### ಬರಹದ ಬಗ್ಗೆ ಇರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳು. ಒಂದು ಭಾಷೆಯಲ್ಲಿ ಬರವಣಿಗೆ ಆದ ಮೇಲೆ ಭಾಷಾಂತರಕಾರ ಬರಹವಿರುವ ಭಾಷೆಗಳಲ್ಲಿ ಮುಖ್ಯ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ನಿರ್ಧರಿಸಬೇಕು. ಸ್ಥಳೀಯ ಭಾಷೆಯ ಬರಹಗಳನ್ನು ಭಾಷಾಂತರ ಮಾಡುವವರಿಗೆ ಈ ರೀತಿಯ ಪ್ರಶ್ನೆಗಳು ವಿಶಾಲವಾದ ಸಮುದಾಯದ ಅರ್ಥಗ್ರಹಣೆಯನ್ನು, ಪ್ರಾಥಮಿಕವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಒದಗಿಸಿಕೊಡುತ್ತದೆ. ಇದರಿಂದ ಭಾಷಾಂತರ ವಿಷಯದಲ್ಲಿರುವ ಲೇಖನ ಚಿಹ್ನೆಗಳು, ಕಾಗುಣಿತ ಮತ್ತು ಸತ್ಯವೇದದಲ್ಲಿನ ಹೆಸರುಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ. ಭಾಷಾಂತರ ಸಮಿತಿ ಮತ್ತು ಸಮುದಾಯವು ಇದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಒಮ್ಮತದಿಂದ ಸಮ್ಮತಿಸಬೇಕು. * ನಿಮ್ಮ ಭಾಷೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಮಾತುಗಳನ್ನು ಮುಖ್ಯ ಅಂಶವಾಗಿ ಹೇಳುವ ವ್ಯವಸ್ಥೆ ಇದೆಯೇ ? ಇದನ್ನು ಹೇಗೆ ತೋರಿಸಬಲ್ಲಿರಿ ? * ವಾಕ್ಯಗಳ ಸಂಖ್ಯೆಯನ್ನು ಹೇಳಲು,ಹೇಳಿಕೆಯ ವಾಕ್ಯಗಳನ್ನು ಮತ್ತು ಹಳೇ ಒಡಂಬಡಿಕೆ ಹೇಳಿಕೆಯ ವಾಕ್ಯ ಗಳನ್ನು ಸೂಚಿಸಲು ಯಾವ ಮಾರ್ಗದರ್ಶನವನ್ನು ಅನುಸರಿಸುವಿರಿ. (ನೀವು ರಾಷ್ಟ್ರೀಯ ಭಾಷೆಯ ಶೈಲಿಯನ್ನು ಅನುಸರಿಸುತ್ತಿರುವಿರಾ ? ನಿಮ್ಮ ಭಾಷೆಯಲ್ಲಿ ಯಾವ ವಿಭಿನ್ನತೆಗಳನ್ನು ಉಪಯೋಗಿಸಲು ನಿರ್ಧರಿಸುವಿರಿ?) * ಸತ್ಯವೇದದಲ್ಲಿನ ಹೆಸರುಗಳನ್ನು ಬರೆಯಲು ಯಾವ ರೀತಿ ಮಾರ್ಗದರ್ಶನವನ್ನು ಅನುಸರಿಸುವಿರಿ? ರಾಷ್ಟ್ರೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿನ ಹೆಸರುಗಳನ್ನು ನೀವು ಉಪಯೋಗಿಸುತ್ತಿರುವಿರಾ ? ನಿಮ್ಮ ಸ್ವಂತ ಭಾಷೆಯಲ್ಲಿ ಸತ್ಯವೇದದಲ್ಲಿನ ಹೆಸರುಗಳನ್ನುಹೇಗೆ ಉಚ್ಛರಿಸಬೇಕು, ಅವುಗಳಿಗೆ ಜೊತೆಸೇರಿಸಿದ ಶೀರ್ಷಿಕೆಗಳನ್ನು ಬಳಸಲು ಮಾರ್ಗದರ್ಶನ ನಮ್ಮಲ್ಲಿ ಇದೆಯೇ ? (ಇಂತಹ ನಿರ್ಧಾರಗಳು ಸಮುದಾಯದಿಂದ ಸಮ್ಮತಿ ಹೊಂದಿದೆಯೇ ?) * ನೀವು ಕಾಗುಣಿತದ ವಿಧಿನಿಯಮಗಳ ಬಗ್ಗೆ ನೀವು ನಿಮ್ಮ ಭಾಷೆಯಲ್ಲಿ ಟಿಪ್ಪಣಿ ಮಾಡಿದ್ದೀರಾ ? ಇವುಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬೇಕು, ಇಲ್ಲಿ ಒಂದು ಪದ ಅಥವಾ ಎರಡು ಪದಗಳು ಜೊತೆಯಾಗುವಾಗ ಯಾವ ಪದ ಬದಲಾಗುತ್ತದೆ ಎಂದು ಗಮನಿಸಬೇಕು. (ಈ ನಿಯಮಗಳು ಸಮುದಾಯದಲ್ಲಿ ಸ್ವೀಕೃತವಾಗಿದೆಯೇ ?)