ಸತ್ಯವೇದದಲ್ಲಿನ ಕಾವ್ಯ ಪ್ರತಿಮೆಗಳು /ಉದಾಹರಣೆಗಳು ಮಾನವನಿರ್ಮಿತ ವಸ್ತುಗಳು/ವಿಷಯಗಳು ಈ ಕೆಳಗಿನಂತೆ ಅಕ್ಷರಾನುಕ್ರಮವಾಗಿ ಪಟ್ಟಿ ಮಾಡಲಾಗಿದೆ. ಇಲ್ಲಿ ದೊಡ್ಡ ಅಕ್ಷರಗಳಲ್ಲಿ ನಮೂದಿಸಿರುವ ಪದಗಳು ಒಂದೊಂದು ಚಿತ್ರಣವನ್ನು ಪ್ರತಿನಿಧಿಸುತ್ತದೆ. “ಕಾವ್ಯ ಪ್ರತಿಮೆ“ ಅಥವಾ “ಉದಾಹರಣೆ“ ಯ ಪದಗಳು ಎಲ್ಲಾ ವಾಕ್ಯಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಅದರ ಅರ್ಥ ಅಥವಾ ಭಾವ ಅದರಲ್ಲಿರುತ್ತದೆ. #### BRONZE (ಕಂಚು) ಶಕ್ತಿ, ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. >ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಬಾಗಿಸಬಲ್ಲೆ, ಉಪಯೋಗಿಸಬಲ್ಲೆ. bronze. (ದಾ.ಕೀ. 18:34 ULB) #### CHAINS (ಸರಪಣಿ) ಬಂಧನವನ್ನು, ನಿಯಂತ್ರಣವನ್ನು ಪ್ರತಿನಿಧಿಸುತ್ತದೆ. >ಅವರು ಹಾಕಿದ ಬಂಧನಗಳನ್ನು ಕಿತ್ತು, ಬೇಡಿಗಳನ್ನು sಮುರಿದು ಬಿಸಾಡೋಣ. ಬಂಧನದ ಸರಪಣಿಗಳು . ದಾ.ಕೀ. 2:3 #### CLOTHING (ವಸ್ತ್ರಗಳು) ವಸ್ತ್ರಗಳು ನೈತಿಕ ಗುಣಗಳನ್ನು ಪ್ರತಿನಿಧಿಸುತ್ತದೆ. (ಭಾವನೆಗಳು, ಮನೋಧೋರಣೆಗಳು, ಪವಿತ್ರಾತ್ಮ, ಜೀವನ) >ನನ್ನ ಮೇಲೆ ನಡುಕಟ್ಟಿನಂತಹ ಕಟ್ಟನ್ನು ಬಿಗಿದು ಬಲವನ್ನು ಸಾಮರ್ಥ್ಯವನ್ನು ತುಂಬಿದ್ದಾನೆ ದೇವರು. ನಡುಕಟ್ಟು. (ದಾ.ಕೀ. 18:32 ULB)
ನೈತಿಕತೆ ಎಂಬುದನ್ನು ಕಾರ್ಯವೆಂಬ ನಡುಕಟ್ಟಿನಿಂದ ಬಿಗಿದು ನನ್ನ ಮಾರ್ಗವನ್ನು ಸರಾಗಮಾಡುವನು. . (ಯೆಶಾಯ 11:5 ULB)
>ಅವಮಾನವೇ ನನ್ನ ವಿರುದ್ಧವಾಗಿ ಸಲಹೆ ನೀಡುವವರ ವಸ್ತ್ರವಾಗಲಿ ; ಅವರು ನಾಚಿಕೆ ಎಂಬ ಉಡುಪನ್ನು ಅವರು ಧರಿಸಲಿ ; (ದಾ.ಕೀ. 109:29 ULB)
ನಾನುಆತನ ಶತ್ರುಗಳನ್ನು ನಾಚಿಕೆ ಎಂಬ ವಸ್ತ್ರದಿಂದ ಹೊದಿಸುವೆನು . (ದಾ.ಕೀ. 132:18 ULB)
####ಒಂದು ಬಲೆ /ಜೀರುಗುಣಿಕೆ (ಪಕ್ಷಿಗಳನ್ನು ಬಲೆಬೀಸಿ ಹಿಡಿಯುವ ಸಣ್ಣ ಎಳೆಯ ಬಲೆಗಳು) ಮರಣವನ್ನು ಪ್ರತಿನಿಧಿಸುತ್ತದೆ. >ನಿನ್ನನ್ನು ಬೇಟೆಗಾರನ ಬಲೆಯಿಂದಲೂ, ಮರಣಕರ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ, (ದಾ.ಕೀ. 91:3 ULB)
ಮರಣಕರವಾದ ಬಲೆ ನನ್ನನ್ನು ಆವರಿಸಿದೆ ಮತ್ತು ಆ ಬಲೆಗಳು ನನ್ನನ್ನು ಮರಣಪಾಶದಂತೆ ಎದುರಿಸಿ ಮರಣಭಯಕ್ಕೆ ಗುರಿಮಾಡಿದೆ. (ದಾ.ಕೀ. 116:3 ULB)
>ಕುತಂತ್ರದ ಬಲೆಗಳು ನನ್ನನ್ನು ಬಂಧಿಸಿ ಎದುರಿಸುತ್ತಿದೆ. (ದಾ.ಕೀ. 119:61 ULB)
ದುಷ್ಟರ ಪಾಷಗಳು ನನ್ನನ್ನು ಸುತ್ತಿಕೊಂಡವು . (ದಾ.ಕೀ. 119:110 ULB)
>ದುಷ್ಟರು ಬಲೆಯೊಡ್ಡಿದ್ದಾರೆ ನಾನು ನಿನ್ನ ನಿಯಮಗಳನ್ನು ತಪ್ಪಿಹೋಗುವುದಿಲ್ಲ. (ದಾ.ಕೀ 9:16 ULB) ಅವರು ದೇವರನ್ನು ಅಲಕ್ಷ್ಯ ಮಾಡಿ ಇತರ ಜನಾಂಗಗಳೊಂದಿಗೆ ಬೆರೆತಿದ್ದಾರೆ. ಅನ್ಯ ಜನಾಂಗದವರ ಮೂರ್ತಿಗಳನ್ನು, ವಿಗ್ರಹಗಳನ್ನು ಪೂಜಿಸಿ ಅದರ ಪೂಜಾ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅವರ ಕುಯುಕ್ತಿ ಬಲೆಗಳಲ್ಲಿ ಸಿಕ್ಕಿಕೊಂಡಿದ್ದಾರೆ. (ದಾ.ಕೀ 106:35-36 ULB) ಅವರೊಡನೆ ಸೇರಿಕೊಂಡು ಅವರ ದುರಾಚಾರಗಳನ್ನು ಕಲಿತುಕೊಂಡು ಅವರ ವಿಗ್ರಹಗಳನ್ನು ಪೂಜಿಸಿದರು., ಅವು ಅವರಿಗೆ ಉರುಳಿನಂತಾದವು. #### A TENT “ಗುಡಾರ “ ಮನೆಯನ್ನು ಪ್ರತಿನಿಧಿಸುತ್ತದೆ. ಆ ಗುಡಾರದಲ್ಲಿ ನಿವಾಸಿಗಳಾಗಿ ವಾಸಿಸುವರು. >ಅದರಂತೆ ದೇವರು ಎನ್ನನ್ನು ಎಂದಿಗೂ ಏಳದಂತೆ ಕೆಡವಿ ಬಿಡುವನು, ನಿನ್ನನ್ನು ಹಿಡಿದು ಆ ನಿವಾಸದಿಂದ ಕಿತ್ತು ಬಿಸಾಡುವನು. (ದಾ.ಕೀ. 52:5 ULB)
ದುಷ್ಟರಮನೆ ನಾಶವಾಗುವುದು, ಶಿಷ್ಟರಮನೆ / ಗುಡಾರವು ಏಳಿಗೆಯಾಗುವುದು. (ಜ್ಞಾನೋಕ್ತಿ 14:11 ULB)
>ಸಿಂಹಾಸನವು ಕೃಪಾಧಾರದ ಮೇಲೆ, ವಿಶ್ವಾಸ ಪೂರ್ಣ ಒಡಂಬಡಿಕೆಯಿಂದ ಸ್ಥಾಪಿತವಾಗಿದೆ. ಧರ್ಮಾಸಕ್ತನು ನ್ಯಾಯನಿಪುಣನು, ಆದವನು ದಾವೀದನ ಗುಡಾರದಲ್ಲಿನ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತುಕೊಳ್ಳುವನು. (ಯೆಶಾಯ 16:5 ULB)