಭಾಗಕ್ಕೆ ಸಂಬಂಧಪಟ್ಟ ಅಭಿವ್ಯಕ್ತಿಯಾಗಿರುತ್ತದೆ. ಪರ್ಯಾಯ ಅನುವಾದ : "ನಿನಗೆ ಬರಬೇಕಾದ ಎಲ್ಲಾ ಆಶೀರ್ವಾದಗಳನ್ನು ಯೆಹೋವ ಸಂಪೂರ್ಣವಾಗಿ ಅನುಗ್ರಹಿಸುತ್ತಾನೆ" (ನೋಡಿರಿ: [[rc://*/ta/man/translate/figs-parallelism]], [Doublet](../figs-doublet/01.md))
|
|||
|
2:12 eh86 אֲשֶׁר־בָּ֖את לַחֲס֥וֹת תַּֽחַת־כְּנָפָֽיו 1 ಇದು ದೇವರಲ್ಲಿ ನಂಬಿಕೆ ಇಟ್ಟವರನ್ನು ದೇವರೇ ಸಂರಕ್ಷಿಸುತ್ತಾನೆನ್ನುವ ವಿಷಯವನ್ನು ವಿವರಿಸುವದಕ್ಕೆ ತಾಯಿ ಪಕ್ಷಿಯು ತನ್ನ ಮರಿಗಳನ್ನು ಸಂರಕ್ಷಿಸುವುದಕ್ಕೆ ತನ್ನ ರೆಕ್ಕೆಗಳೊಳಗೆ ತೆಗೆದುಕೊಳ್ಳುವ ಚಿತ್ರಣವನ್ನು ಉಪಯೋಗಿಸುವ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ನೀನು ಯಾವಾತನ ರೆಕ್ಕೆಗಳ ಮರೆಯಲ್ಲಿ ಆಶ್ರಯಿಸಿಕೊಂಡಿದ್ದೀಯೋ" (ನೋಡಿರಿ: [[rc://*/ta/man/translate/figs-metaphor]])
|
|||
|
2:13 abc6 אֶמְצָא־חֵ֨ן 1 **ದಯೆಯನ್ನು ಕಂಡುಕೊಂಡಿದ್ದೀನಿ** ಎನ್ನುವ ನುಡಿಗಟ್ಟಿಗೆ ಆತನು ಆಕೆಯಲ್ಲಿ ಸಂತೋಷಪಟ್ಟಿದ್ದಾನೆ ಅಥವಾ ಆಕೆಯನ್ನು ಅನುಮೋದಿಸಿದ್ದಾನೆ ಎಂದರ್ಥ. ಪರ್ಯಾಯ ಅನುವಾ : "ನೀವು ನನ್ನನ್ನು ಅನೂಮೋದನೆ ಮಾಡುವುದನ್ನು ಮುಂದೆವರಿಸಬಹುದು" ಅಥವಾ "ನನ್ನನ್ನು ಮೆಚ್ಚಿಕೊಳ್ಳುವುದನ್ನು ನೀವು ಮುಂದೆವರಿಸಬಹುದು" (ನೋಡಿರಿ: [[rc://*/ta/man/translate/figs-idiom]])
|
|||
|
2:13 v2q1 בְּעֵינֶ֤יךָ 1 **ಕಣ್ಣುಗಳು** ಎನ್ನುವ ಗೌಣೀಲಕ್ಷಣೆಯು ನೋಡುವುದನ್ನು ಸೂಚಿಸುತ್ತದೆ, ಮತ್ತು ನೋಡುವುದೆನ್ನುವುದು ಜ್ಞಾನ, ಗಮನಿಸುವುದು, ಗಮನ ಹರಿಸುವುದು, ಅಥವಾ ತೀರ್ಪು ಎನ್ನುವದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ : "ನನ್ನನ್ನು ಸ್ವೀಕಾರ ಮಾಡಿದ್ದೀರಿ" (ನೋಡಿರಿ: [[rc://*/ta/man/translate/figs-metaphor]])
|
|||
|
2:13 abc4 אֲדֹנִי֙ 1 ಬೋವಜನು ರೂತಳ ಯಜಮಾನನಲ್ಲ, ಆದರೆ ಆಕೆ ಹಕ್ಕಲಾಯುತ್ತಿರುವ ಹೊಲಕ್ಕೆ ಯಜಮಾನನಾಗಿದ್ದನು. ಆತನು ಕೂಡ ಯೆಹೂದ್ಯನಾಗಿದ್ದನು ಮತ್ತು ಪಟ್ಟಣದಲ್ಲಿ ತುಂಬಾ ಪ್ರಮುಖ ವ್ಯಕ್ತಿಯಾಗಿದ್ದನು. ಆದ್ದರಿಂದ, ಆಕೆ ಆತನನ್ನು **ಸ್ವಾಮೀ** ಎಂದು ಕರೆಯುವುದರ ಮೂಲಕ ರೂತಳು ಬೋವಜನನ್ನು ಗೌರವಿಸುತ್ತಿದ್ದಾಳೆ, ಮತ್ತು ಆತನ ದಾಸಿ ಎಂದು ತನ್ನನ್ನು ತಾನೇ ಹೇಳಿಕೊಳ್ಳುತ್ತಿದ್ದಾಳೆ. ಪರ್ಯಾಯ ಅನುವಾದ : "ಮಾನ್ಯರೇ" ಅಥವಾ "ಒಡೆಯ"
|
|||
|
2:13 zc5n וְאָנֹכִי֙ לֹ֣א אֶֽהְיֶ֔ה כְּאַחַ֖ת שִׁפְחֹתֶֽיךָ 1 ರೂತಳು ಬೋವಜನ ಕೆಲಸಗಾರಳಾಗಿಲ್ಲದಿದ್ದರೂ ಬೋವಜನು ತನ್ನ ಕೆಲಸಗಾರರಲ್ಲಿ ರೂತಳು ಕೂಡ ಒಬ್ಬಳಾಗಿದ್ದಂತೆ ನೋಡಿಕೊಂಡಿರುವದರಿಂದ ಬೋವಜನು ಬೆರಗಾಗುವ ರೀತಿಯಲ್ಲಿ ಆಕೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿಕೊಂಡಿದ್ದಾಳೆ.
|
|||
|
2:14 yht2 לְעֵ֣ת הָאֹ֗כֶל 1 ಇದು ಮಧ್ಯಾಹ್ನ ವೇಳೆಯ ಊಟವನ್ನು ಸೂಚಿಸುತ್ತದೆ.
|
|||
|
2:14 p256 וְטָבַ֥לְתְּ פִּתֵּ֖ךְ בַּחֹ֑מֶץ 1 ಇದು ಹೊಲದಲ್ಲಿ ಮಾಡುವ ಅತಿ ಸಾಮಾನ್ಯ ಊಟವಾಗಿದ್ದಿತ್ತು. ಕೆಲಸ ಮಾಡುವುದಕ್ಕೆ ಬಂದಿರುವ ಜನರೆಲ್ಲರೂ ನೆಲದ ಮೇಲೆ ವೃತ್ತಾಕಾರದಲ್ಲಿ ಕುಳಿತುಕೊಂಡು, ಅವರ ಮಧ್ಯೆದಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ಹುಳಿರಸವನ್ನು ಮತ್ತು ರೊಟ್ಟಿಯ ತುಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಅವರು ಒಂದು ತುಂಡು ರೊಟ್ಟಿಯನ್ನು ತಿನ್ನುವುದಕ್ಕೆ ಮುಂಚಿತವಾಗಿ, ರುಚಿಗೋಸ್ಕರ ದ್ರಾಕ್ಷಾರಸದಲ್ಲಿ ಅದ್ದಿಕೊಂಡು ತಿನ್ನುತ್ತಿದ್ದರು.
|
|||
|
2:14 xr6s בַּחֹ֑מֶץ 1 **ಹುಳಿರಸ** ಎನ್ನುವದು ಅವರು ತಮ್ಮ ರೊಟ್ಟಿಯ ತುಂಡುಗಳನ್ನು ಅದ್ದಿಕೊಂಡು ತಿನ್ನುವುದಕ್ಕೆ ಬಜ್ಜಿಯಂತೆ ಇಟ್ಟುಕೊಳ್ಳುವುದಾಗಿದ್ದಿತ್ತು. ಇಸ್ರಾಯೇಲ್ಯರು ದ್ರಾಕ್ಷಾರಸವನ್ನು ಹುದುಗಿಸಿದ ದ್ರಾಕ್ಷಾರಸದಿಂದ ಹುಳಿರಸವನ್ನು ಮಾಡುತ್ತಿದ್ದರು. ಹುಳಿರಸ ತಯಾರಾಗುವ ಸಮಯದಲ್ಲಿ, ಆ ರಸವು ತುಂಬಾ ಹುಳಿಯಾಗಿ, ಆಮ್ಲೀಯವಾಗಿ ಮಾರ್ಪಡುತ್ತದೆ.
|
|||
|
2:15 v6wr וַתָּ֖קָם לְלַקֵּ֑ט וַיְצַו֩ בֹּ֨עַז אֶת־נְעָרָ֜יו 1 ಬೋವಜನು ತನ್ನ ಆಳುಗಳ ಜೊತೆಯಲ್ಲಿ ಮಾತನಾಡಿದಾಗ, ರೂತಳು ಬೋವಜನ ಆಜ್ಞೇಗಳನ್ನು ಕೇಳಲಾರದಷ್ಟು ದೂರದಲ್ಲಿದ್ದಳೆಂದು ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ : "ರೂತಳು ಊಟ ಮಾಡಿಕೊಂಡು ಹಕ್ಕಲಾಯುವುದಕ್ಕೆ ಎದ್ದು ಹೋದ ಮೇಲೆ, ಬೋವಜನು ತನ್ನ ಯೌವ್ವನ ಸೇವಕರಿಗೆ ರಹಸ್ಯವಾಗಿ ಹೇಳಿದನು" (ನೋಡಿರಿ: [[rc://*/ta/man/translate/figs-explicit]])
|
|||
|
2:15 rct9 וַתָּ֖קָם 1 **ಆಕೆ ಎದ್ದು ನಿಂತ ಮೇಲೆ**
|
|||
|
2:15 a5z9 גַּ֣ם בֵּ֧ין הָֽעֳמָרִ֛ים 1 ಸೇವಕರು ಸಹಜವಾಗಿ ಕೆಲಸ ಮಾಡುವುದಕ್ಕೆ ಅತೀತವಾಗಿ ಮತ್ತು ಹೆಚ್ಚಾಗಿ ಮಾಡುತ್ತಿದ್ದಾರೆಂದು ಸೇವಕರಿಗೆ ಗೊತ್ತಾಗುವಂತೆ **ಸಿಡುಗಳ** **ಮಧ್ಯೆದಲ್ಲಿಯೂ** ಎನ್ನುವ ಮಾತು ಉಪಯೋಗಿಸಲ್ಪಟ್ಟಿರುತ್ತದೆ. ಹಕ್ಕಲಾಯುವುದಕ್ಕೆ ಬಂದಿರುವ ಜನರು ಹೊಲಕ್ಕೆ ಬಂದು ಕೊಯ್ದಿರುವ ಬೆಳೆಯನ್ನು ಕದ್ದುಕೊಂಡು ಹೋಗುತ್ತಾರೆನ್ನುವ ಭಯದಿಂದ ಹಕ್ಕಲಾಯುವುದಕ್ಕೆ ಬಂದಿರುವ ಜನರನ್ನು ಕೊಯ್ಲಿಗೆ ಬಂದಿರುವ ಜನರ ಬಳಿ ಹೋಗದಂತೆ ನಿಷೇಧ ಮಾಡಿದ್ದರು. ಆದರೆ ಸಿಡುಗಳ ಮಧ್ಯೆದಲ್ಲಿಯೂ ರೂತಳು ಹಕ್ಕಲಾಯುದುಕೊಳ್ಳಲು ಆಕೆಗೆ ಅವಕಾಶ ಕೊಡಿರಿ ಎಂದು ಬೋವಜನು ತನ್ನ ಸೇವಕರಿಗೆ ಆಜ್ಞಾಪಿಸಿದನು.
|
|||
|
2:16 u6hv שֹׁל־תָּשֹׁ֥לּוּ לָ֖הּ מִן־הַצְּבָתִ֑ים 1 **ಆಕೆ ಹಕ್ಕಲಾಯುವುದಕ್ಕೆ ಕಟ್ಟುಗಳಿಂದ ತೆನೆಗಳನ್ನು ಕಿತ್ತು ಕೆಳಗೆ ಹಾಕಿರಿ** ಅಥವಾ **ಆಕೆ ಹಕ್ಕಲಾಯುವುದಕ್ಕೆ ಸಿಗುಡುಗಳ ಮಧ್ಯೆದೊಳಗೆ ಅನುಮತಿಸಿರಿ.** ಇಲ್ಲಿರುವ ಸಾಧಾರಣ ಪದ್ಧತಿಯನ್ನು ಮೀರಿ ಬೋವಜನು ಒಂದು ಮೆಟ್ಟಿಲನ್ನು ಏರಿ, ರೂತಳು ಹಕ್ಕಲಾಯುವುದಕ್ಕೆ ಈಗಾಗಲೇ ಕೊಯ್ದಿರುವ ತೆನೆಗಳನ್ನು ಹೊಲದಲ್ಲಿ ಬಿಟ್ಟು ಬಿಡಿರಿ ಎಂದು ತನ್ನ ಸೇವಕರಿಗೆ ಹೇಳಿದನು.
|
|||
|
2:16 nn9l וְלֹ֥א תִגְעֲרוּ־בָֽהּ 1 **ಆಕೆಯನ್ನು ಅವಮಾನಿಸಬೇಡಿರಿ** ಅಥವಾ **ಆಕೆಯನ್ನು ಬಯ್ಯಬೇಡಿರಿ**
|
|||
|
2:17 h3ap וַתַּחְבֹּט֙ 1 ಆಕೆ ಹಕ್ಕಲಾದವುಗಳನ್ನು ತೆಗೆದುಕೊಂಡು ಹೊಟ್ಟು, ತೊಟ್ಟುಗಳಿಂದ ಧಾನ್ಯಗಳನ್ನು ಬೇರ್ಪಡಿಸಿದಳು.
|
|||
|
2:17 mq6b כְּאֵיפָ֥ה שְׂעֹרִֽים 1 ಒಂದು **ಎಫಾ** ಎಂದರೆ ಸುಮಾರು 22 ಕೇಜಿಗಳಿಗೆ ಸಮಾನವಾದ ಅಳತೆಯಾಗಿದ್ದಿತ್ತು. ಪರ್ಯಾಯ ಅನುವಾದ : "22 ಕೇಜಿ ಜವಗೋಧಿ." ನಿಮ್ಮ ಭಾಷೆಯಲ್ಲಿ ಧಾನ್ಯಗಳಿಗಾಗಿ ಬಳಸುವ ಅಳತೆಯನ್ನು ಉಪಯೋಗಿಸಿಕೊಳ್ಳಿರಿ. (ನೋಡಿರಿ: [[rc://*/ta/man/translate/translate-bvolume]])
|
|||
|
2:18 etn8 וַתִּשָּׂא֙ וַתָּב֣וֹא הָעִ֔יר 1 ರೂತಳು ಧಾನ್ಯಗಳನ್ನು (ಅಥವಾ ಕಾಳುಗಳನ್ನು) ಮನೆಗೆ ತೆಗೆದುಕೊಂಡು ಹೋದಳು ಎನ್ನುವ ಅರ್ಥವನ್ನು ತಿಳಿಸುತ್ತಿದೆ. (ನೋಡಿರಿ: [[rc://*/ta/man/translate/figs-explicit]])
|
|||
|
2:18 r6sz וַתֵּ֥רֶא חֲמוֹתָ֖הּ 1 **ಆದನಂತರ ನೊವೊಮಿ ತೋರಿಸಿದ್ದಳು**
|
|||
|
2:19 bg28 אֵיפֹ֨ה לִקַּ֤טְתְּ הַיּוֹם֙ וְאָ֣נָה עָשִׂ֔ית 1 ಆ ದಿನದಂದು ರೂತಳಿಗೆ ನಡೆದಿರುವದನ್ನು ತಿಳುದುಕೊಳ್ಳುವ ಕುತೂಹಲವು ನೊವೊಮಿ ಎಷ್ಟರ ಮಟ್ಟಿಗೆ ಇತ್ತೆನ್ನುವದನ್ನು ತೋರಿಸುವುದಕ್ಕೆ ನೊವೊಮಿಯು ಒಂದೇ ವಿಷಯವನ್ನು ಎರಡು ರೀತಿಯಲ್ಲಿ ಕೇಳಿದಳು. ನಿಮ್ಮ ಭಾಷೆಯಲ್ಲಿ ಬೆರಗಾಗುವುದನ್ನು ಮತ್ತು ಆಸಕ್ತಿಯನ್ನು ತೋರಿಸುವ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/figs-parallelism]])
|
|||
|
2:19 ab07 מַכִּירֵ֖ךְ 1 ಇಲ್ಲಿ **ಕಟಾಕ್ಷಿಸಿದವನನ್ನು** ಎನ್ನುವ ಗೌಣೀಲಕ್ಷಣೆಯು ರೂತಳನ್ನು ನೋಡುವುದಕ್ಕಾಗಿಯೇ ಹೇಳಲ್ಪಟ್ಟಿಲ್ಲ, ಆದರೆ ಆಕೆಗಾಗಿ ಸಹಾಯ ಮಾಡುವುದರ ಕುರಿತಾಗಿಯೂ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : "ನಿನಗೆ ಸಹಾಯ ಮಾಡಿದವರು" (ನೋಡಿರಿ: [[rc://*/ta/man/translate/figs-metonymy]])
|
|||
|
2:20 p8km בָּר֥וּךְ הוּא֙ לַיהוָ֔ה 1 ತನಗೆ ಮತ್ತು ರೂತಳಿಗೆ ಬೋವಜನು ತೋರಿಸಿದ ದಯೆಗಾಗಿ ಬೋವಜನನ್ನು ದೇವರು ಆಶೀರ್ವದಿಸಲಿ ಎಂಬುದಾಗಿ ನೊವೊಮಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
|
|||
|
2:20 ab20 אֲשֶׁר֙ לֹא־עָזַ֣ב חַסְדּ֔וֹ 1 ಇದನ್ನು ಸಕಾರಾತ್ಮಕ ಅರ್ಥದಲ್ಲಿಯೂ ಹೇಳಬಹುದು. **ನಿರಂತರವಾಗಿ ದಯೆ ತೋರಿಸುತ್ತಿರುವವನು.** (ನೋಡಿರಿ: [[rc://*/ta/man/translate/figs-doublenegatives]])
|
|||
|
2:20 ur7z אֲשֶׁר֙ לֹא־עָזַ֣ב 1 **ಇವನು** ಎನ್ನುವ ಪದವು ಬೋವಜನ ಮೂಲಕ ಸತ್ತವರಿಗೂ ಬದುಕಿದ್ದವರಿಗೂ ಬಿಡದೆ ದಯೆ ತೋರಿಸುತ್ತಿರುವ ಯೆಹೋವನನ್ನು ಸೂಚಿಸುತ್ತಿರಬಹುದು. ಸ್ವಲ್ಪ ಮಾತ್ರವೇ ಬೋವಜನನ್ನು ತೋರಿಸುತ್ತಿರುವಂತೆ ಕಾಣಿಸಿಕೊಳ್ಳುತ್ತಿದೆ.
|
|||
|
2:20 ljz3 אֶת־הַחַיִּ֖ים 1 ನೊವೊಮಿ ಮತ್ತು ರೂತಳು ಮಾತ್ರ **ಉಳುಕೊಂಡಿದ್ದರು**. ನಾಮಮಾತ್ರ ವಿಶೇಷಣವಾಗಿರುವ **ಉಳುಕೊಂಡಿದ್ದರು** ಎನ್ನುವ ಮಾತನ್ನು ತೆಗೆದು ಹಾಕುವುದಕ್ಕೆ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದಾಗಿತ್ತು. ಪರ್ಯಾಯ ಅನುವಾದ : "ಇನ್ನೂ ಜೀವಂತವಾಗಿದ್ದ ಜನರಿಗೆ" (ನೋಡಿರಿ: [[rc://*/ta/man/translate/figs-nominaladj]])
|
|||
|
2:20 wjr4 וְאֶת־הַמֵּתִ֑ים 1 ನೊವೊಮಿಯ ಗಂಡನು ಮತ್ತು ತನ್ನ ಇಬ್ಬರು ಗಂಡು ಮಕ್ಕಳು **ಸತ್ತುಹೋಗಿದ್ದರು**. **ಸತ್ತು ಹೋಗಿದ್ದರು** ಎನ್ನುವ ನಾಮಮಾತ್ರ ವಿಶೇಷಣವನ್ನು ತೆಗೆದು ಹಾಕುವದಕ್ಕೆ ಈ ಮಾತನ್ನು ಇನ್ನೊಂದು ರೀತಿಯಾಗಿ ಹೇಳಬಹುದು. ಪರ್ಯಾಯ ಅನುವಾದ : "ಈಗಾಗಲೇ ತೀರಿಕೊಂಡಿರುವವರು" (ನೋಡಿರಿ: [[rc://*/ta/man/translate/figs-nominaladj]])
|
|||
|
2:20 cyy2 קָר֥וֹב לָ֨נוּ֙ הָאִ֔ישׁ מִֽגֹּאֲלֵ֖נוּ הֽוּא 1 ಎರಡನೆಯ ಹೇಳಲ್ಪಟ್ಟಿರುವ ಮಾತು ಮೊದಲಬಾರಿ ಹೇಳಿದ ಮಾತನ್ನು ಪುನಾರವರ್ತಿಸಿ, ವಿವರಿಸಿ ಹೇಳುತ್ತಿದೆ. ಈ ರೀತಿ ಹೇಳುವುದು ಇಬ್ರೀ ಭಾಷೆಯ ಶೈಲಿಯಾಗಿರುತ್ತದೆ. (ನೋಡಿರಿ: [[rc://*/ta/man/translate/figs-parallelism]])
|
|||
|
2:20 zu5f מִֽגֹּאֲלֵ֖נוּ 1 ಮೈದುನ ಧರ್ಮವನ್ನು ನೆರವೇರಿಸುವವನು (ಸಮೀಪ ಬಂಧು) ಎನ್ನುವ ಮಾತು ಕುಟುಂಬದಲ್ಲಿ ವಿಧವೆಯರನ್ನು ನೋಡಿಕೊಳ್ಳುವ ಬಾಧ್ಯತೆಯನ್ನು ಹೊಂದಿರುವ ಸಮೀಪವಾದ ಪುರುಷ ಬಂಧು ಮಿತ್ರರನ್ನು ಸೂಚಿಸುತ್ತಿದೆ. ಯಾರಾದರೊಬ್ಬರ ಅಣ್ಣನನು ಮಕ್ಕಳಿಲ್ಲದೇ ಸತ್ತು ಹೋಗಿದ್ದರೆ, ಅಣ್ಣನ ಹೆಂಡತಿ, ಅಂದರೆ ವಿಧವೆಯಳನ್ನು ಮದುವೆ ಮಾಡಿಕೊಳ್ಳುವ ಬಾಧ್ಯತೆಯನ್ನು ಪಡೆದುಕೊಂಡಿರುತ್ತಾನೆ. ಆಕೆ ಮಕ್ಕಳನ್ನು ಹಡೆಯುವ ವಯಸ್ಸು ಇದ್ದರೂ, ಆಕೆಯನ್ನು ಮದುವೆಯಾಗಬಹುದು. ತಮ್ಮನಿಗಾಗಿ ಮಕ್ಕಳನ್ನು ಹಡೆಯಬಹುದು. ಬಡತನದಿಂದ ತನ್ನ ಬಂಧುಗಳು ಕಳೆದುಕೊಂಡಿರುವ ಆಸ್ತಿಗಳನ್ನು ತಿರುಗಿ ಪಡೆದುಕೊಳ್ಳಬಹುದು ಮತ್ತು ಗುಲಾಮ ಗಿರಿಗೆ ತಮ್ಮನ್ನು ತಾವು ಮಾರಿಕೊಂಡಿರುವ ಕುಟುಂಬ ಸದಸ್ಯರನ್ನು ಬಿಡಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಆರಂಭ ಪೀಠಿಕೆಯನ್ನು ನೋಡಿರಿ.
|
|||
|
2:21 k2lz גַּ֣ם ׀ כִּי־אָמַ֣ר אֵלַ֗י 1 **ಆತನು ಇನ್ನೂ ನನಗೆ ಈ ರೀತಿ ಇಲ್ಲಿದ್ದಾನೆ.** ಈ ಮಾತು ಹೊಲದ ಯಜಮಾನನು ರೂತಳಿಗೆ ಹೇಳುವ ಮಾತಿಗೆ ಅತೀತವಾಗಿ ಇದೆಯೆಂದು ಸೂಚಿಸುತ್ತಿದೆ.
|
|||
|
2:21 g585 עִם־הַנְּעָרִ֤ים אֲשֶׁר־לִי֙ תִּדְבָּקִ֔ין 1 ಬೋವಜನ ಸೇವಕರು ರೂತಳಿಗೆ ತೊಂದರೆ ಕೊಡುವುದಿಲ್ಲವೆಂದು ಆತನು ರೂತಳಿಗೆ ಹೇಳಿದ ಮಾತಿನಲ್ಲಿ ನಿಶ್ಚಯತೆಯನ್ನು ವ್ಯಕ್ತಪಡಿಸಿದ್ದಾನೆ.
|
|||
|
2:22 f2tw תֵֽצְאִי֙ עִם 1 **ಹೆಣ್ಣಾಳುಗಳ ಸಂಗಡ ಹೊರಟು ಹೋಗು**
|
|||
|
2:22 bcc4 וְלֹ֥א יִפְגְּעוּ־בָ֖ךְ 1 ಈ ಮಾತಿಗೆ ಈ ಅರ್ಥಗಳಿರಬಹುದು : (1) ಇತರ ಸೇವಕರು ರೂತಳಿಗೆ ತೊಂದರೆ ಕೊಡಬಹುದು ಆತವಾ ಆಕೆಯನ್ನು ಅತ್ಯಾಚಾರ ಮಾಡಬಹುದು (2) ಬೇರೊಂದು ಹೊಲಕ್ಕೆ ಹೋದರೆ, ಆ ಹೊಲದ ಯಜಮಾನನು ಬಂದು ಆಕೆ ಹಕ್ಕಲಾಯುವುದನ್ನು ನಿಲ್ಲಿಸಬಹುದು.
|
|||
|
2:22 ab64 וְלֹ֥א יִפְגְּעוּ־בָ֖ךְ 1 ಈ ಕಾರಣದಿಂದಲೇ ರೂತಳು ಬೋವಜನ ಸೇವಕರ ಜೊತೆಯಲ್ಲಿ ಕೆಲಸ ಮಾಡುವುದಕ್ಕೆ ಮುಂದುವರೆಯಬೇಕಾಗಿದ್ದಿತ್ತು. ಫಲಿತವನ್ನು ಪಡೆದುಕೊಳ್ಳುವುದಕ್ಕೆ ಮುಂಚಿತವಾಗಿ ಕಾರಣವನ್ನು ಹೇಳುವುದಕ್ಕೆ ನಿಮ್ಮ ಭಾಷೆಯಲ್ಲಿ ಇನ್ನೂ ಸ್ಪಷ್ಟವಾಗಿ ಹೇಳುವ ಶೈಲಿ ಇದ್ದಿದ್ದರೆ, ಯುಎಸ್‌ಟಿಯಲ್ಲಿ ಇದ್ದ ಹಾಗೆ ಮೊಟ್ಟ ಮೊದಲು ಈ ವಾಕ್ಯದಲ್ಲಿ ಹೇಳಿರುವ ಮಾತಿನಂತೆ ಹೇಳಿರಿ. (ನೋಡಿರಿ: [[rc://*/ta/man/translate/grammar-connect-logic-result]])
|
|||
|
2:23 e2vq וַתִּדְבַּ֞ק 1 ಆ ದಿನವೆಲ್ಲಾ ರೂತಳು ಬೋವಜನ ಸೇವಕರೊಂದಿಗೆ ಕೆಲಸ ಮಾಡಿದಳು. ಆದ್ದರಿಂದ ಆಕೆ ಸುರಕ್ಷಿತವಾಗಿದ್ದಳು.
|
|||
|
2:23 a7qp וַתֵּ֖שֶׁב אֶת־חֲמוֹתָֽהּ 1 ಆ ರಾತ್ರಿ ಮಲಗುವುದಕ್ಕೆ ರೂತಳು ನೊವೊಮಿಯ ಮನೆಗೆ ಹೊರಟು ಹೋದಳು.
|
|||
|
3:intro t4y5 0 # ರೂತಳು 03 ಸಾಧಾರಣವಾದ ವಿಷಯಗಳು\n\n## ಈ ಅಧ್ಯಾಯದಲ್ಲಿ ವಿಶೇಷವಾದ ಪರಿಕಲ್ಪನೆಗಳು\n\n### ಬೋವಜನ ಸಮಗ್ರತೆ\n\nಬೋವಜನು ರೂತಳ ಜೊತೆಯಲ್ಲಿ ಮದುವೆ ಮಾಡಿಕೊಳ್ಳುವವರೆಗೂ ಆಕೆಯನ್ನು ಲೈಂಗಿಕವಾಗಿ ಮುಟ್ಟದೇ ಬೋವಜನು ತನ್ನ ಉತ್ತಮ ಸಮಗ್ರತೆಯನ್ನು ಈ ಅಧ್ಯಾಯದಲ್ಲಿ ತೋರಿಸಿದ್ದಾನೆ. ರೂತಳ ಒಳ್ಳೆಯ ಹೆಸರನ್ನು ಕೆಡಿಸದೆ ಕಾಪಾಡುವ ಮನಸ್ಸನ್ನು ಹೊಂದಿಕೊಂಡಿದ್ದನು. ಬೋವಜನ ಒಳ್ಳೆಯ ನಡತೆಯು ಕಾಣಿಸಿಕೊಳ್ಳುವುದು ಈ ಅಧ್ಯಾಯದಲ್ಲಿ ತುಂಬಾ ಪ್ರಾಮುಖ್ಯವಾದ ವಿಷಯವಾಗಿರುತ್ತದೆ.\n\n# ಈ ಅಧ್ಯಾಯದಲ್ಲಿ ಕಂಡುಬರುವ ಅನುವಾದಕ್ಕೆ ಸಂಬಂಧಪಟ್ಟ ಸಮಸ್ಯೆಗಳು \n\n### **ಇದರಿಂದ ನಿನಗೆ ಕ್ಷೇಮವುಂಟಾಗುತ್ತದೆ**\n\nರೂತಳನ್ನು ಚೆನ್ನಾಗಿ ನೋಡಿಕೊಳ್ಳುವ ಒಳ್ಳೆಯ ಗಂಡನೊಂದಿಗೆ ಭದ್ರತೆಯಿರುವ ಮನೆಯಲ್ಲಿ ಸುರಕ್ಷಿತವಾಗಿರಬೇಕೆಂದು ನೊವೊಮಿಯು ಬಯಸಿದ್ದಳು. ಬೋವಜನು ಆಕೆಗೆ ಉತ್ತಮವಾದ ಗಂಡನೆಂದು ನೊವೊಮಿಯು ಆಲೋಚನೆ ಮಾಡಿದ್ದಳು. ಬೋವಜನು ಸಮೀಪ ಬಂಧುವಾಗಿದ್ದನೆಂದು, ಆಕೆಯನ್ನು ಮದುವೆ ಮಾಡಿಕೊಳ್ಳುವ ಜವಬ್ದಾರಿ ಇದೆಯೆಂದು ನೊವೊಮಿ ಆಲೋಚನೆ ಮಾಡಿಕೊಂಡಿದ್ದಳು. ಇದು ನಿಜಾನೆ, ಯಾಕೆಂದರೆ ರೂತಳು ಅನ್ಯಳಾಗಿದ್ದಳು, ಆಕೆ ನೊವೊಮಿಯ ಕುಟುಂಬದಲ್ಲಿ ಮತ್ತು ಇಸ್ರಾಯೇಲ್ ದೇಶದಲ್ಲಿ ಭಾಗಿಯಾಗಿದ್ದಳು. (See: [[rc://*/ta/man/translate/figs-explicit]])
|
|||
|
3:1 jdr3 וַתֹּ֥אמֶר לָ֖הּ נָעֳמִ֣י 1 ಈ ವಾಕ್ಯವು ಕಥೆಯಲ್ಲಿನ ಮತ್ತೊಂದು ಭಾಗವನ್ನು ಪರಿಚಯಿಸುತ್ತಿದೆ, ಈ ಭಾಗದಲ್ಲಿ ಬೋವಜನು ಸಮೀಪ ಬಂಧುವಿನ ಜವಬ್ದಾರಿತನವನ್ನು ತನಗೆ ಮತ್ತು ತನ್ನ ಅತ್ತೆಯಾದ ನೊವೊಮಿಗೆ ತೋರಿಸಬೇಕೆಂದು ಬೋವಜನಲ್ಲಿ ರೂತಳು ಕೇಳಿಕೊಳ್ಳುವಳು.(ನೋಡಿರಿ: [[rc://*/ta/man/translate/writing-newevent]])
|
|||
|
3:1 r7ar חֲמוֹתָ֑הּ 1 ನೊವೊಮಿಯು ಸತ್ತುಹೋಗಿರುವ ರೂತಳ ಗಂಡನ ತಾಯಿಯಾಗಿದ್ದಳು.
|
|||
|
3:1 f1uc בִּתִּ֞י 1 ಆಕೆಯ ಮಗನನ್ನು ರೂತಳು ಮದುವೆ ಮಾಡಿಕೊಂಡಿರುವದರಿಂದ ರೂತಳು ನೊವೊಮಿಯ ಕುಟುಂಬದಲ್ಲಿ ಬಾಗಿಯಾಗಿದ್ದಳು. ರೂತಳು ಬೇತ್ಲೆಹೇಮಿಗೆ ಬಂದ ನಂತರ ನೊವೊಮಿಗೆ ಮಗಳಿನಂತೆ ಆಕೆಯನ್ನು ತನ್ನ ತಾಯಿಯಂತೆ ನೋಡುಕೊಳ್ಳುತ್ತಿದ್ದಳು.
|
|||
|
3:1 nxr8 הֲלֹ֧א אֲבַקֶּשׁ־לָ֛ךְ מָנ֖וֹחַ אֲשֶׁ֥ר יִֽיטַב־לָֽךְ 1 ನೊವೊಮಿಯು ರೂತಳಿಗೋಸ್ಕರ ಮಾಡಿರುವ ಪ್ರಣಾಳಿಕೆಯನ್ನು ಹೇಳುವುದಕ್ಕೆ ಈ ಪ್ರಶ್ನೆಯನ್ನು ಉಪಯೋಗಿಸಿದ್ದಳು. ಪರ್ಯಾಯ ಅನುವಾದ : "ನೀನು ಸುಖವಾಗಿ ಗೃಹಿಣಿಯಾಗಿರುವುದಕ್ಕೆ ನಾನು ನೋಡಬೇಕು, ಅದರಿಂದ ನೀನು ಚೆನ್ನಾಗಿರುವಿ" ಅಥವಾ "ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವವನನ್ನು ನಾನು ನಿನಗಾಗಿ ನೋಡಲೇಬೇಕು, ಇದರಿಂದ ನೀನು ಯಾವ ಚಿಂತೆ ಇಲ್ಲದೇ ಜೀವನ ಮಾಡುವಿ." (ನೋಡಿರಿ: [[rc://*/ta/man/translate/figs-rquestion]])
|
|||
|
3:1 uw2p לָ֛ךְ מָנ֖וֹחַ 1 ದಣಿದು ಹೋಗಿದ್ದಕ್ಕಾಗಿ ತಾತ್ಕಾಲಿಕವಾಗಿ ವಿಶ್ರಾಂತಿ ಪಡೆದುಕೊಳ್ಳುವ ಸ್ಥಳವನ್ನು ಇದು ಸೂಚಿಸುತ್ತಿಲ್ಲ. ಗಂಡನೊಂದಿಗೆ ಒಂದು ಒಳ್ಳೆಯ ಮನೆಯಲ್ಲಿ ಆದರಣೆಯನ್ನು ಮತ್ತು ಭದ್ರತೆಯನ್ನು ಶಾಶ್ವತವಾಗಿ ಪಡೆದುಕೊಳ್ಳುವ ಸ್ಥಳವನ್ನು ಸೂಚಿಸುತ್ತಿದೆ. (ನೋಡಿರಿ: [[rc://*/ta/man/translate/figs-metaphor]])
|
|||
|
3:2 jdr4 וְעַתָּ֗ה 1 # Connecting Statement:\n\n2-4 ವಚನಗಳಲ್ಲಿ ನೊವೊಮಿ ರೂತಳಿಗೆ ಕೊಡುವ ಸಲಹೆಯನ್ನು ಕೊಡುವುದಕ್ಕೆ 1ನೇ ವಚನದಲ್ಲಿ ನೊವೊಮಿ ರೂತಳನ್ನು ಕೇಳಿದ ವಾಗಾಡಂಬರದ ಪ್ರಶ್ನೆಗೆ ಕಾರಣವಾಗಿದ್ದಿತ್ತು. 1ನೇ ವಚನದಲ್ಲಿ ಹೇಳಲ್ಪಟ್ಟಿರುವ ಮಾತಿಗೆ ನಡೆದ ಫಲಿತಾಂಶವನ್ನು ಈ ಮಾತು ತೋರಿಸುತ್ತಿದೆ. ಬೇರೊಂದು ಮಾತುಗಳಲ್ಲಿ ಹೇಳಬೇಕಾದರೆ, ರೂತಳು ಮಾಡಬೇಕಾದದ್ದನ್ನು ನೊವೊಮಿ ಸಲಹೆ ನೀಡುತ್ತಿದ್ದಾಳೆ (3:2-4) ಯಾಕಂದರೆ ರೂತಳಿಗೆ ಒಂದು ಒಳ್ಳೆಯ ಭದ್ರವಾಗಿರುವ ಮನೆಯನ್ನು ನೋಡಬೇಕೆಂದೆನ್ನುವ ಆಸೆ ನೊವೊಮಿಗೆ ಇದ್ದಿತ್ತು (3:1). ಫಲಿತವು ಸಿಕ್ಕ ಮೇಲೆ ಕಾರಣವನ್ನು ಹೇಳುವುದಕ್ಕೆ ನಿಮ್ಮ ಭಾಷೆಯಲ್ಲಿ ಇನ್ನೂ ಸ್ಪಷ್ಟವಾಗಿ ಹೇಳುವದಾದರೆ, 2-4 ವಚನಗಳಾದನಂತರ 1ನೇ ವಚನವನ್ನು ಇಡಬಹುದು. ಅವುಗಳೆಲ್ಲವನ್ನು ಸೇರಿಸಿ 1-4 ವಚನಗಳು ಎಂದು ಹೇಳಬಹುದು. (ನೋಡಿರಿ: [[rc://*/ta/man/translate/grammar-connect-logic-result]])
|
|||
|
3:2 b4h8 הֲלֹ֥א בֹ֨עַז֙ מֹֽדַעְתָּ֔נוּ 1 ಈಗಾಗಲೇ ನೊವೊಮಿಯು ರೂತಳಿಗೆ ಹೇಳಿರುವ ವಿಷಯಗಳನ್ನು ನೆನಪು ಮಾಡುವುದಕ್ಕೆ (2:20ನೇ ವಚನವನ್ನು ನೋಡಿರಿ), ಆಕೆ ಏನನ್ನು ಹೇಳುವಳೆನ್ನುವುದರ ಕುರಿತಾಗಿ ಪರಿಚಯ ಮಾಡುವುದಕ್ಕೆ ನೊವೊಮಿಯು ಈ ಪ್ರಶ್ನೆಯನ್ನು ಉಪಯೋಗಿಸಿದ್ದಾಳೆ. ಪರ್ಯಾಯ ಅನುವಾದ : "ನಿನಗೆ ಗೊತ್ತಿರುವಂತೆ ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ." (ನೋಡಿರಿ: [[rc://*/ta/man/translate/figs-rquestion]])
|
|||
|
3:2 j31t הָיִ֖ית אֶת־נַעֲרוֹתָ֑יו 1 ಇದು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡುವುದಾದರೆ, ಹೊಲದಲ್ಲಿರುವ ಈ ಹೆಣ್ಣಾಳುಗಳ ಜೊತೆಯಲ್ಲಿ ಆಕೆ ಕೆಲಸ ಮಾಡಿದ್ದಾಳೆಂದು ಸ್ಪಷ್ಟವಾಗಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ : "ಹೊಲಗಳಲ್ಲಿ ಹೆಣ್ಣಾಳುಗಳ ಜೊತೆಯಲ್ಲಿ ನೀವಿದ್ದೀರಿ." (ನೋಡಿರಿ: [[rc://*/ta/man/translate/figs-explicit]])
|
|||
|
3:2 nd8v הִנֵּה 1 **ನೋಡು** ಎನ್ನುವ ಶಬ್ದವು ಮುಂದೆ ಹೇಳುವ ಮಾತು ತುಂಬಾ ಪ್ರಾಮುಖ್ಯವಾದದ್ದೆಂದು ಸೂಚಿಸುತ್ತಿದೆ. (ನೋಡಿರಿ: [[rc://*/ta/man/translate/figs-distinguish]])
|
|||
|
3:2 ms25 זֹרֶ֛ה 1 **ಜವಗೋಧಿಯನ್ನು ತೂರುವನು** - ತೂರುವುದು ಎಂದರೆ ಗೋಧಿಯ ಜೊತೆಯಲ್ಲಿ ಬೆರೆತುಕೊಂಡಿರುವ ಹೊಟ್ಟನ್ನು ಗಾಳಿಯಲ್ಲಿ ತೂರಿದಾಗ ಹೊಟ್ಟಿನಿಂದ ಧಾನ್ಯಗಳು ಬೇರ್ಪಾಟಾಗುವುದು ಎಂದರ್ಥ.
|
|||
|
3:3 ru6z וָסַ֗כְתְּ 1 ಇದು ಬಹುಶಃ ಒಂದು ವಿಧವಾದ ಸುಗಂಧ ದ್ರವ್ಯದ ಎಣ್ಣೆಯಾಗಿರಬಹುದು, ಇದನ್ನು ಒಬ್ಬ ವ್ಯಕ್ತಿ ತನ್ನ ಮೇಲೆ ಉಜ್ಜುಕೊಳ್ಳುವುದಾಗಿರುತ್ತದೆ.
|
|||
|
3:3 e92h וְיָרַ֣דְתְּ הַגֹּ֑רֶן 1 ಪಟ್ಟಣವನ್ನು ಬಿಟ್ಟು, ಸೇವಕರು ತೆನೆಗಳನ್ನು ಬಡಿದು, ತೂರುವ ಸ್ಥಳಕ್ಕೆ ಹೋಗಬೇಕೆನ್ನುವುದನ್ನು ಈ ಮಾತು ನಮಗೆ ಸೂಚಿಸುತ್ತಿದೆ.
|
|||
|
3:4 jdr5 וִיהִ֣י 1 **ಆದನಂತರ ಈ ರೀತಿ ಮಾಡು:** ರೂತಳು ಏನು ಮಾಡಬೇಕೆಂದು ತಿಳಿಸುವ ನೊವೊಮಿಯ ಮುಖ್ಯವಾದ ಸೂಚನೆಗಳಲ್ಲಿ ಮತ್ತೊಂದನ್ನು ಪರಿಚಯಿಸುವ ಸಾಧಾರಣವಾದ ಸೂಚನೆ ಇದಾಗಿತ್ತು. ನಿಮ್ಮ ಭಾಷೆಯಲ್ಲಿ ಈ ಸಂದರ್ಭವನ್ನು ಹೇಗೆ ಹೇಳುತ್ತಾರೋ ಅದನ್ನೇ ಇಲ್ಲಿ ಅನುವಾದ ಮಾಡಿರಿ. (ನೋಡಿರಿ: [[rc://*/ta/man/translate/figs-imperative]])
|
|||
|
3:4 ab21 בְשָׁכְב֗וֹ 1 ಇದು ಹಿನ್ನೆಲೆಯ ಷರತ್ತಾಗಿದ್ದಿತ್ತು, ಬೋವಜನು ಎಲ್ಲಿ ಮಲಗಿದ್ದಾನೆಂದು ನೋಡುವುದಕ್ಕೆ ರೂತಳು ಯಾವಾಗ ನೋಡಬೇಕೆಂದು ತಿಳಿಸುವುದಾಗಿದ್ದಿತ್ತು. (ನೋಡಿರಿ: [[rc://*/ta/man/translate/grammar-connect-time-background]])
|
|||
|
3:4 ln1m וְגִלִּ֥ית מַרְגְּלֹתָ֖יו 1 ಈ ಮಾತಿಗೆ ಆತನ ಪಾದಗಳ (ಅಥವಾ ಕಾಲುಗಳ) ಹೊದಿಸಲ್ಪಟ್ಟ ಕಂಬಳಿಯನ್ನು ಅಥವಾ ಗಡಿಯಾರವನ್ನು ತೆಗೆಯಬೇಕೆಂದರ್ಥ. ಈ ರೀತಿ ಒಬ್ಬ ಸ್ತ್ರೀಯಳು ಮಾಡುವುದರಿಂದ ಮದುವೆ ಮಾಡಿಕೊಳ್ಳುವುದಕ್ಕೆ ಅಂಗೀಕಾರವನ್ನು ತೋರಿಸುತ್ತಿರಬಹುದು. (ನೋಡಿರಿ: [[rc://*/ta/man/translate/translate-symaction]])
|
|||
|
3:4 zi01 מַרְגְּלֹתָ֖יו 1 ಇಲ್ಲಿ ಉಪಯೋಗಿಸಲ್ಪಟ್ಟ ಮಾತು ತನ್ನ ಪಾದಗಳನ್ನು ಅಥವಾ ತನ್ನ ಕಾಲುಗಳನ್ನು ಸೂಚಿಸುತ್ತಿರಬಹುದು.
|
|||
|
3:4 l4we וְשָׁכָ֑בְתְּ 1 **ಅಲ್ಲೇ ಮಲಗಿಕೋ**
|
|||
|
3:4 w1u5 וְהוּא֙ יַגִּ֣יד לָ֔ךְ אֵ֖ת אֲשֶׁ֥ר תַּעַשִֽׂין 1 ಆ ಕಾಲದ ವಿಶೇಷವಾದ ಆಚಾರವು ಅಷ್ಟು ಸ್ಪಷ್ಟವಾಗಿಲ್ಲ, ಆದರೆ ರೂತಳು ಮಾಡುತ್ತಿರುವದು ಬೋವಜನನ್ನು ಮದುವೆ ಮಾಡಿಕೊಳ್ಳುವುದಕ್ಕೋಸ್ಕರ ಮಾಡುವ ಕ್ರಿಯೆಯೆಂದು ಬೋವಜನು ಅರ್ಥಮಾಡಿಕೊಳ್ಳುವನೆಂದು ನೊವೊಮಿ ನಂಬಿದ್ದಳು. ಆದರೆ ರೂತಳು ತೋರಿಸಿದ ಈ ಅವಕಾಶವನ್ನು ಬೋವಜನು ಸ್ವೀಕರಿಸಬಹುದು ಅಥವಾ ತಿರಸ್ಕಾರ ಮಾಡಬಹುದು.
|
|||
|
3:4 nn4g וְהוּא֙ יַגִּ֣יד 1 **ಆತನು ಎದ್ದಾಗ, ಆತನು ಹೇಳುವನು**
|
|||
|
3:6 ab22 וַתַּ֕עַשׂ כְּכֹ֥ל אֲשֶׁר־צִוַּ֖תָּה חֲמוֹתָֽהּ׃ 1 7ನೇ ವಚನದಲ್ಲಿ ರೂತಳು ಮಾಡುವದನ್ನು ಈ ಮಾತನ್ನು ಸಾರಾಂಶವಾಗಿ ಹೇಳುತ್ತಿದೆ. 6ನೇ ವಚನದಲ್ಲಿ ರೂತಳು ಮಾಡಿದ ಈ ಕ್ರಿಯೆಗಳನ್ನು ಜನರು ಈ ಮಾತಿನಿಂದ ಅರ್ಥಮಾಡಿಕೊಳ್ಳುವುದಾದರೇ, 7ನೇ ವಚನದಲ್ಲಿಯೂ ಆ ಕ್ರಿಯೆಗಳನ್ನು ಮಾಡಿದಂತೆ ನಾವು ನೋಡಬಹುದು. ಆದನಂತರ ಈ ಮಾತನ್ನು **ಆಕೆ ತನ್ನ ಅತ್ತೆಗೆ ವಿಧೇಯತೆಯನ್ನು ತೋರಿಸಿದಳು** ಎಂಬುದಾಗಿ ಅನುವಾದ ಮಾಡಬಹುದು. ಅಥವಾ ಇನ್ನೂ ಸ್ಪಷ್ಟವಾಗಿ ಈ ನಡೆದ ಈ ಸಂಘಟನೆಗಳನ್ನು ಕ್ರಮವಾಗಿ ಹೇಳುವುದಾದರೆ, ನೀವು ಈ ವಚನವನ್ನು 7ನೇ ವಚನದ ಕೊನೆಯ ಭಾಗದಲ್ಲಿಡಬಹುದು, ಆದನಂತರ ಎಲ್ಲಾ ವಚನಗಳನ್ನು ಸೇರಿಸಿ (6-7) ಒಂದು ವಚನವನ್ನಾಗಿ ಮಾಡಬಹುದು. (ನೋಡಿರಿ: [[rc://*/ta/man/translate/figs-events]])
|
|||
|
3:7 fz7e וַיִּיטַ֣ב לִבּ֔וֹ 1 ಇಲ್ಲಿ **ಸಂತುಷ್ಟ** ಎನ್ನುವ ಪದವು "ಭಾವನೆಗಳು" ಅಥವಾ "ಮನೋಧರ್ಮ" ಎನ್ನುವಗಳನ್ನು ಸೂಚಿಸುವದಾಗಿರುತ್ತದೆ. ಬೋವಜನ ಭಾವನೆಗಳು ಅಥವಾ ಉದ್ವೇಗಗಳು ಚೆನ್ನಾಗಿದ್ದವು. ಬೋವಜನು ಕುಡಿದಿದ್ದಾನೆಂದು ಈ ಮಾತು ಹೇಳುತ್ತಿಲ್ಲ. ಪರ್ಯಾಯ ಅನುವಾದ : "ಆತನ ಒಳ್ಳೆಯವನಾಗಿದ್ದನು" ಅಥವಾ "ಆತನು ಒಳ್ಳೆಯ ಮನಸ್ಥಿತಿಯಲ್ಲಿದ್ದನು" (ನೋಡಿರಿ: [[rc://*/ta/man/translate/figs-metonymy]])
|
|||
|
3:7 y6gk וַתָּבֹ֣א בַלָּ֔ט 1 **ಆದನಂತರ ಆಕೆ ರಹಸ್ಯವಾಗಿ ಒಳಗಡೆ ಬಂದಳು** ಅಥವಾ **ಆ ತರುವಾಯ ಆಕೆ ಸದ್ದು ಮಾಡದೇ ಬಂದಳು, ಅದರಿಂದ ಆಕೆ ಬಂದಿರುವುದು ಯಾರು ಕೇಳಲಿಲ್ಲ**
|
|||
|
3:7 eq2u וַתְּגַ֥ל מַרְגְּלֹתָ֖יו 1 **ಆತನ ಕಾಲು ಮೇಲೆ ಇರುವ ಹೊದಿಕೆಯನ್ನು ತೆಗೆದಳು**
|
|||
|
3:7 pb6l וַתִּשְׁכָּֽב 1 **ಅಲ್ಲಿಯೇ ಮಲಗಿದಳು**
|
|||
|
3:8 pz92 וַיְהִי֙ בַּחֲצִ֣י הַלַּ֔יְלָה 1 ಈ ಉಪವಾಕ್ಯವು ಕಥೆಯಲ್ಲಿ ಹೊಸ ಭಾಗವನ್ನು ಪರಿಚಯಿಸುತ್ತಿದೆ, ಬೋವಜನು ಎದ್ದನಂತರ ಆ ಭಾಗವೇನೆಂದು ವಿವರಿಸುತ್ತಿದೆ. (ನೋಡಿರಿ: [[rc://*/ta/man/translate/writing-newevent]])
|
|||
|
3:8 xun6 וַיֶּחֱרַ֥ד 1 ಬೋವಜನನ್ನು ಬೆಚ್ಚಿ ಬೀಳಿಸಿದ್ದು ಏನೆಂಬುವುದು ಸ್ಪಷ್ಟವಾಗಿರಲಿಲ್ಲ. ಆದರೆ ಅಕಸ್ಮಿಕವಾಗಿ ತಣ್ಣನೆಯ ಗಾಳಿ ತನ್ನ ಪಾದಗಳಿಗೆ ಅಥವಾ ತನ್ನ ಕಾಲುಗಳಿಗೆ ತಗುಲಿತ್ತೆಂದು ಅಂದುಕೊಂಡಿದ್ದನು.
|
|||
|
3:8 ab23 וְהִנֵּ֣ה 1 ಬೋವಜನನ್ನು ಬೆಚ್ಚಿಬೀಳಿಸಿದ್ದು ಏನೆಂಬುವುದು ಈ ಮಾತಿನಿಂದ ನಮಗೆ ಗೊತ್ತಾಗುತ್ತದೆ. ನಿಮ್ಮ ಭಾಷೆಯಲ್ಲಿ ಬೆಚ್ಚಿಬೀಳಿಸುವಿಕೆಯನ್ನು ವ್ಯಕ್ತಪಡಿಸುವ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/figs-exclamations]])
|
|||
|
3:8 e7ui אִשָּׁ֔ה שֹׁכֶ֖בֶת מַרְגְּלֹתָֽיו 1 ಆ ಸ್ತ್ರೀ ರೂತಳಾಗಿದ್ದಳು, ಆದರೆ ಆ ಕತ್ತಲಲ್ಲಿ ಬೋವಜನು ಆಕೆಯನ್ನು ಕಂಡುಹಿಡಿದಿಲ್ಲ.
|
|||
|
3:9 wj9e אֲמָתֶ֔ךָ -1 ರೂತಳು ಬೋವಜನ ಸೇವಕರಲ್ಲಿ ಒಬ್ಬಳಲ್ಲ, ಆದರೆ ರೂತಳು ಬೋವಜನನ್ನು ಗೌರವಿಸುತ್ತಿದ್ದಾಳೆಂದು ವ್ಯಕ್ತಗೊಳಿಸುವುದಕ್ಕೆ ಸಭ್ಯ ಮಾರ್ಗದಲ್ಲಿ ಬೋವಜನ ದಾಸಿಯಂತೆ ತನ್ನನ್ನು ತೋರಿಸಿಕೊಂಡಿದ್ದಾಳೆ. ನಿಮ್ಮ ಭಾಷೆಯಲ್ಲಿ ಗೌರವ ಮತ್ತು ವಿನಯವನ್ನು ವ್ಯಕ್ತಪಡಿಸುವ ವಿಧಾನವನ್ನು ಬಳಿಸಿರಿ.
|
|||
|
3:9 xp1b וּפָרַשְׂתָּ֤ כְנָפֶ֨ךָ֙ עַל־אֲמָ֣תְךָ֔ 1 ಇದು ವಿವಾಹಕ್ಕಾಗಿ ಉಪಯೋಗಿಸುವ ಸಂಪ್ರದಾಯಿಕವಾದ ನುಡಿಗಟ್ಟಾಗಿರುತ್ತದೆ. ಪರ್ಯಾಯ ಅನುವಾದ : "ದಯವಿಟ್ಟು ನನ್ನನ್ನು ಮದುವೆ ಮಾಡಿಕೊಳ್ಳಿರಿ" (ನೋಡಿರಿ: [[rc://*/ta/man/translate/figs-idiom]])
|
|||
|
3:9 l5g4 גֹאֵ֖ל 1 [2:20](...02/20/zu5f) ರಲ್ಲಿ ಈ ಮಾತನ್ನು ನೀವು ಹೇಗೆ ಅನುವಾದ ಮಾಡಿದ್ದೀರೋ ನೋಡಿರಿ.
|
|||
|
3:10 bjw9 הֵיטַ֛בְתְּ חַסְדֵּ֥ךְ הָאַחֲר֖וֹן מִן־הָרִאשׁ֑וֹן 1 **ಮೊದಲಿಗಿಂತ ಹೆಚ್ಚಾದ ಪ್ರೀತಿಯನ್ನು ಮತ್ತು ದಯೆಯನ್ನು ನೀನು ತೋರಿಸುತ್ತಿದ್ದೀ**
|
|||
|
3:10 e7ka הֵיטַ֛בְתְּ חַסְדֵּ֥ךְ הָאַחֲר֖וֹן 1 ನನ್ನನ್ನು ಮದುವೆ ಮಾಡಿಕೊಳ್ಳಬೇಕೆಂದು ರೂತಳು ಬೋವಜನಲ್ಲಿ ಕೇಳಿಕೊಳ್ಳವುದನ್ನು ಇದು ಸೂಚಿಸುತ್ತಿದೆ. ರೂತಳು ನೊವೊಮಿಗೆ ನಿಸ್ವಾರ್ಥೆಯನ್ನು ಮತ್ತು ಕುಟುಂಬದ ನಿಷ್ಠೆಯನ್ನು ತೋರಿಸುತ್ತಿದ್ದಾಳೆಂದು ಈ ಮಾತು ಸೂಚಿಸುತ್ತಿದೆ. ನೊವೊಮಿಯ ಸಮೀಪ ಬಂಧುವನ್ನು ಮದುವೆ ಮಾಡಿಕೊಳ್ಳುವುದರ ಮುಖಾಂತರ, ರೂತಳು ನೊವೊಮಿಯನ್ನ ನೋಡಿಕೊಳ್ಳುವಳು, ನೊವೊಮಿಯ ಮಗನನ್ನು ಗೌರವಿಸುವಳು ಮತ್ತು ನೊವೊಮಿಯ ಕುಟುಂಬ ಸಾಲನ್ನು ಮುಂದೆವರಿಸುವಳು.
|
|||
|
3:10 cbd3 הָרִאשׁ֑וֹן 1 ರೂತಳು ತನ್ನ ಅತ್ತೆಯೊಂದಿದಿಗೆ ಇದ್ದುಕೊಂಡು, ಅವರಿಬ್ಬರಿಗೋಸ್ಕರ ತೆನೆಗಳನ್ನು ಹಕ್ಕಲಾಯ್ದು ತಮ್ಮನ್ನು ಪೋಷಿಸಿಕೊಂಡಿರುವ ರೀತಿಯನ್ನು ಈ ಮಾತು ಸೂಚಿಸುತ್ತಿದೆ.
|
|||
|
3:10 n84d לְבִלְתִּי־לֶ֗כֶת אַחֲרֵי֙ 1 **ನೀನು ಮದುವೆ ಮಾಡಿಕೊಳ್ಳುವುದಕ್ಕೋಸ್ಕರವೇ ನೋಡಲಿಲ್ಲ.** ರೂತಳು ನೊವೊಮಿಯನ್ನು ನೋಡಿಕೊಳ್ಳದೇ ಇರಬಹುದು, ಮತ್ತು ಆಕೆ ನೊವೊಮಿಯ ಬಂಧುಗಳಲ್ಲಿಯಲ್ಲದೇ ತನ್ನ ಸ್ವಾರ್ಥಕ್ಕಾಗಿ ಅಂದಚಂದವಾದ ಯೌವ್ವನ ಗಂಡನಿಗಾಗಿ ನೋಡಿಕೊಂಡು ಪಕ್ಕಕ್ಕೆ ಹೋಗಿರಬಹುದು. ಆದರೆ ಆಕೆ ಆ ರೀತಿ ಮಾಡಲಿಲ್ಲ. (ನೋಡಿರಿ: [[rc://*/ta/man/translate/figs-idiom]])
|
|||
|
3:11 jdr6 וְעַתָּ֗ה 1 # Connecting Statement:\n\n11ನೇ ವಾಕ್ಯದಲ್ಲಿ ಮುಂದೆವರಿಯುವ ವಿಷಯಕ್ಕೋಸ್ಕರ 10 ನೇ ವಾಕ್ಯದಲ್ಲಿ ನಡೆದಿರುವುದು ಕಾರಣವಾಗಿತ್ತೆಂದು ಈ ಮಾತು ನಮಗೆ ಸೂಚಿಸುತ್ತದೆ. **ಅಗ** ಎನ್ನುವ ಪದದಿಂದ ಇದನ್ನು ಸೂಚಿಸಲಾಗುತ್ತದೆ. ಫಲಿತಾಂಶ ಸಿಕ್ಕ ಮೇಲೆ ಕಾರಣವನ್ನಿಡುವುದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದ್ದರೆ, ಕ್ರಮವಾಗಿ ಹೀಗೆ ಇಡಬಹುದು : ಸಮೀಪ ಸಂಬಂಧಿಕನ ಜವಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ಬೋವಜನು ಪ್ರೇರೇಪಿಸಲ್ಪಟ್ಟಿದ್ದಾನೆ (11ನೇ ವಚನ) **ಯಾಕಂದರೆ** ರೂತಳು ನೊವೊಮಿಗೆ ಎಂಥಾ ದಯೆಯನ್ನು ತೋರಿಸಿದ್ದಾಳೆಂದು ಬೋವಜನು ನೋಡಿದ್ದಾನೆ (10ನೇ ವಚನ). ಒಂದು ವೇಳೆ ಈ ಕ್ರಮವನ್ನು ನೀವು ತೆಗೆದುಕೊಳ್ಳವುದಾದರೆ, ನೀವು ಎರಡು ವಚನಗಳನ್ನು ಮತ್ತು ವಚನ ಸಂಖ್ಯೆಗಳನ್ನು ಒಂದಾಗಿ ಸೇರಿಸಬೇಕಾಗಿರುತ್ತದೆ. (ನೋಡಿರಿ: [[rc://*/ta/man/translate/grammar-connect-logic-result]]).
|
|||
|
3:11 ei93 בִּתִּי֙ 1 ಬೋವಜನು ಉಪಯೋಗಿಸಿದ ಈ ಮಾತನ್ನು ಒಬ್ಬ ಯೌವ್ವನ ಸ್ತ್ರೀಯಾದ ರೂತಳನ್ನು ಗೌರವಿಸುವುದಕ್ಕೋಸ್ಕರ ಒಂದು ಗೌರವದ ಚಿಹ್ನೆಯಾಗಿ ಉಪಯೋಗಿಸಿದ್ದನು. ನಿಮ್ಮ ಭಾಷೆಯಲ್ಲಿ ಒಬ್ಬ ವ್ಯಕ್ತಿ ಮಾಡಿದ ಕ್ರಿಯೆಯನ್ನು ನೋಡಿ, ಸರಿಯಾಗಿ ವ್ಯಕ್ತಪಡಿಸುವ ವಿಧಾನವನ್ನು ಉಪಯೋಗಿಸಿರಿ.
|
|||
|
3:11 ab08 כָּל־שַׁ֣עַר עַמִּ֔י 1 ಬಾಗಿಲು (ಊರಿನವರಿಗೆಲ್ಲಾ) ಎಂದರೆ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಊರಿನ ಜನರೆಲ್ಲರು ಒಂದು ಕಡೆ ಸೇರುವ ಪಟ್ಟಣದ ಸ್ಥಳವಾಗಿದ್ದಿತ್ತು, ಮತ್ತು ನಾಯಕರಾಗಿರುವವರೆಲ್ಲರೂ ಅಲ್ಲಿ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ "ನನ್ನ ಪಟ್ಟಣದಲ್ಲಿರುವ ಪ್ರಾಮುಖ್ಯವಾದ ಎಲ್ಲಾ ಜನರನ್ನು" ತೋರಿಸುವ ಒಂದಾನೊಂದು ನುಡಿಗಟ್ಟಾಗಿರುತ್ತದೆ. (ನೋಡಿರಿ: [[rc://*/ta/man/translate/figs-idiom]]).
|
|||
|
3:11 ab31 אֵ֥שֶׁת חַ֖יִל 1 **ಒಳ್ಳೆಯ ನಡತೆಯುಳ್ಳ ಸ್ತ್ರೀ, ಒಳ್ಳೆಯ ಸ್ತ್ರೀ**
|
|||
|
3:12 jdr7 וְעַתָּה֙ 1 # Connecting Statement:\n\nರೂತಳು ಗಮನವನ್ನಿಡಬೇಕಾದ ಒಂದು ಪ್ರಾಮುಖ್ಯವಾದ ವಿಷಯವನ್ನು ಈ ಮಾತು ತೋರಿಸುತ್ತಿದೆ. ಪರ್ಯಾಯ ಅನುವಾದ : ಇನ್ನೊಬ್ಬ ಪುರುಷನು ಆಕೆಯನ್ನು ಮದುವೆ ಮಾಡಿಕೊಳ್ಳುವ ಅವಕಾಶವಿರುವುದಕ್ಕೂ ಮತ್ತು ಬೋವಜನು ರೂತಳನ್ನು ಮದುವೆ ಮಾಡಿಕೊಳ್ಳುವುದಕ್ಕಿರುವ ಇಷ್ಟಕ್ಕೂ ಮಧ್ಯೆ ಇರುವ ವಿಭಿನ್ನತೆಯನ್ನು "ನೀನು ಕೂಡ ಅದನ್ನು ತಿಳಿದುಕೊಳ್ಳಬೇಕು." (ನೋಡಿರಿ: [[rc://*/ta/man/translate/grammar-connect-logic-contrast]])
|
|||
|
3:12 ab30 וְגַ֛ם יֵ֥שׁ 1 ಬೋವಜನು ರೂತಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟಪಟ್ಟಿರುವುದಕ್ಕೆ (11ನೇ ವಚನ) ಮತ್ತು ಇನ್ನೊಬ್ಬ ಪುರುಷನು ಆಕೆಯನ್ನು ಮದುವೆ ಮಾಡಿಕೊಳ್ಳಬೇಕೆಂದೆನ್ನುವುದಕ್ಕೆ (12ನೇ ವಚನ) ಮಧ್ಯೆ ವಿಭಿನ್ನತೆಯನ್ನು ಈ ಮಾತು ತಿಳಿಸುತ್ತದೆ. ಪರ್ಯಾಯ ಅನುವಾದ : "ಇನ್ನೊಬ್ಬರು ಮದುವೆ ಮಾಡಿಕೊಳ್ಳುವುದಕ್ಕೆ ಅವಕಾಶವಿದ್ದರೂ" (ನೋಡಿರಿ: [[rc://*/ta/man/translate/grammar-connect-logic-contrast]]).
|
|||
|
3:12 fvq5 גֹּאֵ֖ל קָר֥וֹב מִמֶּֽנִּי 1 ಸತ್ತು ಹೋಗಿರುವ ಮನುಷ್ಯನ ಹೆಂಡತಿಗೆ (ವಿಧವೆಯಳಿಗೆ) ಸಹಾಯ ಮಾಡುವುದಕ್ಕೆ ಕುಟುಂಬಿಕರ ಸಂಬಂಧಗಳಲ್ಲಿರುವ ಯಾರೇ ಒಬ್ಬ ಪುರುಷನ ಕರ್ತವ್ಯವಾಗಿದ್ದಿತ್ತು.[2:20](../02/20/zu5f) ರಲ್ಲಿ **ಸಮೀಪ ಬಂಧು** ಎನ್ನುವ ಪದವನ್ನು ಹೇಗೆ ಅನುವಾದ ಮಾಡಿದ್ದೀರೋ ನೋಡಿರಿ. ಆ ಮಾತನ್ನೇ ಇಲ್ಲಿ ಬರೆದಿರುವಿರೋ ಇಲ್ಲವೋ ಖಚಿತಪಡಿಸಿಕೊಳ್ಳಿರಿ ನೋಡಿಕೊಳ್ಳಿರಿ.
|
|||
|
3:13 gcl8 אִם־יִגְאָלֵ֥ךְ 1 **ಮೈಧುನ ಧರ್ಮ** ಎನ್ನುವ ಮಾತಿಗೆ "ವಿಧವೆಯಳ ವಿಷಯವಾಗಿ ನಮ್ಮ ಸಂಪ್ರದಾಯ ಪದ್ಧತಿ ಪ್ರಕಾರ ಮದುವೆ ಮಾಡಿಕೊಳ್ಳುವುದು" ಎಂದರ್ಥ. ತೀರಿಕೊಂಡಿರುವ ರೂತಳ ಗಂಡನಿಗೆ ಸಮೀಪ ಬಂಧುವಾಗಿರುವ ಪುರುಷನು, ಆಕೆಯನ್ನು ಮದುವೆ ಮಾಡಿಕೊಂಡು, ತೀರಿಕೊಂಡಿರುವವನ ಕಟುಂಬದ ಹೆಸರನ್ನು ನಿಲ್ಲಿಸಲು ಗಂಡು ಮಕ್ಕಳನ್ನು ಹಡೆಯುವ ವ್ಯಕ್ತಿ ಬೋವಜನೆಂದು ಸೂಚಿಸುತ್ತಿದೆ. (ನೋಡಿರಿ: [[rc://*/ta/man/translate/figs-explicit]])
|
|||
|
3:13 tkz9 חַי־יְהוָ֑ה 1 **ಯೆಹೋವನು ವಾಸಿಸುವಂತೆಯೇ** ಅಥವಾ **ಯೆಹೋವನ ಜೀವದ ಆಣೆ**. ಇದು ಮಾತನಾಡುವಂತಹ ವ್ಯಕ್ತಿ ಹೇಳಿದ್ದನ್ನು ಮಾಡುವದಕ್ಕೆ ಪ್ರಾಮಾಣಿಕವಾಗಿ ತಿಳಿಸಲು ಉಪಯೋಗಿಸುವ ಸಾಧಾರಣ ಇಬ್ರೀ ಆಣೆಯಾಗಿದ್ದಿತ್ತು. ನಿಮ್ಮ ಭಾಷೆಯಲ್ಲಿ ಆಣೆ ಇಟ್ಟುಕೊಳ್ಳುವುದಕ್ಕೋಸ್ಕರ ಉಪಯೋಗಿಸುವ ಸಾಮಾನ್ಯ ಮಾತುಗಳನ್ನು ಇಲ್ಲಿ ಬಳಸಿರಿ.
|
|||
|
3:14 vn8p וַתִּשְׁכַּ֤ב מַרְגְּלוֹתָיו֙ 1 ರೂತಳು ಬೋವಜನ ಪಾದಗಳ ಹತ್ತಿರ ಮಲಗಿದಳು. ಅವರು ಲೈಂಗಿಕ ಸಂಬಂಧ ಹೊಂದಿರಲಿಲ್ಲ.
|
|||
|
3:14 dwx1 בְּטֶ֛רֶם יַכִּ֥יר אִ֖ישׁ אֶת־רֵעֵ֑הוּ 1 ಇದು ಕತ್ತಲು ಎಷ್ಟಿದೆಯೆಂದು ಹೇಳುವುದಕ್ಕೆ ಬಳಸುವ ನುಡಿಗಟ್ಟಾಗಿರುತ್ತದೆ. ಪರ್ಯಾಯ ಅನುವಾದ : "ಕತ್ತಲಿರುವಾಗಲೇ" (ನೋಡಿರಿ: [[rc://*/ta/man/translate/figs-idiom]]).
|
|||
|
3:15 hj1e הַמִּטְפַּ֧חַת 1 ಬೆಚ್ಚಗಿರುವುದಕ್ಕಾಗಿ ಒಂದು ದಪ್ಪಾಗಿರುವ ಬಟ್ಟೆಯನ್ನು ಮೈಮೇಲೆ (ಭುಜಗಳ) ಮೇಲೆ ಹಾಕಿಕೊಂಡಿದ್ದಳು.
|
|||
|
3:15 f5zg שֵׁשׁ־שְׂעֹרִים֙ 1 ವಾಸ್ತವಿಕವಾಗಿ ಎಷ್ಟು ಜವಗೋಧಿಯನ್ನು ಕೊಟ್ಟಿರಬಹುದೆಂದು ನಮಗೆ ಇಲ್ಲಿ ಸ್ಪಷ್ಟವಾಗಿ ಬರೆದಿಲ್ಲ. ಧಾರಾಳವಾಗಿ ಕೊಟ್ಟಿರಬಹುದೆಂದು ನಾವು ಅಂದುಕೊಳ್ಳಬಹುದು. ರೂತಳು ಹೊತ್ತಿಕೊಂಡು ಹೋಗುವಷ್ಟು ಕಡಿಮೆ ಗೋಧಿಯನ್ನು ಕೊಟ್ಟಿರಬಹುದು. ಅನೇಕ ಪಂಡಿತರು 25 ರಿಂದ 30 ಕೇ.ಜಿ. ಗೋಧಿಯನ್ನು ಕೊಟ್ಟಿರಬಹುದೆಂದು ಹೇಳುತ್ತಾರೆ.
|
|||
|
3:15 gdn8 וַיָּ֣שֶׁת עָלֶ֔יהָ 1 ಧಾನ್ಯಗಳ ಪ್ರಮಾಣ ತುಂಬಾ ಜಾಸ್ತಿಯಾಗಿದ್ದಿತ್ತು. ಆದ್ದರಿಂದ ಆಕೆ ಅವುಗಳನ್ನು ಹೊತ್ತಿಕೊಂಡು ಹೋಗುವಂಗೆ ರೂತಳ ಬೆನ್ನಿನ ಮೇಲಿಟ್ಟು ಕಳುಹಿಸಿದನು.
|
|||
|
3:15 aj7u וַיָּבֹ֖א הָעִֽיר 1 ಅನೇಕ ಪುರಾತನ ಪ್ರತಿಗಳಲ್ಲಿ **ಆತನು ಹೊರಟು ಹೋದನು**, ಎನ್ನುವ ಮಾತು ಬೋವಜನನ್ನು ಸೂಚಿಸುತ್ತಿದೆ. ಆದರೆ ಕೆಲವೊಂದು ಪ್ರತಿಗಳಲ್ಲಿ **ಆಕೆಯು ಊರೊಳಕ್ಕೆ ಹೋದಳು** ಎಂಬುದಾಗಿ ಬರೆಯಲ್ಪಟ್ಟಿರುತ್ತದೆ, ಇದು ರೂತಳನ್ನು ಸೂಚಿಸುತ್ತಿದೆ. ಕೆಲವೊಂದು ಆಂಗ್ಲ ಅನುವಾದಗಳಲ್ಲಿ "ಆತನು" ಎಂಬುದಾಗಿ ಬರೆಯಲ್ಪಟ್ಟಿದೆ ಮತ್ತು ಕೆಲವೊಂದು ಅನುವಾದಗಳಲ್ಲಿ "ಆಕೆ" ಎಂದು ಬರೆಯಲ್ಪಟ್ಟಿದೆ. ವಿದ್ವಾಂಸರಲ್ಲಿ ಹೆಚ್ಚಿನ ಜನರು **ಆತನು ಹೊರಟು ಹೋದನು** ಎಂಬುದಾಗಿ ಮೂಲ ಭಾಷೆಯಲ್ಲಿ ಬರೆಯಲ್ಪಟ್ಟಿದೆಯೆಂದು ಹೇಳುತ್ತಾರೆ.
|
|||
|
3:16 s7dr מִי־אַ֣תְּ בִּתִּ֑י 1 **ನನ್ನ ಮಗಳೇ ನೀನು ಮಾಡಬೇಕೆಂದು ಹೋಗಿರುವ ಕೆಲಸ ಎಷ್ಟರ ಮಟ್ಟಿಗೆ ಬಂದಿದೆ?** ಎಂದು ಅರ್ಥ ಕೊಡುವ ನುಡಿಗಟ್ಟಾಗಿರುವಂತೆ ಇದು ಕಾಣಿಸಿಕೊಳ್ಳುತ್ತದೆ. ಬೇರೊಂದು ಮಾತುಗಳಲ್ಲಿ ಹೇಳಬೇಕಾದರೆ, ರೂತಳು ಮದುವೆ ಮಾಡಿಕೊಂಡು ಬಂದಿದ್ದಾಳೊ ಇಲ್ಲವೋ ಎಂದು ನೊವೊಮಿಯು ರೂತಳನ್ನು ಕೇಳುತ್ತಿರಬಹುದು. ಆ ಪ್ರಶ್ನೆಗೆ **ನನ್ನ ಮಗಳೇ, ನೀನೇನಾ?** ಎಂದು ಅರ್ಥ ಕೊಡುವ ಪ್ರಶ್ನೆಯಾಗಿರುತ್ತದೆ. (ನೋಡಿರಿ: [[rc://*/ta/man/translate/figs-idiom]])
|
|||
|
3:16 ab34 בִּתִּ֑י 1 ರೂತಳು ನೊವೊಮಿಯ ಸೊಸೆ, ಆದರೆ ನೊವೊಮಿಯು ಆಕೆಯನ್ನು ಪ್ರೀತಿಯಿಂದ **ನನ್ನ ಮಗಳೇ** ಎಂದು ಕರೆಯುತ್ತಿದ್ದಾಳೆ. ನಿಮ್ಮ ಸಂಸ್ಕೃತಿಯಲ್ಲಿ ಅನುಮತಿಸಿದರೆ, ಈ ಅನುವಾದವನ್ನು ಹೀಗೆಯೇ ಇರಿಸಿರಿ. ನಿಮ್ಮ ಸಂಸ್ಕೃತಿಯಲ್ಲಿ ಅನುಮತಿ ಇಲ್ಲವೆಂದೆನ್ನುವುದಾದರೆ, ಅದನ್ನು "ಸೊಸೆ" ಎಂಬುದಾಗಿಯೇ ಬರೆಯಿರಿ.
|
|||
|
3:16 w9p9 אֵ֛ת כָּל־אֲשֶׁ֥ר עָֽשָׂה־לָ֖הּ הָאִֽישׁ 1 **ಬೋವಜನು ಅವಳಿಗಾಗಿ ಎಲ್ಲವನ್ನು ಮಾಡಿದನು**
|
|||
|
3:17 abca שֵׁשׁ־הַשְּׂעֹרִ֥ים 1 [3:15](../03/15/f5zg) ನೇ ವಚನದಲ್ಲಿ ನೀವು ಹೇಗೆ ಅನುವಾದವನ್ನು ಮಾಡಿದ್ದೀರೋ ನೋಡಿರಿ.
|
|||
|
3:17 e9xx אַל־תָּב֥וֹאִי רֵיקָ֖ם 1 **ಬರಿಗೈಯಿಂದ ಹೋಗುವುದು** ಎನ್ನುವುದು ಒಂದು ನುಡಿಗಟ್ಟಾಗಿರುತ್ತದೆ. ಈ ಮಾತಿಗೆ ನೀನು ಹೋಗುತ್ತಿರುವ ವ್ಯಕ್ತಿಯ ಬಳಿಗೆ ಬರಿಗೈಯಿಂದ ಹೋಗಬಾರದೆಂದರ್ಥ. ಪರ್ಯಾಯ ಅನುವಾದ : **ಬರಿಗೈಯಿಂದ ಹೋಗಬೇಡ** ಅಥವಾ **ಏನೂ ಇಲ್ಲದೇ ಹೋಗಬೇಡ** ಅಥವಾ **ನೀನು ತಪ್ಪದೇ ಏನನ್ನಾದರೂ ತೆಗೆದುಕೊಳ್ಳಬಹುದು** (ನೋಡಿರಿ: [[rc://*/ta/man/translate/figs-idiom]]).
|
|||
|
3:18 ab36 שְׁבִ֣י בִתִּ֔י 1 **ಕೂಡು** ಎನ್ನುವ ಪದವು ರೂತಳು ಮೌನವಾಗಿ ಸುಮ್ಮನಿರಬೇಕೆಂದು ಹೇಳುವ ಒಂದು ನುಡಿಗಟ್ಟಾಗಿರುತ್ತದೆ. ಪರ್ಯಾಯ ಅನುವಾದ : "ಇಲ್ಲಿ ಕಾದುಕೊಂಡಿರು" ಅಥವಾ "ಸಮಾಧಾನದಿಂದಿರು" (ನೋಡಿರಿ: [[rc://*/ta/man/translate/figs-idiom]])
|
|||
|
3:18 ab35 בִתִּ֔י 1 1:11-13; 2:2, 8, 22; 3:1, 10, 11, 16 ವಚನಗಳಲ್ಲಿ ನೀವು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ. .
|
|||
|
3:18 ab37 אֵ֖יךְ יִפֹּ֣ל דָּבָ֑ר 1 "ಪರಿಸ್ಥಿತಿ ಹೇಗಾಗುತ್ತದೆಯೆಂದು ಗೊತ್ತಾಗುವವರೆಗೂ" ಅಥವಾ "ಏನಾಗುತ್ತದೋ" ಎಂದು ಅರ್ಥ ಕೊಡುವ ನುಡಿಗಟ್ಟಾಗಿರುತ್ತದೆ. (ನೋಡಿರಿ: [[rc://*/ta/man/translate/figs-idiom]])
|
|||
|
3:18 zi02 לֹ֤א יִשְׁקֹט֙ הָאִ֔ישׁ כִּֽי־אִם־כִּלָּ֥ה הַדָּבָ֖ר 1 ಇದನ್ನು ಸಕಾರತ್ಮಕವಾಗಿ ಹೇಳಬಹುದು : **ಅ ಮನುಷ್ಯನು ಈ ವಿಷಯವನ್ನು ತಪ್ಪದೇ ಬಗೆಹರಿಸುತ್ತಾನೆ** ಅಥವಾ **ಆ ಮನುಷ್ಯನು ಈ ವಿಷಯವನ್ನು ಖಂಡಿತವಾಗಿ ಪರಿಷ್ಕರಿಸುತ್ತಾನೆ.** (ನೋಡಿರಿ: [[rc://*/ta/man/translate/figs-doublenegatives]])
|
|||
|
3:18 u5rn אִם־כִּלָּ֥ה הַדָּבָ֖ר 1 **ಈ ವಿಷಯ (ಅಥವಾ, ಅದನ್ನು)** ಎನ್ನುವ ಮಾತು ನೊವೊಮಿಯ ಆಸ್ತಿಯನ್ನು ಕೊಂಡುಕೊಂಡು ಮತ್ತು ರೂತಳನ್ನು ಮದುವೆ ಮಾಡಿಕೊಳ್ಳುವುದರ ಕುರಿತಾಗಿ ನಿರ್ಣಯ ತೆಗೆದುಕೊಳ್ಳುವದನ್ನು ಸೂಚಿಸುತ್ತದೆ.
|
|||
|
4:intro pz6m 0 # ರೂತಳು 04 ಸಾಧಾರಣ ವಿಷಯಗಳು \n\n## ಈ ಅಧ್ಯಾಯದಲ್ಲಿ ವಿಶೇಷವಾದ ಪರಿಕಲ್ಪನೆಗಳು \n\n### ಅರಸನಾದ ದಾವೀದನು \n\nರೂತಳು ಮೋವಾಬ್ಯಳೆಂದು ಹೊರತುಪಡಿಸಿದರೆ, ಆಕೆ ದಾವೀದನ ಪೂರ್ವಜಳಾಗಿದ್ದಳು. ದಾವೀದನು ಇಸ್ರಾಯೇಲ್ಯರ ಉನ್ನತ ಅರಸನಾಗಿದ್ದನು. ದಾವೀದನ ವಂಶಾವಳಿಯಲ್ಲಿ ಒಬ್ಬ ಅನ್ಯಳು ಅಷ್ಟು ದೊಡ್ಡ ಪ್ರಾಮುಖ್ಯವಾದ ಪಾತ್ರೆಯನ್ನು ವಹಿಸಿರುವುದು ಬೆರಗಾಗುವಂಥಹ ವಿಷಯವಾಗಿದ್ದಿತ್ತು, ಆದರೆ ದೇವರು ಎಲ್ಲರನ್ನು ಪ್ರೀತಿಸುತ್ತಿದ್ದಾನೆಂದು ಇದರ ಮೂಲಕ ನಮಗೆ ದೇವರು ನೆನಪು ಮಾಡುತ್ತಿದ್ದಾನೆ. ಯೆಹೋವನಲ್ಲಿ ರೂತಳಿಗೆ ಬಲವಾದ ನಂಬಿಕೆಯುಂಟು. ಯೆಹೋವನಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬರನ್ನು ದೇವರು ಆಹ್ವಾನಿಸುತ್ತಿದ್ದಾರೆಂದು ಇದರ ಮೂಲಕ ನಮಗೆ ತಿಳಿದು ಬರುತ್ತಿದೆ. \n\n# ಈ ಅಧ್ಯಾಯದಲ್ಲಿ ಕಂಡುಬರುವ ಅನುವಾದಕ್ಕೆ ಸಂಬಂಧಪಟ್ಟ ಸಮಸ್ಯೆಗಳು \n\n### **ಮೋವಾಬ್ಯ ಸ್ತ್ರೀಯಾಗಿರುವ ರೂತಳನ್ನು ಸಹ ನೀವು ಕಲಿತುಕೊಳ್ಳಬೇಕು**\n\nಕುಟುಂಬದ ಹೊಲವನ್ನು ಉಪಯೋಗಿಸಿಕೊಳ್ಳುವ ಭಾಗ್ಯದೊಂದಿಗೆ ವಿಧವೆಯಳ ಕುಟುಂಬವನ್ನು ಸಹ ನೋಡಿಕೊಳ್ಳುವ ಜವಾಬ್ದಾರಿತನವೂ ಬಂದಿದೆ. ಆದ್ದರಿಂದ ಸಮೀಪ ಬಂಧುಗಳಲ್ಲಿ ನೊವೊಮಿಯ ಭೂಮಿಯನ್ನು ಯಾರು ಉಪಯೋಗಿಸಿಕೊಳ್ಳುವುದಕ್ಕೆ ಬರುತ್ತಾರೋ ಅವರೇ ರೂತಳನ್ನು ಮದುವೆ ಮಾಡಿಕೊಂಡು ಅವರ ಕುಟುಂಬ ಹೆಸರನ್ನು, ಸ್ವಾಸ್ಥ್ಯವನ್ನು ನಿಲ್ಲಿಸುವುದಕ್ಕಾಗಿ ಆಕೆಗೆ ಸಂತಾನವನ್ನು (ಗಂಡು ಮಗನನ್ನು) ಕೊಡಬೇಕಾಗಿರುತ್ತದೆ. \n\n### **ಪೂರ್ವ ಕಾಲದಲ್ಲಿ ಇದು ಒಂದು ರೀತಿಯ ಸಂಸ್ಕೃತಿ ಇದ್ದಿತ್ತು.**\n\nಈ ಗ್ರಂಥವನ್ನು ಬರೆದಿರುವ ಲೇಖಕರಿಂದ ಹೇಳಲ್ಪಟ್ಟಿರುವಂತ ವ್ಯಾಖ್ಯೆಯಿದು. ನಡೆದಿರುವ ಸಂಘಟನೆಗಳ ಕಾಲಕ್ಕೂ ಮತ್ತು ಈ ಪುಸ್ತಕವನ್ನು ಬರೆದಿರುವ ಕಾಲಕ್ಕೂ ಮಧ್ಯೆ ಸಾಕಷ್ಟು ಕಾಲಾವಧಿ ಇದ್ದಿತ್ತು ಎಂದು ನಮಗೆ ಗೊತ್ತಾಗುತ್ತಿದೆ.
|
|||
|
4:1 jdr8 וּבֹ֨עַז עָלָ֣ה הַשַּׁעַר֮ 1 ಈ ಉಪವಾಕ್ಯವು ಕಥೆಯಲ್ಲಿನ ಮತ್ತೊಂದು ಭಾಗವನ್ನು ಪರಿಚಯಿಸುತ್ತಿದೆ. ಆ ಭಾಗದಲ್ಲಿ ಬೋವಜನು ಮೈದುನ ಧರ್ಮವನ್ನು (ಅಥವಾ, ಸಮೀಪ ಬಂಧುವಿನ ಜವಾಬ್ದಾರಿಯನ್ನು) ತೆಗೆದುಕೊಳ್ಳುತ್ತಾನೆ ಮತ್ತು ರೂತಳನ್ನು ಮದುವೆ ಮಾಡಿಕೊಳ್ಳುತ್ತಾನೆ. ಕಥೆಯಲ್ಲಿ ಹೊಸ ಭಾಗವನ್ನು ಪರಿಚಯಿಸುವ ನಿಮ್ಮ ಭಾಷೆಯ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/writing-newevent]])
|
|||
|
4:1 m4by הַשַּׁעַר֮ 1 **ಊರು ಬಾಗಿಲು (ಅಥವಾ ಪಟ್ಟಣದ ದ್ವಾರ)** ಅಥವಾ **ಬೇತ್ಲೆಹೇಮಿನ ಬಾಗಿಲಲ್ಲಿ**. ಇದು ಬೇತ್ಲೆಹೇಮ್ ಊರಿನೊಳಗೆ ಹೋಗುವುದಕ್ಕೆ ಮುಖ್ಯವಾದ ಪ್ರವೇಶ ದ್ವಾರ (ಬಾಗಿಲು) ವಾಗಿದ್ದಿತ್ತು. ಬಾಗಿಲಿನ ಒಳ ಭಾಗದಲ್ಲಿ ಒಂದು ದೊಡ್ಡ ಮೈದಾನವಿದ್ದಿತ್ತು, ಆ ಮೈದಾನದಲ್ಲಿ ಆ ಊರಿನ ವ್ಯವಹಾರಗಳನ್ನು ಚರ್ಚೆ ಮಾಡಿಕೊಳ್ಳುತ್ತಿದ್ದರು.
|
|||
|
4:1 jdr9 וְהִנֵּ֨ה 1 ತನ್ನ ಸಮೀಪ ಬಂಧುವು ಆ ಮಾರ್ಗವಾಗಿ ಹೋಗುತ್ತಿರುವುದನ್ನು ಬೋವಜನು ಕಂಡ ಪ್ರಾಮುಖ್ಯವಾದ ಸಂಘಟನೆಯನ್ನು ನೋಡುವುದಕ್ಕೆ **ಎಲಾ** ಎನ್ನುವ ಶಬ್ದವು ನಮ್ಮನ್ನು ಎಚ್ಚರಗೊಳಿಸುತ್ತಿದೆ. ಕಥೆಯಲ್ಲಿ ಏನಾಗುತ್ತದೆಯೆಂದು ಎಚ್ಚರಿಕೆಯಿಂದ ಗಮನ ಕೊಡುವುದಕ್ಕೆ ಇನ್ನೊಬ್ಬರನ್ನು ಎಚ್ಚರಿಸುವ ಒಂದು ಪ್ರತ್ಯೇಕವಾದ ವಿಧಾನವು ನಿಮ್ಮ ಭಾಷೆಯಲ್ಲಿ ಕೂಡ ಇರಬಹುದು. (ನೋಡಿರಿ: [[rc://*/ta/man/translate/figs-distinguish]])
|
|||
|
4:1 kz1g הַגֹּאֵ֤ל 1 ಇವರು ಎಲೀಮೆಲೆಕನಿಗೆ ತುಂಬಾ ಸಮೀಪ ಬಂಧುವಾಗಿದ್ದರು. [2:20](../02/20/zu5f).ರಲ್ಲಿ **ಸಮೀಪ ಬಂಧು** ಎಂಬುದಾಗಿ ಹೇಗೆ ಅನುವಾದ ಮಾಡಿದ್ದೀರೋ ಒಮ್ಮೆ ನೋಡಿರಿ.
|
|||
|
4:1 ab38 פְּלֹנִ֣י אַלְמֹנִ֑י 1 ನಿಜಕ್ಕೂ ಬೋವಜನು ಈ ಮಾತುಗಳನ್ನು ಹೇಳಲಿಲ್ಲ; ಆ ಮಾತುಗಳಿಗೆ ಬದಲಾಗಿ, ಆತನು ತನ್ನ ಹೆಸರಿನ ಮೂಲಕದಿಂದಲೇ ಸಮೀಪ ಬಂಧುವೆಂದು ತನ್ನನ್ನೇ ಕರೆದುಕೊಂಡಿದ್ದಾನೆ. ಇದೊಂದು ನುಡಿಗಟ್ಟಾಗಿರುತ್ತದೆ, ಈ ಮಾತಿಗೆ ನಿರ್ದಿಷ್ಟವಾದ ವ್ಯಕ್ತಿ ಇದ್ದಾನೆ ಎಂದರ್ಥ, ಆದರೆ ಇಲ್ಲಿ ಹೆಸರು ಬರೆಯಲ್ಪಟ್ಟಿಲ್ಲ. ಕಥೆಗಾಗಿ ಮುಖ್ಯ ವ್ಯಕ್ತಿಯ ಹೆಸರು ಪ್ರಾಮುಖ್ಯವಲ್ಲ ಎನ್ನುವ ಕಾರಣದಿಂದಾಗಲಿ ಅಥವಾ ಆ ವ್ಯಕ್ತಿಯ ಹೆಸರು ಮರೆತು ಹೋಗಿರುವ ಕಾರಣದಿಂದಾಗಲಿ ವ್ಯಕ್ತಿಯ ಹೆಸರಿಗೆ ಬದಲಾಗಿ ಸಾಧಾರಣವಾದ ಶಬ್ದವನ್ನು ಕಥೆಯನ್ನು ಹೇಳುತ್ತಿರುವವರು ಉಪಯೋಗಿಸಿದ್ದಾರೆ. ಮುಖ್ಯ ವ್ಯಕ್ತಿಯ ಹೆಸರನ್ನು ಬಳಸದೇ ಆ ವ್ಯಕ್ತಿಯನ್ನು ಸೂಚಿಸುವ ವಿಧಾನವು ನಿಮ್ಮ ಭಾಷೆಯಲ್ಲಿದ್ದರೆ, ಅದನ್ನು ಇಲ್ಲಿ ಉಪಯೋಗಿಸಿರಿ. (ನೋಡಿರಿ: [[rc://*/ta/man/translate/figs-idiom]]).
|
|||
|
4:1 ab39 פְּלֹנִ֣י אַלְמֹנִ֑י 1 ಅನೇಕ ಭಾಷೆಗಳಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕುರಿತಾಗಿ ತಿಳಿಸುವದೆನ್ನುವುದು ಒಂದು ವಿಚಿತ್ರವಾದ ಮತ್ತು ಅಸ್ವಾಭಾವಿಕ ವಿಧಾನವಾಗಿರುತ್ತದೆ. ಯುಎಸ್‌ಟಿನಲ್ಲಿ ಇದ್ದ ಹಾಗೆ ಇದನ್ನು ಇನ್ನೂ ಹೆಚ್ಚಾಗಿ ಸ್ವಾಭಾವಿಕ ವಿದಾನದಲ್ಲಿ ಮಾಡಬೇಕೆಂದರೆ ಇದನ್ನು ಪರೋಕ್ಷವಾಗಿ ಹೇಳುವ ಉಲ್ಲೇಖವನ್ನಾಗಿ ಮಾಡಬೇಕು. ಪರೋಕ್ಷ ಮತ್ತು ಪ್ರತ್ಯಕ್ಷ ಸಂಯೋಜನೆ ಉಲ್ಲೇಖವು ಕೂಡ ಸಾಧ್ಯವೇ: "ಬೋವಜನು ತನ್ನನ್ನು ತನ್ನ ಹೆಸರಿನಿಂದ ಕರೆದುಕೊಂಡು, "ತಿರಿಗಿಕೊಂಡು, ಇಲ್ಲಿ ಕೂಡು" ಎಂದುನು. (ನೋಡಿರಿ: [[rc://*/ta/man/translate/figs-quotations]]).
|
|||
|
4:2 ab40 וַיִּקַּ֞ח עֲשָׂרָ֧ה אֲנָשִׁ֛ים 1 **ಆದನಂತರ ಆತನು ಹತ್ತು ಮಂದಿ ಪುರುಷರನ್ನು ಆಯ್ಕೆಮಾಡಿಕೊಂಡನು**
|
|||
|
4:2 bf74 מִזִּקְנֵ֥י הָעִ֖יר 1 **ಊರಿನ (ಅಥವಾ, ಪಟ್ಟಣದ) ನಾಯಕರಿಂದ**
|
|||
|
4:3 es9g חֶלְקַת֙ הַשָּׂדֶ֔ה & מָכְרָ֣ה נָעֳמִ֔י 1 ಎಲೀಮೆಲೆಕನಿಗೆ ಸಮೀಪ ಬಂಧುವಾಗಿರುವ ವ್ಯಕ್ತಿಗೆ ಎಲೀಮೆಲೆಕನಿಗೆ ಸಂಬಂಧಪಟ್ಟ ಹೊಲವನ್ನು ತಿರಿಗಿ ಕೊಂಡುಕೊಳ್ಳುವ ಜವಾಬ್ದಾರಿಯು ಮತ್ತು ಎಲೀಮೆಲೆಕನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯು ಇದೆ.
|
|||
|
4:4 ab41 אֶגְלֶ֧ה אָזְנְךָ֣ 1 ಇದೊಂದು ನುಡಿಗಟ್ಟಾಗಿರುತ್ತದೆ. ಈ ಮಾತಿಗೆ, "ನಾನು ನಿನಗೆ ಹೇಳುತ್ತೇನೆ" ಅಥವಾ "ನಾನು ನಿನಗೆ ತಿಳಿಯಪಡಿಸುತ್ತೇನೆ" ಎಂದರ್ಥ. (ನೋಡಿರಿ: [[rc://*/ta/man/translate/figs-idiom]]).
|
|||
|
4:4 c6xi נֶ֥גֶד 1 **ಮುಂದೆಯೇ**. ಸಾಕ್ಷಿಗಳಾಗಿರುವ ಈ ಎಲ್ಲಾ ಹಿರಿಯರ ಮುಂದೆ ಕೊಂಡುಕೊಳ್ಳುವ ವ್ಯವಹಾರವನ್ನು ಮಾಡೋಣ.
|
|||
|
4:4 lgq1 גְּאָ֔ל 1 **ಕೊಂಡುಕೋ** ಎನ್ನುವ ಮಾತಿಗೆ ಭೂಮಿಯನ್ನು ಕೊಂಡುಕೊಂಡು ಕುಟುಂಬದಲ್ಲಿಯೇ ಇಟ್ಟುಕೋ ಎಂದರ್ಥ.
|
|||
|
4:4 ab42 אֵ֤ין זוּלָֽתְךָ֙ לִגְא֔וֹל וְאָנֹכִ֖י אַחֲרֶ֑יךָ 1 ಕೆಲವೊಂದು ಭಾಷೆಗಳಲ್ಲಿ, ಈ ವಿಷಯಗಳಲ್ಲೆವುಗಳನ್ನು ಸೇರಿಸಿ ಹೇಳುವುದು ಗೊಂದಲಮಯವಾಗಿರಬಹುದು : (1) ಭೂಮಿಯನ್ನು ಕೊಂಡುಕೊಳ್ಳುವವರು ಯಾರು ಇಲ್ಲ, (2) ನೀನು ಮಾತ್ರವೇ ಭೂಮಿಯನ್ನು ಕೊಂಡುಕೊಳ್ಳಬೇಕು, (3) ಇಲ್ಲದಿದ್ದರೆ ನಾನು ಆ ಭೂಮಿಯನ್ನು ಕೊಂಡುಕೊಳ್ಳಬೇಕಾಗಿರುತ್ತದೆ. ಆ ರೀತಿ ನಿಮ್ಮ ಭಾಷೆಯಲ್ಲಿ ಇರುವುದಾದರೆ, ಇನ್ನೂ ಹೆಚ್ಚಿನ ಸ್ಪಷ್ಟತೆಗಾಗಿ ಯುಎಸ್‌ಟಿಯನ್ನು ಒಮ್ಮೆ ನೋಡಿರಿ. (ನೋಡಿರಿ: [[rc://*/ta/man/translate/grammar-connect-exceptions]])
|
|||
|
4:4 u548 וְאָנֹכִ֖י אַחֲרֶ֑יךָ 1 ಬೋವಜನು ಎಲೀಮೆಲೆಕನಿಗೆ ಸಮೀಪ ಬಂಧುಗಳಲ್ಲಿ ಒಬ್ಬನಾಗಿದ್ದನು. ಆ ಭೂಮಿಯನ್ನು ಕೊಂಡುಕೊಳ್ಳುವ ಹಕ್ಕು ಎರಡನೇಯವನಾಗಿ ಬೋವಜನಿಗೆ ಮಾತ್ರ ಇದ್ದಿತ್ತು.
|
|||
|
4:5 ut23 בְּיוֹם־קְנוֹתְךָ֥ & וּ֠מֵאֵת & קָנִ֔יתָה 1 ಒಂದುವೇಳ ಇನ್ನೊಬ್ಬ ಸಮೀಪ ಬಂಧುವು ಆ ಭೂಮಿಯನ್ನು ಕೊಂಡುಕೊಳ್ಳುವ ಜವಾಬ್ದಾರಿಯನ್ನು ವಹಿಸುತ್ತಾನೆನ್ನುವ ಉದ್ದೇಶ್ಯದಿಂದ ತನ್ನ ಬಂಧುವಿಗೆ ತಿಳಿಸುವುದಕ್ಕೆ ಬೋವಜನು ಈ ಮಾತನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ : "ನೀನು ಭೂಮಿಯನ್ನು ಕೊಂಡುಕೊಂಡರೇ, ನೀನು ರೂತಳ ಜವಾಬ್ದಾರಿಯನ್ನು ಕೂಡ ವಹಿಸಬೇಕು"
|
|||
|
4:5 ymn8 מִיַּ֣ד נָעֳמִ֑י 1 ಇಲ್ಲಿ **ಕೈಯಿಂದ** ಎನ್ನುವ ಶಬ್ದವು ಹೊಲದ ಯಜಮಾನಿಯಾದ ನೊವೊಮಿಯನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ : "ನೊವೊಮಿಯಿಂದ" (ನೋಡಿರಿ: [[rc://*/ta/man/translate/figs-synecdoche]])
|
|||
|
4:5 dya3 וּ֠מֵאֵת ר֣וּת & קָנִ֔יתָה 1 **ನೀನು ರೂತಳನ್ನೂ ಮದುವೆ ಮಾಡಿಕೊಳ್ಳಬೇಕು** (ನೋಡಿರಿ: [[rc://*/ta/man/translate/figs-idiom]])
|
|||
|
4:5 b3ps אֵֽשֶׁת־הַמֵּת֙ 1 **ತೀರಿಕೊಂಡಿರುವ ಎಲೀಮೆಲೆಕನ ಮಗನ ಹೆಂಡತಿ, ವಿಧವೆಯಳನ್ನು**
|
|||
|
4:5 b3sy לְהָקִ֥ים שֵׁם־הַמֵּ֖ת עַל־נַחֲלָתֽוֹ׃ 1 **ಹೊಲದ ಖಾತೆಯು ಸತ್ತುಹೋದ ಆಕೆಯ ಮಗನ ಹೆಸರಿನಲ್ಲೇ ಉಳುಕೊಂಡಿರಬೇಕು ಮತ್ತು ಸತ್ತುಹೋದ ತನ್ನ ಗಂಡನ ಕುಟುಂಬದ ಹೆಸರನ್ನು ಉಳಿಸಬೇಕು.**
|
|||
|
4:5 ab43 הַמֵּ֖ת 1 ರೂತಳ ಗಂಡ **ಸತ್ತು ಹೋಗಿದ್ದಾನೆ**. **ಸತ್ತು ಹೋಗಿದ್ದಾನೆ** ಎನ್ನುವ ನಾಮಮಾತ್ರ ವಿಶೇಷಣವನ್ನು ತಪ್ಪಿಸುವುದಕ್ಕೆ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾ : "ಸತ್ತುಹೋಗಿರುವ ಮನುಷ್ಯ" ಅಥವಾ "ಸತ್ತು ಹೋಗಿರುವ ತನ್ನ ಗಂಡ" (ನೋಡಿರಿ: [[rc://*/ta/man/translate/figs-nominaladj]])
|
|||
|
4:6 sx9k אַשְׁחִ֖ית אֶת־נַחֲלָתִ֑י 1 ಆ ಮನುಷ್ಯನು ಆ ಭೂಮಿಗೆ (ಅಥವಾ ಆಸ್ತಿಗೆ) ಬದಲಾಗಿ ತನ್ನ ಆಸ್ತಿಯನ್ನು ಕೊಡಬೇಕಾಗಿರುತ್ತದೆ. ಒಂದುವೇಳೆ ರೂತಳನ್ನು ಮದುವೆ ಮಾಡಿಕೊಂಡರೆ, ಆ ಭೂಮಿಯು ನೊವೊಮಿಯ ಮಗನ ಹೆಸರಿನ ಮೇಲೆ ಇರುತ್ತದೇ ಹೊರತು ತನ್ನ ಸ್ವಂತ ಮಕ್ಕಳ ಮೇಲೆ ಇರುವುದಿಲ್ಲ. ತನ್ನಿಂದ ತನ್ನ ಮಕ್ಕಳಿಗೆ ಕೊಡಬೇಕಾದ ಆಸ್ತಿಯನ್ನು ತೆಗೆದು ರೂತಳಿಗೆ ಹುಟ್ಟುವ ಮಕ್ಕಳಿಗೆ ಕೊಡಬೇಕಾಗಿರುತ್ತದೆ. ಪರ್ಯಾಯ ಅನುವಾದ : "ನನ್ನ ಸ್ವಂತ ಮಕ್ಕಳ ಆಸ್ತಿಯಿಂದ ತೆಗೆದು ಕೊಡಬೇಕಾಗಿರುತ್ತದೆ"
|
|||
|
4:6 sa7h גְּאַל־לְךָ֤ אַתָּה֙ אֶת־גְּאֻלָּתִ֔י 1 **ನನ್ನ ಬದಲು ನೀನೇ ಆ ಅಸ್ತಿಯನ್ನು ಕೊಂಡುಕೋ**
|
|||
|
4:7 wga9 וְזֹאת֩ 1 **ಇದೀಗ ಒಂದು ಪದ್ಧತಿಯಾಗಿದ್ದಿತ್ತು.** ರೂತಳ ಕಾಲದಲ್ಲಿ ಭೂಮಿಯನ್ನು (ಆಸ್ತಿಯನ್ನು) ಬ ದಲಾಯಿಸುಕೊಳ್ಳುವುದರ ಕುರಿತಾಗಿ ಹಿನ್ನೆಲೆಯ ಮಾಹಿತಿಯನ್ನು ಕೊಡುವುದರ ಬಗ್ಗೆ ಈ ಪುಸ್ತಕದ ಲೇಖಕರು ಬರೆಯುವುದನ್ನು ನಿಲ್ಲಿಸಿದ್ದಾರೆ. ಕಥೆಯಲ್ಲಿ ಹಿನ್ನೆಲೆಯ ಮಾಹಿತಿಯನ್ನು ಕೊಡುವ ವಿಧಾನದ ಕುರಿತಾಗಿ ನಿಮ್ಮ ಭಾಷೆಯಲ್ಲಿ ಉಪಯೋಗಿಸಿರಿ. (ನೋಡಿರಿ: [[rc://*/ta/man/translate/writing-background]])
|
|||
|
4:7 lgf5 לְפָנִ֨ים 1 **ಪೂರ್ವಕಾಲಗಳಲ್ಲಿ** ಅಥವಾ **ಬಹಳ ವರ್ಷಗಳ ಹಿಂದೆ**. ರೂತಳ ಪುಸ್ತಕವನ್ನು ಬರೆದಿರುವ ಕಾಲದಲ್ಲಿ ಇಂಥಹ ಪದ್ಧತಿಯನ್ನು ಆಚರಿಸುತ್ತಿಲ್ಲವೆಂಬುವದು ಸ್ಪಷ್ಟವಾಗಿ ಈ ಮಾತಿನಿಂದ ನಮಗೆ ಗೊತ್ತಾಗುತ್ತಿದೆ. (ನೋಡಿರಿ: [[rc://*/ta/man/translate/writing-background]])
|
|||
|
4:7 d46w לְרֵעֵ֑הוּ 1 **ಇನ್ನೊಬ್ಬ ವ್ಯಕ್ತಿಗೆ**. ಯಾರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತಿರುವರೋ ಆ ವ್ಯಕ್ತಿಯನ್ನು ಈ ಮಾತು ಸೂಚಿಸುತ್ತಿದೆ. ಈ ಒಂದು ಪರಿಸ್ಥಿತಿಯಲ್ಲಿ ಸಮೀಪ ಬಂಧು ತನ್ನ ಕೆರಗಳನ್ನು ಬೋವಜನಿಗೆ ಕೊಟ್ಟನು. (ನೋಡಿರಿ: [[rc://*/ta/man/translate/figs-idiom]]).
|
|||
|
4:8 ab44 וַיֹּ֧אמֶר הַגֹּאֵ֛ל 1 7ನೇ ವಚನದಲ್ಲಿ ಹಿನ್ನೆಲೆಯ ಮಾಹಿತಿಯು ಕೊಟ್ಟನಂತರ ಕಥೆಯಲ್ಲಿನ ಸಂಘಟನೆಳು ಇಲ್ಲಿ ಮತ್ತೊಂದಾವರ್ತಿ ಆರಂಭವಾಗುತ್ತವೆ. ಕಥೆಯಲ್ಲಿ ನಡೆದಿರುವ ಸಂಘಟನೆಗಳನ್ನು ಮತ್ತೊಂದಾವರ್ತಿ ಹೇಳುವುದಕ್ಕೆ ನಿಮ್ಮ ಭಾಷೆಯಲ್ಲಿನ ಪದ್ಧತಿಯನ್ನು ಬಳಸಿರಿ.
|
|||
|
4:9 zz42 לַזְּקֵנִ֜ים וְכָל־הָעָ֗ם 1 ಕೂಟದ ಸ್ಥಳದಲ್ಲಿರುವ ಎಲ್ಲಾ ಜನರನ್ನು ಈ ಮಾತು ಸೂಚಿಸುತ್ತಿದೆ ಹೊರತು ಪಟ್ಟಣದಲ್ಲಿರುವ ಪ್ರಜೆಗಳನ್ನಲ್ಲ. (ನೋಡಿರಿ: [[rc://*/ta/man/translate/figs-hyperbole]])
|
|||
|
4:9 lwx9 מִיַּ֖ד נָעֳמִֽי 1 ನವೊಮಿ ಕೈಯಿಂದ ಎನ್ನುವ ಮಾತು ನೊವೊಮಿಯನ್ನು ಸೂಚಿಸುತ್ತಿದೆ. ತನ್ನ ಗಂಡ ಮತ್ತು ತನ್ನ ಗಂಡು ಮಕ್ಕಳೆಲ್ಲರು ಸತ್ತು ಹೋಗಿರುವದರಿಂದ, ಎಲ್ಲಾ ಆಸ್ತಿಯು ತನಗೆ ಸಂಬಂಧಪಟ್ಟಿರುವದಕ್ಕೆ ಆಕೆ ಹಕ್ಕುಂಟು. ಪರ್ಯಾಯ ಅನುವಾದ : "ನೊವೊಮಿಯಿಂದ" (ನೋಡಿರಿ: [[rc://*/ta/man/translate/figs-synecdoche]])
|
|||
|
4:9 img5 כָּל־אֲשֶׁ֣ר לֶֽאֱלִימֶ֔לֶךְ וְאֵ֛ת כָּל־אֲשֶׁ֥ר לְכִלְי֖וֹן וּמַחְל֑וֹן 1 ಈ ಮಾತು ತೀರಿಕೊಂಡಿರುವ ನೊವೊಮಿಯ ಗಂಡ ಮತ್ತು ತನ್ನ ಇಬ್ಬರ ಗಂಡು ಮಕ್ಕಳ ಆಸ್ತಿಯನ್ನು ಮತ್ತು ಭೂಮಿಯನ್ನು ಸೂಚಿಸುತ್ತದೆ.
|
|||
|
4:10 jdr0 וְגַ֣ם 1 # Connecting Statement:\n\nನೊವೊಮಿಗಾಗಿ (4:9) ಎಲೀಮೆಲೆಕನ ಕುಟುಂಬದ ಭೂಮಿಯನ್ನು ತಿರುಗಿ ಬೋವಜನು ಕೊಂಡುಕೊಳ್ಳುತ್ತಿದ್ದಾನೆನ್ನುವ ವಾಸ್ತವ ಘಟನೆಗೆ ಮತ್ತು ಬೋವಜನು ರೂತಳನ್ನು (4:10) ಮದುವೆ ಮಾಡಿಕೊಳ್ಳುತ್ತಿದ್ದಾನೆನ್ನುವ ವಿಷಯಕ್ಕೂ ಊರು ಬಾಗಿಲಿನ ಹತ್ತಿರ ಕೂತುಕೊಂಡಿರುವ ಜನರು ಸಾಕ್ಷಿಗಳಾಗಿದ್ದರೆಂದು ಈ ಮಾತು ಸೂಚಿಸುತ್ತಿದೆ.(ನೋಡಿರಿ: [[rc://*/ta/man/translate/grammar-connect-words-phrases]])
|
|||
|
4:10 nm32 לְהָקִ֤ים שֵׁם־הַמֵּת֙ עַל־נַ֣חֲלָת֔וֹ 1 4:5 ರಲ್ಲಿ ಈ ಮಾತನ್ನು ನೀವು ಹೇಗೆ ಅನುವಾದ ಮಾಡಿದ್ದೀರೋ ಒಮ್ಮೆ ನೋಡಿರಿ. ಪರ್ಯಾಯ ಅನುವಾದ : "ತೀರಿಕೊಂಡಿರುವ ವ್ಯಕ್ತಿಯ ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿಕೊಳ್ಳುವ ಆಕೆಯ ಸಂತಾನಕ್ಕೆ ನಾನು ಕೊಡುವೆ"
|
|||
|
4:10 gg1m וְלֹא־יִכָּרֵ֧ת שֵׁם־הַמֵּ֛ת מֵעִ֥ם אֶחָ֖יו 1 ಮುಂಚಿತವಾಗಿ ಜೀವಿಸಿರುವ ಜನರ ಪಟ್ಟಿಯಿಂದ ಹೆಸರನ್ನು ತೆಗೆದಿರುವುದಾದರೆ ಮರೆತು ಹೋಗಿದ್ದಾರೆಂದು ಮಾತನಾಡುತ್ತಾರೆ. ಪರ್ಯಾಯ ಅನುವಾದ : "ಆದ್ದರಿಂದ, ಊರಿನ (ಅಥವಾ ಪಟ್ಟಣದ) ಜನರಿಂದ ಮತ್ತು ತನ್ನ ಸಹೋದರರ ಸಂತಾನದಿಂದ ಆತನ ಹೆಸರು ಯಾವಾಗಲೂ ನೆನಪಿನಲ್ಲಿಡಬೇಕು" (ನೋಡಿರಿ: [[rc://*/ta/man/translate/figs-metaphor]])
|
|||
|
4:10 ab61 וְלֹא־יִכָּרֵ֧ת שֵׁם־הַמֵּ֛ת 1 ಇದನ್ನು ಸಕಾರತ್ಮಕವಾಗಿ ಹೇಳಬಹುದು. ಪರ್ಯಾಯ ಅನುವಾದ : "ಆದ್ದರಿಂದ ಆತನ ಹೆಸರು ಎಂದಿಗೂ ನಿಲ್ಲುತ್ತದೆ (ಸಂರಕ್ಷಿಸಲ್ಪಟ್ಟಿರುತ್ತದೆ)" (ನೋಡಿರಿ: [[rc://*/ta/man/translate/figs-doublenegatives]])
|
|||
|
4:10 xpu5 וּמִשַּׁ֣עַר מְקוֹמ֑וֹ 1 ಭೂಮಿಯನ್ನು ಯಾರು ಕೊಂಡುಕೊಂಡರು ಎನ್ನುವ ಪ್ರಾಮುಖ್ಯವಾದ ದೊಡ್ಡ ದೊಡ್ಡ ವ್ಯವಹಾರಗಳ ಕುರಿತಾಗಿ ಕಾನೂನುಬದ್ಧವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ನಾಯಕರು ಕೂಡುವ ಸ್ಥಳವನ್ನು ಊರಿನ ಬಾಗಿಲು ಅಥವಾ ಪಟ್ಟಣದ ಬಾಗಿಲು ಎಂದು ಕರೆಯುತ್ತಿದ್ದರು. ಪರ್ಯಾಯ ಅನುವಾದ : "ತನ್ನ ಊರಿನ (ಪಟ್ಟಣದ) ಪ್ರಾಮುಖ್ಯವಾದ ಜನರ ಮಧ್ಯೆದಲ್ಲಿ" (ನೋಡಿರಿ: [[rc://*/ta/man/translate/figs-metonymy]])
|
|||
|
4:10 ab45 עֵדִ֥ים אַתֶּ֖ם הַיּֽוֹם 1 **ಇವತ್ತು ನೀನು ಈ ವಿಷಯಗಳನ್ನು ನೋಡಿದ್ದೀ, ಮತ್ತು ಅವುಗಳನ್ನು ಕೇಳಿಸಿಕೊಂಡಿದ್ದೀ, ಅವುಗಳ ಕುರಿತಾಗಿ ನಾಳೆ ದಿನ ಮಾತನಾಡುತ್ತೀ.**
|
|||
|
4:11 ua2a הָעָ֧ם אֲשֶׁר־בַּשַּׁ֛עַר 1 **ಊರಿನ ಬಾಗಿಲಿನ ಹತ್ತಿರ ಕೂಟಕ್ಕಾಗಿ ಕುಳಿತುಕೊಂಡಿರುವ ಜನರು**
|
|||
|
4:11 hg6q הַבָּאָ֣ה אֶל־בֵּיתֶ֗ךָ 1 ಇದಕ್ಕೆ ಅಕ್ಷರಶಃ ಮತ್ತು ಅಲಂಕಾರಿಕ ಅರ್ಥಗಳು ಇವೆ. ರೂತಳು ಬೋವಜನನ್ನು ಮದುವೆ ಮಾಡಿಕೊಂಡರೆ, ಆಕೆ ಬೋವಜನ ಮನೆಯೊಳಗೆ ಹೆಜ್ಜೆ ಇಡಬೇಕು. "ಮನೆ" ಎನ್ನುವುದು "ಕುಟುಂಬವನ್ನು" ಸೂಚಿಸುವ ಲಕ್ಷಣಾವಾಗಿರಬಹುದು. ಬೋವಜನ ಹೆಂಡತಿಯಾಗುವುದರ ಮೂಲಕ ಬೋವಜನ ಕುಟುಂಬದಲ್ಲಿ ಭಾಗಿಯಾಗಿರುವದನ್ನು ಕೂಡ ಈ ಮಾತು ತಿಳಿಯಪಡಿಸುತ್ತದೆ. ಪರ್ಯಾಯ ಅನುವಾದ : "ನಿಮ್ಮ ಕುಟುಂಬದಲ್ಲಿ ಭಾಗಿಯಾಗುವ" (ನೋಡಿರಿ: [[rc://*/ta/man/translate/figs-metonymy]])
|
|||
|
4:11 q47m כְּרָחֵ֤ל ׀ וּכְלֵאָה֙ 1 ಇವರಿಬ್ಬರು ಇಸ್ರಾಯೇಲ್ ಎಂಬುದಾಗಿ ಹೆಸರನ್ನು ಬದಲಾಯಿಸಿಕೊಂಡ ಯಾಕೋಬಿನ ಹೆಂಡತಿಗಳಾಗಿದ್ದರು.
|
|||
|
4:11 cz4t בָּנ֤וּ & אֶת־בֵּ֣ית יִשְׂרָאֵ֔ל 1 **ಇಸ್ರಾಯೇಲ್ ದೇಶವಾಗಿ ಮಾರ್ಪಟ್ಟ ಅನೇಕ ಮಕ್ಕಳನ್ನು ಹಡೆದವರು**
|
|||
|
4:11 abcb וַעֲשֵׂה־חַ֣יִל בְּאֶפְרָ֔תָה וּקְרָא־שֵׁ֖ם בְּבֵ֥ית לָֽחֶם 1 ಈ ಎರಡು ವಾಕ್ಯಗಳು ಅರ್ಥದಲ್ಲಿ ಒಂದೇ ಆಗಿರುತ್ತವೆ. ಎರಡನೇ ವಚನವು ಮೊದಲನೇ ವಚನದಲ್ಲಿ ಹೇಳಲ್ಪಟ್ಟಿರುವುದನ್ನು ಪುನರಾವರ್ತಿಸಿ, ಅದಕ್ಕೆ ಅರ್ಥವನ್ನು ಜೋಡಿಸಿ ಹೇಳುತ್ತಿದೆ. ಇಬ್ರೀಯರ ಭಾಷೆಯಲ್ಲಿ ಏನಾದರೊಂದು ವಿಷಯವನ್ನು ಒತ್ತಿ ಹೇಳಬೇಕೆಂದರೆ ಈ ರೀತಿ ಹೇಳುತ್ತಿದ್ದರು. ಪರ್ಯಾಯ ಅನುವಾದ : ಬೇತ್ಲೆಹೇಮಿನಲ್ಲಿ ನೀನು ಒಳ್ಳೆಯ ಕಾರ್ಯಗಳನ್ನು ಮಾಡಿ, ಅವರಲ್ಲಿ ಪ್ರಸಿದ್ಧಿಯಾಗುವಿ." (ನೋಡಿರಿ: [[rc://*/ta/man/translate/figs-parallelism]]).
|
|||
|
4:11 ab65 וַעֲשֵׂה־חַ֣יִל בְּאֶפְרָ֔תָה וּקְרָא־שֵׁ֖ם בְּבֵ֥ית לָֽחֶם 1 ಈ ವಚನಗಳೆಲ್ಲ ಆಶೀರ್ವಾದ ರೂಪದಲ್ಲಿವೆ. ನಿಮ್ಮ ಭಾಷೆಯಲ್ಲಿ ಆಶೀರ್ವಾದ ಮಾಡುವುದಕ್ಕಾಗಿ ಬಳಸುವ ಸರಿಯಾದ ಪದಗಳನ್ನು ಬಳಸಿರಿ. ಪರ್ಯಾಯ ಅನುವಾದ : "ಬೇತ್ಲೆಹೇಮಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ, ಅವರ ಮಧ್ಯದಲ್ಲಿ ಪ್ರಸಿದ್ಧಿ ಹೊಂದುವಿ." (ನೋಡಿರಿ: [[rc://*/ta/man/translate/figs-imperative]]).
|
|||
|
4:11 uk9q וַעֲשֵׂה־חַ֣יִל בְּאֶפְרָ֔תָה 1 ಬೇತ್ಲೆಹೇಮ್ ಊರಿನ ಸುತ್ತಲೂ ಇರುವ ಪ್ರಾಂತ್ಯವನ್ನು ಎಫ್ರಾತ ಎಂದು ಹೆಸರುವಾಸಿಯಾಗಿದ್ದಿತ್ತು ಮತ್ತು ಅದು ಆ ಊರಿಗೆ ಇನ್ನೊಂದು ಹೆಸರಿನಿಂದ ಕರೆಯಲ್ಪಡುತ್ತಿತ್ತು. ಬೇತ್ಲೆಹೇಮ್ ಪಟ್ಟಣದ ಸುತ್ತಲೂ ಚೆನ್ನಾಗಿ ಹೆಸರುವಾಸಿಯಾಗುವಂತೆ ಇಸ್ರಾಯೇಲ್ಯರ ಸಂತತಿಯಿಂದ ಈ ಹೆಸರು ಬಂದಿತ್ತೆಂದು ಹೇಳುತ್ತಾರೆ.
|
|||
|
4:12 fn52 וִיהִ֤י בֵֽיתְךָ֙ כְּבֵ֣ית פֶּ֔רֶץ אֲשֶׁר־יָלְדָ֥ה תָמָ֖ר לִֽיהוּדָ֑ה 1 **ಮನೆ** ಎನ್ನುವ ಪದವು "ಕಟುಂಬ" ಅಥವಾ "ಸಂತಾನ" ಎಂದು ಅರ್ಥ ಕೊಡುತ್ತದೆ. ಇಸ್ರಾಯೇಲಿನಲ್ಲಿ ಹೆಚ್ಚಿನ ಸಂತಾನವನ್ನು ಪಡೆದಿರುವ ಪೆರೆಚನ ಮನೆಯಲ್ಲಿ ಹೆಚ್ಚಿನ ಸಂತಾನವನ್ನು ಪಡೆದುಕೊಂಡಿದ್ದರು, ಇದರಲ್ಲಿ ಎಫ್ರಾತ ಸಂತಾನವು ಕೂಡ ಒಳಗೊಂಡಿತ್ತು. ಈತನಿಂದ ಹುಟ್ಟಿಬಂದ ಅನೇಕ ಸಂತಾನಗಳು ಪ್ರಾಮುಖ್ಯ ಜನರಾಗಿ ಮಾರ್ಪಟ್ಟಿದ್ದರು. ಇದೇ ರೀತಿಯಲ್ಲಿ ಬೋವಜನಿಂದ ರೂತಳಲ್ಲಿ ಹುಟ್ಟುವ ಸಂತಾನವನ್ನು ಆಶೀರ್ವದಿಸಬೇಕೆಂದು ಜನರು ಬೇಡಿಕೊಳ್ಳುತ್ತಿದ್ದರು. (ನೋಡಿರಿ: [[rc://*/ta/man/translate/figs-metonymy]])
|
|||
|
4:12 a433 יָלְדָ֥ה תָמָ֖ר לִֽיהוּדָ֑ה 1 ರೂತಳಂಥೆ ತಾಮಾರಳು ಕೂಡಾ ವಿಧವೆಯಾಗಿದ್ದಳು. ಸತ್ತು ಹೋಗಿರುವ ತನ್ನ ಗಂಡನ ಕುಟುಂಬವನ್ನು ಮುಂದೆವರಿಸುವ ತಾಮಾರಳಲ್ಲಿ ಯೆಹೂದನ ಮೂಲಕ ಮಗನನ್ನು ಹಡೆದನು.
|
|||
|
4:12 xym8 מִן־הַזֶּ֗רַע אֲשֶׁ֨ר יִתֵּ֤ן יְהוָה֙ לְךָ֔ 1 ದೇವರು ಪೆರಚನಿಗೆ ಮಾಡಿದಂಥೆಯೇ ರೂತಳ ಮೂಲಕ ಬೋವಜನಿಗೆ ಅನೇಕಮಂದಿ ಮಕ್ಕಳನ್ನು ದೇವರು ಕೊಡಲಿ ಎಂದು ದೇವರು ಅಂಥಾ ಆಶೀರ್ವಾದವನ್ನು ಕೊಡಬೇಕೆಂದು ಜನರೆಲ್ಲರೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಅಂಥಹ ಆಶೀರ್ವಾದವನ್ನು ಕೊಡಲು ನಿಮ್ಮ ಭಾಷೆಯಲ್ಲಿ ಉಪಯೋಗಿಸಿ ಬರೆಯಿರಿ.
|
|||
|
4:13 abcc וַיִּקַּ֨ח בֹּ֤עַז אֶת־רוּת֙ וַתְּהִי־ל֣וֹ לְאִשָּׁ֔ה 1 ಈ ಎರಡು ವಾಕ್ಯಗಳು ಒಂದೇ ಅರ್ಥವನ್ನು ಕೊಡುವ ವಚನಗಳಾಗಿರುತ್ತವೆ. ಮೊದಲನೇ ವಚನದಲ್ಲಿರುವ ವಿಷಯವನ್ನು ಎರಡನೇ ವಚನವು ವಿವರಿಸಿ ಪುನರಾವರ್ತಿಸಿ ಹೇಳುತ್ತಿದೆ. ಇದು ಇಬ್ರೀ ಭಾಷೆಯ ಕಾವ್ಯಾತ್ಮಕ ಶೈಲಿಯಾಗಿರುತ್ತದೆ. ಈ ಎರಡು ವಾಕ್ಯಗಳನ್ನು ಯುಎಸ್‌ಟಿಯಲ್ಲಿ ಒಂದೇ ವಾಕ್ಯವಾಗಿ ಬೆರೆತುಗೊಳಿಸಬಹುದು. (ನೋಡಿರಿ: [[rc://*/ta/man/translate/figs-parallelism]])
|
|||
|
4:13 u21g וַיִּקַּ֨ח בֹּ֤עַז אֶת־רוּת֙ 1 10ನೇ ವಚನದಲ್ಲಿ ಬೋವಜನು ಮಾಡುತ್ತೇನೆಂದು ಹೇಳಿದ್ದನ್ನು ಬೋವಜನು ಮಾಡಿದ್ದಾನೆಂದು ಈ ಮಾತು ತಿಳಿಯಪಡಿಸುತ್ತಿದೆ. ಇದು ಯಾವುದೇ ರೀತಿಯ ಹಿಂಸಾತ್ಮಕ ರೂಪವನ್ನು ಸೂಚಿಸುವುದಿಲ್ಲ. ಮುಂಭಾಗದಲ್ಲಿ ಹೇಳಲ್ಪಟ್ಟಿರುವ ಮಾತಿನ ಜೊತೆಯಲ್ಲಿ, **ಬೋವಜನು ರೂತಳನ್ನು ಮದುವೆ ಮಾಡಿಕೊಂಡನು** ಅಥವಾ **ಬೋವಜನು ರೂತಳನ್ನು ಹೆಂಡತಿಯನ್ನಾಗಿ ಪರಿಗ್ರಹಿಸಿದನು** ಎಂದೆನ್ನುವ ಅರ್ಥವನ್ನು ಕೊಡುತ್ತದೆ. 10ನೇ ವಚನದಲ್ಲಿ ಒಪ್ಪಂದ ಮಾಡಿಕೊಂಡ ಫಲಿತಾಂಶವೇ ಬೋವಜನು ಮಾಡಿದ ಈ ಕ್ರಿಯೆಯಾಗಿತ್ತೆಂದು ತೋರಿಸುವ ಶಬ್ದವನ್ನು ("ಆದ್ದರಿಂದ" ಎನ್ನುವ ಪದವನ್ನು) ಉಪಯೋಗಿಸಿರಿ. (ನೋಡಿರಿ: [[rc://*/ta/man/translate/grammar-connect-logic-result]])
|
|||
|
4:13 gw77 וַיָּבֹ֖א אֵלֶ֑יהָ 1 ಲೈಂಗಿಕ ಸಂಬಂಧವನ್ನು ಹೊಂದಿದ್ದಾರೆಂದು ಸೂಚಿಸುವ ಸೌಮ್ಯೋಕ್ತಿ ಪದವಾಗಿರುತ್ತದೆ. ಪರ್ಯಾಯ ಅನುವಾದ : "ಆತನು ಆಕೆಯ ಜೊತೆಯಲ್ಲಿ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾನೆ" (ನೋಡಿರಿ: [[rc://*/ta/man/translate/figs-euphemism]])
|
|||
|
4:14 ab46 הַנָּשִׁים֙ 1 1:19 ನೇ ವಚನದಲ್ಲಿ ಹೇಳಲ್ಪಟ್ಟಿರುವಂತೆ ಇವರೆಲ್ಲರೂ ಆ ಊರಿನ ಸ್ತ್ರೀಯರಾಗಿದ್ದರು. ಬೇಕಾದರೆ ಈ ಮಾತನ್ನು ಇನ್ನೂ ಸ್ಪಷ್ಟವಾಗಿ ಹೇಳಬಹುದು. (ನೋಡಿರಿ: [[rc://*/ta/man/translate/figs-explicit]])
|
|||
|
4:14 ab47 בָּר֣וּךְ יְהוָ֔ה 1 ದೇವರು ನೊವೊಮಿಗೆ ಮತ್ತು ರೂತಳಿಗೆ ಮಾಡಿದ ಕಾರ್ಯಕ್ಕಾಗಿ ಸ್ತ್ರೀಯರೆಲ್ಲರೂ ದೇವರನ್ನು ಮಹಿಮೆಪಡಿಸುತ್ತಿದ್ದಾರೆ. ನಿಮ್ಮ ಭಾಷೆಯಲ್ಲಿ ಈ ಮಾತಿಗೆ ಸರಿಯಾದ ಅರ್ಥವು ಕೊಡದಿದ್ದರೆ, "ಮಹಿಮೆ ಸಲ್ಲಿಸುತ್ತಿದ್ದಾರೆ" ಅಥವಾ "ನಾವು ದೇವರಿಗೆ ಕೃತಜ್ಞತೆ ಸ್ತುತಿಗಳನ್ನು ಸಲ್ಲಿಸುತ್ತಿದ್ದಾರೆ" ಎಂದು ಉಪಯೋಗಿಸಿರಿ. ಯುಎಸ್‌ಟಿಯನ್ನು ನೋಡಿರಿ.
|
|||
|
4:14 qj8v לֹ֣א הִשְׁבִּ֥ית לָ֛ךְ גֹּאֵ֖ל הַיּ֑וֹם 1 ಈ ಮಾತನ್ನು ಸಕರಾತ್ಮಕವಾಗಿ ಹೇಳಬಹುದು. ಪರ್ಯಾಯ ಅನುವಾದ : "ಈ ದಿನದಂದು ನಿನ್ನನ್ನು ಉಜ್ಜೀವಿಸುವದಕ್ಕೆ ಸಮೀಪ ಬಂಧುವನ್ನು ಕೊಟ್ಟವನನ್ನು" (ನೋಡಿರಿ: [[rc://*/ta/man/translate/figs-doublenegatives]])
|
|||
|
4:14 p8p3 וְיִקָּרֵ֥א שְׁמ֖וֹ 1 ಇದು ಆಶೀರ್ವಾದವೇ, ನೊವೊಮಿಯ ಮೊಮ್ಮಗನು ಒಳ್ಳೆಯವನಾಗಿ, ಹೆಸರುವಾಸಿಯಾಗುವನೆಂದು (ಖ್ಯಾತಿಯನ್ನು ಪಡೆಯುವನೆಂದು) ಸ್ತ್ರೀಯರ ಆಸೆಯನ್ನು ತಿಳಿಯಪಡಿಸುವ ಆಶೀರ್ವಾದವಾಗಿರುತ್ತದೆ. ಆಶೀರ್ವಾದ ಕೊಡುವ ವಿಧಾನವನ್ನು ನಿಮ್ಮ ಭಾಷೆಯಲ್ಲಿ ಉಪಯೋಗಿಸಿರಿ.
|
|||
|
4:15 hz3e לְמֵשִׁ֣יב נֶ֔פֶשׁ 1 ಈ ಮೊಮ್ಮಗನನ್ನು ಹೊಂದಿಕೊಂಡಿರುವುದಕ್ಕೆ ನೊವೊಮಿಯ ಜೀವನದಲ್ಲಿ ಆಕೆ ತಿರುಗಿ ಸಂತೋಷವನ್ನು ಮತ್ತು ನಿರೀಕ್ಷೆಯನ್ನು ಯಾವರೀತಿ ಅನುಭವಿಸುತ್ತಿದ್ದಾಳೆಂದು ಈ ಮಾತು ನಮಗೆ ತಿಳಿಯಪಡಿಸುತ್ತಿದೆ. ಪರ್ಯಾಯ ಅನುವಾದ : "ನಿನಗೆ ತಿರುಗಿ ಆನಂದವನ್ನು ತೆಗೆದುಕೊಂಡು ಬಂದವನು" ಅಥವಾ "ನೀನು ಮತ್ತೇ ಬಲವುಳ್ಳವಳೆಂದು ಭಾವಿಸುವಂತೆ ಮಾಢುವವನು"
|
|||
|
4:15 z5lw וּלְכַלְכֵּ֖ל אֶת־שֵׂיבָתֵ֑ךְ 1 **ನೀನು ವೃದ್ಧಳಾದಾಗ ದೇವರು ನಿನ್ನ ಜೊತೆಯಲ್ಲಿದ್ದು ಚೆನ್ನಾಗಿ ನೋಡಿಕೊಳ್ಳುವನು.**
|
|||
|
4:15 ab48 כִּ֣י 1 **ನಮಗಿದು ಗೊತ್ತು ಯಾಕಂದರೆ** ಸ್ತ್ರೀಯರು ಅವನ ಒಳ್ಳೇಯ ತನದಲ್ಲಿ ಇಟ್ಟುಕೊಂಡಿರುವ ಭರವಸೆಯಕ್ಕೋಸ್ಕರ ಹೇಳುವ ಕಾರಣದೊಂದಿಗೆ (ರೂತಳು ಅವನನ್ನು ಹೊತ್ತುಕೊಂಡಿದ್ದಾಳೆ) ತಿಳಿಸುವ ಶಬ್ದವನ್ನಾಗಲಿ ಅಥವಾ ಒಂದು ವಾಕ್ಯವನ್ನಾಗಲಿ ಇಲ್ಲಿ ಉಪಯೋಗಿಸಿರಿ. ಇದು ಇನ್ನೂ ಹೆಚ್ಚಾದ ಅರ್ಥವನ್ನು ಕೊಡುವುದಾದರೆ, ಮೊದಲು ಕಾರಣವನ್ನು ಹೇಳಿ, ಆದನಂತರ ಯುಎಸ್‌ಟಿಯಲ್ಲಿರುವ ಕ್ರಮವನ್ನು ಅನುಸರಿಸಿರಿ.
|
|||
|
4:15 rpc3 ט֣וֹבָה לָ֔ךְ מִשִּׁבְעָ֖ה בָּנִֽים 1 **ಏಳು** ಎನ್ನುವ ಶಬ್ದವು ಪರಿಪೂರ್ಣತೆಯ ಸಂಪೂರ್ಣತ್ವದ ಆಲೋಚನೆಯನ್ನು ತೋರಿಸುತ್ತಿದೆ. ನೊವೊಮಿಯ ಗಂಡು ಮಕ್ಕಳು ತೀರಿಕೊಂಡಿರುವದರಿಂದ ಆಕೆಗೆ ಅವರಿಂದ ಮೊಮ್ಮೊಕ್ಕಳನ್ನು ಪಡೆದುಕೊಳ್ಳದ ಸಂದರ್ಭದಲ್ಲಿ ಬೋವಜ ಮೂಲಕ ನೊವೊಮಿಗೆ ಮೊಮ್ಮೊಗನನ್ನು ಕೊಡುವುದರ ಮೂಲಕ ರೂತಳು ನೊವೊಮಿಗೆ ಯಾವರೀತಿ ಕೊಡಲ್ಪಟ್ಟಿದ್ದಾಳೆನ್ನುವುದಕ್ಕೆ ರೂತಳನ್ನು ಹೊಗಳುವ ವಿಧಾನವಿದಾಗಿರುತ್ತದೆ. ಪರ್ಯಾಯ ಅನುವಾದ : "ನನ್ನ ಯಾವುದೇ ಮಗನಿಗಿಂತ ನೀನು ಉತ್ತಮ" ಅಥವಾ "ಅನೇಕ ಗಂಡು ಮಕ್ಕಳಿಗಿಂತ ನೀನು ಎಷ್ಟೊಂದೋ ಯೋಗ್ಯಳು" (ನೋಡಿರಿ: [[rc://*/ta/man/translate/figs-idiom]])
|
|||
|
4:16 k1w4 וַתִּקַּ֨ח נָעֳמִ֤י אֶת־הַיֶּ֨לֶד֙ 1 **ನೊವೊಮಿ ಆ ಮಗನನ್ನು ಉಡಿಲಲ್ಲಿಟ್ಟುಕೊಂಡಳು** ಈ ಮಾತು ನೊವೊಮಿಯು ಮಗುವನ್ನು ಎತ್ತಿಕೊಂಡಳು ಎಂಬುದಾಗಿ ಸೂಚಿಸುತ್ತದೆ. ನೊವೊಮಿಯು ರೂತಳಿಂದ ಕಸಕೊಂಡಳು ಎನ್ನುವ ಅರ್ಥವು ಬರದಂತೆ ನೋಡಿಕೊಳ್ಳಿರಿ.
|
|||
|
4:16 ab49 וַתְּהִי־ל֖וֹ לְאֹמֶֽנֶת׃ 1 **ಆ ಮಗುವನ್ನು ಚೆನ್ನಾಗಿ ನೋಡಿಕೊಂಡಳು**
|
|||
|
4:17 ab50 וַתִּקְרֶאנָה֩ ל֨וֹ הַשְּׁכֵנ֥וֹת שֵׁם֙ & וַתִּקְרֶ֤אנָֽה שְׁמוֹ֙ עוֹבֵ֔ד 1 ಮೊದಲ ವಾಕ್ಯವು ಹೆಸರಿಡುವ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ. ಮತ್ತು ಎರಡನೇ ವಾಕ್ಯವು ಆ ಕಾರ್ಯಕ್ರಮವನ್ನು ತಿಳಿಸುವ ವಿಧಾನದಲ್ಲಿ ಪುನರಾವರ್ತನೆಗೊಳಿಸುತ್ತದೆ. ಇದು ಒಂದುವೇಳೆ ಗೊಂದಲಪಡಿಸಿದರೆ, ಎರಡು ವಾಕ್ಯಗಳನ್ನು ಬೆರೆತುಗೊಳಿಸಿ ಒಂದೇ ವಾಕ್ಯವನ್ನಾಗಿ ಮಾಡಬಹುದು. **ನೆರೆಹೊರೆಯ ಸ್ತ್ರೀಯರು ಬಂದು ಅ ಮಗುವಿಗೆ ಓಬೇದ ಎಂದು ಹೆಸರಿಟ್ಟರು** ಅಥವಾ **ನೆರೆಹೊರೆಯ ಸ್ತ್ರೀಯರು ಬಂದು … ಒಬೇದ ಎಂದು ಆ ಮಗುವಿಗೆ ಹೆಸರಿಟ್ಟರು.**
|
|||
|
4:17 fkf2 יֻלַּד־בֵּ֖ן לְנָעֳמִ֑י 1 **ಈ ಸಂಘಟನೆಯು ನೊವೊಮಿಯು ಮತ್ತೊಂದುಬಾರಿ ಗಂಡು ಮಗುವನ್ನು ಹಡೆದಳೆನ್ನುವಂತೆ ಇದ್ದಿತ್ತು.** ಈ ಮಗುವು ನೊವೊಮಿಯ ಮೊಮ್ಮೊಗನಾಗಿದ್ದನೆಂದು ನಾವು ಅರ್ಥ ಮಾಡಿಕೊಳ್ಳಬಹುದು, ಆದರೆ ನೊವೊಮಿಗೆ ಹುಟ್ಟಿದ ಬೌತಿಕ ಮಗನಲ್ಲ. ಆದರೆ, ನೊವೊಮಿ ಮತ್ತು ರೂತಳ ಕುಟುಂಬದ ಹೆಸರನ್ನು ನಿಲ್ಲಿಸುವ ಮಗುವಾಗಿರುತ್ತಾನೆ.
|
|||
|
4:17 ab51 ה֥וּא אֲבִי־יִשַׁ֖י 1 **ಸ್ವಲ್ಪ ಕಾಲದನಂತರ, ಅವನು ಇಷಯನಿಗೆ ತಂದೆಯಾದನು.** ಒಬೇದ, ಇಷಯ ಮತ್ತು ದಾವೀದ ಹುಟ್ಟುಗಳ ಮಧ್ಯೆದಲ್ಲಿ ಎಷ್ಟೊಂದು ವರ್ಷಗಳು ಹಾದು ಹೋಗಿವೆಯೆಂದು ಸ್ಪಷ್ಟವಾಗಿ ಹೇಳುವ ಅವಶ್ಯಕತೆಯಿದೆ.
|
|||
|
4:17 f9ha אֲבִ֥י דָוִֽד 1 **ಅರಸನಾದ ದಾವೀದನ ತಂದೆ**. **ಅರಸ** ಎಂಬುದಾಗಿ ಹೇಳದೇ ಇದ್ದರೂ, ಈ ದಾವೀದನು ಅರಸನಾದ ದಾವೀದನಾಗಿದ್ದನೆಂದು ಮೂಲ ಪುರುಷರಿಗೆ ಸ್ಪಷ್ಟವಾಗಿ ಹೇಳಲ್ಪಟ್ಟಿತ್ತು. (ನೋಡಿರಿ: [[rc://*/ta/man/translate/figs-explicit]])
|
|||
|
4:18 mzm1 תּוֹלְד֣וֹת פָּ֔רֶץ 1 **ಪೆರೆಚನಿಂದ ಆರಂಭವಾಗುವ ನಮ್ಮ ಕುಲದ ಅನುಕ್ರಮ ವಂಶಸ್ಥರು.** ಯಾಕಂದರೆ ಪೆರೆಚನು ಯೆಹೂದ್ಯನ ಮಗನಾಗಿದ್ದನೆಂದು ಮುಂಚಿತವಾಗಿ ಹೇಳಲ್ಪಟ್ಟಿದೆ, ಇಲ್ಲಿ ಪೆರೆಚನಿಂದ ಬಂದಿರುವ ಕುಟುಂಬಸ್ಥರ ಪಟ್ಟಿಯನ್ನು ಮಾಡುವುದರಲ್ಲಿ ಲೇಖಕರು ಮುಂದೆವರಿಯುತ್ತಿದ್ದಾರೆ. 17ನೇ ವಚನವು ನೊವೊಮಿ ಮತ್ತು ರೂತಳ ಕಥೆಯ ಮುಕ್ತಾಯವಾಗಿರುತ್ತದೆ, ಮತ್ತು ಎಫ್ರಾತ ವಂಶಸ್ಥರ ಕುಟುಂಬದ ಪಟ್ಟಿಯ ಕೊನೆಯ ಭಾಗವು 18ನೇ ವಚನದಲ್ಲಿ ಆರಂಭವಾಗುತ್ತದೆ, ಅರಸನಾದ ದಾವೀದನಿಗೆ ಒಬೇದನು ಅಜ್ಜನಾಗಿರುವು ಎಷ್ಟು ಪ್ರಾಮುಖ್ಯವೋ ಈ ವಾಕ್ಯಭಾಗವು ಹೇಳುತ್ತಿದೆ. ಇದು ಹೊಸ ಭಾಗವೆಂದು ಓದುಗಾರರು ಅರ್ಥಮಾಡಿಕೊಳ್ಳುವುದಕ್ಕೆ ಬೇರೊಂದು ವಾಕ್ಯವನ್ನು ಉಪಯೋಗಿಸಿರಿ. ಈ ಕಥೆಯು ನಡೆದಿರುವ ಕಾಲಾವಧಿಕ್ಕಿಂತಲೂ ಮುಂದಿನ ಸಮಯವನ್ನು ಈ ವಚನವು ಸೂಚಿಸುತ್ತಿದೆಯೆಂದು ನೀವು ಸ್ಪಷ್ಟವಾಗಿ ಹೇಳಬೇಕಾದ ಅವಶ್ಯಕತೆಯಿದೆ.
|
|||
|
4:19 rl3k וְחֶצְרוֹן֙ & עַמִּֽינָדָֽב׃ 1 ಈ ಹೆಸರುಗಳ ರೂಪಗಳು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾಗಿ ಇರುವಂಥೆ ನೋಡಿಕೊಳ್ಳಿರಿ. (ನೋಡಿರಿ: [[rc://*/ta/man/translate/translate-names]])
|
|||
|
4:22 abcd דָּוִֽד 1 **ಅರಸನಾದ ದಾವೀದ.** [4:17](../04/17/f9ha). ರಲ್ಲಿ **ದಾವೀದ** ಕುರಿತಾಗಿರುವ ಸೂಚನೆಯನ್ನು ನೋಡಿರಿ (ನೋಡಿರಿ: [[rc://*/ta/man/translate/figs-explicit]])
|