Chandrashekhar_kfi_tit_text.../02/11.txt

1 line
1.6 KiB
Plaintext

\v 11 ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಯೆತೆ ಇಲ್ಲದಂತ ರಕ್ಷಣೆಯನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. \v 12 ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ, ಪ್ರಾಪಂಚಿಕ ಜನರು ಮಾಡುವದನ್ನು ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ. ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನು ಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು, ಸರಿಯಾದದ್ದನ್ನು ಮಾಡಲು ಕಲಿಸುತ್ತಾನೆ. \v 13 ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ. ಅಂದರೆ, ನಮ್ಮ ರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಸು ಮೆಸ್ಸಿಯನು ಮಾಹಾ ಮಹಿಮೆಯೊಡನೆ ನಮ್ಮ ಬಳಿಗೆ ಹಿಂತಿರುಗುತ್ತಾನೆ.