BCS_India_kn_irv_2ti_book/2ti/headers.json

2 lines
4.1 KiB
JSON

[{"tag":"id","content":"2TI"},{"tag":"usfm","content":"3.0"},{"tag":"ide","content":"UTF-8"},{"tag":"rem","content":"Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License"},{"tag":"h","content":"2 ತಿಮೊಥೆಯನಿಗೆ"},{"tag":"toc1","content":"2 ತಿಮೊಥೆಯನಿಗೆ"},{"tag":"toc2","content":"2 ತಿಮೊ"},{"tag":"toc3","content":"2ತಿಮೊ"},{"tag":"mt","content":"2 ತಿಮೊಥೆಯನಿಗೆ"},{"tag":"is","content":"ಗ್ರಂಥಕರ್ತೃತ್ವ"},{"tag":"ip","content":"ರೋಮಾಪುರದ ಸೆರೆಮನೆಯಿಂದ ಪೌಲನು ಬಿಡುಗಡೆಯಾದ ನಂತರ ಮತ್ತು ನಾಲ್ಕನೇ ಮಿಷನರಿ ಪ್ರಯಾಣದಲ್ಲಿ ಅವನು 1 ತಿಮೊಥೆಯನ ಪತ್ರಿಕೆಯನ್ನು ಬರೆದ ನಂತರ, ಮತ್ತೆ ಪೌಲನನ್ನು ನೀರೋ ಚಕ್ರವರ್ತಿಯ ಆಳ್ವಿಕೆಯಡಿಯಲ್ಲಿ ಸೆರೆಮನೆಗೆ ಹಾಕಲಾಯಿತು. ಈ ಸಮಯದಲ್ಲಿ ಅವನು 2 ತಿಮೊಥೆಯನ ಪತ್ರಿಕೆಯನ್ನು ಬರೆದನು. ಅವನು ಮೊದಲ ಬಾರಿ ಸೆರೆಮನೆಯಲ್ಲಿದ್ದಾಗ, ಅವನು ‘ಬಾಡಿಗೆ ಮನೆ’ ಯಲ್ಲಿ (ಅ.ಪೊ. 28:30) ವಾಸವಾಗಿದ್ದ ಸ್ಥಿತಿಗೂ ಇದಕ್ಕೂ ವ್ಯತ್ಯಾಸವಿದೆ, ಈಗ ಅವನು ಸಾಮಾನ್ಯ ಅಪರಾಧಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿ (1:16; 2:9), ಶೀತಲ ಕಾರಾಗೃಹದಲ್ಲಿ ಬಳಲುತ್ತಿದ್ದಾನೆ (4:13). ತನ್ನ ಕೆಲಸವು ಮುಗಿದಿದೆ ಮತ್ತು ತನ್ನ ಜೀವನದ ಅಂತ್ಯವು ಸಮೀಪವಾಗಿದೆ ಎಂದು ಪೌಲನಿಗೆ ತಿಳಿದಿತ್ತು (4: 6-8)."},{"tag":"is","content":"ಬರೆದ ದಿನಾಂಕ ಮತ್ತು ಸ್ಥಳ"},{"tag":"ip","content":"ಸರಿಸುಮಾರು ಕ್ರಿ.ಶ. 66-67 ರ ನಡುವೆ ಬರೆಯಲ್ಪಟ್ಟಿದೆ."},{"tag":"ip","content":"ಪೌಲನು ರೋಮಾಪುರದಲ್ಲಿ ತನ್ನ ಎರಡನೆಯ ಸೆರೆವಾಸದಲ್ಲಿದ್ದುಕೊಂಡು, ತನ್ನ ರಕ್ತಸಾಕ್ಷಿಯ ಮರಣಕ್ಕಾಗಿ ಕಾಯುತ್ತಿರುವಾಗ ಅವನು ಈ ಪತ್ರಿಕೆಯನ್ನು ಬರೆದನು."},{"tag":"is","content":"ಸ್ವೀಕೃತದಾರರು"},{"tag":"ip","content":"ತಿಮೊಥೆಯು ಎರಡನೆಯ ತಿಮೊಥೆಯನ ಪತ್ರಿಕೆಯ ಪ್ರಾಥಮಿಕ ಓದುಗನಾಗಿದ್ದಾನೆ, ಆದರೆ ಖಂಡಿತವಾಗಿ ಅವನು ಸಭೆಯೊಂದಿಗೆ ಇದರ ವಿಷಯವನ್ನು ಹಂಚಿಕೊಂಡನು."},{"tag":"is","content":"ಉದ್ದೇಶ"},{"tag":"ip","content":"ತಿಮೊಥೆಯನಿಗೆ ಅಂತಿಮ ಪ್ರೋತ್ಸಾಹವನ್ನು ನೀಡಲು ಮತ್ತು ಪೌಲನು ಅವನಿಗೆ ವಹಿಸಿಕೊಟ್ಟ ಕಾರ್ಯಭಾರವನ್ನು ಧೈರ್ಯದಿಂದ (1:3-14), ಶ್ರದ್ಧೆಯಿಂದ (2:1-26), ಮತ್ತು ನಿಷ್ಠೆಯಿಂದ (3:14-17; 4:1-8) ಮುಂದುವರಿಸುವಂತೆ ಪ್ರೇರೇಪಿಸಲು ಬರೆದನು."},{"tag":"is","content":"ಮುಖ್ಯಾಂಶ"},{"tag":"ip","content":"ನಂಬಿಗಸ್ತವಾದ ಸೇವೆಗಾಗಿ ನಿಯೋಗ"},{"tag":"iot","content":"ಪರಿವಿಡಿ"},{"tag":"io1","content":"1. ಸೇವೆಗೆ ಪ್ರೇರಣೆ — 1:1-18"},{"tag":"io1","content":"2. ಸೇವೆಯಲ್ಲಿರಬೇಕಾದ ಮಾದರಿ — 2:1-26"},{"tag":"io1","content":"3. ಸುಳ್ಳು ಬೋಧನೆಯ ವಿರುದ್ಧ ಎಚ್ಚರಿಕೆ — 3:1-17"},{"tag":"io1","content":"4. ಪ್ರೋತ್ಸಾಹದ ಮಾತುಗಳು ಮತ್ತು ಆಶೀರ್ವಾದಗಳು — 4:1-22"}]