40 lines
13 KiB
Markdown
40 lines
13 KiB
Markdown
|
ಅಲಂಕಾರಗಳಿಗೆ ವಿಶೇಷ ಅರ್ಥವಿರುತ್ತದೆ. ಪ್ರತಿಯೊಂದು ಪದಗಳಿಗೆ ಇರುವಂತೆ ಇವುಗಳಿಗೆ ಅರ್ಥ ಹೇಳಲು ಬರುವುದಿಲ್ಲ. (ಮನುಷ್ಯರು ಅಲಂಕಾರ ಸಾಧನಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುವಂತೆ ಸಾಹಿತ್ಯದಲ್ಲೂ ಕೆಲವು ಪದಗಳನ್ನು ಬಳಸಿ ವಾಕ್ಯ ಸೌಂದರ್ಯವನ್ನು, ಕಾವ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ).ಇಂತಹ ಪದಗಳನ್ನು ಅಲಂಕಾರಗಳು ಎಂದು ಕರೆಯುತ್ತೇವೆ.
|
||
|
|
||
|
ಅಲಂಕಾರಗಳಲ್ಲಿ ಅನೇಕ ವಿಧಗಳಿವೆ. ಸತ್ಯವೇದದಲ್ಲಿ ಬಳಸಿರುವ ಅಲಂಕಾರಗಳನ್ನು ಈ ಪುಟದಲ್ಲಿ ಪಟ್ಟಿಮಾಡಲಾಗಿದೆ.
|
||
|
|
||
|
### ವಿವರಣೆಗಳು
|
||
|
|
||
|
ಅಲಂಕಾರಗಳು ಕಾವ್ಯಗಳಲ್ಲಿ ಬರುವ ವಿವರಗಳನ್ನು ಪದಗಳ ಮೂಲಕ ಹೇಳುವದರೊಂದಿಗೆ ಸಾಹಿತ್ಯಿಕ ಭಾಷೆಯಲ್ಲಿ ಹೇಳುತ್ತದೆ. ಆದುದರಿಂದ ಅಲಂಕಾರಗಳಲ್ಲಿರುವ ಅರ್ಥಗಳು ಪದಶಃ ಅರ್ಥಕ್ಕಿಂತ ಭಿನ್ನವಾಗಿರುತ್ತದೆ.
|
||
|
|
||
|
ವಾಕ್ಯಭಾಗಗಳ ಅರ್ಥವನ್ನು ಭಾಷಾಂತರಿಸಲು ಅಲಂಕಾರಗಳನ್ನು ಗುರುತಿಸಬೇಕು ಮತ್ತು ಮೂಲ ಭಾಷೆಯಲ್ಲಿ ಅಲಂಕಾರಗಳ ಅರ್ಥ, ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಆಗ ನೀವು ಅಲಂಕಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಇಲ್ಲವೇ ಅದೇ ಅರ್ಥ ಬರುವ ಪದಗಳನ್ನು ನಿಮ್ಮ ಭಾಷೆಯಲ್ಲಿ ತಿಳಿಸಲು ಪ್ರಯತ್ನಿಸಬಹುದು.
|
||
|
|
||
|
###ವಿಧಗಳು
|
||
|
|
||
|
ಈ ಕೆಳಗೆ ವಿವಿಧರೀತಿಯ ಅಲಂಕಾರಗಳನ್ನು ಪಟ್ಟಿಮಾಡಿ ಹೇಳಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಬಣ್ಣದ ಪದವನ್ನು ಒತ್ತಿ. ಅದು ವ್ಯಾಖ್ಯಾನ,ಉದಾಹರಣೆ ಮತ್ತು ವೀಡಿಯೋಗಳನ್ನು ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
|
||
|
|
||
|
* **[ಅಪೋಸ್ಟ್ರಫಿ](../figs-apostrophe/01.md)** -ತನ್ನ ಎದುರಿಗೆ ಇಲ್ಲದವರನ್ನು / ಇಲ್ಲದುದನ್ನು ಕಲ್ಪಿಸಿಕೊಂಡು ಮಾತನಾಡುವುದು, ಕೆಲವೊಮ್ಮೆ ಒಂದು ವಸ್ತುವಿನ ಬಗ್ಗೆ ಮಾತನಾಡುವುದು ಇದು ಇಂಗ್ಲೀಷಿನಲ್ಲಿರುವ ಅಲಂಕಾರ.
|
||
|
* **[Doublet](../figs-doublet/01.md)** -ದ್ವಿರುಕ್ತಿ ದ್ವಿರುಕ್ತಿ ಗಳು ಜೋಡಿಪದಗಳು ಅಥವಾ ಚಿಕ್ಕ ಪದಗುಚ್ಛಗಳು ಒಂದೇ ಅರ್ಥಕೊಡುವ ಎರಡು ಪದಗಳನ್ನು ಪದಗುಚ್ಛವಾಗಿ ಬಳಸಲಾಗುವುದು, ಎರಡೆರಡು ಸಾರಿ ಬಳಸಲಾಗುವುದು. ಸತ್ಯವೇದದಲ್ಲಿ ಈ ದ್ವಿರುಕ್ತಿಪದಗಳನ್ನು ಪದ್ಯಭಾಗದಲ್ಲಿ, ಪ್ರವಾದನೆಗಳಲ್ಲಿ, ದೈವಸಂದೇಶಗಳಲ್ಲಿ ಅವುಗಳ ಬಗ್ಗೆ ಹೆಚ್ಚು ಒತ್ತು ಕೊಡಲು ಬಳಸಲಾಗುತ್ತದೆ.
|
||
|
* **[ಸೌಮ್ಯೋಕ್ತಿಗಳು](../figs-euphemism/01.md)** - ಅಪ್ರಿಯವಾದ ಅಥವಾ ಅಹಿತಕರವಾದ ವಿಚಾರಗಳನ್ನು ನಯವಾದ ರೀತಿಯಲ್ಲಿ ಹೇಳಲು ಬಳಸುವ ಪದಗಳೇ ಸೌಮ್ಯೋಕ್ತಿಗಳು. ಇದರ ಉದ್ದೇಶ ಇದನ್ನು ಓದುವ / ಕೇಳುವ ಜನರಿಗೆ ಒರಟಾದ ಪದಗಳಾಗಿರದೆ, ಅವರ ಭಾವನೆಗಳಿಗೆ ಧಕ್ಕೆತರದಂತೆ ಸೌಮ್ಯವಾದ ರೀತಿಯಲ್ಲಿ ಹೇಳುವ ಪದಗಳು.
|
||
|
* **[Hendiadys](../figs-hendiadys/01.md)** -ಸಂಬಂಧಾವ್ಯಯಗಳು ಇದರಲ್ಲಿ ಒಂದೇ ವಿಚಾರವನ್ನು ಎರಡೂ ಪದಗಳಿಂದ ತಿಳಿಸುವಾಗ "ಅಂಡ್ / ಮತ್ತು "ಎಂಬ ಸಂಬಂಧವಾಚಕ ಪದವನ್ನು ಬಳಸುವುದು, ಒಂದು ಪದ ಇನ್ನೊಂದು ಪದವನ್ನು ಮಾರ್ಪಡಿಸಿ ಹೇಳಲು ಬಳಸಲಾಗುತ್ತದೆ.
|
||
|
* **[Hyperbole](../figs-hyperbole/01.md)** - "ಅತಿಶಯೋಕ್ತಿ" ಅಲಂಕಾರ. ಇದು ಯಾವುದಾದರೂ ಒಂದು ಸನ್ನಿವೇಶವನ್ನು ಅಥವಾ ಒಂದು ವಿಷಯವನ್ನು ಕುರಿತು ಅತಿಯಾಗಿ ಭಾವಿಸಿ ಗೊತ್ತಿದ್ದೂ ಉತ್ಪ್ರೇಕ್ಷಮಾಡಿ ಹೇಳುವುದು.
|
||
|
* **[ನುಡಿಗಟ್ಟು](../figs-idiom/01.md)** - ನುಡಿಗಟ್ಟು. ಇದು ಒಂದು ಪದಗಳ ಬಂಧ. ಇದುಗುಂಪಾಗಿ ವಿಶಿಷ್ಟವಾದ ಅರ್ಥವನ್ನು ಕೊಡುತ್ತದೆ.
|
||
|
* **[Irony](../figs-irony/01.md)** -ವ್ಯಂಗ್ಯೋಕ್ತಿ ಇದೊಂದು ಅಲಂಕಾರ. ಇದರಲ್ಲಿ ವ್ಯಕ್ತಿಯೊಬ್ಬ ತಾನು ತಿಳಿಸಬೇಕಾದ ವಿಚಾರವನ್ನು ನೇರವಾಗಿ ಹೇಳದೆ ಅದರ ವಿರುದ್ಧವಾದ ಅರ್ಥಬರುವಂತಹ ಪದಗಳನ್ನು ಬಳಸಿ ಹೇಳುವುದು.
|
||
|
* **[ವ್ಯಂಗ್ಯಾರ್ಥಸೂಚಕಪದ](../figs-litotes/01.md)** -ಯಾವುದಾದರೂ ಒಂದು ವಿಷಯವನ್ನು ಹೇಳುವ ಬದಲು ನಕಾರಾತ್ಮಕ, ವಿರುದ್ಧವಾದ ಅರ್ಥಬರುವ ಪದ ಬಳಸುವುದು.
|
||
|
* **[ಮೆರಿಸಂ](../figs-merism/01.md)** -ಎಂಬುದು ಒಂದು ಅಲಂಕಾರ ಇದರಲ್ಲಿ ಒಬ್ಬ ವ್ಯಕ್ತಿ ತಾನು ಮಾತನಾಡುತ್ತಿರುವ ವಿಷಯದ / ವಸ್ತುವಿನ ವಿವಿಧ ಭಾಗಗಳನ್ನು ಪಟ್ಟಿಮಾಡಿಕೊಡುವುದು ಇಲ್ಲವೇ ಅತಿ ಮುಖ್ಯವಾದ ಎರಡು ಭಾಗಗಳ ಬಗ್ಗೆ ಮಾತನಾಡುವುದು.
|
||
|
* **[ರೂಪಕ](../figs-metaphor/01.md)** -ರೂಪಕ ಅಲಂಕಾರ ಒಂದು ವಿಷಯಕ್ಕೂ ಅಥವಾ ಒಂದು ವಸ್ತುವಿಗೂ ವ್ಯಕ್ತಿಗೂ ಇನ್ನೊಂದು ವಿಷಯ, ವಸ್ತು, ವ್ಯಕ್ತಿಗೂ, ಯಾವ ವ್ಯತ್ಯಾಸವಿಲ್ಲ, ಎರಡೂ ಒಂದೇ ಎಂದು ಹೇಳುವುದು.
|
||
|
ಇದು ಓದುಗರನ್ನು ಹೇಗೆ ಬೇರೆ ಬೇರೆ ಸಂಬಂಧವಿಲ್ಲದ ವಿಷಯಗಳನ್ನು ಸಮಾನ ಎಂದು ಹೇಳಲಾಗುತ್ತದೆ. ಎಂದು ಯೋಚಿಸುವಂತೆ ಮಾಡುತ್ತದೆ.
|
||
|
ರೂಪಕ ಅಲಂಕಾರ ಸಂಬಂಧವಿಲ್ಲದ ಎರಡು ವಿಷಯ ವಸ್ತುಗಳ ನಡುವೆ ಹೋಲಿಕೆ ಮಾಡಿ ಒಂದೇ ಎಂದು ಹೇಳುವುದು.
|
||
|
* **[ಮಿಟೋನಮಿ](../figs-metonymy/01.md)** -ಮಿಟೋನಮಿ ಇದೊಂದು ಅಲಂಕಾರ ಪದ. ಈ ಪದ ಒಂದು ವಸ್ತು ಅಥವಾ ಒಂದು ವಿಷಯವನ್ನು ಹೇಳುವಾಗ ಅದರ ಮೂಲ ಹೆಸರನ್ನು ಬಿಟ್ಟು ಅದಕ್ಕೆ ಸಂಬಂಧಿಸಿದ ಹತ್ತಿರದ ಪದವನ್ನು ಬಳಸಿ ಹೇಳುವುದು.ಹೇಳಬೇಕಾದ ವಿಷಯಕ್ಕೆ ಬದಲಾಗಿ ಅದರ ಲಕ್ಷಣ ಹೇಳುವ ಪದ ಬಳಸುವುದು.
|
||
|
ಮಿಟೋನಮಿ ಒಂದು ಪದ / ಪದಗುಚ್ಛವಾಗಿ ಇನ್ನೊಂದು ಪದದ ಮೂಲಕ ಗುರುತಿಸಿ ಕೊಳ್ಳುವುದು.
|
||
|
* **[ಸಾದೃಶ್ಯತೆ](../figs-parallelism/01.md)** - ಸಾದೃಶ್ಯತೆ ಎರಡೂ ವ್ಯಕ್ತಿ, ವಸ್ತು, ವಿಷಯಗಳು ಸಮಾನಾಂತರ ಎಂದು ಹೇಳುವಂತದ್ದು. ಇಲ್ಲಿ ಎರಡು ಪದಗಳು ಅಥವಾ ಎರಡು ವಾಕ್ಯಗಳು ರಚನೆಯಲ್ಲಿ ಮತ್ತು ಕಲ್ಪನೆಯಲ್ಲಿ ಹೋಲುತ್ತವೆ,.
|
||
|
ಇಂತಹ ಪದ / ವಾಕ್ಯ ಪ್ರಯೋಗಗಳು ಹಿಬ್ರೂ ಸತ್ಯವೇದದಲ್ಲಿ ಬಂದಿವೆ.ಕಾವ್ಯಪ್ರಧಾನವಾದ ದಾವೀದ ಕೀರ್ತನೆಗಳಲ್ಲಿ ಮತ್ತು ಜ್ಞಾನೋಕ್ತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ.
|
||
|
* **[ವ್ಯಕ್ತೀಕರಣ](../figs-personification/01.md)** - “ಪರ್ ಸಾನಿಫಿಕೇಶನ್ “ ಇದೊಂದು ಅಲಂಕಾರ, ನಿರ್ಜೀವ ವಸ್ತುಗಳು,ವಿಷಯಗಳು ಇವುಗಳನ್ನು ಮನುಷ್ಯನಂತೆ ಕಲ್ಪಿಸಿ ಹೇಳುವುದು. ಇವು ಮನುಷ್ಯನಂತೆ ಕಾರ್ಯ ನಿರ್ವಹಿಸುವ ಬಗ್ಗೆ ಮನುಷ್ಯನಲ್ಲದ ವಸ್ತುವಿಗೆ ಮನುಷ್ಯನಿಗೆ ಇರುವ ಗುಣಲಕ್ಷಣಗಳನ್ನು ಕೊಟ್ಟು ಹೇಳುವುದು.
|
||
|
* **[Predictive Past](../figs-pastforfuture/01.md)** -ಇದೊಂದು ಭವಿಷ್ಯತ್ ಕಾಲದಲ್ಲಿ ನಡೆಯುವ ವಿಷಯವನ್ನು ಮೊದಲೇ ಮಾತನಾಡಿ ನಡೆದಂತೆ ಹೇಳುವುದು. ಇಂತಹ ಪ್ರಯೋಗಗಳು ಎಲ್ಲಾ ಭಾಷೆಯಲ್ಲೂ ಇರುವುದಿಲ್ಲ.ಕೆಲವು ಭಾಷೆಗಳಲ್ಲಿ ಮುಂದೆ ನಡೆಯುವ ವಿಷಯಗಳನ್ನು ಮೊದಲೇ ಮುಂದೆ ನಡದೇ ನಡೆಯುತ್ತದೆ ಎಂದು ಖಂಡಿತವಾಗಿ ಹೇಳುವುದು.
|
||
|
ಪ್ರವಾದನೆಗಳು ಇದಕ್ಕೆ ಉತ್ತಮ ಉದಾಹರಣೆಗಳು ಇವುಗಳನ್ನು ಹೇಳುವವರು ಇದು ಖಂಡಿತವಾಗಿ ನಡದೇ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.
|
||
|
* **[ವಾಕ್ಚಾತೂರ್ಯದ ಪ್ರಶ್ನೆಗಳು](../figs-rquestion/01.md)** (ರಿಟೋರಿಕ್ ಪ್ರಶ್ನೆ) ರಿಟೋರಿಕ್ ಪ್ರಶ್ನೆಗಳು ಭಾವೋತ್ತೇಜಕ ಪ್ರಶ್ನೆಗಳು. ಇವು ಮಾಹಿತಿ ಪಡೆಯುವ ಬದಲು ಬೇರೇ ಉದ್ದೇಶದಿಂದ ಕೇಳುವ ಪ್ರಶ್ನೆಗಳು.
|
||
|
ಇದನ್ನು ಪ್ರಶ್ನೆ ಕೇಳುವವನ ಮನೋಭಾವ ವಿಷಯದ ಬಗ್ಗೆ ಮತ್ತು ಶ್ರೋತೃವಿನ ಬಗ್ಗೆ ಹೇಗಿದೆ ಎಂಬುದನ್ನು ಸೂಚಿಸುತ್ತದೆ.
|
||
|
ಇಂತಹ ಮಾತುಗಳು ಸಾಮಾನ್ಯವಾಗಿ ಖಂಡಿಸಲು ಅಥವಾ ಬೈಯಲು ಉಪಯೋಗಿಸುತ್ತಾರೆ. ಆದರೆ ಬೇರೆ ಭಾಷೆಗಳಲ್ಲಿ ಇತರ ಉದ್ದೇಶಗಳಿಗೆ ಬಳಸುತ್ತಾರೆ.
|
||
|
* **[ಉಪಮೆ](../figs-simile/01.md)** -ಉಪಮಾ ಅಲಂಕಾರ. ಇದು ಎರಡು ವಸ್ತುಗಳ, ಇಬ್ಬರು ವ್ಯಕ್ತಿಗಳ ಮತ್ತು ವಿಷಯಗಳ ನಡುವಿನ ಹೋಲಿಕೆಗಳು ಸಮಾನವಾಗಿರುವಂತೆ ಸಮಾನ ಸಂಬಂಧವಾಚಕಗಳನ್ನು ಬಳಸಿ ಹೇಳುವುದು.
|
||
|
ಎರಡೂ ವಾಕ್ಯಗಳಲ್ಲಿ ಸಮಾನತೆಯನ್ನು ಸೂಚಿಸುವ ಸಮಾನವಾಚಕ ಪದಗಳು "ಅಂತೆ," "ಹಾಗೆ," ಮುಂತಾದವು ಹೋಲಿಕೆಯನ್ನು ಹೆಚ್ಚು ಪ್ರಕಟವಾಗಿ ತಿಳಿಸುತ್ತದೆ.
|
||
|
* **[Synecdoche](../figs-synecdoche/01.md)** -(ಸಿನೆಕ್ ಡೋಕಿ) ಇದೊಂದು ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಅಲಂಕಾರ ಇದರಲ್ಲಿ 1) ಒಂದು ವಿಷಯದ ವಿವರವನ್ನು ಸಂಪೂರ್ಣವಾಗಿ ತಿಳಿಸಲು ಬಳಸಬಹುದು 2) ಸಂಪೂರ್ಣ ಭಾಗವನ್ನಾಗಿ ಕೇವಲ ಒಂದೇ ಭಾಗವನ್ನು ಸೂಚಿಸಲು ಬಳಸಬಹುದು.
|