bavari_kan-x-bavari_luk_tex.../16/19.txt

1 line
1.1 KiB
Plaintext

\v 19 <ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಸಕಲ ವಿಧವಾದ ಐಶ್ವರ್ಯಗಳಿಂದ ಕೂಡಿದವನಾಗಿ ಬೆಲೆಬಾಳುವ ನೇರಳೆ ಬಣ್ಣದ ರೇಷ್ಮೆ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವು ವೈಭವದೊಡನೆ ಸುಖವಾಗಿದ್ದು ಸಂತೋಷಪಡುತ್ತಿದ್ದನು. \v 20 ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. \v 21 ಇವನು ಮೈತುಂಬಾ ಹುಣ್ಣೆದ್ದವನು. ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು; ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.