bavari_kan-x-bavari_luk_tex.../21/01.txt

1 line
1.3 KiB
Plaintext

\c 21 ದೇವರಿಗೆ ಕಾಣಿಕೆ ಕೊಡುವವರೊಳಗಿನ ತಾರತಮ್ಯವನ್ನು ಕುರಿತು ಮಾತನಾಡಿದ್ದು \v 1 ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವುದನ್ನು ಕಂಡನು. \v 2 ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕುವುದನ್ನು ಯೇಸುವು ಗಮನಿಸಿ - \v 3 <<ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. \v 4 ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು>> ಅಂದನು. ಯೇಸು ಯೆರೂಸಲೇಮಿನ ನಾಶವನ್ನೂ ಯುಗದ ಸಮಾಪ್ತಿಯನ್ನೂ ಕುರಿತು ಮುಂತಿಳಿಸಿದ್ದು