translationCore-Create-BCS_.../translate/bita-part2/01.md

76 lines
8.9 KiB
Markdown
Raw Normal View History

2022-01-17 05:41:22 +00:00
ಸತ್ಯವೇದದಲ್ಲಿನ ಕೆಲವು ಮೆಟೋನಿಮಿಸ್ ಗಳನ್ನು ಅಕ್ಷರಾನುಕ್ರಮವಾಗಿ ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ. ದೊಡ್ಡ ಅಕ್ಷರಗಳಲ್ಲಿರುವುದು ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದ ಪ್ರತಿವಾಕ್ಯದಲ್ಲೂ ಬರಬೇಕೆಂಬ ಅವಶ್ಯಕತೆ ಇಲ್ಲ, ಈ ಚಿತ್ರಣಗಳ ಉದ್ದೇಶ ಪದಗಳಲ್ಲಿ ಬಂದು ಆ ಅರ್ಥವನ್ನು ಪ್ರತಿಬಿಂಬಿಸುತ್ತದೆ.
#### ಒಂದು ಬಟ್ಟಲು ಅಥವಾ ಬೋಗುಣಿ ಅದರಲ್ಲಿ ಇರುವುದನ್ನು ಪ್ರತಿನಿಧಿಸುತ್ತದೆ.
>ನನ್ನ <u>ಬಟ್ಟಲು</u>ತುಂಬಿಹರಿಯುತ್ತದೆ. (ದಾ.ಕೀ 23:5 ULB)
ಈ ಬಟ್ಟಲಿನಲ್ಲಿರುವುದು ಹೊರಗೆ ಹರಿದು ಚೆಲ್ಲುವಷ್ಟು ತುಂಬಿದೆ.
>ಪ್ರತಿಸಲ ನೀವು ಈ ರೊಟ್ಟಿಯನ್ನು ತಿಂದು, <u>ಈ ಪಾತ್ರೆಯಲ್ಲಿ ದ್ರಾಕ್ಷಾರಸ ಪಾನಮಾಡುವಾಗೆಲ್ಲಾ </u>,ಕರ್ತನ ಮರಣವನ್ನು, ಆತನು ಬರುವ ತನಕ ಪ್ರಸಿದ್ಧಿ ಪಡಿಸುತ್ತೀರಿ. (1 ನೇ ಕೊರಿಂಥ 11:26 ULB)
ದಯವಿಟ್ಟು ಈ ಬಟ್ಟಲಿನಲ್ಲಿ ಪಾನಮಾಡಬೇಡಿ. ಅವರು ಆ ಬಟ್ಟಲಿನಲ್ಲಿ ಇರುವುದನ್ನು ಪಾನಮಾಡುತ್ತಾರೆ.
#### ಬಾಯಿಮಾತು ಅಥವಾ ಪದಗಳನ್ನು ಪ್ರತಿನಿಧಿಸುತ್ತದೆ.
>ಜ್ಞಾನಹೀನನಿಗೆ ಅವನ <u>ಬಾಯಿಂದ ಬರುವ ಮಾತೆ ಅವನನ್ನು ನಾಶಕ್ಕೆ ಗುರಿಮಾಡುತ್ತದೆ.</u> (ಜ್ಞಾನೋಕ್ತಿ 18:7 ULB)
<blockquote>ನಾನು <u>ಬಾಯಮಾತುಗಳಿಂದ ನಿಮ್ಮನ್ನು ಧೈರ್ಯಗೊಳಿಸಿ </u>!ನಿಮ್ಮ ದುಃಖವನ್ನು ಶಮನಗೊಳಿಸುತ್ತೇನೆ. (ಯೋಬಾ 16:5 ULB) </blockquote>
>ನೀನು ನನ್ನನ್ನು ದೂಷಿಸಿ <u>ನಿನ್ನ ಬಾಯಿಂದ ಮಾತನಾಡಿದ ಮಾತುಗಳನ್ನು </u>;ಕೇಳಿದ್ದೇನೆ, ನೀನು ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ. ನಾನು ಅವುಗಳನ್ನು ಕೇಳಿದ್ದೇನೆ. (ಯೆಹೆಜ್ಕೇಲ 35:13 ULB)
ಇಲ್ಲಿ ಬರುವ ಉದಾಹರಣೆ ವಾಕ್ಯಗಳಲ್ಲಿ ಬಾಯಿ ಎಂಬ ಪದ ಒಬ್ಬ ಮನುಷ್ಯನ ಮಾತನ್ನು ಪ್ರತಿನಿಧಿಸುತ್ತದೆ.
#### ಒಬ್ಬ ಮನುಷ್ಯನ ನೆನಪು ಎಂಬುದು ಅವನ ಸಂತತಿಯನ್ನು ಪ್ರತಿನಿಧಿಸುತ್ತದೆ.
ಒಬ್ಬ ವ್ಯಕ್ತಿಯ ನೆನಪು ಆತನ ಸಂತತಿಯನ್ನು ನೆನಪಿಸಿಕೊಳ್ಳುತ್ತದೆ, ಏಕೆಂದರೆ ಆ ಸಂತತಿಯವರೇ ಆತನನ್ನು ಸ್ಮರಿಸಿ ಗೌರವಿಸಬೇಕಿದೆ. ಸತ್ಯವೇದದಲ್ಲಿ ವ್ಯಕ್ತಿಯೋರ್ವನ ನೆನಪಿನ ಶಕ್ತಿ ಸತ್ತು ಹೋದರೆ (ಇಲ್ಲವಾದರೆ) ಆ ವ್ಯಕ್ತಿಗೆ ಯಾವ ಸಂತತಿಯೂ ಇಲ್ಲ.ಅಥವಾ ಆತನ ಸಂತತಿ ಇಲ್ಲವಾಗಿದೆ ಎಂದು ಅರ್ಥ.
>ನೀನು ಜನಾಂಗಗಳನ್ನು ಎದುರಿಸಿ, ಯುದ್ಧದ ಮೂಲಕ ನಾಶಮಾಡಿರುವೆ.
>ದುಷ್ಟರನ್ನು ನಾಶಮಾಡಿದ್ದೀ.
>ಅವರ ಹೆಸರಿನ ನೆನಪನ್ನು <u>ಯುಗಯುಗಾಂತರಕ್ಕೂ </u>ಅಳಿಸಿಬಿಟ್ಟಿದ್ದೀ.
>ಶತೃಗಳು ನಿಶ್ಶೇಷವಾದರೂ.
>ನೀನು ಅವರ ಊರು, ಕೋಟೆಗಳನ್ನು ಕೆಡವಿ ನಾಶಮಾಡಿದಿ.
>ಅವರ <u>ಸ್ಮರಣೆಯೇ </u>ಇಲ್ಲದಂತೆ ನಾಶಮಾಡಿರುವೆ. (ದಾ.ಕೀ. 9:5-6 ULB)
<blockquote><u>ಆತನ ಸ್ಮರಣೆಯು </u>ಭೂಮಿಯ ಮೇಲಿನಿಂದ ಅಳಿದು ಹೋಗುವುದು (ಯೋಬ 18:17 ULB) <blockquote>
>ದುಷ್ಟಕಾರ್ಯಮಾಡುವ ಕೆಡುಕರಿಗೆ ಕೋಪದಿಂದ ಶಿಕ್ಷಿಸುವನು.
>ಲೋಕದಲ್ಲಿ <u>ಅವರ ನೆನಪೇ ಉಳಿಯದಂತೆ ನಿರ್ಮೂಲ ಮಾಡುವನು </u> (ದಾ.ಕೀ 4:16 ULB)
#### ಒಬ್ಬ ವ್ಯಕ್ತಿ ಒಂದು ಗುಂಪನ್ನು ಪ್ರತಿನಿಧಿಸುತ್ತಾನೆ.
>ದುಷ್ಟನು <u>ತನ್ನ ಮನೋರಥವು </u>ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ.
>ಅವನು ಯೆಹೋವನನ್ನು ಅಲ್ಲಗೆಳೆದು ದುಷ್ಟನನ್ನೂ ಅತಿಯಾಸೆ ಉಳ್ಳವರನ್ನು ಮೆಚ್ಚುತ್ತಾನೆ, ಆಶೀರ್ವದಿಸುತ್ತಾನೆ. (ದಾ.ಕೀ. 10:3 ULB)
ಈ ವಾಕ್ಯಗಳು ನಿರ್ದಿಷ್ಟವಾಗಿ ಒಬ್ಬ ದುಷ್ಟವ್ಯಕ್ತಿಯನ್ನು ಕುರಿತು ಹೇಳಿರುವುದಲ್ಲ ಆದರೆ ಅವನಂತಹ ದುಷ್ಟಜನರನ್ನು ಕುರಿತು ಹೇಳಿರುವಂತದ್ದು.
#### ಒಬ್ಬ ವ್ಯಕ್ತಿಯ ಹೆಸರು ಆತನ ಸಂತತಿಯವರಿಗೂ ಬರುತ್ತದೆ.
>ಗಾದನು ಸುಲಿಗೆ ಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋದನು.
>ಅಶೇರನಿಗೆ ಧಾನ್ಯ ಸಮೃದ್ಧಿಯಾಗುವುದು, ಅವನಲ್ಲಿ ರಾಜಭೋಗ್ಯವಾದ ಪದಾರ್ಥಗಳು ದೊರಕುವವು.
>ನಫ್ತಾಲಿ ಬಿಡುಗಡೆಯಾದ ಜಿಂಕೆಯಂತಿದ್ದಾನೆ ಅವನಿಂದ ಇಂಪಾದ ಮಾತುಗಳು ಬರುತ್ತವೆ. (ಆದಿಕಾಂಡ 49:19-21 ULB)
ಗಾದ, ಅಶೇರ, ನಫ್ತಾಲಿಯವರ ಹೆಸರುಗಳು ಅವರಿಗೆ ಮಾತ್ರ ಸೀಮಿತವಾಗಿರದೆ ಅವರ ಸಂತತಿಯವರು ಅದರ ಪ್ರಯೋಜನಗಳನ್ನು ಪಡೆದರು.
#### ಒಬ್ಬ ವ್ಯಕ್ತಿಯ ಹೆಸರು ಆತನನ್ನು ಆತನಿಗೆ ಸೇರಿದ ಜನರನ್ನು ಪ್ರತಿನಿಧಿಸುತ್ತಾನೆ.
>ಅಬ್ರಹಾಮನು ಐಗುಪ್ತದೇಶವನ್ನು ಪ್ರವೇಶಿಸಿದಾಗ ಅಬ್ರಹಾಮನನ್ನು ಅವನ ಸಂಗಡ ಇದ್ದ ಸಾರೆಯಳನ್ನು ನೋಡಿ ಬಹು ಸುಂದರವಾಗಿದ್ದಾಳೆ ಎಂದರು. (ಆದಿಕಾಂಡ 12:14 ULB)
ಅಲ್ಲಿ ಅಬ್ರಹಾಮ ಎಂದರೆ ಅವನೊಂದಿಗೆ ಪ್ರಯಾಣಿಸುತ್ತಿದ್ದ ಎಲ್ಲರೂ ಸಂಬಂಧಪಟ್ಟವರಾದರು.
ಇಲ್ಲಿ ಅಬ್ರಹಾಮನ ಮೇಲೆ ಎಲ್ಲವೂ ಕೇಂದ್ರೀಕೃತವಾಗಿದೆ.
#### ಇರಿಯುವುದು ಎಂದರೆ ಕೊಲ್ಲುವುದು ಎಂದು ಅರ್ಥ.
>ಆತನ ಹಸ್ತವು <u>ವೇಗವಾಗಿ ಓಡುವ </u ಸರ್ಪವನ್ನು ಇರಿಯುವುದು. (ಯೋಬ 26:13 ULB)
ಇದರ ಅರ್ಥ ಆತ ಸರ್ಪವನ್ನು ಕೊಂದುಹಾಕಿದ ಎಂದು.
>ಇಗೋ ಆತನು ಮೇಘಗಳೊಂದಿಗೆ ಬರುತ್ತಾನೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು ಆತನನ್ನು <u>ಇರಿದವರು </u>ಸಹ ಕಾಣುವರು. (ಪ್ರಕಟಣೆ 1:7 ULB)
"ಆತನನ್ನು ಇರಿದವರು ಯಾರು ? ಎಂಬುದು ಯೇಸುವನ್ನು ಕೊಂದವರನ್ನು ಕುರಿತು ಹೇಳಿರುವುದು"
#### ಪಾಪಗಳು (ಅಧರ್ಮ) ಪಾಪಕ್ಕೆ ತಕ್ಕ ಶಿಕ್ಷೆಯನ್ನು ಪ್ರತಿನಿಧಿಸುತ್ತದೆ.
>ಯೆಹೋವನು ನಮ್ಮೆಲ್ಲರ <u>ದೋಷವನ್ನು ಪಾಪವನ್ನು </u>ತನ್ನ ಮೇಲೆ ಹಾಕಿಕೊಂಡನು (ಯೆಶಾಯ 53:6 ULB)
ಇದರ ಅರ್ಥ ಯಹೋವನು ನಮ್ಮ ಪಾಪಗಳಿಂದ ಉಂಟಾದ ಶಿಕ್ಷೆಯನ್ನು ತಾನು ಅನುಭವಿಸಿದನು.