### ವಿವರಣೆ ಸಾಮಾನ್ಯವಾಗಿ ಯಾವುದಾದರೂ ಮಾಹಿತಿಯನ್ನು ನೀಡುವಾಗ ನಿರೂಪಣಾ ವಾಕ್ಯಗಳ ಮೂಲಕ ನೀಡಲಾಗುತ್ತದೆ. ಆದರೆ ಬೈಬಲ್ ನಲ್ಲಿ / ಸತ್ಯವೇದದಲ್ಲಿ ಇದನ್ನು ಬೇರೆ ಉದ್ದೇಶಗಳಿಗೂ ಬಳಸಲಾಗುವುದು. ### ಇದಕ್ಕೆ ಭಾಷಾಂತರದ ಪ್ರಕರಣಗಳೇ ಕಾರಣ. ಕೆಲವು ಭಾಷೆಯಲ್ಲಿ ಇಂತಹ ಹೇಳಿಕೆ / ಸತ್ಯವೇದದಲ್ಲಿ ಕೆಲವು ವಿಚಾರಗಳಿಗೆ ಬಳಸದೇ ಇರಬಹುದು. ### ಸತ್ಯವೇದದಲ್ಲಿನ ಉದಾಹರಣೆಗಳು. ಹೇಳಿಕೆ ಸಾಮಾನ್ಯವಾಗಿ **ಮಾಹಿತಿ**. ನೀಡುವುದಕ್ಕಾಗಿ ಬಳಸಲಾಗುತ್ತದೆ. ಯೋಹಾನ 1:6-8 ರಲ್ಲಿರುವಂತೆ ಈ ಕೆಳಗೆ ನೀಡಿರುವ ವಾಕ್ಯಗಳೆಲ್ಲವೂ ಮಾಹಿತಿಯನ್ನು ನೀಡುವ ವಾಕ್ಯಗಳಾಗಿವೆ. >ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು, ಅವನ ಹೆಸರು ಯೋಹಾನ. ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕೆ ಬಂದನು. ಅವನ ಮೂಲಕ ಎಲ್ಲರೂ ನಂಬುವವರಾದರು. ಯೋಹಾನನೇ ಆ ಬೆಳಕಲ್ಲ, ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕಾಗಿ ಬಂದವನು. (ಯೋಹಾನ 1:6-8 ULB) ಕೆಲವೊಮ್ಮೆ ಇಂತಹ ವಾಕ್ಯಗಳು **ಆಜ್ಞಾವಾಕ್ಯ** ಗಳಾಗಿ ಕೆಲವರಿಗೆ ಏನು ಮಾಡಬೇಕು ಎಂಬುದುನ್ನು ಸೂಚಿಸುವಂತದ್ದು. ಈ ಕೆಳಗಿನ ಉದಾಹರಣೆಗಳಲ್ಲಿ ದೇವಾಲಯದ ಯಾಜಕನು ಕೆಲವು ನಿರೂಪಣಾವಾಕ್ಯಗಳನ್ನು "ಕ್ರಿಯಾಪದ" ಗಳನ್ನು ಬಳಸಿ ಜನರು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದ. >ಅವನು ಆಜ್ಞಾಪೂರ್ವಕವಾಗಿ " ನೀವು ಇಂತಹದ್ದನ್ನೇ", ಹೀಗೆ ಮಾಡಲೇಬೇಕು ಎಂಬುದನ್ನು ತಿಳಿಸುವನು. ಅವರಿಗೆ ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು, ಇನ್ನೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು (2 ನೇ ಅರಸುಗಳು 11:5 ULB) ಕೆಲವೊಮ್ಮೆ ಈ ಹೇಳಿಕೆಗಳು **ಆಜ್ಞೆ /ಆದೇಶ**. ನೀಡುವ ವಾಕ್ಯಗಳಾಗಿರಬಹುದು. ಕೆಳಗೆ ನೀಡಿರುವ ವಾಕ್ಯಗಳಲ್ಲಿ ಯೋಸೆಫನೊಂದಿಗೆ ಮಾತನಾಡುವವ ಯೋಸೆಫನಿಗೆ ಮುಂಬರುವ ದಿನಗಳಲ್ಲಿ ಅವನು ಏನು ಮಾಡಬೇಕೆಂದು ಹೇಳುವುದರೊಂದಿಗೆ ಯೋಸೆಫನು ಏನು ಮಾಡಲೇಬೇಕು ಎಂದು ಹೇಳುತ್ತಾನೆ. >ಆಕೆಯು ಒಬ್ಬ ಮಗನನ್ನು ಹಡೆಯುವಳು, ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. (ಮತ್ತಾಯ 1:21 ULB) ಕೆಲವೊಮ್ಮೆ ಹೇಳಿಕೆಗಳು **ವಿನಂತಿಸುವ, ಬೇಡಿಕೊಳ್ಳವ, ಕೋರಿಕೆ**. ಸಲ್ಲಿಸುವ ವಾಕ್ಯಗಳಾಗಿ ಇರಬಹುದು. ಕುಷ್ಠರೋಗ ಇದ್ದ ಮನುಷ್ಯನು ಅವನನ್ನು ಶುದ್ಧ ಮಾಡಬಲ್ಲ ಎಂದು ಮಾತ್ರ ಹೇಳಲಿಲ್ಲ. ಅವನು ಯೇಸುವನ್ನು ತನ್ನನ್ನು ಶುದ್ಧಮಾಡಲು ಬೇಡಿಕೊಂಡ. ಅವನು ಯೇಸುವನ್ನು ಕುರಿತು "ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ, ನನ್ನನ್ನು ಶುದ್ಧಮಾಡು ಎಂದು ಪ್ರಾರ್ಥಿಸಿದ." (ಮತ್ತಾಯ 8:2 ULB) ಈ ವಾಕ್ಯಗಳು ಕೆಲವೊಮ್ಮೆ **ನಿರ್ವಹಿಸು** ಎಂಬ ಅರ್ಥದ ವಾಕ್ಯಗಳಾಗಿರಬಹುದು. " ನಿನ್ನ ನಿಮಿತ್ತ ಭೂಮಿಗೆ ಶಾಪಬಂತು" ಎಂದು ಆದಾಮನಿಗೆ ದೇವರು ದಂಡನಾ ವಾಕ್ಯ ನೀಡಿದನು >.... ನಿನ್ನ ನಿಮಿತ್ತ ಭೂಮಿಗೆ ಶಾಪಬಂತು, (ಆದಿಕಾಂಡ 3:17 ULB) "ನಿನ್ನ ಪಾಪವು ಕ್ಷಮಿಸಲ್ಪಟ್ಟಿದೆ.ಎಂದು ಯೇಸು ಆ ಮನುಷ್ಯನ ಪಾಪಗಳನ್ನು ಕ್ಷಮಿಸಿದನು. >ಅವರ ನಂಬಿಕೆಯನ್ನು ನೋಡಿದ ಯೇಸು ಆ ಪಾರ್ಶ್ವವಾಯು ರೋಗಿಯನ್ನು ನೋಡಿ "ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ." (ಲೂಕ 2:5 ULB)ಅಂದನು ### ಅನುವಾದ / ಭಾಷಾಂತರದ ತಂತ್ರಗಳು. 1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. 1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. 1. ನಿರೂಪಣಾವಾಕ್ಯಗಳ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದದ ರೂಪವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು. ###ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು. 1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು. * **ಆಕೆಯು ಒಬ್ಬ ಮಗನನ್ನು ಹಡೆಯುವಳು ಮತ್ತು , ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು** ಅಂದನು. (ಮತ್ತಾಯ 1:21 ULB)" ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು" ಎಂಬ ವಾಕ್ಯ ನಿರ್ದೇಶನ ನೀಡಿದ ವಾಕ್ಯ ಎಂಬುದನ್ನು ಸಾಮಾನ್ಯ ಆದೇಶ ನೀಡುವ ವಾಕ್ಯವಾಗಿ ಭಾಷಾಂತರ ಮಾಡಬಹುದು. * ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನಿಗೆ ಯೇಸು ಎಂದು ಹೆಸರಿಡು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ **ರಕ್ಷಿಸುವನು**. 1. ನಿರೂಪಣಾ ವಾಕ್ಯದ ಕ್ರಿಯೆಯು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಅರ್ಥವಾಗದಿದ್ದರೆ ಕ್ರಿಯೆಯನ್ನು ತಿಳಿಸುವ ವಾಕ್ಯರೂಪಕದ ನಿರೂಪಣಾವಾಕ್ಯವನ್ನು ಸೇರಿಸಬಹುದು. * **ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ .** (ಮತ್ತಾಯ 8:2 ULB) " ನೀನು ನನ್ನನ್ನು ಶುದ್ಧಮಾಡಬಲ್ಲೆ " ಎಂಬ ಕ್ರಿಯೆಯು ಬೇಡಿಕೆ, ಕೋರಿಕೆಯಲ್ಲಿದೆ. ಇಲ್ಲಿ ಈ ನಿರೂಪಣಾ ವಾಕ್ಯದಲ್ಲಿ "ಬೇಡಿಕೆ" ಕೋರಿಕೆಯನ್ನು ಸೇರಿಸಬಹುದು. * ಸ್ವಾಮಿ, ನೀನು ಮನಸ್ಸು ಮಾಡಿದರೆ "ನನ್ನನ್ನು ಪರಿಶುದ್ಧಮಾಡಬಲ್ಲೆ" ದಯವಿಟ್ಟು ಹಾಗೇ ಮಾಡು.. * ಸ್ವಾಮಿ, ನೀನು ಮನಸ್ಸು ಮಾಡಿದರೆ "ನನ್ನನ್ನು ಪರಿಶುದ್ಧಮಾಡಬಲ್ಲೆ" ನನಗೆ ಗೊತ್ತು ನೀನು ಹಾಗೆ ಮಾಡಬಲ್ಲೆ. 1. ಹೇಳಿಕೆಯ ಕಾರ್ಯವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು. * **ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆವನಿಗೆ ಯೇಸು ಎಂದು ಹೆಸರಿಡಬೇಕು ,, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು**. (ಮತ್ತಾಯ 1:21 ULB) * ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನನ್ನು ಯೇಸು ಎಂದು ಕರೆಯಬೇಕು ,, ಏಕೆಂದರೆ ಆತನೇ ಆತನ ಜನರನ್ನು ಕಾಯುವನು. * **ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.** ಲೂಕ 2:5 ULB) * ಮಗನೇ ನಾನು ನಿನ್ನಪಾಪಗಳನ್ನು ಕ್ಷಮಿಸುವೆ. * ಮಗನೇ, ದೇವರು ನಿನ್ನ ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ.